Wednesday, February 11, 2026
Wednesday, February 11, 2026
Home Blog Page 1802

ಎಎಫ್ಎಸ್ಪಿಎ ಕಾಯಿದೆ ವಾಪಸ್-ಅಮಿತ್ ಶಾ

0

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಗಾಲ್ಯಾಂಡ್ ನಲ್ಲಿ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ನೀಡುವ ವಿವಾದಿತ ಎ ಎಫ್ ಎಸ್ ಎ ಕಾಯ್ದೆಯನ್ನು ಹಿಂಪಡೆಯುವ ಕುರಿತಂತೆ ನಿರ್ಧರಿಸಲು ಸಮಿತಿ ರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಸಶಸ್ತ್ರ ಪಡೆ ಯೋಧರು ಕೂಲಿ ಕಾರ್ಮಿಕರನ್ನು ಉಗ್ರರಿಂದ ತಪ್ಪಾಗಿ ಭಾವಿಸಿ ಗುಂಡಿಟ್ಟು ಹತ್ಯೆಗೈದಿದ್ದರು. ಈ ಪ್ರಕರಣದ ಬಳಿಕ ವಿವಾದಿತ ‘ಎ ಎಫ್ ಎಸ್ ಪಿ ಎ’ ಕಾಯ್ದೆಯನ್ನು ಹಿಂಪಡೆಯಬೇಕೆಂದು ಎಲ್ಲೆಡೆ ಆಗ್ರಹ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಈ ವಿವಾದಿತ ಕಾಯ್ದೆಯನ್ನು ಹಿಂಪಡೆಯುವ ಬಗ್ಗೆ ಶೀಘ್ರದಲ್ಲೇ ಸಮಿತಿಯನ್ನು ರಚಿಸುವುದಾಗಿ ನಾಗಾಲ್ಯಾಂಡ್ ಸರ್ಕಾರ ಘೋಷಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಡಿಸೆಂಬರ್ 23 ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ ರಚನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಈ ಸಮಿತಿಯು 45 ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದೆ. ವರದಿಯ ಆಧಾರದ ಮೇಲೆ ನಾಗಾಲ್ಯಾಂಡ್ ನಲ್ಲಿ ತೊಂದರೆಗೊಳಗಾದ ಪ್ರದೇಶಗಳಲ್ಲಿ ಈ ಕಾಯ್ದೆಯನ್ನು ಹಿಂಪಡೆಯಲು ಪರಿಶೀಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮುಂಜಾಗೃತಾ ಡೋಸ್ ಆಗಿ ಲಸಿಕೆ

0

ಕೋವಿಡ್-19, ಡೆಲ್ಟಾ ರೂಪಾಂತರಿ ತಳಿ ಓಮಿಕ್ರಾನ್ ದೇಶದಲ್ಲಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಹಿರಿಯ ನಾಗರಿಕರು ಹಾಗೂ ಕೊರೋನಾ ವಾರಿಯರ್ಸ್ ಗಳಿಗೆ ಬೂಸ್ಟರ್ ಡೋಸ್ ಆಗಿ ಮೊದಲಾಗಿ 2 ಡೋಸ್ ಪಡೆದ ಲಸಿಕೆ ಹೊರತುಪಡಿಸಿ ಬೇರೊಂದು ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಶನಿವಾರ ದೇಶದ ಜನರನ್ನು ಉದ್ದೇಶಿಸಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನವರಿ 3ರಿಂದ 15ರಿಂದ 18 ವರ್ಷದೊಳಗಿನ ಮಕ್ಕಳು ಹಾಗೂ ಜನವರಿ 10ರಿಂದ ಕೊರೋನಾ ವಾರಿಯರ್ಸ್, ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರಿಗೆ ‘ಮುಂಜಾಗೃತ ಡೋಸ್’ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಪ್ರಧಾನಿ ಮೋದಿ ಅವರು ಬೇರೆ ಲಸಿಕೆ ನೀಡುವ ಉದ್ದೇಶದಿಂದ ‘ಬೂಸ್ಟರ್ ಡೋಸ್’ ಎಂಬ ಪದ ಬಳಸದೆ, ‘ಮುಂಜಾಗ್ರತೆ ಡೋಸ್’ ಎಂಬ ಪದ ಬಳಸಿದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ.

ಕೊವ್ಯಾಕ್ಸಿನ್ ನ ಎರಡು ಡೋಸ್ ಪಡೆದವರಿಗೆ ಮೂರನೇ ಡೋಸ್ ಆಗಿ ಕೋವಿಶೀಲ್ಡ್ ನ ಅಥವಾ ಕೋವಿಶೀಲ್ಡ್ ನ ಎರಡನೇ ಡೋಸ್ ಪಡೆದವರಿಗೆ ಮೂರನೇ ಡೋಸ್ ಆಗಿ ಕೊವ್ಯಾಕ್ಸಿನ್ ನೀಡುವುದು. ‘ಮುಂಜಾಗೃತ ಡೋಸ್’ ಹೊಸದಾಗಿ ಸರ್ಕಾರದ ಅನುಮೋದನೆ ಪಡೆದಂತಹ ಕೊರೋನಾ ತಡೆ ಲಸಿಕೆಗಳಾದ ‘ಕೋವೊವಾಕ್ಸ್’, ‘ಕಾರ್ಬಿವ್ಯಾಕ್ಸಿನ್’, ಡಿಎನ್ಎ ಲಸಿಕೆ ಅಥವಾ ‘ಝೈಕೊವ್-ಡಿ’ ನೀಡುವ ಬಗ್ಗೆ ಗಂಭೀರವಾಗಿ ವಿಜ್ಞಾನಿಗಳು ಮತ್ತು ತಜ್ಞರ ನಡುವೆ ಚರ್ಚೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

“ಮಕ್ಕಳಿಗೆ ಕೊರೋನಾ ತಡೆ ಲಸಿಕೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಅವೈಜ್ಞಾನಿಕ. ಇದರಿಂದ ಏನು ಪ್ರಯೋಜನವಿಲ್ಲ ಕೊರೋನಾ ಪ್ರಸರಣವು ಇದರಿಂದ ತಗ್ಗಲ್ಲ. ಆದರೆ, ಶಾಲಾ ಶಿಕ್ಷಣ ವ್ಯವಸ್ಥೆಯ ಆತಂಕ ದೂರವಾಗಿದೆ” ಎಂದು ಏಮ್ಸ್ ನ ಸಾಂಕ್ರಾಮಿಕ ಡಾ.ಸಂಜಯ್ ರಾಯ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಕೊನೆಗೂ ಕೇಂದ್ರ ಸರ್ಕಾರ ನನ್ನ ಸಲಹೆ ಆಗ್ರಹಕ್ಕೆ ಮಣಿದಿದೆ ಬೂಸ್ಟರ್ ಡೋಸ್ ನೀಡುವಂತೆ ಬಹಳ ತಿಂಗಳಿಂದ ಒತ್ತಾಯಿಸುತ್ತಿದೆ. ದೇಶದ ಎಲ್ಲರಿಗೂ ಬೂಸ್ಟರ್ ಸಿಗುವಂತಾಗಬೇಕು” ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಶಿವಮೊಗ್ಗದಲ್ಲಿ ರಾತ್ರಿ ಕರ್ಫ್ಯೂ ಬಿಗಿ ಕ್ರಮ-ಎಸ್.ಪಿ.

0

ಶಿವಮೊಗ್ಗ ಜಿಲ್ಲಾದ್ಯಂತ ಡಿ.28ರಿಂದ ನೈಟ್ ಕರ್ಫ್ಯೂ ಜಾರಿಯಾಗಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಪೋಲಿಸ್ ಇಲಾಖೆ ಮಾಡಿಕೊಂಡಿದೆ. ಆದರೆ, ಚುನಾವಣೆಗಿಲ್ಲದ ನಿರ್ಬಂಧ ಈಗ ಹೇರುತ್ತಿರುವುದಕ್ಕೆ ಪ್ರವಾಸೋದ್ಯಮ ಹಾಗೂ ಹೋಟೆಲ್ ಉದ್ಯಮ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಶಿವಮೊಗ್ಗದಲ್ಲಿ ಡಿ‌.28ರ ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ನಗರ ವ್ಯಾಪ್ತಿಯಲ್ಲಿ 12-13 ಚೆಕ್ ಪೋಸ್ಟ್ ಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಶಿವಮೊಗ್ಗ ಎಸ್ ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ವಕ್ಕರಿಸಿರುವ ಕೋವಿಡ್ ರೂಪಾಂತರಿ ಓಮಿಕ್ರಾನ್ ಸೋಂಕಿಗೆ ಅಂಕುಶ ಹಾಕುವುದಕ್ಕಾಗಿ ರಾಜ್ಯ ಸರ್ಕಾರ ಡಿ.28ರಿಂದ ಜನವರಿ 7ರವರೆಗೂ ನೈಟ್ ಕರ್ಫ್ಯೂ ವಿಧಿಸಿದೆ. ಇದರಿಂದ ಹೊಸ ವರ್ಷಾಚರಣೆಗೂ ಅಡ್ಡಿಯಾಗಲಿದೆ. ಪೊಲೀಸ್ ಇಲಾಖೆಯಿಂದ ಶಿವಮೊಗ್ಗ ನಗರಕ್ಕೆ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಒಟ್ಟು 12-13 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗುತ್ತಿದೆ. ಯಾರೇ ಪ್ರವೇಶಿಸಬೇಕಾದರೂ ಅವರನ್ನು ಪರಿಶೀಲಿಸಲಾಗುವುದು.
ಕೈಗಾರಿಕಾ ಉದ್ಯಮಿಗಳು, ಪಾಲಿಕೆ ಸಿಬ್ಬಂದಿ, ತುರ್ತು ಸೇವೆಯಲ್ಲಿರುವವರು ಗುರುತಿನ ಚೀಟಿಗಳನ್ನು ತೋರಿಸಿ ಕೆಲಸಕ್ಕೆ ಹೋಗುವುದಕ್ಕೆ ಮಾತ್ರ ಅವಕಾಶವಿದೆ. ಅನಗತ್ಯವಾಗಿ ಯಾವುದೇ ಕಾರಣಕ್ಕೂ ಓಡಾಡುವಂತಿಲ್ಲ. ರಾತ್ರಿ 9.30ರಿಂದಲೇ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯು ತಿಳಿಸಿದೆ.
ಎರಡು ವರ್ಷದಿಂದ ಲಾಕ್ ಡೌನ್ ನಿಂದಾಗಿ ಹೋಟೆಲ್ ಉದ್ಯಮಕ್ಕೆ ಪೆಟ್ಟಾಗಿತ್ತು. ಈಗ ಸುಧಾರಣೆ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ಓಮಿಕ್ರಾನ್ ಸೋಂಕು ಭಯದ ಹಿನ್ನೆಲೆಯಲ್ಲಿ ವ್ಯಾಪಾರ, ವಹಿವಾಟಿನ ಮೇಲೆ ನಿರ್ಬಂಧ ಹೇರಿಕೆ ಸಲ್ಲದು. ಹಗಲಿನಲ್ಲಿ ಎಲ್ಲಾ ವಹಿವಾಟಿಗೆ ಅವಕಾಶ ಕೊಟ್ಟು , ರಾತ್ರಿ ಜನ ಮನೆಯಲ್ಲಿರುವಾಗ ನೈಟ್ ಕರ್ಫ್ಯೂ ಆದೇಶ ಲೇವಡಿಗೆ ಗುರಿಯಾಗುವಂತಿದೆ ಎಂದು ಶಿವಮೊಗ್ಗ ಹೋಂ ಸ್ಟೇ ಮಾಲೀಕರಾದ ಬಳಗಟ್ಟೆ ಗಿರೀಶ್ ಅವರು ತಿಳಿಸಿದ್ದಾರೆ.
ಸರ್ಕಾರದ ನಿಯಮಾವಳಿಯನ್ನು ಶಿವಮೊಗ್ಗದ ಜನತೆ ಮತ್ತು ವ್ಯಾಪಾರಿಗಳು ಆರೋಗ್ಯದ ದೃಷ್ಟಿಯಿಂದ ಬೆಂಬಲಿಸುತ್ತ ಬಂದಿದ್ದು,ಕೊರೊನಾ ಹಿನ್ನೆಲೆಯಲ್ಲಿ ಸರಕಾರ ಸೂಚಿಸಿದ ಮಾರ್ಗಸೂಚಿಗಳು ಶಿವಮೊಗ್ಗದಲ್ಲೂ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ. ಕೆಲವು ಅಪಸ್ವರಗಳು ಬರುವುದು ಸಹಜ. ಆದರೆ, ಆರೋಗ್ಯವಿದ್ದರೆ ಯಾವಾಗ ಬೇಕಾದರೂ ದುಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಹತ್ತನೇ ತರಗತಿ ರೈತ ಮಕ್ಕಳಿಗೆ ವಿದ್ಯಾನಿಧಿ

0

ಗ್ರಾಮೀಣ ಪ್ರದೇಶದ 8ರಿಂದ 10ತರಗತಿ ಓದುತ್ತಿರುವ ರೈತರ ಹೆಣ್ಣುಮಕ್ಕಳಿಗೆ ವಿದ್ಯಾನಿಧಿ ಯೋಜನೆಯ ಸ್ಕಾಲರ್ ಶಿಪ್ ನೀಡಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ಎರಡು ಗಂಟೆಗಳಲ್ಲಿ ವಿದ್ಯಾನಿಧಿ ಜಾರಿಗೆ ತಂದಿದ್ದು, ಇದರಿಂದ 2.40 ಲಕ್ಷ ರೈತ ಮಕ್ಕಳಿಗೆ ಅನುಕೂಲವಾಗಿದೆ. ನೇಕಾರರಿಗೆ ಮಾರುಕಟ್ಟೆಗೆ ವ್ಯವಸ್ಥೆ ಕಲ್ಪಿಸಲು ಈಗಾಗಲೇ ವಿವಿಧ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ರೈತರ ಬೆಂಬಲಕ್ಕೆ ನಿಂತಿದೆ ಎಂದು ಬೊಮ್ಮಾಯಿ ಹೇಳಿದರು.
ದಿನದ 24 ಗಂಟೆ ಕೆಲಸ ಕರ್ತವ್ಯನಿರತನಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುವೆ. ಮುಂದಿನ ವರ್ಷದಲ್ಲಿ ದೊಡ್ಡ ಬದಲಾವಣೆ ತಂದು 2023ರ ಚುನಾವಣೆಯಲ್ಲಿ ಜನರ ಆಶೀರ್ವಾದ ಕೇಳಲಾಗುವುದು ಎಂದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ಶಿಷ್ಯವೇತನ ನೀಡುವ ತೀರ್ಮಾನ ತೆಗೆದುಕೊಂಡೆ. ಆ ಯೋಜನೆ ಸಾಕಷ್ಟು ರೈತರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ಪಿಯುಸಿ ಮೇಲ್ಪಟ್ಟು ಈಗಾಗಲೇ ಜಾರಿಗೆ ತರಲಾಗಿದೆ. ಇದೀಗ 8,9,10ನೇ ತರಗತಿ ಓದುತ್ತಿರುವ ಗ್ರಾಮೀಣ ರೈತರ ಹೆಣ್ಣು ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸುವ ತೀರ್ಮಾನ ಕೈಗೊಳ್ಳಲಾಗಿದೆ ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕಳಪೆಗುಣಮಟ್ಟದ ಟಾರ್ಪಲಿನ್ ನೀಡುವ ಸಂಸ್ಥೆಗಳು ಕಪ್ಪುಪಟ್ಟಿಗೆ:ಖಡಕಾಗಿ ಎಚ್ಚರಿಸಿದ ಬಿಸಿಪಿ

0

ಕೃಷಿ ಇಲಾಖೆಯಲ್ಲಿ ಗುಣಮಟ್ಟದ ಟಾರ್ಪಾಲಿನ್ ವಿತರಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು,
ಭಾರತೀಯ ಮಾಪನ ಸಂಸ್ಥೆಯ ಪರವಾನಿಗೆಯ ಗುಣಮಟ್ಟಕ್ಕಿಂತ ಕಳಪೆ ಎಂದು ಕಂಡು ಬಂದಲ್ಲಿ ಅಂತಹ ಸಂಸ್ಥೆಗಳನ್ನು ಮುಂದಿನ ಮೂರು ವರ್ಷಗಳ ಕಾಲ ಇಲಾಖೆಯಲ್ಲಿ ಭಾಗವಹಿಸುವಿಕೆಯಿಂದ ಅನರ್ಹಗೊಳಿಸಿ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಖಡಕಾಗಿ ಎಚ್ಚರಿಸಿದ್ದಾರೆ.

ಪರವಾನಿಗೆಯನ್ನು ಹೊಂದಿರುವ ಟಾರ್ಪಲಿನ್‌ಗಳನ್ನೇ ಸ್ವೀಕರಿಸಲು ಹಾಗೂ ವಿತರಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿರುವ ಬಿ.ಸಿ.ಪಾಟೀಲ್,
ಕೃಷಿ ಇಲಾಖೆಯಿಂದ ಒದಗಿಸಲಾಗಿದೆ ಎಂಬುದರ ಖಾತ್ರಿಯ ಜೊತೆಗೆ ತಯಾರಿಕ ಸಂಸ್ಥೆಯ ಹೆಸರು , ಬ್ಯಾಚ್ ಸಂಖ್ಯೆ ಮತ್ತು ಭಾರತೀಯ ಮಾಪನ ಸಂಸ್ಥೆಯ ಪರವಾನಿಗೆಯ CML ಸಂಖ್ಯೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಟಾರ್ಪಾಲಿನ್ ಮೇಲೆ ಲೇಜರ್ ಪ್ರಿಂಟ್ ಅಥವಾ ಅಳಿಸಲಾರದ ಷಾಹಿಯಲ್ಲಿ ಮುದ್ರಿಸಿರುವುದನ್ನು ಖಾತರಿ ಪಡಿಸಿಕೊಂಡ ನಂತರವೇ ದಾಸ್ತಾನನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸ್ವೀಕರಿಸಲಾಗುತ್ತಿದೆ.ಸರಬರಾಜು ಆದೇಶ ಪಡೆದ ಸಂಸ್ಥೆಗಳು , ಸರಬರಾಜು ಮಾಡಿದ ಟಾರ್ಪಾಲಿನ್ ಗಳಲ್ಲಿ ಜಿಲ್ಲೆಗೆ ಒಂದರಂತ ಮಾದರಿಯನ್ನು ತೆಗೆದು ಗುಣಮಟ್ಟದ ಪರೀಕ್ಷೆಗಾಗಿ CIPET ಸಂಸ್ಥೆಗೆ ಗುಣಮಟ್ಟ ಪರೀಕ್ಷೆಗಾಗಿ ಪರೀಕ್ಷಾ ಶುಲ್ಕವನ್ನು ಸರಬರಾಜುದಾರ ಸಂಸ್ಥೆಯೇ ಪಾವತಿಸುವ ಷರತ್ತಿನೊಂದಿಗೆ ಕಳುಹಿಸಲು ಸೂಚಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ , ಗಾಳಿ ಹಾಗೂ ಇನ್ನಿತರ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಆ ಮೀ X 6 ಮೀ ಅಳತೆಯ ಟಾರ್ಪಾಲಿನ್ ಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ .50 ಮತ್ತು ಪರಿಶಿಷ್ಟ ಜಾತಿ / ಪಂಗಡದ ರೈತರಿಗೆ ಶೇ .90 ರಷ್ಟು ಸಹಾಯ ಧನ ಒದಗಿಸಿ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಿಸಲಾಗುತ್ತಿದೆ .ಐದು ಪದರುಗಳುಳ್ಳ , 250 ಜಿ.ಎಸ್ . ಎಂ ( GSM ) ತೂಕದ , ಕಪ್ಪು ಬಣ್ಣದ ಮಾನದಂಡಗಳಿಗೆ ಅನುಗುಣವಾಗಿರುವ 8 ಮೀ X 6 ಮೀ ಅಳತೆಯ HDPE ಟಾರ್ಪಾಲಿನ್‌ಗಳನ್ನು ಸಹಾಯಧನದಡಿ ಒದಗಿಸಲಾಗುತ್ತಿದೆ.2021-22 ನೇ ಸಾಲಿನಲ್ಲಿ 239606 ಟಾರ್ಪಾಲಿನ್ ಗಳನ್ನು ವಿತರಿಸಲು ಜಿಲ್ಲಾವಾರು ಕ್ರಿಯಾ ಯೋಜನೆ ರೂಪಿಸಿ ನೀಡಲಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.

ಭಾರತೀಯ ಮಾಪನ ಸಂಸ್ಥೆಯಿಂದ ಪರವಾನಿಗೆ ಹೊಂದಿರುವ ಸಂಸ್ಥೆಗಳು ಅಥವಾ ಅವರಿಂದ ಒಡಂಬಡಿಕೆ ಪಡೆದ ಸಂಸ್ಥೆಗಳನ್ನು RFP ಮುಖಾಂತರ ಅರ್ಜಿ ಕರೆದು ಸಂಸ್ಥೆಗಳು ಹೊಂದಿರುವ ಪರವಾನಿಗೆಯನ್ನು ತಾಂತ್ರಿಕವಾಗಿ ಮೌಲ್ಯಮಾಪನಗೊಳಿಸಿ ಅರ್ಹಗೊಂಡ ಸಂಸ್ಥೆಗಳನ್ನು ಎಂಪಾನೆಲ್ ಮಾಡಲಾಗುವುದು.ಪ್ರಸಕ್ತ ಸಾಲಿನಲ್ಲಿ ಪರವಾನಿಗೆಯನ್ನು ಹೊಂದಿರುವ 24 ಸಂಸ್ಥೆಗಳನ್ನು ಎಂಪಾನೆಲ್ ಗೊಳಿಸಲಾಗಿರುತ್ತದೆ .ಜಿಲ್ಲೆಗಳಿಗೆ ನೀಡಿದ ಕ್ರಿಯಾ ಯೋಜನೆ ಪ್ರಕಾರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಎಂದಾನೆಲ್ ಮಾಡಿದ ಯಾವುದಾದರೂ ಸಂಸ್ಥೆಗಳಿಗೆ ಟಾರ್ಪಾಲಿನ್ ಸರಬರಾಜು ಆದೇಶ ನೀಡುವ ಮುನ್ನ ಮತ್ತೊಮ್ಮೆ ಪರವಾನಿಗೆಯನ್ನು ಹೊಂದಿರುವ ಬಗ್ಗೆ ಮತ್ತು ಪರವಾನಿಗೆಯ ಸಿಂದುತ್ವವನ್ನು ಪರಿಶೀಲನೆ ಮಾಡಲು ಸೂಚಿಸಿರುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ವಿವೇಕಾನಂದ ಬಡಾವಣೆ ರಸ್ತೆ ಸಮಸ್ಯೆ ಪರಿಹರಿಸಿ

0

ಶಿವಮೊಗ್ಗ ಸ್ವಾಮಿ ವಿವೇಕಾನಂದ ಬಡಾವಣೆಯ ಇ ಬ್ಲಾಕ್ ನ ಅಡ್ಡ ರಸ್ತೆಗಳಿಗೆ ಹೊಂದಿಕೊಂಡಿರುವ ಖಾಸಗಿ ಜಾಗವನ್ನು ರಸ್ತೆಗೆ ಬಿಡಲು ಕ್ರಮಕೈಗೊಳ್ಳಬೇಕು ಎಂದು ಬಡಾವಣೆಯ ಸೌಹಾರ್ದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೂಡ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಅಂದರ ಶಾಲೆ ಎದುರಿನ ಅನುಪಿನಕಟ್ಟೆ ರಸ್ತೆಗೆ ಸ್ವಾಮಿ ವಿವೇಕಾನಂದ ಬಡಾವಣೆಯ ಮೂರರಿಂದ ನಾಲ್ಕು ರಸ್ತೆಗಳು ಖಾಸಗಿ ಜಾಗದ ಮೂಲಕ ಸೇರುತ್ತಿವೆ. ಆದರೆ ಖಾಸಗಿ ಜಾಗದ ಮಾಲೀಕರು ತಮ್ಮ ಜಾಗಕ್ಕೆ ಬೇಲಿ ಹಾಕುವ ಮೂಲಕ ಕಚ್ಚಾ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ಬಡಾವಣೆಯ 150ಕ್ಕೂ ಹೆಚ್ಚು ಮನೆಗಳಿಗೆ ನೇರ ರಸ್ತೆ ಇಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ ಲೇಔಟ್ ನ ರಸ್ತೆಗಳು ಮುಖ್ಯ ರಸ್ತೆಗೆ ಸೇರದೇ ಖಾಸಗಿ ಜಾಗದ ಬಳಿ ಕೊನೆಗೊಳ್ಳಲು ಅವಕಾಶ ನೀಡಬಾರದು. ಖಾಸಗಿ ಲೇಔಟ್ ಗಳಿಗೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರ ಜನರ ಹಿತ ಕಾಪಾಡಬೇಕು ಎಂದು ಕೋರಿದರು.

ಆಯುಕ್ತ ಕೊಟ್ರೇಶ್ ಅವರು ಮನವಿಯನ್ನು ಸ್ವೀಕರಿಸಿದರು. ಖಾಸಗಿ ಜಾಗದಲ್ಲಿ ಬಡಾವಣೆ ನಿರ್ಮಿಸುವಾಗ ಕಡ್ಡಾಯವಾಗಿ ರಸ್ತೆಗಳನ್ನು ಮುಖ್ಯರಸ್ತೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್. ಬಿ. ರಾಮಪ್ಪ ಗೌಡ, ಸಂಘಟನಾ ಕಾರ್ಯದರ್ಶಿ ವಿ.ಟಿ. ಅರುಣ್ , ನಿರ್ದೇಶಕರಾದ ನಾಗರಾಜ್, ಕೇಶವಮೂರ್ತಿ, ಸಹಕಾರ್ಯದರ್ಶಿ ಎಚ್. ಜಿ. ಯೋಗರಾಜ್ ಇನ್ನು ಮುಂತಾದವರು ಮನವಿ ಸಲ್ಲಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ತಳಮಟ್ಟದಿಂದ ಉತ್ತಮ ಆಡಳಿತ ಮೋದೀಜಿ ಗುರಿ- ಅಮಿತ್ ಶಾ

0

ಉತ್ತಮ ಆಡಳಿತಕ್ಕಾಗಿ ಜನರು ಹಲವಾರು ವರ್ಷಗಳಿಂದ ಕಾಯುತ್ತಿದ್ದಾರೆ. ಕಳೆದ 7 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಜನರಿಗೆ ಉತ್ತಮ ಆಡಳಿತ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ತಿಳಿಸಿದ್ದಾರೆ.

ಉತ್ತಮ ಆಡಳಿತ ದಿನ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು ಮಾತನಾಡುತ್ತಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ರಂದು ಉತ್ತಮ ಆಡಳಿತ ದಿನ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ.

“ನಮಗೆ ಸ್ವಾತಂತ್ರ್ಯ ದೊರಕಿ ಹಲವು ವರ್ಷಗಳು ಕಳೆದಿವೆ. ಆದರೆ ಯಾವಾಗ ಉತ್ತಮ ಆಡಳಿತ ದೊರಕುತ್ತದೆ ಎಂದು ಜನರು ಕೇಳುತ್ತಲೇ ಇದ್ದರು. ಉತ್ತಮ ಆಡಳಿತವನ್ನು ಕಾಣದ ಜನರಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ನಂಬಿಕೆ ಹೊರಟು ಹೋಗಿತ್ತು.

ಮೋದಿಜಿ ಅವರು ತಳಮಟ್ಟದಿಂದಲೂ ಉತ್ತಮ ಆಡಳಿತ ನೀಡುವ ಮೂಲಕ ಪ್ರಜಾಪ್ರಭುತ್ವದ ಮೇಲೆ ಜನರಿಗೆ ವಿಶ್ವಾಸ ಮರಳುವಂತೆ ಮಾಡಿದ್ದಾರೆ ಎಂದು ಅಮಿತ್ ಶಾ ಅವರು ಹೇಳಿದರು.

2014ಕ್ಕೂ ಮುಂಚೆ ದೇಶದಲ್ಲಿ ಹಲವು ಸರ್ಕಾರಗಳು ಆಡಳಿತ ನಡೆಸಿ ಹೋಗಿವೆ. ಆದರೆ ಮೋದಿಜಿ ಅವರು ಅಧಿಕಾರಕ್ಕೆ ಬಂದಾಗ ಇವರ ಸರ್ಕಾರ ಕೇವಲ ಅಧಿಕಾರ ನಡೆಸಲು ಬಂದಿಲ್ಲ. ಬದಲಿಗೆ ದೇಶವನ್ನು ಬದಲಾಯಿಸಲು ಬಂದಿದೆ ಎಂದು ಜನರು ಅರ್ಥಮಾಡಿಕೊಂಡರು ಎಂದು ಅಮಿತ್ ಶಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಹಿಂದೆ ಬಂದಿದ್ದ ಸರ್ಕಾರಗಳು ಮತ ಬ್ಯಾಂಕ್ ಗಳನ್ನು ಗಮನದಲ್ಲಿರಿಸಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದವು. ಆದರೆ ಮೋದಿಜಿ ನೇತೃತ್ವದ ಸರ್ಕಾರವು ಜನರ ಇಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು, ಜನರಿಗೆ ಒಳ್ಳೆಯದಾಗುವ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡಿತು. ಇವೆರಡರ ನಡುವೆ ವ್ಯತ್ಯಾಸವಿದೆ. ಕೆಲ ನಿರ್ಧಾರಗಳಿಂದ ಜನಪ್ರಿಯತೆ ದೊರಕುತ್ತದೆ. ಆದರೆ ಅಂಥ ನಿರ್ಧಾರಗಳು ದೇಶಕ್ಕೆ ಸಮಸ್ಯೆ ತಂದೊಡ್ಡುತ್ತವೆ ಎಂದು ಅಮಿತ್ ಶಾ ಅವರು ಹೇಳಿದರು.

ಏಳು ವರ್ಷಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲದಿರುವುದೇ ಉತ್ತಮ ಆಡಳಿತ ನಿದರ್ಶನ. ಹಲವಾರು ದಶಕಗಳಿಂದ ಕಲ್ಯಾಣ ಕಾರ್ಯಕ್ರಮಗಳಿಂದ ವಂಚಿತರಾಗಿದ್ದ ಸುಮಾರು 60 ಕೋಟಿ ಜನರಿಗೆ ಅಭಿವೃದ್ಧಿಯ ಲಾಭ ಸಿಗುವಂತೆ ಮಾಡಲಾಯಿತು. ಬಡವರಿಗೆ ಮನೆಗಳು, ಶೌಚಾಲಯಗಳು,ವಿದ್ಯುತ್ ಸಂಪರ್ಕ, ಅಡುಗೆ ಅನಿಲ ಸೌಲಭ್ಯ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ವಿವರಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಒಮಿಕ್ರಾನ್ ಭಾರೀ ಪರಿಣಾಮಕಾರಿಯಲ್ಲ – ಡಾ.ಏಂಜಲಿಕ್

0

ಭಾರತದಲ್ಲಿ ಓಮಿಕ್ರಾನ್ ಸೇರಿದಂತೆ ಕೋರೋನಾ ವೈರಸ್ ಪ್ರಕರಣಗಳಲ್ಲಿ ಮತ್ತು ಪಾಸಿಟಿವಿಟಿ ದರದಲ್ಲಿ ಹೆಚ್ಚಳ ಕಂಡು ಬರಲಿದೆ. ಆದರೆ ದಕ್ಷಿಣ ಆಫ್ರಿಕದಲ್ಲಿ ಕಂಡುಬಂದ ಪ್ರಕರಣಗಳಿಗೆ ಹೋಲಿಸಿದರೆ ಸೌಮ್ಯ ಸ್ವರೂಪದಲ್ಲಿ ಇರಲಿದೆ ಎಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಓಮಿಕ್ರಾನ್ ಗುರುತಿಸಿದ್ದ ವೈದ್ಯೆ ಎಂಜೆಲಿಕ್ ಕೊಯಿಟ್ಜಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವೈದ್ಯಕೀಯ ಸಂಘದ ಅಧ್ಯಕ್ಷೆ ಕೂಡ ಆಗಿದ್ದಾರೆ. ಓಮಿಕ್ರಾನ್ ಪ್ರಸರಣವನ್ನು ಈಗ ಲಭ್ಯವಿರುವ ಲಸಿಕೆಗಳು ನಿಯಂತ್ರಿಸಲಿದೆ ಎಂದು ತಿಳಿಸಿದ್ದಾರೆ.

ಲಸಿಕೆ ಹಾಕಿಸಿಕೊಂಡ ವ್ಯಕ್ತಿ ಅಥವಾ ಈ ಮೊದಲೇ ಸೋಂಕಿಗೆ ಒಳಗಾದ ವ್ಯಕ್ತಿಯಿಂದ ಹರಡುವ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಲಸಿಕೆ ಹಾಕಿಸಿಕೊಳ್ಳದೇ ವ್ಯಕ್ತಿಯಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ತಳಿಗಳಲ್ಲಿ ಕಡಿಮೆ ತೀವ್ರತೆ ಹೊಂದಿರುವ ಓಮಿಕ್ರಾನ್ ನಂತರ ಕೋವಿಡ್ ಸಾಂಕ್ರಾಮಿಕ ಅಂತ್ಯವಾಗಲಿದೆ ಎಂಬ ತಜ್ಞರ ಅಭಿಪ್ರಾಯವನ್ನು ಅವರು ಒಪ್ಪಲಿಲ್ಲ. ಕೋವಿಡ್ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಅದು ಸ್ಥಳೀಯವಾಗಿ ಕಂಡು ಬರಲಿದೆ ಎಂದು ಹೇಳಿದರು.

ಓಮಿಕ್ರಾನ್ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದರೂ, ಅದು ಭಾರಿ ಪ್ರಮಾಣದಲ್ಲಿ ಅಪಾಯಕಾರಿಯಲ್ಲ. ಆಸ್ಪತ್ರೆಗೆ ಸೇರುವ ಗಂಭೀರಸ್ವರೂಪದ ಪ್ರಕರಣಗಳು ಕಡಿಮೆ ಇರುತ್ತವೆ. ಮಕ್ಕಳಿಗೂ ಇದು ಹರಡಬಲ್ಲದು. ಆದರೆ ಐದಾರು ದಿನಗಳಲ್ಲಿ ಅವರು ಚೇತರಿಸಿಕೊಳ್ಳುತ್ತಾರೆ ಎಂದು ದಕ್ಷಿಣ ಆಫ್ರಿಕಾದ ವೈದ್ಯೆ
ಎಂಜೆಲಿಕ್ ಕೊಯಿಟ್ಜಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪರಿಶೀಲನೆಯಲ್ಲಿ ಕೃಷಿ ವಿವಿ ಎಐಸಿಆರ್ ಪಿ ಹುದ್ದೆ ಭರ್ತಿವಿಚಾರ

0

ರಾಜ್ಯದ ನಾಲ್ಕು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಕೇಂದ್ರಗಳು ಅಥವಾ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಖಾಲಿ ಇರುವ ಎ. ಐ. ಸಿ. ಆರ್. ಪಿ ಹುದ್ದೆಗಳ ಭರ್ತಿ ವಿಚಾರ ಪರಿಶೀಲನೆ ಹಂತದಲ್ಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಮೇಲ್ಮನೆಗೆ ತಿಳಿಸಿದ್ದಾರೆ.

ಪದವೀಧರ ಕ್ಷೇತ್ರದ ಸದಸ್ಯ ಎಸ್.ವಿ. ಸಂಕನೂರ ಅವರ ಪ್ರಶ್ನೆಗೆ ಬಿ.ಸಿ. ಪಾಟೀಲ್ ಅವರು ಉತ್ತರಿಸಿದರು.” ಎ. ಐ.ಸಿ. ಎ.ಆರ್. ಪಿ ನಿಂದ ಶೇ. 100 ರಷ್ಟು ಅನುದಾನಿತ ಕೆ ವಿಕೆಯಲ್ಲಿ ಖಾಲಿ ಇರುವ 49 ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವಂತೆ ಎಲ್ಲಾ ನಾಲ್ಕು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಿರ್ದೇಶಿಸಲಾಗಿದೆ. ಇಷ್ಟಲ್ಲದೆ ಬೆಂಗಳೂರು ಮತ್ತು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಿಂದ ಪ್ರಸ್ತಾವನೆಯು ಸ್ವೀಕೃತವಾಗಿದೆ. ಇದನ್ನು ಪರಿಶೀಲಿಸಲಾಗುತ್ತಿದೆ ಎಂದು ಬಿ.ಸಿ. ಪಾಟೀಲ್ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿನ 4 ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ನೇಮಕಾತಿಯಿಂದ ಭರ್ತಿ ಮಾಡುವ ಕುರಿತು ಪರಿಷ್ಕೃತ ಪ್ರಸ್ತಾವನೆಗಳು ಸಹ ಪರಿಶೀಲನೆಯ ಹಂತದಲ್ಲಿದೆ ಎಂದು ಬಿ.ಸಿ. ಪಾಟೀಲ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರೌಢ ಶಾಲಾಶಿಕ್ಷಕರ ವಿಶೇಷ ಭತ್ಯೆ ತೀರ್ಪು ಜಾರಿಗೆ ಬರಬೇಕು

0

ರಾಜ್ಯಾದ್ಯಂತ ಅಗಸ್ಟ್ 1, 2008ರ ನಂತರ ನೇಮಕಗೊಂಡ ಸರ್ಕಾರಿ, ಅನುದಾನಿತ ಪ್ರೌಢ ಶಾಲೆಗಳ ಶಿಕ್ಷಕರಿಗೆ ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ವಿಶೇಷ ಭತ್ಯೆ ಮಂಜೂರಾತಿ ಮಾಡುವಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿ 8 ತಿಂಗಳು ಕಳೆದಿದೆ.ಆದರೆ, ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಸರ್ಕಾರ 2016ರಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಪರಿಗಣಿಸದೆ 6ನೇ ವೇತನ ಆಯೋಗ ಅನುಷ್ಠಾನದಲ್ಲೂ 2008ರ ನಂತರ ನೇಮಕಗೊಂಡ ಶಿಕ್ಷಕರು, ಉಪನ್ಯಾಸಕರಿಗೆ ಅನ್ಯಾಯ ಎಸಗಿದೆ.ಈಗ ಕೆಎಸ್ ಎಟಿ ತೀರ್ಪು ನೀಡಿದರೂ ಜಾರಿಗೆ ತರುತ್ತಿಲ್ಲ. ಸರಕಾರದ ನಿರ್ಲಕ್ಷ್ಯ ಮುಂದುವರಿದರೆ ಹೋರಾಟ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡನವರು ತಿಳಿಸಿದ್ದಾರೆ.
ಪಿಯು ಉಪನ್ಯಾಸಕರಿಂದ ಈಗಾಗಲೇ ಕಟಾವಣೆ ಮಾಡಿಕೊಂಡಿರುವ ವಿಶೇಷ ಭತ್ಯೆಯನ್ನು ಮರು ಪಾವತಿ ಮಾಡುವಂತೆ ಮತ್ತು ಇನ್ನು ಮುಂದೆ ವಿಶೇಷ ಭತ್ಯೆಯನ್ನು ಕಟಾವಣೆ ಮಾಡದಂತೆ 2021ರ ಅ.29ರಂದು ಕೆಎಸ್ಎಟಿ ಆದೇಶಿಸಿದ್ದರೂ ಸರಕಾರ ನಿರ್ಲಕ್ಷ್ಯ ವಹಿಸಿದೆ. ಶಿಕ್ಷಕರು ಮತ್ತು ಉಪನ್ಯಾಸಕರಿಗೆ ವಿಶೇಷ ಭತ್ಯೆ ನೀಡುವ ಸಂಬಂಧ ಈಗಾಗಲೇ ಹೈಕೋರ್ಟ್, ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಆದರೂ ,ಕೆಎಸ್ಎಟಿಯ ಈ ತೀರ್ಪುಗಳ ವಿರುದ್ಧ ಪುನಃ ಹೈಕೋರ್ಟ್ ನಲ್ಲಿ ರಿಟ್ ಅಜ್ಜಿ ದಾಖಲಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
6ನೇ ವೇತನ ಆಯೋಗ ಜಾರಿಗೆ ಸಂಬಂಧಿಸಿದಂತೆ ಸರಕಾರ 2016 -17ನೇ ಸಾಲಿನಲ್ಲಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಈ ಸಮಿತಿಯು 2008ಕ್ಕಿಂತ ಮೊದಲು ನೇಮಕಗೊಂಡಿದ್ದ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ನೀಡುತ್ತಿದ್ದ ವಿಶೇಷ ಭತ್ಯೆಯನ್ನು ಅವರ ಮೂಲ ವೇತನದೊಂದಿಗೆ ವಿಲೀನಗೊಳಿಸಿತು. ಆದರೆ, 2008ರ ನಂತರ ನೇಮಕವಾದವರನ್ನು ಕೈಬಿಟ್ಟಿತ್ತು. ಆದರೆ, ದೂರುಗಳ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, 2008ರ ನಂತರ ನೇಮಕಗೊಂಡ ಎಲ್ಲಾ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಭತ್ಯೆ ಮಂಜೂರು ಮಾಡುವಂತೆ ಆದೇಶಿಸಿತ್ತು.