Wednesday, February 11, 2026
Wednesday, February 11, 2026
Home Blog Page 1801

ಕೇಂದ್ರದಿಂದ ಕೆಲವು ಆಮದು ಉತ್ಪನ್ನಗಳಿಗೆ ಹೆಚ್ಚುವರಿ ತೆರಿಗೆ

0

ಚೀನಾದಿಂದ ಅಗ್ಗದ ವಸ್ತುಗಳ ಆಮದು ಮತ್ತು ಅವುಗಳಿಂದ ಸ್ಥಳೀಯ ಉತ್ಪಾದಕರ ಮೇಲೆ ಆಗುವ ದುಷ್ಪರಿಣಾಮ ತಡೆಯುವ ಉದ್ದೇಶದಿಂದ ಒಟ್ಟು 5 ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ಹೆಚ್ಚುವರಿ ತೆರಿಗೆ ವಿಧಿಸಿದೆ.
ವಾಣಿಜ್ಯ ಸಚಿವಾಲಯದ ತನಿಖಾ ವಿಭಾಗವಾಗಿರುವ ವಾಣಿಜ್ಯ ಪರಿಹಾರಗಳ ನಿರ್ದೇಶನಾಲಯ ನೀಡಿದ ಶಿಫಾರಸುಗಳಿಗೆ ಅನುಗುಣವಾಗಿ ಈ ತೆರಿಗೆ ವಿಧಿಸಲಾಗಿದೆ. ಈ ಉತ್ಪನ್ನಗಳನ್ನು ಅವುಗಳ ಸಹಜ ಬೆಲೆಗಿಂತ ಕಡಿಮೆ ಬೆಲೆಗೆ ಭಾರತಕ್ಕೆ ರಫ್ತು ಮಾಡಲಾಗುತ್ತಿರುವುದು ಮಹಾ ನಿರ್ದೇಶನಾಲಯ ನಡೆಸಿದ ತನಿಖೆಯಲ್ಲಿ ಗೊತ್ತಾಗಿತ್ತು.
ಅಲ್ಯುಮಿನಿಯಂನ ಕೆಲವು ಉತ್ಪನ್ನಗಳು, ಸೋಡಿಯಂ ಹೈಡ್ರೋಸಲ್ಫೈಟ್ (ಬಣ್ಣ ತಯಾರಿಕಾ ಉದ್ದಿಮೆಗಳಲ್ಲಿ ಬಳಸಲಾಗುತ್ತದೆ), ಸಿಲಿಕಾನ್ ಸೀಲೆಂಟ್ (ಉಷ್ಣ ವಿದ್ಯುತ್ ಉಪಕರಣಗಳಲ್ಲಿ ಬಳಸಲಾಗುತ್ತದೆ) , ರೆಫ್ರಿಜರೇಟರ್ ತಯಾರಿಕಾ ಉದ್ದಿಮೆಗಳು ಬಳಸುವ ಹೈಡ್ರಾಫ್ಲೋರೋಕಾರ್ಬನ್ ನ ಎರಡು ಬಗೆಗಳ ಮೇಲೆ ಈ ತೆರಿಗೆ ವಿಧಿಸಲಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಹೊರಡಿಸಿದ ಎರಡು ಪ್ರತ್ಯೇಕ ಅಧಿಸೂಚನೆಗಳಲ್ಲಿ ತಿಳಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಹಿಮಾಚಲ ಪ್ರದೇಶ ವಿಜಯ್ ಹಜಾರೆ ಟ್ರೋಫಿ ಚೊಚ್ಚಲ ಗೆಲುವು

0

ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯಾವಳಿಯು ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ತಂಡಗಳ ನಡುವೆ ಪಂದ್ಯ ನಡೆಯಿತು. ತಮಿಳುನಾಡು ತಂಡದ ವಿರುದ್ಧ ಹಿಮಾಚಲ ಪ್ರದೇಶವು ಭರ್ಜರಿ ಜಯ ಸಾಧಿಸಿ ವಿಜಯ ಹಜಾರೆ ಟ್ರೋಫಿ ತನ್ನದಾಗಿಸಿಕೊಂಡಿದೆ.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು ತಂಡ 49.4 ಓವರ್ ಗಳಲ್ಲಿ 314 ರನ್ ಗಳಿಸಿತು.

ವಿಜಯನಗರ ಏಕದಿನ ಕ್ರಿಕೆಟ್ ಟ್ರೋಫಿ ಟೂರ್ನಿಯ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡುತ್ತಲೇ ಬಂದ ತಮಿಳುನಾಡು ಸತತ ಆರನೇ ಸಲ ಪ್ರಶಸ್ತಿ ಜಯಿಸುವ ಕನಸು ನನಸಾಗಲು ಸಾಧ್ಯವಾಗಲಿಲ್ಲ, ಕನಸು ಕನಸಾಗಿಯೇ ಉಳಿಯಿತು.

ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ 103 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿ 116 ರನ್ ಗಳಿಸಿದ ಕಾರ್ತಿಕ್ ಪ್ರಯತ್ನದ ಸುಂದರ ಶತಕವು ವ್ಯರ್ಥವಾಯಿತು.

315 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಆಡಿದ ಹಿಮಾಚಲ ಪ್ರದೇಶ 47.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿಕೊಂಡಿತು. ಸಂಜೆ 5 ಘಂಟೆ ಸುಮಾರಿಗೆ ಹಿಮಾಚಲ ಪ್ರದೇಶ ತಂಡದ ಗೆಲುವಿಗೆ 15 ಎಸೆತಗಳಲ್ಲಿ 16 ರನ್ ಗಳಿಸಬೇಕಾಗಿತ್ತು. ಈ ಹೊತ್ತಿನಲ್ಲಿ ಮಂದ ಬೆಳಕಿನ ಕಾರಣ ಆಟ ಸ್ಥಗಿತಗೊಳಿಸಲಾಯಿತು.ಹಿಮಾಚಲ ಪ್ರದೇಶ ಉತ್ತಮ ರನ್ ಸರಾಸರಿ ಹೊಂದಿತ್ತು ಆದ್ದರಿಂದ “ವಿಜಯಿ” ತಂಡ ಎಂದು ಘೋಷಿಸಲಾಯಿತು.

ವಿಕೆಟ್ ಕೀಪರ್ – ಬ್ಯಾಟರ್,ಶುಭಂ ಅರೋರ (ಅಜೇಯ 131 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 136 ರನ್) ಗಳಿಸಿದರು. ಇದರ ಬಲದಿಂದ ಹಿಮಾಚಲ ತಂಡವು 47.3 ಓವರ್ ಗಳಲ್ಲಿ 4 ವಿಕೆಟ್ ಗಳಿಗೆ 299 ರನ್ ಗಳಿಸಿತು.

ಒಟ್ಟಿನಲ್ಲಿ ತಮಿಳುನಾಡು ವಿರುದ್ಧದ ರೋಚಕ ಪ್ರದರ್ಶನ ನೀಡಿದ ಹಿಮಾಚಲ ಪ್ರದೇಶ ವಿಜಯ್ ಹಜಾರೆ ಟ್ರೋಫಿ ಗೆದ್ದು ಸಂಭ್ರಮಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಭಾರತ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೆಸ್ಟ್ : ರಾಹುಲ್ ಆಕರ್ಷಕ ಶತಕ

0

ದಕ್ಷಿಣಾ ಆಫ್ರಿಕಾ ಮತ್ತು ಭಾರತ ತಂಡಗಳ ನಡುವಿನ ಟೆಸ್ಟ್ ಸರಣಿಯು ನಿನ್ನೆಯಿಂದ ಆರಂಭವಾಗಿದ್ದು ಭಾರತ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ.

ಸೂಪರ್ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 90 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿ ಕೊಂಡಿತು.ಮೊದಲ ವಿಕೆಟ್ ಜೊತೆಯಾಟದಲ್ಲಿ ಅಂಕಣಕ್ಕೆ ಇಳಿದು ಆಟವಾಡಿದ ಮಯಾಂಕ್ ಮತ್ತು ರಾಹುಲ್ ಉತ್ತಮ ಆರಂಭ ಮಾಡಿದರು, ವಿರಾಮದ ವೇಳೆಗೆ ತಂಡಕ್ಕೆ 83 ರನ್ ಗಳನ್ನು ಸೇರಿಸಿದರು. ನಂತರವೂ ಇವರಿಬ್ಬರ ಜೊತೆಯಾಟದಲ್ಲಿ 117 ರನ್ ಗಳಿಸಿ ದಕ್ಷಿಣಾ ಆಫ್ರಿಕಾ ತಂಡದ ಬೌಲರ್ ಗಳಿಗೆ ದೊಡ್ಡ ತಲೆನೋವು ಉಂಟುಮಾಡಿದರು.

ತದನಂತರ ಮಯಾಂಕ್ ಸ್ಪೇಲ್ ಬೌಲಿಂಗ್ ಮೊದಲು ಬಂದ ಲುಂಗಿ ಗಿಡಿ ಈ ಬೌಲಿಂಗ್ ಗೆ (LBW) ಬಲೆಗೆ ಬಿದ್ದು ಔಟಾದರು.ಇವರಿಬ್ಬರ ಜೊತೆಯಾಟವನ್ನು ಮುರಿದರು.ಆದರೆ,ಅಂಪೈರ್ ಎರಸ್ಮಸ್ ಔಟ್ ಕೊಡಲಿಲ್ಲ. ಆತಿಥೇಯ ತಂಡದ ನಾಯಕ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (UDRS) ಅವಕಾಶ ಬಳಸಿಕೊಂಡರು. ಯಶಸ್ವಿಯೂ ಆದರು. 127 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಹುಲ್ 53ನೇ ಓವರ್ ನಲ್ಲಿ ಮಲ್ದರ್ ಬೌಲಿಂಗ್ ನಲ್ಲಿ ರಾಹುಲ್ ಕ್ಯಾಚ್ ಬಿಟ್ಟ ಜೆನ್ಸನ್ ತಪ್ಪಿಗೆ ಆತಿಥೇಯ ತಂಡ ಕೈ ಕೈ ಹಿಸುಕಿಕೊಳ್ಳಬೇಕಾಯಿತು. ರಾಹುಲ್ ಶತಕದತ್ತ ದಾಪುಗಾಲಿಟ್ಟರು.218 ನೇ ಎಸೆತದಲ್ಲಿ ಶತಕದ ಗಡಿ ಮುಟ್ಟಿದರು. ರಾಹುಲ್ ಗೆ ಇದು ಟೆಸ್ಟ್ ನಲ್ಲಿ 7 ನೇ ಶತಕ ಅವರು ಕಳೆದ ಆಗಸ್ಟ್ ನಲ್ಲಿ ಇಂಗ್ಲೆಂಡ್ ಶತಕ ಗಳಿಸಿದ್ದರು. ಇದೆಲ್ಲದರ ನಡುವೆ ರಾಹುಲ್ ಸಂಪೂರ್ಣ ಏಕಾಗ್ರತೆ ಸಾಧಿಸಿ ಬ್ಯಾಟಿಂಗ್ ಮಾಡಿದರು. ಬ್ಯಾಕ್ ಫುಟ್ ಮತ್ತು ಫ್ರಂಟ್ ಫುಟ್ ನಲ್ಲಿ ಸೈ ಎನಿಸಿಕೊಂಡರು.

ಇದರಿಂದಾಗಿ ಭಾರತ ತಂಡವು ದಿನ ದಾಟದ ಮುಕ್ತಾಯಕ್ಕೆ 90 ಓವರ್ ಗಳಲ್ಲಿ 3 ವಿಕೆಟ್ ಗಳಿಗೆ 272 ರನ್ ಗಳಿಸಿತು.ರಾಹುಲ್ ಮತ್ತು ಅಜಿಂಕ್ಯ ರಹಾನೆ ಕ್ರೀಸ್ ನಲ್ಲಿದ್ದು ಆಟ ಮುಂದುವರಿಯಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರೊ ಕಬಡ್ಡಿ ಒಂದು ಪಂದ್ಯ ಟೈ ಇನ್ನೊಂದು ಬೆಂಗಳೂರು ಬುಲ್ಸ್ ಜಯ

0

ಬೆಂಗಳೂರಿನ ವೈಟ್ ಫೀಲ್ಡ್ ನ ಶೆರಾಟನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ನಿನ್ನೆ 4 ತಂಡಗಳ ನಡುವೆ 2 ಪಂದ್ಯಗಳು ನಡೆದವು.
ಮೊದಲನೇ ಪಂದ್ಯವು:
ಗುಜರಾತ್ ಜಯಂಟ್ಸ್ ಮತ್ತು ದಬಾಂಗ್ ದೆಹಲಿ ತಂಡಗಳ ನಡುವೆ ಪಂದ್ಯ ನಡೆಯಿತು.2 ತಂಡಗಳ ಸಮಬಲ ಹೋರಾಟದಿಂದ ಪಂದ್ಯವನ್ನು ‘ಡ್ರಾ’ ಮಾಡಿಕೊಂಡಿವೆ.
ದೆಹಲಿ ತಂಡದ ನವೀನ್ ಕುಮಾರ್ (11 ಪಾಯಿಂಟ್) ಮತ್ತು ಗುಜರಾತ್ ತಂಡದ ರಾಕೇಶ್ ನರ್ವಾಲ್ (9 ಪಾಯಿಂಟ್) ಜಿದ್ದಾಜಿದ್ದಿಯ ಹೋರಾಟದಿಂದಾಗಿ ಉಭಯ ತಂಡಗಳು ಸೋಲಿನಿಂದ ತಪ್ಪಿಸಿಕೊಂಡು.
ಗುಜರಾತ್ ತಂಡದ ಡಿಫೆಂಡರ್ ಸುನಿಲ್ ಕುಮಾರ್ ಕೂಡ ಮಿಂಚಿದರು,ಅವರು 4 ಅಂಕಗಳ ಕಾಣಿಕೆಯನ್ನು ತಂಡಕ್ಕೆ ನೀಡಿದರು.
ಗುಜರಾತ್ ಜಯಂಟ್ಸ್ ಮತ್ತು ದಬಾಂಗ್ ದೆಹಲಿ ನಡುವಿನ ನಡೆದ ಇನ್ನೊಂದು ಪಂದ್ಯವು 24-24 ರಿಂದ ರೋಚಕ “ಟೈ” ನಲ್ಲಿ ಅಂತ್ಯವಾಯಿತು.
ಎರೆಡನೇ ಪಂದ್ಯವು:
ಬೆಂಗಳೂರು ಬುಲ್ಸ್ (36) ಮತ್ತು ಬೆಂಗಾಲ್ ವಾರಿಯರ್ಸ್ (35) ತಂಡಗಳ ನಡುವೆ ಪಂದ್ಯ ನಡೆಯಿತು.ಬೆಂಗಳೂರು ಬುಲ್ಸ್ ,ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ 1 ಅಂಕಗಳ ಅಂತರದಿಂದ ರೋಚಕ ಜಯ ಸಾಧಿಸಿದೆ.
ಬುಲ್ಸ್ ತಂಡದ ನಾಯಕ ಪವನ್ 15 ಅಂಕಗಳನ್ನು ಗಳಿಸಿ ತಂಡದ ಗೆಲುವಿನ ರುವಾರಿಯಾದರು. ಮಣಿಂದರ್ ಸಿಂಗ್ 17 ಅಂಕ ಗಳಿಸಿ ಬೆಂಗಾಲಕ್ಕೆ ಬಲ ತುಂಬಿದರು.ಆದರೆ, ತಂಡವು ಗೆಲುವಿನ ಅಂಚಿನಲ್ಲಿ ಎಡವಿತು.
ಬೆಂಗಾಲ್ ತಂಡದಲ್ಲಿ ಆಲ್ ರೌಂಡರ್ ಮೊಹಮ್ಮದ್ ನಬಿಷೇಕ್ (8 ಪಾಯಿಂಟ್) ಕೂಡ ಅಮೋಘ ಆಟವಾಡಿದರು.ಆದರೆ,ತಂಡವು ಕೇವಲ ಒಂದು ಅಂಕ ಅಂತರದಿಂದ ಸೋತಿತು.ಬೆಂಗಳೂರು ತಂಡಕ್ಕೆ ಟೂರ್ನಿಯಲ್ಲಿ ಇದು ಎರಡನೇ ಜಯವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್ ಲಾಕ್ ಡೌನ್ ಬೇಡಿಕೆಗಳೇ ” ಈಡೇರಿಲ್ಲ”

0

ಕೋವಿಡ್ 19 ನಿಂದಾಗಿ ಎರಡು ವರ್ಷಗಳಿಂದ ವಿಶ್ವವನ್ನೇ ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಭಾರತದಲ್ಲೂ ಕೋವಿಡ್ 1ನೇ ಮತ್ತು 2ನೇ ಅಲೆ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್ ಡೌನ್ ನಿಂದ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರಿಗೆ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರ ಘೋಷಿಸಿದ ಅಂತಹ ಪರಿಹಾರದಲ್ಲಿ ಅರ್ಧದಷ್ಟು ಮಾತ್ರ ಫಲಾನುಭವಿಗಳಿಗೆ ದೊರಕಿದೆ.

ರಾಜ್ಯದಲ್ಲಿರುವ 7 ಲಕ್ಷ ಚಾಲಕರ ಪೈಕಿ 2.50 ಲಕ್ಷ ಮಂದಿಗೆ ಮಾತ್ರ ಪರಿಹಾರ ಲಭಿಸಿದೆ. 2020ರಲ್ಲಿ ತಲಾ 5 ಸಾವಿರ ರೂ ಹಾಗೂ 2000 21ರಲ್ಲಿ ತಲಾ 3 ಸಾವಿರ ರೂ ಪರಿಹಾರ ಘೋಷಿಸಲಾಗಿತ್ತು.

ಈ ಬಗ್ಗೆ ಚಾಲಕರಲ್ಲಿ ಅರಿವಿನ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಯಿಂದ ಲಕ್ಷಾಂತರ ಮಂದಿಗೆ ಅರ್ಜಿಸಲ್ಲಿಸಲು ಆಗಲಿಲ್ಲ. ಈ ನಿಟ್ಟಿನಲ್ಲಿ ಮೊದಲ ಪರಿಹಾರ ಪಡೆದಷ್ಟೇ ಎರಡನೇ ಬಾರಿ ಪರಿಹಾರ ದೊರೆತಿದೆ.

ಲಾಕ್ ಡೌನ್ ನಿಂದಾಗಿ ಪ್ರವಾಸಿಗರ ಕೊರತೆ ಅಂತರ್ರಾಷ್ಟ್ರೀಯ ವಿಮಾನಗಳ ನಿರ್ಬಂಧ ಹಾಗೂ ದೊಡ್ಡ ಕಾರ್ಯಕ್ರಮಗಳು ನಡೆಯದೇ ಇರುವುದರಿಂದ ಆಟೋ, ಟ್ಯಾಕ್ಸಿ ಮ್ಯಾಕ್ಸಿಕ್ಯಾಬ್, ಪ್ರವಾಸಿ ವಾಹನ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದರು. 20 ತಿಂಗಳುಗಳಿಂದ ಕೆಲಸ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಈ ನಿಟ್ಟಿನಲ್ಲಿ ಹಣಕಾಸು ಸಂಸ್ಥೆಗಳು ಸಾಲದ ಮರುಪಾವತಿಗೆ ಒತ್ತಡ ಹೇರುತ್ತಿವೆ ಜೊತೆಗೆ ರಸ್ತೆ ತೆರಿಗೆಯನ್ನು ಕಟ್ಟುವಂತ ಆಗಿದೆ.

ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ ಅವರು “ಸರ್ಕಾರ ಮೊದಲ ಲಾಕ್ ಡೌನ್ ವೇಳೆಯಲ್ಲಿ ಎರಡು ತಿಂಗಳ ರಸ್ತೆ ತೆರಿಗೆ ವಿನಾಯಿತಿ ನೀಡಿತ್ತು ಎರಡನೇ ಅಲೆಯ ಸಂದರ್ಭದಲ್ಲಿ ಒಂದು ತಿಂಗಳ ತೆರಿಗೆವಿನಾಯಿತಿ ಕೊಟ್ಟಿದ್ದು ಬಿಟ್ಟರೆ, ಬೇರೇನು ಸೌಲಭ್ಯ ಕಲ್ಪಿಸಿಲ್ಲ. ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರು ಪ್ರಯೋಜನವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ತೀರ್ಥಹಳ್ಳಿ : ನರೇಗಾ ಹಣ ಬಾಕಿಯಿಂದ ಫಲಾನುಭವಿಗಳಿಗೆ ತೊಂದರೆ

0

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ದುಡಿಯುವ ಕೈಗಳಿಗೆ ಕೆಲಸವನ್ನು ಒದಗಿಸುವ ಉದ್ದೇಶದಿಂದ ರೂಪಿಸಲಾಗಿದೆ. ಆದರೆ ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸರ್ಕಾರ 5 ತಿಂಗಳಿಂದ ಕೂಲಿ ನೀಡಿಲ್ಲ. ಬರೀ ನೆಪ ಹೇಳಿ ಸತಾಯಿಸುತ್ತಿದೆ.

ನರೇಗಾ ಯೋಜನೆ ಕಾಮಗಾರಿ ಉಸ್ತವಾರಿ ಗ್ರಾಮದಲ್ಲಿ ಸಾರ್ವಜನಿಕ ಸಹಭಾಗಿತ್ವದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಗೆ ಸರ್ಕಾರ ಐದು ವರ್ಷಗಳ ಹಿಂದೆಯೇ ಆದೇಶವನ್ನು ಹೊರಡಿಸಿದೆ ಆದರೆ ಆದೇಶ ಇನ್ನೂ ಜಾರಿಗೆ ಬಂದಿಲ್ಲ. ಇದರ ಬಗ್ಗೆ ಸರ್ಕಾರವು ಗ್ರಾಮ ಪಂಚಾಯಿತಿ ಆಡಳಿತದಿಂದ ಯಾವುದು ಸ್ಪಷ್ಟೀಕರಣ ಕೇಳಿಲ್ಲ.

ನರೇಗಾ ಯೋಜನೆ ಅಡಿಯಲ್ಲಿ ನಿಗದಿತ 7 ದಿನದೊಳಗೆ ಕೂಲಿ ಕೆಲಸದ ಸಂಬಳವನ್ನು ಕಾರ್ಮಿಕರಿಗೆ ನೀಡಬೇಕು. ಆದರೆ ಈಗ ಸಂಬಳಕ್ಕೂ ಖಾತ್ರಿ ಇಲ್ಲದಂತಾಗಿದೆ ತೀರ್ಥಹಳ್ಳಿ ತಾಲೂಕಿನಲ್ಲಿ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ 4,194 ಕೂಲಿ ಆಳಿಗೆ ಒಟ್ಟು 1.25 ಕೋಟಿ, ತೋಟಗಾರಿಕೆ, ಅರಣ್ಯ, ಕೃಷಿ ಇಲಾಖೆ ವ್ಯಾಪ್ತಿಯ ವಹಿಸಿದ ಕಾಮಗಾರಿಗಳ ಕೂಲಿ ಸುಮಾರು 30 ಲಕ್ಷ ರೂಪಾಯಿ ಮೊತ್ತವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಸರ್ಕಾರ ನರೇಗಾ ಯೋಜನೆ ಅಡಿ ಕೆಲಸ ಮಾಡಿದ ಕೂಲಿಕಾರ್ಮಿಕರ ಕಡೆ ಇನ್ನಾದರೂ ಗಮನಹರಿಸಬೇಕಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಜ್ಯ ಸರ್ಕಾರದಿಂದ ಕೋವಿಡ್ ಕರ್ಫ್ಯೂ ನಿಬಂಧನೆಗಳು

0

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಡಿಸೆಂಬರ್ 28ರಿಂದ ಹತ್ತು ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ನಿಷೇಧ ಮತ್ತು ಹೋಟೆಲ್, ರೆಸ್ಟೋರೆಂಟ್, ಪಬ್ ಮತ್ತು ಕ್ಲಬ್ ಗಳಲ್ಲಿ ಸಾಮರ್ಥ್ಯದ ಶೇಕಡಾ 50 ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಬೇಕೆಂಬ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಮುಖ್ಯ ಕಾರ್ಯದರ್ಶಿ ಮತ್ತೊಮ್ಮೆ ನಿರ್ದೇಶನ ನೀಡಿದ್ದಾರೆ.
ಮದುವೆ ಸೇರಿದಂತೆ ಯಾವುದೇ ಸಭೆ, ಸಮಾರಂಭಗಳಿಗೆ ಸೇರ ಬಹುದಾದ ಜನಸಂಖ್ಯೆಯ ಮಿತಿಯನ್ನು 300ಕ್ಕೆ ಇಳಿಕೆ ಮಾಡಲಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಭೆಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದರು. ನಂತರ ರಾತ್ರಿ ಕರ್ಫ್ಯೂ ಜಾರಿ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಅಗತ್ಯ ಸೇವೆಗಳ ಉದ್ದೇಶದ ಹೊರತಾಗಿ ಸಾರ್ವಜನಿಕರ ಓಡಾಟ ನಿಷಿದ್ಧ. ಹೋಟೆಲ್, ರೆಸ್ಟೋರೆಂಟ್, ಪಬ್ ಸೇರಿದಂತೆ ಎಲ್ಲ ಚಟುವಟಿಕೆಗಳೂ ರಾತ್ರಿ 10ಕ್ಕೆ ಅಂತ್ಯ.
ಬಸ್ಸು, ರೈಲು, ಮೆಟ್ರೋ ರೈಲು ಮತ್ತು ವಿಮಾನ ಸೇರಿದಂತೆ ಎಲ್ಲ ಬಗೆಯ ಸಾರ್ವಜನಿಕ ಸಾರಿಗೆ ಸೇವೆಗೆ ಅವಕಾಶ. ಪ್ರಯಾಣಿಕರು ಟಿಕೆಟ್ ತೋರಿಸಿ ಬಸ್, ರೈಲು ಮತ್ತು ವಿಮಾನ ನಿಲ್ದಾಣ ತಲುಪಬಹುದು.
ರೋಗಿಗಳು ಮತ್ತು ಅವರ ಸಹಾಯಕರು ಅಥವಾ ಜೊತೆಗಿರುವವರು ಚಿಕಿತ್ಸೆ ಉದ್ದೇಶಕ್ಕೆ ಪ್ರಯಾಣ ಮಾಡಲು ನಿರ್ಬಂಧಿಸುವಂತಿಲ್ಲ.
ರಾತ್ರಿ ವೇಳೆ ಕೆಲಸ ಮಾಡಲೇಬೇಕಾದ ಕೈಗಾರಿಕೆಗಳು ಮತ್ತು ಕಂಪನಿಗಳ ನಿರ್ಬಂಧ ಅನ್ವಯವಾಗದು. ಇಂತಹ ಉದ್ದಿಮೆಗಳ ನೌಕರರು ಸಂಸ್ಥೆಯ ಗುರುತಿನ ಚೀಟಿ ಅಥವಾ ಅನುಮತಿ ಪತ್ರ ತೋರಿಸಿ ಓಡಾಡಬಹುದು.
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳಲ್ಲಿ ಅನಿವಾರ್ಯ ಎನಿಸಿದ ನೌಕರರು ಮಾತ್ರ ಕಚೇರಿಯಿಂದ ಕೆಲಸ ನಿರ್ವಹಿಸಬೇಕು.
ಟೆಲಿಕಾಂ ಮತ್ತು ಇಂಟರ್ನೆಟ್ ಸೇವೆಗೆ ಸಂಬಂಧಿಸಿದ ಸಂಸ್ಥೆಗಳ ನೌಕರರು ಓಡಾಡಲು ಅವಕಾಶ.
ವೈದ್ಯಕೀಯ, ತುರ್ತು ಸೇವೆಗಳು ಮತ್ತು ಔಷಧ ಉತ್ಪಾದನಾ ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬಹುದು. ಇತರ ಎಲ್ಲಾ ವಾಣಿಜ್ಯ ಚಟುವಟಿಕೆಗಳೂ ನಿಷೇಧ.
ಸರಕು ಸಾಗಣೆ ,ಇ-ಕಾಮರ್ಸ್ ಕಂಪನಿಗಳಿಂದ ಸರಕುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ಸಂಪೂರ್ಣ ಅವಕಾಶ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜೈವಿಕ ತಂತ್ರಜ್ಞಾನ ಪದವೀಧರರಿಗೂ ಸಿಇಟಿ ಅವಕಾಶ

0

ರಾಜ್ಯ ಸರ್ಕಾರ ರೂಪಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಿಇಟಿ ಪರೀಕ್ಷೆಯಲ್ಲಿ ಜೈವಿಕ ತಂತ್ರಜ್ಞಾನ ಪದವೀಧರರಿಗೂ ಅವಕಾಶ ಕಲ್ಪಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

“ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಆಗುವ ಮೊದಲು ನಿಯಮಗಳನ್ನು ಬದಲಾಯಿಸಿ ಪರಿಷ್ಕೃತ ಆದೇಶ ಹೊರಡಿಸಲಾಗುವುದು” ಎಂದು ಸಚಿವ ನಾಗೇಶ್ ತಿಳಿಸಿದ್ದಾರೆ.

ರಾಜ್ಯದಲ್ಲಿ 6 ರಿಂದ 8ನೇ ತರಗತಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸದಾಗಿ ರೂಪಿಸಿರುವ ವೃಂದ ಮತ್ತು ನೇಮಕಾತಿ ಪ್ರಕಟಣೆಯಲ್ಲಿ ಜೈವಿಕತಂತ್ರಜ್ಞಾನ ಪದವಿ ಪಡೆದ ಬಿಎಡ್/ಡಿಎಡ್ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿತ್ತು. ಇದರಿಂದ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಪಡೆದ ಸಾವಿರಾರು ಅಭ್ಯರ್ಥಿಗಳು ಸಿಇಟಿ ಪಾಸಾಗಿದ್ದರೂ ಶಿಕ್ಷಕರ ನೇಮಕಾತಿಯಲ್ಲಿ ವಂಚಿತರಾಗುವ ಆತಂಕವಿತ್ತು. ಸಚಿವ ಬಿ.ಸಿ.ನಾಗೇಶ್ ಅವರ ಭರವಸೆಯಿಂದ ಅಭ್ಯರ್ಥಿಗಳಲ್ಲಿ ಸಂತಸ ವ್ಯಕ್ತವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕಟ್ಟಡ ತ್ಯಾಜ್ಯ ಮರುಬಳಕೆ

0

ಕೇಂದ್ರ ಸರ್ಕಾರವು 2022ರ ಸರ್ವೇಕ್ಷಣೆಗೆ ವಿಧಿಸಿರುವ ಮಾನ ದಂಡಗಳಲ್ಲಿ ಕಟ್ಟಡ ತ್ಯಾಜ್ಯ ಶೇ.50 ರಷ್ಟು ಮರುಬಳಕೆ ಆಗುವಂತೆ ಮಾಡಬೇಕು ಎಂದು ತಿಳಿಸಿದೆ.

ಕೇಂದ್ರ ಸರ್ಕಾರದ ಸರ್ವೇಕ್ಷಣೆ ವಿಧಿಸಿರುವ ಮಾನದಂಡಗಳಿಗೆ ಮೈಸೂರು ನಗರ ಪಾಲಿಕೆಯು ಮೊದಲು ತಾನೇ ಕಟ್ಟಡ ತ್ಯಾಜ್ಯ ಬಳಕೆ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ.

ವಲಯ ಕಚೇರಿ 7 ವ್ಯಾಪ್ತಿಯಲ್ಲಿರುವ ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕದ ಸುತ್ತ ಡೆಬ್ರಿಸ್ ನಿಂದ ಹತ್ತು ಅಡಿ ಎತ್ತರದ 100 ಅಡಿ ಉದ್ದದ ತಡೆಗೋಡೆ ನಿರ್ಮಿಸಿದೆ.

ಶಿಥಿಲಾವಸ್ಥೆಯಲ್ಲಿ ಇರುವಂತಹ ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕದ ಮರುನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ಅಂದಾಜುಪಟ್ಟಿ ಸಲ್ಲಿಸುವಂತೆ ಪಾಲಿಕೆಯ ಅಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಅದರಂತೆ 4ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜಿ.ಲಕ್ಷ್ಮಿಕಾಂತ್ ರೆಡ್ಡಿ ಅವರು ಪಾಲಿಕೆ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಕಟ್ಟಡ ತ್ಯಾಜ್ಯದಿಂದ ಮಾಡಲು ಆದ್ಯತೆ ನೀಡಲಾಗಿದೆ. ತಡೆಗೋಡೆ, ಫುಟ್ಪಾತ್, ಶೌಚಾಲಯ ನಿರ್ಮಾಣ ಕಾರ್ಯಗಳಿಗೆ ಬಳಸಲಾಗುತ್ತಿದೆ. ಇದರಿಂದ ಕಟ್ಟಡ ತ್ಯಾಜ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದ್ದಾರೆ.

ಆರ್- ಲೀಫ್ ಇಂಡಸ್ಟ್ರೀಸ್ ನಿರ್ದೇಶಕ ಎಂ.ರಾಜೇಶ್ ಕುಮಾರ್ ಜೈನ್ ‘ನಮ್ಮಆರ್- ಲೀಫ್ ಸಂಸ್ಥೆಯ ಮೂಲಕ ಕಟ್ಟಡ ತ್ಯಾಜ್ಯದಿಂದ ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಸಲಾಗುತ್ತಿತ್ತು ಮನೆಗಳನ್ನು ನಿರ್ಮಿಸಲಾಗಿದೆ’ ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮುದ್ರಾ ಯೋಜನೆ ಸಾಲ ಮಂಜೂರಾತಿ ಸಮಸ್ಯೆ

0

ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಪಿಎಂ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಸಣ್ಣ ಉದ್ದಿಮೆದಾರರು ಪರದಾಡುವಂತಾಗಿದೆ.

ಮುದ್ರಾ ಯೋಜನೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 17 ಸಾರ್ವಜನಿಕ, 21 ಖಾಸಗಿ ವಲಯದ ಬ್ಯಾಂಕ್ ಗಳು ಹಾಗೂ ಸಹಕಾರಿ ಗ್ರಾಮೀಣ ಮೈಕ್ರೋ ಫೈನಾನ್ಸ್ ಕಂಪನಿಗಳು ವ್ಯಾಪ್ತಿಯಿಂದ ಸಾಲ ನೀಡಲು ಅವಕಾಶವಿದ್ದರೂ ಸಹ ಹಲವು ಕಾರಣಗಳಿಂದಾಗಿ ಹೊಸ ಸಾಲ ನೀಡುವ ಪ್ರಮಾಣದಲ್ಲಿ ತೊಂದರೆಯುಂಟಾಗಿದೆ.

ಸ್ಥಳೀಯ ಬ್ಯಾಂಕ್ ಮ್ಯಾನೇಜರ್ ಗಳು ಅರ್ಹತೆಗಳಿದ್ದರೂ ಗ್ರಾಹಕರನ್ನು ವಿನಾಕಾರಣ ಅಲೆದಾಡಿಸುತ್ತಿದ್ದಾರೆ ಹಾಗೂ ಮುದ್ರಾ ಯೋಜನೆ ಅಡಿ ಸಾಲವನ್ನು ಮಂಜೂರು ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಆರ್ಬಿಐ ಮೂಲಗಳ ಪ್ರಕಾರ ಮುದ್ರಾ ಯೋಜನೆಯಡಿ ಪಡೆದ ಸಾಲದ ಮರುಪಾವತಿ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ಸಾಲ ಸೌಲಭ್ಯ ನೀಡಲು ನಿರಾಸಕ್ತಿ ತೋರುತ್ತಿವೆ ಎಂದು ತಿಳಿಸಿವೆ.

2017-18ನೇ ಆರ್ಥಿಕ ವರ್ಷದಲ್ಲಿ 4.81 ಲಕ್ಷ ಫಲಾನುಭವಿಗಳಿಗೆ 2.46 ಲಕ್ಷ ಕೋಟಿ, 2018-19 ರಲ್ಲಿ 5.98 ಲಕ್ಷ ಫಲಾನುಭವಿಗಳಿಗೆ 3.11ಲಕ್ಷ ಕೋಟಿ, 2019-20ರಲ್ಲಿ 6.22 ಲಕ್ಷ ಫಲಾನುಭವಿಗಳಿಗೆ 3.28 ಲಕ್ಷ ಕೋಟಿ, 2020-21 ರಲ್ಲಿ 5.07 ಲಕ್ಷ ಫಲಾನುಭವಿಗಳಿಗೆ 3.11 ಲಕ್ಷ ಕೋಟಿ, 2021-22ನೇ ಸಾಲಿನಲ್ಲಿ ಈವರೆಗೆ 2.79 ಲಕ್ಷ ಫಲಾನುಭವಿಗಳಿಗೆ 1.58 ಲಕ್ಷ ಕೋಟಿ ಸಾಲ ನೀಡಲಾಗಿದೆ. ಲಕ್ಷಾಂತರ ಕೋಟಿ ರೂ ಕಂತುಗಳು ಸಂಗ್ರಹವಾಗದ ಕಾರಣ ನೂತನ ಸಾಲ ವಿತರಣೆಗೆ ಬ್ಯಾಂಕ್ಗಳು ಹಿಂದೇಟು ಹಾಕುವ ಅನಿವಾರ್ಯತೆ ಉಂಟಾಗಿದೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.