ಪ್ರವಾದಿ ಮೊಹಮ್ಮದರ ವಿರುದ್ಧ ಟೀವಿ ಚರ್ಚೆಯಲ್ಲಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಅಮಾನತಾಗಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ, ತಮ್ಮ ಹೇಳಿಕೆಯನ್ನು ಬೇಷರತ್ತಾಗಿ ಹಿಂಪಡೆಯುವುದಾಗಿ ಹೇಳಿದ್ದಾರೆ.
ಗ್ಯಾನವಾಪಿಯಲ್ಲಿ ಪತ್ತೆ ಆಗಿದ್ದ ಶಿವಲಿಂಗ ಉದ್ದೇಶಿಸಿ, ‘ಅದು ಶಿವಲಿಂಗವಲ್ಲ, ಬದಲಾಗಿ ನೀರಿನ ಕಾರಂಜಿ’ ಎಂದೆಲ್ಲಾ ಹೇಳಲಾಗಿತ್ತು. ಜೊತೆಗೆ ಶಿವಲಿಂಗವನ್ನು ದೆಹಲಿ ರಸ್ತೆಯ ಬದಿಯಲ್ಲಿ ಹಾಕಿರುವ ಕಂಬಗಳಿಗೂ ಹೋಲಿಸಲಾಗಿತ್ತು. ಇಂಥ ಅವಮಾನ ಸಲ್ಲಿಸಲಾಗದೇ, ಅದಕ್ಕೆ ಪ್ರತಿಯಾಗಿ ನಾನು ‘ಕೆಲವೊಂದು ಮಾತು’ಗಳನ್ನು ಆಡಿದ್ದೆ. ನನ್ನ ಮಾತುಗಳು ಯಾರ ಧಾರ್ಮಿಕ ನಂಬಿಕೆಗಳಿಗಾದರೂ ನೋವು ತಂದಿದ್ದರೆ, ನಾನು ನನ್ನ ಹೇಳಿಕೆಯನ್ನು ಬೇಷರತ್ ಹಿಂಪಡೆಯುತ್ತೇನೆ’ ಎಂದಿದ್ದಾರೆ.
ಪ್ರವಾದಿ ಮೊಹಮ್ಮದರನ್ನು ಉದ್ದೇಶಿಸಿ ಟೀವಿ ಚರ್ಚೆಯಲ್ಲಿ ನೂಪುರ್ ಹೇಳಿಕೆ ನೀಡುತ್ತಿದ್ದಂತೆಯೇ ಅವರ ವಿರುದ್ಧ ಪುಣೆ, ಹೈದರಾಬಾದ್, ಮುಂಬೈ ಹಾಗೂ ದೇಶದ ಇನ್ನೂ ಕೆಲವು ಕಡೆ ಪ್ರಕರಣ ದಾಖಲಾಗಿದ್ದವು. ಇದರ ನಡುವೆ, ‘ನನಗೆ ಜೀವ ಬೆದರಿಕೆ ಬರುತ್ತಿದೆ’ ಎಂದೂ ನೂಪುರ್ ದಿಲ್ಲಿ