Wednesday, August 12, 2026
Wednesday, August 12, 2026

Youth Hostel Association ಸರ್ ಪಾಸ್ ಹಿಮಾಲಯ ಚಾರಣವು ಪ್ರತಿಯೊಬ್ಬರಿಗೂ ಸಂತಸ ಹೆಚ್ಚಿಸುತ್ತದೆ- ಎಸ್.ಎಸ್.ವಾಗೀಶ್.

Date:

Youth Hostel Association ಚಾರಣಿಗರ ಸ್ವರ್ಗ ಹಿಮಾಲಯ ಪ್ರದೇಶ. ಪ್ರತಿ ದಿನ ಪ್ರಾಕೃತಿಕ ವಿಸ್ಮಯ ಗೋಚರಿಸಿ ವಿಶೇಷ ಅನುಭವ ನೀಡುವ ಸರ್ ಪಾಸ್ ಅನ್ನು ಚಾರಣಗಳ ರಾಜ ಎನ್ನಲಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಚೇರ್ಮನ್ ಎಸ್.ಎಸ್.ವಾಗೇಶ್ ಹೇಳಿದರು.
ಶಿವಮೊಗ್ಗ, ತರುಣೋದಯ, ಹೊಸನಗರ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಘಟಕಗಳ 56 ಚಾರಣಿಗ ಸದಸ್ಯರು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಾತನಾಡಿ, ಸರ್ ಪಾಸ್ ಹಿಮಾಲಯ ಚಾರಣವು ಪ್ರತಿಯೊಬ್ಬರಿಗೂ ಸಂತಸ ಹೆಚ್ಚಿಸುತ್ತದೆ ಎಂದು ತಿಳಿಸಿದರು.
Youth Hostel Association ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಹಿಮಾಲಯ ದೇವ ಭೂಮಿ. ಯೂತ್ ಹಾಸ್ಟೆಲ್ ಸಹಕಾರ ನೀಡಿ ಉತ್ತಮ ಅನುಕೂಲ ಒದಗಿಸಿ, ಚಾರಣಿಗರಿಗೆ ನೆರವು ನೀಡುತ್ತಾ ಬಂದಿದೆ. ಪ್ರತಿ ವರ್ಷ ಸಾವಿರಾರು ಚಾರಣಿಗರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಪ್ರತಿಯೊಬ್ಬರೂ ಈ ಸಂಸ್ಥೆಯ ಸದಸ್ಯರಾಗಿ ಇದರ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಚಾರಣ ಮಿತ್ರ ಸಂಸ್ಥೆಯ ಪ್ರಮುಖರಾದ ಹರೀಶ್ ಪಂಡಿತ್ ಮಾತನಾಡಿ, ಈಗಾಗಲೇ ನಮ್ಮ ಸಂಸ್ಥೆ ವತಿಯಿಂದ ಸಾಕಷ್ಟು ರಾಜ್ಯ, ರಾಷ್ಟ್ರ ಹಾಗೂ ಸ್ಥಳೀಯ ಮಟ್ಟದ ಚಾರಣಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಚಾರಣದಿಂದ ದೇಹ ಮನಸ್ಸು ಸದೃಢವಾಗುವುದರ ಜೊತೆಗೆ ನಮಗೆ ಸ್ಥಳದ ಮಹತ್ವ ಹಾಗೂ ಬೇರೆ ಬೇರೆ ಚಾರಣಿಗರ ಸಂಪರ್ಕ ಸಿಗುತ್ತದೆ ಎಂದು ನುಡಿದರು.
ಪ್ರವೀಣ್ ಅಕ್ಕಸಾಲಿ ಎಲ್ಲರನ್ನು ಸ್ವಾಗತಿಸಿದರು. ರಮೇಶ್ ನಾಡಿಗ್ ಪ್ರಾಸ್ತಾವಿಕ ಮಾತನಾಡಿದರು. ಪ್ರಶಾಂತ್ ವಂದಿಸಿದರು. ಗಣೇಶ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...