World Hypertension Day ಪ್ರಸ್ತುತದ ಒತ್ತಡದ ಜಗತ್ತಿನಲ್ಲಿ ರಕ್ತದೊತ್ತಡದ ಕುರಿತಾದ ಅರಿವು, ಪತ್ತೆ, ಇದರ ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತಿದ್ದು, ನಾವೆಲ್ಲ ಈ ಕುರಿತು ಜಾಗೃತರಾಗಿ ಉತ್ತಮ ಜೀವನಶೈಲಿಯನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಮೆಗ್ಗಾನ್ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ತಿಮ್ಮಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ನರ್ಸಿಂಗ್ ಕಾಲೇಜ್ ಸಿಮ್ಸ್ ಶಿವಮೊಗ್ಗ, ವಾರ್ತಾ ಮತ್ತು ಸಾರ್ವಜನಿಕ ಸÀಂಪರ್ಕ ಇಲಾಖೆ ಶಿವಮೊಗ್ಗ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‌ನಲ್ಲಿ ಆಯೋಜಿಸಿದ್ದ “ವಿಶ್ವ ಅಧಿಕ ರಕ್ತದೊತ್ತಡ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ನಮ್ಮ ಪೂರ್ವಜರು ಹೇಗೆ ಬದುಕಬೇಕೆಂಬ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಹಾಗೂ ಜಪಾನ್‌ನ ಇಕಿಗಾಯ್ ಪುಸ್ತಕದಲ್ಲಿ ಪ್ರಪಂಚಕ್ಕೆ ಏನು ಬೇಕಿದೆ. ಅದಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ. ಇವೆಲ್ಲವನ್ನು ತಿಳಿದು ಜೀವನ ನಡೆಸಿದರೆ ಮನುಷ್ಯ ತನ್ನ ದೇಹದಲ್ಲಾಗುವ ರಕ್ತದ ಒತ್ತಡ ನಿಯಂತ್ರಣ ಮಾಡಬಹುದು ಎನ್ನಲಾಗಿದೆ. ಅದರಂತೆ ಮನುಷ್ಯ ಬದುಕಿದರೆ ಆರೋಗ್ಯಕವಾಗಿಬಹುದು ಎಂದು ತಿಳಿಸಿದರು.
ಇಕಿಗಾಯ್ ಪುಸ್ತಕದ ಪ್ರಕಾರ ಅಲ್ಲಿನ ಜನರು ನೂರಕ್ಕೂ ಅಧಿಕ ವರ್ಷ ಬದುಕುತ್ತಾರೆ. ಇದಕ್ಕೆ ಕಾರಣ ಅವರ ಜೀವನ ಶೈಲಿ ಉತ್ತಮವಾಗಿದ್ದು, ಅಲ್ಲಿನ ಜನರು ಹೆಚ್ಚು ಉಪ್ಪನ್ನು ಸೇವಿಸುವುದಿಲ್ಲ. ಆಹಾರದಲ್ಲಿ ಶೇಕಡ 5 ರಷ್ಟು ಮಾತ್ರ ಉಪ್ಪನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸುತ್ತಿದ್ದಾರೆ.
World Hypertension Day ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾಗಳಾದ ಡಾ. ನಟರಾಜ್ ಕೆ.ಎಸ್ ಮಾತನಾಡಿ, ವ್ಯಾಯಾಮ, ಆಹಾರ ಹಾಗೂ ಉತ್ತಮ ಜೀವನಶೈಲಿ, ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವುದರಿಂದ ರಕ್ತದೊತ್ತಡವನ್ನು ನಿವಾರಣೆ ಮಾಡಬಹುದು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ ನಾಯ್ಕ ಮಾತನಾಡಿ, ಅಧಿಕ ರಕ್ತದೊತ್ತಡ ಕುರಿತು ವಿಶ್ವದಾದ್ಯಂತ ಅರಿವು ಮೂಡಿಸುವುದು ಈ ದಿನಾಚರಣೆ ಉದ್ದೇಶವಾಗಿದ್ದು ರಕ್ತದೊತ್ತಡವನ್ನು ಯಾರೂ ಕೂಡ ಕಡೆಗಣಿಸಬಾರದು. ಇದರಿಂದ ಹೃದಯ, ಮೆದುಳು, ಕಿಡ್ನಿ, ಕಣ್ಣು ಸೇರಿದಂತೆ ವಿವಿಧ ಭಾಗಗಳ ಮೇಲೆ ಒತ್ತಡ ಬಿದ್ದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ರಕ್ತದೊತ್ತಡ ಆಗದಂತೆ ಉತ್ತಮ ಆಹಾರ, ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಂಡು, ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಜಿ.ಬಿ ಮಾತನಾಡಿ, ರಕ್ತದೊತ್ತಡವು ಯಾವುದೇ ಲಿಂಗಾಧಾರಿತ ಖಾಯಿಲೆಯಾಗಿರದೇ ಎಲ್ಲರಿಗೂ ಬರುವಂತAಹ ಸಾಮಾನ್ಯ ಖಾಯಿಲೆಯಾಗಿದೆ. ಆದ್ದರಿಂದ ಮನುಷ್ಯ ದೈನಂದಿನ ಒತ್ತಡವನ್ನು ನಿಭಾಯಿಸುವುದು ಬಹಳ ಮುಖ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಡಾ. ಹರ್ಷವರ್ಧನ್ ಮಾತಾನಾಡಿ, ರಕ್ತದೊತ್ತಡ ಖಾಯಿಲೆಯಲ್ಲಿ ಪ್ರೆöÊಮರಿ ಮತ್ತು ಸೆಕೆಂಡರಿ ಎರಡು ವಿಧಗಳಿವೆ. ಭಾರತದಲ್ಲಿ ಪ್ರೆöÊಮರಿ ರಕ್ತದೊತ್ತಡ ಹೆಚ್ಚು ಕಂಡು ಬರುತ್ತವೆ. ನಮ್ಮ ಜೀವನ ಶೈಲಿಯಿಂದ ಹಾಗೂ ತಂದೆ ತಾಯಿಗಳಿಂದ ಅನುವಂಶಿಕವಾಗಿಯೂ ರಕ್ತದೊತ್ತಡ ಕಂಡು ಬರಲಿದ್ದು ಸೂಕ್ತ ಚಿಕಿತ್ಸೆ ಮತ್ತು ಅಭ್ಯಾಸಗಳಿಂದ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಡಾ.ಶಮಾ ಬೇಗಂ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ ನಾಯ್ಕ. ಎಲ್, ಜಿಲ್ಲಾ ನೋಡಲ್ ಅಧಿಕಾರಿ ಡಾ. ಮೋಹನ್, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಶುಶ್ರೂಷಕ ಅಧೀಕ್ಷರಾದ ಎಲಿಜಬೆತ್ ಬೈಲಾ, ಆಸ್ಪತ್ರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Date: