Wednesday, February 11, 2026
Wednesday, February 11, 2026
Home Blog Page 1800

ವಿದ್ಯಾರ್ಥಿವೇತನ: ಆನ್ ಲೈನ್ ಐಡಿ ಅಲಭ್ಯತೆ ಸಮಸ್ಯೆ

0

ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕಾಲೇಜುಗಳೇ ತೊಡಕಾಗಿ ಪರಿಣಮಿಸಿವೆ.
ಎಲ್ಲ ಮಾದರಿಯ ವಿದ್ಯಾರ್ಥಿವೇತನಗಳನ್ನು ಒಂದೆಡೆ ತರುವ ಉದ್ದೇಶದಿಂದ ರಾಜ್ಯ ವಿದ್ಯಾರ್ಥಿವೇತನ ಯೋಜನೆ ( ಎಸ್ ಎಸ್ ಪಿ) ಸ್ಥಾಪಿಸಲಾಗಿದೆ.
ಆದರೆ, ಇಲ್ಲಿ ಅರ್ಜಿ ಸಲ್ಲಿಸಲು ಕಾಲೇಜು ಸೇರ್ಪಡೆಯ ಐ.ಡಿ. ನೀಡಬೇಕು. ಆದರೆ, ಬಹುತೇಕ ವಿದ್ಯಾರ್ಥಿಗಳಿಗೆ ಅಡ್ಮಿಷನ್ ಐ.ಡಿ.ನಂಬರ್ ಗಳೇ ಜನರೇಟ್ ಆಗಿಲ್ಲ. ಹೀಗಾಗಿ ಪ್ರಥಮ ವರ್ಷದ ಪಿಯು, ಡಿಗ್ರಿ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆ ಯಾಗಿದೆ.
ಪ್ರಥಮ ವರ್ಷದ ಮಕ್ಕಳಿಗೆ ಸಮಸ್ಯೆಯಾಗಿರುವುದು ನಿಜ. ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕಮಿಟಿ ಸದಸ್ಯರು ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿ ವೇತನದ ಅರ್ಜಿ ದಿನಾಂಕ ವಿಸ್ತರಣೆಯಾದರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಬಿಡದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಜಗದಾಂಭ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಬಹಳಷ್ಟು ವಿದ್ಯಾರ್ಥಿಗಳು ಸೈಬರ್ ಗಳಿಗೆ ತೆರಳಿ ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರಾದರೂ ಕಾಲೇಜು ಅಡ್ಮಿಷನ್ ಐ.ಡಿ. ಇಲ್ಲದೆ ಇವರ ಅರ್ಜಿಯನ್ನು ಪೋರ್ಟಲ್ ಸ್ವೀಕರಿಸುತ್ತಿಲ್ಲ. ಇದರಿಂದ ಅನಗತ್ಯವಾಗಿ ಸೈಬರ್ ಗೆ ಶುಲ್ಕ ನೀಡುವ ಜೊತೆಗೆ ಅರ್ಜಿ ಸಲ್ಲಿಕೆಯಾಗಿ ಸ್ಕಾಲರ್ಶಿಪ್ ಕಳೆದುಕೊಳ್ಳುವ ಆತಂಕ ವಿದ್ಯಾರ್ಥಿಗಳದ್ದಾಗಿದೆ.
ರಾಜ್ಯದಲ್ಲಿ 8,71,443 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ ಬಹುತೇಕರು ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿನ ವಿವರ ಆಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಿವೆ. ಕುಟುಂಬದ ವಾರ್ಷಿಕ ಆದಾಯದ ಮೇಲೆ ಸ್ಕಾಲರ್ ಶಿಪ್ ಬಿಡುಗಡೆಯಾಗಲಿದೆ. ಇದನ್ನು ಪಿಯುಸಿ, ಡಿಗ್ರಿ, ಉನ್ನತ ಶಿಕ್ಷಣ ಪಡೆಯುವ ವರೆಲ್ಲರೂ ಪಡೆಯಬಹುದು. ಮೊದಲ ವರ್ಷ ಕಾಲೇಜಿಗೆ ಸೇರುವಾಗ ನೀಡುವ ಅಡ್ಮಿಷನ್ ನಂಬರ್ ಅನ್ನು ಅರ್ಜಿಯೊಂದಿಗೆ ಆನ್ ಲೈನ್ ನಲ್ಲಿ ಸಲ್ಲಿಸಬೇಕು. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಅಡ್ಮಿಷನ್ ಐ.ಡಿ. ಇನ್ನು ಕ್ರಿಯೇಟ್ ಆಗಿಲ್ಲ.
ಈ ಹಿಂದೆ ಎಸ್ ಎಸ್ ಪಿ ಅಡಿ ಅರ್ಜಿ ಸಲ್ಲಿಸಲು ನವೆಂಬರ್ ವರೆಗೂ ಅವಕಾಶ ನೀಡಲಾಗಿತ್ತು. ಕಾಲೇಜುಗಳು ತಡವಾಗಿ ಪ್ರಾರಂಭವಾದ್ದರಿಂದ ಡಿ.31ರವರೆಗೆ ಗಡುವು ನೀಡಲಾಗಿದೆ. ಆದರೆ, ಈವರೆಗೂ ಪೂರ್ಣಪ್ರಮಾಣದಲ್ಲಿ ಅಡ್ಮಿಶನ್ ಐ.ಡಿ. ಕ್ರಿಯೇಟ್ ಆಗಿಲ್ಲ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶಿಷ್ಯ ವೇತನದಿಂದ ವಂಚಿತರಾಗುವ ಸಾಧ್ಯತೆ ಇದೆ. ಹೀಗಾಗಿ, ಕಾಲೇಜುಗಳು ಕೂಡಲೇ ಐ.ಡಿ. ಕ್ರಿಯೇಟ್ ಮಾಡಬೇಕು. ಇಲ್ಲವೇ, ಇನ್ನು ಕೆಲವು ದಿನಗಳವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎನ್ನುವುದು ವಿದ್ಯಾರ್ಥಿಗಳ ಮನವಿಯಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ.ಪೂ. ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ

0

ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಜ.1ರಿಂದ ಫೆಬ್ರುವರಿ ಏಳರವರೆಗೆ ಸೂರ್ಯನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಸೂರ್ಯನಮಸ್ಕಾರ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲಾ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಡಿ.16 ರಂದು ಪತ್ರ ಬರೆದು ಸೂಚಿಸಿತ್ತು. ಅದರಂತೆ, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ಬಳಿಕ ಕಾರ್ಯಕ್ರಮದ ಕ್ರೋಡಿಕೃತ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ಶಾಖೆಗೆ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಇದರೊಂದಿಗೆ ಜ.26ರಂದು ಸಂಗೀತದೊಂದಿಗೆ ಸೂರ್ಯ ನಮಸ್ಕಾರ ಆಯೋಜಿಸಬೇಕು ಎಂದೂ ತಿಳಿಸಿದೆ.
ರಾಷ್ಟ್ರೀಯ ಯೋಗಾಸನ ಸ್ಫೋರ್ಟ್ ಫೆಡರೇಷನ್ ಡಿ.9ರಂದು ಪತ್ರ ಬರೆದು 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಆಯೋಜಿಸುವ ಬಗ್ಗೆ ತಿಳಿಸಿದೆ.
30 ರಾಜ್ಯಗಳಲ್ಲಿ 30 ಸಾವಿರ ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿ 75 ಕೋಟಿ ಸೂರ್ಯ ನಮಸ್ಕಾರ ಮಾಡಿಸಲು ಫೆಡರೇಷನ್ ನಿರ್ಧರಿಸಿದೆ.
ಜ.26ರಂದು ತ್ರಿವರ್ಣಧ್ವಜದ ಎದುರು ಸಂಗೀತದೊಂದಿಗೆ ಸೂರ್ಯ ನಮಸ್ಕಾರದ ಮೂಲಕ ತಾಯಿ ಭಾರತಾಂಬೆಗೆ ಭಾವಪೂರ್ಣ ನಮನ ಸಲ್ಲಿಸಬೇಕು ಎಂದೂ ಫೆಡರೇಶನ್ ತಿಳಿಸಿದೆ. ಹೀಗಾಗಿ, ನಿಮ್ಮ ವ್ಯಾಪ್ತಿಯಲ್ಲಿರುವ ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಿರ್ದೇಶನ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಬೇಕು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಸೂಚಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ನೋಬೆಲ್ ಮ್ಯಾನ್ ಡೆಸ್ಮಂಡ್ ಟುಟೂ ಇನ್ನಿಲ್ಲ

0

ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧ ಅಹಿಂಸಾ ಮಾರ್ಗದಲ್ಲಿ ಹೋರಾಡಿದ್ದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ನಿವೃತ್ತ ಆರ್ಚ್ ಬಿಷಪ್ ಡೆಸ್ಮಂಡ್ ಟೂಟೂ ಅವರು ನಿಧನರಾದರು.
ಟೂಟೂ ಅವರ ನಿಧನಕ್ಕೆ ಪ್ರಧಾನಿ ನರೇಂದ್ರಮೋದಿ ಕಂಬನಿ ಮಿಡಿದಿದ್ದಾರೆ. ಜಾಗತಿಕವಾಗಿ ಅಸಂಖ್ಯಾತ ಜನರಿಗೆ ಮಾರ್ಗದರ್ಶಕರಾಗಿದ್ದ, ಮಾನವನ ಘನತೆ ಮತ್ತು ಸಮಾನತೆಗಾಗಿ ಒತ್ತು ನೀಡಿದ ಮಹಾನ್ ವ್ಯಕ್ತಿಯ ಸಾಧನೆ ಶಾಶ್ವತವಾಗಿ ಸ್ಮರಣೀಯ ವಾಗಿರುತ್ತದೆ ಎಂದಿದ್ದಾರೆ.
ಜೊಹಾನ್ಸ್ ಬರ್ಗ್ ನ ಮೊದಲ ಕಪ್ಪು ವರ್ಣೀಯ ಬಿಷಪ್ ಆದ ಟೂಟೂ ಅವರು, ಬಳಿಕ ಕೇಪ್ ಟೌನ್ ನ ಆರ್ಚ್ ಬಿಷಪ್ ಆದರು. ದೇಶದಲ್ಲಿ ಮತ್ತು ಜಾಗತಿಕವಾಗಿ ಜನಾಂಗೀಯ ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದ ಅವರು, ಈ ಸಂಬಂಧ ಮೊನಚಿನ ಮಾತುಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.
ಡೆಸ್ಮಂಡ್ ಟೂಟೂ ಅವರು ಬೈಬಲ್ ನ ತತ್ವಗಳ ಜಾರಿಯಲ್ಲಿ ಮೇಲ್ಪಂಕ್ತಿ ಹಾಕಿದವರು. ಅಂತಹ ಧೀಮಂತ ವ್ಯಕ್ತಿಯ ನಿಧನದಿಂದ ದೇಶಕ್ಕೆ ಅಪಾರ ನಷ್ಟವಾಗಿದೆ. ದೇಶದ ಮುಂದಿನ ಪೀಳಿಗೆಗಳಿಗೆ ಟೂಟೂ ತತ್ವಾದರ್ಶಗಳು ದಾರಿದೀಪ ವಾಗಿರಲಿವೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಪೋಸಾ ಅವರು ತಮ್ಮ ಸಂತಾಪ ಸೂಚಿಸಿದ್ದಾರೆ.
ಕೇಪ್ ಟೌನ್ ನ ನಿವೃತ್ತ ಆರ್ಚ್ ಬಿಷಪ್ ಅವರು 2015 ರಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೆ, 1997ರಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಟೂಟೂ ಅವರು ನೆಲ್ಸನ್ ಮಂಡೇಲಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಮಂಡೇಲಾ ಅವರು 27 ವರ್ಷ ಜೈಲು ಶಿಕ್ಷೆ ಅನುಭವಿಸಿ 1990ರಲ್ಲಿ ಬಿಡುಗಡೆಯಾದ ದಿನ ಟೂಟೂ ಅವರ ಮನೆಯಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.
ಮಂಡೇಲಾ ಅವರು ಸೇರೆವಾಸದಲ್ಲಿದ್ದಾಗಲೂ ಟೂಟೂ ತಮ್ಮ ಹೋರಾಟ ನಿಲ್ಲಿಸದೇ ಗುರಿ ಸಾಧನೆಯತ್ತ ಹೆಜ್ಜೆಯಿರಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಯುಜಿಸಿ-ಎನ್ಇಟಿಅಸಮರ್ಪಕತೆ ವಿದ್ಯಾರ್ಥಿಗಳಿಗೆ ಅಸಹಾಯಕತೆ

0

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ನಡೆಸಿದ ‘ಯುಜಿಸಿ-ಎನ್ಇಟಿ’ ಕನ್ನಡ ಐಚ್ಛಿಕ ಭಾಷೆಯ ಪ್ರಶ್ನೆ ಪತ್ರಿಕೆಯ 100ರಲ್ಲಿ 90 ಪ್ರಶ್ನೆಗಳು ಹಿಂದಿ ಭಾಷೆಯಲ್ಲಿದ್ದ ಕಾರಣ ಗೊಂದಲಕ್ಕೊಳಗಾದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆಯನ್ನು ಅರ್ಧಕ್ಕೆ ಬಿಟ್ಟು ಹೊರನಡೆದರು.
ರಾಜ್ಯದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಐಚ್ಛಿಕ ಭಾಷೆಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಪರೀಕ್ಷಾ ಪ್ರಾಧಿಕಾರದ ಈ ಗಂಭೀರ ಲೋಪದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸುವಂತೆ ಪರೀಕ್ಷಾರ್ಥಿಗಳು ಪಟ್ಟು ಹಿಡಿದರು. ಕೆಳಗಡೆ ಪ್ರತಿಭಟನೆಯನ್ನೂ ಸಹ ನಡೆಸಲಾಯಿತು.
ಎರಡು ವರ್ಷಗಳಿಂದ ಪರೀಕ್ಷೆಗಾಗಿ ನಡೆಸಿದ್ದೆ. ಪರೀಕ್ಷಾ ಏಜೆನ್ಸಿಯ ತಾಂತ್ರಿಕ ಲೋಪದಿಂದಾಗಿ ಸಾವಿರಾರು ಮಂದಿ ಶಿಕ್ಷೆ ಅನುಭವಿಸುವಂತಾಗಿದೆ. ಪರೀಕ್ಷಾ ಕೇಂದ್ರದಲ್ಲಿ ನೋಡಲ್ ಅಧಿಕಾರಿಗಳೇ ಇರಲಿಲ್ಲ. ಅಲ್ಲಿದ್ದ ಸಿಬ್ಬಂದಿಗೂ ಸರಿಯಾದ ಮಾಹಿತಿ ಇರಲಿಲ್ಲ. ಆನ್ಲೈನ್ ಮೂಲತಃ ಪರೀಕ್ಷೆ ಆಯೋಜಿಸುತ್ತಿರುವುದರಿಂದ ತಾಂತ್ರಿಕ ದೋಷಗಳು ಹೆಚ್ಚಾಗಿವೆ. ಮೊದಲಿನಂತೆ ಲಿಖಿತ ಪರೀಕ್ಷೆ ನಡೆಸುವುದೇ ಒಳ್ಳೆಯದು ಎಂದು ಬೆಂಗಳೂರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಆರ್. ಅರ್ಚನಾ ಅಳಲು ತೋಡಿಕೊಂಡರು.
ಪ್ರಶ್ನೆ ಪತ್ರಿಕೆಯಲ್ಲಿ 10 ಪ್ರಶ್ನೆಗಳು ಮಾತ್ರ ಕನ್ನಡದಲ್ಲಿದ್ದವು. ಉಳಿದದ್ದು ಹಿಂದಿ ಭಾಷೆಯಲ್ಲಿ ಇದ್ದವು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ವಿಶ್ವವಿದ್ಯಾಲಯ ಅನುದಾನ ಆಯೋಗದ ತಾಂತ್ರಿಕ ದೋಷದಿಂದ ತೊಂದರೆ ಉಂಟಾಗಿದೆ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಸಮಜಾಯಿಷಿ ನೀಡಿದರು.
ಧಾರವಾಡದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 9ಕ್ಕೆ ಆರಂಭವಾಗಬೇಕಿದ್ದ ಆನ್ಲೈನ್ ಪರೀಕ್ಷೆ ತಾಂತ್ರಿಕ ತೊಂದರೆಯಿಂದ ಅರ್ಧಗಂಟೆ ತಡವಾಗಿ ಆರಂಭಗೊಂಡಿತು. ಜೊತೆಗೆ ಬೇರೆ ಬೇರೆ ಕೊಠಡಿಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು ಪುನರಾವರ್ತನೆಗೊಂಡಿದ್ದವು. ಹೀಗಾಗಿ ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದಾರೆ.
ಕೆಲವರು ಪ್ರಶ್ನೆಗಳಿಗೆ ಉತ್ತರಿಸಿದ್ದರೂ ಆನ್ ಲೈನ್ ನಲ್ಲಿ ಸಬ್ಮಿಟ್ ಆಗದೆ ಗೊಂದಲಕ್ಕೆ ಒಳಗಾದರು ಎಂದು ಪರೀಕ್ಷಾ ಕೊಠಡಿಯಿಂದ ಹೊರಬಂದ ಪರೀಕ್ಷಾರ್ಥಿಗಳು ಮಾಹಿತಿ ನೀಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಎಂಇಎಸ್ ಪುಂಡಾಟಿಕೆ ಮಿತಿಮೀರಿದೆ

0

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 9ನೇ ಪುಣ್ಯತಿಥಿ ಅಂಗವಾಗಿ ಸೊರಬಾ ಪಟ್ಟಣದ ಬಂಗಾರಧಾಮದಲ್ಲಿರುವ ಸಮಾಧಿ ಸ್ಥಳಕ್ಕೆ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು.
ಬಂಗಾರಪ್ಪ ಅವರ ಆದರ್ಶ ಹಾಗೂ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಲ್ಲದೆ, ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದೇನೆ. ಕನ್ನಡ ನಾಡಿನ ನೆಲ, ಜನ, ಭಾಷೆ ವಿಷಯದಲ್ಲಿ ಎಸ್. ಬಂಗಾರಪ್ಪ ಅವರು ತೆಗೆದುಕೊಳ್ಳುವ ನಿರ್ಧಾರಗಳು ಬೇರೆ ಯಾವ ರಾಜಕಾರಣಿಗಳಿಗೂ ಬರಲು ಸಾಧ್ಯವಿಲ್ಲ ಎಂದು ಮಧು ಬಂಗಾರಪ್ಪನವರ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲವರ ಪುಂಡಾಟಿಕೆ ಮಿತಿ ಮೀರಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟವನ್ನು ಸುಟ್ಟು ಹಾಕಿದ್ದಾರೆ. ಖಾನಾಪುರ ತಾಲೂಕಿನ ಹಲಿಸಿಯಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮಸಿ ಬಳಿದು ವಿರೂಪಗೊಳಿಸುವುದು ಖಂಡನೀಯ ಎಂದರು.
ಸರ್ಕಾರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದೇ ಮೀನಮೇಷ ಎಣಿಸುತ್ತಿರುವ ಬಗ್ಗೆ ಹಲವು ಅನುಮಾನಗಳಿವೆ. ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದ್ದು, ಆ ಬಗ್ಗೆ ಗೌರವವಿಲ್ಲದೆ ನಡೆದುಕೊಳ್ಳುತ್ತಿರುವುದು ವಿಪರ್ಯಾಸ ಎಂದರು.
ಅನಿತಾ ಮಧು ಬಂಗಾರಪ್ಪ, ಸೂರ್ಯ ಮಧು ಬಂಗಾರಪ್ಪ, ಕಾರವಾರ ಜಿಲ್ಲಾ ಕಾಂಗ್ರೆಸ್ ಮುಖಂಡ ಭೀಮಾ ನಾಯ್ಕ, ನಾಗರಾಜ್ ಶಿವಮೊಗ್ಗ, ಶಿವಲಿಂಗಪ್ಪ, ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗೇಗೌಡ, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ, ಹಾಲಘಟ್ಟ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಈಡಿಗರ ಸಂಘದ ಅಧ್ಯಕ್ಷ ಆರ್.ಶ್ರೀಧರ್ ಹಾಲ್ತಿಕೊಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಗಣಪತಿ, ರವಿ ಬರಗಿ, ವಕೀಲ ಕುಮಾರ್ ಸ್ವಾಮಿ, ಎಲ್.ಜಿ. ರಾಜಶೇಖರ್, ಎಂ.ಡಿ.ಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯ ಎನ್.ಜಿ. ನಾಗರಾಜ್, ಪ್ರಸಾದ್ ಗುಲ್ಬರ್ಗ ಪಾಲ್ಗೊಂಡಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕಳಪೆ ಟಾರ್ಪಾಲಿನ್ ವಿರುದ್ಧ ಕಠಿಣ ಕ್ರಮ

0

ಕೃಷಿ ಇಲಾಖೆಯಿಂದ ರೈತರಿಗೆ ಟಾರ್ಪಾಲು ವಿತರಿಸುವ ಯೋಜನೆಗೆ ಕಳಪೆ ಗುಣಮಟ್ಟದ ಉತ್ಪನ್ನ ಪೂರೈಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಟಾರ್ಪಾಲಿನ ಮೇಲೆ ಕಂಪನಿಯ ಹೆಸರು, ಬ್ಯಾಚ್ ಸಂಖ್ಯೆ, ಭಾರತೀಯ ಮಾಪನ ಸಂಸ್ಥೆಯಿಂದ ಪಡೆದಿರುವ ಪರವಾನಗಿ ಸಂಖ್ಯೆಯನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಮುದ್ರಿಸಬೇಕು. ಜಿಲ್ಲೆಗೆ ಒಂದರಂತೆ ಟಾರ್ಪಾಲುಗಳನ್ನು ಆಯ್ದ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋ ಕೆಮಿಕಲ್ಸ್ ಅಂಡ್ ಎಂಜಿನಿಯರಿಂಗ್ ಟೆಕ್ನಾಲಜಿಯಲ್ಲಿ ಪರೀಕ್ಷಿಸಲಾಗುವುದು. ಕಳಪೆ ಗುಣಮಟ್ಟ ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷ 2.39 ಲಕ್ಷ ಟಾರ್ಪಾಲುಗಳನ್ನು ವಿತರಿಸುವ ಯೋಜನೆ ಇದೆ. ಭಾರತೀಯ ಮಾಪನ ಸಂಸ್ಥೆಯು ನಿಗದಿಪಡಿಸಿರುವ ಗುಣಮಟ್ಟದ ಟಾರ್ಪಾಲುಗಳನ್ನೇ ಪೂರೈಸುವುದು ಕಡ್ಡಾಯ.
ಇದಕ್ಕಾಗಿ 24 ಕಂಪನಿಗಳನ್ನು ಅಂತಿಮಗೊಳಿಸಲಾಗಿರುತ್ತದೆ. ಕಳಪೆ ಗುಣಮಟ್ಟದ ಟಾರ್ಪಾಲು ಪೂರೈಸುವ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ, ಮೂರು ವರ್ಷ ಯೋಜನೆಯಿಂದ ಹೊರಗಿಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್: ಬ್ರಿಟನ್ನಿನಾದ್ಯಂತ ಬಿಗಿ ಮಾರ್ಗಸೂಚಿ

0

ಕ್ರಿಸ್ಮಸ್ ಆಚರಣೆ ಮುಗಿಯುತ್ತಿದ್ದಂತೆಯೇ ಬ್ರಿಟನ್ ನಾದ್ಯಂತ ಕಠಿಣ ಕೋವಿಡ್ ನಿಯಮಗಳನ್ನು ಜಾರಿಗೆ ತರಲಾಗಿದೆ. ಹೆಚ್ಚುತ್ತಿರುವ ಕೋವಿಡ್ ಸೋಂಕು ನಿಯಂತ್ರಿಸಲು ವೇಲ್ಸ್, ಸ್ಕಾಟ್ಲೆಂಡ್ , ಉತ್ತರ ಐರ್ಲೆಂಡ್ ಭಾಗಗಳಲ್ಲೂ ನಿಯಮಗಳನ್ನು ಬಿಗಿಗೊಳಿಸಲಾಗಿದೆ.
ವೇಲ್ಸ್ ನಲ್ಲಿ ನೈಟ್ ಕ್ಲಬ್ ಗಳನ್ನು ಬಂದ್ ಮಾಡಲಾಗಿದೆ. ಪಬ್ಬ್, ರೆಸ್ಟೋರೆಂಟ್ ಗಳಿಗೆ ಗರಿಷ್ಠ ಆರು ಜನರು ಮಾತ್ರ ಹೋಗಬಹುದು. ಒಳಾಂಗಣ ಕಾರ್ಯಕ್ರಮಗಳಲ್ಲಿ ಗರಿಷ್ಠ 30 ಮಂದಿ ಸೇರಲು ಮಾತ್ರ ಅವಕಾಶವಿದೆ. ಹೊರಾಂಗಣ ಕಾರ್ಯಕ್ರಮಗಳಿಗೆ ಐವತ್ತು ಜನರ ಮಿತಿ ವಿಧಿಸಲಾಗಿದೆ.
ಸ್ಕಾಟ್ಲೆಂಡ್ ನಲ್ಲಿ ದೊಡ್ಡ ಕಾರ್ಯಕ್ರಮಗಳಲ್ಲಿ ಜನರು 1ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಒಳಾಂಗಣ ಕಾರ್ಯಕ್ರಮಗಳಲ್ಲಿ 200, ಹೊರಂಗಣ ಕಾರ್ಯಕ್ರಮಗಳಲ್ಲಿ ಐನೂರಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಮೂರು ದಿನಗಳ ಕಾಲ ನೈಟ್ ಕ್ಲಬ್ ಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಉತ್ತರ ಐರ್ಲೆಂಡ್ ನಲ್ಲಿ , ನೈಟ್ ಕ್ಲಬ್, ನೃತ್ಯ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ.
ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಹೊಸ ದತ್ತಾಂಶಗಳು ಹಾಗೂ ತಜ್ಞರ ಸಲಹೆ ಗಳನ್ನು ಆಧರಿಸಿ ಇನ್ನಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಬ್ರಿಟನ್ ನಲ್ಲಿ ಪ್ಲಾನ್ ಬಿ ಜಾರಿಯಲ್ಲಿದ್ದು, ಇದರ ಪ್ರಕಾರ, ಮನೆಯಿಂದ ಕೆಲಸ ಮಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಹಾಗೂ ದೊಡ್ಡ ಸಮಾರಂಭಗಳಿಗೆ ಭಾಗಿಯಾಗುವವರು ಕೊವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಜ್ಯದಲ್ಲಿ ಕೋವಿಡ್ ಸೋಂಕು ಏರಿಕೆ

0

ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಸದ್ಯ ಸೋಂಕಿತ 7,418 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 248 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಕೊಡಗಿನಲ್ಲಿ 18, ತುಮಕೂರು ಹಾಗೂ ಉತ್ತರ ಕನ್ನಡದಲ್ಲಿ ತಲಾ 11 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 10ಕ್ಕಿಂತ ಕಡಿಮೆ ಇವೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 30.04 ಲಕ್ಷ ದಾಟಿದೆ.
ಸೋಂಕಿತರಲ್ಲಿ 198 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 29.58 ಲಕ್ಷ ದಾಟಿದೆ. ಬೆಂಗಳೂರಿನಲ್ಲಿ 6,048 ಸೋಂಕಿತರಿದ್ದಾರೆ.
ಯಾದಗಿರಿ ಹಾಗೂ ಗದಗ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳಿಲ್ಲ. ಬೀದರ್, ಬಾಗಲಕೋಟೆ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದೆ ಎಂದು ತಿಳಿದುಬಂದಿದೆ.
ಭಾನುವಾರ 348 ಮಂದಿ ಕೋವಿಡ್ ಪೀಡಿತರಾಗಿರುವುದು ದೊಡ್ಡ ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ವರದಿಯಾಗಿವೆ. ಒಂದು ದಿನದಲ್ಲಿ 73 ಸಾವಿರ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.
ಸೋಂಕು ದೃಡ ಪ್ರಮಾಣ ಶೇ 0.47ರಷ್ಟಿದೆ. ಮೂರು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿಯಷ್ಟಿದೆ.
15 ಜಿಲ್ಲೆಗಳಲ್ಲಿ ಒಂದಂಕಿ ಯಲ್ಲಿದೆ.
ಬಾಗಲಕೋಟೆ, ಬೀದರ್ ಸೇರಿದಂತೆ 11 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ.
ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಚಾಮರಾಜನಗರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮರಣ ಪ್ರಮಾಣವು ದರವು ಶೇ.0.86ರಷ್ಟು ಇದೆ. ಇವರಿಗೆ ಕೋವಿಡ್ ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 38,312ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅಪೂರ್ಣ ದಾಖಲೆ ವರದಕ್ಷಿಣೆ ಪ್ರಕರಣ ರದ್ದು

0

ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಇಬ್ಬರು ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್, ಎಫ್ ಐ ಆರ್ ನಲ್ಲಿ ವೈವಾಹಿಕ ವಿವಾದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ಹಾಗೂ ಆತನ ಕುಟುಂಬಸ್ಥರ ಬಗ್ಗೆ ಕೇವಲ ಪ್ರಾಸಂಗಿಕ ಉಲ್ಲೇಖ ಮಾಡಲಾಗಿದೆ ಎಂದು ಹೇಳಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ ಆರೋಪಿಗಳಾದ ಸಂತ್ರಸ್ತೆಯ ಸೋದರಮಾವ ಮತ್ತು ಅತ್ತಿಗೆ ಪೊಲೀಸರಿಗೆ ಶರಣಾಗತಿ ಆಗುವಂತೆ ಈ ಹಿಂದೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿತ್ತು.ಎಫ್ಐಆರ್ ನಲ್ಲಿ ಸಂತ್ರಸ್ತೆಯ ಗಂಡನ ಕುಟುಂಬದ ಹಲವು ಸದಸ್ಯರ ಹೆಸರುಗಳನ್ನು ಕೇವಲ ಪ್ರಾಸಂಗಿಕವಾಗಿ ಉಲ್ಲೇಖಿಸಲಾಗಿದೆಯೇ ಹೊರತು ಅಪರಾಧದಲ್ಲಿ ಅವರ ಸಕ್ರಿಯ ಪಾತ್ರವನ್ನು ವಿವರಿಸಲಾಗಿಲ್ಲ. ಹೀಗಿರುವಾಗ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಪೀಠ ಹೇಳಿದೆ.
ಸಂತ್ರಸ್ತೆಯ ತಂದೆ ದೂರಿನಲ್ಲಿ ಕುಟುಂಬಸ್ಥರು ಅಪರಾಧದಲ್ಲಿ ಭಾಗಿಯಾಗಿರುವ ಕುರಿತಾಗಿ ನಿಖರ ಮಾಹಿತಿ ನೀಡಿಲ್ಲ. ಅಲ್ಲದೇ , ದೂರಿನಲ್ಲಿ ಸಂತ್ರಸ್ತೆ ಮೈ ಮೇಲೆ ಹಲವು ಗಾಯಗಳಿದ್ದವು ಎಂದು ಹೇಳಲಾಗಿದೆ. ಆದರೆ ಆಂತರಿಕ ಗಾಯ ಒಂದನ್ನು ಹೊರತುಪಡಿಸಿ ದೇಹದಲ್ಲಿ ಗಾಯಗಳು ಪತ್ತೆಯಾಗಿಲ್ಲ ಎಂದು ಹೇಳಿದೆ.
ಈ ಪ್ರಕರಣ ಸಂಬಂಧ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಆರ್.ಸುಭಾಷ್ ರೆಡ್ಡಿ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠವು ಅಸಿಂಧುಗೊಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕ್ಷಿಪಣಿ ಪ್ರಯೋಗ ಅನ್ಯ ರಾಷ್ಟ್ರಗಳ ಮೇಲೆ ಧಾಳಿಗಲ್ಲ

0

ಯಾವುದೇ ದೇಶದ ಮೇಲೆ ದಾಳಿ ಮಾಡುವ ಉದ್ದೇಶದಿಂದ ನಾವು ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸುತ್ತಿಲ್ಲ. ಬೇರೆ ಯಾವುದೇ ದೇಶವೂ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಎಂಬುದು ಇದರ ಉದ್ದೇಶವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗೆ ಲಖನೌ ನಲ್ಲಿ ರಕ್ಷಣಾ ತಂತ್ರಜ್ಞಾನಗಳು ಮತ್ತು ಪರೀಕ್ಷಾ ಕೇಂದ್ರ ಹಾಗೂ ಬ್ರಹ್ಮೋಸ್ ಕ್ಷಿಪಣಿ ತಯಾರಿಕಾ ಘಟಕಕ್ಕೆ ಅಡಿಗಲ್ಲು ನೆರವೇರಿಸಿದರು.
ಅಣ್ವಸ್ತ್ರ ಶಕ್ತ ಭಾರತದ ವಿರುದ್ಧ ಯಾರೊಬ್ಬರೂ ಕೆಟ್ಟ ದೃಷ್ಟಿಯಿಂದ ನೋಡಬಾರದು ಎಂಬುದೇ ಕ್ಷಿಪಣಿ ಅಭಿವೃದ್ಧಿಯ ಉದ್ದೇಶ ಎಂದು ತಿಳಿಸಿದರು.
ಪಾಕಿಸ್ತಾನವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಕೆಲವು ವರ್ಷಗಳ ಹಿಂದೆ ನಮ್ಮಿಂದ ಬೇರ್ಪಟ್ಟಿದ್ದರೂ ಭಾರತದ ವಿರುದ್ಧವಾಗಿ ಅದರ ಉದ್ದೇಶಗಳು ಯಾವಾಗಲೂ ಏಕೆ ಕೆಟ್ಟದಾಗಿದೆ ಎಂದು ನನಗೆ ತಿಳಿದಿಲ್ಲ. ಉರಿ ಮತ್ತು ಪುಲ್ವಾಮದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಿದ್ದಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇನೆ ಎಂದು ತಿಳಿಸಿದರು.
ನಾವು ತಯಾರಿಸುತ್ತಿರುವ ಬ್ರಹ್ಮೋಸ್ ಕ್ಷಿಪಣಿ, ಇತರ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಉಪಕರಣಗಳು ಬೇರೆ ಯಾವುದೇ ದೇಶದ ಮೇಲೆ ದಾಳಿ ಮಾಡಲು ಅಲ್ಲ. ಯಾವುದೇ ದೇಶದ ಮೇಲೆ ದಾಳಿ ಮಾಡುವುದು ಅಥವಾ ಯಾವುದೇ ದೇಶದ ಒಂದು ಇಂಚು ಭೂಮಿಯನ್ನು ಕಬಳಿಸುವುದು ಭಾರತದ ಉದ್ದೇಶವಲ್ಲ ಎಂದು ತಿಳಿಸಿದರು.