Wednesday, February 11, 2026
Wednesday, February 11, 2026
Home Blog Page 1799

ಆಡಳಿತದ ಬಗ್ಗೆ ಸಂಸದ ವರುಣ್ ವಾಗಸ್ತ್ರ ಪ್ರಯೋಗ

0

ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮದೇ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ರಾತ್ರಿ ಕರ್ಫ್ಯೂ ಹೇರುವುದು ಹಾಗೂ ಹಗಲಿನಲ್ಲಿ ರ್ಯಾಲಿ ನಡೆಸಿ ಲಕ್ಷಾಂತರ ಜನರನ್ನು ಸೇರಿಸುವುದು ಸಾಮಾನ್ಯ ಜನರ ತರ್ಕಕ್ಕೆ ನಿಲುಕದು. ಉತ್ತರಪ್ರದೇಶದ ಆರೋಗ್ಯ ವ್ಯವಸ್ಥೆಯ ಸೀಮಿತ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು ಅಪಾಯಕಾರಿ ವೈರಸ್ ಹರಡುವಿಕೆಯಿಂದ ತಡೆಯುವುದು ಮುಖ್ಯವೇ ಅಥವಾ ರಾಜಕೀಯ ಬಲಪ್ರದರ್ಶನ ಮುಖ್ಯವೆಂಬುದು ಪ್ರಾಮಾಣಿಕವಾಗಿ ವಿತರಿಸಬೇಕು ಎಂದು ಸಂಸದ ವರುಣ್ ಗಾಂಧಿ ಅವರು ಹೇಳಿದ್ದಾರೆ.

ಕೋವಿಡ್-19 ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವ ರಾಜ್ಯಗಳಲ್ಲಿ ಉತ್ತರಪ್ರದೇಶ ಕೂಡ ಒಂದಾಗಿದೆ.

ನೀತಿ ನಿರೂಪಕರು ಹೋರಾಟದ ಮುಂಚೂಣಿಯಲ್ಲಿ ನಿಲ್ಲಬೇಕು. ಮನೆಯಲ್ಲಿಯೇ ಉಳಿಯಲು ಜನರಿಗೆ ಸ್ಫೂರ್ತಿಯಾಗಬೇಕು ಎಂದು ವರುಣ್ ಗಾಂಧಿ ಅವರು ಹೇಳಿದ್ದಾರೆ.

ಸೋಂಕು ಗರಿಷ್ಠಮಟ್ಟದಲ್ಲಿ ಹರಡುವುದು ಹಗಲಿನಲ್ಲಿಯೇ ಹೊರತು, ರಾತ್ರಿವೇಳೆಯಲ್ಲಿ ಅಲ್ಲ. ಏಕೆಂದರೆ ರಾತ್ರಿ ರಸ್ತೆಯಲ್ಲಿ ಹೆಚ್ಚು ಜನಸಂಖ್ಯೆ ಇರುವುದಿಲ್ಲ. ಜನ ಸೇರುವಂತಹ ಕಾರ್ಯಕ್ರಮಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದೇ ಇದ್ದರೆ ಕಾರ್ಯಕ್ರಮ ನಡೆದ ಸ್ಥಳಗಳು ಕ್ಲಸ್ಟರ್ ಗಳಾಗಬಹುದು ಎಂದು ವರುಣ್ ಗಾಂಧಿ ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರಕ್ಕೆ ಕೇಂದ್ರ ಸರ್ಕಾರವು 2021ರ ಮಾರ್ಚ್ ತಿಂಗಳಿನಲ್ಲಿ ಬರೆದ ಪತ್ರವೊಂದನ್ನು ವರುಣ್ ಗಾಂಧಿ ಅವರು ಉಲ್ಲೇಖಿಸಿದ್ದಾರೆ. ಕೊರೋನಾ ಹರಡುವಿಕೆ ತಡೆಗಟ್ಟಲು ರಾತ್ರಿ ಕರ್ಫ್ಯೂ ಹಾಗೂ ವಾರಂತ್ಯ ಲಾಕ್ಡೌನ್ ಇಂದ ಹೆಚ್ಚಿನ ಉಪಯೋಗ ಹೆಚ್ಚಿನ ಉಪಯೋಗ ಆಗದು ಎಂದು ಈ ಪತ್ರದಲ್ಲಿ ಸೂಚಿಸಲಾಗಿತ್ತು ಎಂದು ವರುಣ್ ಗಾಂಧಿ ಅವರು ವಿವರಿಸಿದ್ದಾರೆ.

ರಾಲಿಗಳನ್ನು ನಡೆಸುವುದನ್ನು ನಿಲ್ಲಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ವರುಣ್ ಗಾಂಧಿ ಅವರು ಕೃಷಿ ಕಾಯ್ದೆಗಳ ವಿಚಾರದಲ್ಲಿ ಸರ್ಕಾರವನ್ನ ಟೀಕಿಸಿದ್ದಾರೆ. ಉತ್ತರಪ್ರದೇಶ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಗಳನ್ನು ವರುಣ್ ಗಾಂಧಿ ಇತ್ತೀಚೆಗೆ ಕಟುವಾಗಿ ವಿಮರ್ಶೆಗೆ ಒಳಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕುವೆಂಪು ವಿವಿ ಸ್ನಾತಕೋತ್ತರ ಪ್ರವೇಶ ಕೌನ್ಸಿಲಿಂಗ್

0

ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಸ್ನಾತಕೋತ್ತರ ಪದವಿ ಪ್ರವೇಶ ಕೌನ್ಸಿಲಿಂಗ್ ನಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ವಿಭಾಗಗಳಿಗೆ ವಿದ್ಯಾರ್ಥಿಗಳು ಉತ್ಸಾಹದೊಂದಿಗೆ ಪ್ರವೇಶ ಪಡೆದುಕೊಂಡರು.
ಕುವೆಂಪು ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಡೂರು ಪಿ.ಜಿ. ಕೇಂದ್ರ, ಚಿಕ್ಕಮಗಳೂರು
ಪಿ.ಜಿ ಕೇಂದ್ರ, ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲಾ ವಿಭಾಗಗಳಿಗೆ ಡಿ.27,28, ಮತ್ತು 29ರಂದು ಪ್ರವೇಶಾತಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ.
ಮೊದಲ ದಿನವಾದ ಸೋಮವಾರ ಮೆರಿಟ್ ಸೀಟುಗಳಿಗೆ ಪ್ರವೇಶಾತಿ ಪ್ರಕ್ರಿಯೆ ಯಾವುದೇ ತೊಡಕುಗಳಿಲ್ಲದೇ ನಡೆಯಿತು. 28 ಹಾಗೂ 29ರಂದು ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ.
ವಿಶ್ವವಿದ್ಯಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಮತ್ತು ಪೋಷಕರಿಗೆ ವಿವಿಯ ದ್ವಾರದ ಬಳಿಯೇ ವಿಭಾಗವಾರು ಕೌನ್ಸಿಲಿಂಗ್ ಕಟ್ಟಡದ ವಿವರ, ಮಾರ್ಗ ತೋರುವ ಸೂಚನಾ ಫಲಕಗಳು, ಅಗತ್ಯ ದಾಖಲೆಗಳ ವಿವರ ಸೇರಿದಂತೆ ಸ್ವಾಗತಕೋರುವ ಫಲಕಗಳನ್ನು ಹಾಕಲಾಗಿತ್ತು. ವಿದ್ಯಾರ್ಥಿಗಳ ಗೊಂದಲ ನಿವಾರಣೆಗೆ ಡಿಜಿಟಲ್ ಬೋರ್ಡ್ ಅಳವಡಿಸಲಾಗಿತ್ತು. ಮೈಕ್ ಮೂಲಕ ಆಯ್ಕೆಗೊಂಡವರ ಹೆಸರುಗಳನ್ನು ಘೋಷಿಸಲಾಯಿತು.
ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಪ್ರಕಾರ ಶುಕ್ರವಾರ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಎಲ್ಲಾ ಸ್ನಾತಕೋತ್ತರ ವಿಭಾಗಗಳ ಶೇ.65ರಷ್ಟು ಸೀಟುಗಳು ಭರ್ತಿಯಾಗಿದ್ದವು. ಕೋವಿಡ್ -19ರ ಕಾರಣದಿಂದ ಇನ್ನುಳಿದ ಆಕಾಂಕ್ಷಿಗಳು ಮಂಗಳವಾರ ಮತ್ತು ಬುಧವಾರ ವಿವಿಕೆ ಆಗಮಿಸಿ ಪ್ರವೇಶ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ದೇಶದೊಳಗೆ ತೆವಳುತ್ತಿರುವ ಓಮಿಕ್ರಾನ್

0

ಭಾರತದಲ್ಲಿ ಒಂದೇ ದಿನದಲ್ಲಿ 150ಕ್ಕೂ ಅಧಿಕ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಮಣಿಪುರ ಹಾಗೂ ಗೋವಾದಲ್ಲಿ ಮೊದಲ ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 600ರ ಹತ್ತಿರಕ್ಕೆ ಬಂದಿದೆ.

ಆರೋಗ್ಯ ಸಚಿವಾಲಯವು ನೀಡಿದ ಮಾಹಿತಿಯ ಪ್ರಕಾರ, 156 ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 578ಕ್ಕೆ ತಲುಪಿದೆ. ಈ ಪೈಕಿ 151 ಜನರು ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಮುಂಬೈನಲ್ಲಿ 11, ಮಹಾರಾಷ್ಟ್ರದಲ್ಲಿ 26, ಹರಿಯಾಣದಲ್ಲಿ 2, ಉತ್ತರ ಖಂಡದಲ್ಲಿ 3, ಗುಜರಾತಿನಲ್ಲಿ 24 ಪ್ರಕರಣಗಳು ವರದಿಯಾಗಿವೆ. ತಾಂಜಾನೀಯದಿಂದ ಮಣಿಪುರಕ್ಕೆ ಬಂದಿದ್ದ 48 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಡಪಟ್ಟಿದೆ. ಇದು ಈಶಾನ್ಯ ರಾಜ್ಯಗಳಲ್ಲಿ ದಾಖಲಾದ ಮೊದಲ ಓಮಿಕ್ರಾನ್ ಪ್ರಕರಣವಾಗಿದೆ. ಬ್ರಿಟನ್ ನಿಂದ ಗೋವಾದ ಪಣಜಿಗೆ ಬಂದಾ 8ವರ್ಷದ ಬಾಲಕನಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ.

19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ಕಂಡು ಬಂದಿದೆ. ಇದುವರೆಗೂ ದೆಹಲಿಯಲ್ಲಿ 142 ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಇಲ್ಲಿ 141 ಸೋಂಕಿತರು ದೃಢಪಟ್ಟಿದೆ. ಕೇರಳದಲ್ಲಿ 57, ಗುಜರಾತಿನಲ್ಲಿ 59, ತೆಲಂಗಾಣದಲ್ಲಿ 41 ಜನರಿಗೆ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ.

ಕರ್ನಾಟಕದ ನೆರೆಯ ರಾಜ್ಯಗಳಾದ ಕೇರಳದಲ್ಲಿ 1,824, ಹಾಗೂ ಮಹಾರಾಷ್ಟ್ರದಲ್ಲಿ 1,648 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಈ ಎರಡು ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂಬುದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಡಬಲ್ ಇಂಜಿನ್ ಸರ್ಕಾರದಿಂದ ಪ್ರಗತಿಗೆ ವೇಗ

0

ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಡಬಲ್ ಎಂಜಿನ್ ಸರ್ಕಾರ ಇರುವುದರಿಂದ ಹಿಮಾಚಲ ಪ್ರದೇಶದ ಜನರಿಗೆ ಅಭಿವೃದ್ಧಿ ಯೋಜನೆಗಳು ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬೇಗ ದೊರಕಲು ಸಹಾಯಕವಾಗಿದೆ ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಜೈರಾಮ್ ಠಾಕೂರ್ ನೇತೃತ್ವದ ಬಿಜೆಪಿ ಸರ್ಕಾರದ ನಾಲ್ಕನೇ ವರ್ಷಾಚರಣೆಯ ಅಂಗವಾಗಿ ಮಂಡಿಯ ಪಡಲ್ ಮೈದಾನದಲ್ಲಿ ಆಯೋಜಿಸಿದ್ದ ರಾಲಿ ಉದ್ದೇಶಿಸಿ ಮಾನ್ಯ ಪ್ರಧಾನಿ ಅವರು
ಮಾತನಾಡುತ್ತಿದ್ದರು.

ಕೇಂದ್ರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಆರಂಭಿಸಿದೆ. ಹಿಮಾಚಲ ಪ್ರದೇಶ ಸರ್ಕಾರವು ಹಿಮ್ ಕೇರ್ ಎಂಬ ಇದೇ ರೀತಿಯ ಯೋಜನೆಯನ್ನು ಪ್ರಾರಂಭಿಸಿದೆ. ಇದರಿಂದ ರಾಜ್ಯದ ಒಟ್ಟು 1.25 ಲಕ್ಷ ಜನರು ಯೋಜನೆಗಳ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾನ್ಯ ಪ್ರಧಾನಿ ಅವರು ಹೇಳಿದ್ದಾರೆ.

ಉತ್ತಮವಾದ ಜೀವನಶೈಲಿ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇದರಲ್ಲಿ ವಿದ್ಯುತ್ ಪೂರೈಕೆ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಪ್ರಾರಂಭಿಸಲಾದ ವಿದ್ಯುತ್ ಯೋಜನೆಗಳು ಹೆಚ್ಚಿನ ವಿದ್ಯುತ್ ಉತ್ಪಾದಿಸುವಲ್ಲಿ ಮಹತ್ವವಾಗಿದೆ ಎಂದು ಅವರು ಹೇಳಿದರು.

ಇದಕ್ಕೂ ಮುಂಚೆ ಹನ್ನೊಂದು ಸಾವಿರ ಕೋಟಿ ರೂಪಾಯಿ ವೆಚ್ಚದ ಜಲವಿದ್ಯುತ್ ಯೋಜನೆಗಳು ಮತ್ತು 28, 197 ಕೋಟಿ ರೂಪಾಯಿ ಮೊತ್ತದ 287 ಹೂಡಿಕೆ ಯೋಜನೆಗಳಿಗೆ ಮಾನ್ಯ ಪ್ರಧಾನಿ ಅವರು ಅಡಿಗಲ್ಲನ್ನು ನೆರವೇರಿಸಿದರು.

ಇದೇ ವೇಳೆಯಲ್ಲಿ ಸುಮಾರು 30 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ‘ ರೇಣುಕಾಜಿ ‘ ಅಣೆಕಟ್ಟಿನಿಂದ 40 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. 7 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಅಣೆಕಟ್ಟಿನಿಂದ ದೆಹಲಿಗೆ ನೀರು ಪೂರೈಕೆ ಸಾಧ್ಯವಾಗಲಿದೆ. ಇಲ್ಲಿಂದ ದೆಹಲಿಗೆ ವಾರ್ಷಿಕ ಸುಮಾರು 50 ಕೋಟಿ ಕ್ಯೂಬಿಕ್ ಮೀಟರ್ ಗಳಷ್ಟು ನೀರು ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2,080 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 111 ಮೆಗಾವ್ಯಾಟ್ ಸಾಮರ್ಥ್ಯದ ಸಾವಡಾ ಕುಡ್ದು ಜಲ ವಿದ್ಯುತ್ ಯೋಜನೆಯನ್ನು ಪ್ರಧಾನಿ ಮೋದಿಯವರು ರಾಜ್ಯದ ಜನರ ಬಳಕೆಗೆ ಸಮರ್ಪಿಸಿದರು. ಇಲ್ಲಿ ಪ್ರತಿ 38 ಕೋಟಿ ಯೂನಿಟ್ ಗಳಷ್ಟು ವಿದ್ಯುತ್ ಉತ್ಪಾದನೆಯಾಗಲಿದೆ. ಸರ್ಕಾರದ ಗಜನಿಗೆ ವಾರ್ಷಿಕ 120 ಕೋಟಿ ರೂಪಾಯಿ ಆದಾಯ ತಂದುಕೊಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ದರ ಶೇ1.38

0

ಕರ್ನಾಟಕದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಕಡಿಮೆ ಮಾಡುವುದರಿಂದ ಸೋಂಕಿತರ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ. 58,495 ಪರೀಕ್ಷೆಗಳನ್ನು ನಡೆಸಲಾಗಿದೆ. 289 ಮಂದಿಯಲ್ಲಿ ಸೋಂಕು ದೃಡಪಟ್ಟಿದೆ. ಪ್ರಸ್ತುತ 7,449 ಮಂದಿ ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

18 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕು ದೃಡಪಟ್ಟ ಪ್ರಮಾಣ ರಷ್ಟಿದೆ. ಬೆಂಗಳೂರು ನಗರದಲ್ಲಿ 172 ಮಂದಿ ಪೀಡಿತರಾಗಿದ್ದಾರೆ. ಕೊಡಗು 37, ಕೋಲಾರದಲ್ಲಿ 10, ತುಮಕೂರು 15, ದಕ್ಷಿಣಕನ್ನಡ 12 ಪ್ರಕರಣಗಳು ವರದಿಯಾಗಿವೆ.

ಇನ್ನುಳಿದ ಜಿಲ್ಲೆ ಗಳಾದ ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ವಿಜಯಪುರ ಜಿಲ್ಲೆ ಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ. ಇದುವರೆಗೂ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 30.04 ಲಕ್ಷ ದಾಟಿದೆ.

ಸೋಂಕಿತರಲ್ಲಿ 254 ಜನ ಚೇತರಿಸಿಕೊಂಡಿದ್ದಾರೆ. ಗುಣಮುಖರಾದ ಒಟ್ಟು ಸಂಖ್ಯೆ 29.59 ಲಕ್ಷ ದಾಟಿದೆ. ಬೆಂಗಳೂರಿನಲ್ಲಿ 6,063 ಸೋಂಕಿತರಿದ್ದಾರೆ. ರಾಯಚೂರು, ರಾಮನಗರ, ಕಲಬುರ್ಗಿ, ವಿಜಯಪುರ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹತ್ತಕ್ಕಿಂತ ಕಡಿಮೆ ಇದೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ ಇಬ್ಬರು, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮರಣ ಪ್ರಮಾಣದ ದರವು ಶೇಕಡ 1. 38ರಷ್ಟು ಇದೆ. ಇದುವರೆಗೂ ಕೋವಿಡ್ ಸಾವಿಗೀಡಾದ ಒಟ್ಟು ಸಂಖ್ಯೆ 38,316 ಕ್ಕೆ ಹೆಚ್ಚಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮಕ್ಕಳಿಗೆ ಲಸಿಕೆ ಆಧಾರ್ ಕಾರ್ಡ್ ಕಡ್ಡಾಯವಿಲ್ಲ

0

ಕೇಂದ್ರ ಸರ್ಕಾರವು ಜನವರಿ 3 ರಿಂದ 15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ನಿರ್ಧರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಮಕ್ಕಳಿಗೆ ಸದ್ಯಕ್ಕೆ ವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲಾಗುವುದು. 15 ವರ್ಷ ತುಂಬಿದ ಮಕ್ಕಳು ಜನವರಿ 1ರಿಂದ ಕೋ-ವಿನ್ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ವಯಸ್ಸನ್ನು ದೃಡೀಕರಿಸುವ ದಾಖಲೆಯಾಗಿ ಶಾಲೆಯ ಅಥವಾ ಕಾಲೇಜು ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಬೇಕು. ಈ ಲಸಿಕೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಹಾಗೂ ಜೈಡಸ್ ಕ್ಯಾಡಿಲಾದ ಜೈಕೋವ್-ಡಿ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಕೋವಿನ್ ಮುಖ್ಯಸ್ಥ ಆರ್.ಎಸ್.ಶರ್ಮಾ ತಿಳಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಕೊವ್ಯಾಕ್ಸಿನ್ ಮಾತ್ರ ನೀಡುವುದಾಗಿ ಪ್ರಕಟಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅಮೃತ ವರ್ಷಿಣಿ ಸಂಗೀತಧಾರೆ ನಿಲ್ಲದಿರಲಿ

0

ಕೇಂದ್ರ ಸರ್ಕಾರ ಹಾಗೂ ಪ್ರಸಾರ ಭಾರತಿಯು ರಾಜ್ಯದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳ ಅಸ್ಮಿತೆಯಾಗಿದ್ದ ಆಕಾಶವಾಣಿ ಅಮೃತವರ್ಷಿಣಿ ಚಾನೆಲ್ ಪುನರಾರಂಭಿಸುವ ಬೇಡಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡದೇ ಇರುವುದರ ವಿರುದ್ಧ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೃತವರ್ಷಿಣಿ ಚಾನೆಲ್ ಪುನರಾರಂಭ ಬೇಡಿಕೆಯ ಹೋರಾಟವು ತೀವ್ರ ಸ್ವರೂಪ ಪಡೆಯುವ ಹಾದಿ ಹಿಡಿದಿದೆ. ಈ ಹಿನ್ನೆಲೆ ಆನ್ಲೈನ್ ಪತ್ರ ಚಳುವಳಿ, ಧರಣಿ, ಉಪವಾಸ ಸತ್ಯಾಗ್ರಹವನ್ನು ಮತ್ತೊಮ್ಮೆ ನಡೆಸಲು ಕಲಾವಿದರು ನಿರ್ಧರಿಸಿದ್ದಾರೆ.

ಅಮೃತವರ್ಷಿಣಿ ಚಾನೆಲ್ ನಲ್ಲಿ ಪ್ರತಿನಿತ್ಯ ಎಂಟು ಗಂಟೆ 30 ನಿಮಿಷ ಪೂರ್ಣಪ್ರಮಾಣದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಆದರೆ ಅಕ್ಟೋಬರ್ 18ರಂದು ಅಮೃತವರ್ಷಿಣಿ ಚಾನೆಲ್ ಅನ್ನು ಸ್ಥಗಿತಗೊಳಿಸಲಾಗಿದೆ. ಅದರ ಬದಲಾಗಿ ದಕ್ಷಿಣ ಭಾರತೀಯ ರಾಜ್ಯಗಳ ಸಂಗೀತ ಪ್ರಸಾರಮಾಡುವ ತರಂಗಾಂತರದಲ್ಲಿ ರಾಗಂ ಎನ್ನುವ ಚಾನೆಲ್ ಸೇರಿಸಲಾಗಿದೆ. ಇದರಿಂದಾಗಿ ಕನ್ನಡದ ಸ್ಥಳೀಯ ಪ್ರತಿಭೆಗಳಿಗೆ ತೀವ್ರ ಪ್ರಮಾಣದಲ್ಲಿ ವಂಚನೆ ಆಗುತ್ತಿದೆ ಶಾಸ್ತ್ರೀಯ ಸಂಗೀತ ಕಲಾವಿದರು ತಿಳಿಸಿದ್ದಾರೆ.

ಅಮೃತವರ್ಷಿಣಿ ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಕ್ಲಾಸಿಕಲ್ ಮ್ಯೂಸಿಯಂ‌ ಫೋರಂ ಹಾಗೂ ನೂರಾರು ಸಂಗೀತ ಕಲಾವಿದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಕೆಯಾಗಿದೆ. ಈ ಬಗ್ಗೆ ಡಿಸೆಂಬರ್ 9ರಂದು ಪ್ರಸಾರ ಭಾರತಿಯ ಕಡೆಯಿಂದ ಬಂದಿರುವ ಪ್ರತಿಕ್ರಿಯೆಯಲ್ಲಿ ನಿರೀಕ್ಷಿತ ಯಾವುದೇ ಉತ್ತರ ಬಂದಿಲ್ಲ. ಬದಲಾಗಿ ತನ್ನ ನಡೆಯನ್ನು ಸಮರ್ಥಿಸಿಕೊಳ್ಳಲಾಗಿದೆ ಎಂದು ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು ಒಕ್ಕೂಟದ ಸಂಚಾಲಕರು ಆಗಿರುವಂತಹ ವಿದುಷಿ ಗೀತಾ ರಮಾನಂದ ಅವರು ‘ಅಮೃತವರ್ಷಿಣಿ ಪುನರಾರಂಭಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಪ್ರಸಾರ ಭಾರತಿ ಸೇರಿದಂತೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಹೀಗೆ ಮುಂದುವರೆದರೆ ಹಿರಿಯ ಕಲಾವಿದರಿಂದ ಕೇಂದ್ರದ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜನಹಿತ ಗುರಿ ಕರ್ಫ್ಯೂ ಆದೇಶ ವಾಪಸಿಲ್ಲ- ಸಿ.ಎಂ.

0

ರಾಜ್ಯದಲ್ಲಿ ಕೋವಿಡ್ ರೂಪಾಂತರಿ ತಳಿ ಓಮಿಕ್ರಾನ್ ಹೆಚ್ಚಾಗಿದ್ದು, ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಿದೆ. ರಾತ್ರಿ ಕರ್ಫ್ಯೂ ನಿಂದಾಗಿ ಹೋಟೆಲ್ ವ್ಯಾಪಾರ ಸಾರಿಗೆ ಸೇರಿದಂತೆ ಹಲವು ವಲಯಗಳ ಮೇಲೆ ಭಾರಿ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.

ದೇಶದಲ್ಲಿ ಎರಡು ಬಾರಿ ಲಾಕ್ಡೌನ್ ಹಾಗೂ ನೈಟ್ ಕರ್ಫ್ಯೂ ಯಿಂದಾಗಿ ಈಗಾಗಲೇ ಸಂಕಷ್ಟದಿಂದ ಉದ್ಯಮ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಡುತ್ತಿವೆ. ಹೊಸ ವರ್ಷ ಆಚರಣೆಯ ಮೇಲೆ ನಿರೀಕ್ಷೆಯನ್ನ ಇಟ್ಟುಕೊಂಡಿದ್ದ ವ್ಯಾಪಾರಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಡಿಸೆಂಬರ್ 28ರಿಂದ ಜನವರಿ 7ರವರೆಗೆ ರಾಜ್ಯ ಸರ್ಕಾರ ರಾತ್ರಿ ವೇಳೆ ಕರ್ಫ್ಯು ವಿಧಿಸಿದೆ. ಡಿಸೆಂಬರ್ 30 ರಿಂದ ಜನವರಿ 4ರ ವರೆಗೆ ಹೋಟೆಲ್, ಪಬ್ ಬಾರ್ ಗಳಲ್ಲಿ ಶೇ.50 ರಷ್ಟು ಸೀಟುಗಳ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. 10 ಗಂಟೆಯಿಂದ ಕರ್ಫ್ಯೂ ಇರುವುದರಿಂದ ಎಂಟು ಗಂಟೆಗೆ ವ್ಯಾಪಾರ ಸಾರಿಗೆ ಸಂಚಾರ ಬಂದ್ ಮಾಡುವ ಅನಿವಾರ್ಯತೆ ಇದೆ. ಇದರಿಂದ ಸಾರ್ವಜನಿಕರು, ರಾತ್ರಿ ಪಾಳಿ ಓಡಾಟಕ್ಕೆ ತೊಂದರೆ ಉಂಟಾಗಲಿದೆ. ಮದುವೆ ಸಭೆ-ಸಮಾರಂಭಗಳಲ್ಲಿ 300ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ ಎಂಬ ನಿರ್ಬಂಧನೆಗಳನ್ನು ಸರ್ಕಾರ ತಿಳಿಸಿದೆ.

“ಮೂಗು ಇರುವವರೆಗೆ ನೆಗಡಿ ತಪ್ಪುವುದಿಲ್ಲ ನೆಗಡಿ ಬಂದರೆ ಆತಂಕಪಡಬೇಕಾದ ಅಗತ್ಯವಿಲ್ಲ. ಸರ್ಕಾರ ಜನರನ್ನು ಅನಗತ್ಯವಾಗಿ ಭಯಕ್ಕೆ ಒಳಪಡಿಸಬಾರದು” ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಮ್ಮ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು “ನೈಟ್ ಕರ್ಫ್ಯೂ, 50% ನಿರ್ಬಂಧದಿಂದ ಯಾವುದೇ ಪ್ರಯೋಜನ ಇಲ್ಲ. ಕಳೆದೆರಡು ವರ್ಷಗಳಿಂದ ಪೆಟ್ಟುತಿಂದ ವ್ಯಾಪಾರಿಗಳ ಮೇಲೆ ಇನ್ನಷ್ಟು ಹೊಡೆತ ಅಷ್ಟೇ” ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು “ಸಾಕಷ್ಟು ನಷ್ಟದಲ್ಲಿರುವ ಹೋಟೆಲ್ ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುನ್ಸೂಚನೆ ಇಲ್ಲದೆ ತಕ್ಷಣ ಹೀಗೆ ನೈಟ್ ಕರ್ಫ್ಯೂ ಹೇರಿದರೆ ಉದ್ಯಮಿಗಳು ಏನು ಮಾಡಬೇಕು” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ನೈಟ್ ಕರ್ಫ್ಯೂ ಕುರಿತಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು “ಕೋವಿಡ್ ನಿಯಂತ್ರಣಕ್ಕಾಗಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ನಿರ್ಧಾರವನ್ನು ಹಿಂಪಡೆಯುವುದಿಲ್ಲ” ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಬೆಚ್ಚಗಿರಲು ನೆರವು ನೀಡಿ

0

ಮೊನ್ನೆಯಷ್ಟೇ ಫೇಸ್ ಬುಕ್ ನಲ್ಲಿ
ಪತ್ರಕರ್ತ ಮಿತ್ರ ಪಾಶಾ ಒಂದು
ಕೋರಿಕೆ ಸಲ್ಲಿಸಿದ್ದರು. ಶಿವಮೊಗ್ಗದ ಮಿಳ್ಳಗಟ್ಟದಲ್ಲಿನ ನೂರಾರು ಶ್ರಮಿಕ ಕುಟುಂಬಗಳಿಗೆ ಹಸಿವು,ಬಡತನ
ಕಾಡುತ್ತಿದೆ. ಈಗಿನ ಚಳಿಗೆ ಅವರು
ಬೆಚ್ಚಗೆ ಮಲಗಲು ಕಷ್ಟಪಡುತ್ತಿದ್ದಾರೆ.
ದಾನಿಗಳು ಮನಸ್ಸು ಮಾಡಿದರೆ ಸೂಕ್ತ ಹೊದಿಕೆಗಳನ್ನ ಹಂಚಬಹುದು.
ಅವರೀಗ ಕ್ರಿಯಾಶೀಲರಾಗಿಬಿಟ್ಟಿದ್ದಾರೆ ಅಂತ ತಿಳಿಯಿತು. ಕೋವಿಡ್ ಲಾಕ್ ಡೌನ್
ಅವಧಿಯಲ್ಲೂ ಅಷ್ಟೆ ಅವರ ತಂಡವು ಬಡವರಿಗೆ ಆಹಾರ ಸಾಮಗ್ರಿಗಳನ್ನ ವಿತರಿಸಿದ್ದನ್ನ ಸ್ಮರಿಸಬಹುದು.
ಈ ತರಹ ಆಲೋಚನೆಯಲ್ಲಿದ್ದಾಗಲೇ ಒಂದು ವರದಿ ಗಮನ ಸೆಳೆಯಿತು.

ಮೈಸೂರಿನಲ್ಲಿನ ಕೆಪಿಎಂಕೆ ಚಾರಿಟಬಲ್ ಟ್ರಸ್ಟಿನ ವಿಕ್ರಂ ಐಯಂಗಾರ್ ಎನ್ನುವ
ಸೇವಾವ್ರತಿ ಈ ಆಂದೋಲನ ಪ್ರಾರಂಭಿಸಿದ್ದಾರೆ.
“Donate a Blanket Drive”
ಅದಕ್ಕಿರುವ ಹೆಸರು. ” ಒಂದು ಬೆಚ್ಚಗಿನ ಹೊದಿಕೆ ದಾನ ನೀಡಿ” ಎಂದು ಕರೆಯಬಹುದು.
ಕಳೆದ ಐದು ವರ್ಷಗಳಿಂದ ಅವರು ಈ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದಾರೆ. ಆರಂಭದ ದಿನಗಳ ಬಗ್ಗೆ ಮಾತನಾಡಿ” ರಾತ್ರಿ ಹತ್ತು ಗಂಟೆಗೆ ಮೈಸೂರಿನ ಸರ್ಕಲ್ಲುಗಳಲ್ಲಿ
ಮಿತ್ರರೊಂದಿಗೆ ಸಂಚರಿಸಿದೆವು.
ಬಸ್ ನಿಲ್ದಾಣ,ರೈಲ್ವೇ ನಿಲ್ದಾಣ ಇತ್ಯಾದಿ ಸ್ಥಳಗಳಲ್ಲಿ ಮೈಮೇಲೆ ಹೊದಿಕೆಯಿಲ್ಲದೇ ನಿದ್ರಿಸುತ್ತಿದ್ದವರಿಗೆ
ಬೆಚ್ಚಗೆ ಹೊದಿಕೆ ಹೊದಿಸಿ ಬಂದೆವು.”
ಎಂದರು.
ಸದ್ಯ ಅವರೀಗ ಹೆಗ್ಗಡದೇವನ ಕೋಟೆಯ ಬುಡಕಟ್ಟು ಸಮುದಾಯದವರಿಗೆ ನೀಡುತ್ತಾರಂತೆ. ನಮ್ಮ ಸಮಾಜವೂ
ವಿಕ್ರಂ ಅವರಿಗೆ ಸ್ಪಂದಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದು ಕೋರಿಕೆ ಕಾಣಿಸುವಂತೆ ಮಾಡಿದರು.ದಾನಿಗಳು ನೆರವಿನ ಹಸ್ತ ನೀಡಬಹುದು ಎಂದು ವಿವರ ತಿಳಿಸಿದಾಗ ತಕ್ಷಣ ಐವತ್ತು ಸಾವಿರ ರೂಪಾಯಿಗಳು ಸಂಗ್ರಹವಾದವು.
ಶೀತಗಾಳಿಗೆ ನರಳುವ ಮನುಷ್ಯ ಜೀವಗಳಿಗೆ ಅದೊಂದು ಬೆಚ್ಚಗಿಟ್ಟ ಪುಣ್ಯದ ಕಾರ್ಯವಾಯಿತು.

ಇವರ ಸೇವಾ ಮನೋಭಾವ, ಸಮಾಜದ ಹತ್ತು ಹಲವರಿಗೆ ಸ್ಫೂರ್ತಿನೀಡಿದೆ. ಬೆನ್ನು ತಟ್ಟಬೇಕು ಅನಿಸಿದೆ.
ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಸ್ವಾಮೀಜಿಯವರು ಐದುನೂರು
ಹೊದಿಕೆಗಳನ್ನ ಈ ಸಂಸ್ಥೆಗೆ ಕೊಡುಗೆ
ನೀಡಿ ಆಶೀರ್ವದಿಸಿದ್ದಾರೆ.
ಇಂರಹ ಶಿವಮೊಗ್ಗದಲ್ಲೂ ಆಗುತ್ತಿದೆ.
ಸಿಹಿಮೊಗೆಯಲ್ಲಿ ಮಾನವ ಸಹಜ ಪ್ರೀತಿ,ಕರುಣೆಗೆ ಕೊರತೆಯಿಲ್ಲ.
ಮಲೆನಾಡು ಎಕ್ಸ್ ಪ್ರೆಸ್ ಪಾಶಾ ಅವರಿಗೆ ಸಹಕರಿಸಿದರೆ ಶಿವಮೊಗ್ಗದ
ರಾತ್ರಿಯಲ್ಲಿ ಉಣ್ಣೆ ಹೊದಿಕೆಗಳ
ಹೊದ್ದ ಅಗಂತುಕರು ದಾನಿಗಳನ್ನ
ಬಾಯ್ತುಂಬ ಹರಸುವ ದಿನ ದೂರವಿಲ್ಲ ಅನಿಸುತ್ತದೆ.
ದಾನಿಗಳು ಹೆಚ್ಚಿನ ವಿವರಗಳಿಗೆ ಪಾಶಾ ಅವರನ್ನು ಸಂಪರ್ಕಿಸಬಹುದು
ಪೋನ್ ನಂ: 8050112067

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ರದ್ದು ಮಾಡುತ್ತೇವೆ

0

ನಾವು ಮುಂದೆ ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಅಥವಾ ಪ್ರಥಮ ಅಧಿವೇಶನದಲ್ಲೇ ಮತಾಂತರ ನಿಷೇಧ ವಿಧೇಯಕ ಡೋಸ್ ರದ್ದುಪಡಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ. ಸರ್ಕಾರದಲ್ಲಿ ಆಡಳಿತ ಯಂತ್ರವೇ ಇಲ್ಲದ ಕಾರಣ ಈ ವಿಚಾರ ಯಾವುದೇ ಪರಿಣಾಮ ಬೀರುವುದಿಲ್ಲ. ಅಧಿಕಾರಿಗಳಿಗೆ ವರ್ಗಾವಣೆಗೆ ಲಂಚ ಕೊಟ್ಟು ಸಾಕಾಗಿದೆ. ಈ ಸರ್ಕಾರ ತೊಲಗಿದರೆ ಸಾಕು ಎಂದು ಅವರಿಗೂ ಅನಿಸತೊಡಗಿದೆ. ಜನರ ಆಶಯವೂ ಅದೇ ಆಗಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲವಂತ, ಆಸೆ ಆಮಿಷವೊಡ್ಡಿ ಮೋಸದಿಂದ ಮತಾಂತರ ಮಾಡುವುದಕ್ಕೆ ನಮ್ಮ ಪಕ್ಷದ ವಿರೋಧವೂ ಇದೆ. ಸೆಕ್ಷನ್ 295ರಡಿ ಕಾನೂನು ಕ್ರಮ ಜರುಗಿಸಲು ಸಂವಿಧಾನದಲ್ಲೇ ಅವಕಾಶವಿದೆ. ಆದರೆ ಮದುವೆ ಕಾರಣಕ್ಕೆ ಮತಾಂತರವಾದರೆ 10 ವರ್ಷದವರೆಗೆ ಶಿಕ್ಷೆ ವಿಧಿಸಬಹುದಾದ ನೀವು ಮತಾಂತರ ನಿಷೇಧ ವಿಧೇಯಕದಲ್ಲಿದೆ. ಒಬ್ಬ ಪುರುಷ ಅಥವಾ ಮಹಿಳೆ ಅನ್ಯ ಧರ್ಮದವರನ್ನು ಪ್ರೀತಿಸಿ, ಮದುವೆಯಾಗುವುದು ಮತಾಂತರವಾಗುವುದೇ? ಇದನ್ನು ನಿರ್ಬಂಧಿಸುವುದು ಸಂವಿಧಾನಬಾಹಿರ ಎಂದು ತಿಳಿಸಿದರು.
ಬಿಟ್ ಕಾಯಿನ್ ಹಗರಣ, 40 ಪರ್ಸೆಂಟ್ ಕಮಿಷನ್ ಪ್ರಕರಣ, ರೈತ ವಿರೋಧಿ ಕಾನೂನುಗಳ ವಾಪಾಸಾತಿ ಇತರೆ ವಿಚಾರಗಳ ಬಗ್ಗೆ ಚರ್ಚಿಸಬೇಕಿದ್ದು, ಸದನವನ್ನು ಒಂದು ವಾರ ವಿಸ್ತರಿಸುವಂತೆ ಕೋರಿದರೂ ಅವಕಾಶ ನೀಡದ ಸರ್ಕಾರ ತ
ರಾತುರಿಯಲ್ಲಿ ಸದನ ಮುಗಿಸಿತು. ಮುಂದೆ ನಾವು ಅಧಿಕಾರಕ್ಕೆ ಬಂದಾಗ ಕಾಯಿದೆಯನ್ನು ರದ್ದು ಪಡಿಸುತ್ತೇವೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದರು.