Saturday, June 21, 2025
Saturday, June 21, 2025

ದ್ವೇಷರಾಜಕಾರಣದಿಂದ ಭಾರತದ ಸ್ಥಾನಕ್ಕೆ ಧಕ್ಕೆ-ರಾಹುಲ್ ಗಾಂಧಿ

Date:

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕರು ದ್ವೇಷ ರಾಜಕಾರಣವನ್ನು ಪೋಷಿಸಿದ ಕಾರಣದಿಂದಲೇ, ಭಾರತವು ಇಂದು ಜಾಗತಿಕ ಸಮುದಾಯದ ಎದುರು ತಲೆಬಗ್ಗಿಸುವಂತಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರನ್ನು ತಕ್ಷಣವೇ ಬಂಧಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಸಂಸದರೊಬ್ಬರು ಗಾಂಧೀಜಿ ಹಂತಕ ನಾಥೂರಾಮ್‌ ಗೋಡ್ಸೆಯನ್ನು ಹೊಗಳಿದರು. ಆಗ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದರು. ಅದರಿಂದ ನಮಗೆ ತೀವ್ರ ಆಘಾತವಾಗಿತ್ತು. ನೀವು ಏನು ಮಾಡಲು ಅನುಮತಿ ನೀಡಿರುತ್ತೀರೋ ಅದನ್ನೇ ಪ್ರೋತ್ಸಾಹಿಸುತ್ತೀರಿ ಎಂದು ಮೋದಿ ಅವರಿಗೆ ಹೇಳಲು ಬಯಸುತ್ತೇನೆ’ ಎಂದು ಟಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಟೀಕಿಸಿದ್ದಾರೆ.

ದ್ವೇಷ ಭಾಷಣವನ್ನು ಬಿಜೆಪಿ ಪ್ರೋತ್ಸಾಹಿಸಿದೆ. ಬಿಜೆಪಿ ಮುಖಂಡರು ಇಂತಹ ಹೇಳಿಕೆ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಸುಮ್ಮನೆ ಇರುತ್ತಿದ್ದರು. ಈ ಕಾರಣದಿಂದಲೇ ಬಿಜೆಪಿ ಮುಖಂಡರು ಇಂದು ಇಂತಹ ಹೇಳಿಕೆ ನೀಡಿದ್ದಾರೆ.

ಇದರಿಂದಲೇ ಭಾರತವು ಇಂದು ವಿಶ್ವದ ಎದುರು ತಲೆ ತಗ್ಗಿಸಿ ನಿಂತಿದೆ’ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಟೀಕಿಸಿದ್ದಾರೆ.
ಇದೇ ರೀತಿಯ ಹೇಳಿಕೆ ನೀಡಿರುವ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ, ‘ನೂಪುರ್ ಆಗಲೀ ನವೀನ್‌ ಆಗಲೀ ಈ ರೀತಿಯ ಹೇಳಿಕೆ ನೀಡಿದ ಮೊದಲಿಗರಲ್ಲ. ಬದಲಿಗೆ ಅವರು ಇಂತಹ ಹೇಳಿಕೆ ನೀಡುವ ಮೂಲಕ ತಮ್ಮ ರಾಜನಿಗೆ ನಿಷ್ಠರಾಗಿರಲು ಯತ್ನಿಸಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

ಆಂತರಿಕವಾಗಿ ವಿಭಜನೆಯಾಗಿರುವ ಭಾರತವು ವಿಶ್ವದ ಎದುರು ದುರ್ಬಲವಾಗಿದೆ. ಬಿಜೆಪಿಯ ನಾಚಿಕೆಗೇಡಿನ ದ್ವೇಷರಾಜಕಾರಣದಿಂದ ನಾವು ಜಾಗತಿಕ ಸಮುದಾಯದಲ್ಲಿ ಒಂಟಿಯಾಗಿದ್ದು ಮಾತ್ರವಲ್ಲ, ಭಾರತದ ಸ್ಥಾನಕ್ಕೂ ಧಕ್ಕೆಯಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಅವರನ್ನು ಮೂಲಭೂತವಾದಿಗಳು ಎಂದು ಕರೆದ ಬಿಜೆಪಿಯ ನಡೆಯನ್ನೂ ವಿರೋಧ ಪಕ್ಷಗಳು ಪ್ರಶ್ನಿಸಿವೆ. ‘ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರೆಲ್ಲರೂ ಟ್ವಿಟರ್‌ನಲ್ಲಿ ಅನುಸರಿಸುತ್ತಿದ್ದಾರೆ. ಆದರೆ ಈಗ ಇವರಿಬ್ಬರನ್ನು ಬಿಜೆಪಿ ಸರ್ಕಾರವೇ ‘ಮೂಲಭೂತವಾದಿಗಳು’ ಎಂದು ಕರೆದಿದೆ. ಪಕ್ಷದ ಅಧಿಕೃತ ಹುದ್ದೆಗಳಲ್ಲಿ ಇರುವವರನ್ನೇ ಬಿಜೆಪಿ ‘ಮೂಲಭೂತವಾದಿಗಳು’ ಎಂದು ಕರೆಯಲು ಹೇಗೆ ಸಾಧ್ಯ’ ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Malenadu Development Foundation ಸಾಧಿಸುವ ಧೈರ್ಯದೊಂದಿಗೆ ವಿದ್ಯಾರ್ಥಿಗಳು ಜೀವನೋತ್ಸಾಹ ಬೆಳೆಸಿಕೊಳ್ಳಬೇಕು- ಡಾ.ಗುರುರಾಜ ಕರ್ಜಗಿ

Malenadu Development Foundation ಸಾಧಿಸುವ ಛಲ, ಧೈರ್ಯದೊಂದಿಗೆ ವಿದ್ಯಾರ್ಥಿಗಳು ಜೀವನೋತ್ಸಾಹ ಬೆಳೆಸಿಕೊಳ್ಳಬೇಕು...

MESCOM ಜೂ.23 ರಂದು ಕುಂಸಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ತಾಲ್ಲೂಕು, ಕುಂಸಿ ಗ್ರಾಮದ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ...