ಉಕ್ರೇನ್ ಹಾಗೂ ರಷ್ಯಾ ಯುದ್ಧ ಆರಂಭಿಸಿ ಅನೇಕ ದಿನಗಳೇ ಕಳೆದಿವೆ. ಇತ್ತ ಯುಕ್ರೇನ್ ಸೋಲುತ್ತಿಲ್ಲ. ಪುಟಿನ್ ಬಿಡುತ್ತಿಲ್ಲ. ಆದರೆ, ಉಕ್ರೇನ್‌ಗೆ ಮಾತ್ರ ಶಸ್ತ್ರಾಸ್ತ್ರ ಪೂರೈಕೆ ನಡಿಯುತ್ತಿದೆ.
ಅದರಲ್ಲೂ, ರಷ್ಯಾ ವಿರುದ್ದ ಈಗ ಲಾಂಗ್ ರೇಂಜ್ ಮಿಸೈಲ್‌ಗಳನ್ನ ನೀಡಲಾಗುತ್ತಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಇತ್ತ ಅಮೆರಿಕ ಮತ್ತು ಪಾಶ್ಚೀಮಾತ್ಯ ದೇಶಗಳಿಗೆ ಪುಟಿನ್ ಬಿಗ್ ವಾರ್ನಿಂಗ್ ಕೊಟ್ಟಿದ್ದಾರೆ. ಇದು ಹೀಗೆ, ಮುಂದುವರೆದರೆ ನಾವು ನಮ್ಮ ಆಯುಧಗಳ ಮೂಲಕ ಖಂಡಿತ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಈ ಹಿಂದೆ ಮುಟ್ಟದ ಗುರಿಗಳನ್ನೂ ಹೊಡೆದು ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.