ಉಕ್ರೇನ್ ಮೇಲೆ ದಾಳಿ ಆರಂಭಿಸಿ ಸುಮಾರು 100 ದಿನಗಳೇ ಪೂರೈಸಿದೆ. ರಷ್ಯಾ ಸೇನೆ, ಭಾನುವಾರ ಉಕ್ರೇನ್‌ನ ರಾಜಧಾನಿ ಕೀವ್‌ನ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿವೆ.
ರೈಲ್ವೆ ಘಟಕ ಮತ್ತು ಟಿ-72 ಯುದ್ಧ ಟ್ಯಾಂಕ್‌ಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಸಾಕಷ್ಟುಹಾನಿ ಸಂಭವಿಸಿದೆ ಎನ್ನಲಾಗಿದೆ.
ದಾಳಿಗೆ ತುತ್ತಾದ ಎಲ್ಲಾ ಶಸ್ತ್ರಾಸ್ತ್ರಗಳು ವಿದೇಶಗಳು ದೇಣಿಗೆಯಾಗಿ ನೀಡಿದ್ದಾಗಿವೆ.
5 ವಾರದ ಹಿಂದೆ ವಿಶ್ವಸಂಸ್ಥೆ ಪ್ರಧಾನಿ ಕಾರ್ಯದರ್ಶಿ ಆಯಂಟಾನಿಯಾ ಗ್ಯುಟೆರ್ರೆಸ್ ಉಕ್ರೇನ್‌ಗೆ ಭೇಟಿಕೊಟ್ಟ ನಂತರ, ರಾಜಧಾನಿ ಕೀವ್ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳ ಮೇಲೆ ರಷ್ಯಾ ದಾಳಿ ನಡೆಸಿರಲಿಲ್ಲ. ತನ್ನ ದಾಳಿಯನ್ನು ಕೇವಲ ಪೂರ್ವದ ಪ್ರದೇಶಗಳಿಗೆ ಸೀಮಿತಗೊಳಿಸಿತ್ತು.
ಆದರೆ, ಇದೀಗ 5 ವಾರಗಳ ನಂತರ ರಷ್ಯಾ ನಡೆಸಿರುವ ದಾಳಿಯು, ಈಗಲೂ ಯಾವುದೇ ಪ್ರದೇಶಗಳ ಮೇಲೆ ದಾಳಿ ನಡೆಸುವ ರಷ್ಯಾದ ಸಾಮರ್ಥ್ಯ ಮತ್ತು ಇಚ್ಛೆಯನ್ನು ತೋರಿಸುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಭಾನುವಾರದ ದಾಳಿಯ ವೇಳೆ ಒಂದು ಕ್ಷಿಪಣಿ ಪಿವ್‌ಡೆನ್ನೋಕ್ರೇನ್ಸ್ ಪರಮಾಣು ಸ್ಥಾವರದ ಸಮೀಪದ ಆತಂಕಕಾರಿ ರೀತಿಯಲ್ಲಿ ಬಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೀವ್ ಮಾತ್ರವಲ್ಲದೇ ದೇಶದ ಇತರೆ ಹಲವು ಪ್ರದೇಶಗಳ ಮೇಲೂ ರಷ್ಯಾ ಸೇನೆ ಭಾನುವಾರ ದಾಳಿ ನಡೆಸಿದೆ.