ಮುಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ನಾಯಕತ್ವ ಕೊಟ್ಟರೆ ಕಾಂಗ್ರೆಸ್ ಜತೆಗೆ ಕೈ ಜೋಡಿಸುವ ಬಗ್ಗೆ ಯೋಚಿಸಲಾಗುವುದು ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರವಾಹದಲ್ಲಿ ಮನೆ ಬಿದ್ದವರಿಗೆ ಇನ್ನೂ ಮನೆ ನಿರ್ಮಿಸಿ ಕೊಟ್ಟಿಲ್ಲ. ಕೊಡಗು, ಚಿಕ್ಕಮಗಳೂರಿನಲ್ಲಿ ಮನೆ ಕಟ್ಟಲಿಲ್ಲ. ಪ್ರಚಾರ ಮಾತ್ರ ದೊಡ್ಡ ದೊಡ್ಡ ಜಾಹೀರಾತುಗಳ ಮೂಲಕ ಮಾಡಿಕೊಂಡಿದ್ದಾರೆ.
ಖರ್ಗೆ ಹಿರಿಯ ನಾಯಕರು.
ಆ ಪಕ್ಷಕ್ಕೆ ನಿಷ್ಠೆ ಯಿಂದ ಕೆಲಸ ಮಾಡಿದ್ದಾರೆ. ಹಲವು ಬಾರಿ ಅವರಿಗೆ ಅನ್ಯಾಯ ಆಗಿದ್ದರೂ ನಿಷ್ಠೆಯಿಂದ ನಡೆದುಕೊಂಡಿದ್ದಾರೆ ಎಂದರು.
ನರೇಂದ್ರ ಮೋದಿ ಗಿಂತಲೂ ದೊಡ್ಡ ಮಟ್ಟದ ಘೋಷಣೆ ಮಾಡಿಕೊಂಡರು. ನವ ಕರ್ನಾಟಕ ಕಟ್ಟುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ
ರಾಜ್ಯದ ಖಜಾನೆಯನ್ನು ಹಿಟಾಚಿ ಮೂಲಕ ಬಗೆಯುವುದೇ ನವ ಕರ್ನಾಟಕ ನಿರ್ಮಾಣವೇ ಎಂದು ಪ್ರಶ್ನಿಸಿದರು.