ಈ ಹಿಂದಿನ ಪಠ್ಯಪುಸ್ತಕಗಳೇ ಸತ್ಯದಿಂದ ಕೂಡಿತ್ತು. ಈಗ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು ಸರಿಯಲ್ಲ ಎಂಬುದಾಗಿ ಬಿಜೆಪಿ ಪಕ್ಷದ ವಿರುದ್ಧವೇ, ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರು ಗುಡುಗಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ರಾಜ್ಯ ಸರ್ಕಾರ ಈ ವಿವಾದಕ್ಕೆ ಆದಷ್ಟು ಬೇಗ ಅಂತ್ಯವಾಡಬೇಕು. ಶಾಲಾ ಪಠ್ಯಪರಿಷ್ಕರಣೆ ಮಾಡಿದ್ದು ಸರಿಯಿಲ್ಲ. ಈ ಹಿಂದಿನ ಪಠ್ಯದಲ್ಲಿಯೇ ಸತ್ಯಾಂಶವಿತ್ತು. ಪರಿಷ್ಕರಣೆಯಿಂದ ವಿವಾದಕ್ಕೆ ಕಾರಣವಾಗಿದೆ ಎಂದರು.