ಪ್ರವಾದಿ ಮೊಹಮ್ಮದ್ ನಿಂದನೆ ಮಾಡಲಾಗಿದೆ ಎನ್ನುವ ಆರೋಪದ ಮೇಲೆ ಕಾನ್ಪುರದಲ್ಲಿ ಭಾರಿ ಹಿಂಸಾಚಾರವೇ ನಡೆದು ಹೋಗಿದೆ. ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗಲಭೆ ನಡೆದಿದೆ.
ನೂಪುರ್ ಶರ್ಮಾ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಪ್ರವಾದಿ ಮೊಹಮ್ಮದ್‌ಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಪರಿಣಾಮ ಕಾನ್ಪುರದಲ್ಲಿ ಭಾರಿ ಗಲಭೆ ಸೃಷ್ಟಿಯಾಗಿತ್ತು. ಇದರ ಬಿಸಿ ಅರಬ್ ರಾಷ್ಟ್ರಕ್ಕೂ ತಟ್ಟಿದೆ.
ಸೌದಿ ಅರೇಬಿಯಾ, ಬಹ್ರೇನ್ ಹಾಗು ಕುವೈಟ್ ಸೂಪರ್‌ಸ್ಟೋರ್ಸ್‌ಗಳಿಂದ ಭಾರತ ಉತ್ಪನ್ನವನ್ನು ತೆಗೆದು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಪ್ರವಾದಿ ನಿಂದನೆ ಕಾರಣದಿಂದ ಸೌದಿ ಸ್ಟೋರ್‌ಗಳಲ್ಲಿ ಭಾರತ ಉತ್ಪನ್ನವನ್ನು ತೆಗೆದು ಹಾಕಲಾಗಿದೆ. ಇದರ ಬೆನ್ನಲ್ಲೇ ಭಾರತ ರಾಯಭಾರಿ ಅಧಿಕಾರಿಗಳು ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಹೀಗಾಗಿ ಸೌದಿಯಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸೌದಿ ವಿದೇಶಾಂಗ ಸಚಿವಾಲಯ ಕಚೇರಿಯಲ್ಲಿ ಸಭೆ ಸೇರಿ ಭಾರತದ ನಿಲುವು ಸ್ಪಷ್ಟಪಡಿಸಿದ್ದಾರೆ.