ದೇಶದ ಅತಿ ಐಷಾರಾಮಿ ಹಡಗಾದ ಕಾರ್ಡೇಲಿಯಾ ಕ್ರೂಸ್ ಲೈನರ್ ವಿಶಾಖಪಟ್ಟಣಂದಿಂದ ಜೂನ್ 8ರಿಂದ ಮೂರು ದಿನಗಳ ಪ್ರಯಾಣಕ್ಕೆ ಸಜ್ಜಾಗಿದೆ.
ವಿಶಾಖಪಟ್ಟಣದಿಂದ ಚೆನ್ನೈ, ಪುದುಚೇರಿಗೆ ಇದೇ ತಿಂಗಳ 8, 15 ಮತ್ತು 22ರಂದು ಪ್ರಯಾಣ ನಡೆಸಲಿದೆ.
ಜೂನ್ 8ರಂದು ಪ್ರಯಾಣ ಆರಂಭಿಸುವ ಕ್ರೂಸ್ ಚೆನ್ನೈ ತಲುಪಿ ಬಳಿಕ ಪುದುಚೇರಿ ಸೇರಲಿದೆ. ಅಲ್ಲಿಂದ ವಾಪಸ್ ವಿಶಾಖಪಟ್ಟಣಕ್ಕೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶಾಖಪಟ್ಟಣಂನಿಂದ ಪುದುಚೇರಿಗೆ ಪ್ರಯಾಣಿಸಲು ಸಾಮಾನ್ಯವಾಗಿ ರೈಲು ಅಥವಾ ರಸ್ತೆ ಮಾರ್ಗವಾಗಿ ಹೊರಟರೆ 15 ಗಂಟೆಗಳು ಬೇಕಾಗುತ್ತದೆ. ಆದರೆ, ಈ ಹಡಗು 36 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಅಲ್ಲಿಂದ ಚೆನ್ನೈಗೆ ಪ್ರಯಾಣಿಸಿ ಮತ್ತೆ ವಿಶಾಖಪಟ್ಟಣಕ್ಕೆ ಬರಲು ಇನ್ನೆರಡು ದಿನ ಹೆಚ್ಚುವರಿಯಾಗಿ ಬೇಕು. ಪ್ರಯಾಣ ತಡವಾದರೂ ಪ್ರವಾಸಿಗರು ಈ ಹಡಗಿನಲ್ಲಿ ಪ್ರಯಾಣಿಸಲು ಕಾತರರಾಗಿದ್ದಾರೆ.
ಈ ಐಶಾರಾಮಿ ಹಡಗಿನಲ್ಲಿ ಮೂಲಸೌಲಭ್ಯಗಳಲ್ಲದೇ, ಫುಡ್ ಕೋರ್ಟ್, ಸ್ಟಾರ್‌ಲೈಟ್ ರೆಸ್ಟೋರೆಂಟ್, ಈಜುಕೊಳ, ಫಿಟ್‌ನೆಸ್ ಸೆಂಟರ್, ಲಾಂಜ್‌ಗಳು, ಡಿಜೆ ಮನರಂಜನೆ, ಕ್ಯಾಸಿನೋ, ಲೈವ್ ಶೋಗಳು, ಕಾರ್ಡೆಲಿಯಾ ಅಕಾಡೆಮಿ ಫಾರ್ ಕಿಡ್ಸ್, ಜೈನ್ ಫುಡ್ ಮತ್ತು ರಾಕ್ ಕ್ಲಿಂಬಿಂಗ್, ಹಾಸ್ಯ ಪ್ರದರ್ಶನಗಳಿಗಾಗಿ ಆಡಿಟೋರಿಯಂಗಳು, ಚಲನಚಿತ್ರಗಳ ಥಿಯೇಟರ್‌ಗಳು ಮತ್ತು 24 ಗಂಟೆಗಳ ಸೂಪರ್‌ಮಾರ್ಕೆಟ್ ಅನ್ನೂ ಕೂಡ ಇದು ಹೊಂದಿದೆ.