ಮನುಷ್ಯ ಇದ್ದಾಗ ಎಷ್ಟು ಜನರ ಪ್ರೀತಿ ಗಳಿಸಿರುತ್ತಾರೋ ಆ ವ್ಯಕ್ತಿ ಮೃತಪಟ್ಟ ಮೇಲೆ ಆ ಪ್ರೀತಿ ದುಪ್ಪಟ್ಟು ಮಾಡಿಕೊಂಡಿರುವ ರಾಜ್ಯದ ಏಕೈಕ ವ್ಯಕ್ತಿ ಡಾ.
ಪುನೀತ್ ರಾಜ್‌ಕುಮಾರ್ ಎಂದರೆ ತಪ್ಪಾಗಲಾರದು.
ಯಾಕಂದ್ರೆ ಮನುಷ್ಯ ಮೃತಪಟ್ಟ ಮೇಲೆ ದೇವರಾಗ್ತಾರೆ ಅನ್ನೋ ಮಾತಿನಂತೆ ಪುನೀತ್ ಇದೀಗ ಅಭಿಮಾನಿಗಳ ಪಾಲಿನ ದೇವರಾಗಿದ್ದಾರೆ. ಅದಕ್ಕೆ ಸಾಕ್ಷಿ ಹೊಸಪೇಟೆಯ ಈ ಜನರು.
ಪುನೀತ್ ಮೇಲಿನ ಪ್ರೀತಿಗೆ ಹೊಸಪೇಟೆಯ ಅವರ ಅಭಿಮಾನಿಗಳು ಎಳುವರೆ ಅಡಿ ಎತ್ತರದ ಪುತ್ತಳಿಯನ್ನು ಅನಾವರಗೊಳಿಸಿದ್ದಾರೆ.
ಸಾವಿರಾರು ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಹೊಸಪೇಟೆಯಲ್ಲಿ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ 7.4 ಅಡಿ ಎತ್ತರದ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.
ಪುನೀತ್ ರಾಜಕುಮಾರ ನಮ್ಮನ್ನು ಬಿಟ್ಟು ಹೆಚ್ಚು ಕಡಿಮೆ ಏಳು ತಿಂಗಳುಗಳೇ ಕಳೆದಿವೆ. ಆದರೆ, ಅವರ ಮೇಲಿನ ಪ್ರೀತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಹೊಸಪೇಟೆಯಲ್ಲಿ ರಾಜ್ ಕುಟುಂಬಕ್ಕೆ ಅದರಲ್ಲೂ ಪುನೀತ್ ಬಗ್ಗೆ ಅತಿ ಹೆಚ್ಚು ಅಭಿಮಾನಗಳಿದ್ದಾರೆ ಎಂದು ದೊಡ್ಡ ಮನೆಯವರು ಹೇಳುತ್ತಿದ್ದರು. ಅದರಲ್ಲೂ ಯಾರೇ ಕೈಬಿಟ್ಟರು ಹೊಸಪೇಟೆ ಜನರು ನಮ್ಮ ಕೈಬಿಡಲ್ಲ ಎಂದು ಪುನೀತ್ ಹೊಸಪೇಟೆಯಲ್ಲಿ ಘಂಟಾಘೋಷವಾಗಿ ಹೇಳಿದ್ದರು.