Sunday, November 8, 2026
Sunday, November 8, 2026
Home Blog Page 2010

ಪ್ರಧಾನಿ ಮೋದಿಯವರ ಶಿವಮೊಗ್ಗ ಭೇಟಿ ಸುಳಿವು

0

ಪ್ರಧಾನಿಯವರು ಕರ್ನಾಟಕದಲ್ಲಿ ಪಂಚಾಯತ್ ರಾಜ್ ದಿವಸ ಆಚರಿಸಲು ಇಚ್ಚಿಸಿದರೆ ಜಿಲ್ಲೆಯ ಯಾವ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬಹುದು ಎಂಬ ಮಾಹಿತಿ ನೀಡುವಂತೆ ಪ್ರಧಾನ ಮಂತ್ರಿ ಕಾರ್ಯಾಲಯ ಜಿಲ್ಲಾಡಳಿತವನ್ನು ಕೋರಿದೆ.
ಕೋರಿಕೆ ಬಂದ ತಕ್ಷಣ ಕಾರ್ಯಪ್ರವೃತ್ತರಾಗಿರುವ ಜಿಲ್ಲಾಡಳಿತವು ಶಿವಮೊಗ್ಗ ಬಳಿಯ ಕೊಮ್ಮನಾಳ್ ಅಥವಾ ಹೊಳಲೂರು ಪಂಚಾಯತಿ ಹೆಸರು ಅಂತಿಮಗೊಳಿಸುವ ಕುರಿತು ಚರ್ಚಿಸಿದ್ದಾರೆ. ಕಸ ವಿಲೇವಾರಿ ನಿರ್ವಹಣೆಯಲ್ಲಿ ಹೊಳಲೂರು ಪಂಚಾಯಿತಿ ರಾಜ್ಯಕ್ಕೆ ಮಾದರಿಯಾಗಿರುವುದು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಪ್ರಧಾನಮಂತ್ರಿ ಕಚೇರಿ ತೆಗೆದುಕೊಳ್ಳುವ ಅಂತಿಮ ನಿರ್ಧಾರದ ಮೇಲೆ ಜಿಲ್ಲೆಯ ಭೇಟಿ ಖಚಿತವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಿರಿವಂತಿಕೆಯಲ್ಲಿ ಜುಕರ್ ಬರ್ಗ್ ಹಿಂದಿಕ್ಕಿದ ವಾರೆನ್ ಬಫೆಟ್

0

ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅವರು ಸಿರಿವಂತಿಕೆಯನ್ನು ಮತ್ತೊಮ್ಮೆ ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರನ್ನು ಹಿಂದಿಕ್ಕಿದ್ದಾರೆ.

ಬಫೆಟ್ ಹೂಡಿರುವ ಹೂಡಿಕೆಗಳು ಗಣನೀಯ ಲಾಭ ತಂದುಕೊಟ್ಟಿರುವುದು ಇದಕ್ಕೆ ಕಾರಣ. ಬಫೆಟ್ ಸಂಪತ್ತಿನಲ್ಲಿ ಈ ವರ್ಷ 2.4 ಶತಕೋಟಿ ಡಾಲರ್ ಏರಿಕೆಯಾಗಿದ್ದು, 111 ಶತಕೋಟಿ ಡಾಲರ್ ಗೆ (8.32 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.
ತಂತ್ರಜ್ಞಾನ ಆಧರಿತ ಕಂಪನಿಗಳು ಶೇರು ದರಗಳು ಇತ್ತೀಚೆಗೆ ಕುಸಿದಿವೆ.

ಇದರ ಪರಿಣಾಮ ಸಿಲಿಕಾನ್ ವ್ಯಾಲಿಯ ಉದ್ಯಮಿಗಳು 50 ಶತಕೋಟಿ ಡಾಲರ್ ಸಂಪತ್ತನ್ನು ಕಳೆದುಕೊಂಡಿದ್ದಾರೆ.
ಮಾರ್ಕ್ ಜುಕರ್ ಬರ್ಗ್ ಸಂಪತ್ತಿನಲ್ಲಿ ಶೇಕಡ 12 ರಷ್ಟು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ಫೆಡರಲ್ ರಿಸರ್ವ್ ತನ್ನ ಹಣಕಾಸು ನೀತಿಯನ್ನು ಬಿಗಿಗೊಳಿಸುತ್ತಿರುವುದು ಮತ್ತು ಹಣದುಬ್ಬರ ಇದಕ್ಕೆ ಕಾರಣವಾಗಿದೆ. ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಕುಸಿಯುತ್ತಿದ್ದು, ಆಗರ್ಭ ಸಿರಿವಂತ
ಉದ್ಯಮಿಗಳಿಗೆ ನಷ್ಟವಾಗುತ್ತಿದೆ.

ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆ ಮುಂದೂಡಲು ಸಚಿವರ ಸೂಚನೆ

0

ಫೆಬ್ರವರಿಯಲ್ಲಿ ಆರಂಭವಾಗಬೇಕಿದ್ದ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿಗೆ ಸಚಿವ ಡಾಕ್ಟರ್ ಸುಧಾಕರ್ ಅವರು ಸೂಚಿಸಿದ್ದಾರೆ.
ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾದಾಗ ಆನ್ ಲೈನ್ ನಲ್ಲಿ ತರಗತಿಗಳು ನಡೆಸಿದ್ದರಿಂದ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಪರೀಕ್ಷೆ ಮುಂದೂಡಬೇಕೆಂದು ವಿದ್ಯಾರ್ಥಿಗಳು ಕಳೆದ ವಾರ ವರ್ಚ್ಯುವಲ್ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಸಚಿವರು, ರಾಜೀವ್ ಗಾಂಧಿ ಆರೋಗ್ಯ ವಿವಿ ಅಧೀನದ ವೈದ್ಯಕೀಯ ಕಾಲೇಜುಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಯ ಆರಂಭವಾದದ್ದು ಮೇ ತಿಂಗಳಲ್ಲಿ. ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಿದ್ದ ಕಾರಣ ಜುಲೈವರೆಗೆ ಪಾಠಗಳು ಆನ್ ಲೈನ್ ನಲ್ಲಿ ನಡೆದಿವೆ. ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಸಹ ಆಗಿರುವುದಿಲ್ಲ. ಅಲ್ಲದೆ ಅಂತಿಮ ವರ್ಷದ ವಿದ್ಯಾರ್ಥಿಗಳು ಎರಡು ತಿಂಗಳು ಕಾಲ ಕೋವಿಡ್ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ತಿಳಿಸಿದರು. ತರಗತಿಗಳು ವಿಳಂಬವಾಗಿ ಆರಂಭವಾಗಿರುವುದರಿಂದ ಪರೀಕ್ಷೆಯಲ್ಲಿ ಮುಂದೂಡಬೇಕು ಎಂದು ಹೇಳಿದರು.

ಬಜೆಟ್ ಮಂಡನೆ : ವಿಪಕ್ಷ ನಾಯಕರ ಪ್ರತಿಕ್ರಿಯೆ

0

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಬಜೆಟನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶೂನ್ಯ ಮೊತ್ತದ ಬಜೆಟ್ ಎಂದು ಕರೆದಿದ್ದಾರೆ. ಇದರಲ್ಲಿ ವೇತನ ಪಡೆಯುವವರಿಗೆ, ಮಧ್ಯಮವರ್ಗದವರಿಗೆ ಮತ್ತು ಬಡವರಿಗೆ ಏನು ಇಲ್ಲ ಎಂದು
ಟೀಕಿಸಿದ್ದಾರೆ.

ಇನ್ನು ಹಲವು ಕಾಂಗ್ರೆಸ್ ನಾಯಕರು ಇದೊಂದು ಲಾಲಿಪಾಪ್ ಬಜೆಟ್ ಎಂದು ಕರೆದಿದ್ದಾರೆ.

ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಬಜೆಟ್ ಭಾಷಣವನ್ನು ಎಫ್ ಎಂ ಓದಿದ ಅತ್ಯಂತ ಬಂಡವಾಳಶಾಹಿ ಭಾಷಣ ಎಂದು ಕುಟುಕಿದ್ದಾರೆ.

ಯಾರೊಬ್ಬರೂ ಇಂಥದ್ದನ್ನು ಮಂಡಿಸಿರಲಿಲ್ಲ. ಬಜೆಟ್ ಭಾಷಣದ ಆರನೇ ಪ್ಯಾರಾದಲ್ಲಿ ಮಾತ್ರ ಎರಡು ಬಾರಿ ಬಡವರು ಎಂಬ ಪದ ಬಳಕೆಯಾಗಿದೆ. ಇದಕ್ಕಾಗಿ ಹಣಕಾಸು ಸಚಿವರಿಗೆ ಕೃತಜ್ಞತೆ ಸಲ್ಲಿಸುವ ಎಂದು ಚುಚ್ಚಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಚಿದಂಬರಂ, ಈ ದೇಶದ ಜನ ಬಂಡವಾಳಶಾಹಿ ಬಜೆಟ್ ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.

ಹಣಕಾಸು ಸಚಿವರು ಹೊಸ ಬಜೆಟ್ ನಲ್ಲಿ ಯಾವುದೇ ಪರಿಹಾರ ಕ್ರಮಗಳನ್ನು ಘೋಷಿಸದೆ ಸಂಬಳ ಪಡೆಯುವ ವರ್ಗಕ್ಕೆ ದ್ರೋಹವೆಸಗಿದ್ದಾರೆ. ಭಾರತದ ಸಂಬಳ ಪಡೆಯುವ ವರ್ಗ ಮತ್ತು ಮಧ್ಯಮ ವರ್ಗವು ಸಾಂಕ್ರಾಮಿಕ ರೋಗದ ಸಮಯದಲ್ಲಿ ಪರಿಹಾರ, ಸರ್ವಾಂಗೀಣ ವೇತನ ಕಡಿತ ಮತ್ತು ಹಣದುಬ್ಬರ ಮುರಿಯುವ ನಿರೀಕ್ಷೆಯಲ್ಲಿದ್ದರು. ನೇರ ತೆರಿಗೆ ಕ್ರಮಗಳಲ್ಲಿ ಎಫ್ ಎಂ ಮತ್ತು ಪ್ರಧಾನಿ ಮತ್ತೆ ತೀವ್ರ ನಿರಾಸೆ ಗೊಳಿಸಿದ್ದಾರೆ, ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರು ಹೇಳಿದ್ದಾರೆ.

ಕ್ರಿಫ್ಟೋಕರೆನ್ಸಿ ಇಂದಿನಿಂದ ಕಾನೂನುಬದ್ಧ ವಾಗಿದೆ ಎಂದು ನಿರ್ಮಾಣ ವಾಸ್ತವವಾಗಿ ಘೋಷಿಸಿದ್ದಾರೆ. ಆದರೆ ಇದ್ಯಾವುದು ದೇಶದ 99.99% ಜನರಿಗೆ ಪ್ರಯೋಜನಕಾರಿಯಲ್ಲ ಎಂದು ಹೇಳಿದರು. ರಾಜ್ಯಸಭೆಯಲ್ಲಿ ಉಪ ನಾಯಕರಾಗಿರುವ ಆನಂದ ಶರ್ಮಾ, ಉದ್ಯೋಗ ನಿರ್ಮಾಣ, ಮಧ್ಯಮವರ್ಗ ಮತ್ತು ಬಡವರಿಗೆ ಹಲವು ಬಗೆಯ ಪರಿಹಾರದ ನಿರೀಕ್ಷೆಯಲ್ಲಿದ್ದರು. ಆದರೆ ಯಾವುದೂ ಈಡೇರಿಲ್ಲ ಎಂದು ಟೀಕಿಸಿದ್ದಾರೆ.

ಕೃಷಿಗೆ ಎಷ್ಟು ಉತ್ತೇಜನ?

0

ಕೊರೋನಾ ತಂದ ಬದಲಾವಣೆಯಿಂದ ಈ ಬಾರಿ ಬಜೆಟ್ ಮಂಡನೆಯ ಸ್ವರೂಪದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ಮೊಟ್ಟಮೊದಲ ಬಾರಿಗೆ ಬಜೆಟ್ ಮುದ್ರಣ ಗೊಳ್ಳುತ್ತಿಲ್ಲ. ಇದರ ಬದಲಾಗಿ ಕೇಂದ್ರ ಸರ್ಕಾರದ ಯೂನಿಯನ್ ಬಜೆಟ್ ಆಪ್ನಲ್ಲಿ ಸಂಸತ್ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ.

ಕೇಂದ್ರ ಸರ್ಕಾರ ಕೃಷಿಯಲ್ಲಿ ಡ್ರೋನ್ ಗಳ ಬಳಕೆ, ರಾಸಾಯನಿಕ ಮುಕ್ತ ಸಹಜ ಕೃಷಿ ಪದ್ಧತಿ ಮತ್ತು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲಿದೆ.
ಹಂತಹಂತವಾಗಿ ಕನಿಷ್ಠ ಬೆಂಬಲ ಬೆಲೆ ರದ್ದಾಗಲಿದೆ ಎನ್ನುವ ರೈತ ಸಂಘಟನೆಗಳ ಅನುಮಾನ ನಿವಾರಿಸುವ ಪ್ರಯತ್ನವನ್ನು ಮುಂಗಡಪತ್ರದಲ್ಲಿ ನೀಡಲಾಗಿದೆ.

ಏಪ್ರಿಲ್ 2022 ರಿಂದ ಮಾರ್ಚ್ 2023ರ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮೂಲಕ ಭತ್ತ ಮತ್ತು ಗೋಧಿ ಖರೀದಿಸಲು 2.37 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಘೋಷಿಸಲಾಗಿದೆ. ಎಂ ಎಸ್ ಪಿ ಮೂಲಕ ಖರೀದಿಸಲಾದ ಬೆಳೆಗಳಿಗೆ ಪ್ರತಿಯಾಗಿ ರೈತರ ಖಾತೆಗಳಿಗೆ ಅನುದಾನವನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ವಿಧಾನಸಭೆ ಚುನಾವಣೆ ನಡೆಸಲಿರುವ ಉತ್ತರ ಪ್ರದೇಶ ಮತ್ತು ಪಂಜಾಬ್ ಗಳಲ್ಲಿ ಭತ್ತ, ಗೋಧಿ ಪ್ರಮುಖ ಬೆಳೆಗಳಾಗಿರುವುದು ವಿಶೇಷ. ದೇಶದಾದ್ಯಂತ 2021-22 ನೇ ಸಾಲಿನಲ್ಲಿ 163 ಲಕ್ಷ ರೈತರಿಂದ 1,208 ಲಕ್ಷ ಟನ್ ಆಹಾರ ಧಾನ್ಯಗಳನ್ನು ಖರೀದಿಸಲಾಗಿದೆ.

ಸರ್ವರನ್ನು ಒಳಗೊಂಡ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಗುರಿಯಾಗಿದೆ. ಅದರ ಭಾಗವಾಗಿಯೂ ಕೃಷಿಯಲ್ಲಿ ಕಿಸಾನ್ ಡ್ರೋನ್ ಗಳ ಬಳಕೆಗೆ ಉತ್ತೇಜನ ನೀಡಲಾಗಿದೆ. ಬೆಳೆ ಮೌಲ್ಯಮಾಪನ, ಭೂದಾಖಲೆಗಳ ಡಿಜಿಟಲೀಕರಣ ಮತ್ತು ಕೀಟನಾಶಕಗಳ ಸಿಂಪಡಣೆ ಗೆ ಈ ಡ್ರೋನ್ ಗಳನ್ನು ಬಳಸುವುದು ಸರ್ಕಾರದ ಆಶಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

ಇದರ ಜೊತೆಗೆ ಗ್ರಾಮ ರಸ್ತೆ ನಿರ್ಮಾಣಕ್ಕೂ ಹೆಚ್ಚು ಒತ್ತನ್ನು ನೀಡಲಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ನೀಡುವ ಅನುದಾನವನ್ನು ಶೇ. 36 ರಷ್ಟು ಹೆಚ್ಚಳ ಮಾಡಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಈ ಯೋಜನೆಗೆ 19 ಸಾವಿರ ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ. ಮತ್ತೊಂದು ವಿಶೇಷವೇನೆಂದರೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ನ‌ ಗ್ರಾಮೀಣ ಪ್ರದೇಶದ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. 2021-22 ನೇ ಸಾಲಿನಲ್ಲಿ ಯೋಜನೆಗೆ 14,000 ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ಆದರೆ ಗ್ರಾಮೀಣ ಅಭಿವೃದ್ಧಿ ಸಚಿವಾಲಯಕ್ಕೆ ನಿಗದಿಪಡಿಸಿರುವ ಅನುದಾನದಲ್ಲಿ ಶೇ.11 ರಷ್ಟು ಕಡಿತ ಮಾಡಲಾಗಿದೆ. ಇದರಿಂದ ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯಗಳಿಗೆ ನೀಡುವ ಅನುದಾನದಲ್ಲಿ ಗಣನೀಯವಾಗಿ ಕಡಿತವಾಗಲಿದೆ.

ಇದರೊಂದಿಗೆ ಜಲಶಕ್ತಿ ಅನುದಾನ ಹೆಚ್ಚಳವಾಗಿದೆ. ಜಲಶಕ್ತಿ ಸಚಿವಾಲಯಕ್ಕೆ 86,189 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ.

2023ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹ ರೂಪಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದರ ಜೊತೆಗೆ ಸಿರಿಧಾನ್ಯಗಳಿಗೆ ಕಟಾವು ನಂತರದ ಸಂಸ್ಕರಣೆಗೆ ಬೆಂಬಲ ನೀಡುವ ಯೋಜನೆಗಳನ್ನು ರೂಪಿಸಲಾಗುತ್ತದೆ. ಇನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಗಳಿಗೆ 6,75,000 ಕೋಟಿ ರೂಪಾಯಿ, ಬೆಳೆ ವಿಮೆ ಯೋಜನೆಗೆ 15,500 ಕೋಟಿ ರೂಪಾಯಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಗೆ 10,433 ಕೋಟಿ ರೂಪಾಯಿ , ಬೆಲೆ ಬೆಂಬಲ ಯೋಜನೆಯಲ್ಲಿ ಮಾರುಕಟ್ಟೆ ಮಧ್ಯಪ್ರವೇಶಕ್ಕೆ 1,500 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.

ಕೃಷಿ ಸಾಲವನ್ನು ಗಣನೀಯವಾಗಿ ಹೆಚ್ಚು ಮಾಡಲಾಗಿದೆ. ಕೃಷಿ ಸಾಲದ ಪ್ರಮಾಣವನ್ನು 16.50 ಲಕ್ಷ-ಕೋಟಿ ರೂಪಾಯಿಗಳಿಂದ 18 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ನಿಗದಿಯಾಗಿದ್ದ ಮೊತ್ತದ ಪೈಕಿ ಶೇ.75 ರಷ್ಟು ಮೊತ್ತವನ್ನು ರೈತರಿಗೆ ವಿತರಿಸಲಾಗುತ್ತದೆ ಅದರಲ್ಲೂ ಮೊದಲ ತ್ರೈಮಾಸಿಕದಲ್ಲಿಯೇ 7.36 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗಿದೆ ಎಂದು ಬಜೆಟ್ ಮಂಡನೆ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯೆ

0

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಅವರು ಈ ಬಜೆಟ್ ಜನ ವಿರೋಧಿ, ಕಾರ್ಪೊರೇಟ್ ಸ್ನೇಹಿ ಬಜೆಟ್ ಎಂದು
ಕಿಡಿ ಕಾರಿದರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ,ಬಜೆಟ್ ಮಂಡನೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ರೇಖಾ ರಂಗನಾಥ್, ಯಮುನಾ ರಂಗೇಗೌಡ ಆಡಳಿತ ಉಸ್ತುವಾರಿಗಳಾದ ಚಂದ್ರಬೋಪಾಲ್ ,ಸಾಮಾಜಿಕ ಜಾಲತಾಣ ರಾಜ್ಯ ಉಪಾಧ್ಯಕ್ಷರಾದ ಸೌಗಂಧಿಕಾ ರಘುನಾಥ್ , ಜಿಲ್ಲಾ ಪದಾಧಿಕಾರಿಗಳಾದ ಚಂದ್ರಶೇಖರ್ ಚಂದನ್ ಸಾಮಾಜಿಕ ಜಾಲತಾಣದ ಜಿಲ್ಲಾ ಪದಾಧಿಕಾರಿಗಳಾದ ಸುಹೈಲ್ ಸಂಜಯ್ ಕಶ್ಯಪ್ ಹಾಗೂ ಅರುಣ್ ರಾವ್ ಅವರು ಉಪಸ್ಥಿತರಿದ್ದರು.

ಬಜೆಟ್ ನಲ್ಲಿ ಗಮನ ಸೆಳೆದ ಡಿಜಿಟಲ್ ವಿಶ್ವವಿದ್ಯಾನಿಲಯ

2

ಪ್ರತೀವರ್ಷದ ಬಜೆಟ್ ಎಂದರೆ ಯಾವ ಯಾವುದರ ಮೇಲೆ ತೆರಿಗೆ ಹಾಕಲಾಗುತ್ತದೆ?. ದೇಶದ ರಕ್ಷಣಾ ವೆಚ್ಚಕ್ಕೆ ಎಷ್ಟು ಮೀಸಲು?.ದುಡಿಯುವ ವರ್ಗಗಳಿಗೆ ಆದಾಯದಲ್ಲಿ ತೆರಿಗೆ ಹಂತಗಳನ್ನ ವಿಸ್ತರಿಸುತ್ತದೆಯೆ? ಪಟ್ರೋಲು ಡಿಸೆಲ್ಲು ರೇಟು ಇಳಿಸ್ತಾರ? ಕೃಷಿಕರು, ವ್ಯಾಪಾರಸ್ಥರು,ಗೃಹಿಣಿಯರು …ಹೀಗೆ ಅನೇಕರು ತಮ್ಮದೇ ನಿರೀಕ್ಷೆಗಳನ್ನ ಇಟ್ಟುಕೊಂಡಿರುವುದು ಸಹಜ.

ಆದರೆ ಈವರ್ಷ ವಿತ್ತ ಸಚಿವರು ಮಂಡಿಸಿದ ಬಜೆಟ್ ಮೇಲ್ನೋಟಕ್ಕೆ ಇದಾವುದರ ಬಗ್ಗೆಯೂ ಉಲ್ಲೇಖ ಮಾಡಿಲ್ಲ. ಯಾವಾಗಲೂ ಚುನಾವಣೆ,ವೋಟುಗಳ ದೃಷ್ಟಿಯಿಟ್ಟುಕೊಂಡು ಮಂಡಿಸುವ ಹಿನ್ನೆಲೆ ನೋಡಿದರೆ ಸಾಮಾನ್ಯರ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ.
ಹಾಗಂತ ಇದು ಹುಳಿದ್ರಾಕ್ಷಿಯೆ ? ಎಂದು ಹೇಳಲೂ ಸಾಧ್ಯವಿಲ್ಲ.

ಕೋವಿಡ್ ನಿಂದ ತತ್ತರಿಸಿದ ಆರ್ಥಿಕತೆ ಚೇತರಿಸಿಕೊಳ್ಳಲೂ ಸಮಯ ಬೇಕಿದೆ.
ಅದರ ಬಗ್ಗೆ ಈಗಾಗಲೇ ನಡುನಡುವೆ ಸರ್ಕಾರ ಪ್ರಸ್ತಾಪಿಸಿ ಒಂದಿಷ್ಡು ಆರ್ಥಿಕ
ಬೆಂಬಲ ನೀಡಿದೆ.ಈ ಬಜೆಟ್ ನಲ್ಲಿ ಮತ್ತೆ ಹೊಸದನ್ನ ನೋಡಬಹುದೆ?
ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ. ಡಿಜಿಟಲ್ ಬ್ಯಾಂಕ್,ಡಿಜಿಟಲ್ ಕರೆನ್ಸಿ
ಡಿಜಿಟಲ್ ವಿಶ್ವವಿದ್ಯಾನಿಲಯ…ಹೀಗೆ ನವೀನ ಪ್ರಸ್ತಾಪ ನಮ್ಮ ಗಮನ ಸೆಳೆಯುತ್ತದೆ. ಮಿಕ್ಕ ಆಯವ್ಯಯದ ಬಗ್ಗೆ ತೆರಿಗೆ ,ಆರ್ಥಿಕ ತಜ್ಞರು ನಮ್ಮ ಓದುಗರ,ವೀಕ್ಷಕರ ಗಮನ ಸೆಳೆಯುವ ಪ್ರತಿಕ್ರಿಯೆ ನೀಡಿದ್ದಾರೆ.

ನಾವೀಗ ಡಿಜಿಟಲ್ ಪ್ರಸ್ತಾಪಕ್ಕೆ ಬರೋಣ.ಈಗಾಗಲೇ ಕೋವಿಡ್ ಲಾಕ್ ಡೌನ್ ನಮಗೆ ಮೊಬೈಲ್ ಮೂಲಕ ಡಿಜಿಟಲ್ ಪಾವತಿಯನ್ನ ಬಲವಂತವಾಗಿ
ಮೂಗು ಹಿಡಿದು ಕಲಿಸಿಬಿಟ್ಟಿದೆ. ಅದರ ಸಂಗತಿ ಬಂದಾಗ ಸೊಪ್ಪು ಮಾರುವವರಿಗೆ… ಹಣ್ಣುಹಂಪಲು ಮಾರುವವರಿಗೆ ,ದಿನಸಿ,ಹೋಟಲ್ಲು ಗಳಲ್ಲಿ ಎಂಥ ಡಿಜಿಟಲ್ ಪೇಮೆಂಟು? ಅಂತ ನಗೆಯಾಡಿಕೊಂಡಿದ್ದೆವು. ಆದರೆ ನಾವೀಗ ಡಿಜಿಟಲ್ ಸಾಕ್ಷರರಾಗಿದ್ದೇವೆ ಅಂದುಕೊಳ್ಳಬಹುದು.( ಅದರಲ್ಲೂ
ಮೋಸ ಮಾಡುವ ಆ್ಯಪ್ ಗಳೂ ಬಂದಿವೆ .ಎಚ್ಚರದಿಂದಿರೋಣ)

ಲಾಕ್ ಡೌನ್ ನಿಂದ ನಮ್ಮ ಶಿಕ್ಷಣ ವ್ಯವಸ್ಥೆ ಅಸ್ತವ್ಯಸ್ತವಾಗಿ ನಿಯಂತ್ರಣ ಕಳೆದುಕೊಂಡಿತ್ತು.ಇನ್ನೂ ತಹಬದಿಗೆ ತರುತ್ತಿದ್ದಂತೆ ಕೋವಿಡ್…ಒಮಿಕ್ರಾನ್
ಸೋಂಕು ನಮ್ಮನ್ನ ಆತಂಕಕ್ಕೆ ತಳ್ಳಿಬಿಟ್ಟಿದೆ ಆದರೆ ಆನ್ ಲೈನ್ ಶಿಕ್ಷಣ ಕಲಿಕೆಗೆ ಮತ್ತೊಂದು ಆಯಾಮವನ್ನೇ ನೀಡಿತು. ನಾಲ್ಕು ಗೋಡೆಗಳ ,ಕ್ಲಾಸ್ ರೂಮ್ ಬೋಧನೆಗೆ ನಾವು ಹೊಂದಿಕೊಂಡು ಬಿಟ್ಟಿದ್ದೇವೆ. ಆದರೆ ಈ ಬದಲಿ ವ್ಯವಸ್ಥೆ ಜಿರ್ಣಿಸಿಕೊಳ್ಳಲು ಕಷ್ಟ ಸಾಧ್ಯವಾಗಿದೆ. ಆಂಥದ್ದರಲ್ಲೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಸಮಾಧಾನಕರ ನಡೆಸಲಾಯಿತು. ಆದರೆ ಕಳ್ಳಬೀಳುವ ವಿದ್ಯಾರ್ಥಿಗಳ ಮನೋಧರ್ಮಕ್ಕೆ ಇದರಲ್ಲಿ ಶಿಸ್ತು ಹೇರುವ
ಕೆಲಸವಾಗುವುದಿಲ್ಲ. ನಮ್ಮ ತಜ್ಞರು ಅದಕ್ಕೆ ಮತ್ತೊಂದು ಪರಿಹಾರ ಹುಡುಕುತ್ತಾರೆ.

ಈ ವರ್ಷದ ಬಜೆಟ್ ನಲ್ಲಿ 200 ಟೀವಿ ಚಾನಲ್ ಗಳಿರುವ ಡಿಜಿಟಲ್ ವಿವಿ
ಸ್ಥಾಪನೆ ಪ್ರಸ್ತಾಪವಿದೆ.” ಒನ್ ಕ್ಲಾಸ್ ಒನ್ ಟೀವಿ ಚಾನಲ್”. ಈ ವ್ಯವಸ್ಥೆಯಲ್ಲಿ ಕೌಶಲ ಅಭಿವೃದ್ಧಿಗೆ ವರ್ಚುವಲ್ ಲ್ಯಾಬ್,ಇ-ಲ್ಯಾಬ್ ,
ಇ- ಕಂಟೆಂಟ್ ಇವೆಲ್ಲವೂ ಅಡಕವಾಗಿವೆ.
ಟೀವಿ ಅಂದಾಕ್ಷಣ ಮನೋರಂಜನೆ , ಸುದ್ದಿ ಸಮಾಚಾರ ಎಂಬ ಅರ್ಥಬರುವ
ಕಲ್ಪನೆ ಈಗ ಎಲ್ಲರ ಮನದಲ್ಲಿ ಮೂಡುವ ಚಿತ್ರ.ಆದರೆ ಡಿಜಿಟಲ್ ವಿವಿ ವಿನ್ಯಾಸದ ಬಗ್ಗೆ ನಮ್ಮ ಕಲ್ಪನೆ ಗರಿಗೆದರಿದರೆ ಅದರ ವ್ಯಾಪ್ತಿ ಇನ್ನಷ್ಟೂ
ಶೈಕ್ಷಣಿಕ ಹಿನ್ನೆಲೆಯಲ್ಲಿ ವಿಸ್ತರಿಸಲು ಸಾಧ್ಯವಿದೆ. ಮುಖ್ಯವಾಗಿ ನಮ್ಮ ಗಮನ ಮಕ್ಕಳನ್ನ ಪೋಷಕರಾದ ನಾವುಗಳು ಮೊಬೈಲ್,ಲ್ಯಾಪ್ ಟಾಪ್ ಕಂಪ್ಯೂಟರ್ ಗಳ ಪಾಸಿಟಿವ್ ಬಳಕೆಯ ಬಗ್ಗೆ ಪ್ರೇರಣೆ ನೀಡಲು ಪ್ರಯತ್ನಿಸಬೇಕಿದೆ.ಅದು ನಮ್ಮ ಹೊಣೆಯೂ ಹೌದು.

ದೂರದ ಪ್ರಾತ್ಯಕ್ಷಿಕೆಗಳನ್ನ ಮನೆಯಲ್ಲೇ ನೋಡಿ ತಿಳಿದುಕೊಳ್ಳುವ ಸೌಲಭ್ಯ
ಶೈಕ್ಷಣಿಕ ಬೋಧನೆಗೂ ಪರಿಣಾಮಕಾರಿ.ಈಗ ನಮ್ಮ ಮಕ್ಕಳು ತಾಂತ್ರಿಕ ವಿಚಾರಗಳ ಬಗ್ಗೆ…ಅಂದರೆ ಮೊಬೈಲ್ , ಮಿಕ್ಸಿ, ರೋಬಟ್ ಮಾಪರ್,ಇತ್ಯಾದಿ. ವಿದ್ಯುನ್ಮಾನ ಉಪಕರಣದ ಇನ್ಸ್ಟಾಲೇಷನ್ ಬಗ್ಗೆ ತಕ್ಷಣ ಯು ಟ್ಯೂಬ್ ಮೊರೆ ಹೋಗಿ ಅಲ್ಲಿಂದ ಮಾಹಿತ ಪಡೆಯುತ್ತಾರೆ. ಇದೇ ಮನೋಧರ್ಮ ಕಲಿಉವ ಪಠ್ಯದ ಬಗ್ಗೆಯೂ ಪೂರಕವಾದರೆ ಡಿಜಿಟಲ್ ತರಗತಿಗಳು ಉಪಯುಕ್ತವಾಗುತ್ತವೆ.
ಇಲ್ಲಿ ” ಇ-ಕಂಟೆಂಟ್ ” ಸಿದ್ಧಪಡಿಸುವವರ ಪ್ರಧಾನ ಪಾತ್ರವಿದೆ. ಪಠ್ಯ ವಿಷಯಗಳನ್ನ ಇಂಟರ್ ನೆಟ್, ಮೊಬೈಲ್, ಟೀವಿ,ರೇಡಿಯೊ ಗಳಲ್ಲಿ ಡಿಜಿಟಲ್ ವಿನ್ಯಾಸ, ಭಾಷೆಯಲ್ಲಿ ಸಿದ್ಧಪಡಿಸುವ ಪರಿಶ್ರಮ
ಒಂದು ಕಲೆಗಾರಿಕೆ ಆಗಬೇಕಾಗುತ್ತದೆ. ಇದೊಂದು ಬೃಹತ್ ಸಂಯುಕ್ತ,ಸಾಮಾಜಿಕ,ಶೈಕ್ಷಣಿಕ ಹೊಣೆಗಾರಿಕೆ. ದೇಶದ ಎನ್ ಸಿ ಇ ಆರ್ ಟಿ
ಸಂಸ್ಥೆಯ ಪರಿಣಿತರ ಸೇವೆ ಬಹಳ ಮುಖ್ಯ. ಆ ಸಂಸ್ಥೆಯೇ ಈ ಪಠ್ಯದ ವಿನ್ಯಾಸ ರೂಪಿಸುವಲ್ಲಿ ಒಂದು ದೀರ್ಘಕಾಲೀನ ಅಲ್ಲದಿದ್ದರೂ ನಿರ್ದಿಷ್ಟ ಕಾಲಾವಧಿಯಲ್ಲಾದರೂ ರೂಪಸಬಹುದು. ಏಕೆಂದರೆ ಬಿಸಿ ಇದ್ದಾಗಲೇ ಕಬ್ಬಿಣವನ್ನ ತಟ್ಟಿ ನಮಗೆ ಅವಶ್ಯದ ಆಕಾರಕ್ಕೆ ತರಬಹುದು.

ದೇಶದ ಪರಿಣತರ ಜ್ಞಾನ,ಅನುಭವ ದೇಶದ ತುಂಬಾ ಹಂಚಲ್ಪಡುತ್ತದೆ.
ಎಲ್ಲ ಭೌಗೋಳಿಕ, ಸಾಮಾಜಿಕ ,ಸಾಂಸ್ಕೃತಿಕ ಮನಸ್ಸು ಮಿಲನಗೊಂಡು
ಈ – ಕಂಟೆಂಟ್ ನಿರ್ಮಿಸುವುದರಿಂದ ಅಪೂರ್ವ ಕೊಡುಗೆ ನೀಡಿದಂತಾಗುತ್ತದೆ.

ಸಾಮಾನ್ಯರ ನಿರೀಕ್ಷೆ ಹುಸಿ ಭವ್ಯ ಭಾರತಕ್ಕೆ ಖುಷಿ

0

2021 -22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಒಟ್ಟು ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ.
3,030 ಕೋಟಿ ರೂ. ಹವಾಮಾನ ಬದಲಾವಣೆ, ಅರಣ್ಯ ಹಾಗೂ ಪರಿಸರ ಇಲಾಖೆಗೆ ನೀಡಲಾಗಿರುವ ಅನುದಾನ. ಸ್ವಚ್ಛ ಇಂಧನ, ಅಭಿವೃದ್ಧಿ ಹಾಗೂ ಬಳಕೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
54,873 ಕೋಟಿ ರೂ. ಭೂ ವಿಜ್ಞಾನ ಸಚಿವಾಲಯಕ್ಕೆ ನೀಡಲಾಗಿರುವ ಅನುದಾನವಾಗಿದೆ. ಕಳೆದ ವರ್ಷಕ್ಕಿಂತ 2684 ಕೋಟಿ ರೂ. ಹೆಚ್ಚಿನ ಅನುದಾನ ನೀಡಲಾಗಿದೆ.
73000 ಕೋಟಿ ರೂ. ಮನರೇಗಾ ಯೋಜನೆಗೆ ನೀಡಲಾಗಿರುವ ಅನುದಾನವಾಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 25.51ರಷ್ಟು ಕಡಿಮೆ ಅನುದಾನವನ್ನು ನೀಡಲಾಗಿದೆ.
ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಅಂಗವಾಗಿ ಅಭಿವೃದ್ಧಿಹೊಂದುತ್ತಿರುವ ಅನಿಮೇಷನ್, ವಿಶುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ ಗಳ ಉತ್ತೇಜನ ಅಗತ್ಯವಾದ ಉನ್ನತ ಮಟ್ಟದ ಕಾರ್ಯಪಡೆ ರಚನೆಗೆ ಬಜೆಟ್ ನಲ್ಲಿ ಸರ್ಕಾರ ಒತ್ತು ನೀಡುವ ಸುಳಿವು ಕೊಟ್ಟಿದೆ.
ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಬಹಳ ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯ ಬಜೆಟ್ ನಲ್ಲಿ ಈಶಾನ್ಯ ರಾಜ್ಯಗಳಿಗಾಗಿಯೇ ಸೀಮಿತವಾದ 1500 ಕೋಟಿ ರೂ. ಮೌಲ್ಯದ ಹೊಸ ಯೋಜನೆ ಪಿಎಂ-ದೇವೈನ್ (PM-DevINE) ಘೋಷಣೆ ಮಾಡಿಸಿದ್ದಾರೆ.

ಸಾಧನೆ ಆಧರಿತ ಪ್ರೋತ್ಸಾಹಧನ ಯೋಜನೆಯ ಭಾಗವಾಗಿ 19,500 ಕೋಟಿ ರೂ. ಹೆಚ್ಚುವರಿ ವೆಚ್ಚ ಮಾಡಿ ಮುಂದಿನ ಎಂಟು ವರ್ಷಗಳಲ್ಲಿ 280 ಗಿಗಾವ್ಯಾಟ್ ಸೌರ ಇಂಧನ ಸಾಮರ್ಥ್ಯ ಉತ್ಪಾದನೆಗೆ ಸಿದ್ಧತೆ ನಡೆಯಲಿದೆ.
ಮಹಾನಗರಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ, ತ್ರಿಚಕ್ರವಾಹನ ಬಳಕೆಗೆ ಪ್ರೋತ್ಸಾಹ ನೀಡಲಾಗಿದೆ. ಈ ಮೂಲಕ ಇವಿ ಬ್ಯಾಟರಿ ಸ್ಟ್ಯಾಂಪಿಂಗ್ ಗೆ ಒತ್ತು ನೀಡುವ ಘೋಷಣೆ ಮಾಡಿದೆ.
ಬಜೆಟ್ ಮಂಡನೆ ಕುರಿತು ಪ್ರಮುಖರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದು ಮುಂಗಾಣ್ಕೆಯ ಉತ್ತಮ ಬಜೆಟ್. ಮೋದಿ ನಾಯಕತ್ವದಲ್ಲಿ ಭಾರತದ ಆರ್ಥಿಕತೆಯನ್ನು ವಿಶ್ವದಲ್ಲೇ ಮುಂಚೂಣಿಗೆ ನಿಲ್ಲಿಸಲು ಸಹಾಯಕ. ಬಜೆಟ್ ಗಾತ್ರ ವನ್ನು 39.45 ಲಕ್ಷ ಕೋಟಿಗೆ ಏರಿಸುವ ಮೂಲಕ ಭಾರತೀಯ ಆರ್ಥಿಕತೆಯ ವೇಗವನ್ನು ಬಜೆಟ್ ಸಾಬೀತುಪಡಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.

ನವೋದ್ಯಮಗಳು ಮತ್ತು ಖಾಸಗಿ ಘಟಕಗಳಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಶೇ‌.25ರಷ್ಟನ್ನು ಮೀಸಲಿಡುವ ಪ್ರಸ್ತಾಪವನ್ನು ಮಂಡಿಸಲಾಗಿದೆ. ಇದೊಂದು ಅತ್ಯುತ್ತಮ ಕ್ರಮ. ರಕ್ಷಣಾ ವಲಯವನ್ನು ಸ್ಥಳೀಯವಾಗಿ ರೂಪಿಸಿದ ಸಾಧನ ಸಲಕರಣೆಗಳಿಂದ ಬಲ ಗೊಳಿಸಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದ್ದಾರೆ.

ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿರುವುದು ದಿಟ್ಟ ಹೆಜ್ಜೆ. ಶಿರಾಡಿ ಘಾಟ್ ಹೆದ್ದಾರಿ ಉನ್ನತೀಕರಣಕ್ಕೆ 1,200 ಕೋಟಿ ರೂ., ಬಾನಾಪುರ-ಗದ್ದನಕೇರಿ ಹೆದ್ದಾರಿ ವಿಸ್ತರಣೆಗೆ 173 ಕೋಟಿ ರೂ. ಘೋಷಿಸಿರುವುದು ನಮ್ಮ ರಾಜ್ಯಕ್ಕೆ ನೀಡಿದ ಕಾಣಿಕೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ನಿರುದ್ಯೋಗ, ಹಣದುಬ್ಬರದಿಂದ ನಲುಗಿಹೋಗಿರುವ ಸಾಮಾನ್ಯ ಜನರಿಗೆ ಈ ಬಜೆಟ್ ಏನನ್ನೂ ಒದಗಿಸಿಲ್ಲ. ಇದೊಂದು ಪೆಗಾಸುಸ್ ಬೇಹುಗಾರಿಕೆ ಆರೋಪದಿಂದ ಮುನಿಸಿಕೊಳ್ಳಲು ತುಪ್ಪ ಸವರುವ ಮುಂಗಡಪತ್ರವಷ್ಟೇ.ಶಬ್ದಾಡಂಬರದಿಂದ ಯಾವ ಸಾಧನೆಯೂ ಆಗದು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಿಳಿಸಿದ್ದಾರೆ.

ನಿಜಕ್ಕೂ ಇದೊಂದು ನಿರಾಶಾದಾಯಕ ಬಜೆಟ್. ಜನಸಾಮಾನ್ಯರಿಗೆ ಕಿಂಚಿತ್ತೂ ನೆರವು ನೀಡಿಲ್ಲ.ಕೊರೊನಾ ಕಾಲಘಟ್ಟದ ಈ ಸಂದರ್ಭದಲ್ಲಿ ಭಾರಿ ನಿರೀಕ್ಷೆಗಳೇ ಇತ್ತು. ಆದರೆ ಯಾರಿಗೂ ಬಲವನ್ನೂ ನೀಡಿಲ್ಲ. ಯಾವ ವಲಯದಲ್ಲೂ ದರವನ್ನು ಕಡಿಮೆ ಮಾಡಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

Shimoga News – Wednesday, 1 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Shimoga News
Send a Whatsapp message ‘Start‘ to this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಗುಜರಾತ್ ಮತ್ತು ದೆಹಲಿ ಜಯದ ಮುನ್ನಡೆ

0

ರೇಡರ್ ಗಳಾದ ಅಜಯ್ ಕುಮಾರ್ ಮತ್ತು ಪ್ರದೀಪ್ ಕುಮಾರ್ ಅವರ ಸೂಪರ್ 10 ಅಂಕಗಳ ಬರದಿಂದ ಗುಜರಾತ್ ಜಯೆಂಟ್ಸ್ ತಂಡ ಪ್ರೊ ಕಬ್ಬಡ್ಡಿ ಲೀಗ್ 8ನೇ ಆವೃತ್ತಿಯ 84ನೇ ಪಂದ್ಯದಲ್ಲಿ ಬಲಿಷ್ಠ ಹರಿಯಾಣ ಸ್ಟೀಲರ್ಸ್ ಗೆ ಆಘಾತ ನೀಡಿ ಟೂರ್ನಿಯಲ್ಲಿ ನಾಲ್ಕನೇ ಗೆಲುವು ದಾಖಲಿಸಿತು.

ವೈಟ್ ಫೀಲ್ಡ್ ನ ಶೆರಾಟಾನ್ ಗ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಗುಜರಾತ್ 32 ರಿಂದ 26 ಅಂಕಗಳ ಅಂತರದಿಂದ ಹರಿಯಾಣ ತಂಡವನ್ನು ಪರಾಭವಗೊಳಿಸಿತು. ಈ ಸೋಲಿನಿಂದಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ವಿಕಾಸ್ ಕಂಡೋಲ ಸಾರ್ ಅಂತ್ಯದ ಸ್ಟೀಲರ್ಸ್ ತಂಡದ ಕನಸು ಭಗ್ನಗೊಂಡಿತು. ಸದ್ಯ ಆಡಿದ 15 ಪಂದ್ಯಗಳಲ್ಲಿ ಹರಿಯಾಣ 6 ಗೆಲುವಿನೊಂದಿಗೆ 43 ಅಂಕಗಳನ್ನು ಗಳಿಸಿಕೊಂಡಿದೆ. ಅತ್ತ ಡ್ರಾ ಮತ್ತು ಸೋಲುಗಳಿಂದ ಜರ್ಜರಿತಗೊಂಡಿರುವ ಗುಜರಾತ್ ಟೂರ್ನಿಯಲ್ಲಿ 4ನೇ ಜಯಗಳಿಸಿ ಒಟ್ಟಾರೆ 33ಅಂಕ ಸಂಪಾದಿಸಿತು.

ಪಂದ್ಯದ ಆರಂಭದಿಂದಲೇ ರೇಂಡಿಂಗ್ ಮತ್ತು ಟ್ಯಾಕಲ್ ನಲ್ಲಿ ಮೇಲುಗೈ ಸಾಧಿಸಿದ ಗುಜರಾತ್ ತಂಡ ಪ್ರಥಮಾರ್ಧದ ಮುಕ್ತಾಯಕ್ಕೆ 19ರಿಂದ 12 ರಲ್ಲಿ ಅಂತರ ಕಾಯ್ದುಕೊಂಡಿತು. ಆದರೆ ಮೊದಲ ಅವಧಿಯಲ್ಲಿ ದೊಡ್ಡ ಅಂತರದ ಹಿನ್ನಡೆ ಅನುಭವಿಸಿದ್ದ ಕಾರಣ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೋತ ತಂಡದ ಪರ ಮೀತು 8 ಅಂಕ ಗಳಿಸಿದರು.

ಕೊನೆಯವರೆಗೂ ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಅಂತಿಮ ಕ್ಷಣದ ಒತ್ತಡ ವನ್ನು ಸಮರ್ಥವಾಗಿ ನಿಭಾಯಿಸಿದ ದಬಾಂಗ್ ದೆಹಲಿ ತಂಡ 36 ರಿಂದ 30 ಅಂಕಗಳ ಅಂತರದಿಂದ ಯು ಮುಂಬಾ ತಂಡವನ್ನು ಹಣಿದು ಪೂರ್ಣ 55 ಅಂಕ ಕಲೆಹಾಕಿತು. ಇದರೊಂದಿಗೆ ಒಟ್ಟಾರೆ 53 ಅಂಕಗಳಿಸಿದ ದೆಹಲಿ ತಂಡ, ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಭದ್ರ ಪಡಿಸಿಕೊಂಡಿತ್ತು. ಮೊದಲ ಅವಧಿಯಲ್ಲಿ ಉಭಯ ತಂಡಗಳು 12 ರಿಂದ 12 ರಲ್ಲಿ ಸಮಬಲದ ಹೋರಾಟ ನೀಡಿದವು. ದ್ವಿತೀಯಾರ್ಧ ವು ಅಂತಿಮ 4 ನಿಮಿಷದವರೆಗೂ ಸಂಬಳದಿಂದಲೇ ಕೂಡಿತ್ತು. ಆದರೆ ಕೊನೆಯಲ್ಲಿ ಕೌಶಲ್ಯಯುತ ಆಟ ಪ್ರದರ್ಶಿಸಿದ ದಬಾಂಗ್ ಆಟಗಾರರು 6 ಅಂಕಗಳಿಂದ ಮುಂಬಾ ಗೆ ಸೋಲಿಣಿಸುವಲ್ಲಿ ಯಶಸ್ವಿಯಾದರು. ಅಲ್ರೌಂಡರ್ ವಿಜಯ್,ದಬಾಂಗ್ ಪರ ಗರಿಷ್ಠ 12 ಅಂಕ ಗಳಿಸಿದರೆ, ಅಭಿಷೇಕ್ ಸಿಂಗ್ ಮುಂಬಾ ಪರ 8 ಅಂಕಗಳ ಕೊಡುಗೆ ನೀಡಿದ್ದಾರೆ