Sunday, November 8, 2026
Sunday, November 8, 2026
Home Blog Page 2011

ಬಲಿಷ್ಠ ಹಾಗೂ ಭವಿಷ್ಯ ಭಾರತದ ಬಜೆಟ್

0

2021 -22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ.
ಈ ಕುರಿತು ಆರ್ಥಿಕ ತಜ್ಞ ನಿವೃತ್ತ ಪ್ರಾಧ್ಯಾಪಕ ಬಿ.ಎಮ್. ಕುಮಾರಸ್ವಾಮಿಯವರು ಕೆಲೈವ್ ನ್ಯೂಸ್ ನೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಐದು ರಾಜ್ಯಗಳಲ್ಲಿ ಚುನಾವಣೆ ಇರುವ ಕಾರಣ ಜನರು ಬೇರೆಯೇ ರೀತಿಯ ಬಜೆಟ್ ನಿರೀಕ್ಷೆಯಲ್ಲಿದ್ದರು. ಬಹಳ ಅಗ್ಗದ ಹಾಗೂ ಜನಪ್ರಿಯ ಬಜೆಟ್ ಇದಾಗಿಲ್ಲ.
ಇದು ಮೋದಿಯವರ ಬಜೆಟ್ ಆದ್ದರಿಂದ ಬಜೆಟ್ ಮಂಡನೆ ಯನ್ನು ಕೇಳುತ್ತಾ ಇದ್ದಾಗಲೇ ಐದು ರಾಜ್ಯಗಳಲ್ಲಿ ಚುನಾವಣೆ ಇದೆ ಎಂದು ಅನಿಸಲೇ ಇಲ್ಲ. ಚುನಾವಣೆ ಮತ್ತು ಅಧಿಕಾರವನ್ನು ಬಿಟ್ಟು ದೇಶದ ಹಿತದೃಷ್ಟಿಯನ್ನು ನೋಡಿ ಬಜೆಟ್ ಮಂಡಿಸಲಾಗಿದೆ.

ಜನಪ್ರಿಯತೆ ಮುಖ್ಯವಲ್ಲ. ದೇಶದ ಹಿತ ಮುಖ್ಯವೆಂಬ ದೃಷ್ಟಿಯಿಂದ ಬಜೆಟ್ ಮಂಡಿಸಿದ್ದಾರೆ. ತೆರಿಗೆದಾರರು, ಸರ್ಕಾರಿ ನೌಕರರು ಮತ್ತು ವ್ಯವಹಾರಸ್ಥರು ತೆರಿಗೆ ವಿನಾಯಿತಿ ನಿರೀಕ್ಷೆ ಮಾಡಿದ್ದರು. ಆದರೆ ಸರ್ಕಾರಕ್ಕೆ ಕೊರೊನಾ ಸಮಯ. ಆದ್ದರಿಂದ ಸರ್ಕಾರಕ್ಕೆ ಯಾವ ಆದಾಯವೂ ಇಲ್ಲ. ಅವರಿಗೂ ಕಷ್ಟವಾಗಿದೆ. ಆದ್ದರಿಂದ ಈ ಸಮಯದಲ್ಲಿ ತೆರಿಗೆವಿನಾಯಿತಿ ಕೇಳುವುದು ಯಾವುದೇ ಹೊಣೆಗಾರಿಕೆಯುಳ್ಳ ನಾಗರಿಕತನವಾಗುವುದಿಲ್ಲ.
ಹಾಗಾಗಿ ನೇರ ತೆರಿಗೆ, ಪರೋಕ್ಷ ತೆರಿಗೆ ಬಗ್ಗೆ ಪ್ರಸ್ತಾಪ ಮಾಡಿಲ್ಲ.
ದೀರ್ಘಾವಧಿ ದೃಷ್ಟಿಯಿಂದ 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕ್ ಸ್ಥಾಪನೆ ಮಾಡುವುದು, ಆರ್ಬಿಐ ಮೂಲಕ ಡಿಜಿಟಲ್ ಕರೆನ್ಸಿ ರೂಪಿಸುವುದು, 5ಜಿ ತರಂಗಕ್ಕೆ ಈ ವರ್ಷವೇ ಪ್ರಕ್ರಿಯೆ ಪ್ರಾರಂಭಿಸುವುದು, ಒಂದು ಡಿಜಿಟಲ್ ಯೂನಿವರ್ಸಿಟಿ ಸ್ಥಾಪಿಸುವುದು, ಇವೆಲ್ಲ ಮುಂದಿನ 25 ವರ್ಷಕ್ಕೆ ಭಾರತ ಬಲಿಷ್ಠ ದೇಶ ಆಗುವ ಸಲುವಾಗಿ ಮಾಡಿದ್ದಾರೆ.

ಆದರೆ ಚುನಾವಣೆಯಲ್ಲಿ ಗೆಲ್ಲಬೇಕೆನ್ನುವ ಕ್ಷಣಿಕ ಲಾಭದಿಂದ ಮಾಡಿಲ್ಲ. ಇದು ದೇಶದ ದೀರ್ಘಾವಧಿ ಭವಿಷ್ಯವನ್ನು ನೋಡಿ ಮಾಡಿರುವ ಬಜೆಟ್ ಮಂಡನೆಯೇ ಹೊರತು, ಐದು ರಾಜ್ಯಗಳ ಚುನಾವಣೆ ನೋಡಿ ಮಾಡಿರುವುದಿಲ್ಲ.
ಒಟ್ಟಾರೆಯಾಗಿ ಇದು ದೇಶದ ಹಿತಕ್ಕಾಗಿ ಮಾಡಿರುವ ಬಜೆಟ್ ಎಂದು ಅವರು ತಿಳಿಸಿದರು.

ಗೋಮಾಳ, ಕಾನು ಇತ್ಯಾದಿಗಳ ಮೇಲೆ ಅರಣ್ಯ ಇಲಾಖೆ ಹಕ್ಕು ಸ್ಥಾಪನೆ ಸರಿಯಲ್ಲ

0

ತಲತಲಾಂತರದಿಂದ ಸಾಗುವಳಿ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಲು ಅರಣ್ಯ ಇಲಾಖೆ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ದರೆ ಶಿವಮೊಗ್ಗ ಸಿಸಿಎಫ್ ಕಛೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಮಲೆನಾಡು ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.

ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ತಹಶೀಲ್ದಾರ್ ರ ಮೂಲಕ ಸಮಿತಿ ಮನವಿ ಸಲ್ಲಿಸಿತು. ಪ್ರತಿ ಹಳ್ಳಿಯಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಆಲೂರು ಹೊಸಕೊಪ್ಪ, ಚಿಕ್ಕ ಮತ್ತೀಗ, ಮಾವಿನ ಗದ್ದೆ, ತೊರೆ ಬೈಲು, ಹುಲ್ಲತ್ತಿ, ಬಿಳಗಿ ಮನೆ ಮುಂತಾದ ಗ್ರಾಮದಲ್ಲಿ ರೈತರ ಸ್ವಾಧೀನಾನುಭವ ಸಾಗುವಳಿ ಜಾಗಕ್ಕೆ ಅರಣ್ಯ ಇಲಾಖೆ ಬಲವಂತವಾಗಿ ಗಡಿ ಕಾಲುವೆ ಮಾಡುತ್ತಿದ್ದು ಇದನ್ನು ತಡೆಯಬೇಕು ಎಂದು ಆಗ್ರಹಿಸಿದೆ.

ಅಡಿಕೆ ಸಸಿ, ಮರ, ಬೇಲಿಯನ್ನು ದ್ವಂಸ ಮಾಡುತ್ತಿರುವುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅರಣ್ಯ ಇಲಾಖೆ ರೈತರಿಗೆ ನಷ್ಟದ ಹಣವನ್ನು ಪಾವತಿಸಬೇಕು. ಗೋಮಾಳ, ಸೊಪ್ಪಿನಬೆಟ್ಟ, ಕಾನು, ಗ್ರಾಮಠಾಣಾ, ಪೂರ್ವಜರಿಂದ ಬಳಕೆಯಲ್ಲಿರುವ ಅರಣ್ಯ ಪ್ರದೇಶದ ಮೇಲೆ ಅರಣ್ಯ ಇಲಾಖೆ ಹಕ್ಕು ಸ್ಥಾಪಿಸಲು ಮುಂದಾಗಿರುವುದು ಮಾನವ ಹಕ್ಕುಗಳ ಉಲ್ಲಂಘನೆ.

ಅರಣ್ಯ, ಕಂದಾಯ, ಇತರೆ ಪ್ರದೇಶಗಳ ಕುರಿತು ಜಂಟಿ ಸರ್ವೆ ನಡೆಯದ ಹಿಂದೆ ದೊಡ್ಡ ಹುನ್ನಾರ ನಡೆದಿದೆ. ಕಾನೂನು, ನಿಯಮಗಳಲ್ಲಿ ಗೊಂದಲವನ್ನೇ ಬಂಡವಾಳ ಮಾಡಿಕೊಂಡು ಮಲೆನಾಡ ಭೂಪ್ರದೇಶದ ಮೇಲೆ ಅಧಿಪತ್ಯ ಸಾಧಿಸುವ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡುತ್ತಿದೆ.
ಅರಣ್ಯ ಸಂರಕ್ಷಣೆ, ಸಸಿ ಬೆಳೆಸುವ ಯೋಜನೆಯಡಿ ಭಾರಿ ಹಗರಣ ನಡೆದಿದೆ. ಸರ್ಕಾರ ತಕ್ಷಣ ಅರಣ್ಯ ಇಲಾಖೆ ವಿರುದ್ಧ ತನಿಖೆ ನಡೆಸಬೇಕು. ಸರ್ಕಾರಕ್ಕೆ ರೈತರ ಪರ ಕಾಳಜಿ ಇದ್ದರೆ ಅರಣ್ಯ ಇಲಾಖೆ ವಿರುದ್ಧ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸುಂದರೇಶ್, ಸಂಚಾಲಕ ನೆಂಪೆ ದೇವರಾಜ್, ಹಸಿರುಮನೆ ತಾಲೂಕು ಅಧ್ಯಕ್ಷ ಜಾದುಗಾರ್ ನಿಶ್ಚಲ್ ಶೆಟ್ಟಿ, ತಾಲೂಕು ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್, ಹೊಸಕೇರಿ ಈಶ್ವರಪ್ಪ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಸದರೆಲ್ಲರೂ ದೇಶದ ಜನರ ಭರವಸೆಯ ಚುಕ್ಕಾಣಿ- ಶ್ರೀರಾಮನಾಥ್ ಕೋವಿಂದ್

0

ದಾಖಲೆಯ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳ ಖರೀದಿ, ದೇಶದ ಆಂತರಿಕ ಭದ್ರತೆಗೆ ಕ್ರಮ, ಕೋವಿಡ್ ನ ಪರಿಣಾಮಕಾರಿ ನಿರ್ವಹಣೆ ಸೇರಿ ಹಲವು ಸಾಧನೆಗಳನ್ನು ಪಟ್ಟಿ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಅಭಿವೃದ್ಧಿ ಗುರಿ ಸಾಧನೆ ಹಾದಿಯಲ್ಲಿ ಎಲ್ಲವೂ ಸಮಷ್ಟಿ ಸಾಧನೆಗಳು ಎಂದು ಶ್ಲಾಘಿಸಿದ್ದಾರೆ.

ಸೋಮವಾರ ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಿ, ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ 50 ನಿಮಿಷದ ಭಾಷಣದಲ್ಲಿ ಅವರು , ಉತ್ತರಪ್ರದೇಶ ಸೇರಿದಂತೆ ಶೀಘ್ರದಲ್ಲಿಯೇ ಚುನಾವಣೆ ನಡೆಸಲಿರುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶೇಷವಾಗಿ ಉಲ್ಲೇಖಿಸಿದರು.

ಸಾಧನೆಗಳ ಉಲ್ಲೇಖದ ಹಿಂದೆ ಎಲ್ಲಾ ಸಾಧನೆಗಳ ಶ್ರೇಯ ಒಂದು ಸಂಸ್ಥೆ, ವ್ಯವಸ್ಥೆಯದಲ್ಲ. ಇದರ ಬದಲಿಗೆ ಅವು ಸಮಷ್ಟಿ ಸಾಧನೆ. ಇದರಲ್ಲಿ ದೇಶದ ಎಲ್ಲ ನಾಗರಿಕರು ಭಾಗಿಯಾಗಿದ್ದಾರೆ ಎಂದರು. ಭವ್ಯ, ಆಧುನಿಕ ಮತ್ತು ಅಭಿವೃದ್ಧಿ ಭಾರತವನ್ನು 2017ರ ವೇಳೆಗೆ ನಿರ್ಮಿಸಲು ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.

ಇದರಲ್ಲಿ ನಮ್ಮೆಲ್ಲರ ಪಾಲು ಇದೆ. ಈ ಪ್ರಯಾಣದಲ್ಲಿ ನಮ್ಮಗಳಿಗೆ ಸಮಾನ ಪಾಲು ಎಂದರು. ಸಂಸದರನ್ನು ಉದ್ದೇಶಿಸಿ ನೀವುಗಳು ದೇಶದ ಕೋಟ್ಯಾಂತರ ಜನರ ಭರವಸೆಗೆ ಚುಕ್ಕಾಣಿ. ಭವಿಷ್ಯದಲ್ಲಿಯೂ ಉತ್ಸಾಹದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಗೋವಾ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ, ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್ ಅವರ ಎರಡು ವಿಶೇಷ ವಸ್ತುಗಳನ್ನು ಮರಳಿ ತಂದಿದ್ದು, ಕೃಷಿಕರ ಸಬಲೀಕರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ರಾಷ್ಟ್ರಪತಿ ಕೋವಿಂದ್ ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ರಕ್ಷಣಾ ಇಲಾಖೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿದ ಅವರು, ರಕ್ಷಣಾ ಪರಿಕರಗಳ ಆಧುನೀಕರಣಕ್ಕೆ ನೀಡಲಾದ ಶೇಕಡ 87 ರಷ್ಟು ಅನುಮೋದನೆಗಳು ಸ್ವಾವಲಂಬನೆಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ.

ಕೋವಿಡ್ ಪರಿಸ್ಥಿತಿ ನಿರ್ವಹಣೆಯನ್ನು ಉಲ್ಲೇಖಿಸಿ ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗಳು, ಉದ್ಯಮಿಗಳ ಸೇವೆ ಶ್ಲಾಘನೀಯ. ಇದರ ಪರಿಣಾಮ ಒಂದೇ ವರ್ಷದಲ್ಲಿ 150 ಕೋಟಿ ಡೋಸ್ ಲಸಿಕೆ ನೀಡಲಾಯಿತು ಎಂದು ಹೇಳಿದರು

ಟೋಕಿಯೋನಲ್ಲಿ ಕೋವಿಡ್ ಬೂಸ್ಟರ್ ಡೋಸ್ ಅಭಿಯಾನ

0

ಟೋಕಿಯೊ ಮಿಲಿಟರಿಯಿಂದ ನಿರ್ವಹಿಸಲ್ಪಡುವ ತಾತ್ಕಾಲಿಕ ಕೇಂದ್ರಗಳಲ್ಲಿ ಕೋವಿಡ್ ಬೂಸ್ಟರ್ ಡೋಸ್ ಗಾಗಿ ಸಾಮೂಹಿಕ ಇನಾಕ್ಯುಲೇಷನ್ ಡ್ರೈವ್ ಅನ್ನು ಪ್ರಾರಂಭಿಸಿದೆ. ಏಕೆಂದರೆ ಹೆಚ್ಚುತ್ತಿರುವ ಸೋಂಕುಗಳನ್ನು ಎದುರಿಸಲು ಜಪಾನ್ ವಿಳಂಬವಾದ 3 ನೇ ಉದ್ಯೋಗಗಳನ್ನು ವೇಗಗೊಳಿಸಲು ಪ್ರಯತ್ನಿಸುತ್ತಿದೆ.

ಜಪಾನ್ ಡಿಸೆಂಬರ್‌ನಲ್ಲಿ ವೈದ್ಯಕೀಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಗಳನ್ನು ನೀಡಲು ಪ್ರಾರಂಭಿಸಿತು.ಆದರೆ ಮೊದಲನೆಯ ಕೊರೋನಾ ವೈರಸ್ ಹೊಡೆತಗಳ ನಡುವಿನ ಮಧ್ಯಂತರವನ್ನು ಮತ್ತು ಆರಂಭಿಕ ಎಂಟರಿಂದ ಆರು ತಿಂಗಳವರೆಗೆ ಬೂಸ್ಟರ್ ಅನ್ನು ಕಡಿತಗೊಳಿಸುವ ನಿರ್ಧಾರವನ್ನು ನೀಡಿದ ನಂತರ ಜನಸಂಖ್ಯೆಯ 2.7 ಪ್ರತಿಶತದಷ್ಟು ಜನರಿಗೆ ಮಾತ್ರ ಅಂತಹ ಇನಾಕ್ಯುಲೇಶನ್‌ಗಳನ್ನು ಒದಗಿಸಿದೆ. ಈಗ ಬೂಸ್ಟರ್ ಶಾಟ್‌ಗಳಿಗೆ ಬೇಡಿಕೆ ತೀವ್ರವಾಗಿದೆ. ಶುಕ್ರವಾರದಂದು ಪ್ರಾರಂಭವಾದ ಆನ್‌ಲೈನ್ ಕಾಯ್ದಿರಿಸುವಿಕೆಗಳು ಮತ್ತು ಈ ವಾರ ಕೇಂದ್ರದಲ್ಲಿ ನೀಡಲಾಗುವ ಸುಮಾರು 4,300 ಡೋಸ್‌ಗಳ ಎಲ್ಲಾ ಸ್ಲಾಟ್‌ಗಳನ್ನು 9 ನಿಮಿಷಗಳಲ್ಲಿ ಭರ್ತಿ ಮಾಡಲಾಗುವುದು.ಕೇಂದ್ರವು moderna.inc ತಯಾರಿಸಿದ ಲಸಿಕೆಯನ್ನು ಒದಗಿಸುತ್ತಿದೆ. , 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಬೇರೆಡೆ ಬೂಸ್ಟರ್ ಡೋಸ್ ಗಳನ್ನು ಪಡೆಯಬಹುದು. ಓಮಿಕ್ರಾನ್ ರೂಪಾಂತರವು ತ್ವರಿತವಾಗಿ ಹರಡುತ್ತಿದೆ. ಹೊಸ ವರದಿಯಾದ ಸೋಂಕುಗಳನ್ನು ಕೊರೋನಾವೈರಸ್ ನ ಹಿಂದಿನ ಅಲೆಗಳಿಗಿಂತ ಹೆಚ್ಚಿನದಕ್ಕೆ ತಳ್ಳುತ್ತದೆ. ಟೋಕಿಯೊ ಭಾನುವಾರ 15,895 ಹೊಸ ಪ್ರಕರಣಗಳನ್ನು ವರದಿ ಮಾಡಿದೆ.
ಟೋಕಿಯೋ ದಲ್ಲಿ
ಆಸ್ಪತ್ರೆಯ ಸಾಮರ್ಥ್ಯದ ಅರ್ಧದಷ್ಟು ಬೆಡ್ ಗಳು ತುಂಬಿವೆ. ರಾಷ್ಟ್ರವ್ಯಾಪಿ ಜಪಾನ್ ಸುಮಾರು 18,700 ಸಾವುಗಳೊಂದಿಗೆ ಒಟ್ಟು 2.68 ಮಿಲಿಯನ್‌ಗೆ ಸುಮಾರು 78,000 ಪ್ರಕರಣಗಳನ್ನು ದಾಖಲಿಸಿದೆ.

ಬಜೆಟ್ ಅಧಿವೇಶನಕ್ಕೆ ಸಂಸದರೆಲ್ಲರೂ ಹಾಜರಾಗಲು ಮೋದಿ ಕಳಕಳಿ ಮನವಿ

0

ಮುಂದಿನ ಒಂದು ವರ್ಷದ ಪೂರ್ಣ ನೀಲನಕ್ಷೆಯನ್ನು ಕೊಡುವ ಆಯವ್ಯಯ ಮಂಡನೆ ಮುಖ್ಯವಾಗಿದೆ. ಹಾಗಾಗಿ ಬಜೆಟ್ ಅಧಿವೇಶನ ದಲ್ಲಿ ಎಲ್ಲಾ ಸಂಸದರೂ ತಪ್ಪದೇ ಭಾಗಿಯಾಗಿ ಫಲಪ್ರದ ಚರ್ಚೆಗಳ ಮೂಲಕ ಯಶಸ್ವಿಯಾಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಂಸದರಿಗೆ ಕರೆ ನೀಡಿದ್ದಾರೆ.
ಬಜೆಟ್ ಅಧಿವೇಶನಕ್ಕೆ ಮುನ್ನ ಸಂಸತ್ ಹೊರಗಡೆ
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚುನಾವಣೆಗಳು ಹೆಚ್ಚಾಗುತ್ತಿರುವ ಕಾರಣ ಇತ್ತೀಚಿನ ಸಂಸತ್ ಕಲಾಪಗಳಿಗೆ ಅಡ್ಡಿಯಾಗುತ್ತಿರುವುದು ನಿಜ. ಇವುಗಳ ನಡುವೆಯೂ ದೇಶದಲ್ಲಿ ಆರ್ಥಿಕ ಪ್ರಗತಿ, ದೇಶಿಯ ಲಸಿಕೆಗಳ ಸಾಧನೆ ಮಾಡಲಾಗಿದೆ. ಈ ಬಾರಿ ಅಧಿವೇಶನದಲ್ಲಿ ಮುಕ್ತಮನಸ್ಸಿನ ಚರ್ಚೆ ನಡೆಯುವ ನಿರೀಕ್ಷೆ ನನಗಿದೆ ಎಂದರು.
ಸ್ಪೀಕರ್ ಒಮ್ ಬಿರ್ಲಾ ಅವರು ಸರ್ವಪಕ್ಷಗಳ ಸಭೆ ಹಾಗೂ ಲೋಕಸಭೆಯ ವ್ಯವಹಾರಗಳ ಸಲಹಾ ಸಮಿತಿ ಸಭೆ ನಡೆಸಿದರು.

ಕೋವಿಡ್ ನಿಂದಾಗಿ ದೇಶದಲ್ಲಿ ಯಾರೂ ಸೌಲಭ್ಯ ವಂಚಿತರಾಗಿಲ್ಲ

0

ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ನಿರೋಧಕ ಲಸಿಕೆ ಕಡ್ಡಾಯಗೊಳಿಸಿದ್ದರಿಂದ ಯಾರಿಗೂ ನಷ್ಟವಾಗಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನಿರೋಧಕ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದ ಕಾರಣ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಪಡಿತರ ಸೇರಿ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಕೀಲ ಪ್ರಶಾಂತ್ ಭೂಷಣ್ ಅವರು ದೂರಿದರು.
ಲಸಿಕೆಗಳ ಕ್ಲಿನಿಕಲ್ ಪ್ರಯೋಗ ಹಾಗೂ ಲಸಿಕೆ ಕಡ್ಡಾಯಗೊಳಿಸಿರುವ ಕುರಿತು ಮಾಹಿತಿ ನೀಡಬೇಕು ಎಂದು ಸಲ್ಲಿಕೆಯಾದ ಅರ್ಜಿಯನ್ನು ನ್ಯಾ.ಎಲ್. ನಾಗೇಶ್ವರ ರಾವ್ ಅವರ ನೇತೃತ್ವದ ನ್ಯಾಯಪೀಠವು ವಿಚಾರಣೆ ನಡೆಸಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಯಾರೂ ಉದ್ಯೋಗ, ಪಡಿತರ ಸೇರಿ ಯಾವುದೇ ಸೌಲಭ್ಯ ಕಳೆದುಕೊಳ್ಳುತ್ತಿಲ್ಲ ಎಂದು ಪ್ರತ್ಯುತ್ತರ ನೀಡಿದರು.
ವಾದ -ಪ್ರತಿವಾದ ಆಲಿಸಿದ ನ್ಯಾಯಾಲಯವು ಅರ್ಜಿ ಕುರಿತ ಅಂತಿಮ ವಿಚಾರಣೆಗೆ ಶೀಘ್ರವೇ ದಿನಾಂಕ ತಿಳಿಸಲಾಗುವುದು ಎಂದು ಆದೇಶ ಹೊರಡಿಸಿತು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹ್ಮದ್ ನಲ್ ಪಾಡ್

0

ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾದ ಬಳಿಕ, ನಿರೀಕ್ಷಣಾ ಜಾಮೀನು ಸಲ್ಲಿಕೆಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಆರೋಪಿಯು ಒಮ್ಮೆ ಕೋರ್ಟ್ ಮುಂದೆ ಹಾಜರಿದ್ದರೆ, ನಂತರ ಆತ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 438 ರ ಅನ್ವಯ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಗೌರಿಬಿದನೂರಿನ ರಮೇಶ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ನ್ಯಾ. ಎಚ್. ಪಿ. ಸಂದೇಶ್ ಅವರಿದ್ದ ಪೀಠ ಈ ಆದೇಶ ನೀಡಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಎಸ್. ಆರ್. ನಾಗರಾಜ್ ಮತ್ತು ರಾಜ್ಯ ಸರ್ಕಾರದ ನಡುವಿನ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನನ್ನು ನಿರಾಕರಿಸಲಾಗಿದೆ. ಆರೋಪಿಯು ಒಮ್ಮೆ ವಿಚಾರ ಕೋರ್ಟ್ ಮುಂದೆ ಖುದ್ದಾಗಿ ಅಥವಾ ವಕೀಲರ ಮುಖಾಂತರ ಹಾಜರಾಗಿ, ನಂತರದ ದಿನಗಳಲ್ಲಿ ವಿಚಾರಣೆಗೆ ಗೈರಾದ ಕಾರಣಕ್ಕೆ ವಾರೆಂಟ್ ಜಾರಿಯಾದರೆ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ಈ ಪ್ರಕರಣದಲ್ಲೂ ಜಾಮೀನು ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.

2020ರ ಜುಲೈ 8ರಂದು ಗೌರಿಬಿದನೂರಿನ ಅರಣ್ಯ ವಲಯಾಧಿಕಾರಿಯು ರಮೇಶ್ ಮನೆಯಲ್ಲಿದ್ದ ಮೂರು ಉಡಗಳು ಮತ್ತು ಮೂರು ಗೌಜಲಹಕ್ಕಿ ಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ವಿಚಾರಣಾ ನ್ಯಾಯಾಲಯವು, ಪ್ರಕರಣ ದಾಖಲಿಸಿಕೊಂಡು ಆರೋಪಿಗೆ 2021ರ ಅಕ್ಟೋಬರ್ 5ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಒಂದು ವಕೀಲರ ಮೂಲಕ ಆರೋಪಿಯು ಒಂದು ದಿನದ ವಿಚಾರಣೆಗೆ ವಿನಾಯಿತಿ ಕೋರಿದ್ದರು. ಬಳಿಕ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರಮೇಶ್ 2021ರ ಅಕ್ಟೋಬರ್ 6ರಂದು ಎನ್ ಬಿಡಬ್ಲ್ಯೂ ಜಾರಿಗೊಳಿಸಲಾಗಿತ್ತು. ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೇಷನ್ಸ್ ಕೋರ್ಟ್ ವಜಾಗೊಳಿಸಿತ್ತು

ಜಾಮೀನು ರಹಿತ ಬಂಧನ ವಾರಂಟ್ ಇದ್ದಾಗ ನಿರೀಕ್ಷಣಾ ಜಾಮೀನು ಅವಕಾಶವಿಲ್ಲ

0

ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾದ ಬಳಿಕ, ನಿರೀಕ್ಷಣಾ ಜಾಮೀನು ಸಲ್ಲಿಕೆಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಆರೋಪಿಯು ಒಮ್ಮೆ ಕೋರ್ಟ್ ಮುಂದೆ ಹಾಜರಿದ್ದರೆ, ನಂತರ ಆತ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 438 ರ ಅನ್ವಯ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಗೌರಿಬಿದನೂರಿನ ರಮೇಶ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ನ್ಯಾ. ಎಚ್. ಪಿ. ಸಂದೇಶ್ ಅವರಿದ್ದ ಪೀಠ ಈ ಆದೇಶ ನೀಡಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಎಸ್. ಆರ್. ನಾಗರಾಜ್ ಮತ್ತು ರಾಜ್ಯ ಸರ್ಕಾರದ ನಡುವಿನ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನನ್ನು ನಿರಾಕರಿಸಲಾಗಿದೆ. ಆರೋಪಿಯು ಒಮ್ಮೆ ವಿಚಾರ ಕೋರ್ಟ್ ಮುಂದೆ ಖುದ್ದಾಗಿ ಅಥವಾ ವಕೀಲರ ಮುಖಾಂತರ ಹಾಜರಾಗಿ, ನಂತರದ ದಿನಗಳಲ್ಲಿ ವಿಚಾರಣೆಗೆ ಗೈರಾದ ಕಾರಣಕ್ಕೆ ವಾರೆಂಟ್ ಜಾರಿಯಾದರೆ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ಈ ಪ್ರಕರಣದಲ್ಲೂ ಜಾಮೀನು ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.

2020ರ ಜುಲೈ 8ರಂದು ಗೌರಿಬಿದನೂರಿನ ಅರಣ್ಯ ವಲಯಾಧಿಕಾರಿಯು ರಮೇಶ್ ಮನೆಯಲ್ಲಿದ್ದ ಮೂರು ಉಡಗಳು ಮತ್ತು ಮೂರು ಗೌಜಲಹಕ್ಕಿ ಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ವಿಚಾರಣಾ ನ್ಯಾಯಾಲಯವು, ಪ್ರಕರಣ ದಾಖಲಿಸಿಕೊಂಡು ಆರೋಪಿಗೆ 2021ರ ಅಕ್ಟೋಬರ್ 5ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಒಂದು ವಕೀಲರ ಮೂಲಕ ಆರೋಪಿಯು ಒಂದು ದಿನದ ವಿಚಾರಣೆಗೆ ವಿನಾಯಿತಿ ಕೋರಿದ್ದರು. ಬಳಿಕ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರಮೇಶ್ 2021ರ ಅಕ್ಟೋಬರ್ 6ರಂದು ಎನ್ ಬಿಡಬ್ಲ್ಯೂ ಜಾರಿಗೊಳಿಸಲಾಗಿತ್ತು. ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೇಷನ್ಸ್ ಕೋರ್ಟ್ ವಜಾಗೊಳಿಸಿತ್ತು

ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು

0

“ದೇಶದ ಭವ್ಯತೆ, ಹಿರಿಮೆ, ಗರಿಮೆ ಕಾಪಾಡಿದ ಮಾನ್ಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ” ಎಂದು ಶ್ರೀರಂಜಿನಿ ದತ್ತಾತ್ರಿಯವರು ತಿಳಿಸಿದರು.

ನಮ್ಮ ಮಕ್ಕಳಿಗೆ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಬಗ್ಗೆ, ನಮ್ಮ ದೇಶದ ಯೋಧರ ಬಗ್ಗೆ, ನಮ್ಮ ದೇಶದ ಇತಿಹಾಸ, ಸಂಸ್ಕೃತಿಗಳ ಬಗ್ಗೆ, ಭವ್ಯ ಭಾರತದ ಬಗ್ಗೆ ತಿಳಿಯುವ ಅಧ್ಯಯನಶೀಲತೆ ಬರಬೇಕು. ಈ ದೇಶವನ್ನು ಮುನ್ನಡೆಸುವ ನಾಳಿನ ಪ್ರಜೆಗಳಾದ ವಿದ್ಯಾರ್ಥಿಗಳು ಈ ದೇಶದ ಸಮಗ್ರತೆ, ಈ ದೇಶದ ಅಭಿವೃದ್ಧಿ ಬಗ್ಗೆ ಕಲ್ಪನೆಯನ್ನು ಇಟ್ಟುಕೊಂಡು ಸಾಗಬೇಕು ಎಂಬುದೇ ಆಗಿದೆ. ಈ ದೇಶದ ನಿಜವಾದ ಇತಿಹಾಸವನ್ನು ಅದೆಷ್ಟೋ ಪುಸ್ತಕಗಳಲ್ಲಿ, ದಾಖಲೆಗಳಲ್ಲಿ ತಿರುಚಲಾಗಿದೆ.ನಿಜವಾದ ಇತಿಹಾಸ ನೇಪಥ್ಯದತ್ತ ಸಾಗಿದೆ.

ಮಕ್ಕಳು ಶಾಲಾ ಪುಸ್ತಕ ಹೊರತುಪಡಿಸಿ ಇತರ ಅಮೂಲ್ಯ ಪುಸ್ತಕಗಳ ಓದುವಿಕೆಯಿಂದ ದೂರ ಸರಿಯುತ್ತಿರುವುದು ಆತಂಕದ ವಿಷಯ ಎಂದರು..ಈ ದಿಸೆಯಲ್ಲಿ 73 ನೇ ಗಣರಾಜ್ಯೋತ್ಸವ ದ ಸಂದರ್ಭದಲ್ಲಿ ಈ ದೇಶದ ಭವ್ಯತೆ, ಈ ದೇಶದ ಹಿರಿಮೆ, ಗರಿಮೆಗಳನ್ನು ಕಾಪಾಡಿದ ಮಾನ್ಯರನ್ನು ಸ್ಮರಿಸುವುದು ಅತ್ಯಗತ್ಯ. ಚರಿತ್ರೆಯ ಅಧ್ಯಯನವೆಂದರೆ ವಿದ್ಯಾರ್ಥಿಗಳು ಕಂಠಪಾಠ ಮಾಡಿಕೊಂಡು ಅಂಕಗಳಿಸಲು ಓದುವುದಷ್ಟೇ ಆಗಬಾರದು. ಮೊಬೈಲ್ ಗೀಳಿನಿಂದ ಹೊರಬಂದು ಅಮೂಲ್ಯ ಪುಸ್ತಕಗಳ ಓದುವ ಹವ್ಯಾಸ ಬೆಳೆಸಿಕೊಂಡು ನಮ್ಮ ಪೂರ್ವಜರು ಸಾಧಿಸಿದ ಗೆಲುವುಗಳು, ನಡೆಸಿದ ಹೋರಾಟಗಳು, ರಾಷ್ಟ್ರ ಜೀವನದಲ್ಲಿ ತಲೆದೋರಿದ ತಿರುವುಗಳು, ಕೋಟೆ ಕೊತ್ತಲಗಳು, ನದಿ, ಬೆಟ್ಟ, ಪರ್ವತಗಳ ಕುರಿತು ತಿಳಿದುಕೊಳ್ಳುವತ್ತ ನಮ್ಮ ಚಿತ್ತ ಸಾಗಬೇಕು.
ಈ ನಾಡಿನ ಸ್ವಾತಂತ್ರ್ಯ ಹೋರಾಟಗಾರ ಧೋಂಡಿಯಾ ವಾಘ್ ರ ಕಥನವನ್ನು ಹೇಳುತ್ತ, ಎಲ್ಲರ ಚಿತ್ತ ಭಿತ್ತಿ ಯಿಂದ ಮರೆಯಾದ ಇಂತಹ ಸಾವಿರಾರು ದೇಶಭಕ್ತರ ಬಗ್ಗೆ ಸಂಶೋಧನೆ ನಡೆಸಿ ಬೆಳಕು ಚೆಲ್ಲಬೇಕಾದ ಅವಶ್ಯಕತೆ ಬಗ್ಗೆ ವಿವರಿಸಿದರು.
ಧೋಂಡಿಯಾರು ನಾಡಿನ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಂಘಟನೆ, ಹೋರಾಟದ ಪರಿಕಲ್ಪನೆಯನ್ನು ಲೇಖಕಿ, ಭಾಷಣಗಾರ್ತಿ ಶ್ರೀರಂಜಿನಿ ದತ್ತಾತ್ರಿ ತೆರೆದಿಟ್ಟರು.

73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಹ್ಯಾದ್ರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮಕ್ಕಳಿಗೆ ” ನನ್ನ ನೆಚ್ಚಿನ ಸ್ವಾತಂತ್ರ್ಯ ಯೋಧ” ಎಂಬ ವಿಚಾರವಾಗಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಕುಮಾರಸ್ವಾಮಿಯವರು ಅಧ್ಯಕ್ಷತೆವಹಿಸಿ ನಮ್ಮ ದೇಶದ ಮೇಲೆ ಮೊಗಲರು, ಬ್ರಿಟೀಷರು ಪರಕೀಯರು ನಡೆಸಿದ ಧಾಳಿ ಬಗೆದಷ್ಟು ಸಿಗುತ್ತಾ ಹೋಗುತ್ತದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ” ನನ್ನ ನೆಚ್ಚಿನ ದೇಶಭಕ್ತ” ಕಾರ್ಯಕ್ರಮ ಏರ್ಪಡಿಸಿದ್ದು ಸಂತಸದ ವಿಷಯವೆಂದು ಸ್ವಾತಂತ್ರ್ಯ ದಲ್ಲಿ ಮಡಿದ ಯೋಧರೊಂದಿಗೆ ಅನೇಕ ವಿಚಾರಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ
ರೋಹನ – ಭಗತ್ ಸಿಂಗ್,
ಬೋಧನಾ – ಮಹಾತ್ಮ ಗಾಂಧೀಜಿ,
ಚೇತನ – ಲಾಲಾ ಲಜಪತ್ ರಾಯ್,
ಮಂಜುನಾಥ್ – ತಾತ್ಯಾ ಟೋಪಿ,
ಕಿಶನ್ – ಸಂಗೊಳ್ಳಿ ರಾಯಣ್ಣ,
ಋತ್ವಿಕ್ – ಚತ್ರಪತಿ ಶಿವಾಜಿ,
ಪ್ರೀತಂ – ಸುಭಾಷ್ ಚಂದ್ರ ಬೋಸ್,
ಶೇಖರ್ – ಕಿತ್ತೂರು ಚೆನ್ನಮ್ಮ,
ಭರತ್ – ಸರ್ದಾರ್ ವಲ್ಲಭ್ ಬಾಯ್ ಪಟೇಲ್ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಉಷಾರಾವ್, ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷರಾದ ಲತಾರಮೇಶ್, ಕಾರ್ಯದರ್ಶಿ ಉಮಾ ವೆಂಕಟೇಶ್, ಫ್ರೆಂಡ್ಸ್ ಸೆಂಟರ್ ನ ಜಿ.ವಿಜಯಕುಮಾರ್, ನಾಗರಾಜ್ ವಿ, ಬಿಂದುವಿಜಯಕುಮಾರ್, ವೀಣಾರಂಗಧೋಳ್ ಉಪಸ್ಥಿತರಿದ್ದರು.
ನೆಚ್ಚಿನ ವೀರ ಯೋಧರ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳಿಗೆ ವೀರ ಯೋಧರ ಕುರಿತು ಬರೆದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

ಕೋವಿಡ್ ಪಾಸಿಟಿವಿಟಿ ತಗ್ಗುತ್ತಿದ್ದರೂ ಎಚ್ಚರ ತಪ್ಪುವಂತಿಲ್ಲ- ಡಾ. ಸುಧಾಕರ್

0

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಕ್ರಮೇಣ ಇಳಿಕೆಯಾಗುತ್ತಿದೆ. ಆದರೂ ಸುರಕ್ಷಿತ ಕ್ರಮಗಳನ್ನು ಇನ್ನಷ್ಟು ಎಚ್ಚರದಿಂದ ಪಾಲಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯತ್ತ ಸಾಗುತ್ತಿವೆ. ಕೆಲ ಜಿಲ್ಲೆಗಳಲ್ಲಿ ಮಾತ್ರ ಕೋವಿಡ್ ಪಾಸಿಟಿವಿಟಿ ಹೆಚ್ಚಾಗುತ್ತಿದೆ.
ಆದರೆ ಆಸ್ಪತ್ರೆಗೆ ದಾಖಲಾಗವವರ ಪ್ರಮಾಣ ಶೇ.2-3ರಷ್ಟಿದೆ.
ಅಲ್ಲದೆ, ಶೇ.0.05ರಷ್ಟು ಮರಣ ಪ್ರಮಾಣವಿದೆ. ಹಾಗಾಗಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕಿದೆ. ಕೋವಿಡ್ ಪ್ರಕರಣಗಳ ಬಗ್ಗೆ ಬೇರೆ ದೇಶ, ರಾಜ್ಯಗಳ ಸ್ಥಿತಿಗತಿಯನ್ನು ಗಮನಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ಗಳಲ್ಲಿ ಶೇ.50ರಷ್ಟು ಆಸನ ಭರ್ತಿ ನಿರ್ಬಂಧ ತೆರವುಗೊಳಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು