ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅವರು ಸಿರಿವಂತಿಕೆಯನ್ನು ಮತ್ತೊಮ್ಮೆ ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರನ್ನು ಹಿಂದಿಕ್ಕಿದ್ದಾರೆ.
ಬಫೆಟ್ ಹೂಡಿರುವ ಹೂಡಿಕೆಗಳು ಗಣನೀಯ ಲಾಭ ತಂದುಕೊಟ್ಟಿರುವುದು ಇದಕ್ಕೆ ಕಾರಣ. ಬಫೆಟ್ ಸಂಪತ್ತಿನಲ್ಲಿ ಈ ವರ್ಷ 2.4 ಶತಕೋಟಿ ಡಾಲರ್ ಏರಿಕೆಯಾಗಿದ್ದು, 111 ಶತಕೋಟಿ ಡಾಲರ್ ಗೆ (8.32 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.
ತಂತ್ರಜ್ಞಾನ ಆಧರಿತ ಕಂಪನಿಗಳು ಶೇರು ದರಗಳು ಇತ್ತೀಚೆಗೆ ಕುಸಿದಿವೆ.
ಇದರ ಪರಿಣಾಮ ಸಿಲಿಕಾನ್ ವ್ಯಾಲಿಯ ಉದ್ಯಮಿಗಳು 50 ಶತಕೋಟಿ ಡಾಲರ್ ಸಂಪತ್ತನ್ನು ಕಳೆದುಕೊಂಡಿದ್ದಾರೆ.
ಮಾರ್ಕ್ ಜುಕರ್ ಬರ್ಗ್ ಸಂಪತ್ತಿನಲ್ಲಿ ಶೇಕಡ 12 ರಷ್ಟು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
ಫೆಡರಲ್ ರಿಸರ್ವ್ ತನ್ನ ಹಣಕಾಸು ನೀತಿಯನ್ನು ಬಿಗಿಗೊಳಿಸುತ್ತಿರುವುದು ಮತ್ತು ಹಣದುಬ್ಬರ ಇದಕ್ಕೆ ಕಾರಣವಾಗಿದೆ. ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಕುಸಿಯುತ್ತಿದ್ದು, ಆಗರ್ಭ ಸಿರಿವಂತ
ಉದ್ಯಮಿಗಳಿಗೆ ನಷ್ಟವಾಗುತ್ತಿದೆ.