ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಬಜೆಟನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶೂನ್ಯ ಮೊತ್ತದ ಬಜೆಟ್ ಎಂದು ಕರೆದಿದ್ದಾರೆ. ಇದರಲ್ಲಿ ವೇತನ ಪಡೆಯುವವರಿಗೆ, ಮಧ್ಯಮವರ್ಗದವರಿಗೆ ಮತ್ತು ಬಡವರಿಗೆ ಏನು ಇಲ್ಲ ಎಂದು
ಟೀಕಿಸಿದ್ದಾರೆ.
ಇನ್ನು ಹಲವು ಕಾಂಗ್ರೆಸ್ ನಾಯಕರು ಇದೊಂದು ಲಾಲಿಪಾಪ್ ಬಜೆಟ್ ಎಂದು ಕರೆದಿದ್ದಾರೆ.
ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಬಜೆಟ್ ಭಾಷಣವನ್ನು ಎಫ್ ಎಂ ಓದಿದ ಅತ್ಯಂತ ಬಂಡವಾಳಶಾಹಿ ಭಾಷಣ ಎಂದು ಕುಟುಕಿದ್ದಾರೆ.
ಯಾರೊಬ್ಬರೂ ಇಂಥದ್ದನ್ನು ಮಂಡಿಸಿರಲಿಲ್ಲ. ಬಜೆಟ್ ಭಾಷಣದ ಆರನೇ ಪ್ಯಾರಾದಲ್ಲಿ ಮಾತ್ರ ಎರಡು ಬಾರಿ ಬಡವರು ಎಂಬ ಪದ ಬಳಕೆಯಾಗಿದೆ. ಇದಕ್ಕಾಗಿ ಹಣಕಾಸು ಸಚಿವರಿಗೆ ಕೃತಜ್ಞತೆ ಸಲ್ಲಿಸುವ ಎಂದು ಚುಚ್ಚಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಚಿದಂಬರಂ, ಈ ದೇಶದ ಜನ ಬಂಡವಾಳಶಾಹಿ ಬಜೆಟ್ ತಿರಸ್ಕರಿಸುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.
ಹಣಕಾಸು ಸಚಿವರು ಹೊಸ ಬಜೆಟ್ ನಲ್ಲಿ ಯಾವುದೇ ಪರಿಹಾರ ಕ್ರಮಗಳನ್ನು ಘೋಷಿಸದೆ ಸಂಬಳ ಪಡೆಯುವ ವರ್ಗಕ್ಕೆ ದ್ರೋಹವೆಸಗಿದ್ದಾರೆ. ಭಾರತದ ಸಂಬಳ ಪಡೆಯುವ ವರ್ಗ ಮತ್ತು ಮಧ್ಯಮ ವರ್ಗವು ಸಾಂಕ್ರಾಮಿಕ ರೋಗದ ಸಮಯದಲ್ಲಿ ಪರಿಹಾರ, ಸರ್ವಾಂಗೀಣ ವೇತನ ಕಡಿತ ಮತ್ತು ಹಣದುಬ್ಬರ ಮುರಿಯುವ ನಿರೀಕ್ಷೆಯಲ್ಲಿದ್ದರು. ನೇರ ತೆರಿಗೆ ಕ್ರಮಗಳಲ್ಲಿ ಎಫ್ ಎಂ ಮತ್ತು ಪ್ರಧಾನಿ ಮತ್ತೆ ತೀವ್ರ ನಿರಾಸೆ ಗೊಳಿಸಿದ್ದಾರೆ, ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರು ಹೇಳಿದ್ದಾರೆ.
ಕ್ರಿಫ್ಟೋಕರೆನ್ಸಿ ಇಂದಿನಿಂದ ಕಾನೂನುಬದ್ಧ ವಾಗಿದೆ ಎಂದು ನಿರ್ಮಾಣ ವಾಸ್ತವವಾಗಿ ಘೋಷಿಸಿದ್ದಾರೆ. ಆದರೆ ಇದ್ಯಾವುದು ದೇಶದ 99.99% ಜನರಿಗೆ ಪ್ರಯೋಜನಕಾರಿಯಲ್ಲ ಎಂದು ಹೇಳಿದರು. ರಾಜ್ಯಸಭೆಯಲ್ಲಿ ಉಪ ನಾಯಕರಾಗಿರುವ ಆನಂದ ಶರ್ಮಾ, ಉದ್ಯೋಗ ನಿರ್ಮಾಣ, ಮಧ್ಯಮವರ್ಗ ಮತ್ತು ಬಡವರಿಗೆ ಹಲವು ಬಗೆಯ ಪರಿಹಾರದ ನಿರೀಕ್ಷೆಯಲ್ಲಿದ್ದರು. ಆದರೆ ಯಾವುದೂ ಈಡೇರಿಲ್ಲ ಎಂದು ಟೀಕಿಸಿದ್ದಾರೆ.