ರೇಡರ್ ಗಳಾದ ಅಜಯ್ ಕುಮಾರ್ ಮತ್ತು ಪ್ರದೀಪ್ ಕುಮಾರ್ ಅವರ ಸೂಪರ್ 10 ಅಂಕಗಳ ಬರದಿಂದ ಗುಜರಾತ್ ಜಯೆಂಟ್ಸ್ ತಂಡ ಪ್ರೊ ಕಬ್ಬಡ್ಡಿ ಲೀಗ್ 8ನೇ ಆವೃತ್ತಿಯ 84ನೇ ಪಂದ್ಯದಲ್ಲಿ ಬಲಿಷ್ಠ ಹರಿಯಾಣ ಸ್ಟೀಲರ್ಸ್ ಗೆ ಆಘಾತ ನೀಡಿ ಟೂರ್ನಿಯಲ್ಲಿ ನಾಲ್ಕನೇ ಗೆಲುವು ದಾಖಲಿಸಿತು.
ವೈಟ್ ಫೀಲ್ಡ್ ನ ಶೆರಾಟಾನ್ ಗ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಗುಜರಾತ್ 32 ರಿಂದ 26 ಅಂಕಗಳ ಅಂತರದಿಂದ ಹರಿಯಾಣ ತಂಡವನ್ನು ಪರಾಭವಗೊಳಿಸಿತು. ಈ ಸೋಲಿನಿಂದಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ವಿಕಾಸ್ ಕಂಡೋಲ ಸಾರ್ ಅಂತ್ಯದ ಸ್ಟೀಲರ್ಸ್ ತಂಡದ ಕನಸು ಭಗ್ನಗೊಂಡಿತು. ಸದ್ಯ ಆಡಿದ 15 ಪಂದ್ಯಗಳಲ್ಲಿ ಹರಿಯಾಣ 6 ಗೆಲುವಿನೊಂದಿಗೆ 43 ಅಂಕಗಳನ್ನು ಗಳಿಸಿಕೊಂಡಿದೆ. ಅತ್ತ ಡ್ರಾ ಮತ್ತು ಸೋಲುಗಳಿಂದ ಜರ್ಜರಿತಗೊಂಡಿರುವ ಗುಜರಾತ್ ಟೂರ್ನಿಯಲ್ಲಿ 4ನೇ ಜಯಗಳಿಸಿ ಒಟ್ಟಾರೆ 33ಅಂಕ ಸಂಪಾದಿಸಿತು.
ಪಂದ್ಯದ ಆರಂಭದಿಂದಲೇ ರೇಂಡಿಂಗ್ ಮತ್ತು ಟ್ಯಾಕಲ್ ನಲ್ಲಿ ಮೇಲುಗೈ ಸಾಧಿಸಿದ ಗುಜರಾತ್ ತಂಡ ಪ್ರಥಮಾರ್ಧದ ಮುಕ್ತಾಯಕ್ಕೆ 19ರಿಂದ 12 ರಲ್ಲಿ ಅಂತರ ಕಾಯ್ದುಕೊಂಡಿತು. ಆದರೆ ಮೊದಲ ಅವಧಿಯಲ್ಲಿ ದೊಡ್ಡ ಅಂತರದ ಹಿನ್ನಡೆ ಅನುಭವಿಸಿದ್ದ ಕಾರಣ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೋತ ತಂಡದ ಪರ ಮೀತು 8 ಅಂಕ ಗಳಿಸಿದರು.
ಕೊನೆಯವರೆಗೂ ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಅಂತಿಮ ಕ್ಷಣದ ಒತ್ತಡ ವನ್ನು ಸಮರ್ಥವಾಗಿ ನಿಭಾಯಿಸಿದ ದಬಾಂಗ್ ದೆಹಲಿ ತಂಡ 36 ರಿಂದ 30 ಅಂಕಗಳ ಅಂತರದಿಂದ ಯು ಮುಂಬಾ ತಂಡವನ್ನು ಹಣಿದು ಪೂರ್ಣ 55 ಅಂಕ ಕಲೆಹಾಕಿತು. ಇದರೊಂದಿಗೆ ಒಟ್ಟಾರೆ 53 ಅಂಕಗಳಿಸಿದ ದೆಹಲಿ ತಂಡ, ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಭದ್ರ ಪಡಿಸಿಕೊಂಡಿತ್ತು. ಮೊದಲ ಅವಧಿಯಲ್ಲಿ ಉಭಯ ತಂಡಗಳು 12 ರಿಂದ 12 ರಲ್ಲಿ ಸಮಬಲದ ಹೋರಾಟ ನೀಡಿದವು. ದ್ವಿತೀಯಾರ್ಧ ವು ಅಂತಿಮ 4 ನಿಮಿಷದವರೆಗೂ ಸಂಬಳದಿಂದಲೇ ಕೂಡಿತ್ತು. ಆದರೆ ಕೊನೆಯಲ್ಲಿ ಕೌಶಲ್ಯಯುತ ಆಟ ಪ್ರದರ್ಶಿಸಿದ ದಬಾಂಗ್ ಆಟಗಾರರು 6 ಅಂಕಗಳಿಂದ ಮುಂಬಾ ಗೆ ಸೋಲಿಣಿಸುವಲ್ಲಿ ಯಶಸ್ವಿಯಾದರು. ಅಲ್ರೌಂಡರ್ ವಿಜಯ್,ದಬಾಂಗ್ ಪರ ಗರಿಷ್ಠ 12 ಅಂಕ ಗಳಿಸಿದರೆ, ಅಭಿಷೇಕ್ ಸಿಂಗ್ ಮುಂಬಾ ಪರ 8 ಅಂಕಗಳ ಕೊಡುಗೆ ನೀಡಿದ್ದಾರೆ