Tuesday, September 29, 2026
Tuesday, September 29, 2026

ಬಜೆಟ್ ನಲ್ಲಿ ಗಮನ ಸೆಳೆದ ಡಿಜಿಟಲ್ ವಿಶ್ವವಿದ್ಯಾನಿಲಯ

Date:

ಪ್ರತೀವರ್ಷದ ಬಜೆಟ್ ಎಂದರೆ ಯಾವ ಯಾವುದರ ಮೇಲೆ ತೆರಿಗೆ ಹಾಕಲಾಗುತ್ತದೆ?. ದೇಶದ ರಕ್ಷಣಾ ವೆಚ್ಚಕ್ಕೆ ಎಷ್ಟು ಮೀಸಲು?.ದುಡಿಯುವ ವರ್ಗಗಳಿಗೆ ಆದಾಯದಲ್ಲಿ ತೆರಿಗೆ ಹಂತಗಳನ್ನ ವಿಸ್ತರಿಸುತ್ತದೆಯೆ? ಪಟ್ರೋಲು ಡಿಸೆಲ್ಲು ರೇಟು ಇಳಿಸ್ತಾರ? ಕೃಷಿಕರು, ವ್ಯಾಪಾರಸ್ಥರು,ಗೃಹಿಣಿಯರು …ಹೀಗೆ ಅನೇಕರು ತಮ್ಮದೇ ನಿರೀಕ್ಷೆಗಳನ್ನ ಇಟ್ಟುಕೊಂಡಿರುವುದು ಸಹಜ.

ಆದರೆ ಈವರ್ಷ ವಿತ್ತ ಸಚಿವರು ಮಂಡಿಸಿದ ಬಜೆಟ್ ಮೇಲ್ನೋಟಕ್ಕೆ ಇದಾವುದರ ಬಗ್ಗೆಯೂ ಉಲ್ಲೇಖ ಮಾಡಿಲ್ಲ. ಯಾವಾಗಲೂ ಚುನಾವಣೆ,ವೋಟುಗಳ ದೃಷ್ಟಿಯಿಟ್ಟುಕೊಂಡು ಮಂಡಿಸುವ ಹಿನ್ನೆಲೆ ನೋಡಿದರೆ ಸಾಮಾನ್ಯರ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ.
ಹಾಗಂತ ಇದು ಹುಳಿದ್ರಾಕ್ಷಿಯೆ ? ಎಂದು ಹೇಳಲೂ ಸಾಧ್ಯವಿಲ್ಲ.

ಕೋವಿಡ್ ನಿಂದ ತತ್ತರಿಸಿದ ಆರ್ಥಿಕತೆ ಚೇತರಿಸಿಕೊಳ್ಳಲೂ ಸಮಯ ಬೇಕಿದೆ.
ಅದರ ಬಗ್ಗೆ ಈಗಾಗಲೇ ನಡುನಡುವೆ ಸರ್ಕಾರ ಪ್ರಸ್ತಾಪಿಸಿ ಒಂದಿಷ್ಡು ಆರ್ಥಿಕ
ಬೆಂಬಲ ನೀಡಿದೆ.ಈ ಬಜೆಟ್ ನಲ್ಲಿ ಮತ್ತೆ ಹೊಸದನ್ನ ನೋಡಬಹುದೆ?
ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ. ಡಿಜಿಟಲ್ ಬ್ಯಾಂಕ್,ಡಿಜಿಟಲ್ ಕರೆನ್ಸಿ
ಡಿಜಿಟಲ್ ವಿಶ್ವವಿದ್ಯಾನಿಲಯ…ಹೀಗೆ ನವೀನ ಪ್ರಸ್ತಾಪ ನಮ್ಮ ಗಮನ ಸೆಳೆಯುತ್ತದೆ. ಮಿಕ್ಕ ಆಯವ್ಯಯದ ಬಗ್ಗೆ ತೆರಿಗೆ ,ಆರ್ಥಿಕ ತಜ್ಞರು ನಮ್ಮ ಓದುಗರ,ವೀಕ್ಷಕರ ಗಮನ ಸೆಳೆಯುವ ಪ್ರತಿಕ್ರಿಯೆ ನೀಡಿದ್ದಾರೆ.

ನಾವೀಗ ಡಿಜಿಟಲ್ ಪ್ರಸ್ತಾಪಕ್ಕೆ ಬರೋಣ.ಈಗಾಗಲೇ ಕೋವಿಡ್ ಲಾಕ್ ಡೌನ್ ನಮಗೆ ಮೊಬೈಲ್ ಮೂಲಕ ಡಿಜಿಟಲ್ ಪಾವತಿಯನ್ನ ಬಲವಂತವಾಗಿ
ಮೂಗು ಹಿಡಿದು ಕಲಿಸಿಬಿಟ್ಟಿದೆ. ಅದರ ಸಂಗತಿ ಬಂದಾಗ ಸೊಪ್ಪು ಮಾರುವವರಿಗೆ… ಹಣ್ಣುಹಂಪಲು ಮಾರುವವರಿಗೆ ,ದಿನಸಿ,ಹೋಟಲ್ಲು ಗಳಲ್ಲಿ ಎಂಥ ಡಿಜಿಟಲ್ ಪೇಮೆಂಟು? ಅಂತ ನಗೆಯಾಡಿಕೊಂಡಿದ್ದೆವು. ಆದರೆ ನಾವೀಗ ಡಿಜಿಟಲ್ ಸಾಕ್ಷರರಾಗಿದ್ದೇವೆ ಅಂದುಕೊಳ್ಳಬಹುದು.( ಅದರಲ್ಲೂ
ಮೋಸ ಮಾಡುವ ಆ್ಯಪ್ ಗಳೂ ಬಂದಿವೆ .ಎಚ್ಚರದಿಂದಿರೋಣ)

ಲಾಕ್ ಡೌನ್ ನಿಂದ ನಮ್ಮ ಶಿಕ್ಷಣ ವ್ಯವಸ್ಥೆ ಅಸ್ತವ್ಯಸ್ತವಾಗಿ ನಿಯಂತ್ರಣ ಕಳೆದುಕೊಂಡಿತ್ತು.ಇನ್ನೂ ತಹಬದಿಗೆ ತರುತ್ತಿದ್ದಂತೆ ಕೋವಿಡ್…ಒಮಿಕ್ರಾನ್
ಸೋಂಕು ನಮ್ಮನ್ನ ಆತಂಕಕ್ಕೆ ತಳ್ಳಿಬಿಟ್ಟಿದೆ ಆದರೆ ಆನ್ ಲೈನ್ ಶಿಕ್ಷಣ ಕಲಿಕೆಗೆ ಮತ್ತೊಂದು ಆಯಾಮವನ್ನೇ ನೀಡಿತು. ನಾಲ್ಕು ಗೋಡೆಗಳ ,ಕ್ಲಾಸ್ ರೂಮ್ ಬೋಧನೆಗೆ ನಾವು ಹೊಂದಿಕೊಂಡು ಬಿಟ್ಟಿದ್ದೇವೆ. ಆದರೆ ಈ ಬದಲಿ ವ್ಯವಸ್ಥೆ ಜಿರ್ಣಿಸಿಕೊಳ್ಳಲು ಕಷ್ಟ ಸಾಧ್ಯವಾಗಿದೆ. ಆಂಥದ್ದರಲ್ಲೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಸಮಾಧಾನಕರ ನಡೆಸಲಾಯಿತು. ಆದರೆ ಕಳ್ಳಬೀಳುವ ವಿದ್ಯಾರ್ಥಿಗಳ ಮನೋಧರ್ಮಕ್ಕೆ ಇದರಲ್ಲಿ ಶಿಸ್ತು ಹೇರುವ
ಕೆಲಸವಾಗುವುದಿಲ್ಲ. ನಮ್ಮ ತಜ್ಞರು ಅದಕ್ಕೆ ಮತ್ತೊಂದು ಪರಿಹಾರ ಹುಡುಕುತ್ತಾರೆ.

ಈ ವರ್ಷದ ಬಜೆಟ್ ನಲ್ಲಿ 200 ಟೀವಿ ಚಾನಲ್ ಗಳಿರುವ ಡಿಜಿಟಲ್ ವಿವಿ
ಸ್ಥಾಪನೆ ಪ್ರಸ್ತಾಪವಿದೆ.” ಒನ್ ಕ್ಲಾಸ್ ಒನ್ ಟೀವಿ ಚಾನಲ್”. ಈ ವ್ಯವಸ್ಥೆಯಲ್ಲಿ ಕೌಶಲ ಅಭಿವೃದ್ಧಿಗೆ ವರ್ಚುವಲ್ ಲ್ಯಾಬ್,ಇ-ಲ್ಯಾಬ್ ,
ಇ- ಕಂಟೆಂಟ್ ಇವೆಲ್ಲವೂ ಅಡಕವಾಗಿವೆ.
ಟೀವಿ ಅಂದಾಕ್ಷಣ ಮನೋರಂಜನೆ , ಸುದ್ದಿ ಸಮಾಚಾರ ಎಂಬ ಅರ್ಥಬರುವ
ಕಲ್ಪನೆ ಈಗ ಎಲ್ಲರ ಮನದಲ್ಲಿ ಮೂಡುವ ಚಿತ್ರ.ಆದರೆ ಡಿಜಿಟಲ್ ವಿವಿ ವಿನ್ಯಾಸದ ಬಗ್ಗೆ ನಮ್ಮ ಕಲ್ಪನೆ ಗರಿಗೆದರಿದರೆ ಅದರ ವ್ಯಾಪ್ತಿ ಇನ್ನಷ್ಟೂ
ಶೈಕ್ಷಣಿಕ ಹಿನ್ನೆಲೆಯಲ್ಲಿ ವಿಸ್ತರಿಸಲು ಸಾಧ್ಯವಿದೆ. ಮುಖ್ಯವಾಗಿ ನಮ್ಮ ಗಮನ ಮಕ್ಕಳನ್ನ ಪೋಷಕರಾದ ನಾವುಗಳು ಮೊಬೈಲ್,ಲ್ಯಾಪ್ ಟಾಪ್ ಕಂಪ್ಯೂಟರ್ ಗಳ ಪಾಸಿಟಿವ್ ಬಳಕೆಯ ಬಗ್ಗೆ ಪ್ರೇರಣೆ ನೀಡಲು ಪ್ರಯತ್ನಿಸಬೇಕಿದೆ.ಅದು ನಮ್ಮ ಹೊಣೆಯೂ ಹೌದು.

ದೂರದ ಪ್ರಾತ್ಯಕ್ಷಿಕೆಗಳನ್ನ ಮನೆಯಲ್ಲೇ ನೋಡಿ ತಿಳಿದುಕೊಳ್ಳುವ ಸೌಲಭ್ಯ
ಶೈಕ್ಷಣಿಕ ಬೋಧನೆಗೂ ಪರಿಣಾಮಕಾರಿ.ಈಗ ನಮ್ಮ ಮಕ್ಕಳು ತಾಂತ್ರಿಕ ವಿಚಾರಗಳ ಬಗ್ಗೆ…ಅಂದರೆ ಮೊಬೈಲ್ , ಮಿಕ್ಸಿ, ರೋಬಟ್ ಮಾಪರ್,ಇತ್ಯಾದಿ. ವಿದ್ಯುನ್ಮಾನ ಉಪಕರಣದ ಇನ್ಸ್ಟಾಲೇಷನ್ ಬಗ್ಗೆ ತಕ್ಷಣ ಯು ಟ್ಯೂಬ್ ಮೊರೆ ಹೋಗಿ ಅಲ್ಲಿಂದ ಮಾಹಿತ ಪಡೆಯುತ್ತಾರೆ. ಇದೇ ಮನೋಧರ್ಮ ಕಲಿಉವ ಪಠ್ಯದ ಬಗ್ಗೆಯೂ ಪೂರಕವಾದರೆ ಡಿಜಿಟಲ್ ತರಗತಿಗಳು ಉಪಯುಕ್ತವಾಗುತ್ತವೆ.
ಇಲ್ಲಿ ” ಇ-ಕಂಟೆಂಟ್ ” ಸಿದ್ಧಪಡಿಸುವವರ ಪ್ರಧಾನ ಪಾತ್ರವಿದೆ. ಪಠ್ಯ ವಿಷಯಗಳನ್ನ ಇಂಟರ್ ನೆಟ್, ಮೊಬೈಲ್, ಟೀವಿ,ರೇಡಿಯೊ ಗಳಲ್ಲಿ ಡಿಜಿಟಲ್ ವಿನ್ಯಾಸ, ಭಾಷೆಯಲ್ಲಿ ಸಿದ್ಧಪಡಿಸುವ ಪರಿಶ್ರಮ
ಒಂದು ಕಲೆಗಾರಿಕೆ ಆಗಬೇಕಾಗುತ್ತದೆ. ಇದೊಂದು ಬೃಹತ್ ಸಂಯುಕ್ತ,ಸಾಮಾಜಿಕ,ಶೈಕ್ಷಣಿಕ ಹೊಣೆಗಾರಿಕೆ. ದೇಶದ ಎನ್ ಸಿ ಇ ಆರ್ ಟಿ
ಸಂಸ್ಥೆಯ ಪರಿಣಿತರ ಸೇವೆ ಬಹಳ ಮುಖ್ಯ. ಆ ಸಂಸ್ಥೆಯೇ ಈ ಪಠ್ಯದ ವಿನ್ಯಾಸ ರೂಪಿಸುವಲ್ಲಿ ಒಂದು ದೀರ್ಘಕಾಲೀನ ಅಲ್ಲದಿದ್ದರೂ ನಿರ್ದಿಷ್ಟ ಕಾಲಾವಧಿಯಲ್ಲಾದರೂ ರೂಪಸಬಹುದು. ಏಕೆಂದರೆ ಬಿಸಿ ಇದ್ದಾಗಲೇ ಕಬ್ಬಿಣವನ್ನ ತಟ್ಟಿ ನಮಗೆ ಅವಶ್ಯದ ಆಕಾರಕ್ಕೆ ತರಬಹುದು.

ದೇಶದ ಪರಿಣತರ ಜ್ಞಾನ,ಅನುಭವ ದೇಶದ ತುಂಬಾ ಹಂಚಲ್ಪಡುತ್ತದೆ.
ಎಲ್ಲ ಭೌಗೋಳಿಕ, ಸಾಮಾಜಿಕ ,ಸಾಂಸ್ಕೃತಿಕ ಮನಸ್ಸು ಮಿಲನಗೊಂಡು
ಈ – ಕಂಟೆಂಟ್ ನಿರ್ಮಿಸುವುದರಿಂದ ಅಪೂರ್ವ ಕೊಡುಗೆ ನೀಡಿದಂತಾಗುತ್ತದೆ.

2 COMMENTS

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಕುಟುಂಬ ಮಿಲನದಿಂದ ಬಾಂಧವ್ಯ ವೃದ್ಧಿ, ಪ್ರತಿಭೆ ಅನಾವರಣ: ವಿಜಯಲಕ್ಷ್ಮಿ ಕಡಂಬ

JCI Shivamogga ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ವತಿಯಿಂದ ಸ್ನೇಹ ಮಿಲನ...

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...