Chamarajendra Academy of Visual Arts ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅತಿಥಿ ಉಪನ್ಯಾಸಕ/ಸಂಪನ್ಮೂಲ ವ್ಯಕ್ತಿಗಳಾಗಿ ಬೋಧನೆ ಮಾಡಲು ಇಚ್ಛಿಸುವವರಿಂದ ಗೌರವ ಸಂಭಾವನೆ ಆಧಾರದ ಮೇಲೆ ಷರತ್ತು ಹಾಗೂ ನಿಬಂಧನೆಗಳನ್ವಯ ಕಾರ್ಯನಿರ್ವಹಿಸಲು ಅರ್ಜಿಗಳನ್ನು ಅಹ್ವಾನಿಸಿದೆ.
ಬಿ.ವಿ.ಎ/ಎಂ.ಬಿ.ಎ.ವಿದ್ಯಾರ್ಥಿಗಳು ಸೇರಿದಂತೆ ಅನ್ವಯ ಕಲೆ, ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ(ಗ್ರಾಫಿಕ್ಸ್) ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮಗಳ ಪ್ರಾಯೋಗಿಕ ಮತ್ತು ಥಿಯರಿ,ಕಲಾ ಇತಿಹಾಸದ ಥಿಯರಿ ಬೋಧನೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪೋಸ್ಟ್ ಡಿಪ್ಲೋಮದಲ್ಲಿ (ಪಿ.ಜಿ.ಡಿಪ್ಲೋಮಾ) ಕನಿಷ್ಠ 55%ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ಕನ್ನಡ, ಇಂಗ್ಲೀಷ್, ಹಿಂದಿ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಆಯಾ ಭಾಷಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಭಾರತ ಮತ್ತು ಭಾರತೀಯ ಸಂವಿಧಾನ ಹಾಗೂ ಸಂವಿಧಾನದ ಮೌಲ್ಯಗಳು ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸೈಬರ್ ಸೆಕ್ಯೂರಿಟಿ/ಆರ್ಟಿಫಿಶಲ್ ಇಂಟಲಿಜೆಟ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಎಂ.ಎಸ್‌ಸಿ(ಐಟಿ) ಸ್ನಾತಕೋತ್ತರ ಪದವಿ ಪಡೆದಿರಬೇಕು.
Chamarajendra Academy of Visual Arts ಆಸಕ್ತರು ಕರ್ನಾಟಕ ಸರ್ಕಾರದ ಅಂತರ್ಜಾಲ www.mysore.nic.in ಮತ್ತು www.cavamysore.karnataka.gov.in ದ ಮೂಲಕ ಮಾಹಿತಿ ಪಡೆದು ಅರ್ಜಿಯನ್ನು ಜೂ.16ರೊಳಗಾಗಿ ಸಲ್ಲಿಸುವುದು. ಜೂ 26 ರಂದು 11.00ಕ್ಕೆ ಸಂಸ್ಥೆಯಲ್ಲಿ ಸಂದರ್ಶನ ನಡೆಸಿ ತರಗತಿಗಳು ಅನ್ವಯವಾಗುವಂತೆ ಕಾರ್ಯ ನಿರ್ವಹಿಸಲು ತಿಳಿಸಲಾಗುವುದು ಎಂದು ಮೈಸೂರು ಕಾವಾ ಡೀನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ಹಾಗೂ ದೂ.ಸಂ.: 0821-2438931 ನ್ನು ಸಂಪರ್ಕಿಸುವುದು.
Chamarajendra Academy of Visual Arts ಮೈಸೂರು ದೃಶ್ಯಕಲಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ
S.N. Chennabasappa ಓಲೈಕೆಯ ಪಿತಾಮಹ ‘ಖಾನ್’ಗ್ರೆಸ್! ತನ್ನ ‘ಖಾನ್’ದಾನಿನ ಬೆಂಕಿ ಆರಿಸಲು ನಮ್ಮ ಹಿಂದೂ ಸಮಾಜಕ್ಕೆ ಬೆಂಕಿ ಹಚ್ಚುತ್ತಿರುವುದು ರಾಜಕೀಯ ದುರುದ್ದೇಶಗಳ ಪ್ರತಿಬಿಂಬ : ಎಸ್.ಎನ್ ಚನ್ನಬಸಪ್ಪ
S.N. Chennabasappa ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಇತ್ತೀಚೆಗೆ ನಡೆದ ಸರಣಿ ಹತ್ಯಾಕಾಂಡಗಳನ್ನು ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ತಡೆಯುವಲ್ಲಿ ವಿಫಲವಾಗಿ ತನ್ನ ವೋಟ್ ಬ್ಯಾಂಕಿನ ಆಕ್ರೋಶವನ್ನು ನಿರ್ವಹಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಸಂಘ ಪರಿವಾರ ಮತ್ತು ಹಿಂದೂ ಸಂಘಟನೆಗಳ ಪ್ರಮುಖರ ಮೇಲೆ ಕೋಮುವಾದಿಗಳು ಎಂಬ ಪಟ್ಟ ಕಟ್ಟಿ ಅವರ ಮೇಲೆ ನಿರಾಧಾರ ಆರೋಪಗಳನ್ನು ಹೊರಿಸುತ್ತಿರುವುದು ರಾಜಕೀಯ ಪ್ರೇರಿತ ನಡೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್. ಚನ್ನಬಸಪ್ಪನವರು ತಿಳಿಸಿದ್ದಾರೆ.
ಅಧಿಕಾರವನ್ನು ಹಾಗೂ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಹಿಂದೂ ಮುಖಂಡರ ಹಳೆಯ ಭಾಷಣಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ತುಘಲಕ್ ಆಡಳಿತಕ್ಕೆ ಉದಾಹರಣೆಯಾಗಿದೆ.ಆರ್ ಎಸ್ ಎಸ್ ಪ್ರಮುಖರಾದ ಶ್ರೀ ಕಲ್ಲಡ್ಕ ಪ್ರಭಾಕರ ಭಟ್ ಅವರ ದಶಕಗಳ ಹಿಂದಿನ ಭಾಷಣಗಳನ್ನು ಉಲ್ಲೇಖಿಸಿ ಎಫ್‌ಐಆರ್ ದಾಖಲಿಸಿರುವುದು, ಮತ್ತು ಬಿಜೆಪಿ ಮುಖಂಡರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರಿಗೆ ಗಡಿಪಾರು ನೋಟಿಸ್ ನೀಡಿರುವುದು, ಸ್ಥಳೀಯ ಶಾಸಕರ, ಸಚಿವರ ಓಲೈಕೆಯ ರಾಜಕೀಯ ಒತ್ತಡಕ್ಕೆ ಮಣಿದಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
S.N. Chennabasappa ಇದೆಲ್ಲದರ ಮಧ್ಯೆ, ಸುಹಾಸ್ ಶೆಟ್ಟಿ ಅವರ ಹತ್ಯೆಯಾದಾಗ ನಡೆಯದ ತನಿಖೆಗಳು, ಅಬ್ದುಲ್ ರಹೀಮ್ ಕೊಲೆಯಾದಾಗ ರಾತೋರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮನೆಗಳಲ್ಲಿ ತನಿಖೆಗಳು ನಡೆಯುತ್ತಿದೆ. ಇದು ಕೇವಲ ಹಿಂದೂ ಸಂಘಟನೆಗಳ ಪ್ರಮುಖರ, ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವುದು ಸಂವಿಧಾನಬದ್ಧ ತನಿಖೆಗಳಲ್ಲ; ಬದಲಾಗಿ ಮುಸಲ್ಮಾನರ ತೃಪ್ತಿಗಾಗಿ ನಡೆಯುತ್ತಿರುವುದು. ನಮ್ಮ ಸಂಘಪರಿವಾರದ ಪ್ರಮುಖರು ಮತ್ತು ಹಿಂದೂ ಸಮಾಜದ ನಾಯಕರನ್ನು ಗುರಿಯಾಗಿಸಿ ದೌರ್ಜನ್ಯ ನಡೆಸುವುದು ದೇಶದ ಸಾಂವಿಧಾನಿಕ ಬುನಾದಿಗೆ ಮಾಡುವ ಅಪಮಾನ. ರಾಜಕೀಯ ಹಾಗೂ ಓಲೈಕೆಗಾಗಿ ಹಿಂದೂ ಮುಖಂಡರನ್ನು ಗುರಿಯಾಗಿಸುವ ಈ ಕ್ರಮಗಳು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಆಗುವ ಎಲ್ಲಾ ಅನಾಹುತಕ್ಕೆ ನಿಮ್ಮ ಓಲೈಕೆಯೇ ಕಾರಣವಾಗಲಿದೆ ಎಂದು ಹೇಳಿದ್ದಾರೆ.
World Environment Day ಸ್ನೇಹ ಬಳಗದಿಂದ ಬಿದರೆನಲ್ಲಿ ವಿನೂತನವಾಗಿ ವಿಶ್ವ ಪರಿಸರ ದಿನಾಚರಣೆ
World Environment Day ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಬಿದರೆ ಗ್ರಾಮದಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ವಿನೂತನ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಸ್ನೇಹ ಬಳಗದಿಂದ ಹಮ್ಮಿಕೊಳ್ಳಲಾಗಿತ್ತು,
ಕಾರ್ಯಕ್ರಮದಲ್ಲಿ ಪರಿಸರ ಕುರಿತಂತೆ ಕಾಳಜಿ, ಜವಾಬ್ದಾರಿ, ಪೋಷಣೆಯ ಬಗ್ಗೆ ಭಾಗವಹಿಸಿದ ವಿವಿಧ ಸ್ತರದ ಸಮಾಜಮುಖಿ ಮನಸುಗಳು ಅಭಿಪ್ರಾಯಿಸಿದರು, ಗಿಡಗಳು ಒಂದೆಡೆ ಒಳ್ಳೆಯ ಆಮ್ಲಜನಕ ನೀಡಿದರೆ, ಅದು ಮನುಷ್ಯನಿಗೆ ಹಾಗೂ ಜಾನುವಾರುಗಳಿಗೆ, ಕೃಷಿ ಕೈಂಕರ್ಯಗಳಿಗೆ, ನೈಸರ್ಗಿಕ ಬೆಳವಣಿಗೆಗೆ ಬಹು ಉಪಕಾರಿಯಾಗಿದೆ. ಈ ನೆಲದಲ್ಲಿ ಸಸ್ಯ ಸಂಕುಲ ಉಳಿಯದಿದ್ದೊಡೆ, ಮನುಷ್ಯ ಸಂಕುಲವು ನಾಶವಾಗಬಲ್ಲದಾಗಿದೆ, ಜನ ಬದುಕುಗಳು ಸುಭಿಕ್ಷೆ ಇರಬೇಕು, ಕಾಲ ಕಾಲಕ್ಕೆ ಮಳೆ ಆಗಬೇಕು, ಇದರಿಂದ ಕೃಷಿ ಉತ್ಪನ್ನಗಳಿಗೆ ಸಹಕಾರಿ ಸಮೃದ್ದತೆಯನ್ನು ಕಟ್ಟಿ ಕೊಡಲು ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗುವ ಅಗತ್ಯತೆಗಳಿದೆ ಎಂದು ಜವಾಬ್ದಾರಿ ಅಭಿಪ್ರಾಯಗಳು ವ್ಯಕ್ತವಾದವು,
ಪಕ್ಷಿಗಳಿಗೆ ಅಹಾರ ಸಿಗಬೇಕು ಈ ನಿಟ್ಟಿನಲ್ಲಿ ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ, ಈ ಹಣ್ಣುಗಳ ಸಂತತಿ ಉಳಿಯಲು ಪಕ್ಷಿಗಳು ತಾನು ತಿಂದು ಸವೆಸಿದ ಹಣ್ಣಿನ ಬೀಜಗಳನ್ನು ದೂರದಿಂದ ದೂರಕೆ ಹಾರಿ ಹಿಕ್ಕೆಗಳನ್ನು ಹಾಕಿ ಆ ಹಣ್ಣಿನ ಗಿಡ-ಮರಗಳನ್ನು ಬೆಳೆಸುವ ಸಸ್ಯ ಸರಪಳಿಗೆ ಮುಂದಾಗುತ್ತದೆ ಎಂದು ವಿವರಿಸಿದರು,
World Environment Day ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಕೀಲರುಗಳಾದ ಗೀತಾ ಮಾನೆ, ರವಿಕುಮಾರ್, ರೇಖೇಶ್ ಮಾನೆ, ಉಪನ್ಯಾಸಕರುಗಳಾದ ಡಾ.ಪ್ರತೀಮಾ, ಡಾ.ಶಿಲ್ಪ, ಹಾಗೂ ಯಶಸ್ವಿನಿ, ಶ್ವೇತಾ. ಸ್ನೇಹಾ, ಚರಣ್ ಯೋಗೇಶ್, ಇಂದ್ರಬಾಯಿ ಸೇರಿದಂತೆ ಪತ್ರಕರ್ತರುಗಳಾದ ಗಾರಾ. ಶ್ರೀನಿವಾಸ್, ನವೀನ್ ತಲಾರಿ ರವರುಗಳು ಹಣ್ಣಿನ ಗಿಡಗಳನ್ನು ನೆಟ್ಟು ನೀರೆರೆದು ಪರಿಸರದ ಉಳಿವಿಗೆ ಸಮಯವನ್ನು ಮೀಸಲಿಡುವುದಾಗಿ ತಿಳಿಸಿದರು.
World Environment Day ಹುಣಸೇಕಟ್ಟೆ ಜಂಕ್ಷನ್ ನಲ್ಲಿ ವಿಶ್ವ ಪರಿಸರ ದಿನದ ವಿನೂತನ ಆಚರಣೆ
World Environment Day ಭದ್ರಾವತಿ ತಾಲ್ಲೂಕಿನ ಹುಣಸೇಕಟ್ಟೆ ಜಂಕ್ಷನ್ ನಲ್ಲಿ ಇಂದು ಪರಿಸರ ಶಿವರಾಂ ನೇತೃತ್ವದಲ್ಲಿ ಗ್ರಾಮದ ಮುಖ್ಯರಸ್ತೆಯಲ್ಲಿ ಸಸಿಗಳನ್ನು ನೆಡುವ ಮೂಲಕ ವಿನೂತನವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಅರಣ್ಯ ಉಪ ಸಂರಕ್ಷಣಾಧಿಕಾರಿ ಅಶಿಶ್ ರೆಡ್ಡಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಪ್ರತಿ ಗ್ರಾಮಗಳಲ್ಲಿಯೂ ಇಂತಹ ಮನೋಸ್ಥಿತಿ ಬೆಳೆಯಬೇಕಿದೆ. ಕಾಡು ಬೆಳೆಸಿ ನಾಡು ಉಳಿಸುವ ಜೊತೆಗೆ ನಮ್ಮ ನಮ್ಮ ಊರುಗಳಲ್ಲಿ ಇಂತಹ ಮರಗಳನ್ನು ಬೆಳೆಸುವ ಕೆಲಸ ಮಾಡಿದರೆ ಪ್ರಕೃತಿಯು ನಮಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತದೆ. ಮುಂದಿನ ಪೀಳಿಗೆಗೆ ಇದು ಲಾಭದಾಯಕವಾಗಿದೆ ಎಂದು ಹೇಳಿದರು.
World Environment Day ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪಾರ್ವತಮ್ಮ, ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಎಂ ಸಿಂಧು, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಪರಿಸರ ಶಿವರಾಂ, ಡಾ. ತೇಜಸ್, ನರೇಂದ್ರ ಕಾರೆಹಳ್ಳಿ, ಉಪನ್ಯಾಸಕ ಮಂಜುನಾಥ್ ಎಸ್, ಕುಮಾರಿ ಅಂಕಿತಾ ಮೊದಲಾದವರು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸರಳ ಹಾಗೂ ವಿನೂತನವಾದ ನಡೆದ ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ.
MESCOM ಜೂನ್ 6. ಕೂಡ್ಲಿ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ
MESCOM ಶಿವಮೊಗ್ಗ ಗ್ರಾಮೀಣ ಉಪವಿಭಾಗ ಪಿಳ್ಳಂಗಿರಿ ಮೆಸ್ಕಾಂ ಶಾಖಾ ವ್ಯಾಪ್ತಿಯ ಹೊಳೆಹೊನ್ನೂರು ವಿವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವಿರುವುದರಿಂದ ಜೂ. 06 ರಂದು ಬೆಳಗ್ಗೆ 9.30 ರಿಂದ ಸಂಜೆ 6.00ರವರೆಗೆ ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಮಲ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
RCB Victory Celebrations Turn Tragic: 11 Dead ಆರ್ ಸಿ ಬಿ ಗೆಲುವು. ಸಂಭ್ರಮಾಚರಣೆ ದುರಂತ. ಸರ್ಕಾರದಿಂದ ಪೂರ್ವ ತಯಾರಿ ವೈಫಲ್ಯ
RCB Victory Celebrations Turn Tragic: 11 Dead ಆರ್,ಸಿ,ಬಿ ತಂಡ ಐ,ಪಿ,ಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ೧೧ ಕ್ಕೂ ಹೆಚ್ಚು ಜನರ ಸಾವು – ಪ್ರಚಾರದ ಹಿಂದೆ ಬಿದ್ದ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ ಮತ್ತು ಅವ್ಯವಸ್ಥೆಯೆ ಕಾರಣ, ೧೮ ವರ್ಷದ ಬಳಿಕ ರಾಯಲ್ ಚಾಲೆಂಜರ್ಸ ಬೆಂಗಳೂರು ತಂಡವು ಪ್ರಥಮ ಬಾರಿಗೆ ಗೆಲವು ಸಾಧಿಸಿರುವುದು ಇಡೀ ಕನ್ನಡ ನಾಡು ಸಂಬ್ರಮ ಪಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಸರ್ಕಾರದ ಅವ್ಯವಸ್ಥೆಯಿಂದಾಗಿ ಕಾಲ್ತುಳಿಯತದಲ್ಲಿ ಸುಮಾರು ೧೧ ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವು ಹಾಗೂ ಸುಮಾರು ೩೦ ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವುದು ನಿಜಕ್ಕೂ ದುರಂತದ ವಿಷಯ. ಸೂಕ್ತ ವ್ಯವಸ್ಥೆಗಳು ಯೋಜನೆ ಮತ್ತು ಜನಸಂದಣಿಯ ನಿರ್ವಹಣೆ ಮಾಡದ ಇಂತಹ ಹೃದಯವಿದ್ರಾವಕ ಘಟನೆ.
ಕರ್ನಾಟಕ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನು ನಿಭಾಯಿಸುದರಲ್ಲಿ ವಿಫಲವಾಗಿದೆ ಸಂಭ್ರಮಾಚರಣೆಗಳು ನಡೆಯುತ್ತದೆ, RCB Victory Celebrations Turn Tragic: 11 Dead ಆದರೆ ರಾಜ್ಯ ಸರ್ಕಾರವು ಸರಿಯಾದ ರೂಪರೇಷ ಹಾಗೂ ತಯಾರಿ ಮಾಡಿಕೊಳ್ಳದೇ ಇರುವುದು ಇಂತಹ ದುರಂತಕ್ಕ ಕಾರಣವಾಗಿದೆ. ತುರ್ತು ಸೇವೆಗಳನ್ನು ನಿಯೋಜಿಸದೆ ಇರುವುದು ಅತ್ಯಂತ ಬೇಜವಾಬ್ದಾರಿ ಈ ಕೆಟ್ಟ ಘಟನೆಯನ್ನು ತಪ್ಪಿಸಬಹುದಿತ್ತು. ಆದರೆ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಮತ್ತು ಹೊಣೆಗಾರಿಕೆಯನ್ನು ಸರ್ಕಾರವೇ ತೆಗೆದುಕೊಳ್ಳಬೇಕಿದೆ, ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಗಳ ಆರೋಗ್ಯದ ಕುರಿತು ಸೂಕ್ತ ಚಿಕಿತ್ಸೆಯನ್ನು ಸರ್ಕಾರ ಕೊಡಿಸಬೇಕು ದುರಂತಕ್ಕೆ ಕಾರಣ ಪತ್ತೆಹಚ್ಚಲು ನ್ಯಾಯಂಗ ತನಿಖೆಗೆ ಒಪ್ಪಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಸಂಚಾಲಕ ಅಭಿಲಾಷ್ ಎನ್ ಹುರುಳಿಕೊಪ್ಪ ಅಗ್ರಹ.
World Environment Day ನೆಟ್ಟ ಗಿಡ, ಮರವಾದಾಗ ಕಡಿಯದಂತೆ ರಕ್ಷಿಸಿ- ಶೇಖರ್ ಗೌಳೇರ್
World Environment Day ಗಿಡಗಳನ್ನು ಬೆಳೆಸುವುದು ಮುಖ್ಯವಲ್ಲ. ಅವರುಗಳ ರಕ್ಷಣೆ ಯ ಹೊಣೆ ಹೊರುವುದು ಎಲ್ಲರ ಕರ್ತವ್ಯ. ಹೀಗಾಗಿ ಇಂದು ಬೆಳೆಸಿರುವ ಮರಗಳಿಗೆ ರಿಬ್ಬನ್ ಕಟ್ಟಿ ಅವುಗಳ ರಕ್ಷಣೆ ಮಾಡುತ್ತೇವೆಂದು ಪ್ರತಿಜ್ಞೆ ಮಾಡುವ ಪವಿತ್ರ ದಿನ ಜೂನ್ 5. ಇದನ್ನೇ ಎಲ್ಲೆಡೆ ಪರಿಸರ ದಿನವೆಂದು ಆಚರಿಸಲಾಗುತ್ತಿದೆ. ಆದ್ದರಿಂದ ಎಲ್ಲಾ ಮಕ್ಕಳು ತಮ್ಮ ಪರಿಸರದಲ್ಲಿ ಕಂಡು ಬರುವ ಗಿಡ ಮರಗಳನ್ನು ಯಾರು ಸಹ ಕಡಿಯದಂತೆ ನೋಡಿಕೊಳ್ಳಬೇಕು ಎಂದು ವೃಕ್ಷ ರಕ್ಷಾ ಸಮಿತಿಯ ಸಂಚಾಲಕ ರಾದ ಫ್ರೊ. ಶೇಖರ್ ಗೌಲೇರ್ ಅವರು ತಿಳಿಸಿದ್ದಾರೆ. ಶ್ರೀಯುತರು ಕೀರ್ತಿ ನಗರದ ವನಿತಾ ವಿದ್ಯಾಲಯದ ಆವರಣದಲ್ಲಿ ಬೆಳೆಸಿರುವ ಸುಂದರ ಪರಿಸರದಲ್ಲಿ ವಿಶ್ವ ಪರಿಸರ ದಿನ ಆಚರಣೆ ಸಂದರ್ಭದಲ್ಲಿ ಮಾತನಾಡುತ್ತಾ ತಿಳಿಸಿದರು.
ಈ ಸಂದರ್ಭದಲ್ಲಿ ಅಲ್ಲಿ ಬೆಳೆಸಿರುವ ಮರಗಳಿಗೆ ಎಂ. ಎನ್. ಸುಂದರ ರಾಜ್, ಜಿ.ವಿಜಯಕುಮಾರ್, ಪ್ರಸಾರ ರಮೇಶ್, ಸದಾನಂದ್, ಮಮತಾ, ರಮ್ಯಾ ಮತ್ತು ಶಾಲಾ ಮಕ್ಕಳು ಮರಗಳಿಗೆ ಕೆಂಪು ರಿಬ್ಬನ್ ಕಟ್ಟಿ ವೃಕ್ಷ ರಕ್ಷಣೆಗೆ ತಮ್ಮ ಬದ್ಧತೆಯನ್ನು ವ್ಯಕ್ತ ಪಡಿಸಿದರು.
World Environment Day ಶೇಖರ್ ಗೌಳೇರ್ ಮಕ್ಕಳಿಗೆ ಪರಿಸರ ದಿನಾಚರಣೆ ಅಂಗವಾಗಿ ರಸ ಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟು ವಿಜೇತರಿಗೆ ಬಹುಮಾನ ವಿತರಿಸಿದರು.
ವಿಶ್ವ ಪರಿಸರ ದಿನಾಚರಣೆ ಎಲ್ಲ ಮಕ್ಕಳು, ಶಿಕ್ಷಕರು ಮತ್ತು ಬಿಎಡ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು.
ಅಧ್ಯಕ್ಷತೆಯನ್ನು ವನಿತಾ ವಿದ್ಯಾಲಯದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ ಕುಮಾರ್ ಪರಿಸರ ಗೀತೆಯನ್ನು ಹಾಡಿದರು.
ಪ್ರಾರಂಭದಲ್ಲಿ ಸಂತೋಷ್ ಅವರು ಸ್ವಾಗತಿಸಿದರು. ಕೊನೆಯಲ್ಲಿ ಭಾರಣಿಯವ್ರು ವಂದಿಸಿದರು.
World Environment Day ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸಬೇಕು- ಡಾ.ಪಿ.ನಾರಾಯಣ್
World Environment Day ಇಂದು ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್, ಜಾವಳ್ಳಿ ಹಾಗೂ ಬಯೋ ಡೈವರ್ ಸಿಟಿ ಫೌಂಡೇಶನ್ ಆಫ್ ರೋಟರಿ ಕ್ಲಬ್ಸ್ ಆಫ್ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಾಡಿಕೊಪ್ಪದಲ್ಲಿರುವ ರೋಟರಿ ಬಯೋ ಡೈವರ್ ಸಿಟಿ ಫಾರೆಸ್ಟ್ ಸ್ಥಳದಲ್ಲಿ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರತಿ ತರಗತಿಯಿಂದ ಆಯ್ಕೆಯಾದ ಮಕ್ಕಳಿಂದ ಸಸಿನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಅರಬಿಂದೋ ಫೌಂಡೇಶನ್ ಫಾರ್ ಎಜುಕೇಷನ್ ನ ನಿರ್ದೇಶಕರು ಹಾಗೂ ಶಿವಮೊಗ್ಗ ರೋಟರಿ ಸಂಸ್ಥೆಯ ಡಿ.ಆರ್.ಎಫ್.ಸಿ. ಗಳಾದ ಡಾ. ಪಿ. ನಾರಾಯಣ್ ಅವರು ಮಾತನಾಡುತ್ತಾ ” ಜ್ಞಾನದೀಪ ಶಾಲೆಯು ಮಕ್ಕಳಿಗೆ ಗಿಡನೆಡುವ, ಪೋಷಿಸುವ ಪರಿಸರದ ಜವಾಬ್ದಾರಿಯನ್ನು ಮೊದಲಿನಿಂದಲೂ ನೀಡುತ್ತಿದೆ. ಇಂದಿನ ಜನಾಂಗ ಸಂಪೂರ್ಣವಾಗಿ ಪ್ಲಾಸ್ಟಿಕ್ ಅನ್ನು ನಿಷೇಧಿಸಬೇಕು.” ಎಂದು ಹೇಳಿದರು.
ಶ್ರೀ ಅರಬಿಂದೋ ಫೌಂಡೇಶನ್ ಫಾರ್ ಎಜುಕೇಶನ್ ನ ಮತ್ತೋರ್ವ ನಿರ್ದೇಶಕರು ಹಾಗೂ ರೋಟರಿ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ಹೆಚ್.ಎನ್.ಎಸ್.ರಾವ್ ಅವರು ಮಾತನಾಡುತ್ತಾ ” ಮುಂದಿನ ಜನಾಂಗದ ಆಸ್ತಿ ಇಂದಿನ ಮಕ್ಕಳು. ಮಕ್ಕಳಿಂದ ಗಿಡನೆಡುವ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ. ಇಂದು ಜ್ಞಾನದೀಪ ಶಾಲೆಯ ಆಯ್ಕೆಯಾದ ಮಕ್ಕಳು ಗಿಡಗಳನ್ನು ನೆಟ್ಟಿದ್ದು ನಮಗೆ ಸಂತೋಷವಾಗಿದೆ. ಈ ಪರಂಪರೆ ಇದೇ ರೀತಿ ಮುಂದುವರೆಯಲಿ. ತಾವು ನೆಟ್ಟ ಗಿಡಗಳ ಪಾಲನೆ – ಪೋಷಣೆಯನ್ನು ನೀವು ಜವಾಬ್ದಾರಿಯಿಂದ ಮಾಡಬೇಕೆಂದು ಮಕ್ಕಳಿಗೆ ಹೇಳಿದರು.
World Environment Day ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀ ಶ್ರೀಕಾಂತ್ ಎಮ್ ಹೆಗ್ಡೆ ಅವರು ಮಾತನಾಡುತ್ತಾ ” ಇಂದು ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್ ನ ಪ್ರತಿ ತರಗತಿಯಿಂದ ಆಯ್ಕೆಯಾದ 3 ರಿಂದ 14 ವರ್ಷದವರೆಗಿನ ಸುಮಾರು 50 ಮಕ್ಕಳಿಗೆ ರೋಟರಿ ಬಯೋಡೈವರ್ ಸಿಟಿ ಫಾರೆಸ್ಟ್ ಸ್ಥಳದಲ್ಲಿ ಗಿಡಗಳನ್ನು ನೆಡುವ ಒಂದು ಸುವರ್ಣ ಅವಕಾಶವನ್ನು ನೀಡಿದ ರೋಟರಿ ಸಂಸ್ಥೆಗೆ ಧನ್ಯವಾದ ತಿಳಿಸುತ್ತಾ, ಮಕ್ಕಳಿಗೆ ಇದೊಂದು ಅವಿಸ್ಮರಣೀಯ ಸಮಯ. ಈ ರೀತಿಯ ಕಾರ್ಯಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರಿಗೆ ಪರಿಸರ ಪ್ರಜ್ಞೆ ಮೂಡುತ್ತದೆ. ಪರಿಸರವನ್ನು ಕಾಪಾಡಿ ಜೀವಸಂಕುಲವನ್ನು ರಕ್ಷಿಸಬೇಕೆಂಬ ಮನೋಭಾವನೆ ಉಂಟಾಗುತ್ತದೆ. ಎಂದು ಹೇಳಿದರು.
ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ವಾಣಿ ಕೃಷ್ಣಪ್ರಸಾದ್ ಅವರು ಪರಿಸರ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಶಾಲೆಯ ಶಿಕ್ಷಕಿ ಶ್ರೀಮತಿ ವಿದ್ಯಾ ಪ್ರಾರ್ಥಿಸಿದರು. ಶಿಕ್ಷಕಿ ಪ್ರಿಯಾ ಸ್ವಾಗತಿಸಿದರು. ಶಾಲೆಯ ಶಿಕ್ಷಕ ಶ್ರೀ ಶ್ರೀಕಾಂತ್ ಗೋಸಾವಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಅರಬಿಂದೋ ಫೌಂಡೇಶನ್ ಫಾರ್ ಎಜುಕೇಶನ್ ನ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್. ನೀಲಕಂಠಮೂರ್ತಿ, ರೋಟರಿ ಟ್ರಸ್ಟ್ ಕಾರ್ಯದರ್ಶಿ ಶ್ರೀ ಆನಂದಮೂರ್ತಿ, ರೋಟೆರಿಯನ್ ಶ್ರೀ ಕೆ.ಪಿ.ಶೆಟ್ಟಿ , ಬಯೋಡೈವರ್ ಸಿಟಿ ಯೋಜನೆಯ ಅಧ್ಯಕ್ಷರಾದ ಶ್ರೀ ಉಮೇಶ್, ಟ್ರಸ್ಟ್ ಸದಸ್ಯರಾದ ಶ್ರೀ ವಿಜಯ್ ಕುಮಾರ್, ಶಾಲಾ ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
Prayas Day 2025 ಋತುಸ್ರಾವದ ಬಗ್ಗೆ ಯುವತಿಯರು ವೈಜ್ಞಾನಿಕವಾಗಿ ತಿಳಿದುಕೊಳ್ಳಬೇಕು- ಡಾ.ಕೌಸ್ತುಭ ಅರುಣ್
Prayas Day 2025 ಮಹಿಳೆಯರು ಆರೋಗ್ಯ ಹಾಗೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಬೇಕು. ಇದರಿಂದ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಡಾ. ಕೌಸ್ತುಭಾ ಅರುಣ್ ಅಭಿಪ್ರಾಯಪಟ್ಟರು.
ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದ ವತಿಯಿಂದ ಆಯೋಜಿಸಿದ್ದ ಪ್ರಯಾಸ್ ದಿನಾಚರಣೆ ಅಂಗವಾಗಿ ಯುವತಿಯರಿಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಿರಿಯಡ್ಸ್ ಎನ್ನುವುದು ಖಾಸಗಿ ವಿಷಯವಷ್ಟೇ. ಋತುಸ್ರಾವ ಯಾಕೆ ಆಗುತ್ತದೆ, ಹೇಗೆ ಆಗುತ್ತದೆ ಎಂದು ಮಕ್ಕಳು ವೈಜ್ಞಾನಿಕವಾಗಿ ತಿಳಿದುಕೊಳ್ಳಬೇಕು. ಆ ದಿನಗಳಲ್ಲಿ ಉಪಯೋಗಿಸಬಹುದಾದ ವಿವಿಧ ತರಹದ ಮುಟ್ಟಿನ ನಿರ್ಮಲ್ಯದ ಉತ್ಪನ್ನಗಳನ್ನು ತಿಳಿದುಕೊಳ್ಳಬೇಕು. ಮುಟ್ಟಿನ ಕುರಿತಾದ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಅದೊಂದು ಸ್ವಾಭಾವಿಕ ಪ್ರಕ್ರಿಯೆ ಎಂಬ ಅರಿವು ಮೂಡಿಸುವುದು ನಮ್ಮ ಕರ್ತವ್ಯ ಹೌದು ಎಂದು ತಿಳಿಸಿದರು.
Prayas Day 2025 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ ಗಣೇಶ್ ಮಾತನಾಡಿ, ಇಂದು ನಾವು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳುವುದರ ಜತೆಗೆ ಜೊತೆಗೆ ಉತ್ತಮ ಆಹಾರ ಅಭ್ಯಾಸಗಳು ಹಾಗೂ ಜೀವನ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆಯ ಬಗ್ಗೆಯೂ ಸಹ ಗಮನ ಹರಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಉಮ್ಮೆ ಸಲ್ಮಾ, ಆಡಳಿತ ಅಧಿಕಾರಿ ನಾಗರಾಜ್ ಟಿಪಿ, ಗುರುಮೂರ್ತಿ ಗೌಡ, ಸ್ವಪ್ನ ಬದರಿನಾಥ್, ವಿದ್ಯಾ ಸುದರ್ಶನ್, ಡಾ. ಬೃಂದಾ, ಜೆಸಿಐ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ಪ್ಯಾಡ್‌ಗಳನ್ನು ವಿತರಿಸಲಾಯಿತು.
