Friday, February 27, 2026
Friday, February 27, 2026
Home Blog Page 283

Karnataka Vokkaliga Development Corporation ಕರ್ನಾಟಕ ಒಕ್ಕಲಿಗರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ

0

Karnataka Vokkaliga Development Corporation ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26 ನೇ ಸಾಲಿನ ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಾವಂಭಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ,(ಬ್ಯಾಂಕುಗಳ ಸಹಯೋಗದೊಂದಿಗೆ) ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ, ಸ್ವಾತಂತ್ರ್ಯ ಮಹೋತ್ಸವದ ಅಮೃತ ಮುನ್ನಡೆ ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗ-3ರಲ್ಲಿ ಬರುವ ಒಕ್ಕಲಿಗ ಸಮುದಾಯಗಳಿಗೆ ಸೇರಿದ ಕ್ರಮ ಸಂಖ್ಯೆ 1(ಎ) ಯಿಂದ (ಟಿ) ವರೆಗೆ ನಮೂದಾಗಿರುವ ಸಮುದಾಯಕ್ಕೆ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಲಿಂಗಾಯಿತ, ಕಾಡುಗೊಲ್ಲ, ಮರಾಠ, ಮತ್ತು ಇದರ ಉಪಜಾತಿಗಳನ್ನು ಹೊರತುಪಡಿಸಿ)ಸೇರಿದ ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
Karnataka Vokkaliga Development Corporation ನಿಗಮವು ಅನುಷ್ಠಾನಗೊಳಿಸಿರುವ ಮೇಲ್ಕಂಡ ಯೋಜನೆಗಳನ್ನು ಶಾಸಕರು ಅಥವಾ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ರಚಿಸಿದ ಆಯ್ಕೆ ಸಮಿತಿಯ ಮೂಲಕ ಆಯ್ಕೆಯನ್ನು ಮಾಡಲಾಗುವುದು. 2023-24 ಮತ್ತು 2024-25 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಕುಟುಂಬದ ಒಬ್ಬ ಸದಸ್ಯರು ಮಾತ್ರ ಮೇಲ್ಕಂಡ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು.
ಈ ಸೌಲಭ್ಯಗಳನ್ನು ಪಡೆಯಲು ಸೇವಾಸಿಂಧು http:/sevasindhu.karnataka.gov.in ಪೋರ್ಟಲ್‌ನ ಮುಖಾಂತರ ಗ್ರಾಮ ಒನ್, ಶಿವಮೊಗ್ಗ ಒನ್, ಕರ್ನಾಟಕ ಒನ್, ಮೂಲಕ ಅನ್ ಲೈನ್ ನಲ್ಲಿ ಮತ್ತು ಕ್ರಮಸಂಖ್ಯೆ 06 ರಲ್ಲಿ ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆಗೆ ಅರ್ಜಿಯನ್ನು ಕೌಶಲ್ಯ ಕರ್ನಾಟಕ ಅಭಿವೃದ್ಧಿ ನಿಗಮದ ತಂತ್ರಾಂಶ https://www.kaushalkar.com ನಲ್ಲಿ ಅರ್ಜಿಯನ್ನು ಸಲ್ಲಿಸಲು ಜುಲೈ 02 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದ ಜಾಲತಾಣ https://kvcdc.karnataka.gov.in ಅಥವಾ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ಭಾಗ್ಯ ನಿಲಯ, 1ನೇ ತಿರಿವು, ಗಾಂಧಿನಗರ, ಶಿವಮೊಗ್ಗ ಇಲ್ಲಿ ಪೆಡೆಯಬಹುದಾಗಿದೆ. ದೂ. ಸಂ. 08182-229634 ಸಂಪರ್ಕಿಸಿ ಎಂದು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

World Environment Day ಪ್ಲಾಸ್ಟಿಕ್ ಉತ್ಪಾದನೆ ನಿಲ್ಲಿಸಿ, ಪರಿಸರ ಉಳಿಸಿ- ಡಾ. ರಾಜೇಶ್ವರಿ

0

World Environment Day ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರೆಡ್ ಕ್ರಾಸ್ ಹಾಗೂ ಪರಿಸರ ವಿಜ್ಞಾನ ವಿಭಾಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ ಪರಿಸರ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಸರ ದಿನಾಚರಣೆಯನ್ನು ೧೯೭೩ ರಿಂದ ಪ್ರತಿ ವರ್ಷ ಒಂದೊAದು ಘೋಷವಾಕ್ಯದಡಿ ಆಚರಿಸಿಕೊಂಡು ಬರಲಾಗುತ್ತಿದೆ ,ಈ ವರ್ಷದ ಘೋಷವಾಕ್ಯ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವುದಾಗಿದೆ , ಪ್ರತಿ ದಿನ ಪ್ಲಾಸ್ಟಿಕ್ ಮಾಲಿನ್ಯದಿಂದ ಪರಿಸರ ಸರ್ವನಾಶವಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಾಗಿದೆ. ಉತ್ಪಾದನೆಯನ್ನು ಮೂಲದಲ್ಲಿಯೇ ನಿಲ್ಲಿಸುವುದರಿಂದ ಪರಿಸರ ಉಳಿಸಲು ಸಾಧ್ಯವಾಗುವುದು ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಅವರು ಸಹ ಮಾತನಾಡುತ್ತಾ ಪ್ಲಾಸ್ಟಿಕ್ ಬಳಸಬೇಡಿ ಎಂದು ತಿಳಿಸುವ ಬದಲು ಪ್ಲಾಸ್ಟಿಕ್ ಉತ್ಪತ್ತಿಯನ್ನು ನಿಲ್ಲಿಸುವುದು World Environment Day ಒಂದು ಸೂಕ್ತ ಕ್ರಮವಾಗಿದೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ನಿಂದ ಸಾಕಷ್ಟು ಸಮಸ್ಯೆಗಳನ್ನು ನಾವು ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ ಆಸ್ಪತ್ರೆಗಳು ಹೆಚ್ಚಾಗುತ್ತಿವೆ ಅದಕ್ಕೆಲ್ಲ ಪರಿಹಾರ ಎಂದರೆ ಪ್ಲಾಸ್ಟಿಕ್ ಉತ್ಪತ್ತಿ ನಿಲ್ಲಿಸುವುದಾಗಿದೆ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ದೊಡ್ಡ ಅನಾಹುತವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ. ಅವಿನಾಶ್, ಎಸ್ಟೇಟ್ ಅಧಿಕಾರಿ ಡಾ. ಮಂಜುನಾಥ್, ಅರಣ್ಯ ಅಧಿಕಾರಿಗಳಾದ ಶ್ರೀಮತಿ ಸಿಂಧು, ರೆಡ್ ಕ್ರಾಸ್ ಅಧಿಕಾರಿಗಳಾದ ಡಾ. ಕೆ .ಎಲ್ ನಾಯಕ್, ಶ್ರೀ ಸಾಯಿಶ್ವರ್, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಹಾ.ಮ. ನಾಗಾರ್ಜುನ , ಶ್ರೀ ಅರುಣ್ , ಹಾಗೂ ಕಾಲೇಜಿನ ಸಿಬ್ಬಂದಿಗಳಾದ ಡಾ. ನಾಗರಾಜ್, ಡಾ. ವೆಂಕಟೇಶ್, ಶ್ರೀ ಜೀವನ್, ಶ್ರೀಮತಿ ಶಿಲ್ಪ, ಪ್ರೇಮ ಇನ್ನಿತರರು ಉಪಸ್ಥಿತರಿದ್ದರು.

International Day of Yoga ವಿಶ್ವ ಯೋಗ ದಿನಾಚರಣೆ ನಿಮಿತ್ತಉಚಿತ ನಾಡಿ ಪರೀಕ್ಷಾ ಶಿಬಿರ

0

International Day of Yoga 11 ನೇ ವಿಶ್ವ ಯೋಗ ದಿನಾಚರಣೆ ನಿಮಿತ್ತ ಶಿವಮೊಗ್ಗದ ಜವಳಿ ವರ್ತಕರ ಸಂಘದಿಂದ ಉಚಿತ ನಾಡಿ ಪರೀಕ್ಷಾ ಶಿಬಿರವನ್ನು ಜೂ. 8ರ ಭಾನುವಾರ ಬೆಳಿಗ್ಗೆ 7.30 ಛೇಂಬರ್ ಆಫ್ ಕಾಮರ್ಸ್ ನ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಾರ್ವಜನಿಕರಲ್ಲಿ ಯೋಗ ಮತ್ತು ಆರೋಗ್ಯದ ಅರಿವನ್ನು ಮೂಡಿಸುವ ಉದ್ದೇಶದಿಂದ ಜವಳಿ ವರ್ತಕರ ಸಂಘದ ಸದಸ್ಯರು ಹಾಗು ಕುಟುಂಬದವರಿ ಗಾಗಿ ಮತ್ತು ಆಸಕ್ತ ಸಾರ್ವಜನಿಕರಿಗೆ ಈ ಶಿಬಿರವನ್ನು ಆಯೋಜಿಸಲಾಗಿದೆ.
International Day of Yoga ಪ್ರಸಿದ್ಧ ಆಯುರ್ವೇದ ಪಂಡಿತರಾದ ವರುಣ್ ಆನಂದ್‌ರವರು ಶಿಬಿರ ನಡೆಸಿಕೊಡಲಿದ್ದು, ಅಂದು ಬೆಳಿಗ್ಗೆ 7.30ರಿಂದ ನೊಂದಾವಣೆ ಕಡ್ಡಾಯವಾಗಿರುತ್ತದೆ. ಭಾಗವಹಿಸಲು ಇಚ್ಚಿಸುವವರು ಖಾಲಿ ಹೊಟ್ಟೆಯಲ್ಲಿ ಬರಬೇಕು, ಸ್ಥಳದಲ್ಲಿ ನೊಂದಣಿ ಇರುವುದಿಲ್ಲ. ಮಾಹಿತಿಗೆ ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್. ಶೆಟ್ಟರ್ ಮೊ. 9886674375, ರಾಕೇಶ್ ಸಾಕ್ರೆ 9844152902ರಲ್ಲಿ ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಬೇದ್ರೆ ಕೋರಿದ್ದಾರೆ.

World Environment Day ಜೆಸಿಐ ಸಮೃದ್ಧಿ ಘಟಕದ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ

0

World Environment Day ವಿಶ್ವ ಪರಿಸರ ದಿನದ ಪ್ರಯುಕ್ತ ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷರಾದ ಜೆ ಎಫ್ ಡಿ ಜೆಸಿ ನರಸಿಂಹಮೂರ್ತಿ ಹಾಗೂ ಜೆಸಿ ರಾಜಣ್ಣ ರವರ ಅಮೃತ ಹಸ್ತದಿಂದ ಗಿಡ ನೆಡುವ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಜೆ ಸಿ ರಾಜಣ್ಣ ಮಾತನಾಡಿ, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮದು. ಪ್ರತಿಯೊಬ್ಬರು ಕನಿಷ್ಠ ಐದು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು.

ಅಧ್ಯಕ್ಷರಾದ ಜೆಸಿ ನರಸಿಂಹಮೂರ್ತಿ ಮಾತನಾಡಿ, ಗಿಡಮರಗಳನ್ನು ನಾವು ರಕ್ಷಿಸಿದಲ್ಲಿ ಮುಂದೊಂದು ದಿನ ಈ ಗಿಡ ಮರಗಳಾಗಿ ಅವು ನಮ್ಮನ್ನು ರಕ್ಷಿಸುತ್ತವೆ ಎಂದು ಹಿತನುಡಿದರು.

World Environment Day ಸುಮಾರು 50 ಗಿಡಗಳನ್ನು ನೆಟ್ಟು ಉಳಿದ 450 ಗಿಡಗಳನ್ನು ನೆಡಲು ಕೊಡಿಸಲಾಯಿತು.

ಸಮೃದ್ಧಿ ಘಟಕದ ಕಾರ್ಯದರ್ಶಿ ಜೆಸಿ ಗಾಯತ್ರಿ ಯಲ್ಲಪ್ಪ ಗೌಡ, ಪದಾಧಿಕಾರಿಗಳಾದ ಜೆಸಿ ನರಸಮ್ಮ, ಜೆಸಿ ಶಶಿಕಲಾ, ಜೆಸಿ ಪುಷ್ಪ, ಜೆಸಿ ಕಿರಣ್ ಕುಮಾರ್, ಜೆಸಿ ಮೋಹನ್ ಕುಮಾರ್, ಜೆಸಿ ಸರಳ ವಾಸನ್, ಜೆಸಿ ನವೀನ್ ಗೌಡ , ಜೆಸಿ ಅನ್ನಪೂರ್ಣ, ಜೆಸಿ ಮಂಜುಳ, ಜೆಸಿ ಸುಮಾ ಮತ್ತು ಬಿ.ಎಂ.ಯಲ್ಲಪ್ಪ ಗೌಡ, ಜೆಸಿ ರಂಜಿತಾ, ಲಕ್ಷ್ಮಮ್ಮ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Royal English Medium School “ಕೇಕ್ ಬಿಡಿ ಗಿಡ ನೆಡಿ”- ಡಾ. ನಾಗರಾಜ ಪರಿಸರ

0

Royal English Medium School ಶಿವಮೊಗ್ಗ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಘೋಷಣೆಗಳನ್ನು ಕೂಗುತ್ತಾ ಜಾತಾ ಮೂಲಕ ಅರಿವು ಮೂಡಿಸಲಾಯಿತು. ಶಾಲೆಯ ಸಲಹಾ ಸಮಿತಿ ಸದಸ್ಯರಾದ ಡಾ. ನಾಗರಾಜ್ ಪರಿಸರ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯನ್ನು ಮೊಟ್ಟಮೊದಲ ಬಾರಿಗೆ ೧೯೭೩ ರಲ್ಲಿ ಆಚರಿಸಲಾಯಿತು. ಹೆಚ್ಚಾಗಿ ಪ್ಲಾಸ್ಟಿಕ್ ಬಳಸುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಮನುಷ್ಯನ ಮೇಲೆ ಭೀಕರ ಪರಿಣಾಮವನ್ನು ಬೀರಿ ಸಾವಿಗೀಡಾಗುತ್ತಿದ್ದಾರೆ. ಮಕ್ಕಳು ಇತ್ತೀಚಿನ ದಿನಗಳಲ್ಲಿ ಜೆಂಕ್ ಫುಡ್ ಗಳನ್ನು ಕುರ್ಕುರೆ ಮುಂತಾದ ಪದಾರ್ಥಗಳನ್ನು ಸೇವಿಸುತ್ತಾ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದೆಲ್ಲವನ್ನು ಬಿಟ್ಟು ತಾಜಾ ತರಕಾರಿ, ಸೊಪ್ಪು, ಹಣ್ಣು ಗಳನ್ನು ಸೇವಿಸಬೇಕು ಎಂದು ಹೇಳಿದರು. ಹುಟ್ಟುಹಬ್ಬದ ದಿನ ಕೇಕ್ ಬಿಡಿ ಗಿಡ ನೆಡಿ ಎಂದು ತಿಳಿಸಿ *ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಆಸೆಗಳನೆಲ್ಲ ಪೂರೈಸುತ್ತದೆಯೇ ಹೊರತು ದುರಾಸೆಗಳನ್ನಲ್ಲ -ಮಹಾತ್ಮ ಗಾಂಧೀಜಿ , ಎಂಬ ಸಂದೇಶವನ್ನು ನೀಡಿದರು. ನಂತರ ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಿಸಿದ ಕೆಲವು ಗೀತೆಗಳನ್ನು ಹಾಗೂ ನೃತ್ಯಗಳನ್ನು ಅಣುಕು ಪ್ರದರ್ಶನಗಳನ್ನು ಮಾಡಿದರು. ಅಣುಕು ಪ್ರದರ್ಶನದಿಂದ ವಿದ್ಯಾರ್ಥಿಗಳಿಗೆ ಪ್ರಕೃತಿಯಿಂದ ನಮಗೆ ಗಾಳಿ ,ಬೆಳಕು, ಆಹಾರ, ಹಣ್ಣು, Royal English Medium School ನೆರಳು ಎಲ್ಲವೂ ದೊರೆಯುತ್ತವೆ. ಅದೇ ರೀತಿ ಪ್ರಕೃತಿ ನಾಶ ಮಾಡಿದರೆ ಎಲ್ಲವೂ ನಾಶವಾಗುತ್ತದೆ ಎಂಬುದನ್ನು ಅಣುಕು ಪ್ರದರ್ಶನದಿಂದ ಪರಿಚಯಿಸಿದರು. ಕೊನೆಯಲ್ಲಿ ಮಕ್ಕಳಿಂದ ಹಣ್ಣಿನ ಗಿಡಗಳನ್ನು ನೆಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಪೂಜಾ ನಾಗರಾಜ್ ಪರಿಸರ ಶಾಲೆಯ ಎಲ್ಲಾ ಶಿಕ್ಷಕರುಗಳು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುವೀಕ್ಷಾ ಮತ್ತು ತಂಡದವರು ಪ್ರಾರ್ಥಿಸಿದರು, ಕುಮಾರಿ ತೇಜಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಪೂಜಾ ಎಲ್ಲರನ್ನೂ ವಂದಿಸಿದರು

Multi Purpose Social Service Society ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್‌ಬುಕ್ ವಿತರಣೆ

0

Multi Purpose Social Service Society ಮಕ್ಕಳು ಮೊಬೈಲ್ ಬಿಟ್ಟು ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಮಟ್ಟದಲ್ಲಿ ಸಾಗಬೇಕು. ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷೆ ಹಾಗೂ ಅಸಂಘಟಿತ ಕೂಲಿ ಕಾರ್ಮಿಕರ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಕವಿತಾ ಥೋರತ್ ಹೇಳಿದರು.

ಶಿವಮೊಗ್ಗ ನಗರದ ಆಲ್ಕೊಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ) ವತಿಯಿಂದ ಶಿವಮೊಗ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಟ್ಟಿಗೆಹಳ್ಳಿ ಮತ್ತು ಸಿರಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕವನ್ನು ವಿತರಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್, ಇಂಟರ್‌ನೆಟ್ ಮೂಲಕ ಬಹಳಷ್ಟು ಮಕ್ಕಳು ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್‌ಗಳಿಂದ ದೂರವಿಟ್ಟು ಪುಸ್ತಕಗಳನ್ನು ಓದಲು ನೀಡಬೇಕು ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಸಂಸ್ಕಾರ, ಸದ್ಗುಣಗಳ ಜೊತೆಗೆ ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಿಕೊಡಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಯಲ್ಲಿರುವುದನ್ನು ನಾವು ಗಮನಿಸಬಹುದು. ಮುಂದಿನ ದಿನಗಳಲ್ಲಿ ನೀವೆಲ್ಲರೂ ಉನ್ನತ ವಿದ್ಯಾಭ್ಯಾಸ ಮುಗಿಸಿ ಇದೇ ವೇದಿಕೆಯಲ್ಲಿ ಅತಿಥಿಗಳಾಗಿ ಬಾಗವಹಿಸಿ ಎಂದು ಶುಭಹಾರೈಸಿದರು.

Multi Purpose Social Service Society ಇಂದಿನ ಕಾಲಘಟ್ಟದಲ್ಲಿ ಶಿಕ್ಷಣಕ್ಕೆ ಬಹಳ ಮಹತ್ವವಿದೆ. ಮಕ್ಕಳು ಶಾಲೆಯ ಹಂತದಲ್ಲಿ ತಮ್ಮ ಮುಂದಿನ ಗುರಿಯನ್ನು ಇಟ್ಟುಕೊಂಡು ಅದಕ್ಕೆ ತಕ್ಕಂತೆ ಪರಿಶ್ರಮದಿಂದ ಅಧ್ಯಯನ ನಡೆಸಿ ತಮ್ಮ ಗುರಿಯನ್ನು ತಲುಪಬೇಕು. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಬೇಕಾದ ಕೆಲಸ ಪೋಷಕರು ಹಾಗೂ ಶಿಕ್ಷಕರು ಮಾಡಬೇಕಿದೆ ಎಂದರು.

ಸಂಸ್ಥೆಯ ನಿರ್ದೇಶಕ ಫಾದರ್ ಪಿಯುಸ್ ಡಿಸೋಜಾ ಮಾತನಾಡಿ, ಮಕ್ಕಳು ಶಿಕ್ಷಣ ಕಲಿತರೆ ತಮಗಾಗುವ ಪ್ರಯೋಜನಗಳು, ಶಿಕ್ಷಣ ಕಲಿಯದಿದ್ದರೆ ಆಗುವ ಸಮಸೈಗಳ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಿರಿಗೆರೆ ಸ್ತ್ರೀಬಂಧು ಒಕ್ಕೂಟದ ಅಧ್ಯಕ್ಷೆ ರೂಪ, ಸಿರಿಗೆರೆ ಗ್ರಾ.ಪಂ. ಉಪಾಧ್ಯಕ್ಷೆ ನಾಗರತ್ನಮ್ಮ, ಸಿರಿಗೆರೆ ಗ್ರಾ.ಪಂ. ಸದಸ್ಯ ಯೋಗೇಂದ್ರ, ಹಾಗೂ ಸ್ವ ಸಹಾಯ ಸಂಘಗಳ ಮಹಿಳೆಯರು, ಗ್ರಾಮಸ್ಥರು, ಶಾಲಾ-ಮಕ್ಕಳು, ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

Dr. HS Venkateshamurthy ನಾಲ್ಕು ದಿನದ ಬಾಳಿಗೆ ಇರಲಿ ಹಾಲು ಹೋಳಿಗೆನುಡಿ-ಗಾನ- ನಮನ

0

Dr. HS Venkateshamurthy ಕರ್ನಾಟಕ ಸುಗಮ ಸಂಗೀತ ಪರಿಷತ್ತು ಶಿವಮೊಗ್ಗ ಘಟಕ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಭಾವಗಾನ ಶಿವಮೊಗ್ಗ ನಾದ ಶ್ರೀ. ಸುಗಮ ಸಂಗೀತ ಶಾಲೆ. ಅರ್ಪಿತ ಸಂಗೀತ ಶಾಲೆ. ಹಾಗೂ ತರಂಗಿಣಿ ಸಂಗೀತ ಶಾಲೆ ಶಿವಮೊಗ್ಗ. ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 7-6-2025 ಶನಿವಾರ ಸಂಜೆ ಶಿವಮೊಗ್ಗದ ಮಥುರಾ ಸಭಾಂಗಣದಲ್ಲಿ ಸಂಜೆ 5:00ಗೆ. ಕೀರ್ತಿಶೇಶ ಕವಿ ಡಾ. ಎಚ್ಎಸ್ ವೆಂಕಟೇಶಮೂರ್ತಿ ಯವರಿಗೆ ನಾಕು ದಿನದ ಬಾಳಿಗೆ ಇರಲಿ ಹಾಲು ಹೋಳಿಗೆ ನುಡಿಗಾನ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವಾಧ್ಯಕ್ಷರಾದ ಎನ್ ಗೋಪಿನಾಥ್ ಅವರು ವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಶ್ರೀಮತಿ ಶಾಂತ ಶೆಟ್ಟಿ. ಕಾರ್ಯದರ್ಶಿ ಮಥುರಾ ನಾಗರಾಜ್. ಖಜಾಂಚಿ. ಜಿ ವಿಜಯಕುಮಾರ್. ಸಂಚಾಲಕರಾದ. ಶೋಭಾ ಸತೀಶ್. Dr. HS Venkateshamurthy ನಿರ್ದೇಶಕರುಗಳಾದ ಮಂಜುನಾಥ್ ಜಯಶ್ರೀ ಶ್ರೀಧರ್. ಭಾವಗಾನ ತಂಡದ ಅಧ್ಯಕ್ಷರಾದ ಭದ್ರಾವತಿ ವಾಸು. ಸುಮ್ಮ ಸಂಗೀತ ಪರಿಷತ್ ತಾಲೂಕ ಘಟಕದ ಅಧ್ಯಕ್ಷರಾದ ಲಲಿತಮ್ಮ ಹಾಗೂ ಕಲಾವಿದರು ಹಾಡುಗಾರರು ಪರಿಷತ್ತಿನ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ

Shivamogga District Tourism Development Forum ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ ಹರಿಹರಪುರ ಮಠಕ್ಕೆ ಪ್ರವಾಸ

0

Shivamogga District Tourism Development Forum ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ 29.06.25 ರ ಭಾನುವಾರ ಶಿವಮೊಗ್ಗದಿಂದ ಮೃಗವದೆ ಚಿಬ್ಬಲುಗುಡ್ಡೆ ಶೃಂಗೇರಿ ಶಕಟಪುರ ಹಾಗೂ ಹರಿಹರಪುರ ಮಠಕ್ಕೆ ಪ್ರವಾಸವನ್ನು ಏರ್ಪಡಿಸಲಾಗಿದೆ

ಶಿವಮೊಗ್ಗದಿಂದ ಬೆಳಿಗ್ಗೆ 7:30ಕ್ಕೆ ಹೊರಟು ರಾತ್ರಿ 8 ರ ಒಳಗಾಗಿ ಶಿವಮೊಗ್ಗಕ್ಕೆ ತಲುಪಲಾಗುವುದು

Shivamogga District Tourism Development Forum ಶುಲ್ಕ ಒಬ್ಬರಿಗೆ ರೂ 400 ಮಾತ್ರ. (ಬಸ್ ಚಾರ್ಜ್ ಮಾತ್ರ) 45 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ನೀಡಲಾಗುವುದು. ಆಸಕ್ತರು ತಮ್ಮ ಹೆಸರನ್ನು ವಾಗೀಶ್ ದೂರವಾಣಿ 7892548980 ಅಥವಾ ಎಚ್ಎಸ್ ನಾಗರಾಜ ದೂರವಾಣಿ ಸಂಖ್ಯೆ 7892426584 ಇವರ ಬಳಿ ನೋಂದಾಯಿಸುವಂತೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ಎನ್.ಗೋಪಿನಾಥ್ ಅವರು ತಿಳಿಸಿದ್ದಾರೆ.

Government Employees Cooperative Society Ltd ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

0

Government Employees Cooperative Society Ltd ಶಿವಮೊಗ್ಗ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘವು 2025ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ, 10ನೇ ತರಗತಿ (ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ), ದ್ವಿತೀಯ ಪಿ.ಯು.ಸಿ ಹಾಗೂ 12ನೇ ತರಗತಿ (ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ) ಪರೀಕ್ಷೆಯಲ್ಲಿ ಶೇಕಡ 90ಕ್ಕೂ ಅಧಿಕ ಅಂಕ ಪಡೆದ ಸಹಕಾರಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
Government Employees Cooperative Society Ltd ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 30 ರೊಳಗೆ bit.ly/empsouhardashimoga ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಆರ್.ಮೋಹನ್ ಕುಮಾರ್‌ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸುನಿಲ್: 7259618767, ಎನ್.ಎಂ.ರAಗನಾಥ: 9916278470 ಇವರನ್ನು ಸಂಪರ್ಕಿಸುವುದು.

Karnataka Veerashaiva Lingayat Development Corporation ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

0

Karnataka Veerashaiva Lingayat Development Corporation ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದಿಂದ 2025-26 ನೇ ಸಾಲಿನ ವಿವಿಧ ಯೋಜನೆಗಳಾದ ಶೈಕ್ಷಣಿಕ ಸಾಲ ಯೋಜನೆ, ಜೀವಜಲ ಯೋಜನೆ, ಕಾಯಕಕಿರಣ ಯೋಜನೆ, ಭೋಜನಾಲಯ ಕೇಂದ್ರ, ವಿಭೂತಿ ನಿರ್ಮಾಣ ಘಟಕ, ಸ್ವಾವಂಭಿ ಸಾರಥಿ ಯೋಜನೆ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ, ಸ್ವ ಸಹಾಯ ಸಂಘಗಳ ಉತ್ತೇಜನ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳಿಗೆ ಸೇರಿದ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಸವಿತಾ ಕಾಡುಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳನ್ನು ಹೊರತುಪಡಿಸಿ) ಸಮುದಾಯಗಳ ಆಸಕ್ತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಈ ಮೇಲಿನ ಯೋಜನೆಯ ಫಲಾನುಭವಿಗಳಾಗಲು ಅರ್ಜಿದಾರರು ತಮ್ಮ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿರಬೇಕು. ನಿಗಮವು ಅನುಷ್ಠಾನಗೊಳಿಸುವ ಈ ಮೇಲ್ಕಂಡ ಯೋಜನೆಗಳಲ್ಲಿ ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಅಧ್ಯಕ್ಷರು ಅಥವಾ ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್ ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸುವುದು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಮೇಲ್ಕಂಡ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. 2023-24 ಹಾಗೂ 2024-25 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಅದೇ ಯೋಜನೆಗೆ ಈ ವರ್ಷ ಮರು ಅರ್ಜಿ ಸಲ್ಲಿಸುವ ಅಗತ್ಯತೆ ಇರುವುದಿಲ್ಲ.
Karnataka Veerashaiva Lingayat Development Corporation ಆಸಕ್ತರು ಸೇವಾಸಿಂಧು ಪೋರ್ಟಲ್ http:/sevasindhu.karnataka.gov.in ಮುಖಾಂತರ ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರೀಕ ಸೇವಾಕೇಂದ್ರಗಳಲ್ಲಿ ದಾಖಲೆಗಳ ಸಹಿತ ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ಜಾಲತಾಣ https://kvldcl.karnataka.gov.in ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ(ನಿ), ಭಾಗ್ಯ ನಿಲಯ, 1ನೇ ತಿರುವು ಗಾಂಧಿನಗರ, ಶಿವಮೊಗ್ಗ ಇಲ್ಲಿ ಪಡೆಯಬಹುದಾಗಿದೆ. ದೂ.ಸಂ. 08182-229634 ಗೆ ಸಂಪರ್ಕಿಸಬಹುದಾಗಿರುತ್ತದೆ.