World Environment Day ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಬಿದರೆ ಗ್ರಾಮದಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ವಿನೂತನ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಸ್ನೇಹ ಬಳಗದಿಂದ ಹಮ್ಮಿಕೊಳ್ಳಲಾಗಿತ್ತು,
ಕಾರ್ಯಕ್ರಮದಲ್ಲಿ ಪರಿಸರ ಕುರಿತಂತೆ ಕಾಳಜಿ, ಜವಾಬ್ದಾರಿ, ಪೋಷಣೆಯ ಬಗ್ಗೆ ಭಾಗವಹಿಸಿದ ವಿವಿಧ ಸ್ತರದ ಸಮಾಜಮುಖಿ ಮನಸುಗಳು ಅಭಿಪ್ರಾಯಿಸಿದರು, ಗಿಡಗಳು ಒಂದೆಡೆ ಒಳ್ಳೆಯ ಆಮ್ಲಜನಕ ನೀಡಿದರೆ, ಅದು ಮನುಷ್ಯನಿಗೆ ಹಾಗೂ ಜಾನುವಾರುಗಳಿಗೆ, ಕೃಷಿ ಕೈಂಕರ್ಯಗಳಿಗೆ, ನೈಸರ್ಗಿಕ ಬೆಳವಣಿಗೆಗೆ ಬಹು ಉಪಕಾರಿಯಾಗಿದೆ. ಈ ನೆಲದಲ್ಲಿ ಸಸ್ಯ ಸಂಕುಲ ಉಳಿಯದಿದ್ದೊಡೆ, ಮನುಷ್ಯ ಸಂಕುಲವು ನಾಶವಾಗಬಲ್ಲದಾಗಿದೆ, ಜನ ಬದುಕುಗಳು ಸುಭಿಕ್ಷೆ ಇರಬೇಕು, ಕಾಲ ಕಾಲಕ್ಕೆ ಮಳೆ ಆಗಬೇಕು, ಇದರಿಂದ ಕೃಷಿ ಉತ್ಪನ್ನಗಳಿಗೆ ಸಹಕಾರಿ ಸಮೃದ್ದತೆಯನ್ನು ಕಟ್ಟಿ ಕೊಡಲು ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗುವ ಅಗತ್ಯತೆಗಳಿದೆ ಎಂದು ಜವಾಬ್ದಾರಿ ಅಭಿಪ್ರಾಯಗಳು ವ್ಯಕ್ತವಾದವು,
ಪಕ್ಷಿಗಳಿಗೆ ಅಹಾರ ಸಿಗಬೇಕು ಈ ನಿಟ್ಟಿನಲ್ಲಿ ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ, ಈ ಹಣ್ಣುಗಳ ಸಂತತಿ ಉಳಿಯಲು ಪಕ್ಷಿಗಳು ತಾನು ತಿಂದು ಸವೆಸಿದ ಹಣ್ಣಿನ ಬೀಜಗಳನ್ನು ದೂರದಿಂದ ದೂರಕೆ ಹಾರಿ ಹಿಕ್ಕೆಗಳನ್ನು ಹಾಕಿ ಆ ಹಣ್ಣಿನ ಗಿಡ-ಮರಗಳನ್ನು ಬೆಳೆಸುವ ಸಸ್ಯ ಸರಪಳಿಗೆ ಮುಂದಾಗುತ್ತದೆ ಎಂದು ವಿವರಿಸಿದರು,
World Environment Day ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಕೀಲರುಗಳಾದ ಗೀತಾ ಮಾನೆ, ರವಿಕುಮಾರ್, ರೇಖೇಶ್ ಮಾನೆ, ಉಪನ್ಯಾಸಕರುಗಳಾದ ಡಾ.ಪ್ರತೀಮಾ, ಡಾ.ಶಿಲ್ಪ, ಹಾಗೂ ಯಶಸ್ವಿನಿ, ಶ್ವೇತಾ. ಸ್ನೇಹಾ, ಚರಣ್ ಯೋಗೇಶ್, ಇಂದ್ರಬಾಯಿ ಸೇರಿದಂತೆ ಪತ್ರಕರ್ತರುಗಳಾದ ಗಾರಾ. ಶ್ರೀನಿವಾಸ್, ನವೀನ್ ತಲಾರಿ ರವರುಗಳು ಹಣ್ಣಿನ ಗಿಡಗಳನ್ನು ನೆಟ್ಟು ನೀರೆರೆದು ಪರಿಸರದ ಉಳಿವಿಗೆ ಸಮಯವನ್ನು ಮೀಸಲಿಡುವುದಾಗಿ ತಿಳಿಸಿದರು.