S.N. Chennabasappa ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಇತ್ತೀಚೆಗೆ ನಡೆದ ಸರಣಿ ಹತ್ಯಾಕಾಂಡಗಳನ್ನು ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ತಡೆಯುವಲ್ಲಿ ವಿಫಲವಾಗಿ ತನ್ನ ವೋಟ್ ಬ್ಯಾಂಕಿನ ಆಕ್ರೋಶವನ್ನು ನಿರ್ವಹಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಸಂಘ ಪರಿವಾರ ಮತ್ತು ಹಿಂದೂ ಸಂಘಟನೆಗಳ ಪ್ರಮುಖರ ಮೇಲೆ ಕೋಮುವಾದಿಗಳು ಎಂಬ ಪಟ್ಟ ಕಟ್ಟಿ ಅವರ ಮೇಲೆ ನಿರಾಧಾರ ಆರೋಪಗಳನ್ನು ಹೊರಿಸುತ್ತಿರುವುದು ರಾಜಕೀಯ ಪ್ರೇರಿತ ನಡೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್. ಚನ್ನಬಸಪ್ಪನವರು ತಿಳಿಸಿದ್ದಾರೆ.
ಅಧಿಕಾರವನ್ನು ಹಾಗೂ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಹಿಂದೂ ಮುಖಂಡರ ಹಳೆಯ ಭಾಷಣಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ತುಘಲಕ್ ಆಡಳಿತಕ್ಕೆ ಉದಾಹರಣೆಯಾಗಿದೆ.ಆರ್ ಎಸ್ ಎಸ್ ಪ್ರಮುಖರಾದ ಶ್ರೀ ಕಲ್ಲಡ್ಕ ಪ್ರಭಾಕರ ಭಟ್ ಅವರ ದಶಕಗಳ ಹಿಂದಿನ ಭಾಷಣಗಳನ್ನು ಉಲ್ಲೇಖಿಸಿ ಎಫ್‌ಐಆರ್ ದಾಖಲಿಸಿರುವುದು, ಮತ್ತು ಬಿಜೆಪಿ ಮುಖಂಡರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರಿಗೆ ಗಡಿಪಾರು ನೋಟಿಸ್ ನೀಡಿರುವುದು, ಸ್ಥಳೀಯ ಶಾಸಕರ, ಸಚಿವರ ಓಲೈಕೆಯ ರಾಜಕೀಯ ಒತ್ತಡಕ್ಕೆ ಮಣಿದಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
S.N. Chennabasappa ಇದೆಲ್ಲದರ ಮಧ್ಯೆ, ಸುಹಾಸ್ ಶೆಟ್ಟಿ ಅವರ ಹತ್ಯೆಯಾದಾಗ ನಡೆಯದ ತನಿಖೆಗಳು, ಅಬ್ದುಲ್ ರಹೀಮ್ ಕೊಲೆಯಾದಾಗ ರಾತೋರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮನೆಗಳಲ್ಲಿ ತನಿಖೆಗಳು ನಡೆಯುತ್ತಿದೆ. ಇದು ಕೇವಲ ಹಿಂದೂ ಸಂಘಟನೆಗಳ ಪ್ರಮುಖರ, ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವುದು ಸಂವಿಧಾನಬದ್ಧ ತನಿಖೆಗಳಲ್ಲ; ಬದಲಾಗಿ ಮುಸಲ್ಮಾನರ ತೃಪ್ತಿಗಾಗಿ ನಡೆಯುತ್ತಿರುವುದು. ನಮ್ಮ ಸಂಘಪರಿವಾರದ ಪ್ರಮುಖರು ಮತ್ತು ಹಿಂದೂ ಸಮಾಜದ ನಾಯಕರನ್ನು ಗುರಿಯಾಗಿಸಿ ದೌರ್ಜನ್ಯ ನಡೆಸುವುದು ದೇಶದ ಸಾಂವಿಧಾನಿಕ ಬುನಾದಿಗೆ ಮಾಡುವ ಅಪಮಾನ. ರಾಜಕೀಯ ಹಾಗೂ ಓಲೈಕೆಗಾಗಿ ಹಿಂದೂ ಮುಖಂಡರನ್ನು ಗುರಿಯಾಗಿಸುವ ಈ ಕ್ರಮಗಳು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಆಗುವ ಎಲ್ಲಾ ಅನಾಹುತಕ್ಕೆ ನಿಮ್ಮ ಓಲೈಕೆಯೇ ಕಾರಣವಾಗಲಿದೆ ಎಂದು ಹೇಳಿದ್ದಾರೆ.