Friday, February 27, 2026
Friday, February 27, 2026
Home Blog Page 282

Chamber of Commerce Shivamogga ಸಹಜ ಆರೋಗ್ಯ ಕಾಪಾಡಿಕೊಳ್ಳಲು “ನಾಡಿ ಪರೀಕ್ಷೆ” ಎಂಬ ಅದ್ಬುತ ವಿದ್ಯೆ : ವರುಣ್ ಆನಂದ್ ಗುರೂಜಿ

0

Chamber of Commerce Shivamogga 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ(ಜೂನ್ 21)ಯ ಅಂಗವಾಗಿ ಸಾರ್ವಜನಿಕರಲ್ಲಿ ಪ್ರಕೃತಿದತ್ತ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮತ್ತು ಆರೋಗ್ಯದ ಅರಿವು ಮೂಡಿಸುವ ಉದ್ದೇಶದಿಂದ ಶಿವಮೊಗ್ಗದ ಜವಳಿ ವರ್ತಕರ ಸಂಘದ ಆಯೋಜಕತ್ವದಲ್ಲಿ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮತ್ತೂರಿನ ಖ್ಯಾತ ಆಯುರ್ವೇದ ಪಂಡಿತರಾದ ವರುಣ್ ಆನಂದ್ ಗುರೂಜಿಯವರಿಂದ “ಉಚಿತ ನಾಡಿ ಪರೀಕ್ಷೆ ಶಿಬಿರ”ವನ್ನು ಯಶಸ್ವಿಯಾಗಿ ನಡೆಸಲಾಯಿತು.

“ಅಲೋಪತಿ” ಎಂಬ ಆಂಗ್ಲ ಔಷದ ಪದ್ದತಿಯ ಪ್ರಭಾವದಿಂದಾಗಿ ನಮ್ಮ ಪುರಾತನ ಕಾಲದ ವೈದ್ಯಕೀಯ ಚಿಕಿತ್ಸೆ ಕ್ರಮಗಳಲ್ಲಿ ಒಂದಾದ‌,ಕರಾರುವಕ್ಕಾದ “ನಾಡಿ ಪರೀಕ್ಷೆ” ಯ ಮಹತ್ವವೇ ಇಂದಿನ ಜನರಿಗೆ ತಿಳಿದಿಲ್ಲ, ನಮ್ಮ ಹಿರಿಯರು ಪ್ರಕೃತಿಯತ್ತ ಹೆಜ್ಜೆಗಳನ್ನು ಹಾಕುತ್ತಿದ್ದ ಕಾರಣ ಔಷಧಿ ರಹಿತ ಜೀವನವನ್ನು ಅವರುಗಳು ನಡೆಸುತ್ತಿದ್ದರು, ಶತಾಯುಷಿಗಳಾದರೂ ಸಹ ಆರೋಗ್ಯವಂತರಾಗಿಯೇ ಇರುತ್ತಿದ್ದರು. ಆದರೆ ಇಂದಿನ ಜನಾಂಗವು ಪ್ರಕೃತಿಗೆ ವಿರುದ್ದವಾಗಿ ಹೆಜ್ಜೆಗಳನ್ನು ಹಾಕುತ್ತ ಔಷದಗಳನ್ನೇ ಆಹಾರವನ್ನಾಗಿ ಮಾಡಿಕೊಂಡಿರುವುದರ ಪರಿಣಾಮ ಅನಾರೋಗ್ಯ ಪೀಡಿತರಾಗಿ ,ಅಲ್ಪಾಯುಷಿಗಳಾಗಿದ್ದಾರೆ. ಇಂದಿನವರ ಆಹಾರ ಪದ್ದತಿ ಸಹ ಸಹಜ ಪ್ರಕೃತಿಗೆ ವಿರುದ್ದವಾಗಿರುವುದರಿಂದ ಬಹುತೇಕ ಜನರು ಅನೇಕಾನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಕಾರಣದಿಂದ “ಹೈಟೆಕ್ ಆಸ್ಪತ್ರೆ”ಗಳ ಸಂಖ್ಯೆ ಸಹ ದಿನೇ ದಿನೇ ಹೆಚ್ಚುತ್ತಿರುವುದು ಆರೋಗ್ಯವಂತ ಸಮಾಜದ ಲಕ್ಷಣ ಅಲ್ಲ ಎಂದು ಆಯುರ್ವೇದ ವೈದ್ಯರಾದ ವರುಣ್ ಆನಂದ್ ರವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ತಿಳಿಸಿದರು. ನಾವಿಂದು ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ಡಾಕ್ಟರ್ ಬಳಿ ಹೋಗುವುದು ಸರಿಯಲ್ಲ,ನಿತ್ಯ ಯೋಗ ಪ್ರಾಣಾಯಾಮಗಳ ಅಭ್ಯಾಸದಿಂದ ರೋಗ ಮುಕ್ತ ಜೀವನವನ್ನು ನಡೆಸಬಹುದಾಗಿದೆ ಎಂದರು. ನಮ್ಮ ಎಲ್ಲ ರೋಗಗಳಿಗೂ ಮೂಲವೆಂದರೆ “ತ್ರಿದೋಷ”ಗಳಾದ “ವಾತ-ಪಿತ್ತ-ಕಫ” ಎಂದರು. ವಾತ ಹೆಚ್ಚಾದರೆ ” ಕೊಬ್ಬು-ಮಬ್ಬು”,
ಪಿತ್ತ ಹೆಚ್ಚಾದರೆ “ಕೋಪ-ತಾಪ,
ಕಫ ಹೆಚ್ಚಾದರೆ ” ಕೆಮ್ಮು- ದಮ್ಮು ಎಂಬುದು ನಮ್ಮ ರೋಗದ ಸಮಸ್ಯೆಗಳನ್ನು ನಾವೇ ಅರಿಯುವ ಮೊದಲ “ಸ್ವಯಂ ಪರೀಕ್ಷೆ” ಎಂದು ತಿಳಿಸಿದರು.
ಈ ಶಿಬಿರವು ಜನರಿಗೆ ಆಯುರ್ವೇದದ ಪ್ರಾಚೀನ ತತ್ವಗಳನ್ನು ಪರಿಚಯಿಸಿ, ಸ್ಟೆತಸ್ಕೋಪ್ ಇಲ್ಲದೇ, ತಮ್ಮ ಸಮಸ್ಯೆಗಳನ್ನು ತಾವೇ ಹೇಳಿಕೊಳ್ಳದೇ, ಕೇವಲ ನಾಡಿ ಪರೀಕ್ಷೆಯ ಮೂಲಕ ಆರೋಗ್ಯದ ಸ್ಥಿತಿಯನ್ನು, ಏರುಪೇರುಗಳನ್ನು ಆಯುರ್ವೇದ ಪಂಡಿತರು ಗುರುತಿಸಿ ಹೇಳುತ್ತಿದ್ದದನ್ನು ಕಂಡ ಜನರು ಆಶ್ಚರ್ಯಚಕಿತರಾಗಿದ್ದರು. ಸಮಸ್ಯೆಗೆ ಪರಿಹಾರವನ್ನು ಸಹ ಅಡಿಗೆ ಮನೆಯಲ್ಲಿ ಇರುವ ವಸ್ತುಗಳಿಂದ ಕಂಡುಕೊಳ್ಳಬಹುದು ಎಂದು ಪಂಡಿತರು ಹೇಳುತ್ತಿದ್ದಾಗ ಜನರು ಮೂಕವಿಸ್ಮಿತರಾಗಿದ್ದರು.ಅನೇಕರು ಇದೇ ಮೊದಲ ಬಾರಿಗೆ “ನಾಡಿ ಪರೀಕ್ಷೆ” ಯನ್ನು ಕಣ್ಣಾರೆ ಕಂಡು ಇಂತಹ “ಪ್ರಾಚೀನ ವಿದ್ಯೆ”ಗಳು ಇರುವುದು ನಮಗೆ ತಿಳಿದೇ ಇರಲಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು.

Chamber of Commerce Shivamogga ಈ ಶಿಬಿರದಲ್ಲಿ ಸರಿ ಸುಮಾರು 150 ಜನರು ನಾಡಿ ಪರೀಕ್ಷೆ ಯ ಪ್ರಯೋಜನವನ್ನು ಮತ್ತು ವಿವಿಧ ಆರೋಗ್ಯ ಸಲಹೆಗಳನ್ನು ಪಡೆದರು.ಶಿಬಿರವು ಬೆಳಿಗ್ಗೆ 7•30 ಕ್ಕೆ ಪ್ರಾರಂಭವಾಗಿ 10•30 ಕ್ಕೆ ಮುಕ್ತಾಯಗೊಂಡಿತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿ ಶಿಬಿರ ಯಶಸ್ವಿಯಾಗಿ ನಡೆಯಿತು.
ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಬೇದ್ರೆ ಮತ್ತು ಪದಾಧಿಕಾರಿಗಳು ವರುಣ್ ಆನಂದ್ ರವರಿಗೆ ಗೌರವ ಸನ್ಮಾನವನ್ನು ಮಾಡಿದರು. ಜ.ವ.ಸಂ.ನ ಮಾಜಿ ಅಧ್ಯಕ್ಷ ವೆಂಕಟೇಶ ಮೂರ್ತಿ ಯವರಿಗೆ ನಾಡಿ ಪರೀಕ್ಷೆ ಮಾಡುವ ಮೂಲಕವೇ ಶಿಬಿರ ಉದ್ಘಾಟನೆಗೊಂಡಿತು.ಕಾರ್ಯಕ್ರಮದ ನಿರ್ವಹಣೆ ಅನಿಲ್ ಕುಮಾರ್. ಹೆಚ್.ಶೆಟ್ಟರ್ , ಸ್ವಾಗತ ಪಿ.ವಿ.ಪ್ರಭಾಕರ್, ವಂದನಾರ್ಪಣೆ ರಾಕೇಶ್ ಸಾಕ್ರೆ ನೆರವೇರಿಸಿದ ಈ ಶಿಬಿರದಲ್ಲಿ ಛೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ ಸುರೇಶ್ ಸಹ ಪಾಲ್ಗೊಂಡಿದ್ದರು.

CM Siddharamaih ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ

0

CM Siddharamaih ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಹಾಜರಿದ್ದರು. ಯೋಜನೆಗಳಿಗೆ ದೊರೆತ ಅನುದಾನ ಹೀಗಿದೆ.
ಇಲಾಖೆ ಕುರಿತು ತೆಗೆದುಕೊಂಡ ಪ್ರಮುಖ ನಿರ್ಣಯಗಳು ಇಲ್ಲಿವೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ನಿರ್ವಹಣೆಗಾಗಿ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಿ, ಅಗತ್ಯವಿರುವ ತಪಾಸಣಾ ಉಪಕರಣಗಳು ಹಾಗೂ ಔಷಧಿಗಳನ್ನು ಖರೀದಿಸಲು ಒಟ್ಟು 185.74 ಕೋಟಿ ರೂಪಾಯಿ ಅನುದಾನ.

CM Siddharamaih ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಒಟ್ಟು 12 ಕೋಟಿ ರೂಪಾಯಿ ಅನುದಾನ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಹಾಜರಾತಿ ಗುರುತಿಸಲು “ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ” ಅನುಷ್ಠಾನಕ್ಕೆ ಅನುಮೋದನೆ.

108 ಆರೋಗ್ಯ ಕವಚ ಸೇವೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲು ರಾಜ್ಯ ಮಟ್ಟದಲ್ಲಿ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮುಖಾಂತರ ಆಂಬ್ಯುಲೆನ್ಸ್‌ಗಳ ನಿರ್ವಹಣೆಗೆ ಅನುಮೋದನೆ ನೀಡಲಾಗಿದೆ.

Chauhan Shivraj ‘ವಿಕ್ಷಿತ್ ಕೃಷಿ ಸಂಕಲ್ಪ ಅಭಿಯಾನ’ದಲ್ಲಿ ಕೇಂದ್ರ ಕೃಷಿ ಸಚಿವ ಚೌಹಾಣ್ ಶಿವರಾಜ್ ಭಾಷಣ

0

Chauhan Shivraj ಬೆಂಗಳೂರಿನಲ್ಲಿ ನಡೆದ ‘ವಿಕ್ಷಿತ್ ಕೃಷಿ ಸಂಕಲ್ಪ ಅಭಿಯಾನ’ದಲ್ಲಿ ಕೇಂದ್ರ ಕೃಷಿ ಸಚಿವ ಚೌಹಾಣ್ ಶಿವರಾಜ್ ಭಾಷಣ ಮಾಡಿದರು.

ಕೃಷಿ ಕ್ಷೇತ್ರದ ಬೆಳವಣಿಗೆಗೆ ಸುಲಭವಾಗಿ ಕೃಷಿ ಮಾಡಬಹುದಾದ ಹಣ್ಣುಗಳು ಮತ್ತು ಬೆಳೆಗಳ ಕಡೆಗೆ ಕೃಷಿಯನ್ನು ವೈವಿಧ್ಯಗೊಳಿಸುವುದು ಅತ್ಯಗತ್ಯ ಎಂದು ಶ್ರೀ ಚೌಹಾಣ್ ಹೇಳಿದರು.

Klive Special Article ಛಾಯಾಗ್ರಹಣ: ನಿನ್ನೆ – ಇಂದು – ನಾಳೆ ಲೇ; ಆದಿತ್ಯ ಪ್ರಸಾದ್ ರಾಯಲ್ ಕಾಫಿ, ಶಿವಮೊಗ್ಗ

0

Klive Special Article ಛಾಯಾಗ್ರಹಣ ಕೇವಲ ಚಿತ್ರಗಳನ್ನು ಸೆರೆಹಿಡಿಯುವ ಒಂದು ತಂತ್ರವಲ್ಲ, ಬದಲಿಗೆ ಕಲೆ, ವಿಜ್ಞಾನ ಮತ್ತು ಸಂಸ್ಕೃತಿಯನ್ನು ಬೆಸೆಯುವ ಒಂದು ಮಾಧ್ಯಮ. ಮಾನವಕುಲದ ದೃಶ್ಯ ಸ್ಮರಣೆಯ ದಾಖಲೆಯಾಗಿ, ಛಾಯಾಗ್ರಹಣ ತನ್ನ ಅಸ್ತಿತ್ವವನ್ನು ಕಂಡುಕೊಂಡ ದಿನದಿಂದಲೂ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಅದು ನಿನ್ನೆಯ ಕಥೆಗಳನ್ನು ಹೇಳುವ, ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ಇತಿಹಾಸವನ್ನು ದಾಖಲಿಸುವ ಒಂದು ಅದ್ಭುತ ಕಲೆ. ಮನುಷ್ಯನು ಬೆಳಕನ್ನು ಬಳಸಿ ಚಿತ್ರಗಳನ್ನು ರಚಿಸುವ ಕನಸು ಕಂಡ ದಿನದಿಂದ ಇಂದಿನ ಡಿಜಿಟಲ್ ಯುಗದವರೆಗೆ, ಛಾಯಾಗ್ರಹಣವು ನಿರಂತರವಾಗಿ ವಿಕಸನಗೊಂಡು ಬೆಳೆದು ಬಂದಿದೆ. ನಿನ್ನೆಯ ದಿನಗಳು, ಇಂದಿನ ವಾಸ್ತವ ಮತ್ತು ನಾಳೆಯ ನಿರೀಕ್ಷೆಗಳನ್ನು ಅವಲೋಕಿಸುವುದು ಈ ಛಾಯಾಗ್ರಹಣದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಛಾಯಾಗ್ರಹಣವೆಂದರೆ ಅದು ಬೆಳಕಿನೊಂದಿಗೆ ಬರೆದ ಕಥೆಗಳಂತೆ ರೋಮಾಂಚನಕಾರಿ. ಛಾಯಾಗ್ರಹಣದ ಆರಂಭಿಕ
ದಿನಗಳು ನಿಜಕ್ಕೂ ಒಂದು ವೈಜ್ಞಾನಿಕತೆಯ ಅದ್ಭುತ ಆವಿಷ್ಕಾರ ಎನ್ನಬಹುದು.
ಛಾಯಾಗ್ರಹಣದ ಇತಿಹಾಸವು ಸುಮಾರು ೧೯ನೇ ಶತಮಾನದ ಆರಂಭದಿಂದಲೇ ಶುರುವಾಗುತ್ತದೆ. ಇದಕ್ಕೂ
ಮೊದಲು, ಕಲಾವಿದರು “ಕ್ಯಾಮೆರಾ ಅಬ್ಸ್ಕೂರಾ” ಎಂಬ ಸಾಧನವನ್ನು ಬಳಸಿಕೊಂಡು
ಚಿತ್ರಗಳನ್ನು ಬಿಡಿಸುತ್ತಿದ್ದರು. ಇದು ಛಾಯಾಗ್ರಹಣದ ಮೂಲ ತತ್ವಕ್ಕೆ ನಾಂದಿ ಹಾಡಿತು. ೧೮೨೬ ಅಥವಾ ೧೮೨೭ರಲ್ಲಿ ಫ್ರೆಂಚ್ ಸಂಶೋಧಕ ಜೋಸೆಫ್ ನೈಸ್‌ಫೋರ್ ನಿಯೆಪ್ಸ್ ಅವರು “ವ್ಯೂ ಫ್ರಮ್ ದಿ ವಿಂಡೋ ಅಟ್ ಲೆ ಗ್ರಾಸ್” ಎಂಬ ತಮ್ಮ ಮೊದಲ ಯಶಸ್ವಿ ಛಾಯಾಚಿತ್ರವನ್ನು ತೆಗೆದರು. ಇದು ಹೆಲಿಯೋಗ್ರಾಫಿ ಎಂಬ ಪ್ರಕ್ರಿಯೆಯನ್ನು ಬಳಸಿಕೊಂಡು ಮಾಡಲಾಗಿತ್ತು. ಅಂದಿನ ದಿನಗಳಲ್ಲಿ ಒಂದು ಚಿತ್ರವು ಮೂಡಿಬರಲು ಕೆಲವು ದಿನಗಳೇ ಬೇಕಿತ್ತು.
೧೯ನೇ ಶತಮಾನದ ಆರಂಭದಲ್ಲಿ, ಜೋಸೆಫ್ ನೈಸೆಫೋರ್ ನಿಯೆಪ್ಸ್ ಅವರು ಪ್ರಪಂಚದ ಮೊದಲ ಶಾಶ್ವತ ಛಾಯಾಚಿತ್ರವನ್ನು ತೆಗೆದರು. ನಂತರ, ಲೂಯಿಸ್ ಡಾಗೆರ್ ಅವರ ಡಾಗೆರೋಟೈಪ್ ಪ್ರಕ್ರಿಯೆಯು ಛಾಯಾಗ್ರಹಣವನ್ನು ಸಾರ್ವಜನಿಕರಿಗೆ ಪರಿಚಯಿಸಿತು.
ಈ ದಿನಗಳಲ್ಲಿ, ಚಿತ್ರಗಳನ್ನು ಸೆರೆಹಿಡಿಯುವುದು ಬಹಳ ಕಷ್ಟದ ಕೆಲಸವಾಗಿತ್ತು. ದೊಡ್ಡ ಕ್ಯಾಮೆರಾಗಳು, ದೀರ್ಘಾವಧಿಯ
ಎಕ್ಸ್ಪೋಶರ್‌ಗಳು ಮತ್ತು ಅಪಾಯಕಾರಿ ರಾಸಾಯನಿಕಗಳ ಬಳಕೆ ಸಾಮಾನ್ಯವಾಗಿದ್ದವು. ಅಂದಿಗೆ ಡಾಗುರೋಟೈಪ್ ತಂತ್ರಜ್ಞಾನವು ಜನಪ್ರಿಯವಾಯಿತು ಮತ್ತು ಛಾಯಾಗ್ರಹಣವನ್ನು ಸ್ವಲ್ಪ ಮಟ್ಟಿಗೆ ಸಾಮಾನ್ಯ ಜ£ರಿಗೂ ದೊರಕುವಂತಾಯಿತು.
೧೮೪೧ರಲ್ಲಿ ವಿಲಿಯಂ ಹೆನ್ರಿ ಫಾಕ್ಸ್ ಟಾಲ್ಬೋಟ್ ಅವರು ಕ್ಯಾಲೋಟೈಪ್ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು. ಇದು ನೆಗೆಟಿವ್‌ಗಳಿಂದ ಅನೇಕ ಪಾಸಿಟಿವ್ ಚಿತ್ರಗಳನ್ನು ಮುದ್ರಿಸಲು
ಅವಕಾಶ ಮಾಡಿಕೊಟ್ಟಿತು. ನಂತರ, ೧೮೫೦ರ ದಶಕದಲ್ಲಿ, “ವೆಟ್ ಕೊಲೊಡಿಯನ್ ಪ್ಲೇಟ್” ವಿಧಾನವು ಜನಪ್ರಿಯವಾಯಿತು. ಇದು ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸಿತು. ಆದರೆ ಛಾಯಾಚಿತ್ರಗಳನ್ನು ಸ್ಥಳದಲ್ಲೇ ಅಭಿವೃದ್ಧಿಪಡಿಸಬೇಕಿತ್ತು.
ಈ ಸವಾಲುಗಳ ಹೊರತಾಗಿಯೂ, ಛಾಯಾಗ್ರಾಹಕರು ಪ್ರಪಂಚದಾದ್ಯಂತ ಸಂಚರಿಸಿ, ಯುದ್ಧಗಳ ದೃಶ್ಯಗಳನ್ನು,
ಐತಿಹಾಸಿಕ ಘಟನೆಗಳನ್ನು ಮತ್ತು ವಿವಿಧ ಸಂಸ್ಕೃತಿಗಳನ್ನು ದಾಖಲಿಸಿದರು. ಅಬ್ರಹಾಂ ಲಿಂಕನ್ ಅವರ ಭಾವಚಿತ್ರಗಳು,
ಅಮೆರಿಕಾದ ಅಂತರ್ಯುದ್ಧದ ದೃಶ್ಯಗಳು, ಇವೆಲ್ಲವೂ ಇಂದಿಗೂ ನಮಗೆ ಇತಿಹಾಸವನ್ನು ನೆನಪಿಸುತ್ತವೆ. ಕಪ್ಪು-ಬಿಳುಪು
ಛಾಯಾಗ್ರಹಣವು ಆ ಕಾಲದ ಪ್ರಮುಖ ಮಾಧ್ಯಮವಾಗಿತ್ತು, ಇದು
Klive Special Article ಭಾವನೆಗಳನ್ನು ಮತ್ತು ಆಳವನ್ನು ಅದ್ಭುತವಾಗಿ ಸೆರೆಹಿಡಿಯುತ್ತಿತ್ತು. ೨೦ನೇ ಶತಮಾನದಲ್ಲಿ, ಕೋಡಾಕ್‌ನಂತಹ
ಕಂಪನಿಗಳು ಫಿಲ್ಮ್ ಕ್ಯಾಮೆರಾಗಳನ್ನು ಜನಪ್ರಿಯಗೊಳಿಸಿದವು. ಇದರಿಂದ ಛಾಯಾಗ್ರಹಣವು ಹೆಚ್ಚು
ಸುಲಭವಾಗಿ ಎಲ್ಲರಿಗೂ ಲಭ್ಯವಾಗುವಂತಾಯಿತು.
೧೮೭೦ರ ದಶಕದಲ್ಲಿ ಡ್ರೈ ಪ್ಲೇಟ್‌ಗಳ ಪರಿಚಯದಿಂದ ಛಾಯಾಗ್ರಾಹಕರಿಗೆ ಹೆಚ್ಚು ಅನುಕೂಲವಾಯಿತು. ೧೮೮೮ರಲ್ಲಿ
ಜಾರ್ಜ್ ಈಸ್ಟ್ಮನ್ ಅವರು “ಕೋಡಾಕ್” ಕ್ಯಾಮರಾವನ್ನು ಪರಿಚಯಿಸಿದರು.
ಇದು ಫಿಲ್ಮ್ ರೋಲ್ ಬಳಸುತ್ತಿದ್ದ ಕಾಲವಾಗಿತ್ತು. ಅಂದು ಕೊಡಾಕ್ “ನೀವು ಬಟನ್ ಒತ್ತಿ, ಉಳಿದದ್ದನ್ನು ನಾವು
ನೋಡಿಕೊಳ್ಳುತ್ತೇವೆ” ಎಂಬ ಘೋಷವಾಕ್ಯದೊಂದಿಗೆ ಛಾಯಾಗ್ರಹಣವನ್ನು ಸಾರ್ವಜನಿಕರಿಗೆ ಇನ್ನಷ್ಟು ಸುಲಭಗೊಳಿಸಿತು.
ಇದು “ಕ್ಷಣಾರ್ಧದಲ್ಲಿ ತೆಗೆದ ಚಿತ್ರ” ಚಿತ್ರಪರಿಕಲ್ಪನೆಗೆ ಕಾರಣವಾಯಿತು. ಅಂದಿನಿಂದ ಇನ್ನೂ ಹೆಚ್ಚಿನ
ಜನರಿಗೆ ತಲುಪುತ್ತಾ ತನ್ನ ಕ್ಷೇತ್ರವನ್ನು ಜಗತ್ತಿನಾದ್ಯಂತ ಬೆಳೆಸುತ್ತಾ ಹೋಯ್ತು ಎನ್ನಬಹುದು.
೨೦ನೇ ಶತಮಾನದ ಆರಂಭದಲ್ಲಿ ಬಣ್ಣದ ಛಾಯಾಗ್ರಹಣದ ಪ್ರಯೋಗಗಳು ಪ್ರಾರಂಭವಾದವು. ೧೯೩೦ ಮತ್ತು
೪೦ರ ದಶಕಗಳಲ್ಲಿ ಕೋಡಾಕ್ ಕ್ರೋಮ್ ಮತ್ತು ಎಕ್ತಾಕ್ರೋಮ್ ಫಿಲ್ಮ್ಗಳ ಪರಿಚಯದೊಂದಿಗೆ ಬಣ್ಣದ ಛಾಯಾಗ್ರಹಣವು ಹೆಚ್ಚು ಸುಲಭವಾಗಿ ಜನಸಾಮನ್ಯರಿಗೆ ಲಭ್ಯವಾಯಿತು.
೨೦ನೇ ಶತಮಾನದ ಅಂತ್ಯದಿಂದ ೨೧ನೇ ಶತಮಾನದ ಪ್ರಾರಂಭದವರೆಗಿನ ಅವಧಿಯ ಡಿಜಿಟಲ್ ಕ್ರಾಂತಿ.
ಛಾಯಾಗ್ರಹಣದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿತು.
೧೯೯೦ರ ದಶಕದಲ್ಲಿ ಡಿಜಿಟಲ್ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದವು. ಆರಂಭದಲ್ಲಿ ಅವು ದುಬಾರಿ ಬೆಲೆಯದಾಗಿದ್ದವು
ಮತ್ತು ಗುಣಮಟ್ಟ ಇಂದಿಗೆ ಹೋಲಿಸಿದರೆ ಕಡಿಮೆ ಗುಣಮಟ್ಟದ್ದಾಗಿತ್ತು. ಆದರೆ ತಂತ್ರಜ್ಞಾನ ಬೆಳೆದಂತೆಲ್ಲ ಡಿಜಿಟಲ್ ಕ್ಯಾಮೆರಾಗಳು
ಫಿಲ್ಮ್ ಕ್ಯಾಮೆರಾಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯವಾಗಿ ಬಳಕೆಗೆ ಬಂದವು. ಡಿಜಿಟಲ್ ಕ್ಯಾಮೆರಾಗಳು ಚಿತ್ರಗಳನ್ನು ತಕ್ಷಣವೇ
ವೀಕ್ಷಿಸಲು, ಕೂಡಿಡಲು ಮತ್ತು ಹಂಚಿಕೊಳ್ಳಲು ಅನುಕೂಲಕ್ಕೆ ತಕ್ಕಂತೆ ಸುಲಭವಗಿ ಬಳಸಲು ಬರುವಂತೆ ನಿರ್ಮಾಣವಾಯ್ತು.
ಹಾಗೆಯೇ ಸ್ಮಾರ್ಟ್ಫೋನ್‌ಗಳ ಆಗಮನವು ಛಾಯಾಗ್ರಹಣವನ್ನು ಪ್ರತಿಯೊಬ್ಬರ ಕೈಗೆ ತಂದಿತು ಎಂದರೆ
ಸುಳ್ಳಾಹಲಾರದು. ಇಂದು, ಹೆಚ್ಚಿನ ಜನರು ತಮ್ಮ ಸ್ಮಾರ್ಟ್ಫೋನ್‌ಗಳಿಂದಲೇ ಚಿತ್ರಗಳನ್ನು ತೆಗೆದುಕೊಳ್ಳುತ್ತಾರೆ. ಮೊಬೈಲ್
ಕ್ಯಾಮೆರಾಗಳು ಉತ್ತಮ ಗುಣಮಟ್ಟದ ಲೆನ್ಸ್ಗಳು, ಇಮೇಜ್ ಸೆನ್ಸರ್‌ಗಳು ಮತ್ತು ಸುಧಾರಿತ ಇಮೇಜ್ ಪ್ರೊಸೆಸಿಂಗ್
ಸಾಮರ್ಥ್ಯಗಳನ್ನು ಹೊಂದಿವೆ. ಇದಕ್ಕೆ ಸೇರ್ಪಡೆಗೊಂಡ ವಿವಿಧ ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು ಚಿತ್ರಗಳನ್ನು ತೆಗೆದ ನಂತರವೂ ಅವುಗಳನ್ನು ಸುಲಭವಾಗಿ ಸುಧಾರಿಸಲು ಅನುವು ಮಾಡಿಕೊಡುತ್ತಿವೆ.
ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟರ್, ಸ್ನ್ಯಾಪ್ ಚಾಟ್ ನಂತಹ ಸಾಮಾಜಿಕ ಮಾಧ್ಯಮಗಳು ಛಾಯಾಗ್ರಹಣವನ್ನು
ಹಂಚಿಕೊಳ್ಳುವ ಮತ್ತು ಅದನ್ನು ಅನುಭವಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಪ್ರತಿಯೊಬ್ಬರೂ ಈಗ
ತಮ್ಮ ದೈನಂದಿನ ಜೀವನದ ಕ್ಷಣಗಳನ್ನು, ಪ್ರಯಾಣದ ಅನುಭವಗಳನ್ನು ಮತ್ತು ಸೃಜನಾತ್ಮಕ ದೃಷ್ಟಿಕೋನಗಳನ್ನು ಲಕ್ಷಾಂತರ
ಜನರೊಂದಿಗೆ ಹಂಚಿಕೊಳ್ಳಬಹುದು. ಇದರಿಂದ ‘ವಿಷುಯಲ್ ಸ್ಟೋರಿಟೆಲ್ಲಿಂಗ್’ ಹೆಚ್ಚು ಜನಪ್ರಿಯವಾಗಿದೆ.
ಇಂದಿನ ಸ್ಮಾರ್ಟ್ಫೋನ್‌ಗಳು ಮತ್ತು ಕ್ಯಾಮೆರಾಗಳು ಆಧಾರಿತ ತಂತ್ರಜ್ಞಾನಗಳನ್ನು ಬಳಸುತ್ತವೆ. ಉದಾಹರಣೆಗೆ, ಪೋಸ್ಟ್ ರೆಂಟ್ ಮೋಡ್, ರಾತ್ರಿ ಮೋಡ್, ದೃಶ್ಯ ಗುರುತಿಸುವಿಕೆ ಮುಂತಾದ ವೈಶಿಷ್ಟ್ಯಗಳು
ಅನ್ನು ಅವಲಂಬಿಸಿವೆ. ಇವು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಮತ್ತು ಸ್ವಯಂಚಾಲಿತವಾಗಿ ಸುಧಾರಿಸಲು
ಸಹಾಯ ಮಾಡುತ್ತವೆ. ಗಣಕೀಯ ಛಾಯಾಗ್ರಹಣವು ಅನೇಕ ಚಿತ್ರಗಳನ್ನು ಒಟ್ಟಾಗಿ ಸಂಸ್ಕರಿಸಿ ಒಂದು ಉತ್ತಮ ಗುಣಮಟ್ಟದ ಚಿತ್ರವನ್ನು ಸೃಷ್ಟಿಸುತ್ತದೆ, ಇದು ಕಡಿಮೆ ಬೆಳಕಿನಲ್ಲಿಯೂ ಅದ್ಭುತ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಿಸಿದೆ.
ಛಾಯಾಗ್ರಹಣದ ಭವಿಷ್ಯವನ್ನ ಗ್ರಹಿಸಿ ಹೇಳುವುದಾದರೆ, ನಿರಂತರವಾಗಿ ವಿಕಸನಗೊಂಡು ಇನ್ನಷ್ಟು ಹೊಸ ಹೊಸ
ಆವಿಷ್ಕಾರಗಳು ಬರುವ ಸಾಧ್ಯತೆಗಳಿವೆ. ಮತ್ತಷ್ಟು ಉನ್ನತೀರಣಗೊಂಡು, ಚಿತ್ರಗಳ ಸಂಸ್ಕರಣೆ ಮತ್ತು ವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಹುಶಃ, ಕಡಿಮೆ ಬೆಳಕಿನಲ್ಲೂ ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯುವುದು, ಚಿತ್ರಗಳಲ್ಲಿ ಅನಗತ್ಯ ವಸ್ತುಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವುದು ಅಥವಾ ಹೊಸ ಹಿನ್ನೆಲೆ ಗಳನ್ನು ಸೇರಿಸುವುದು ಸಾಮಾನ್ಯವಾಗಬಹುದು. ಒಂದು ದೃಷ್ಟಿಯಲ್ಲಿ ಛಾಯಾಗ್ರಾಹಕರ ಸೃಜನಶೀಲತೆಯನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡಿದರೆ, ತನ್ನ ಸೃಜನಶೀಲ
ಕಲಾತ್ಮಕತೆಯನ್ನ ಕೊನೆಗಾಣಿಸುವ ಭಯವೂ ಇಲ್ಲದಿಲ್ಲ. ಛಾಯಾಗ್ರಹಣವು ಮತ್ತು ಗಿಖ ತಂತ್ರಜ್ಞಾನಗಳೊಂದಿಗೆ
ಬೆರೆತು ಹೊಸ ಆಯಾಮಗಳನ್ನು ತೆರೆದಿಡುತ್ತಿದೆ. ೩೬೦-ಡಿಗ್ರಿ ಚಿತ್ರಗಳು ಮತ್ತು ವೀಡಿಯೊಗಳು ಇನ್ನಷ್ಟು ವ್ಯಾಪಕವಾಗಬಹುದು,
ಮತ್ತು ಜನರು ವರ್ಚುವಲ್ ಪರಿಸರದಲ್ಲಿ ಚಿತ್ರಗಳನ್ನು ಸೃಷ್ಟಿಸಿ ತನ್ನ ಕಲ್ಪನಾ ಲೋಕದ ಚಿತ್ರಗಳನ್ನೇ ಚಿತ್ರಿಸಿ ಅನುಭವಿಸಬಹುದು.
ಂಖ ಬಳಸಿ, ಚಿತ್ರಗಳನ್ನು ನೈಜ ಪ್ರಪಂಚದಲ್ಲಿ ಅಳವಡಿಸಿ, ಹೊಸ ರೀತಿಯ ದೃಶ್ಯ ಕಥೆಗಳನ್ನು ರಚಿಸಬಹುದು.
ಲೈಟ್ರೋನಂತಹ ಕಂಪನಿಗಳು ಈಗಾಗಲೇ ಲೈಟ್ ಫೀಲ್ಡ್ ಕ್ಯಾಮೆರಾಗಳನ್ನು ಪರಿಚಯಿಸಿವೆ, ಅಲ್ಲಿ ಚಿತ್ರ
ತೆಗೆದ ನಂತರವೂ ಫೋಕಸ್ ಪಾಯಿಂಟ್ ಅನ್ನು ಬದಲಾಯಿಸಬಹುದು. ಈ ತಂತ್ರಜ್ಞಾನವು ಭವಿಷ್ಯದಲ್ಲಿ ಹೆಚ್ಚು ಪ್ರಚಲಿತಕ್ಕೆ
ಬರಬಹುದು, ಈ ತಂತ್ರಜ್ಞಾನ ಛಾಯಾಗ್ರಾಹಕರಿಗೆ ಚಿತ್ರ ತೆಗೆಯುವಲ್ಲಿ ಹೆಚ್ಚಿನ ಸ್ವಾತಂತ್ರ÷್ಯವನ್ನು ನೀಡುತ್ತದೆ.
ಕ್ಯಾಮೆರಾಗಳು ಮತ್ತಷ್ಟು ಬುದ್ಧಿವಂತಿಕೆಯನ್ನು ಪಡೆದುಕೊಳ್ಳಬಹುದು. ಸ್ವಯಂಚಾಲಿತವಾಗಿ ಅತ್ಯುತ್ತಮ ಸೆಟ್ಟಿಂಗ್‌ಗಳನ್ನು
ನಿರ್ಧರಿಸುವುದು, ತಾನು ಚಿತ್ರಿಸಬೇಕಾದ ವಿಷಯಗಳನ್ನು ಗುರುತಿಸಿ ಟ್ರ್ಯಾಕ್ಟರ್ ಮಾಡುವುದು ಅಥವಾ ಡ್ರೋನ್‌ಗಳ ಮೂಲಕ
ಚಿತ್ರಗಳನ್ನು ಸೆರೆಹಿಡಿಯುವುದು ಇನ್ನಷ್ಟು ಸುಲಭವಾಗುತ್ತದೆ.
ಕಡಿಮೆ ಬೆಳಕಿನಲ್ಲಿ ಉತ್ತಮ ಕಾರ್ಯಕ್ಷಮತೆ, ಹೆಚ್ಚಿನ ಡೈನಾಮಿಕ್ ರೇಂಜ್ ಮತ್ತು ಬಣ್ಣಗಳ ನಿಖರತೆಯನ್ನು
ನೀಡುವ ಹೊಸ ತಲೆಮಾರಿನ ಇಮೇಜ್ ಸೆನ್ಸರ್‌ಗಳನ್ನು ನಾವು ನಿರೀಕ್ಷಿಸಬಹುದು. ಕ್ವಾಂಟಮ್ ಡಾಟ್
ತಂತ್ರಜ್ಞಾನಗಳು ಮತ್ತು ಸಾವಯವ ಸೆನ್ಸರ್‌ಗಳು ಹೊಸ ಸಾಧ್ಯತೆಗಳನ್ನು ಮುಂದಿನ ದಿನಗಳಲ್ಲಿ
ಕಾಣಬಹುದು. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ನಾನುಕಂಡಂತೆ ನರವಿಜ್ಞಾನಗಳ ತಂತ್ರಜ್ಞಾನದ ಮೂಲಕ ಮೆದುಳಿನ ವಿವಿಧ
ಭಾಗಗಳ ಚಟುವಟಿಕೆ ಮತ್ತು ಕಾರ್ಯ ರಚನೆಯನ್ನು ಅನುಸರಿಸಿ ಮೆದುಳಿನ ನಕ್ಷೆ ರಚಿಸುವ ಮೂಲಕ,
ಮನುಷ್ಯ ತಾನು ಏನನ್ನು ಗ್ರಹಿಸಿದ್ದಾನೋ ಅದನ್ನೇ ತರಂಗಗಳ ಮೂಲಕ ಕ್ರೋಢೀಕರಿಸಿ ಚಿತ್ರಿಸುವ ಹೊಸ ತಂತ್ರಜ್ಞಾನವೂ
ಕೂಡ ಬರಲಿದೆ ಎನ್ನುವುದನ್ನ ನಮ್ಮ ಜೀವಮಾನದಲ್ಲೇ ಕಾಣಬಹುದು.
ಛಾಯಾಗ್ರಹಣವು ಬೆಳೆದಂತೆ, ಗೌಪ್ಯತೆ ಮತ್ತು ನೈತಿಕತೆಯ ಪ್ರಶ್ನೆಗಳು ಇನ್ನಷ್ಟು ಪ್ರಮುಖವಾಗುತ್ತವೆ. ಇಂದಿನ
ಮೂಲಕ ಚಿತ್ರಗಳನ್ನು ನಿರ್ಮಿಸುವ ಸಾಮರ್ಥ್ಯವು ‘ನಕಲಿ’ ಚಿತ್ರಗಳನ್ನು ಸೃಷ್ಟಿಸಿ ಅಪಾಯವನ್ನು ಹೆಚ್ಚಿಸಬಹುದು. ಸಾರ್ವಜನಿಕ
ಸ್ಥಳಗಳಲ್ಲಿ ಚಿತ್ರಗಳನ್ನು ತೆಗೆಯುವ ನಿಯಮಗಳು, ಫೇಸ್ ರೆಕಗ್ನಿಷನ್ ತಂತ್ರಜ್ಞಾನದ ಬಳಕೆ
ಮುಂತಾದ ವಿಷಯಗಳ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ, ಛಾಯಾಗ್ರಹಣವು ನಿನ್ನೆಯ ಪ್ರಯೋಗಗಳಿಂದ, ಇಂದಿನ ಡಿಜಿಟಲ್ ಕ್ರಾಂತಿಯ ಮೂಲಕ ನಾಳೆಯ ಅನಂತ ಸಾಧ್ಯತೆಗಳ ಕಡೆಗೆ ಸಾಗುತ್ತಿದೆ. ಇದು ಕೇವಲ ತಂತ್ರಜ್ಞಾನದ ಮುನ್ನಡೆಯಲ್ಲ, ಬದಲಿಗೆ ಮಾನವನ ಸೃಜನಶೀಲತೆ ಮತ್ತು ದೃಷ್ಟಿಕೋನದ ನಿರಂತರ ಅನ್ವೇಷಣೆ ಹೌದೆನ್ನಬಹುದು. ನಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು, ನಾಳಿನ ಪೀಳಿಗೆಯು ಹಿಂದಿನ ಇತಿಹಾಸವನ್ನು ತಿಳಿಯಲು ಮತ್ತು ಹಂಚಿಕೊಳ್ಳಲು ಛಾಯಾಗ್ರಹಣವು ಒಂದು ಶಕ್ತಿಶಾಲಿ ಮಾಧ್ಯಮವಾಗಿ ಮುಂದುವರಿಯುತ್ತಿದೆ. ಭವಿಷ್ಯದಲ್ಲಿ ಇದು ಇನ್ನಷ್ಟು ವೈಯಕ್ತಿಕ, ಸಂವಾದಾತ್ಮಕ ಮತ್ತು ಎಲ್ಲರಿಗೂ ಸುಲಭವಾಗಿ ತಲುಪುವ ಮಾಧ್ಯಮವಾಗಿ ರೂಪುಗೊಳ್ಳಲಿದೆ ಎಂಬುದರಲ್ಲಿ ಸಂಶಯವಿಲ್ಲ.

World Environment Day ರಾಷ್ಟ್ರ ರಕ್ಷಣೆಯ ಸೈನಿಕರಾಗದಿದ್ದರೂ ಪರಿಸರ ರಕ್ಷಣೆಯ ಸೇವಕರಾದರೂ ಆಗಬಹುದು: ಡಾ ಎಚ್ ಬಿ ಮಂಜುನಾಥ

0

World Environment Day ರಾಷ್ಟ್ರ ರಕ್ಷಣೆಯ ಮಹತ್ತರ ಕಾರ್ಯದಲ್ಲಿ ಸೈನಿಕರಾಗಲು ಎಲ್ಲರಿಗೂ ಸಾಧ್ಯವಾಗದಿದ್ದರೂ ಪರಿಸರ ರಕ್ಷಣೆಯ ಪವಿತ್ರ ಕಾರ್ಯದಲ್ಲಿ ಸೇವಕರಂತೂ ಆಗಬಹುದು ಎಂದು ಹಿರಿಯ ಪತ್ರಕರ್ತ ಪರಿಸರವಾದಿ ಡಾ. ಎಚ್ ಬಿ ಮಂಜುನಾಥ ಹೇಳಿದರು. ಜೆ ಹೆಚ್ ಪಟೇಲ್ ಬಡಾವಣೆಯ ಶಬರಿ ಮಹಿಳಾ ಸಂಘದ ವತಿಯಿಂದ ಉದ್ಯಾನವನದಲ್ಲಿ ಏರ್ಪಾಡಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನಂತರ ಮಾತನಾಡುತ್ತಾ 20 ಮಾನದಂಡದಲ್ಲಿ ಇರಬೇಕಾದ ವಾಯುಗುಣಮಟ್ಟ ಸೂಚ್ಯಂಕವು ಬೆಂಗಳೂರಿನಂತ ಮಹಾನಗರದಲ್ಲಿ ಅಪಾಯಕಾರಿಯಾದ 153ಕ್ಕೆ ಹೋಗಿದೆ ದೆಹಲಿ ಈ ಮಟ್ಟವನ್ನೂ ಮೀರಿದೆ, ಇದಕ್ಕೆಲ್ಲಾ ಕಾರಣ ವಾಯುಮಾಲಿನ್ಯವೂ ಆಗಿದ್ದು ಸಸಿ ನೆಟ್ಟು ಮರಗಳನ್ನು ಬೆಳೆಸುವ ಮೂಲಕ ವಾಯುವಿನ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದಾಗಿದೆ. World Environment Day ಉಪಕಾರಿಯಾಗಬೇಕಾದ ಮಳೆಯು ಪರಿಸರ ಅಸಮತೋಲನದಿಂದಾಗ ಅಪಾಯಕಾರಿಯಾಗಿ ಸುರಿಯುವ ಪರಿಸ್ಥಿತಿ ಬಂದಿದೆ. ವರ್ಷವೊಂದಕ್ಕೆ ಪ್ರಪಂಚದಲ್ಲಿ 420 ಲಕ್ಷ ಎಕರೆಯ ಪ್ರಮಾಣದ ಮರಗಳು ನಾಶವಾಗುತ್ತಿದ್ದು ಭಾರತದಲ್ಲಿ ವಾರ್ಷಿಕ 40 ಲಕ್ಷ ಎಕರೆಯಷ್ಟು ಪ್ರದೇಶದ ಮರಗಳು ನಾಶವಾಗುತ್ತಿವೆ, ಇದೆಲ್ಲಾ ಅನಿವಾರ್ಯವೆನಿಸಿದರೂ ಪರ್ಯಾಯವಾಗಿ ಮರಗಳನ್ನು ಬೆಳೆಸಲೇಬೇಕು ಇಲ್ಲವಾದಲ್ಲಿ ಮುಂದೆ ನಮಗೆ ಉಸಿರಾಡಲೂ ಆಮ್ಲಜನಕ ಸಿಗಲಾರದು ಎಂದರು. ಶಬರಿ ಮಹಿಳಾ ಸಂಘದ ಸಂಸ್ಥಾಪಕಿ ವಸಂತಾ ಚಂದ್ರಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷೆ ಶಿವಗಂಗಾ, ಪುಷ್ಪಲತಾ ಅಜ್ಜಯ್ಯ, ಮುಂತಾದವರು ಉಪಸ್ಥಿತರಿದ್ದು ವಿಜಯ ವೀರೇಂದ್ರ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಾ ಅತಿಥಿಗಳ ಪರಿಚಯ ಮಾಡಿದರು. ಶೋಭಾ ಸುರೇಶ್ ಹಾಗೂ ಪ್ರಮೀಳಾ ಪ್ರಾರ್ಥನೆ ಹಾಡಿದರು. ವಿಜಯಲಕ್ಷ್ಮೀ ಸ್ವಾಗತ ಕೋರಿದರು. ಲಲಿತಾ ಪರಿಸರ ದಿನಾಚರಣೆಯ ಅನುಭವ ಹಂಚಿಕೊಂಡರು. ವಿಜಯ ವಂದನೆಗಳನ್ನು ಸಮರ್ಪಿಸಿದರು. ಶಬರಿ ಮಹಿಳಾ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಭಾಗವಹಿಸಿದ್ದರು.

S.N.Chennabasappa ಸಂಘ ಪರಿವಾರದ ಪ್ರಮುಖರನ್ನ ಮಟ್ಟಹಾಕುವ ಕಾಂಗ್ರೆಸ್ ಸರ್ಕಾರದ ವ್ಯರ್ಥ ಪ್ರಯತ್ನ- ಶಾಸಕ ಚೆನ್ನಿ

0

S.N.Chennabasappa ಓಲೈಕೆಯ ಪಿತಾಮಹ ‘ಖಾನ್’ಗ್ರೆಸ್! ತನ್ನ ‘ಖಾನ್’ದಾನಿನ ಬೆಂಕಿ ಆರಿಸಲು ನಮ್ಮ ಹಿಂದೂ ಸಮಾಜಕ್ಕೆ ಬೆಂಕಿ ಹಚ್ಚುತ್ತಿರುವುದು ರಾಜಕೀಯ ದುರುದ್ದೇಶಗಳ ಪ್ರತಿಬಿಂಬ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್. ಚೆನ್ನಬಸಪ್ಪನವರು ತಿಳಿಸಿದ್ದಾರೆ.

ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಇತ್ತೀಚೆಗೆ ನಡೆದ ಸರಣಿ ಹತ್ಯಾಕಾಂಡಗಳನ್ನು ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ತಡೆಯುವಲ್ಲಿ ವಿಫಲವಾಗಿ ತನ್ನ ವೋಟ್ ಬ್ಯಾಂಕಿನ ಆಕ್ರೋಶವನ್ನು ನಿರ್ವಹಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಸಂಘ ಪರಿವಾರ ಮತ್ತು ಹಿಂದೂ ಸಂಘಟನೆಗಳ ಪ್ರಮುಖರ ಮೇಲೆ ಕೋಮುವಾದಿಗಳು ಎಂಬ ಪಟ್ಟ ಕಟ್ಟಿ ಅವರ ಮೇಲೆ ನಿರಾಧಾರ ಆರೋಪಗಳನ್ನು ಹೊರಿಸುತ್ತಿರುವುದು ರಾಜಕೀಯ ಪ್ರೇರಿತ ನಡೆ ಎಂದಿದ್ದಾರೆ.

ಅಧಿಕಾರವನ್ನು ಹಾಗೂ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಹಿಂದೂ ಮುಖಂಡರ ಹಳೆಯ ಭಾಷಣಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ತುಘಲಕ್ ಆಡಳಿತಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ಆರ್ ಎಸ್ ಎಸ್ ಪ್ರಮುಖರಾದ ಶ್ರೀ ಕಲ್ಲಡ್ಕ ಪ್ರಭಾಕರ ಭಟ್ ಅವರ ದಶಕಗಳ ಹಿಂದಿನ ಭಾಷಣಗಳನ್ನು ಉಲ್ಲೇಖಿಸಿ ಎಫ್‌ಐಆರ್‌ ದಾಖಲಿಸಿರುವುದು, ಮತ್ತು ಬಿಜೆಪಿ ಮುಖಂಡರಾದ ಶ್ರೀ ಅರುಣ್‌ ಕುಮಾರ್ ಪುತ್ತಿಲ ಅವರಿಗೆ ಗಡಿಪಾರು ನೋಟಿಸ್‌ ನೀಡಿರುವುದು, ಸ್ಥಳೀಯ ಶಾಸಕರ, ಸಚಿವರ ಓಲೈಕೆಯ ರಾಜಕೀಯ ಒತ್ತಡಕ್ಕೆ ಮಣಿದಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಇದೆಲ್ಲದರ ಮಧ್ಯೆ, ಸುಹಾಸ್ ಶೆಟ್ಟಿ ಅವರ ಹತ್ಯೆಯಾದಾಗ ನಡೆಯದ ತನಿಖೆಗಳು, ಅಬ್ದುಲ್ ರಹೀಮ್ ಕೊಲೆಯಾದಾಗ ರಾತೋರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮನೆಗಳಲ್ಲಿ ತನಿಖೆಗಳು ನಡೆಯುತ್ತಿದೆ. ಇದು ಕೇವಲ ಹಿಂದೂ ಸಂಘಟನೆಗಳ ಪ್ರಮುಖರ, ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವುದು ಸಂವಿಧಾನಬದ್ಧ ತನಿಖೆಗಳಲ್ಲ; ಬದಲಾಗಿ ಮುಸಲ್ಮಾನರ ತೃಪ್ತಿಗಾಗಿ ನಡೆಯುತ್ತಿರುವುದು!

S.N.Chennabasappa ನಮ್ಮ ಸಂಘಪರಿವಾರದ ಪ್ರಮುಖರು ಮತ್ತು ಹಿಂದೂ ಸಮಾಜದ ನಾಯಕರನ್ನು ಗುರಿಯಾಗಿಸಿ ದೌರ್ಜನ್ಯ ನಡೆಸುವುದು ದೇಶದ ಸಾಂವಿಧಾನಿಕ ಬುನಾದಿಗೆ ಮಾಡುವ ಅಪಮಾನ. ರಾಜಕೀಯ ಹಾಗೂ ಓಲೈಕೆಗಾಗಿ ಹಿಂದೂ ಮುಖಂಡರನ್ನು ಗುರಿಯಾಗಿಸುವ ಈ ಕ್ರಮಗಳು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಆಗುವ ಎಲ್ಲಾ ಅನಾಹುತಕ್ಕೆ ನಿಮ್ಮ ಓಲೈಕೆಯೇ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ .

H. S. Venkateshamurthy ಎಚ್ ಎಸ್ ವಿ ಯವರ ಕವಿತೆ ನಾಟಕ ಪ್ರಬಂಧ ಕಾದಂಬರಿ ಮಕ್ಕಳ ಸಾಹಿತ್ಯ ಇಂದಿಗೂ ಪ್ರಸ್ತುತ : ಜಯಶ್ರೀ ಶ್ರೀಧರ್

0

H. S. Venkateshamurthy ಕಲಾ ಕ್ಷೇತ್ರದಲ್ಲಿ ಚಲನಚಿತ್ರ ಹಾಗೂ ಧಾರವಾಹಿಗಳಿಗೆ ಸಂಭಾಷಣೆಯನ್ನು ಬರೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಚ್ಎಸ್ ವೆಂಕಟೇಶ್ ಮೂರ್ತಿಯವರ ಕಲಾಸೇವೆ ಮರೆಯವಂತಿಲ್ಲ. ಅವರ ಕವನ ಕವಿತೆಗಳು ಇಂದಿಗೂ ಸಹ ಪ್ರಸ್ತುತ ಎಲ್ಲಾ ವರ್ಗದವರಿಗೂ ಸಹ ವಿಶೇಷ ಕವನಗಳನ್ನು ರಚಿಸುವುದರ ಸುಗಮ ಸಂಗೀತ ಕ್ಷೇತ್ರವನ್ನು ಸದೃಢಗೊಳಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಸುಗಮ ಸಂಗೀತ ಪರಿಷತ್ತಿನ ನಿರ್ದೇಶಕರು ಹಾಗೂ ಆಕಾಶವಾಣಿ ಕಲಾವಿದರಾದ ಶ್ರೀಮತಿ ಜಯಶ್ರೀ ಶ್ರೀಧರ್ ಅವರು ಅಭಿಮತ ವ್ಯಕ್ತಪಡಿಸಿದರು. ನಗರದ ಮಧುರ ಪ್ಯಾರಡೈಸ್ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಶಿವಮೊಗ್ಗ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್. ಭಾವಗಾನ ಶಿವಮೊಗ್ಗ ನಾದಶ್ರೀ ಸುಗಮ ಸಂಗೀತ ಶಾಲೆ. ಹಾಗೂ ತರಂಗಿಣಿ ಸಂಗೀತ ಶಾಲೆ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಕೀರ್ತಿಶೇಶ ಕವಿ ಡಾಕ್ಟರ್ ಎಚ್ಎಸ್ ವೆಂಕಟೇಶ್ ಮೂರ್ತಿಯವರ ನಾಲ್ಕು ದಿನದ ಬಾಳಿಗೆ ಇರಲಿ ಹಾಲು ಹೋಳಿಗೆ ನುಡಿಗಾನ ನಮನ ಕಾರ್ಯಕ್ರಮ ವನ್ನು ಎಚ್ ಎಸ್ ವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಬಾವಗಾನ ಸಂಸ್ಥೆಯ ಅಧ್ಯಕ್ಷರಾದ ಭದ್ರಾವತಿ ವಾಸು ಅವರು ಮಾತನಾಡುತ್ತ ಹೆಚ್ ಎಸ್ ವಿ ಅವರು. ಈ ನಾಡು ಕಂಡ ಒಬ್ಬ ಶ್ರೇಷ್ಠ ಕವಿ ಅವರ ಲೋಕದ ಕಣ್ಣಿಗೆ ರಾಧೆಯು ಕೂಡ. ಸಾವಿರದಳ ಕಮಲಿನಿ ಹಾಗೆ ಹಲವಾರು ಭಾವಗೀತೆಗಳು ಇಂದಿಗೂ ಸಹ ಜೀವನಂತಿಕೆಯಿಂದ ಇದೆ ಎಂದು ನುಡಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಘಟಕದ ಖಜಾಂಚಿ ಜಿ ವಿಜಯ್ ಕುಮಾರ್ ಅವರು ಮಾತನಾಡುತ್ತಾ ಸುಗಮ ಸಂಗೀತ ಕ್ಷೇತ್ರ ಗಟ್ಟಿಗೊಳ್ಳಲು ಇಂತಹ ಕವಿಗಳು ಸಾಧಕರು ಬಹಳ ಮುಖ್ಯ ಇವರ ಕಥೆ ಕವನ ಹಾಗೂ ನಾಟಕಗಳು ರಾಜ್ಯ ರಾಷ್ಟ್ರಮಟ್ಟದಲ್ಲೂ ಸಹ ವಿಶೇಷ ಸ್ಥಾನಮಾನವನ್ನ ಪಡೆದಿದೆ ಸುಗಮ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ನಾವು ಮರೆಯಲು ಸಾಧ್ಯವೇ ಇಲ್ಲ ಎಂದು ನುಡಿದರು. H. S. Venkateshamurthy ಇದೇ ಸಂದರ್ಭದಲ್ಲಿ ಸುಗಮ ಸಂಗೀತ ಪರಿಷತ್ತಿನ ಕಲಾವಿದರು ಭಾವಗಾನ ತಂಡದ ಕಲಾವಿದರು ಹಾಗೂ ಎಲ್ಲಾ ಸಂಗೀತ ಪಾಠಶಾಲೆಯ ಕಲಾವಿದರು ಎಚ್ ಎಸ್ ವಿ ಅವರ ಕವಿತೆಗಳನ್ನು ಹಾಡಿ ಮನತಣಿಸಿದರು. ವೇದಿಕೆಯಲ್ಲಿ ಸಂಚಾಲಕರಾದ ಶೋಭಾ ಸತೀಶ್. ಭುಜಂಗಪ್ಪ. ಕಾರ್ಯದರ್ಶಿ ಮಥುರಾ ನಾಗರಾಜ್. ಬಸವರಾಜ್. ಲಲಿತಮ್ಮ. ವಿಜಯಕುಮಾರ್. ಮತ್ತು ಪರಿಷತ್ತಿನ ಕಲಾವಿದರು ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು

Narayana Health Shimoga ವಿಶ್ವ ಬ್ರೈನ್ ಟ್ಯೂಮರ್ ದಿನ. ಎನ್.ಹೆಚ್.ಆಸ್ಪತ್ರೆಯಲ್ಲಿಮೆದುಳಿನ ಗೆಡ್ಡೆ ಆಪರೇಷನ್ ಯಶಸ್ವಿ- ಡಾ.ಅನಿಲ್ ಕುಮಾರ್

0

Narayana Health Shimoga ಕಣ್ಣು ಮಸುಕಾಗಿವೆ, ದೃಷ್ಟಿ ಸಮಸ್ಯೆ ಏನೋ ವಯಸ್ಸಿನ ಕಾರಣವಾಗಿರಬಹುದು” ಎಂದು ಶಂಕಿಸಿ, ಸುಮ್ಮನಾಗಿದ್ದ ಮಹಿಳೆಯೊಬ್ಬರು ಕೆಲವೇ ದಿನಗಳಲ್ಲಿ ತಮ್ಮ ಬಲಗಣ್ಣಿನ ದೃಷ್ಟಿಕಳೆದುಕೊಂಡು ಮತ್ತೆ ದೃಷ್ಟಿ ಪಡೆದ ಅಪರೂಪದ ವೈದ್ಯಕೀಯ ಸಾಧನೆಯ ಕಥೆ ಇದು.

47 ವರ್ಷದ ಆ ಮಹಿಳೆಗೆ ಆರಂಭದಲ್ಲಿ ಬಲಕಣ್ಣಿನಲ್ಲಿ ಸ್ವಲ್ಪ ಮಸುಕಾದ ದೃಷ್ಟಿ ಕಾಣಿಸಿತು. ಆದರೆ ಅದು ನಿಧಾನವಾಗಿ ಬೆಳಕನ್ನೂ ಕಾಣದಷ್ಟು ಕಗ್ಗತ್ತಲಾಗಿ ಮಾರ್ಪಟ್ಟಿತು. ಮೊದಲಿಗೆ ಇದು ಕಣ್ಣಿನ ಸಮಸ್ಯೆ ಅಂದುಕೊಂಡಿದ್ದ ಅವರಿಗೆ ಇದು ಮೆದುಳಿನಲ್ಲಿ ಬೆಳೆಯುತ್ತಿದ್ದ ಅಪಾಯಕಾರಿ ಟ್ಯೂಮರ್ (ಗೆಡ್ಡೆ) ನಿಂದ ಅಂದು ತಿಳಿದಾಗ ತಡವಾಗಿತ್ತು.

ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ನ್ಯೂರೋಸರ್ಜನ್ ಡಾ. ಅನಿಲ್‌ಕುಮಾರ್ ಎಂ.ಎಸ್. ಅವರನ್ನು ಭೇಟಿಯಾದರು. ತೀವ್ರ ಪರೀಕ್ಷೆಯ ಬಳಿಕ, ಆಕೆಯ ಮೆದುಳಿನಲ್ಲಿ 5 x 4 x 3.5 ಸೆಂ.ಮೀ ಗಾತ್ರದ ಮೆನಿಂಜಿಯೋಮಾ ಎಂಬ ಮೆದುಳಿನ ಗೆಡ್ಡೆ ಕಂಡುಬಂತು. ಇದು ಕಣ್ಣುಗಳಿಗೆ ಸಂಬಂಧಿಸಿದ “ಆಪ್ಟಿಕ್ ನರ್ವ್” ಮೇಲೆ ಒತ್ತಡ ಹಾಕುತ್ತಿದ್ದು, ಮೆದುಳಿನ ಮುಖ್ಯ ರಕ್ತನಾಳವಾದ “ಮಿಡಲ್ ಸೆರಿಬ್ರಲ್ ಆರ್ಟರಿ”ಗೂ ಕೂಡಾ ತುಂಬಾ ಹತ್ತಿರದಲ್ಲಿತ್ತು.

ಇದನ್ನು ಹಾಗೆಯೇ ಬಿಟ್ಟಿದ್ದರೆ, ಟ್ಯೂಮರ್ ಮುಂದುವರೆದು ಮೆದುಳಿನ “ಹೈಪೊಥಾಲಮಸ್” ಭಾಗವನ್ನು ಒತ್ತಿ, ತಮ್ಮ ನೆನಪಿನ ಶಕ್ತಿ ಕಳೆದುಕೊಳ್ಳುವುದಲ್ಲದೆ, ಅವರ ಹಾರ್ಮೋನ್ ವ್ಯವಸ್ಥೆ ಏರುಪೇರಾಗಿ ಕೋಮಾಗೆ ಜಾರುವ ಸಾಧ್ಯತೆಗಳೂ ಇದ್ದವು ಎಂದು ಚಿಕಿತ್ಸೆ ನೀಡಿದ ಡಾ. ಅನಿಲ್‌ಕುಮಾರ್‌ ಅವರು ತಿಳಿಸಿದರು.

ಇದೊಂದು ಜಟಿಲ ಹಾಗೂ ಸೂಕ್ಷ್ಮ ಶಸ್ತ್ರಚಿಕಿತ್ಸೆಯಾಗಿತ್ತು. ಏಕೆಂದರೆ — ಈ ಭಾಗಗಳು ದೃಷ್ಟಿ, ನೆನಪು ಮತ್ತು ದೇಹದ ಚೇತನತೆ ಸಂಬಂಧಿಸಿದಾಗಿದೆ, ಒಂದು ಚಿಕ್ಕ ತಪ್ಪು ಆಕೆಯಲ್ಲಿ ಶಾಶ್ವತವಾದ ದೋಷಕ್ಕೆ ಕಾರಣವಾಗುತ್ತಿತ್ತು. ಆದರೂ, ಡಾ. ಅನಿಲ್‌ಕುಮಾರ್ ಅವರ ನೇತೃತ್ವದಲ್ಲಿ 12 ಗಂಟೆಗಳ ಕಾಲ ನಡೆದ ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ, ಮೈಕ್ರೋಸ್ಕೋಪ್ ಮತ್ತು ನ್ಯೂರೋ ನ್ಯಾವಿಗೇಶನ್ ತಂತ್ರಜ್ಞಾನ ಬಳಸಿಕೊಂಡು ಟ್ಯೂಮರ್ ಅನ್ನು ತೆಗೆದುಹಾಕಲಾಗಿದೆ.

Narayana Health Shimoga ಶಸ್ತ್ರಚಿಕಿತ್ಸೆಯ ಎರಡು ವಾರಗಳ ಬಳಿಕ, ಬೆಳಕನ್ನೂ ಕಾಣದೆ ಇದ್ದ ಕಣ್ಣಿನಿಂದಲೇ ರೋಗಿಯು 6 ಅಡಿ ದೂರದಿಂದ ಬೆರಳು ಎಣಿಸಲು ಸಾಧ್ಯವಾಗಿರುವುದು, ಅಚ್ಚರಿ ಹಾಗೂ ಸಂತೋಷಕ್ಕೆ ಕಾರಣವಾಗಿದೆ ಎನ್ನುತ್ತಾರೆ ಡಾ.ಅನಿಲ್‌ಕುಮಾರ.

ಇಂತಹ ಟ್ಯೂಮರ್‌ಗಳಿಂದ ದೃಷ್ಟಿ ಮತ್ತೆ ಬರುತ್ತದೆ ಎಂಬುದು ಅಪರೂಪ. ಜಾಗತಿಕ ಅಧ್ಯಯನಗಳ ಪ್ರಕಾರ, ಈ ರೀತಿಯ ಟ್ಯೂಮರ್‌ಗಳಿಂದ ದೃಷ್ಟಿ ಮರುಪಡೆಯುವ ಸಾಧ್ಯತೆ ಕೇವಲ 5–8% ಮಾತ್ರ. ಬದಲಾಗಿ, ದೃಷ್ಟಿ ಇನ್ನಷ್ಟು ಕುಗ್ಗುವ ಸಂಭವ 22–35% ರಷ್ಟು ಇದೆ ಎಂದರು.

“ಆಪ್ಟಿಕ್ ನರ್ವ್ ಇಡೀ ಟ್ಯೂಮರ್‌ನೊಳಗೆ ಸಿಕ್ಕಿಹಾಕಿದಾಗ ದೃಷ್ಟಿ ಮರುಪಡೆಯುವುದು ಬಹಳ ಅಪರೂಪ. ಆದರೆ ಈ ಮಹಿಳೆ ಅದನ್ನೆಲ್ಲ ಮೀರಿ ಗೆದ್ದಿದ್ದಾರೆ” ಎಂದು ಡಾ. ಅನಿಲ್‌ಕುಮಾರ್ ಹೇಳಿದರು.

ಆಕೆ ಕೇವಲ ದೃಷ್ಟಿಯನ್ನಷ್ಟೇ ಮರುಪಡೆಯದೆ, ಮೆದುಳಿನ ನೆನಪು, ಹಾರ್ಮೋನ್ಗಳು ಇತ್ಯಾದಿಗಳ ಕಾರ್ಯವಿಧಾನಗಳು ಕೂಡಾ ಉಳಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಅವರು ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದಾರೆ, ಮುಂದಿನ ಫಾಲೋ-ಅಪ್ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಪ್ರಕರಣವು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ. “ದೃಷ್ಟಿಯ ಸಮಸ್ಯೆ, ಅದು ನಿಧಾನವಾಗಿದ್ದರೂ ಸಹ, ಕಣ್ಣಿನ ಸಮಸ್ಯೆ ಎಂಬುದಾಗಿ ಊಹಿಸಿ ನಿರ್ಲಕ್ಷಿಸಬಾರದು, ಪ್ರತಿ ಬಾರಿಯೂ ಕಣ್ಣಿನ ಸಮಸ್ಯೆ ಇರುವುದಿಲ್ಲ — ಕೆಲವೊಮ್ಮೆ, ಸಮಸ್ಯೆ ಮೆದುಳಿನಲ್ಲಿ ಉದ್ಭವಿಸಿರಲೂ ಬಹುದು ಅದಕ್ಕೆ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ತುಂಬಾ ಮುಖ್ಯ. ಎಂದರು ಡಾ. ಅನಿಲ್‌ಕುಮಾರ್.

Prabhu Mestri ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಪ್ರದೇಶಗಳಿಗೆ ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ ಭೇಟಿ

0

Prabhu Mestri ಪುರಸಭೆ ವ್ಯಾಪ್ತಿಗೆ ಒಳಪಡುವ ಹೊಸಪೇಟೆ ಬಡಾವಣೆಯಲ್ಲಿ ಮಳಿಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಪ್ರದೇಶಗಳಿಗೆ ಪುರಸಭೆ ಅಧ್ಯಕ್ಷ ಪ್ರಭು ಮೇಸ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೊಸಪೇಟೆ ಬಡಾವಣೆಯ ನಾರಾಯಣಗುರು ಸರ್ಕಲ್, ಹೊಸಬಾಳೆ ರಸ್ತೆಯ ಶ್ರೀ ವಿವೇಕಾನಂದ ವೃತ್ತ ಸೇರಿದಂತೆ ಸಿದ್ದಾಪುರ ರಸ್ತೆಯಲ್ಲಿ ಅವಲೋಕಿಸಿದರು.

ಮಳೆ ಬಂದ ಸಂದರ್ಭದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರು ರಸ್ತೆಯಲ್ಲಿ ಹೊಳೆಯಂತೆ ಹರಿಯುತ್ತದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು.

ಇಲ್ಲವಾದಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ಬಗ್ಗೆ ಪುರಸಭೆ ಗಮನಕ್ಕೆ ತಂದರೂ ಯಾರೂ ಸಹ ಗಮನ ನೀಡಿಲ್ಲ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜ ಗೌಡ ಚಿಕ್ಕಾವಲಿ ಅವರು ಪುರಸಭೆ ಅಧ್ಯಕ್ಷರ ಗಮನಕ್ಕೆ ತಂದರು.
ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ ಹೊಸಪೇಟೆ ಬಡಾವಣೆಯು ಪುರಸಭೆ ವ್ಯಾಪ್ತಿಗೆ ಒಳಪಡುತ್ತದೆ. ಈಗಾಗಲೇ ಪುರಸಭೆಯಿಂದ ಕಸ ಸಂಗ್ರಹಣೆ ಮಾಡಲಾಗುತ್ತಿದೆ.

Prabhu Mestri ಸಾರ್ವಜನಿಕರಿಗೆ ತೊಂದರೆಯಾಗದಂತೆ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುವುದು. ಮಳೆಗಾಲ ಆರಂಭವಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದು, ಕೆಲವಡೆ ಚರಂಡಿಗಳನ್ನು ಮುಚ್ಚಲಾಗಿದೆ. ಕೂಡಲೇ ಅವುಗಳನ್ನು ತೆರವು ಮಾಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಎಸ್. ರಣಜಿತ್ ಕುಮಾರ್, ಆರೋಗ್ಯ ನಿರೀಕ್ಷಕ ಎ.ಎನ್. ರವಿಕುಮಾರ್ ನಾಯ್ಕ್, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ ಸೊರಬ, ಹೊಸಪೇಟೆ ಬಡಾವಣೆ ನಿವಾಸಿ ನವೀನ್ ಕುಮಾರ್ ಸೇರಿದಂತೆ ಪುರಸಭೆ ಸಿಬ್ಬಂದಿ ಮುನಿಸ್ವಾಮಿ ಸೇರಿದಂತೆ ಇತರರಿದ್ದರು.

Ashakirana Mentally Retarded School ಆಶಾಕಿರಣ ಬುದ್ದಿಮಾಂಧ್ಯ ಶಾಲೆಪ್ರವೇಶಕ್ಕೆ ಅರ್ಜಿ ಆಹ್ವಾನ

0

Ashakirana Mentally Retarded School ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತವಾಗಿ ವಸತಿ ಹಾಗೂ ವಿದ್ಯಾಭ್ಯಾಸ ನೀಡಲಾಗು ತ್ತಿದ್ದು, ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮಧ್ಯಮ ದರ್ಜೆಯ ಬುದ್ಧಿ ಮಾಂದ್ಯ ಮಕ್ಕಳ ಉತ್ತಮ ಭವಿಷ್ಯ ಕ್ಕಾಗಿ ಉಚಿತ ತರಬೇತಿ ಹಾಗೂ ಪುನಶ್ಚೇತನ ಕಾರ್ಯಕ್ರಮವನ್ನು ಕಳೆದ 38 ವರ್ಷಗಳಿಂದಲೂ ಅರ್ಥ ಪೂರ್ಣವಾಗಿ ತೊಡಗಿಸಿಕೊಂಡು ಬಂದಿರುವ ರೋಟರಿ 75ನೇ ವಾರ್ಷಿಕ ದತ್ತಿ ನಿದಿ, ರೋಟರಿ ಕ್ಲಬ್ ಪ್ರಾಯೋಜಕತ್ವ ಹಾಗೂ ಅಂಗ ವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದೊಂದಿಗೆ ನಡೆಸುತ್ತಿರುವ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ, ವಿದ್ಯಾನಗರದಲ್ಲಿದ್ದು, ಈ ವಸತಿ ಶಾಲೆಯಲ್ಲಿ ಇಲ್ಲಿಯವರೆಗೆ ಸುಮಾರು 1,700 ಕ್ಕೂ ಹೆಚ್ಚು ಬುದ್ಧಿಮಾಂದ್ಯ ವಿದ್ಯಾರ್ಥಿಗಳು ತಮ್ಮ ಸ್ವಂತಿಕೆಯಿಂದ ಮತ್ತೊಬ್ಬರಿಗೆ ಹೊರೆಯಾಗದಂತೆ ಸಮಾಜದಲ್ಲಿ ಭಾಳ್ವೆ ಮಾಡುತ್ತಿದ್ದಾರೆ.
Ashakirana Mentally Retarded School 6 ರಿಂದ 18 ವರ್ಷದೊಳಗಿನ ಬುದ್ಧಿಮಾಂದ್ಯ ಮಕ್ಕಳು ಅರ್ಹರಾ ಗಿದ್ದು, ದಾಖಲಾತಿ ಪ್ರಾರಂಭವಾ ಗಿದ್ದು, ಅರ್ಜಿಯನ್ನು ಶಾಲೆಯ ಕಛೇರಿಯಲ್ಲಿ ಪಡೆದುಕೊಳ್ಳ ಬಹುದಾಗಿದೆ. ಮಾಹಿತಿಗೆ ಆಶಾಕಿರಣ ಅಧ್ಯಕ್ಷೆ ಡಾ| ರಜನಿ ಎ. ಪೈ ಮೊ.94482 88487, 273236, 223864, ಎ. ಮಂಜುನಾಥ್, 98440 55267, ಹೆಚ್‌ಎಂ ಮೊ. 99457 97120 ರಲ್ಲಿ ಸಂಪರ್ಕಿಸಲು ವ್ಯವಸ್ಥಾಪಕ ಗಿರೀಶ್ ವೈ.ಎಸ್. ತಿಳಿಸಿದ್ದಾರೆ.