Friday, February 27, 2026
Friday, February 27, 2026
Home Blog Page 281

S.N.Chennabasappa ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರಕ್ಕೆ ಶಾಸಕ ಚನ್ನಬಸಪ್ಪ ಭೇಟಿ

0

S.N.Chennabasappa ಗೋಪಾಳದ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರಕ್ಕೆ ಶಾಸಕ ಚನ್ನಬಸಪ್ಪ ಭೇಟಿ ನೀಡಿದ್ದರು. ರೂ. 10 ಲಕ್ಷ ವೆಚ್ಚದಲ್ಲಿ ಟಾರ್ ರಸ್ತೆಯ ಗುದ್ದಲಿ ಪೂಜೆ ಸಮಾರಂಭದಲ್ಲಿ ಶಾಸಕರು ಭಾಗವಹಿಸಿದ್ದರು.
ಟಾರ್ ರಸ್ತೆಯ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

Mangalore Institute of Oncology Super Specialty Cancer Hospital ಕ್ಯಾನ್ಸರ್ ತಡೆಗಟ್ಟಲು ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ

0

Mangalore Institute of Oncology Super Specialty Cancer Hospital ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಅಸ್ಪತ್ರೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಭಿಯಾನದ ಪ್ರಯುಕ್ತ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ “ಸ್ವಯಂ ಸೇವಕ”ರಾಗಿ ಸೇವೆ ಸಲ್ಲಿಸುವವರಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವನ್ನು 28.06.2025 ರ‌ ಶನಿವಾರ ಬೆಳಿಗ್ಗೆ 8.30 ರಿಂದ 4.30 ರ ವರೆಗೆ ತೀರ್ಥಹಳ್ಳಿಯ ಆರಗ ಗ್ರಾಮದಲ್ಲಿ ಇರುವ MIO ಕ್ಯಾನ್ಸರ್ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದೆ.

ತರಬೇತಿಯನ್ನು ಪಡೆದ ನಂತರ ವರ್ಷದಲ್ಲಿ ಕನಿಷ್ಟಪಕ್ಷ ಎರಡು ಬಾರಿಯಾದರೂ ಜಿಲ್ಲೆಯ ಶಾಲಾ ಕಾಲೇಜು ಅಥವಾ ಇನ್ನಿತರ ಸಂಘ ಸಂಸ್ಥೆಗಳಿಗೆ ಹೋಗಿ ಕ್ಯಾನ್ಸರ್ ಅರಿವು ಮೂಡಿಸುವ ಉಪನ್ಯಾಸವನ್ನು ಕಡ್ಡಾಯವಾಗಿ ನೀಡಬೇಕಿದೆ.

ಈ ಮಹತ್ವದ ವಿಷಯದ ಆಸಕ್ತರಿಗೆ ಆಸಕ್ತ ಶಾಲಾ ಕಾಲೇಜುಗಳು ಮತ್ತು ಸಂಘ ಸಂಸ್ಥೆಗಳಲ್ಲಿ ತರಬೇತಿ ತರಗತಿಗಳನ್ನು ವ್ಯವಸ್ಥೆ ಮಾಡಿಕೊಡಲಾಗುವುದು.

Mangalore Institute of Oncology Super Specialty Cancer Hospital ತಮ್ಮ ಆಗಮನದ ಬಗ್ಗೆ ಕ್ಯಾನ್ಸರ್ ಅರಿವು ಮೂಡಿಸುವ ಯೋಜನೆಯ ಮುಖ್ಯ ಸಂಯೋಜಕರಾದ ಅ.ನಾ.ವಿಜಯೇಂದ್ರ ರಾವ್ (9448790127) ಇವರಲ್ಲಿ ತಿಳಿಸಬೇಕಾಗಿ ಕೋರಲಾಗಿದೆ.

Dinesh Gundu Rao ಮುಂದಿನ ಪೀಳಿಗೆಯ ಪಾಕ ವೈವಿಧ್ಯ ಮಾಹಿತಿಗೋಸ್ಕರ ಪಾಕ ವಿಧಾನ ಸ್ಪರ್ಧೆ

0

Dinesh Gundu Rao ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಇನ್ ಕ್ರೆಡಿಬಲ್ ಚೆಫ್ ಚಾಲೇಂಜ್ ವತಿಯಿಂದ ಐತಿಹಾಸಿಕ ಪಾಕ ಪದ್ದತಿಗಳನ್ನು ಪುನರ್ಜೀವನಗೊಳಿಸುವ ಸ್ಪರ್ಧೆಯನ್ನು ದಿನಾಂಕ 12-06-2025 ಕಟ್ಟೆ 11:30 ಬೆಳಿಗ್ಗೆ ತೃಪುರ ವಾಸಿನಿ, ಪ್ಯಾಲೆಸ್ ಗ್ರೌಂಡ್ಸ್ ನಲ್ಲಿ ಆಯೋಜಿಸಲಾಗಿದೆ.

ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ
ಶ್ರೀ ದಿನೇಶ್ ಗುಂಡೂರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

Dinesh Gundu Rao ಸ್ಪರ್ಧೆಯಲ್ಲಿ ಮಾಸ್ಟರ್ ಶೆಫ್ ಜೊತೆ ಅಡುಗೆ ಕಲಿಯುವ ಅವಕಾಶ , ಲೈವ್ ಶೆಫ್ಸ್ ಸ್ಪರ್ಧೆ, ಅಡುಗೆ ಕಲೆ ಸ್ಪರ್ಧೆ, ಪಾರಂಪರಿಕ ಅಡುಗೆಗಳ ಮೇಲೆ ಒತ್ತು, ಶೆಫ್ ಕೌಶಲ್ಯ ಸವಾಲು, ಅಡುಗೆ ತಂತ್ರಗಳು, ನೆಕ್ಸ್‌ಟ್ ಲೆವಲ್ ಶೆಫ್, 3 ಹಂತದ ಮದುವೆ ಕೇಕ್‌ಗಳು, ಪ್ಲೇಟು ಮಾಡಿದ ಆಪೆಟೈಜರ್‌ಗಳು, ಕಲಾತ್ಮಕ ಬೇಕರಿ ಶೋಪೀಸ್, ಕಲಾತ್ಮಕ ಪೇಸ್ಟ್ರಿ ಶೋಪೀಸ್, ಹಣ್ಣು ಮತ್ತು ತರಕಾರಿಗಳ ನಕಲು ಕಲೆ,
ಸ್ಥಳೀಯ ಶೆಫ್‌ಗಳ ಜೊತೆ ಅಡುಗೆ, ಹೀಗೆ ವಿವಿಧ ಸ್ಪರ್ಧೆಗಳಿವೆ. 250+ ಶೆಫ್‌ಗಳು ಅಡುಗೆ ಕಲೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9844006736 ಅನ್ನು ಸಂಪರ್ಕಿಸಬಹುದು.

International Skating Competition ಅಂತರ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಕ್ಕಳ ಸಾಧನೆ

0

International Skating Competition ಇಂಡೋನೇಷ್ಯಾದಲ್ಲಿ ನಡೆದ ಅಂತರ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಭಾಗವಹಿಸಿದ್ದ 34 ಸ್ಪರ್ಧಿಗಳ ಪೈಕಿ ಶಿವಮೊಗ್ಗ ಡಿಸ್ಟಿಕ್ ರೋಲರ್ ಸ್ಕೇಟಿಂಗ್ ಸಂಸ್ಥೆಯ ದೇಶ್ನ ಡಿ. ಗೆ ಬಂಗಾರದ ಪದಕ, ಎಂ.ಎಸ್. ಹರ್ಷಿತಗೆ ಕಂಚಿನ ಪದಕ ಹಾಗೂ ರೋಶನ್ ಎಂ. ಎರಡು ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ತರಬೇತುದಾರ ಶೇಖರ್ ಬಾಬು ಅವರಲ್ಲಿ ಸ್ಕೇಟಿಂಗ್ ಕಲಿತು ಮಕ್ಕಳು ಈ ಅದ್ಭುತ ಸಾಧನೆ ಮಾಡಿದ್ದಾರೆ. ಇದಕ್ಕೆಲ್ಲ ಕಾರಣರಾದ ಪೋಷಕರಿಗೆ ಹಾಗೂ ತರಬೇತಿದಾರರಿಗೆ ಸಂಸ್ಥೆ ಅಭಿನಂದಿಸಿದೆ.

Karnataka State Kadugolla Development Corporation Limited ಕಾಡುಗೊಲ್ಲ ಅಭಿವೃದ್ದಿ ನಿಗಮದಿಂದ ಸಹಾಯಧನ – ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

0

Karnataka State Kadugolla Development Corporation Limited ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ದಿ ನಿಗಮದ ಯೋಜನೆಗಳಡಿ 2025-26 ನೇ ಸಾಲಿಗೆ ಸಹಾಯಧನ ಹಾಗೂ ಸಾಲ ಸೌಲಭ್ಯವನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು-ಶೈಕ್ಷಣಿಕ ನೇರಸಾಲ ಯೋಜನೆ(ಹೊಸದು), ಗಂಗಾ ಕಲ್ಯಾಣ ಯೋಜನೆ(ಈ ಯೋಜನೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು ಇತರೆ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಹೊಂದಿರಬೇಕು), ಸ್ವಯಂ ಉದ್ಯೋಗ ನೇರಸಾಲ( ಬ್ಯಾಂಕ್‌ಗಳ ಸಹಯೋಗದೊಂದಿಗೆ), ಸ್ವಾವಲಂಬಿ ಸಾರಥಿ ಯೋಜನೆ, ವಿದೇಶಿ ವ್ಯಾಸಂಗ ಯೋಜನೆ( ವಾರ್ಷಿಕ ವರಮಾನ ರೂ.15 ಲಕ್ಷ ಮಿತಿಯಲ್ಲಿರಬೇಕು) ಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು, ನಿಗಮದ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವವರು ಸರ್ಕಾರದ ಆದೇಶದನ್ವಯ ಕಾಡುಗೊಲ್ಲ ಜಾತಿಗೆ ಸೇರಿರಬೇಕು, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರಬೇಕು, ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು, ನಿಗಮದ/ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು. ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುತ್ತದೆ.
ಅರಿವು ಯೋಜನೆಯಡಿ ವಯೋಮಿತಿ 18 ವರ್ಷಗಳಿಂದ 30 ವರ್ಷಗಳ ಮಿತಿಯಲ್ಲಿರಬೇಕು ವಾರ್ಷಿಕ ವರಮಾನ ರೂ.3.50 ಲಕ್ಷ. ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಜಿದಾರರು 21 ವರ್ಷ ಮೇಲ್ಪಟ್ಟು 45 ವರ್ಷದ ಮಿತಿಯಲ್ಲಿರಬೇಕು, ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ ಖಾತೆಯನ್ನು ತಮ್ಮ ಆಧಾರ್ ಸಂಖ್ಯೆಗೆ ಜೋಡಣೆ ಮಾಡಿರಬೇಕು, ಅರ್ಜಿದಾರರ ಕುಟುಂಬ ವಾರ್ಷಿಕ ವರಮಾನ ಗ್ರಾಮಾಂತರ ರೂ.98 ಸಾವಿರ ಮತ್ತು ನಗರ ಪ್ರವೇಶದವರಿಗೆ ರೂ.1,20 ಲಕ್ಷ ಮಿತಿಯೊಳಗಿರಬೇಕು ಹಾಗೂ ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33, ವಿಕಲಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಿಗಳಿಗೆ ಶೇ.1 ರಷ್ಟು ಮೀಸಲಾತಿ ಇರಿಸಲಾಗಿದೆ.
Karnataka State Kadugolla Development Corporation Limited ಜು.2 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ನಲ್ಲಿರುವಂತೆ ಅರ್ಜಿದಾರರ ಹೆಸರು/ವಿಳಾಸ/ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಪುಸ್ತಕಗಳಲ್ಲಿ ತಾಳೆಯಾಗಿರಬೇಕು, ಬೆಂಗಳೂರು-ಒನ್/ ಕರ್ನಾಟಕ ಒನ್, ಅಟಲ್-ಜಿ ಜನಸ್ನೇಹಿ ಕೇಂದ್ರ ಮತ್ತು ನಾಗರೀಕ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‌ನಡಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಕೇಂದ್ರ ಕಛೇರಿಯ ದೂರವಾಣಿ ಸಂಖ್ಯೆ 080-22374848/7899899039 ಹಾಗೂ ಜಿಲ್ಲೆಗಳಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಕಛೇರಿಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5.30 ರೊಳಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Department of Social Welfare ವಸತಿ ಶಾಲೆಗಳ ಮಧ್ಯಂತರ ದಾಖಲಾತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

0

Department of Social Welfare ಶಿವಮೊಗ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕವಶಿಸಸಂ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್ ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ ಹಾಗೂ ಶ್ರೀ ನಾರಾಯಣ ಗುರು ವಸತಿ ಶಾಲೆಗಳಿಗೆ 2025-26 ನೇ ಶೈಕ್ಷಣಿಕ ಸಾಲಿನಲ್ಲಿ 7 ಮತ್ತು 8 ನೇ ತರಗತಿಗಳಿಗೆ ಮಧ್ಯಂತರ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಪ್ರವೇಶಾತಿ ಅರ್ಜಿಯನ್ನು ತಾಲ್ಲೂಕುವಾರು ಕೇಂದ್ರಗಳಲ್ಲಿ ಪಡೆಯಬಹುದು. ಜೂ.09 ರಿಂದ ಅರ್ಜಿ ವಿತರಣೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜೂ 16 ಕೊನೆಯ ದಿನಾಂಕವಾಗಿದೆ. ಅರ್ಜಿಗಳನ್ನು ನಿಗದಿತ ದಿನಾಂಕದೊಳಗೆ ತಾಲ್ಲೂಕುವಾರು ಕೇಂದ್ರಗಳಲ್ಲಿ ಸಲ್ಲಿಸಬೇಕು.
ಶಿವಮೊಗ್ಗ ತಾಲ್ಲೂಕಿನ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಕಸಬಾ, ಭದ್ರಾವತಿ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೇವರನರಸೀಪುರ, ಸಾಗರ ತಾಲ್ಲೂಕಿನ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಎಡೆಹಳ್ಳಿ, ತೀರ್ಥಹಳ್ಳಿ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆನಂದಗಿರಿ, ಹೊಸನಗರ ತಾಲ್ಲೂಕಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಹುಂಚ, ಸೊರಬ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹುಣಸವಳ್ಳಿ, ಶಿಕಾರಿಪುರ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಅಂಬಾರಗೊಪ್ಪ ಇವುಗಳು ಅರ್ಜಿ ಸ್ವೀಕೃತಿ ಕೇಂದ್ರವಾಗಿದೆ.
Department of Social Welfare ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಸತಿ ಶಾಲೆಗಳನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ ತಿಳಿಸಿದ್ದಾರೆ.

Shivamogga Bicycle Association ಸೈಕಲ್ ಸವಾರಿಯಿಂದ ಮನೋದೈಹಿಕ ದೃಢತೆ, ಉಲ್ಲಾಸ – ನರಸಿಂಹಮೂರ್ತಿ

0

Shivamogga Bicycle Association ಸೈಕಲ್ ಕಂಡು ಹಿಡಿದು ಇಂದಿಗೆ 2೦8 ವರ್ಷ ಗಳಾಗಿವೆ. ಸೈಕಲ್ ಪರಿಸರ ಸ್ನೇಹಿ ವಾಹನ.ಅತ್ಯಂತ ಹಗುರ ಕಡಿಮೆ ಖರ್ಚಿನ ಚಿಕ್ಕ ಹಾದಿಯಲ್ಲಿ ಓಡಿಸಬಹುದಾದ ಈ ವಾಹನ ಎಲ್ಲರ ನೆಚ್ಚಿನ ಸಾಧನ. ಇಂಧನ ಇಲ್ಲ ಮಾಲಿನ್ಯ ಇಲ್ಲ ಅಪಘಾತವೂ ಇಲ್ಲ. ಫ್ರಾನ್ಸ್ ಇಟಲಿ ಅಮೆರಿಕ ಬೆಲ್ಜಿಯಂ ಇಂಗ್ಲೆಂಡ್ ನೆದರ್ಲೆಂಡ್ ಮುಂತಾದ ದೇಶಗಳಲ್ಲಿ ಎಲ್ಲರೂ ಸೈಕಲ್ ಬಳಸುತ್ತಾರೆ. ಭಾರತದಲ್ಲಿಯೂ ಸೈಕಲ್ ಪರ್ವ ಇದೀಗ ಆರಂಭ ವಾಗಿದೆ. ಶಿವಮೊಗ್ಗದ ಸೈಕಲ್ ಸಂಘ ಅದರ ನಿರಂತರ ಚಟುವಟಿಕೆ ಇದಕ್ಕೊಂದು ತಾಜಾ ಉದಾಹರಣೆ. ಎಂದು ಮೂರ್ತಿ ಸೈಕಲ್ ಮತ್ತುಫಿಟ್ನೆಸ್ ಮಾಲೀಕರು ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ಬಿನ ನಿರ್ದೇಶಕರಾದ ನರಸಿಂಹಮೂರ್ತಿ ಅವರು ಅಭಿಮತ ವ್ಯಕ್ತಪಡಿಸಿದರು. Shivamogga Bicycle Association ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಶಿವಮೊಗ್ಗ ಸೈಕಲ್ ಕ್ಲಬ್ ಮೂರ್ತಿ ಫಿಟ್ನೆಸ್ ಮತ್ತು ಸೈಕಲ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಸಾರ್ವಜನಿಕ ಸೈಕಲ್ ಜಾಗೃತಿ ಜಾತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾಕ್ಟರ್ ಶೇಖರ್ ಗೌಳೆ ರವರು ಸೈಕಲ್ ಬಳಸುವುದರಿಂದ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಯಾವುದೇ ಕಾಯಿಲೆ ನಮ್ಮ ಬಳಿ ಸುಳಿಯುವುದಿಲ್ಲ ಈಗಾಗಲೇ ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಹಲವಾರು ಆರೋಗ್ಯ ಮಾಹಿತಿ ಹಾಗೂ ಜಾಗೃತಿ ಜಾತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದ್ರ ಮುಖಾಂತರ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸೈಕಲ್ ಪ್ರವಾಸಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ನುಡಿದರು. ಈ ಜಾಗೃತಿ ಜಾತಾ ವಿನೋಬನಗರ ಮೂರ್ತಿ ಫಿಟ್ನೆಸ್ ನಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಹೊರವಲಯಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿತು ಕಾರ್ಯಕ್ರಮದಲ್ಲಿ ರೋಟರಿ ಜಿ ವಿಜಯಕುಮಾರ್. ಹರೀಶ್ ಕ್ಲಬ್ಬಿನ ಕಾರ್ಯದರ್ಶಿ ಕಾಮತ್ ಮನೋಜ್ ಹಾಗೂ ಸೈಕಲ್ ಕ್ಲಬ್ಬಿನ ನಿರ್ದೇಶಕರು ಸದಸ್ಯರು ಪಾಲ್ಗೊಂಡಿದ್ದರು

ಸಾಹಿತ್ಯ- ಸಮಾಜ ಪ್ರೀತಿಯ ಕುಟುಂಬದಿಂದ ವಿಶಿಷ್ಟ ಕಾರ್ಯಕ್ರಮ

0

ಸಾಮಾನ್ಯವಾಗಿ ಮೊಮ್ಮಕ್ಕಳ ಹುಟ್ಟುಹಬ್ಬವನ್ನು ಅಜ್ಜ ಅಜ್ಜಿಯರು ಸಿಹಿ ತಿಂಡಿ ಹಂಚಿ, ಆಟಿಕೆಗಳನ್ನು ಕೊಟ್ಟು ಸಂಭ್ರಮಿಸುವುದು ವಾಡಿಕೆ. ಆದರೆ, ಶಿವಮೊಗ್ಗದಲ್ಲಿನ ಒಂದು ಕುಟುಂಬವು ಈ ಸಂಭ್ರಮವನ್ನು ವಿಜ್ಞಾನದ ಆಸಕ್ತಿಯೊಂದಿಗೆ ಜೋಡಿಸಿ, ಸಮಾಜಕ್ಕೆ ಪ್ರೇರಣೆಯಾಗುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸುತ್ತಿದೆ. ಇದು ಕೇವಲ ಒಂದು ಹುಟ್ಟುಹಬ್ಬದ ಆಚರಣೆಯಲ್ಲ, ಬದಲಾಗಿ ಭವಿಷ್ಯದ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡುವ ಮತ್ತು ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಒಂದು ಅರ್ಥಪೂರ್ಣ ಹೆಜ್ಜೆಯಾಗಿದೆ.
ಈ ವಿಶಿಷ್ಟ ಕಾರ್ಯಕ್ರಮದ ಹಿಂದಿರುವ ಪ್ರೇರಣೆ ಅಜ್ಜ ಅಜ್ಜಿಯರ ದೂರದೃಷ್ಟಿ. ಅವರು ತಮ್ಮ ಮಕ್ಕಳ ಜನ್ಮದಿನವನ್ನೂ ಕಳೆದ 40 ವರ್ಷಗಳಿಂದಲೂ ನಿರಂತರವಾಗಿ ಆಚರಿಸಿ ಕೊಂಡು ಬಂದಿದ್ದಾರೆ. ಅಲ್ಲಿ ಕಲೆಯಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ನೀಡಿ ಕಾರ್ಯಕ್ರಮ ಮಾಡಿದರೆ, ಇಲ್ಲಿ ತಮ್ಮ ಮೊಮ್ಮಕ್ಕಳ ಜನ್ಮದಿನವನ್ನು ಕೇವಲ ವೈಯಕ್ತಿಕ ಸಂತೋಷಕ್ಕೆ ಸೀಮಿತಗೊಳಿಸದೆ, ಅದಕ್ಕೊಂದು ಸಾಮಾಜಿಕ ಮಹತ್ವ ನೀಡಲು ಅವರು ನಿರ್ಧರಿಸಿದ್ದಾರೆ. ವಿಜ್ಞಾನ ಮತ್ತು ಸಂಶೋಧನೆಯ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆಗೆ, ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಮೂಡಿಸುವುದು ಅವರ ಮುಖ್ಯ ಉದ್ದೇಶ. ಈ ಮೂಲಕ, ಮೊಮ್ಮಕ್ಕಳು ಕೂಡ ಬಾಲ್ಯದಿಂದಲೇ ವೈಜ್ಞಾನಿಕ ಚಿಂತನೆ ಮತ್ತು ಸಂಶೋಧನೆಯ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಲು ಪ್ರೇರೇಪಿಸುವುದು ಅವರ ಆಶಯ.
ವಿಜ್ಞಾನ ಸಂಶೋಧಕರಿಗೆ ಪ್ರಶಸ್ತಿ ಪ್ರದಾನ:
ಮೊಮ್ಮಕ್ಕಳ ಜನ್ಮದಿನದಂದು, ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಯುವ ಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸುವ ಕಾಯಕವನ್ನು ಕಳೆದ 8 ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಈ ಪ್ರಶಸ್ತಿಯು ನಗದು ಪ್ರಥಮ ಬಹುಮಾನ 25,000ರೂ. ಸ್ವರ್ಣ ಪ್ರಶಸ್ತಿಯಾದರೆ 15,000ರೂ.ನ ರಜತ ಪ್ರಶಸ್ತಿ ಇದರ ಜೊತೆಗೆ ಒಂದು ಪ್ರಮಾಣ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಪ್ರಶಸ್ತಿಗಾಗಿ ಆಯ್ಕೆ ಮಾಡುವಾಗ, ಆ ಸಂಶೋಧಕರ ಕೊಡುಗೆ ಸಮಾಜಕ್ಕೆ ಹೇಗೆ ಉಪಯುಕ್ತವಾಗಿದೆ ಮತ್ತು ಭವಿಷ್ಯದ ಪೀಳಿಗೆಗೆ ಹೇಗೆ ಸ್ಫೂರ್ತಿ ನೀಡಬಲ್ಲದು ಎಂಬುದನ್ನು ಪರಿಗಣಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮೊಮ್ಮಕ್ಕಳು, ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸ್ಥಳೀಯ ಶಾಲಾ ಮಕ್ಕಳು ಸಹ ಹಾಜರಾಗುತ್ತಾರೆ.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರು ತಮ್ಮ ಸಂಶೋಧನೆಯ ಕುರಿತು ಮತ್ತು ವಿಜ್ಞಾನ ಕ್ಷೇತ್ರದ ಕುರಿತು ಚಿಕ್ಕದಾಗಿ ಮಾತನಾಡುತ್ತಾರೆ. ಇದು ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸಹಾಯ ಮಾಡುತ್ತದೆ. ವಿಜ್ಞಾನ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಕೂಡ ಈ ಕಾರ್ಯಕ್ರದಲ್ಲಿ ಆಯೋಜನೆಯಾಗಿದೆ. ಶಿವಮೊಗ್ಗ ಪ್ರೌಢಶಾಲಾ ವಿಜ್ಞಾನ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳು ಇದನ್ನು ನಡೆಸಿಕೊಡಲಿದ್ದಾರೆ.
ಸಮಾಜಕ್ಕೆ ಸಂದೇಶ ನೀಡುವ ಉತ್ತಮ ಕಾರ್ಯಕ್ರಮ:
ಈ ವಿಶಿಷ್ಟ ಕಾರ್ಯಕ್ರಮವು ಸಮಾಜಕ್ಕೆ ಹಲವು ಸಕಾರಾತ್ಮಕ ಸಂದೇಶಗಳನ್ನು ನೀಡುತ್ತದೆ.

  • ವೈಜ್ಞಾನಿಕ ಮನೋಭಾವದ ಪ್ರೋತ್ಸಾಹ: ವಿಜ್ಞಾನ ಮತ್ತು ಸಂಶೋಧನೆಯ ಮಹತ್ವವನ್ನು ಎತ್ತಿ ಹಿಡಿಯುವ ಮೂಲಕ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತದೆ.
  • ಯುವ ಪೀಳಿಗೆಗೆ ಪ್ರೇರಣೆ: ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಯುವಜನರನ್ನು ಪ್ರೇರೇಪಿಸುತ್ತದೆ.
  • ಸೃಜನಾತ್ಮಕ ಚಿಂತನೆ: ಹುಟ್ಟುಹಬ್ಬದಂತಹ ಆಚರಣೆಗಳನ್ನು ಹೇಗೆ ಹೆಚ್ಚು ಅರ್ಥಪೂರ್ಣವಾಗಿಸಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.
    ಈ ರೀತಿ, ಮೊಮ್ಮಕ್ಕಳ ಜನ್ಮದಿನದ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿರುವುದು ಡಾಕ್ಟರ್ ವಿಘ್ನೇಶ್ ಎನ್. ಭಟ್ ಮತ್ತು ಡಾಕ್ಟರ್ ಸುಮಿತ್ರಾ ವಿ. ಭಟ್ ಇವರು. ತಮ್ಮ ಮಕ್ಕಳದ ಓಜೋಸ್ ಇಶಾನ್ ಮತ್ತು ತೇಜಸ್ ಇವರ ಜನ್ಮದಿನದ ಆಚರಣೆ ಅಂಗವಾಗಿ ತಂತ್ರಜ್ಞಾನ ರಂಗದಲ್ಲಿ ಈ ಸ್ಪರ್ಧಾತ್ಮಕ ವಾರ್ಷಿಕ ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. 23 ವರ್ಷದೊಳಗಿನ ಭಾರತೀಯ ಯುವ ತಂತ್ರಜ್ಞಾನಗಳು ಸಾಮಾಜಿಕ ಅಭಿವೃದ್ಧಿಯ ದಿಸೆಯಲ್ಲಿ ಸಾಧಿಸಿದ ಹೊಸ ಆವಿಷ್ಕಾರಗಳಿಗಾಗಿ ಸ್ವರ್ಣ ಮತ್ತು ರಜತ ಪ್ರಶಸ್ತಿಗಳನ್ನು ರಾಷ್ಟ್ರಮಟ್ಟದ ಕಿರಿಯ ವಿಜ್ಞಾನಿಗಳ ನಿರ್ಣಾಯಕ ಸಮಿತಿಯು ಇದನ್ನು ನಿರ್ಧಾರ ಮಾಡುತ್ತದೆ. ಮೊಮ್ಮಕ್ಕಳ ಹೆಸರಿನಲ್ಲಿ ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಅದಕ್ಕಾಗಿ ಇಲ್ಲಿ ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ದಸವು ಜನ ಜೀವನಕೆ ಎಂಬ ಡಿವಿಜಿ ಅವರ ಮಾತನ್ನು ಕೂಡ ಸಾರ್ಥಕ ಗೊಳಿಸಲಾಗಿದೆ.
    ಈ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನಿರ್ಣಾಯಕ ವಿಜ್ಞಾನ ಸಮಿತಿ ಎಂದರೆ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಪ್ರೊ. ಶಿವರಾಮ ಹೆಗಡೆ, ಭಾರತ ಸರ್ಕಾರದ ಇಸ್ರೋದಲ್ಲಿ ಕಾರ್ಯ ನಿರ್ವಹಿಸಿದ ಅನುಭವಿ ಡಾ. ವೆಂಕಟ್ರಮಣ ಎಸ್. ಹೆಗಡೆ, ಬೆಂಗಳೂರಿನ ಪ್ರೇರಣ ಸಂಸ್ಥೆಯ ಪ್ರೊ. ರಾಮಚಂದ್ರ ಶಾಸ್ತ್ರಿಯವರೇ ಅಲ್ಲದೇ ನಮ್ಮ ಶಿವಮೊಗ್ಗದ ಡಾ. ಕೆ. ಆರ್. ಶ್ರೀಧರ್, ಡಾ. ರಜನಿ ಪೈ, ಡಾ. ಎಸ್. ಮಹೇಶ್ ಇವರುಗಳು ಇದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕೆ ಸ್ಥಾನೀಯ ಸಲಹಾ ಸಮಿತಿಯಲ್ಲಿ ಡಾ. ಶ್ರೀಪಾದ್ ಜಿ. ಹೆಗಡೆ, ಡಾ. ಎಚ್.ಎಸ್. ಕೃಪಾಲನಿ, ಶ್ರೀ ರಾಘವೇಂದ್ರ ಕೇಶವ್ ಪುರಾಣಿಕ್, ಶ್ರೀ ರಘು ಬಿ. ಎನ್., ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಇವರುಗಳು ಜೊತೆಯಾಗಿದ್ದಾರೆ.
    ಶಿವಮೊಗ್ಗದ ಈ ಕುಟುಂಬ ಸಮಾಜಕ್ಕೆ ನೀಡುತ್ತಿರುವ ಒಂದು ಬಹುದೊಡ್ಡ ಕೊಡುಗೆಯಾಗಿದೆ. ಇದು ಭವಿಷ್ಯದ ವಿಜ್ಞಾನಿಗಳಿಗೆ ಸ್ಫೂರ್ತಿಯಾಗುವುದರ ಜೊತೆಗೆ, ವೈಜ್ಞಾನಿಕ ಪ್ರಗತಿಗೆ ಸಮಾಜದ ಸಹಕಾರವನ್ನು ಪ್ರೋತ್ಸಾಹಿಸುವ ಒಂದು ಮಾದರಿ ಪ್ರಯತ್ನವಾಗಿದೆ. ಇವರ ಕಾರ್ಯವನ್ನು ನೋಡಿದಾಗ ಯಾರು ಪ್ರಪಂಚದ ಸುಖವನ್ನು ಹೆಚ್ಚಿಸಲು ಹೆಚ್ಚಿಸುತ್ತಾರೋ ಅವರು ತಮ್ಮ ಸುಖವನ್ನು ಹೆಚ್ಚಿಸಿಕೊಳ್ಳುತ್ತಾರೆ ಎನ್ನುವ ಡಾ. ಶಿವರಾಮ ಕಾರಂತರ ಮಾತು ಇಲ್ಲಿ ಸಾಕಾರಗೊಂಡಿರುವುದನ್ನು ಕಾಣಬಹುದು. ಈ ಬಾರಿಯ ಮೊಮ್ಮಕ್ಕಳು ಏಸ್ ಆಫ್ ಇನ್ನೋವೇಟಿವ್ ಪ್ರಶಸ್ತಿ ಪ್ರದಾನ ಸಮಾರಂಭ ಶಿವಮೊಗ್ಗದ ಅನುಪಿನಕಟ್ಟೆಯ ಶ್ರೀರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ದಿ. 11-06-2024 ರಂದು ಸರಿಯಾಗಿ 10 ಗಂಟೆಗೆ ಆಯೋಜನೆಯಾಗಿದೆ. ಇಂತಹ ವಿಶೇಷ ಕಾರ್ಯಕ್ರಮ ಆಯೋಜಿಸಿದವರು ನಮ್ಮ ಶಿವಮೊಗ್ಗದವರೇ ಎನ್ನುವುದು ನಮ್ಮೆಲ್ಲರ ಹೆಮ್ಮೆ ಹಾಗು ಇಂತಹ ಸಂಸ್ಕೃತಿ ಸಮಾಜಕ್ಕೆ ಅನುಕರಣ ಯೋಗ್ಯ ಎನ್ನುವುದನ್ನು ಡಾ. ವಿಘ್ನೇಶ್ ಭಟ್ ಹಾಗೂ ಡಾ. ಸುಮಿತ್ರಾ ವಿ. ಭಟ್ ದಂಪತಿಗಳು ಇಲ್ಲಿ ಸಾಕಾರ ಮಾಡಿದ್ದಾರೆ.
  • ಡಾ. ಮೈತ್ರೇಯಿ ಆದಿತ್ಯಪ್ರಸಾದ್,
    ಉಪನ್ಯಾಸಕರು,
    ಪೇಸ್ ಕಾಲೇಜು, ಶಿವಮೊಗ್ಗ.

Chamber of Commerce Shivamogga ಸಹಜ ಆರೋಗ್ಯ ಕಾಪಾಡಿಕೊಳ್ಳಲು “ನಾಡಿ ಪರೀಕ್ಷೆ” ಎಂಬ ಅದ್ಬುತ ವಿದ್ಯೆ : ವರುಣ್ ಆನಂದ್ ಗುರೂಜಿ

0

Chamber of Commerce Shivamogga 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ(ಜೂನ್ 21)ಯ ಅಂಗವಾಗಿ ಸಾರ್ವಜನಿಕರಲ್ಲಿ ಪ್ರಕೃತಿದತ್ತ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮತ್ತು ಆರೋಗ್ಯದ ಅರಿವು ಮೂಡಿಸುವ ಉದ್ದೇಶದಿಂದ ಶಿವಮೊಗ್ಗದ ಜವಳಿ ವರ್ತಕರ ಸಂಘದ ಆಯೋಜಕತ್ವದಲ್ಲಿ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮತ್ತೂರಿನ ಖ್ಯಾತ ಆಯುರ್ವೇದ ಪಂಡಿತರಾದ ವರುಣ್ ಆನಂದ್ ಗುರೂಜಿಯವರಿಂದ “ಉಚಿತ ನಾಡಿ ಪರೀಕ್ಷೆ ಶಿಬಿರ”ವನ್ನು ಯಶಸ್ವಿಯಾಗಿ ನಡೆಸಲಾಯಿತು.

“ಅಲೋಪತಿ” ಎಂಬ ಆಂಗ್ಲ ಔಷದ ಪದ್ದತಿಯ ಪ್ರಭಾವದಿಂದಾಗಿ ನಮ್ಮ ಪುರಾತನ ಕಾಲದ ವೈದ್ಯಕೀಯ ಚಿಕಿತ್ಸೆ ಕ್ರಮಗಳಲ್ಲಿ ಒಂದಾದ‌,ಕರಾರುವಕ್ಕಾದ “ನಾಡಿ ಪರೀಕ್ಷೆ” ಯ ಮಹತ್ವವೇ ಇಂದಿನ ಜನರಿಗೆ ತಿಳಿದಿಲ್ಲ, ನಮ್ಮ ಹಿರಿಯರು ಪ್ರಕೃತಿಯತ್ತ ಹೆಜ್ಜೆಗಳನ್ನು ಹಾಕುತ್ತಿದ್ದ ಕಾರಣ ಔಷಧಿ ರಹಿತ ಜೀವನವನ್ನು ಅವರುಗಳು ನಡೆಸುತ್ತಿದ್ದರು, ಶತಾಯುಷಿಗಳಾದರೂ ಸಹ ಆರೋಗ್ಯವಂತರಾಗಿಯೇ ಇರುತ್ತಿದ್ದರು. ಆದರೆ ಇಂದಿನ ಜನಾಂಗವು ಪ್ರಕೃತಿಗೆ ವಿರುದ್ದವಾಗಿ ಹೆಜ್ಜೆಗಳನ್ನು ಹಾಕುತ್ತ ಔಷದಗಳನ್ನೇ ಆಹಾರವನ್ನಾಗಿ ಮಾಡಿಕೊಂಡಿರುವುದರ ಪರಿಣಾಮ ಅನಾರೋಗ್ಯ ಪೀಡಿತರಾಗಿ ,ಅಲ್ಪಾಯುಷಿಗಳಾಗಿದ್ದಾರೆ. ಇಂದಿನವರ ಆಹಾರ ಪದ್ದತಿ ಸಹ ಸಹಜ ಪ್ರಕೃತಿಗೆ ವಿರುದ್ದವಾಗಿರುವುದರಿಂದ ಬಹುತೇಕ ಜನರು ಅನೇಕಾನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಕಾರಣದಿಂದ “ಹೈಟೆಕ್ ಆಸ್ಪತ್ರೆ”ಗಳ ಸಂಖ್ಯೆ ಸಹ ದಿನೇ ದಿನೇ ಹೆಚ್ಚುತ್ತಿರುವುದು ಆರೋಗ್ಯವಂತ ಸಮಾಜದ ಲಕ್ಷಣ ಅಲ್ಲ ಎಂದು ಆಯುರ್ವೇದ ವೈದ್ಯರಾದ ವರುಣ್ ಆನಂದ್ ರವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ತಿಳಿಸಿದರು. ನಾವಿಂದು ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ಡಾಕ್ಟರ್ ಬಳಿ ಹೋಗುವುದು ಸರಿಯಲ್ಲ,ನಿತ್ಯ ಯೋಗ ಪ್ರಾಣಾಯಾಮಗಳ ಅಭ್ಯಾಸದಿಂದ ರೋಗ ಮುಕ್ತ ಜೀವನವನ್ನು ನಡೆಸಬಹುದಾಗಿದೆ ಎಂದರು. ನಮ್ಮ ಎಲ್ಲ ರೋಗಗಳಿಗೂ ಮೂಲವೆಂದರೆ “ತ್ರಿದೋಷ”ಗಳಾದ “ವಾತ-ಪಿತ್ತ-ಕಫ” ಎಂದರು. ವಾತ ಹೆಚ್ಚಾದರೆ ” ಕೊಬ್ಬು-ಮಬ್ಬು”,
ಪಿತ್ತ ಹೆಚ್ಚಾದರೆ “ಕೋಪ-ತಾಪ,
ಕಫ ಹೆಚ್ಚಾದರೆ ” ಕೆಮ್ಮು- ದಮ್ಮು ಎಂಬುದು ನಮ್ಮ ರೋಗದ ಸಮಸ್ಯೆಗಳನ್ನು ನಾವೇ ಅರಿಯುವ ಮೊದಲ “ಸ್ವಯಂ ಪರೀಕ್ಷೆ” ಎಂದು ತಿಳಿಸಿದರು.
ಈ ಶಿಬಿರವು ಜನರಿಗೆ ಆಯುರ್ವೇದದ ಪ್ರಾಚೀನ ತತ್ವಗಳನ್ನು ಪರಿಚಯಿಸಿ, ಸ್ಟೆತಸ್ಕೋಪ್ ಇಲ್ಲದೇ, ತಮ್ಮ ಸಮಸ್ಯೆಗಳನ್ನು ತಾವೇ ಹೇಳಿಕೊಳ್ಳದೇ, ಕೇವಲ ನಾಡಿ ಪರೀಕ್ಷೆಯ ಮೂಲಕ ಆರೋಗ್ಯದ ಸ್ಥಿತಿಯನ್ನು, ಏರುಪೇರುಗಳನ್ನು ಆಯುರ್ವೇದ ಪಂಡಿತರು ಗುರುತಿಸಿ ಹೇಳುತ್ತಿದ್ದದನ್ನು ಕಂಡ ಜನರು ಆಶ್ಚರ್ಯಚಕಿತರಾಗಿದ್ದರು. ಸಮಸ್ಯೆಗೆ ಪರಿಹಾರವನ್ನು ಸಹ ಅಡಿಗೆ ಮನೆಯಲ್ಲಿ ಇರುವ ವಸ್ತುಗಳಿಂದ ಕಂಡುಕೊಳ್ಳಬಹುದು ಎಂದು ಪಂಡಿತರು ಹೇಳುತ್ತಿದ್ದಾಗ ಜನರು ಮೂಕವಿಸ್ಮಿತರಾಗಿದ್ದರು.ಅನೇಕರು ಇದೇ ಮೊದಲ ಬಾರಿಗೆ “ನಾಡಿ ಪರೀಕ್ಷೆ” ಯನ್ನು ಕಣ್ಣಾರೆ ಕಂಡು ಇಂತಹ “ಪ್ರಾಚೀನ ವಿದ್ಯೆ”ಗಳು ಇರುವುದು ನಮಗೆ ತಿಳಿದೇ ಇರಲಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು.

Chamber of Commerce Shivamogga ಈ ಶಿಬಿರದಲ್ಲಿ ಸರಿ ಸುಮಾರು 150 ಜನರು ನಾಡಿ ಪರೀಕ್ಷೆ ಯ ಪ್ರಯೋಜನವನ್ನು ಮತ್ತು ವಿವಿಧ ಆರೋಗ್ಯ ಸಲಹೆಗಳನ್ನು ಪಡೆದರು.ಶಿಬಿರವು ಬೆಳಿಗ್ಗೆ 7•30 ಕ್ಕೆ ಪ್ರಾರಂಭವಾಗಿ 10•30 ಕ್ಕೆ ಮುಕ್ತಾಯಗೊಂಡಿತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿ ಶಿಬಿರ ಯಶಸ್ವಿಯಾಗಿ ನಡೆಯಿತು.
ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಬೇದ್ರೆ ಮತ್ತು ಪದಾಧಿಕಾರಿಗಳು ವರುಣ್ ಆನಂದ್ ರವರಿಗೆ ಗೌರವ ಸನ್ಮಾನವನ್ನು ಮಾಡಿದರು. ಜ.ವ.ಸಂ.ನ ಮಾಜಿ ಅಧ್ಯಕ್ಷ ವೆಂಕಟೇಶ ಮೂರ್ತಿ ಯವರಿಗೆ ನಾಡಿ ಪರೀಕ್ಷೆ ಮಾಡುವ ಮೂಲಕವೇ ಶಿಬಿರ ಉದ್ಘಾಟನೆಗೊಂಡಿತು.ಕಾರ್ಯಕ್ರಮದ ನಿರ್ವಹಣೆ ಅನಿಲ್ ಕುಮಾರ್. ಹೆಚ್.ಶೆಟ್ಟರ್ , ಸ್ವಾಗತ ಪಿ.ವಿ.ಪ್ರಭಾಕರ್, ವಂದನಾರ್ಪಣೆ ರಾಕೇಶ್ ಸಾಕ್ರೆ ನೆರವೇರಿಸಿದ ಈ ಶಿಬಿರದಲ್ಲಿ ಛೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ ಸುರೇಶ್ ಸಹ ಪಾಲ್ಗೊಂಡಿದ್ದರು.

CM Siddharamaih ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ

0

CM Siddharamaih ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಹಾಜರಿದ್ದರು. ಯೋಜನೆಗಳಿಗೆ ದೊರೆತ ಅನುದಾನ ಹೀಗಿದೆ.
ಇಲಾಖೆ ಕುರಿತು ತೆಗೆದುಕೊಂಡ ಪ್ರಮುಖ ನಿರ್ಣಯಗಳು ಇಲ್ಲಿವೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ನಿರ್ವಹಣೆಗಾಗಿ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಿ, ಅಗತ್ಯವಿರುವ ತಪಾಸಣಾ ಉಪಕರಣಗಳು ಹಾಗೂ ಔಷಧಿಗಳನ್ನು ಖರೀದಿಸಲು ಒಟ್ಟು 185.74 ಕೋಟಿ ರೂಪಾಯಿ ಅನುದಾನ.

CM Siddharamaih ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಒಟ್ಟು 12 ಕೋಟಿ ರೂಪಾಯಿ ಅನುದಾನ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಹಾಜರಾತಿ ಗುರುತಿಸಲು “ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ” ಅನುಷ್ಠಾನಕ್ಕೆ ಅನುಮೋದನೆ.

108 ಆರೋಗ್ಯ ಕವಚ ಸೇವೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲು ರಾಜ್ಯ ಮಟ್ಟದಲ್ಲಿ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮುಖಾಂತರ ಆಂಬ್ಯುಲೆನ್ಸ್‌ಗಳ ನಿರ್ವಹಣೆಗೆ ಅನುಮೋದನೆ ನೀಡಲಾಗಿದೆ.