Mangalore Institute of Oncology Super Specialty Cancer Hospital ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಅಸ್ಪತ್ರೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಭಿಯಾನದ ಪ್ರಯುಕ್ತ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ “ಸ್ವಯಂ ಸೇವಕ”ರಾಗಿ ಸೇವೆ ಸಲ್ಲಿಸುವವರಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವನ್ನು 28.06.2025 ರ ಶನಿವಾರ ಬೆಳಿಗ್ಗೆ 8.30 ರಿಂದ 4.30 ರ ವರೆಗೆ ತೀರ್ಥಹಳ್ಳಿಯ ಆರಗ ಗ್ರಾಮದಲ್ಲಿ ಇರುವ MIO ಕ್ಯಾನ್ಸರ್ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದೆ.
ತರಬೇತಿಯನ್ನು ಪಡೆದ ನಂತರ ವರ್ಷದಲ್ಲಿ ಕನಿಷ್ಟಪಕ್ಷ ಎರಡು ಬಾರಿಯಾದರೂ ಜಿಲ್ಲೆಯ ಶಾಲಾ ಕಾಲೇಜು ಅಥವಾ ಇನ್ನಿತರ ಸಂಘ ಸಂಸ್ಥೆಗಳಿಗೆ ಹೋಗಿ ಕ್ಯಾನ್ಸರ್ ಅರಿವು ಮೂಡಿಸುವ ಉಪನ್ಯಾಸವನ್ನು ಕಡ್ಡಾಯವಾಗಿ ನೀಡಬೇಕಿದೆ.
ಈ ಮಹತ್ವದ ವಿಷಯದ ಆಸಕ್ತರಿಗೆ ಆಸಕ್ತ ಶಾಲಾ ಕಾಲೇಜುಗಳು ಮತ್ತು ಸಂಘ ಸಂಸ್ಥೆಗಳಲ್ಲಿ ತರಬೇತಿ ತರಗತಿಗಳನ್ನು ವ್ಯವಸ್ಥೆ ಮಾಡಿಕೊಡಲಾಗುವುದು.
Mangalore Institute of Oncology Super Specialty Cancer Hospital ತಮ್ಮ ಆಗಮನದ ಬಗ್ಗೆ ಕ್ಯಾನ್ಸರ್ ಅರಿವು ಮೂಡಿಸುವ ಯೋಜನೆಯ ಮುಖ್ಯ ಸಂಯೋಜಕರಾದ ಅ.ನಾ.ವಿಜಯೇಂದ್ರ ರಾವ್ (9448790127) ಇವರಲ್ಲಿ ತಿಳಿಸಬೇಕಾಗಿ ಕೋರಲಾಗಿದೆ.