Ashakirana Mentally Retarded School ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತವಾಗಿ ವಸತಿ ಹಾಗೂ ವಿದ್ಯಾಭ್ಯಾಸ ನೀಡಲಾಗು ತ್ತಿದ್ದು, ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮಧ್ಯಮ ದರ್ಜೆಯ ಬುದ್ಧಿ ಮಾಂದ್ಯ ಮಕ್ಕಳ ಉತ್ತಮ ಭವಿಷ್ಯ ಕ್ಕಾಗಿ ಉಚಿತ ತರಬೇತಿ ಹಾಗೂ ಪುನಶ್ಚೇತನ ಕಾರ್ಯಕ್ರಮವನ್ನು ಕಳೆದ 38 ವರ್ಷಗಳಿಂದಲೂ ಅರ್ಥ ಪೂರ್ಣವಾಗಿ ತೊಡಗಿಸಿಕೊಂಡು ಬಂದಿರುವ ರೋಟರಿ 75ನೇ ವಾರ್ಷಿಕ ದತ್ತಿ ನಿದಿ, ರೋಟರಿ ಕ್ಲಬ್ ಪ್ರಾಯೋಜಕತ್ವ ಹಾಗೂ ಅಂಗ ವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದೊಂದಿಗೆ ನಡೆಸುತ್ತಿರುವ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ, ವಿದ್ಯಾನಗರದಲ್ಲಿದ್ದು, ಈ ವಸತಿ ಶಾಲೆಯಲ್ಲಿ ಇಲ್ಲಿಯವರೆಗೆ ಸುಮಾರು 1,700 ಕ್ಕೂ ಹೆಚ್ಚು ಬುದ್ಧಿಮಾಂದ್ಯ ವಿದ್ಯಾರ್ಥಿಗಳು ತಮ್ಮ ಸ್ವಂತಿಕೆಯಿಂದ ಮತ್ತೊಬ್ಬರಿಗೆ ಹೊರೆಯಾಗದಂತೆ ಸಮಾಜದಲ್ಲಿ ಭಾಳ್ವೆ ಮಾಡುತ್ತಿದ್ದಾರೆ.
Ashakirana Mentally Retarded School 6 ರಿಂದ 18 ವರ್ಷದೊಳಗಿನ ಬುದ್ಧಿಮಾಂದ್ಯ ಮಕ್ಕಳು ಅರ್ಹರಾ ಗಿದ್ದು, ದಾಖಲಾತಿ ಪ್ರಾರಂಭವಾ ಗಿದ್ದು, ಅರ್ಜಿಯನ್ನು ಶಾಲೆಯ ಕಛೇರಿಯಲ್ಲಿ ಪಡೆದುಕೊಳ್ಳ ಬಹುದಾಗಿದೆ. ಮಾಹಿತಿಗೆ ಆಶಾಕಿರಣ ಅಧ್ಯಕ್ಷೆ ಡಾ| ರಜನಿ ಎ. ಪೈ ಮೊ.94482 88487, 273236, 223864, ಎ. ಮಂಜುನಾಥ್, 98440 55267, ಹೆಚ್‌ಎಂ ಮೊ. 99457 97120 ರಲ್ಲಿ ಸಂಪರ್ಕಿಸಲು ವ್ಯವಸ್ಥಾಪಕ ಗಿರೀಶ್ ವೈ.ಎಸ್. ತಿಳಿಸಿದ್ದಾರೆ.
Ashakirana Mentally Retarded School ಆಶಾಕಿರಣ ಬುದ್ದಿಮಾಂಧ್ಯ ಶಾಲೆಪ್ರವೇಶಕ್ಕೆ ಅರ್ಜಿ ಆಹ್ವಾನ
Date: