Royal English Medium School ಶಿವಮೊಗ್ಗ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಘೋಷಣೆಗಳನ್ನು ಕೂಗುತ್ತಾ ಜಾತಾ ಮೂಲಕ ಅರಿವು ಮೂಡಿಸಲಾಯಿತು. ಶಾಲೆಯ ಸಲಹಾ ಸಮಿತಿ ಸದಸ್ಯರಾದ ಡಾ. ನಾಗರಾಜ್ ಪರಿಸರ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯನ್ನು ಮೊಟ್ಟಮೊದಲ ಬಾರಿಗೆ ೧೯೭೩ ರಲ್ಲಿ ಆಚರಿಸಲಾಯಿತು. ಹೆಚ್ಚಾಗಿ ಪ್ಲಾಸ್ಟಿಕ್ ಬಳಸುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಮನುಷ್ಯನ ಮೇಲೆ ಭೀಕರ ಪರಿಣಾಮವನ್ನು ಬೀರಿ ಸಾವಿಗೀಡಾಗುತ್ತಿದ್ದಾರೆ. ಮಕ್ಕಳು ಇತ್ತೀಚಿನ ದಿನಗಳಲ್ಲಿ ಜೆಂಕ್ ಫುಡ್ ಗಳನ್ನು ಕುರ್ಕುರೆ ಮುಂತಾದ ಪದಾರ್ಥಗಳನ್ನು ಸೇವಿಸುತ್ತಾ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದೆಲ್ಲವನ್ನು ಬಿಟ್ಟು ತಾಜಾ ತರಕಾರಿ, ಸೊಪ್ಪು, ಹಣ್ಣು ಗಳನ್ನು ಸೇವಿಸಬೇಕು ಎಂದು ಹೇಳಿದರು. ಹುಟ್ಟುಹಬ್ಬದ ದಿನ ಕೇಕ್ ಬಿಡಿ ಗಿಡ ನೆಡಿ ಎಂದು ತಿಳಿಸಿ *ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಆಸೆಗಳನೆಲ್ಲ ಪೂರೈಸುತ್ತದೆಯೇ ಹೊರತು ದುರಾಸೆಗಳನ್ನಲ್ಲ -ಮಹಾತ್ಮ ಗಾಂಧೀಜಿ , ಎಂಬ ಸಂದೇಶವನ್ನು ನೀಡಿದರು. ನಂತರ ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಿಸಿದ ಕೆಲವು ಗೀತೆಗಳನ್ನು ಹಾಗೂ ನೃತ್ಯಗಳನ್ನು ಅಣುಕು ಪ್ರದರ್ಶನಗಳನ್ನು ಮಾಡಿದರು. ಅಣುಕು ಪ್ರದರ್ಶನದಿಂದ ವಿದ್ಯಾರ್ಥಿಗಳಿಗೆ ಪ್ರಕೃತಿಯಿಂದ ನಮಗೆ ಗಾಳಿ ,ಬೆಳಕು, ಆಹಾರ, ಹಣ್ಣು, Royal English Medium School ನೆರಳು ಎಲ್ಲವೂ ದೊರೆಯುತ್ತವೆ. ಅದೇ ರೀತಿ ಪ್ರಕೃತಿ ನಾಶ ಮಾಡಿದರೆ ಎಲ್ಲವೂ ನಾಶವಾಗುತ್ತದೆ ಎಂಬುದನ್ನು ಅಣುಕು ಪ್ರದರ್ಶನದಿಂದ ಪರಿಚಯಿಸಿದರು. ಕೊನೆಯಲ್ಲಿ ಮಕ್ಕಳಿಂದ ಹಣ್ಣಿನ ಗಿಡಗಳನ್ನು ನೆಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಪೂಜಾ ನಾಗರಾಜ್ ಪರಿಸರ ಶಾಲೆಯ ಎಲ್ಲಾ ಶಿಕ್ಷಕರುಗಳು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುವೀಕ್ಷಾ ಮತ್ತು ತಂಡದವರು ಪ್ರಾರ್ಥಿಸಿದರು, ಕುಮಾರಿ ತೇಜಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಪೂಜಾ ಎಲ್ಲರನ್ನೂ ವಂದಿಸಿದರು
Royal English Medium School “ಕೇಕ್ ಬಿಡಿ ಗಿಡ ನೆಡಿ”- ಡಾ. ನಾಗರಾಜ ಪರಿಸರ
Date: