World Environment Day ಗಿಡಗಳನ್ನು ಬೆಳೆಸುವುದು ಮುಖ್ಯವಲ್ಲ. ಅವರುಗಳ ರಕ್ಷಣೆ ಯ ಹೊಣೆ ಹೊರುವುದು ಎಲ್ಲರ ಕರ್ತವ್ಯ. ಹೀಗಾಗಿ ಇಂದು ಬೆಳೆಸಿರುವ ಮರಗಳಿಗೆ ರಿಬ್ಬನ್ ಕಟ್ಟಿ ಅವುಗಳ ರಕ್ಷಣೆ ಮಾಡುತ್ತೇವೆಂದು ಪ್ರತಿಜ್ಞೆ ಮಾಡುವ ಪವಿತ್ರ ದಿನ ಜೂನ್ 5. ಇದನ್ನೇ ಎಲ್ಲೆಡೆ ಪರಿಸರ ದಿನವೆಂದು ಆಚರಿಸಲಾಗುತ್ತಿದೆ. ಆದ್ದರಿಂದ ಎಲ್ಲಾ ಮಕ್ಕಳು ತಮ್ಮ ಪರಿಸರದಲ್ಲಿ ಕಂಡು ಬರುವ ಗಿಡ ಮರಗಳನ್ನು ಯಾರು ಸಹ ಕಡಿಯದಂತೆ ನೋಡಿಕೊಳ್ಳಬೇಕು ಎಂದು ವೃಕ್ಷ ರಕ್ಷಾ ಸಮಿತಿಯ ಸಂಚಾಲಕ ರಾದ ಫ್ರೊ. ಶೇಖರ್ ಗೌಲೇರ್ ಅವರು ತಿಳಿಸಿದ್ದಾರೆ. ಶ್ರೀಯುತರು ಕೀರ್ತಿ ನಗರದ ವನಿತಾ ವಿದ್ಯಾಲಯದ ಆವರಣದಲ್ಲಿ ಬೆಳೆಸಿರುವ ಸುಂದರ ಪರಿಸರದಲ್ಲಿ ವಿಶ್ವ ಪರಿಸರ ದಿನ ಆಚರಣೆ ಸಂದರ್ಭದಲ್ಲಿ ಮಾತನಾಡುತ್ತಾ ತಿಳಿಸಿದರು.
ಈ ಸಂದರ್ಭದಲ್ಲಿ ಅಲ್ಲಿ ಬೆಳೆಸಿರುವ ಮರಗಳಿಗೆ ಎಂ. ಎನ್. ಸುಂದರ ರಾಜ್, ಜಿ.ವಿಜಯಕುಮಾರ್, ಪ್ರಸಾರ ರಮೇಶ್, ಸದಾನಂದ್, ಮಮತಾ, ರಮ್ಯಾ ಮತ್ತು ಶಾಲಾ ಮಕ್ಕಳು ಮರಗಳಿಗೆ ಕೆಂಪು ರಿಬ್ಬನ್ ಕಟ್ಟಿ ವೃಕ್ಷ ರಕ್ಷಣೆಗೆ ತಮ್ಮ ಬದ್ಧತೆಯನ್ನು ವ್ಯಕ್ತ ಪಡಿಸಿದರು.
World Environment Day ಶೇಖರ್ ಗೌಳೇರ್ ಮಕ್ಕಳಿಗೆ ಪರಿಸರ ದಿನಾಚರಣೆ ಅಂಗವಾಗಿ ರಸ ಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟು ವಿಜೇತರಿಗೆ ಬಹುಮಾನ ವಿತರಿಸಿದರು.
ವಿಶ್ವ ಪರಿಸರ ದಿನಾಚರಣೆ ಎಲ್ಲ ಮಕ್ಕಳು, ಶಿಕ್ಷಕರು ಮತ್ತು ಬಿಎಡ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು.
ಅಧ್ಯಕ್ಷತೆಯನ್ನು ವನಿತಾ ವಿದ್ಯಾಲಯದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ ಕುಮಾರ್ ಪರಿಸರ ಗೀತೆಯನ್ನು ಹಾಡಿದರು.
ಪ್ರಾರಂಭದಲ್ಲಿ ಸಂತೋಷ್ ಅವರು ಸ್ವಾಗತಿಸಿದರು. ಕೊನೆಯಲ್ಲಿ ಭಾರಣಿಯವ್ರು ವಂದಿಸಿದರು.