Friday, February 27, 2026
Friday, February 27, 2026
Home Blog Page 285

Sharada Puryanaik ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನ ತಲುಪಿಸಬೇಕು- ಶಾರದಾ ಪೂರ್ಯಾ ನಾಯ್ಕ

0

Sharada Puryanaik ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಇದರಿಂದ ಸರ್ಕಾರಿ ಯೋಜನೆಯ ಅನುಕೂಲ ಪಡೆದುಕೊಳ್ಳಲು ಜನರಿಗೆ ಸಹಕಾರಿಯಾಗುತ್ತದೆ ಎಂದು ಶಾಸಕರಾದ ಶಾರದಾ ಪೂರ್ಯನಾಯ್ಕ್ ತಿಳಿಸಿದರು.
ಬುಧವಾರ ನಗರದ ತಾಲ್ಲೂಕು ಕಾರ್ಯಾಲಯದಲ್ಲಿ ಏರ್ಪಡಿಸಿದ್ದ 2024-25 ನೇ ಸಾಲಿನ ಮೂರನೇ ಮತ್ತು ನಾಲ್ಕನೇ ತ್ರೆöÊಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕುಗಳಲ್ಲಿ ನಾಯಿ ಕಡಿತ, ಡೆಂಗ್ಯೂ ಕಾಯಿಲೆಗಳಿಗೆ ಔಷಧಿಯ ಕೊರತೆ ಇದ್ದು, ಅದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ. ಹೊಳಲೂರು, ಆಯನೂರು ಸೇರಿದಂತೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಈ ಪ್ರಕರಣಗಳು ಗಮನಕ್ಕೆ ಬಂದಿದ್ದು, ಸಾರ್ವಜನಿಕರಿಗೆ ಸರಿಯಾದ ಕ್ರಮದಲ್ಲಿ ಚಿಕಿತ್ಸೆ ಹಾಗೂ ಔಷಧಿ ಸೌಲಭ್ಯವನ್ನು ದೊರಕುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.
Sharada Puryanaik ಗ್ರಾಮಗಳ ಜನರಿಗೆ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಆಗುವುದಿಲ್ಲ. ಆದ್ದರಿಂದ ಅವರೆಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಅವರ ಆರೋಗ್ಯದ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಕಾರ್ಯೋನ್ಮುಖರಾಗಬೇಕೆಂದು ಸೂಚನೆ ನೀಡಿದರು. ಈ ಬಾರಿಯ ಮಳೆಯಿಂದ ರೈತರಿಗೆ ಅನಕೂಲಕರವಾದ ವಾತಾವರಣವು ನಿರ್ಮಾಣವಾಗಿದೆ. ಉತ್ತಮ ಮಳೆಯಿಂದ ರೈತರಿಗೆ ಬಿತ್ತನೆ ಕೆಲಸದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಭತ್ತ, ಮುಸುಕಿನ ಜೋಳ, ಅಡಿಕೆಯಂತಹ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ. ಕೃಷಿ ಇಲಾಖೆಯು ಬೆಳೆಗಳಿಗೆ ಬಳಸಲಾಗುವ ಗೊಬ್ಬರದ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡಬೇಕು. ರೈತ ಸಂಪರ್ಕ ಕೇಂದ್ರಗಳು ಜನವಸತಿ ಬಳಿ ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಹಣ್ಣು, ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳು ಎಪಿಎಂಸಿ ಅಡಿಯಲ್ಲಿ ಬರುತ್ತಾರೆ. ಆದರೆ ಬೀದಿಬದಿ ವ್ಯಾಪಾರಿಗಳು ಯಾಕೆ ಬರುವುದಿಲ್ಲ. ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಬೇಕು ಎಂದು ಎಪಿಎಂಸಿ ಕಾರ್ಯದರ್ಶಿಗೆ ತಿಳಿಸಿದ ಅವರು, ಕೆಲ ಹಳ್ಳಿಗಳಲ್ಲಿ ರೈತರಿಗೆ ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ, ಇದರಿಂದ ರೈತರಿಗೆ ಸಮಸ್ಯೆಗಳು ಉಂಟಾಗುತ್ತಿದೆ. ಆದಷ್ಟು ಬೇಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿ ರೈತರ ಓಡಾಟಕ್ಕೆ ಅನುಕೂಲ ಮಾಡಿಕೊಡಿ ಎಂದರು.
ಸಭೆಯಲ್ಲಿ ತಾಲ್ಲೂಕು ಕೆಡಿಪಿ ನಾಮ ನಿರ್ದೇಶಿತ ಸದಸ್ಯರುಗಳಾದ ಶಿವಾನಂದಪ್ಪ, ಹೆಚ್.ಪಿ.ರುದ್ರೇಶ್, ಶಿವಕುಮಾರ್, ಜಯಕೀರ್ತಿ, ಗೀತಾ, ತಾಲ್ಲೂಕು ಆಡಳಿತಾಧಿಕಾರಿ ನಂದಿನಿ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಎನ್. ತಾರಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

Shimoga News ಶಿವಮೊಗ್ಗ‌ ಜಿಲ್ಲೆಯ‌ ಕೆಲವೆಡೆ ಗ್ರಾಮ ನಂ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

0

Shimoga News ಶಿವಮೊಗ್ಗ ಜಿಲ್ಲೆಯಲ್ಲಿನ ಗ್ರಾಮಗಳಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಶಿವಮೊಗ್ಗ ತಾಲ್ಲೂಕಿನ ತಮ್ಮಡಿಹಳ್ಳಿ, ಭದ್ರಾವತಿ ತಾಲ್ಲೂಕಿನ ಸಿದ್ಲಿಪುರ, ಬಾರಂದೂರು, ತೀರ್ಥಹಳ್ಳಿ ತಾಲ್ಲೂಕಿನ ಹರಗೋಲಿಗೆ, ನಾಲೂರು(ಕೊಳಗಿ), ಶೆಡ್ಗಾರ್, ಹೆದ್ದೂರು, ಸಾಗರ ತಾಲ್ಲೂಕಿನ ಎಸ್.ಎಸ್ ಬೋಗ್, ಹೀರೆನೆಲ್ಲೂರು, ಶಿಕಾರಿಪುರ ತಾಲ್ಲೂಕಿನ ಚುರ್ಚಿಗುಂಡಿ, ಮರವಳ್ಳಿ, ಹೊಸನಗರ ತಾಲ್ಲೂಕಿನ ತಿರ್ನಿವೆ, ಮುಂಬಾರು, ಯಡೂರು, ಸೊರಬ ತಾಲ್ಲೂಕಿನ ಶಿಗ್ಗಾ ಗ್ರಾಮಗಳಲ್ಲಿ Shimoga News ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಜೂ.16 ಕೊನೆಯ ದಿನಾಂಕವಾಗಿದೆ.
ಆಸಕ್ತಿಯುಳ್ಳವರು https://www.karnatakaone.gov.in/Public/GramOneFranchiseeTrems ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಸಿದ್ದಲಿಂಗ ರೆಡ್ಡಿ ತಿಳಿಸಿದ್ದಾರೆ.

Consumer Disputes Redressal Commission ವಾಹನ ವಿಮೆ ವಿಳಂಬ. ಗ್ರಾಹಕರ ಪರ ತೀರ್ಪು ನೀಡಿದ ಜಿಲ್ಲಾ ಆಯೋಗ

0

Consumer Disputes Redressal Commission ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿಯ ಮೊಹಮ್ಮದ್ ಅಫ್‌ನಾನ್ ಎಸ್ ಇವರು ಚೋಳಮಂಡಲ ಎಂ ಎಸ್ ಜನರಲ್ ಇನ್ಶೂರೆನ್ಸ್ ಕಂಪೆನಿ ಲಿ., ಬೆಂಗಳೂರು, ಇಂಡಸ್ ಬ್ಯಾಂಕ್ ಲಿ. ಚೆನ್ನೈ , ತಮಿಳುನಾಡು, ಇಂಡಸ್ ಬ್ಯಾಂಕ್ ಲಿ, ಶಿವಮೊಗ್ಗ ಇವರ ವಿರುದ್ದ ವಿಮಾ ಕ್ಲೆöÊಂ ನೀಡದಿರುವ ಬಗ್ಗೆ ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರು ಸೇವಾ ನ್ಯೂನತೆ ಎಸಗಿದ್ದು ಸೂಕ್ತ ಪರಿಹಾರ ನೀಡುವಂತೆ ಅದೇಶ ನೀಡಿದೆ.
ದೂರುದಾರ ಮೊಹಮ್ಮದ್ ಅಫ್‌ನಾನ್ 2ನೇ ಎದುರುದಾರಿಂದ ವಾಹನ ಸಾಲ ಪಡೆದು ಒಂದು ಸರಕು ಸಾಗಾಣಿಕೆ ವಾಹನ ಖರೀದಿಸಿದ್ದು, 1ನೇ ಎದುರುದಾರರಿಂದ ವಾಹನಕ್ಕೆ ವಿಮೆ ಮಾಡಿಸಿರುತ್ತಾರೆ. ದಿ: 30-06-2022 ರಿಂದ 29-06-2023 ರವರೆಗೆ ವಿಮೆಯು ಚಾಲ್ತಿಯಲ್ಲಿದ್ದು ವಾಹನದ ಐಡಿವಿ ಮೊತ್ತ ರೂ.7,30,550 ಗಳಾಗಿರುತ್ತವೆ. ದಿ: 24-06-2023 ರಂದು ಆಂಧ್ರದ ಅನಂತಪುರA ಜಿಲ್ಲೆಯ ಹನಿರೆಡ್ಡಿಪಲ್ಲಿ ಬಳಿ ವಾಹನ ಅಪಘಾತಕ್ಕೀಡಾಗಿ ದೂರುದಾರರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸಲಾಗಿರುತ್ತದೆ. ನಂತರ ಈ ಅಪಘಾತದ ವಿಷಯವನ್ನು 1ನೇ ಎದುರುದಾರರಿಗೆ ತಿಳಿಸಿ, ವಿಮಾ ಮೊತ್ತವನ್ನು ನೀಡಲು ಕೇಳಿಕೊಂಡಿರುವನ್ವಯ ಎದುರುದಾರರು ಸರ್ವೇಯರ್‌ನ್ನು ನೇಮಿಸಿ ಅಪಘಾತವಾದ ವಾಹನವನ್ನು ಪರಿಶೀಲಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಪಘಾತಕ್ಕೀಡಾದ ವಾಹನ ಇದ್ದ ಪೊಲೀಸ್ ಠಾಣೆಯಿಂದ ತಪಾಸಣೆ ಮಾಡಿರುತ್ತಾರೆ. ತದನಂತರ 1ನೇ ಎದುರುದಾರರು ದೂರುದಾರರಿಗೆ ಪತ್ರ ಬರೆದು ಅಪಘಾತವಾಗಿರುವ ವಾಹನದ ದಾಖಲಾತಿಗಳನ್ನು ಸಲ್ಲಿಸಲು ಕೇಳಿರುತ್ತಾರೆ. ಆಗ ದೂರುದಾರರು ಅಪಘಾತವಾಗಿರುವ ವಾಹನ ಪೊಲೀಸ್ ಠಾಣೆಯಲ್ಲಿರುವುದರಿಂದ ದಾಖಲಾತಿಗಳನ್ನು ಸಲ್ಲಿಸಲು ಆಗುತ್ತಿಲ್ಲವೆಂದು ತಿಳಿಸಿರುತ್ತಾರೆ. ಆದರೆ ಎದುರುದಾರರು ಈಗಾಗಲೇ ಸರ್ವೇ ನಡೆಸುವಾಗ ಮತ್ತು ಕ್ಲೆöÊಂ ಫಾರಂ ನೀಡುವ ಸಮಯದಲ್ಲಿ ದಾಖಲೆಗಳನ್ನು ಪಡೆದಿರುತ್ತಾರೆಂದು ತಿಳಿಸಿರುತ್ತಾರೆ.
Consumer Disputes Redressal Commission ದಿ: 01-02-2024 ರಂದು ನ್ಯಾಯಾಲಯದ ಆದೇಶದಂತೆ ವಾಹನವನ್ನು ಬಿಡುಗಡೆಗೊಳಿಸಿಕೊಂಡು ಶಿವಮೊಗ್ಗದಲ್ಲಿರುವ ಗ್ಯಾರೇಜ್‌ಗೆ ರಿಪೇರಿಗಾಗಿ ಬಿಟ್ಟಿದ್ದು, ವಾಹನ ರಿಪೇರಿಗೆ ರೂ.6,01,482 ಗಳಾಗುತ್ತದೆಂದು ತಿಳಿಸಿರುತ್ತಾರೆ. ದೂರುದಾರರು ಎದುರುದಾರರ ಬಳಿ ಹೋಗಿ ವಾಹನದ ರಿಪೇರಿ ಮೊತ್ತ ಐಡಿವಿ ಮೊತ್ತದ ಶೇ.75 ಕ್ಕಿಂತ ಹೆಚ್ಚಿರುವುದರಿಂದ ಒಟ್ಟು ನಷ್ಟದ ವಿಮಾ ಕ್ಲೇಮು ಮಾಡಿಕೊಡಲು ಕೇಳಿಕೊಂಡಾಗ, ಅವರು ನೀವು ಸರಿಯಾದ ಸಮಯಕ್ಕೆ ದಾಖಲೆಗಳನ್ನು ನೀಡದೇ ಇರುವ ಕಾರಣ ನಿಮ್ಮ ವಿಮಾ ಕ್ಲೇಮನ್ನು ಮುಕ್ತಾಯಗೊಳಿಸಿರುವುದಾಗಿ ತಿಳಿಸಿರುತ್ತಾರೆ.
2ನೇ ಎದುರುದಾರರಿಂದ ಸಾಲ ಪಡೆದಿದ್ದು, ಇಎಂಐ ಕಟ್ಟದಿದ್ದರಿಂದ ಅಪಘಾತ ವಾಹನವನ್ನು ದೂರುದಾರರಿಂದ ವಶಕ್ಕೆ ಪಡೆದಿರುತ್ತಾರೆ. ಎದುರುದಾರರು ವಿಮಾ ಕ್ಲೇಮು ನೀಡದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗದ ಮುಂದೆ ದೂರು ಸಲ್ಲಿಸಿದ್ದು, ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ, ದಾಖಲಾತಿಗಳನ್ನು ಪರಿಶೀಲಿಸಿ, ಉಭಯ ಪಕ್ಷದವರ ವಾದ-ವಿವಾದ ಆಲಿಸಿ, 2 ಮತ್ತು 3ನೇ ಎದುರುದಾರರು ವಾಹನ ಖರೀದಿಸಲು ಸಾಲ ನೀಡಿದವರಾಗಿದ್ದು, ವಿಮಾ ಕ್ಲೇಮು ನೀಡುವಲ್ಲಿ ಇವರ ಪಾತ್ರವಿಲ್ಲವೆಂದು ಮತ್ತು ದೂರುದಾರರ ವಿಮಾ ಕ್ಲೇಮು ಸರಿಯಾಗಿದ್ದರೂ ತಿರಸ್ಕರಿಸಿರುವುದು ದಾಖಲೆಗಳೆಂದ ರುಜುವಾತಾಗಿರುವುದರಿಂದ ಎದುರುದಾರ ವಿಮಾ ಕಂಪೆನಿ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ, ಈ ಆದೇಶವಾದ ದಿನಾಂಕದಿAದ 45 ದಿನಗಳ ಒಳಗಾಗಿ 2 ಮತ್ತು 3ನೇ ಎದುರುದಾರರಿಂದ ಅಪಘಾತವಾದ ವಾಹನವನ್ನು ಪಡೆದು 1ನೇ ಎದುರುದಾರರು ದೂರುದಾರರಿಗೆ ವಾಹನದ ಐಡಿವಿ ಮೊತ್ತ ರೂ.7,30,550/- ಗಳನ್ನು ಶೇ.9 ಬಡ್ಡಿಯೊಂದಿಗೆ 08-05-2024 ರಿಂದ ಪೂರ್ತಿ ಹಣ ನೀಡುವವರೆಗೂ ಪಾವತಿಸಬೇಕೆಂದು, ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.10 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಪೂರ್ತಿ ಹಣ ಪಾವತಿಸುವರೆಗೂ ನೀಡಬೇಕೆಂದು ಹಾಗೂ ದೂರುದಾರರು 2 ಮತ್ತು 3 ನೇ ಎದುರುದಾರರು ಸಬಂಧಿಸಿದ ಪ್ರಾಧಿಕಾರದಲ್ಲಿ ವಾಹನದ ದಾಖಲಾತಿಗಳನ್ನು ಬದಲಾವಣೆ ಮಾಡಿಕೊಡುವ ಸಂದರ್ಭದಲ್ಲಿ 1ನೇ ಎದುರುದಾರರಿಗೆ ಸಹಕರಿಸಬೇಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮೇ 23 ರಂದು ಆದೇಶಿಸಿದೆ.

District Fisheries Department ಮತ್ಸ್ಯಸಂಪದ ಯೋಜನೆ ಸಹಾಯಧನ ಪಡೆಯಲು ಇಲಾಖೆ ಮಾಹಿತಿ

0

District Fisheries Department ಜಿಲ್ಲಾ ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ಸಾಲಿನವರೆಗೆ ಮರು ಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜೂ. 30ರವರೆಗೆ ವಿಸ್ತರಿಸಲಾಗಿದೆ.
ಮೀನು ಕೃಷಿಕೊಳಗಳ ನಿರ್ಮಾಣ, ಮೀನುಕೃಷಿ ಕೊಳ ನಿರ್ಮಾಣ ಮಾಡಿ ಮೀನುಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಸಹಾಯ, ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ, ಮೀನುಮರಿ ಪಾಲನಾ ಘಟಕ ನಿರ್ಮಾಣದ ಬಗ್ಗೆ ಸಹಾಯ, ಸೈಕಲ್ ವಿತ್ ಐಸ್‌ಬಾಕ್ಸ್, ಮಧ್ಯಮ ವರ್ಗದ ಅಲಂಕಾರಿಕ ಸಾಕಾಣಿಕೆ ಘಟಕ (ಪ.ಜಾ) ಮತ್ತು ಹೊಸತಾದ ಮೀನುಮಾರಾಟದ ಕಿಯೋಸ್ಕ್ ನಿರ್ಮಾಣಕ್ಕಾಗಿ ಸಹಾಯ ಧನ ನೀಡಲಾಗುತ್ತಿದ್ದು, ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 ರಷ್ಟು ಹಾಗೂ ಪ.ಜಾ/ಪ.ಪಂ. ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.
District Fisheries Department ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಪೂರ್ಣ ದಾಖಲೆಗಳೊಂದಿಗೆ ಜೂ. 30 ರೊಳಗಾಗಿ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

D. Devaraj Urs ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ ವಿವಿಧ ಯೋಜನೆ ಪ್ರಕಟಣೆ

0

D. Devaraj Urs ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಗಂಗಾಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ), ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳನ್ನು ಹೊರತುಪಡಿಸಿ) ಉಳಿದ ಸಮುದಾಯಗಳ ಆಸಕ್ತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆನ್ನು ಸೀಡ್ ಮಾಡಿರಬೇಕು. ಒಂದು ಕುಟುಂಬದ ಒಬ್ಬರಿಗೆ ಮಾತ್ರ ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಲ್ಲ. 2023-24 ಮತ್ತು 2024-25 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
D. Devaraj Urs ಆಸಕ್ತರು ಸೇವಾಸಿಂಧು ಪೋರ್ಟಲ್ http:/sevasindhu.karnataka.gov.in ಅಥವಾ ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರೀಕ ಸೇವಾಕೇಂದ್ರಗಳಲ್ಲಿ ದಾಖಲೆಗಳ ಸಹಿತ ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ http://dbcdo.karnataka.gov.in ರಲ್ಲಿ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಭಾಗ್ಯನಿಲಯ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ, ದೂ.ಸಂ.: 08182-229634 ನ್ನು ಸಂಪರ್ಕಿಸುವುದು.

Madivala Machideva ಮಡಿವಾಳ ಮಾಚಿದೇವ ನಿಗಮದಿಂದ ವಿವಿಧ ಸಾಲಯೋಜನೆ ಪ್ರಕಟಣೆ

0

Madivala Machideva ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಗಂಗಾಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ), ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳ ಪ್ರವರ್ಗ- 2ಎ ಗೆ ಸೇರಿದ ಮಡಿವಾಳ ಮತ್ತು ಅದರ ಉಪಜಾತಿಗಳಿಗೆ ಸೇರಿದ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳನ್ನು ಹೊರತುಪಡಿಸಿ) ಸಮುದಾಯಗಳ ಆಸಕ್ತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆನ್ನು ಸೀಡ್ ಮಾಡಿರಬೇಕು. ಒಂದು ಕುಟುಂಬದ ಒಬ್ಬರಿಗೆ ಮಾತ್ರ ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಲ್ಲ. 2023-24 ಮತ್ತು 2024-25 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
Madivala Machideva ಆಸಕ್ತರು ಸೇವಾಸಿಂಧು ಪೋರ್ಟಲ್ http:/sevasindhu.karnataka.gov.in ಅಥವಾ ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರೀಕ ಸೇವಾಕೇಂದ್ರಗಳಲ್ಲಿ ದಾಖಲೆಗಳ ಸಹಿತ ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ http://kmmd.karnataka.gov.in ರಲ್ಲಿ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಭಾಗ್ಯನಿಲಯ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ, ದೂ.ಸಂ.: 08182-229634 ನ್ನು ಸಂಪರ್ಕಿಸುವುದು.

District Consumer Disputes Redressal Commission ಸೇವಾ ನ್ಯೂನತೆ ರುಜುವಾತು : ವಿಮಾ ಮೊತ್ತ ನೀಡುವಂತೆ ಆಯೋಗ ಆದೇಶ

0

District Consumer Disputes Redressal Commission ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿಯ ಮೊಹಮ್ಮದ್ ಅಫ್‌ನಾನ್ ಎಸ್ ಇವರು ಚೋಳಮಂಡಳ ಎಂ ಎಸ್ ಜನರಲ್ ಇನ್ಶೂರೆನ್ಸ್ ಕಂಪೆನಿ ಲಿ., ಬೆಂಗಳೂರು, ಇಂಡಸ್ ಬ್ಯಾಂಕ್ ಲಿ. ಚೆನ್ನೈ, ತಮಿಳುನಾಡು, ಇಂಡಸ್ ಬ್ಯಾಂಕ್ ಲಿ, ಶಿವಮೊಗ್ಗ ಇವರ ವಿರುದ್ದ ವಿಮಾ ಕ್ಲೇಂ ನೀಡದಿರುವ ಬಗ್ಗೆ ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರು ಸೇವಾ ನ್ಯೂನತೆ ಎಸಗಿದ್ದು ಸೂಕ್ತ ಪರಿಹಾರ ನೀಡುವಂತೆ ಅದೇಶ ನೀಡಿದೆ.
ದೂರುದಾರ ಮೊಹಮ್ಮದ್ ಅಫ್‌ನಾನ್ 2ನೇ ಎದುರುದಾರಿಂದ ವಾಹನ ಸಾಲ ಪಡೆದು ಒಂದು ಸರಕು ಸಾಗಾಣಿಕೆ ವಾಹನ ಖರೀದಿಸಿದ್ದು, 1ನೇ ಎದುರುದಾರರಿಂದ ವಾಹನಕ್ಕೆ ವಿಮೆ ಮಾಡಿಸಿರುತ್ತಾರೆ. ದಿ: 30-06-2022 ರಿಂದ 29-06-2023 ರವರೆಗೆ ವಿಮೆಯು ಚಾಲ್ತಿಯಲ್ಲಿದ್ದು ವಾಹನದ ಐಡಿವಿ ಮೊತ್ತ ರೂ.7,30,550 ಗಳಾಗಿರುತ್ತವೆ. ದಿ: 24-06-2023 ರಂದು ಆಂಧ್ರದ ಅನಂತಪುರ ಜಿಲ್ಲೆಯ ಹನಿರೆಡ್ಡಿಪಲ್ಲಿ ಬಳಿ ವಾಹನ ಅಪಘಾತಕ್ಕೀಡಾಗಿ ದೂರುದಾರರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸಲಾಗಿರುತ್ತದೆ. ನಂತರ ಈ ಅಪಘಾತದ ವಿಷಯವನ್ನು 1ನೇ ಎದುರುದಾರರಿಗೆ ತಿಳಿಸಿ, ವಿಮಾ ಮೊತ್ತವನ್ನು ನೀಡಲು ಕೇಳಿಕೊಂಡಿರುವನ್ವಯ ಎದುರುದಾರರು ಸರ್ವೇಯರ್‌ನ್ನು ನೇಮಿಸಿ ಅಪಘಾತವಾದ ವಾಹನವನ್ನು ಪರಿಶೀಲಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಪಘಾತಕ್ಕೀಡಾದ ವಾಹನ ಇದ್ದ ಪೊಲೀಸ್ ಠಾಣೆಯಿಂದ ತಪಾಸಣೆ ಮಾಡಿರುತ್ತಾರೆ. ತದನಂತರ 1ನೇ ಎದುರುದಾರರು ದೂರುದಾರರಿಗೆ ಪತ್ರ ಬರೆದು ಅಪಘಾತವಾಗಿರುವ ವಾಹನದ ದಾಖಲಾತಿಗಳನ್ನು ಸಲ್ಲಿಸಲು ಕೇಳಿರುತ್ತಾರೆ. ಆಗ ದೂರುದಾರರು ಅಪಘಾತವಾಗಿರುವ ವಾಹನ ಪೊಲೀಸ್ ಠಾಣೆಯಲ್ಲಿರುವುದರಿಂದ ದಾಖಲಾತಿಗಳನ್ನು ಸಲ್ಲಿಸಲು ಆಗುತ್ತಿಲ್ಲವೆಂದು ತಿಳಿಸಿರುತ್ತಾರೆ. ಆದರೆ ಎದುರುದಾರರು ಈಗಾಗಲೇ ಸರ್ವೇ ನಡೆಸುವಾಗ ಮತ್ತು ಕ್ಲೇಂ ಫಾರಂ ನೀಡುವ ಸಮಯದಲ್ಲಿ ದಾಖಲೆಗಳನ್ನು ಪಡೆದಿರುತ್ತಾರೆಂದು ತಿಳಿಸಿರುತ್ತಾರೆ.
District Consumer Disputes Redressal Commission ದಿ: 01-02-2024 ರಂದು ನ್ಯಾಯಾಲಯದ ಆದೇಶದಂತೆ ವಾಹನವನ್ನು ಬಿಡುಗಡೆಗೊಳಿಸಿಕೊಂಡು ಶಿವಮೊಗ್ಗದಲ್ಲಿರುವ ಗ್ಯಾರೇಜ್‌ಗೆ ರಿಪೇರಿಗಾಗಿ ಬಿಟ್ಟಿದ್ದು, ವಾಹನ ರಿಪೇರಿಗೆ ರೂ.6,01,482 ಗಳಾಗುತ್ತದೆಂದು ತಿಳಿಸಿರುತ್ತಾರೆ. ದೂರುದಾರರು ಎದುರುದಾರರ ಬಳಿ ಹೋಗಿ ವಾಹನದ ರಿಪೇರಿ ಮೊತ್ತ ಐಡಿವಿ ಮೊತ್ತದ ಶೇ.75 ಕ್ಕಿಂತ ಹೆಚ್ಚಿರುವುದರಿಂದ ಒಟ್ಟು ನಷ್ಟದ ವಿಮಾ ಕ್ಲೇಮು ಮಾಡಿಕೊಡಲು ಕೇಳಿಕೊಂಡಾಗ, ಅವರು ನೀವು ಸರಿಯಾದ ಸಮಯಕ್ಕೆ ದಾಖಲೆಗಳನ್ನು ನೀಡದೇ ಇರುವ ಕಾರಣ ನಿಮ್ಮ ವಿಮಾ ಕ್ಲೇಮನ್ನು ಮುಕ್ತಾಯಗೊಳಿಸಿರುವುದಾಗಿ ತಿಳಿಸಿರುತ್ತಾರೆ.
2ನೇ ಎದುರುದಾರರಿಂದ ಸಾಲ ಪಡೆದಿದ್ದು, ಇಎಂಐ ಕಟ್ಟದಿದ್ದರಿಂದ ಅಪಘಾತ ವಾಹನವನ್ನು ದೂರುದಾರರಿಂದ ವಶಕ್ಕೆ ಪಡೆದಿರುತ್ತಾರೆ. ಎದುರುದಾರರು ವಿಮಾ ಕ್ಲೇಮು ನೀಡದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗದ ಮುಂದೆ ದೂರು ಸಲ್ಲಿಸಿದ್ದು, ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ, ದಾಖಲಾತಿಗಳನ್ನು ಪರಿಶೀಲಿಸಿ, ಉಭಯ ಪಕ್ಷದವರ ವಾದ-ವಿವಾದ ಆಲಿಸಿ, 2 ಮತ್ತು 3ನೇ ಎದುರುದಾರರು ವಾಹನ ಖರೀದಿಸಲು ಸಾಲ ನೀಡಿದವರಾಗಿದ್ದು, ವಿಮಾ ಕ್ಲೇಮು ನೀಡುವಲ್ಲಿ ಇವರ ಪಾತ್ರವಿಲ್ಲವೆಂದು ಮತ್ತು ದೂರುದಾರರ ವಿಮಾ ಕ್ಲೇ ಸರಿಯಾಗಿದ್ದರೂ ತಿರಸ್ಕರಿಸಿರುವುದು ದಾಖಲೆಗಳೆಂದ ರುಜುವಾತಾಗಿರುವುದರಿಂದ ಎದುರುದಾರ ವಿಮಾ ಕಂಪೆನಿ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ, ಈ ಆದೇಶವಾದ ದಿನಾಂಕದಿAದ 45 ದಿನಗಳ ಒಳಗಾಗಿ 2 ಮತ್ತು 3ನೇ ಎದುರುದಾರರಿಂದ ಅಪಘಾತವಾದ ವಾಹನವನ್ನು ಪಡೆದು 1ನೇ ಎದುರುದಾರರು ದೂರುದಾರರಿಗೆ ವಾಹನದ ಐಡಿವಿ ಮೊತ್ತ ರೂ.7,30,550/- ಗಳನ್ನು ಶೇ.9 ಬಡ್ಡಿಯೊಂದಿಗೆ 08-05-2024 ರಿಂದ ಪೂರ್ತಿ ಹಣ ನೀಡುವವರೆಗೂ ಪಾವತಿಸಬೇಕೆಂದು, ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.10 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಪೂರ್ತಿ ಹಣ ಪಾವತಿಸುವರೆಗೂ ನೀಡಬೇಕೆಂದು ಹಾಗೂ ದೂರುದಾರರು 2 ಮತ್ತು 3 ನೇ ಎದುರುದಾರರು ಸಬಂಧಿಸಿದ ಪ್ರಾಧಿಕಾರದಲ್ಲಿ ವಾಹನದ ದಾಖಲಾತಿಗಳನ್ನು ಬದಲಾವಣೆ ಮಾಡಿಕೊಡುವ ಸಂದರ್ಭದಲ್ಲಿ 1ನೇ ಎದುರುದಾರರಿಗೆ ಸಹಕರಿಸಬೇಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮೇ 23 ರಂದು ಆದೇಶಿಸಿದೆ.

Bhadravati Social Welfare Department ಭದ್ರಾವತಿ: ವಿದ್ಯಾರ್ಥಿವೇತನ ಪಡೆಯಲು ಒನ್ ಟೈಂ ರಿಜಿಸ್ಟ್ರೇಷನ್ ಸಂಖ್ಯೆ ಕಡ್ಡಾಯ

0

Bhadravati Social Welfare Department ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ/ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಭಾರತ ಸರ್ಕಾರದ ಮಿನಿಸ್ಟ್ರೀ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಫರ್ಮಷನ್ ಟೆಕ್ನಾಲಜಿರವರು ಅಭಿವೃದ್ಧಿ ಪಡಿಸಿರುವ ನ್ಯಾಷನಲ್ ಸ್ಕಾಲರ್‌ಷಿಪ್ ಪೋರ್ಟಲ್‌ನಲ್ಲಿ ಒನ್ ಟೈಂ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಪಡೆದು, ನಂತರ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ವೆಬ್‌ಸೈಟ್ https://scholarships.gov.in ರಲ್ಲಿ ಒನ್ ಟೈಂ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಪಡೆಯುವಂತೆ ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಥವಾ ದೂ.ಸಂ.: 08282-263761 ನ್ನು ಸಂಪರ್ಕಿಸುವುದು.

Karnataka Sahitya Academy ಸಾಹಿತ್ಯ ಅಕಾಡೆಮಿಯಿಂದ ವಿವಿಧ ಪ್ರಕಾರಗಳ ಕೃತಿಗಳ ಬಹುಮಾನಕ್ಕೆ ಆಹ್ವಾನ

0

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು 2024 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ.
ಲೇಖಕರು/ಪ್ರಕಾಶಕರು/ಸಾಹಿತ್ಯಾಸಕ್ತ ಸಾರ್ವಜನಿಕರು ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ರಿಜಿಸ್ಟರ್ ಅಂಚೆ/ಕೊರಿಯರ್ ಮೂಲಕ ಅಥವಾ ಖುದ್ದಾಗಿ 2025 ರ ಜುಲೈ 15 ರೊಳಗೆ ತಲುಪುವಂತೆ ಕಳುಹಿಸಬೇಕು.

2024 ನೆಯ ವರ್ಷದ ಅತ್ಯುತ್ತಮ ಕೃತಿಗಳಿಗೆ ಬಹುಮಾನ:- ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷದಂತೆ 2024ನೆಯ ವರ್ಷದ ಪುಸ್ತಕ ಬಹುಮಾನ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2024ರ ಜನವರಿ 01 ರಿಂದ 2024ರ ಡಿಸೆಂಬರ್ 31 ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು.

ಕೃತಿಯಲ್ಲಿ ಪ್ರಥಮ ಮುದ್ರಣ 2024 ಎಂದು ಮುದ್ರಿತವಾಗಿರಬೇಕು.
ಕಾವ್ಯ, ನವಕವಿಗಳ ಪ್ರಥಮ ಕವನಸಂಕಲನ (ದೃಢೀಕರಣ ಪತ್ರದೊಂದಿಗೆ), ಕಾವ್ಯ ಹಸ್ತಪ್ರತಿ (30 ವರ್ಷ ಒಳಗಿನ ಯುವಕವಿಗಳ ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಯನ್ನು ಕಳಿಸಿಕೊಡಬೇಕು. (ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನಕ್ಕಾಗಿ), ಕಾದಂಬರಿ (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಚದುರಂಗ ದತ್ತಿನಿಧಿ ಬಹುಮಾನಗಳಿಗಾಗಿ), ಸಣ್ಣಕತೆ, ನಾಟಕ, ಲಲಿತ ಪ್ರಬಂಧ (ಹರಟೆ ಮತ್ತು ವಿನೋದ ಸಾಹಿತ್ಯ ಸೇರಿ)(ಅಕಾಡೆಮಿ ಮಸ್ತಕ ಬಹುಮಾನ ಹಾಗೂ ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿನಿಧಿ ಬಹುಮಾನಗಳಿಗಾಗಿ), ಪ್ರವಾಸ ಸಾಹಿತ್ಯ, ಜೀವನಚರಿತ್ರೆ / ಆತ್ಮಕಥೆ (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನಗಳಿಗಾಗಿ), ಸಾಹಿತ್ಯ ವಿಮರ್ಶೆ (ಸಾಹಿತ್ಯಚರಿತ್ರೆ, ಸಾಹಿತ್ಯತತ್ವ ಮತ್ತು ಸೌಂದರ್ಯ ಮೀಮಾಂಸೆ ಸೇರಿ) (ಅಕಾಡೆಮಿ ಮಸ್ತಕ ಬಹುಮಾನ ಹಾಗೂ ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನಗಳಿಗಾಗಿ), ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ (ಭೌತ, ರಸಾಯನ, ಗಣಿತ, ಪ್ರಾಣಿ, ಸಸ್ಯ, ಇಂಜಿನಿಯರಿಂಗ್, ವೈದ್ಯ, ಭೂ, ಖಗೋಳ, ಗೃಹವಿಜ್ಞಾನ, ಪರಿಸರ), ಮಾನವಿಕ (ಜಾನಪದ, ಇತಿಹಾಸ, ರಾಜ್ಯ ಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ, ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥಭಂಡಾರ ವಿಜ್ಞಾನ, ಸಮೂಹಸಂವಹನ, ಧಾರ್ಮಿಕ, ದಾರ್ಶನಿಕ), ಗ್ರಂಥ ಸಂಪಾದನೆ (ಪ್ರಾಚೀನ ಕೃತಿಗಳ ಸಂಪಾದನೆ) / ಸಂಶೋಧನೆ (ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಗಳಿಗೆ ಸಂಬಂಧಿಸಿದ ಸಂಶೋಧನೆ), ವೈಚಾರಿಕ / ಅಂಕಣ ಬರಹ (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಬಿ.ವಿ. ವೀರಭದ್ರಪ್ಪ ದತ್ತಿನಿಧಿ ಬಹುಮಾನಗಳಿಗಾಗಿ), ಅನುವಾದ-1 (ಇಂಗ್ಲಿಷ್ ಸೇರಿದಂತೆ ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಸೃಜನ/ಸೃಜನೇತರ ಕೃತಿಗಳು( ಎಲ್ ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನಗಳಿಗಾಗಿ), ಅನುವಾದ-2 (ಕನ್ನಡದಿಂದ ಭಾರತೀಯ ಭಾಷೆಗಳಿಗೆ ಅನುವಾದಗೊಂಡ ಸೃಜನ/ಸೃಜನೇತರ ಕೃತಿಗಳು), ಲೇಖಕರ ಮೊದಲ ಸ್ವತಂತ್ರಕೃತಿ (2024ರಲ್ಲಿ ಮುದ್ರಣಗೊಂಡ ಮೊದಲ ಸ್ವತಂತ್ರಕೃತಿ. ಖಾತರಿಪಡಿಸಲು ದೃಢೀಕರಣ ಪತ್ರ ಲಗತ್ತಿಸಬೇಕು.)

Karnataka Sahitya Academy (ಅಕಾಡೆಮಿ ಮಸ್ತಕ ಬಹುಮಾನ ಹಾಗೂ ಮಧುರಚೆನ್ನ ದತ್ತಿನಿಧಿ ಬಹುಮಾನಗಳಿಗಾಗಿ) (ಕಾವ್ಯ ಪ್ರಕಾರವನ್ನು ಹೊರತುಪಡಿಸಿ), ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನಕ್ಕಾಗಿ), ದಾನ ಸಾಹಿತ್ಯ (ದಾಸ ಸಾಹಿತ್ಯಕುರಿತ ಸೃಜನ/ ಸೃಜನೇತರ ಕೃತಿಗಳು) (ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯಗಂಗೂರ್ ದತ್ತಿನಿಧಿ ಬಹುಮಾನಕ್ಕಾಗಿ), ಸಂಕೀರ್ಣ (ಮೇಲಿನ ಯಾವುದೇ ಪ್ರಕಾರಕ್ಕೆ ಹೊಂದಿಕೊಳ್ಳದ ವಿಶಿಷ್ಟ ಕೃತಿಗಳು), ಗಜಲ್ ಕಾವ್ಯ (ನಾಡೋಜ ಡಾ. ಶಾಂತರಸ ಗಜಲ್ ಕಾವ್ಯ ದತ್ತಿ ಬಹುಮಾನಕ್ಕಾಗಿ).
ಬಹುಮಾನಕ್ಕಾಗಿ ಪರಿಗಣಿಸಲ್ಪಡದ ಕೃತಿಗಳು: ಮರುಮುದ್ರಣವಾದ ಪುಸ್ತಕಗಳು. ಪಿಎಚ್.ಡಿ. ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳು. ಪಠ್ಯಪುಸ್ತಕಗಳು. ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳು. ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಒಟ್ಟಾರೆ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳು. ಒಂದು ಪ್ರಕಾರದಲ್ಲಿ ಒಂದು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳು.

ಒಬ್ಬ ಲೇಖಕರಿಗೆ ಮೂರು ಬಾರಿ ಬೇರೆ ಬೇರೆ ಪ್ರಕಾರಗಳಲ್ಲಿ ಬಹುಮಾನ ಪಡೆಯುವ ಅವಕಾಶವಿದೆ. ಬಹುಮಾನಕ್ಕಾಗಿ ಕಳುಹಿಸುವ ಕೃತಿಯ ಮೇಲೆ ತಿಳಿಸಿದ ಪ್ರಕಾರಗಳಲ್ಲಿ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದಿರಬೇಕು.
ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ವೆಬ್‌ಸೈಟ್ www.sahithyaacademy.karnataka.gov.in ಅನ್ನು ಸಂಪರ್ಕಿಸಬಹುದೆಂದು ಕನ್ನಡ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್ ತಿಳಿಸಿದ್ದಾರೆ.

District Consumer Disputes Redressal Commission ಸಂಗೀತ ಮೊಬೈಲ್ಸ್ ಸೇನಾ ನ್ಯೂನತೆ: ಪರಿಹಾರ ನೀಡಲು ಆಯೋಗ ಆದೇಶ

0

District Consumer Disputes Redressal Commission ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಐಸೂರು ವಾಸಿ ಸಂದೇಶ್ ಕುಮಾರ್ ಎಂಬುವವರು ಮ್ಯಾನೇಜರ್, ಸಂಗೀತ ಮೊಬೈಲ್ಸ್ ಫ್ರೈ. ಲಿ., ಶಿವಮೊಗ್ಗ ಮತ್ತು ಮ್ಯಾನೇಜರ್, ಸಂಗೀತ ಮೊಬೈಲ್ಸ್ ಫ್ರೈ. ಲಿ., ಬೆಂಗಳೂರು ಇವರ ವಿರುದ್ಧ ಮೊಬೈಲ್ ಇನ್ಷೂರನ್ಸ್ ಸಂಬಂಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವೂ ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಎದುರುದಾರರಿಂದ ಅಕ್ಟೋಬರ್ 2022ರಲ್ಲಿ ರೂ. 84,000/- ಬೆಲೆಯ ಮೊಬೈಲ್ ಫೋನ್ ಖರೀದಿಸಿದ್ದು, ರೂ. 7,999/- ಮೊತ್ತದ ಇನ್ಸೂರನ್ಸ್ ಕಾರ್ಡ್ ಪಡೆದಿರುತ್ತಾರೆ. ಸೆಪ್ಟಂಬರ್ 2023ರಲ್ಲಿ ಈ ಮೊಬೈಲ್ ಫೋನ್‌ನಲ್ಲಿ ಸಮಸ್ಯೆ ಕಂಡುಬಂದಿದ್ದು, ಶಿವಮೊಗ್ಗದ ಸಂಗೀತ ಮೊಬೈಲ್ಸ್ನಲ್ಲಿ ಸಮಸ್ಯೆ ಬಗ್ಗೆ ತಿಳಿಸಿ, ಇನ್ಸೂರನ್ಸ್ ಕಾರ್ಡ್ ಸಲ್ಲಿಸಿ, ಬೇರೆ ಪೋನ್ ಕೊಡುವಂತೆ ಕೇಳಿದಾಗ ಹೆಚ್ಚುವರಿಯಾಗಿ ರೂ. 52,000/-ಗಳನ್ನು ಪಾವತಿಸಿದರೆ ಹೊಸ ಮೊಬೈಲ್ ನೀಡುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಎದುರುದಾರರ ವಿರುದ್ಧ ಸೇವಾ ನ್ಯೂನತೆ ಎಸಗಿರುವುದಾಗಿ ತಿಳಿಸಿ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
District Consumer Disputes Redressal Commission ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟಿಸ್ ಕಳುಹಿಸಿದ್ದು, ತಮ್ಮ ವಕೀಲರ ಮೂಲಕ ಹಾಜರಾಗಿ ದೂರಿಗೆ ತಕರಾರು ಸಲ್ಲಿಸಿ, ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವೆಂದು ತಿಳಿದು ಅರ್ಜಿಯನ್ನು ವಜಾ ಮಾಡಬೇಕೆಂದು ಕೋರಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಉಭಯ ಪಕ್ಕಗಾರರ ವಾದ-ವಿವಾದಗಳನ್ನು ಆಲಿಸಿ, ಎದುರುದಾರರು ಇನ್ಸೂರನ್ಸ್ ಕಾರ್ಡ್ ನೀಡಿದ್ದು, ಮೊಬೈಲ್ ರಿಪೇರಿಗೆ ಬಂದಾಗ ಇನ್ಸೂರೆನ್ಸ್ ಕಾರ್ಡ್ ಷರತ್ತಿನಂತೆ ಹೊಸ ಮೊಬೈಲ್ ಫೋನ್‌ನ್ನಾಗಲಿ ಅಥವಾ ರಿಪೇರಿ ಮಾಡಿಕೊಟ್ಟಿಲ್ಲವಾದ್ದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ, ಎದುರುದಾರರು ದೂರುದಾರರಿಂದ ಹಳೆಯ ಮೊಬೈಲ್ ಫೋನ್‌ ಪಡೆದು ಹೊಸ ಮೊಬೈಲ್ ಫೋನ್‌ನ್ನು ಈ ಆದೇಶವಾದ ದಿನಾಂಕದಿAದ 45 ದಿನಗಳೊಳಗಾಗಿ ಕೊಡುವುದು. ಅಥವಾ ಹೊಸ ಮೊಬೈಲ್ ಬದಲಿಗೆ ಬೆಲೆಯಲ್ಲಿ ಜಿ.ಎಸ್.ಟಿ. ಕಡಿತಗೊಳಿಸಿ ರೂ. 71,185/-ಗಳನ್ನು ನೀಡಲು ಮತ್ತು ಈ ಮೊತ್ತಕ್ಕೆ ಶೇ.9ರ ಬಡ್ಡಿಯೊಂದಿಗೆ ದಿ;13/10/2023 ರಿಂದ ಅನ್ವಯವಾಗುವಂತೆ ಪೂರಾ ಹಣವನ್ನು ಪಾವತಿಸುವವರೆಗೂ ನೀಡಬೇಕೆಂದು ತಪ್ಪಿದ್ದಲ್ಲಿ ಶೆ. 12%ರಂತೆ ಬಡ್ಡಿಯನ್ನು ಪೂರ ಹಣ ನೀಡುವವರೆಗೂ ಪಾವತಿಸತಕ್ಕದ್ದು. ಹಾಗೂ ಇಪ್ಪತ್ತು ಸಾವಿರಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ವ್ಯಾಜ್ಯದ ಖರ್ಚು-ವೆಚ್ಚದ ಬಾಬ್ತಾಗಿ ಎದುರುದಾರರು ದೂರುದಾರರಿಗೆ ನೀಡಲು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ಮೇ 17 ರಂದು ಆದೇಶಿಸಿದೆ.