District Consumer Disputes Redressal Commission ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಐಸೂರು ವಾಸಿ ಸಂದೇಶ್ ಕುಮಾರ್ ಎಂಬುವವರು ಮ್ಯಾನೇಜರ್, ಸಂಗೀತ ಮೊಬೈಲ್ಸ್ ಫ್ರೈ. ಲಿ., ಶಿವಮೊಗ್ಗ ಮತ್ತು ಮ್ಯಾನೇಜರ್, ಸಂಗೀತ ಮೊಬೈಲ್ಸ್ ಫ್ರೈ. ಲಿ., ಬೆಂಗಳೂರು ಇವರ ವಿರುದ್ಧ ಮೊಬೈಲ್ ಇನ್ಷೂರನ್ಸ್ ಸಂಬಂಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವೂ ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಎದುರುದಾರರಿಂದ ಅಕ್ಟೋಬರ್ 2022ರಲ್ಲಿ ರೂ. 84,000/- ಬೆಲೆಯ ಮೊಬೈಲ್ ಫೋನ್ ಖರೀದಿಸಿದ್ದು, ರೂ. 7,999/- ಮೊತ್ತದ ಇನ್ಸೂರನ್ಸ್ ಕಾರ್ಡ್ ಪಡೆದಿರುತ್ತಾರೆ. ಸೆಪ್ಟಂಬರ್ 2023ರಲ್ಲಿ ಈ ಮೊಬೈಲ್ ಫೋನ್‌ನಲ್ಲಿ ಸಮಸ್ಯೆ ಕಂಡುಬಂದಿದ್ದು, ಶಿವಮೊಗ್ಗದ ಸಂಗೀತ ಮೊಬೈಲ್ಸ್ನಲ್ಲಿ ಸಮಸ್ಯೆ ಬಗ್ಗೆ ತಿಳಿಸಿ, ಇನ್ಸೂರನ್ಸ್ ಕಾರ್ಡ್ ಸಲ್ಲಿಸಿ, ಬೇರೆ ಪೋನ್ ಕೊಡುವಂತೆ ಕೇಳಿದಾಗ ಹೆಚ್ಚುವರಿಯಾಗಿ ರೂ. 52,000/-ಗಳನ್ನು ಪಾವತಿಸಿದರೆ ಹೊಸ ಮೊಬೈಲ್ ನೀಡುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಎದುರುದಾರರ ವಿರುದ್ಧ ಸೇವಾ ನ್ಯೂನತೆ ಎಸಗಿರುವುದಾಗಿ ತಿಳಿಸಿ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
District Consumer Disputes Redressal Commission ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟಿಸ್ ಕಳುಹಿಸಿದ್ದು, ತಮ್ಮ ವಕೀಲರ ಮೂಲಕ ಹಾಜರಾಗಿ ದೂರಿಗೆ ತಕರಾರು ಸಲ್ಲಿಸಿ, ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವೆಂದು ತಿಳಿದು ಅರ್ಜಿಯನ್ನು ವಜಾ ಮಾಡಬೇಕೆಂದು ಕೋರಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಉಭಯ ಪಕ್ಕಗಾರರ ವಾದ-ವಿವಾದಗಳನ್ನು ಆಲಿಸಿ, ಎದುರುದಾರರು ಇನ್ಸೂರನ್ಸ್ ಕಾರ್ಡ್ ನೀಡಿದ್ದು, ಮೊಬೈಲ್ ರಿಪೇರಿಗೆ ಬಂದಾಗ ಇನ್ಸೂರೆನ್ಸ್ ಕಾರ್ಡ್ ಷರತ್ತಿನಂತೆ ಹೊಸ ಮೊಬೈಲ್ ಫೋನ್‌ನ್ನಾಗಲಿ ಅಥವಾ ರಿಪೇರಿ ಮಾಡಿಕೊಟ್ಟಿಲ್ಲವಾದ್ದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ, ಎದುರುದಾರರು ದೂರುದಾರರಿಂದ ಹಳೆಯ ಮೊಬೈಲ್ ಫೋನ್ ಪಡೆದು ಹೊಸ ಮೊಬೈಲ್ ಫೋನ್‌ನ್ನು ಈ ಆದೇಶವಾದ ದಿನಾಂಕದಿAದ 45 ದಿನಗಳೊಳಗಾಗಿ ಕೊಡುವುದು. ಅಥವಾ ಹೊಸ ಮೊಬೈಲ್ ಬದಲಿಗೆ ಬೆಲೆಯಲ್ಲಿ ಜಿ.ಎಸ್.ಟಿ. ಕಡಿತಗೊಳಿಸಿ ರೂ. 71,185/-ಗಳನ್ನು ನೀಡಲು ಮತ್ತು ಈ ಮೊತ್ತಕ್ಕೆ ಶೇ.9ರ ಬಡ್ಡಿಯೊಂದಿಗೆ ದಿ;13/10/2023 ರಿಂದ ಅನ್ವಯವಾಗುವಂತೆ ಪೂರಾ ಹಣವನ್ನು ಪಾವತಿಸುವವರೆಗೂ ನೀಡಬೇಕೆಂದು ತಪ್ಪಿದ್ದಲ್ಲಿ ಶೆ. 12%ರಂತೆ ಬಡ್ಡಿಯನ್ನು ಪೂರ ಹಣ ನೀಡುವವರೆಗೂ ಪಾವತಿಸತಕ್ಕದ್ದು. ಹಾಗೂ ಇಪ್ಪತ್ತು ಸಾವಿರಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ವ್ಯಾಜ್ಯದ ಖರ್ಚು-ವೆಚ್ಚದ ಬಾಬ್ತಾಗಿ ಎದುರುದಾರರು ದೂರುದಾರರಿಗೆ ನೀಡಲು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ಮೇ 17 ರಂದು ಆದೇಶಿಸಿದೆ.
District Consumer Disputes Redressal Commission ಸಂಗೀತ ಮೊಬೈಲ್ಸ್ ಸೇನಾ ನ್ಯೂನತೆ: ಪರಿಹಾರ ನೀಡಲು ಆಯೋಗ ಆದೇಶ
Date: