Malenadu Development Foundation “ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಕಳೆದ 6೦ ವರ್ಷಗಳಿಂದ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ದಾನಿಗಳು ನೀಡಿದ ಜಾಗದಲ್ಲಿ ಜನರ ಸಹಕಾರದಿಂದ ವಿದ್ಯಾಸಂಸ್ಥೆಯನ್ನು ಕಟ್ಟಿ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗಿದೆ. ನನ್ನಂತಹವರು ಸಹ ಈ ಸಂಸ್ಥೆಯಲ್ಲಿ ಓದಲು ಅವಕಾಶ ಸಿಕ್ಕಿರುವುದು ಒಂದು ಸುವರ್ಣ ಅವಕಾಶವಾಗಿರುತ್ತದೆ. ಈ ಸಾಲಿನಲ್ಲಿ ವಜ್ರ ಮಹೋತ್ಸವವನ್ನು ಆಚರಿಸುವ ಈ ಸಂಸ್ಥೆ ಇನ್ನೂ ಉತ್ತಮವಾಗಿ ವಿವಿಧ ತರದ ಉದ್ಯೋಗಾವಕಾಶವಿರುವ ಕೋರ್ಸ್ಗಳನ್ನು ಪ್ರಾರಂಭಿಸಿ, ಮಲೆನಾಡಿನ ಭಾಗಕ್ಕೆ ಉತ್ತಮ ಸೇವೆ ಸಲ್ಲಿಸಲಿ. ಇದಕ್ಕೆ ಬೇಕಾಗುವ ಸಹಕಾರವನ್ನು ನೀಡುವುದಾಗಿ ತಿಳಿಸಿ ತಾನು ಓದಿದ ಎಂ.ಡಿ.ಎಫ್. ಕಾಲೇಜಿಗೆ ಒಂದು ಲಕ್ಷ ರೂ.ಗಳ ದೇಣಿಗೆಯನ್ನು ನೀಡಿ, ಮುಂದೆ ಇನ್ನೂ ಹೆಚ್ಚಿನ ಆರ್ಥಿಕ ನೆರವನ್ನು ನೀಡುವ ಭರವಸೆಯನ್ನು ಶ್ರೀ ಟಿ.ಎಸ್. ಮಧುಸೂದನ್‌ರವರು ನೀಡಿದರು. ” ಅವರ ಈ ದೇಣಿಗೆಯನ್ನು ಸ್ವೀಕರಿಸಿ, ಅವರಿಗೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪರವಾಗಿ ಮಾನ್ಯ ಅಧ್ಯಕ್ಷರಾದ ಶ್ರೀ ಬಿ.ಆರ್. ಜಯಂತ್ ಇವರು ಹಾರ ಹಾಕಿ ಗೌರವಿಸಿದರು.
Malenadu Development Foundation ಶ್ರೀ ಟಿ.ಎಸ್. ಮಧುಸೂದನ್‌ರವರು ತಮ್ಮ ಪದವಿ ಪೂರ್ವ ಶಿಕ್ಷಣವನ್ನು ನಮ್ಮ ಕಾಲೇಜಿನಲ್ಲಿ ಮುಗಿಸಿ, ಇಂಜಿನಿಯರಿoಗ್ ಶಿಕ್ಷಣದ ನಂತರ ಇಸ್ರೋ ಸಂಸ್ಥೆಯಲ್ಲಿ ಕೆಲವು ಕಾಲ ಕೆಲಸ ಮಾಡಿ ಜೆ.ಇ. ಸಂಸ್ಥೆ ಯು.ಎಸ್.ಎ. ಇಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸಮಾರಂಭದಲ್ಲಿ ಎಂ.ಡಿ.ಎಫ್.ನ ಪ್ರಧಾನ ಕಾರ್ಯದರ್ಶಿಯಾದ ಡಾ. ಹೆಚ್.ಎಂ. ಶಿವಕುಮಾರ್, ಉಪಾಧ್ಯಕ್ಷರಾದ ಶ್ರೀ ಹೆಚ್.ಎಂ. ರವಿಕುಮಾರ್, ಹುಣಾಲುಮಡಕಿ, ಪ್ರಗತಿ ಸಂಯುಕ್ತ ಶಾಲೆಯ ರೆಕ್ಟರ್ ಡಾ. ಟಿ.ಎಸ್. ರಾಘವೇಂದ್ರ, ಹಾಗೂ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
Malenadu Development Foundation ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ 6೦ ವರ್ಷಗಳ ಸಾರ್ಥಕ ಶಿಕ್ಷಣ ಸೇವೆ ವಿದ್ಯಾರ್ಥಿಗಳ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಯಿತು. – ಟಿ.ಎಸ್.ಮಧುಸೂದನ್
Date: