Tuesday, February 17, 2026
Tuesday, February 17, 2026
Home Blog Page 1720

ಪುಲ್ವಾಮದಲ್ಲಿ ಹುತಾತ್ಮ ಯೋಧರಿಗೆ ಗೌರವಾರ್ಪಣೆ

0

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿ ಆರ್ ಪಿಎಫ್ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿಯವರು ನಮನ ಸಲ್ಲಿಸಿದ್ದಾರೆ.
ಪುಲ್ವಾಮದಲ್ಲಿ ಸಿಆರ್ ಪಿಎಫ್ ಬೆಂಗಾವಲು ವಾಹನದ ಮೇಲೆ ಉಗ್ರರು ನಡೆಸಿದ ದಾಳಿಗೆ ಮೂರು ವರ್ಷ ಸಂದ ಹಿನ್ನೆಲೆಯಲ್ಲಿ ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.

ಹುತಾತ್ಮ ಯೋಧರನ್ನು ದೇಶ ಎಂದೂ ಮರೆಯುವುದಿಲ್ಲ. ಭಾರತೀಯ ಯೋಧರ ಶೌರ್ಯ ಮತ್ತು ತ್ಯಾಗವೇ ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಲು ಪ್ರತಿ ಭಾರತೀಯನಿಗೂ ಪ್ರೇರಣೆ ಎಂದಿದ್ದಾರೆ.

3 ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಭಾರತದ ಒಟ್ಟು 40 ಯೋಧರು ಹುತಾತ್ಮರಾಗಿದ್ದಾರೆ.
ಪ್ರತಿ ಭಾರತೀಯ ವಾಯುಪಡೆಯು ಪಿಒಕೆಯಲ್ಲಿ ನ ಉಗ್ರರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿ ಧ್ವಂಸಗೊಳಿಸಿದೆ. ಫುಲ್ ಮೂವಿ ದೋಣಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವಾರ್ಪಣೆ ಸಮರ್ಪಿಸಲು ದೇಶದ ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮುಸ್ಲೀಂ ಮಹಿಳೆಯರ ಆಶೀರ್ವಾದವಿದೆ- ಪ್ರಧಾನಿ

0

ನನ್ನ ಮೇಲೆ ಮುಸ್ಲಿಂ ಮಹಿಳೆಯರ ಆಶೀರ್ವಾದವಿದ್ದು, ಚುನಾವಣೆಯಲ್ಲಿ ನನಗೆ ಹೆಚ್ಚಿನ ಆಶೀರ್ವಾದ ಮಾಡಲು ಮನೆಯಿಂದ ಮೆಲ್ಲಗೆ ಹೊರಬರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಚುನಾವಣೆ ಜಾಥಾದಲ್ಲಿ ಪ್ರಧಾನಿಯವರು ಮಾತನಾಡಿದರು.

ರಾಜ್ಯದಲ್ಲಿ ಪ್ರಚಲಿತದಲ್ಲಿರುವ ನಾಲ್ಕು ಅಂಶಗಳ ಪೈಕಿ ಮೊದಲನೆಯದಾಗಿ ಯೋಗಿ ಆದಿತ್ಯನಾಥ್ ಅವರು ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ. ಎರಡನೆಯದಾಗಿ ಎಲ್ಲಾ ಜಾತಿ, ವರ್ಗದ ಜನ ಉತ್ತರಪ್ರದೇಶದಲ್ಲಿ ಆದ ಅಭಿವೃದ್ಧಿ ಮೆಚ್ಚಿದ್ದಾರೆ. ಮೂರನೆಯದಾಗಿ, ರಾಜ್ಯದ ತಾಯಂದಿರು, ಸಹೋದರಿಯರು ಹಾಗೂ ಪುತ್ರಿಯರು ಸ್ವಯಂ ಪ್ರೇರಿತರಾಗಿ ಬಿಜೆಪಿ ಗೆಲುವಿನ ಧ್ವಜವನ್ನು ಹಾರಿಸಿದ್ದಾರೆ. ಕೊನೆಯದಾಗಿ ಮುಸ್ಲಿಂ ಹೆಣ್ಣುಮಕ್ಕಳು ನನಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದರು.

ದೇಶಾದ್ಯಂತ ಮುಸ್ಲಿಂ ಹೆಣ್ಣುಮಕ್ಕಳಿಗೆ ತ್ರಿವಳಿ ತಲಾಕ್ ಪದ್ಧತಿಯು ಮಾರಕವಾಗಿತ್ತು. ಕೋಟ್ಯಂತರ ಹೆಣ್ಣುಮಕ್ಕಳ ಜೀವನಕ್ಕೆ ಇದು ಕಂಟಕವಾಗಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರವು ತ್ರಿವಳಿ ತಲಾಕ ನಿಷೇಧಿಸಿ ಮುಸ್ಲಿಂ ಹೆಣ್ಣುಮಕ್ಕಳ ಜೀವನ ಸುಗಮಗೊಳಿಸಲು ಎಂದರು.

ರಾಜ್ಯದ ಜನರಿಗೆ ಉಚಿತವಾಗಿ ಪಡಿತರ ನೀಡಲಾಗುತ್ತಿದೆ. ರಾಜ್ಯದ ಅಭಿವೃದ್ಧಿಯನ್ನು ಗಮನಿಸಿರುವ ಜನ ಈ ಬಾರಿಯೂ ಮತ್ತೆ ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲಿ ಬಹುತೇಕ ಶಾಲೆಗಳು ಗದ್ದಲವಿಲ್ಲದೇ ಆರಂಭ

0

ಹಿಜಾಬ್ ವಿವಾದ ತಲೆಯೆತ್ತಿದ ನಂತರ ಬಂದ್ ಆಗಿದ್ದ 9ಮತ್ತು 10ನೇ ತರಗತಿ ಗಳು ನಿನ್ನೆಯಿಂದ ಗದ್ದಲವಿಲ್ಲದೆ ಆರಂಭಗೊಂಡಿದೆ. ಕೆಲವು ಉರ್ದು ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಮನೆಗೆ ಮರಳಿದ್ದು, ಮತ್ತು ಶಿವಮೊಗ್ಗದಲ್ಲಿ ಹಿಜಾಬ್ ಗ ಅವಕಾಶ ನಿರಾಕರಿಸಿದ್ದರಿಂದ ಬೇಸತ್ತು ಎಸೆಸೆಲ್ಸಿ ಸಿದ್ಧತಾ ಪರೀಕ್ಷೆಯನ್ನು ಬಿಟ್ಟು ಹೊರ ನಡೆದ ಘಟನೆಗಳು ನಡೆದಿದೆ.

ಇವುಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆದಿದೆ ಪರಿಸ್ಥಿತಿ ನಿರಾಳವಾಗಿತ್ತು.

ಮುಂದಿನ ತೀರ್ಪಿನವರೆಗೆ ವಿದ್ಯಾರ್ಥಿಗಳು ಸಮವಸ್ತ್ರದ ಜೊತೆ ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿತ್ತು. ಈ ಆದೇಶದ ಪಾಲನೆ ಹೊಣೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸರ್ಕಾರ ಒಪ್ಪಿಸಿತ್ತು. ಹಿಜಾಬ್ ಮತ್ತು ಕೇಸರಿ ಶಾಲು ವಿಶ್ವವನ್ನು ಮುಂದಿಟ್ಟುಕೊಂಡು ಯಾರೇ ಆದರೂ ಸಂಘರ್ಷಕ್ಕೆ ಇಳಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿತ್ತು. ಪೊಲೀಸರು ಬಹುತೇಕ ಪ್ರತಿ ಶಾಲೆಯಲ್ಲೂ ಕಟ್ಟೆಚ್ಚರ ವಹಿಸಿದ್ದರು. ಹೆಚ್ಚಿನ ಶಾಲೆಗಳಲ್ಲಿ ಯಾವುದೇ ವಿವಾದ ತಲೆದೋರಲಿಲ್ಲ. ಆದರೆ ಕೆಲವು ಕಡೆ ಹಿಜಾಬ್ ಧರಿಸಿ ಬಂದವರನ್ನು ಮನವೊಲಿಸಿ ತೆಗೆಸಲಾಯಿತು. ಹೆಚ್ಚಿನವರು ಹೈಕೋರ್ಟ್ ಆದೇಶಕ್ಕೆ ಬೆಲೆ ಕೊಟ್ಟಿದ್ದು ಮತ್ತು ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದ್ದರು ಬಗ್ಗೆ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತವಾಯಿತು.

ಹಿಜಾಬ್ ಮತ್ತು ಕೇಸರಿ ಶಾಲು ಪ್ರಕರಣದಿಂದಾಗಿ ಕಳೆದ ಆರು ದಿನಗಳಿಂದ ಸ್ಥಗಿತಗೊಂಡಿದ್ದ 9ಮತ್ತು 10ನೇ ತರಗತಿಗಳವರೆಗಿನ ಪ್ರೌಢಶಾಲೆಗಳು ರಾಜ್ಯಾದ್ಯಂತ ಪೊಲೀಸ್ ಬಿಗಿ ಭದ್ರತೆಯೊಂದಿಗೆ ನಿನ್ನೆ ಪುನರಾರಂಭಗೊಂಡವು.

ಸೂಕ್ಷ್ಮ ಕಡೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ರಾಜ್ಯಾದ್ಯಂತ ಶಾಲೆಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಹೈಕೋರ್ಟ್ ನ ಮಧ್ಯಂತರ ಆದೇಶದ ನಡುವೆಯೂ ಬೆಂಗಳೂರು, ಮೈಸೂರು, ಕಲ್ಬುರ್ಗಿ ಸೇರಿದಂತೆ ರಾಜ್ಯದ ಹಲವು ಶಾಲೆಗಳಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಬಹುತೇಕ ಉರ್ದು ಶಾಲೆಗಳ ಎಲ್ಲಾ ವಿದ್ಯಾರ್ಥಿನಿಯರು ಹಿಜಾಬ್ ಜೊತೆಗೆ ಬುರ್ಕಾ ಧರಿಸಿ ತರಗತಿಗಳಿಗೆ ಹಾಜರಾಗಿದ್ದರು. ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದರೂ ಸಹ, ಹಲವು ಶಾಲೆಗಳಲ್ಲಿ ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರು ನಿರಾಕರಿಸಿದರು. ಈ ಶಾಲೆಗಳಲ್ಲಿ ಶಿಕ್ಷಕಿಯರು ಸಹ ಹಿಜಾಬ್ ಮತ್ತು ಬುರ್ಕಾ ಧರಿಸಿ ಕರ್ತವ್ಯ ನಿರ್ವಹಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ಧರಿಸಿ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯರು

0

ಶಿವಮೊಗ್ಗ ನಗರದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ನಂತರ ನಿನ್ನೆಯಿಂದ ಪ್ರೌಢಶಾಲೆಗಳು ಆರಂಭವಾಗಿವೆ. ಹೈ ಕೋರ್ಟ್ ಈಗಾಗಲೇ ಧಾರ್ಮಿಕ ಸಂಕೇತಗಳನ್ನು ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಪ್ರವೇಶಿಸುವಂತಿಲ್ಲ ಎಂದು ಮಧ್ಯಂತರ ಆದೇಶ ಹೊರಡಿಸಿದೆ.
ಎರಡನೇ ದಿನವಾದ ಇಂದು ನಗರದ ಕಸ್ತೂರಿಬಾ ಪ್ರೌಢಶಾಲೆಯ 10ನೇ ತರಗತಿಯ ಮೂರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡದ ಕಾರಣ ಪರೀಕ್ಷೆಯನ್ನು ಬಹಿಷ್ಕರಿಸಿ ಹೊರನಡೆದ ಪ್ರಸಂಗ ವರದಿಯಾಗಿದೆ.

ಕೆಲಕಾಲ ಶಾಲೆಯಲ್ಲಿ ಗೊಂದಲ ಮೂಡಿತ್ತು. ಬಳಿಕ ವಿದ್ಯಾರ್ಥಿನಿಯರ ಪೋಷಕರು ಬಂದು ಮನೆಗೆ ಕರೆದುಕೊಂಡು ಹೋದರು.
ವಿದ್ಯಾರ್ಥಿನಿಯರು, ನಾವು ಸಮವಸ್ತ್ರವನ್ನು ಧರಿಸಿದ್ದೇವೆ. ಅದರ ಜೊತೆಗೆ ಹಿಜಾಬ್ ಕೂಡ ಧರಿಸಿದ್ದೇವೆ. ಶಾಲಾ ನಿಯಮಗಳನ್ನು ಉಲ್ಲಂಘಿಸಿಲ್ಲ. ನಮಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡದ ಕಾರಣ ಮನೆಗೆ ವಾಪಸಾಗುತ್ತಿದ್ದೆವೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಬ್ಬಬ್ಬಾ ಗುಬ್ಬಚ್ಚಿ

0

ಗುಬ್ಬಿಗಳನ್ನ ನೋಡದವರಾರು? ಪುಟ್ಟಪುಟ್ಟದಾಗಿ ಕುಪ್ಪಳಿಸುತ್ತದೆ. ಕಾಳುಗಳನ್ನ ಪಟಕ್ಕನೆ ತನ್ನ ಚಂಚುವಿನಿಂದ ಹೆಕ್ಕಿ ತಿನ್ನುತ್ತದೆ. ಯಾರಾದರೂ ಮನುಷ್ಯರೋ..ಪ್ರಾಣಿಯೋ ಬಂದದ್ದು ಗೊತ್ತಾದಾಕ್ಷಣ ಪುರ್ರನೆ ಹಾರಿ ಮಾಯವಾಗುತ್ತದೆ. ಪರಿಸರದಲ್ಲಿ ಅತ್ಯಂತ ನಿರುಪದ್ರವಿ,ಅಷ್ಟಿಟ್ಟು ಮನುಷ್ಯಸ್ನೇಹಿ ಪಕ್ಷಿ ಗುಬ್ಬಿ. ಬಹಳಷ್ಟು ಪಕ್ಷಿಪ್ರಿಯರು ಈ ಪುಟಾಣಿ ಹಕ್ಕಿಗೆ ತಮ್ಮ ಮನೆಯ ಸೂರುಗಳಲ್ಲಿ, ಕೈದೋಟದ ಮರಗಳಲ್ಲಿ ಗೂಡು ಕಟ್ಟಿಕೊಳ್ಳಲು ಬಿಟ್ಟಿರುವುದನ್ನ ನೋಡಿದ್ದೇವೆ.

ಇತ್ತೀಚೆಗೆ ಗುಬ್ಬಚ್ಚಿಗಳ ಸಂತತಿ ಕ್ಷೀಣಿಸಿರುವುದರ ಬಗ್ಗೆ ಪಕ್ಷಿಪ್ರಿಯರಿಂದ ಕಾಳಜಿ ವ್ಯಕ್ತವಾಗಿದೆ. ಈ ಪುಟ್ಟ ಹಕ್ಕಿಯಿಂದ ನಮಗೇನು ಲಾಭ? ಎಂದು ಕೇಳಬಹುದು. ಈ ಜೀವಜಗತ್ತಿನಲ್ಲಿ ಪ್ರತಿಯೊಂದಕ್ಕೂ ಬದುಕುವ ಹಕ್ಕಿದೆ.
ಜೊತೆಗೆ ಅವುಗಳ ಪರಿಸರ ಸಮತೋಲನಕ್ಕೂ ತಮ್ಮದೇ ಕೊಡುಗೆ ನೀಡುತ್ತಿವೆ.

ಹಕ್ಕಿಗಳು ಹುಳುಹುಪ್ಪಟೆ ತಿಂದು ಧಾನ್ಯದ ಬೆಳೆಗಳನ್ನ ಸಂರಕ್ಷಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಅವುಗಳ ಈ ಸದ್ದಿಲ್ಲದ ಸೇವೆ ನಮ್ಮರಿವಿಗೆ ಬರುವುದೇ ಇಲ್ಲ. ಗುಬ್ಬಚ್ಚಿಗಳ ಸೇವೆಯೂ ಹಾಗೆ.
ನಿಮಗೆ ಚೀನಾದ ಹುಚ್ಚುದೊರೆಯ ಕತೆ ನೆನಪಿಸಿದರೆ ಗುಬ್ಬಚ್ಚಿಗಳ ಮಹತ್ವ ತಿಳಿದು ಮೆಚ್ಚುಗೆ ಮೂಡುತ್ತದೆ.
ಝೆಡಾಂಗ್ ಎಂಬ ಚೀನೀ ಅಧ್ಯಕ್ಷ (1949-1976) ಜನಸಂಖ್ಯೆಯ ಬಹುಪಾಲು ಧಾನ್ಯವನ್ನ ಗುಬ್ಬಚ್ಚಿಗಳು ತಿನ್ನುತ್ತವೆ ಎಂದು ಇಡೀ ಗುಬ್ಬಿಸಂಕುಲವನ್ನೇ ಸುಟ್ಟುಹಾಕಿದ. ಗುಬ್ಬಚ್ಚಿಗೂಡುಗಳನ್ನ, ಅವುಗಳು ಕುಳಿತ ಗಿಡ ಮರ ಪೊದೆಗಳನ್ನ ಒಮ್ಮೆಲೇ ಬೆಂಕಿ ತಾಗಿಸಿ ಸುಟ್ಟುಹಾಕಲು ಆಜ್ಞೆ ಮಾಡಿದ. ಚೀನಾ ಇಟ್ಟ ಹೆಜ್ಜೆಯನ್ನು ನಿಸರ್ಗವೂ ತಡೆಯಲಾರದು. ನಾನು ಬೆಟ್ಟಗಳನ್ನು ಬಗ್ಗಿಸುವೆ. ನದಿಗಳು ನನಗಾಗಿ ದಾರಿ ಬಿಡಬೇಕು ಹಾಗೆ ಮಾಡುವೆ” ಎಂಬುದು ಆತನ ಧ್ಯೇಯವಾಕ್ಯ.

ಅಕ್ಷರಶಃ ಹಾಗೇ ಮಾಡಿದ. ಗುಬ್ಬಿಗಳೇ ಅಲ್ಲದೆ ಧಾನ್ಯವನ್ನು ತಿನ್ನುವ ಕೀಟಸಂಕುಲ, ಇಲಿ ಹೆಗ್ಗಣ,ಎಲ್ಲವನ್ನೂ ನಾಶಮಾಡುವ ಅಭಿಯಾನ ಕೈಗೊಂಡ. ಸತ್ತ ಗುಬ್ಬಚ್ಚಿಗಳಿಗಂತೂ ಲೆಕ್ಕವಿಲ್ಲ. ಇಂತ ನಿರ್ಧಾರ ಅವನ ಪಾಲಿಗೇ ಎರವಾಯಿತು. ಹೊಲಗದ್ದೆಗಳಲ್ಲಿ ಫಸಲು ನಿಂತಾಗ ಕ್ರಿಮಿ ಕೀಟಗಳ
ಕಾಟದಿಂದ ಬೆಳೆನಷ್ಟವಾಯಿತು. ಪರಿಸರ ವಿರೋಧಿ ಕ್ರಮಗಳಿಂದ
ಕೃತಕ ಕ್ಷಾಮ ಆವರಿಸಿತು. ಆಗ ಹಸಿವಿನಿಂದ ಸತ್ತ ಚೀನಿಯರ ಸಂಖ್ಯೆ ಒಂದೂವರೆ ಕೋಟಿಯಂತೆ!. ಇನ್ನೂ ಹೆಚ್ಚೇ ಇರಬಹುದು. ಏಕೆಂದರೆ ಚೀನಾಕ್ಕೆ ಹುಸಿನುಡಿಯುವುದೆಂದರೆ ಎಲ್ಲಿಲ್ಲದ ಪ್ರೀತಿ.! ಚೀನಾ ಪರಿಸರವನ್ನ ಎದುರು ಹಾಕಿಕೊಂಡಿತು. ಇದು ಗುಬ್ಬಿಗಳ ಮಾರಣ ಹೋಮದ ಪರಿಣಾಮ.

ಈ ಗುಬ್ಬಚ್ಚಿಗಳ ಬಗ್ಗೆ ನಮ್ಮ ರಾಜ್ಯದಲ್ಲೇ ಬಹಳ ಪ್ರೀತಿ ಮಮತೆ ತೋರಿದ ಘಟನೆ ವರದಿಯಾಗಿದೆ. ಚಿಕ್ಕಬಳ್ಳಾಪರದ ಶಿಡ್ಲಘಟ್ಟ ಬಸವಾಪಟ್ಟಣದಲ್ಲಿ ನಡೆದ ಪ್ರಸಂಗ ಪಕ್ಷಿಪ್ರಿಯರ ಮೆಚ್ಚುಗೆ ಪಡೆದಿದೆ. ಆ ಹಳಿಯಲ್ಲಿ ಸುಮಾರು ಅರವತ್ತರಿಂದ ಎಪ್ಪತ್ತು ಮನೆಗಳಿಗೆ ದಿನವೂ ಪುರ್ರನೆ ಹಾರಿ ಬಂದು ಕಾಳು ಮೆದ್ದು ಹೋಗುತ್ತಿದ್ದ ಪುಟ್ಟ ಗುಬ್ಬಚ್ಚಿಯ ಚೀಂವ್..ಚೀಂವ್ ಗ್ರಾಮಸ್ಥರ ಕಿವಿಗೆ ಅಭ್ಯಾಸವಾಗಿಬಿಟ್ಟಿತ್ತು. ಆದರೆ ಒಂದು ಬೆಳಿಗ್ಗೆ ಎಷ್ಟು ಹೊತ್ತಾದರೂ ಗುಬ್ಬಿ ಬಂದೇ ಇಲ್ಲ. ನೋಡಿದರು ಕಾದರು. ಕೊನೆಗೆ ಹತ್ತಿರದ ಮರಗಳನ್ನ ಹುಡುಕಿದರು. ಮರವೊಂದರಲ್ಲಿ ಗುಬ್ಬಚ್ಚಿಯ ಸತ್ತದೇಹ ಪತ್ತೆಯಾಯಿತು.
ಏನೋ ತಮ್ಮ ಅತ್ಯಂತ ಆತ್ಮೀಯರನ್ನ ಕಳೆದುಕೊಂಡ ವಿಹ್ವಲತೆ ಅವರನ್ನ ಕಾಡಿತು. ಕಣ್ಣೀರ್ಗರೆದರು. ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅದಕ್ಕೊಂದು ಸಂಸ್ಕಾರ ಮಾಡಬೇಕೆಂದು ನಿಶ್ವಯಿಸಿದರು. ಸಮಾಧಿಯ ನಿರ್ಮಾಣವಾಯಿತು. ಪ್ರೀತಿಯ ಹಕ್ಕಿಯ ದೇಹವನ್ನ ಮಣ್ಣಿನಲ್ಲಿ ಹೂಳಿದರು. ಹೂಗಳನ್ನಿಟ್ಟರು.
ತೃಪ್ತಿಯಾಗಲಿಲ್ಲ. ಮನುಷ್ಯರಿಗೆ ಸತ್ತಾಗ ತಿಥಿ ಮಾಡುವ ಆಚರಣೆಯನ್ನೂ ಮಾಡಿದರು. ಎಲ್ಲರಿಗೂ ಅಂದು ತರಕಾರಿ ಭೋಜನ. ಏಕೆಂದರೆ ಗುಬ್ಬಚ್ಚಿ
ಸಸ್ಯಾಹಾರಿಯಲ್ಲವೆ?.
ಬೆಂಗಳೂರಿನಲ್ಲಿ ಗುಬ್ಬಿಮನುಷ್ಯ ಅಂತ ಜನರಿಂದ ಕರೆಸಿಕೊಳ್ಳುವ ಓರ್ವರಿದ್ದಾರೆ. ಅವರ ಹೆಸರು ಎಡ್ವಿನ್ ಜೋಸೆಫ್. ಅವರ ಬಳಿ ಇನ್ನೂರಕ್ಕೂ ಮಿಕ್ಕಿ ಗುಬ್ಬಚ್ಚಿಗಳಿವೆ. ಈ ಗುಬ್ಬಿ ಪ್ರೀತಿಯ ಪ್ರಸಂಗ ಕೇಳಿ ಹಳ್ಳಿಗರ ಹೃದಯ ವೈಶಾಲ್ಯಕ್ಕೆ ಒಂದು ಸಲಾಮ್ ಎಂದರು. ಅವರು ಗುಬ್ಬಿ ಸತ್ತಾಗ ಮಣ್ಣಿನಲ್ಲಿ ಮುಚ್ಚುತ್ತಾರೆ. ಎದೆಭಾರ ,ಕಣ್ಣಾಲಿಗಳಲ್ಲಿ ನೀರು ಇಷ್ಟೇ ಅವರು ನೀಡುವ ಅಂತಿಮ ಪ್ರಾರ್ಥನೆ. ಅತ್ಯಂತ ಹೃದಯ ಕಲಕುವ ರೀತಿ ಬಸವಾಪಟ್ಟಣ ಗ್ರಾಮದ ಜನ ಗುಬ್ಬಿಗೆ ತೋರಿದ ಮಾನವೀಯತೆ ಎಲ್ಲರಿಗೂ ಮಾದರಿಯೆನಿಸಿದೆ.
ನಮ್ಮ ಜನರಲ್ಲಿ ಪ್ರಾಣಿ -ಪಕ್ಷಿ ಪ್ರೀತಿಯ ಸೆಲೆಯೇ ಇದೆ. ನಾಯಿ,ಬೆಕ್ಕು, ಗಿಣಿ,ಎತ್ತು,ಆಕಳು ಎಮ್ಮೆ ಹೀಗೆ ಅದಕ್ಕೆ ಎಲ್ಲೆಯೇ ಇಲ್ಲ. ಗುಬ್ಬಚ್ಚಿಯದು ಮಾತ್ರ ಅಪರೂಪದಲ್ಲೊಂದು ಅತೀ ಅಪರೂಪದ ಪ್ರಸಂಗ. ಇದನ್ನ ಓದಿದಾಗ
ಅಷ್ಟೇಕೆ ಬರೆಯುತ್ತಿದ್ದಂತೇ ನನಗೂ ಕಣ್ಣುಗಳು ತೇವಗೊಂಡವು. ನಿಮಗೆ ಹೇಗೋ ನನಗೆ ಗೊತ್ತಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತೀಯ ಪ್ರಯಾಣಿಕರಿಗೆ ಶ್ರೀಲಂಕಾ ವೀಸಾ ನೀಡಿಕೆ ಪುನರಾರಂಭ

0

ಭಾರತ ಸೇರಿದಂತೆ ವಿದೇಶಗಳಿಂದ ಬರುವ ಅಂತರಾಷ್ಟ್ರೀಯ ಪ್ರವಾಸಿಗರಿಗೆ ವೀಸಾ ಮೂಲಕ ಆಗಮನದ ಸೌಲಭ್ಯವನ್ನು ಪುನರಾರಂಭಿಸುವುದಾಗಿ ಶ್ರೀಲಂಕಾ ಘೋಷಿಸಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಪಾಕಿಸ್ತಾನ, ನೇಪಾಳ ಮತ್ತು ಮ್ಯಾನ್ಮಾರ್ ಸೇರಿದಂತೆ ಒಟ್ಟೂ 10 ದೇಶಗಳ ಪ್ರಯಾಣಿಕರು ಈ ಸೌಲಭ್ಯವನ್ನು ಪಡೆಯುವುದನ್ನು ಇನ್ನೂ ನಿರ್ಬಂಧಿಸಲಾಗಿದೆ. ಕೊರೊನಾ ಪೆಂಡಮಿಕ್ ಪ್ರಾರಂಭವಾದಾಗಿನಿಂದ ವಿದೇಶಿ ಪ್ರವಾಸಿಗರಿಗೆ ಈ ಸೌಲಭ್ಯವನ್ನು ತಡೆಹಿಡಿಯಲಾಗಿತ್ತು. ಈಗ ದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಮತ್ತೆ ಪುನರಾರಂಭಗೊಳಿಸಲಾಗಿದೆ.

ಇದು ವಿದೇಶೀ ವಿನಿಮಯ ಆದಾಯದ ಪ್ರಮುಖ ಮೂಲವಾಗಿದೆ. ಶ್ರೀಲಂಕಾದ ಬಂದರಿನಲ್ಲಿ ಪ್ರವಾಸಿಗರಿಗೆ ಆಗಮನದ ಎಲೆಕ್ಟ್ರಾನಿಕ್ ಪ್ರಯಾಣದ ಅಧಿಕಾರವನ್ನು ನೀಡಲು ಫೆಬ್ರವರಿ 8 ರಿಂದಲೇ ಈ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲಾಗಿದೆ.
ಸರ್ಕಾರದ ಪ್ರಕಾರ, ಶ್ರೀಲಂಕಾಕ್ಕೆ ತಮ್ಮ ಪ್ರಯಾಣವನ್ನು ಏರ್ಪಡಿಸುವ ಸಮಯದ ನಿರ್ಬಂಧಗಳಿಂದಾಗಿ ಆನ್‌ಲೈನ್ ವೀಸಾವನ್ನು ಪಡೆಯುವಲ್ಲಿ ತೊಂದರೆಗಳನ್ನು ಅನುಭವಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದೆ.
ಪೂರ್ವ ಪೆಂಡಾಮಿಕ್ ದಿನಗಳಲ್ಲಿ, ಭಾರತವು ಶ್ರೀಲಂಕಾದ ಅತಿದೊಡ್ಡ ಪ್ರವಾಸೋದ್ಯಮ ಮಾರುಕಟ್ಟೆಯಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಯುರ್ವೇದ ಅನುಸರಣೆ ಅಡ್ಡ ಪರಿಣಾಮಗಳಿಲ್ಲ

0

ಅಡ್ಡಪರಿಣಾಮಗಳಿಲ್ಲದ ಔಷಧ, ಮದ್ದುಗಳು ಹಾಗೂ ಚಿಕಿತ್ಸಾ ವಿಧಾನಗಳು ಯಾವತ್ತೂ ಕ್ಷೇಮಕರವಾಗಿದ್ದವು. ಸನಾತನ ಭಾರತೀಯವಾದ ಆಯುರ್ವೇದ ಪದ್ಧತಿಯು ಸುರಕ್ಷಿತ ಎಂದು ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ ಅವರು ಅಭಿಪ್ರಾಯಪಟ್ಟರು.
ಅಖಿಲ ಭಾರತ ವೀರಶೈವ ಮಹಾಸಭಾ ದಾವಣಗೆರೆ ಜಿಲ್ಲಾ ಯುವ ಘಟಕ ಹಾಗೂ ಲೋಟಸ್ ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಮಂದಿರದಲ್ಲಿ ಏರ್ಪಾಡಾಗಿದ್ದ ಉಚಿತ ಆಯುರ್ವೇದ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ನೇರವೇರಿಸಿದರು.

ವಿಶೇಷ ಉಪನ್ಯಾಸ ನೀಡುತ್ತಾ ಆಯುರ್ವೇದವು ಜಗತ್ತಿನಲ್ಲಿ ಪುರಾತನವಾಗಿದ್ದು, ಇದಕ್ಕೆ ಐದಾರು ಸಾವಿರ ವರ್ಷಗಳ ಇತಿಹಾಸವಿದೆ. ಇದು ಬ್ರಹ್ಮನಿಂದ ದಕ್ಷಪ್ರಜಾಪತಿಗೂ ಅವನಿಂದ ಅಶ್ವಿನಿ ದೇವತೆಗಳಿಗೂ ಅವರಿಂದ ಇಂದ್ರನಿಗೂ, ಇಂದ್ರನಿಂದ ಭಾರದ್ವಾಜರಿಗೂ ಅವರಿಂದ ಅತ್ರಿಗೂ,ಅತ್ರಿಯಿಂದ ಚರಕ ರಿಗೂ, ಚರಕರಿಂದ ಸುಶ್ರುತರಿಗೂ,ವಾಗ್ಭಟರಿಗೂ ಪರಂಪರೆಯಾಗಿ ಬಂದ ಆಯುರ್ವೇದವು ಆತ್ರೇಯ ಸಂಪ್ರದಾಯ, ಧನ್ವಂತರಿ ಸಂಪ್ರದಾಯ, ಶಲ್ಯ ತಂತ್ರದಲ್ಲಿ ಮುಂದುವರೆದಿದೆ. ಧರ್ಮ, ಅರ್ಥ,ಕಾಮ, ಮೋಕ್ಷವೆಂಬ ನಾಲ್ಕು ಪುಣ್ಯ ಪುರುಷಾರ್ಥಗಳನ್ನು ಸಾಧಿಸಲು ಆರೋಗ್ಯವೇ ಮೂಲವಾಗಿ ಉತ್ತಮವಾಗಿರಬೇಕು ಎಂದು ವಿಶ್ವದಲ್ಲಿ ಮೊಟ್ಟಮೊದಲು ಆಯುರ್ವೇದ ಸಂಹಿತೆ ಸಾರಿ ಹೇಳಿದೆ ಎಂದರು.
ವಿಕಾರ, ಪಿತ್ತವಿಕಾರ, ಕಫ ವಿಕಾರಗಳು ಜೀವಿಯ ಎಲ್ಲ ರೋಗಾದಿಗಳಿಗೂ ಕಾರಣವಾಗಿದ್ದು, ಪ್ರಕೃತಿದತ್ತವಾದ ವನಸ್ಪತಿ, ವೀರುಧ, ಔಷಧ,ವೃಕ್ಷಗಳಿಂದ ಇವಕ್ಕೆಲ್ಲ ಪರಿಹಾರವನ್ನು ಆಯುರ್ವೇದದಲ್ಲಿ ಸೂಚಿಸಲಾಗಿದೆ. ಆದ್ದರಿಂದ ಆಯುರ್ವೇದದಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ಇದು ದೇಹ ಮನಸ್ಸು ಎರಡನ್ನೂ ಸುರಕ್ಷಿತವಾಗಿಡುತ್ತದೆ. ವಿಪರ್ಯಾಸವೆಂದರೆ ಇದರ ಮಹತ್ವವನ್ನು ವಿಶ್ವದ ಬೇರೆ ಬೇರೆ ದೇಶಗಳು ತಿಳಿದು ಪಾಲಿಸುತ್ತಿರುವಾಗ ನಾವು ಅಲಕ್ಷ್ಯ ಮಾಡುತ್ತಿದ್ದೇವೆ. ಆಯುರ್ವೇದವು ರೋಗನಿವಾರಣೆಗಿಂತಾ ರೋಗ ನಿರೋಧಕತೆಗೆ ಪ್ರಾಶಸ್ತ್ಯ ನೀಡುತ್ತದೆ. ಇದು ಕ್ಷೇಮಕರ, ಇದರ ಪರಿಣಾಮ ತುಸು ನಿಧಾನವಾದರೂ ಶಾಶ್ವತ ಗುಣಾಕಾರತ್ವ ಆಯುರ್ವೇದದಲ್ಲಿ ಸಾಧ್ಯವೆಂದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣನವರು, ಬದುಕು ರೂಪಿಸಿಕೊಳ್ಳುವುದ ರೊಂದಿಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಬದುಕನ್ನು ಪ್ರೀತಿಸುತ್ತಾ ಆರೋಗ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ದಾವಣಗೆರೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಆರ್. ಟಿ .ಪ್ರಶಾಂತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಚಂದ್ರಶೇಖರ ಸುಂಕದ್ ಆಗಮಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾದ ದಾವಣಗೆರೆ ಜಿಲ್ಲಾ ಯುವ ಘಟಕ ಪ್ರಧಾನ ಕಾರ್ಯದರ್ಶಿ ಯೋಗೀಶ್ ದೇವರಮನಿ, ಡಾ. ಸಂತೋಷ್ ಟಿ. ಡಾ. ನಟರಾಜ್ ಅರಳಗುಪ್ಪಿ. ಡಾ. ಶ್ವೇತಾ ಶಿದ್ಧಿಬಾವಿ ಉಪಸ್ಥಿತರಿದ್ದರು. ರಾಘವೇಂದ್ರ ಗೌಡ ಜಿ. ಆರ್. ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಗುರುಶಾಂತ ವಿ. ಸೋಗಿ ಕೋರಿದರು. ಶಂಭು ಎಸ್. ಉರೇಕೊಂಡಿ ವಂದನೆ ಸಲ್ಲಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚುನ್ ಹಿಸಿನ್ ಬೆಂಗಳೂರು ಓಪನ್ ಟೆನಿಸ್ ಚಾಂಪಿಯನ್

0

ಚೀನಾ ತೈಪೆಯ ಚುನ್ ಹಿಸಿನ್ ಸೇಂಗ್ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಕೆಎಸ್ ಎಲ್ ಟಿ ಎ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 6 ರಿಂದ 4, 7ರಿಂದ 5 ನೇರ ಸೆಟ್ ಗಳಿಂದ ಕ್ರೊಯೇಷ್ಯಾದ ಬೊರ್ನಾ ಗೊಜೊ ವಿರುದ್ಧ ಜಯಗಳಿಸಿದ್ದಾರೆ. ಎದುರಾಳಿಯ ದಿಟ್ಟ ಪ್ರತಿರೋಧದ ನಡುವೆಯೂ ಮಿಂಚಿದ ತೈಪೆ ಆಟಗಾರ ಒಂದು ಗಂಟೆ 45 ನಿಮಿಷಗಳ ಹೋರಾಟದಲ್ಲಿ ಜಯಗಳಿಸುವ ಮೂಲಕ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಇದು 20 ವರ್ಷದ ಚುನ್ ಹಿಸಿನ್ ಗೆ ಒಲಿದು ಬಂದ ಎರಡನೇ ಎಟಿಪಿ ಚಾಲೆಂಜರ್ ಕಿರೀಟವಾಗಿದೆ.

ಅತ್ತ, ಚಾಲೆಂಜರ್ ಟೂರ್ನಿಯಲ್ಲಿ ಹಿಂದೆಯೂ ಎರಡನೇ ಭಾರತದ ಬೊರ್ನಾ ವೃತ್ತಿ ಬದುಕಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ರನ್ನರ್ ಅಪ್ ಸ್ಥಾನಗಳಿಸಿದ್ದಾರೆ.

ಫೈನಲ್ ಹಣಾಹಣಿಯಲ್ಲಿ ಭಾರತೀಯರು ಇಲ್ಲದಿದ್ದರೂ ನೂರಾರು ಸಂಖ್ಯೆಯಲ್ಲಿ ಸ್ಥಳೀಯ ಅಭಿಮಾನಿಗಳು ಚುನ್ ಮತ್ತು ಬೊರ್ನಾ ಪಂದ್ಯವನ್ನು ನೋಡಿ ಕಣ್ತುಂಬಿಕೊಂಡರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದ ಕ್ರಿಕೆಟ್ ನಕ್ಷತ್ರಗಳನ್ನ ಮತ್ತೆ ನಿರ್ಲಕ್ಷಿಸಿದ ಆರ್ ಸಿ ಬಿ

0

ಐಪಿಎಲ್ ಫ್ರಾಂಚೈಸಿಗಳು ಅವರು ರಾಜ್ಯದ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ ವಿದೇಶಿಯರು ಮತ್ತು ಇತರ ರಾಜ್ಯಗಳ ಆಟಗಾರರಿಗೆ ಮಣೆ ಹಾಕುವುದನ್ನು ಈ ಬಾರಿ ಸಹ ಮುಂದುವರಿಸಿದೆ.

ಕರ್ನಾಟಕದ ಆಟಗಾರರನ್ನು ಕಡೆಗಣಿಸಿದ್ದಕ್ಕೆ ಹಿಂದೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಆರ್ ಸಿಬಿ ಈ ಬಾರಿಯೂ ಅದನ್ನೇ ಮುಂದುವರಿಸಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ.

ವೆಸ್ಟ್ ಇಂಡೀಸ್ ನಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ 19ರ ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ, ಅನೀಶ್ವರ್ ಗೌತಮ್ ಸದ್ಯ ಆರ್ ಸಿಬಿ ತಂಡದಲ್ಲಿರುವ ಏಕೈಕ ಕನ್ನಡಿಗ. 20 ಲಕ್ಷ ರೂಪಾಯಿ ಮೂಲ ಬೆಲೆ ನೀಡಿ ಅನೀಶ್ವರ್ ಅವರನ್ನು ಆರ್ ಸಿಬಿ ಕನ್ನ 22ರ ಬಳಗಕ್ಕೆ ಸೇರಿಸಿಕೊಂಡಿದೆ.

ಕಳೆದ ಆವೃತ್ತಿಯ ನಡುವೆ ಆರ್ ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಫಾಫ್ ಡು ಪ್ಲೇಸಿಸ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ ವೆಲ್ ನಡುವೆ ನಾಯಕತ್ವಕ್ಕೆ ಪೈಪೋಟಿ ಏರ್ಪಟ್ಟಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಂಗಾಯಣ ಯುವರಂಗ- ನಾಟಕೋತ್ಸವ

0

ರಂಗಾಯಣ, ಶಿವಮೊಗ್ಗವು ವಿಶೇಷವಾಗಿ ಯುವಜನತೆಯನ್ನು ರಂಗಭೂಮಿಯತ್ತ ಆಕಷಿಸುವ ಕಾರ್ಯಕ್ರಮಗಳ ಭಾಗವಾಗಿ ಕಾಲೇಜು ರಂಗೋತ್ಸವ ಯುವರಂಗ-2021-22 ಆಯೋಜಿಸಿ ಐದು ಜಿಲ್ಲೆಗಳ ಗುರಿತಿಸಲಾದ ಕಾಲೇಜುಗಳಲ್ಲಿ ರಂಗತರಬೇತಿ ಶಿಬಿರ ನಡೆಸಲಾಗಿದ್ದು, ಇದೀಗ ಫೆ.18 ರಿಂದ 22 ರವರೆಗೆ ಸುವರ್ಣ ಸಾಂಸ್ಕಂತಿಕ ಭವನದಲ್ಲಿ ಅಂತಿಮ ಹಂತದ ವಿಭಾಗ ಮಟ್ಟದ ಕಾಲೇಜು ರಂಗೋತ್ಸವ ನಡೆಯಲಿದೆ.

ಫೆ.18 ರಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸುವ ನವೀನ್ ತಿಪಟೂರು ನಿರ್ದೇಶನದ ‘ಒಡಲಾಳ, ಫೆ.19 ರಂದು ಚಿತ್ರದುರ್ಗ ಜಿಲ್ಲೆಯ ಹಿರಯೂರಿನ ಜ್ಞಾನಭಾರತಿ ಮಹಾವಿದ್ಯಾಲಯ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸುವ, ಇನ್ಫೆಂಟ್ ವಿನಯ್ ನಿರ್ದೇಶನದ ‘ಆ ಕರಾಳ ರಾತ್ರಿ’, ಫೆ.20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರ.ದ.ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸುವ, ಶ್ರೀಕಾಂತ್ ಕುಮಟ ನಿರ್ದೇಶನದ ‘ತುರುಬ ಕಟ್ಟುವ ಹದನ’, ಫೆ.21 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸುವ ಪ್ರತಾಪ್.ಜಿ ನಿರ್ದೇಶನದ ‘ಅಶ್ವಪರ್ವ’ ಹಾಗೂ ಫೆ.22 ರಂದು ಬೆಂಗಳೂರು ನಗರ ಜಿಲ್ಲೆಯ ಸುರಾನ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸುವ, ಜೋಸೆಫ್ ಜಾನ್ ನಿರ್ದೇಶನದ ‘ಈ ಪಗರಣ’ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಫೆ.18 ರಂದು ಸಂಜೆ 6 ಗಂಟೆಗೆ ಕಾಲೇಜು ರಂಗೋತ್ಸವ ಯುವರಂಗ-2021-22 ಉದ್ಘಾಟನೆಯನ್ನು ಕನ್ನಡ ಸಂಸ್ಕಂತಿ ಮತ್ತು ಇಂಧನ ಇಲಾಖೆ ಸಚಿವರಾದ ವಿ.ಸುನೀಲ್ ಕುಮಾರ್ ನೆರವೇರಿಸವರು. ಯುವರಂಗ ಜಿಲ್ಲಾ ಕಾರ್ಯಕ್ರಮಗಳ ಛಾಯಾಚಿತ್ರಗಳ ಪ್ರದರ್ಶನದ ಉದ್ಘಾಟನೆಯನ್ನು ಬೆಂಗಳೂರು ಕೇಂದ್ರದ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕಿ ವೀಣಾರ್ಶ ಬೂಸನೂರುಮಠ ನೆರವೇರಿಸುವರು.

ಫೆ.22 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪವನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ನೆರವೇರಿಸುವರು. ಯುವರಂಗ-ಪಯಣದ ಸ್ಮರಣಸಂಚಿಕೆಯನ್ನು ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಬಿಡುಗಡೆಗೊಳಿಸುವರು.

ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ರಂಗಸಮಾಜದ ಸದಸ್ಯರುಗಳಾದ ಜೀವನರಾಂ ಸುಳ್ಯ, ಪ್ರಭುದೇವ ಕಪ್ಪಗಲ್ಲು, ಶ್ರೀಧರ ಹೆಗಡೆ, ಸಿದ್ದರಾಮ ಹಿಪ್ಪರಗಿ, ಆರ್.ಎಸ್.ಹಾಲಸ್ವಾಮಿ, ಬಿ.ವಿ.ರಾಜರಾಂ, ಶಿವೇಶ್ವರಗೌಡ, ಹೆಲನ್, ಪ್ರವೀಣ್ ಹಾಲ್ಮೂತ್ತೂರು, ಡಾ.ಶೈಲಜಾ.ಎ.ಸಿ ಪಾಲ್ಗೊಳ್ಳುವರು. ರಂಗಾಯಣದ ನಿರ್ದೆಶಕ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸುವರು.