ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಚುರುಕಾಗಿರುವುದರಿಂದ ಇಲ್ಲಿನ ತುಂಗ, ಭದ್ರಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗುತ್ತಿದೆ.
ಶನಿವಾರಂದು ನದಿಯಲ್ಲಿ ನೀರಿನ ಮಟ್ಟ 9.200 ಮೀ.ಗೆ ಏರಿದೆ. ಶುಕ್ರವಾರ 7.240 ಮೀ., ಗುರುವಾರ 7.210 ಮೀ.
ಇತ್ತು. ಕೇವಲ 3 ದಿನಗಳ ಅಂತರದಲ್ಲಿ ನದಿಯಲ್ಲಿ 2 ಮೀ. ನೀರಿನ ಮಟ್ಟ ಹೆಚ್ಚಾಗಿದೆ. ಮಳೆ ಇನ್ನೂ ಮುಂದುವರಿದರೆ ಅಥವಾ ಜಲಾಶಯದಿಂದ ಹೆಚ್ಚುವರಿ ನೀರು ಹರಿಸಿದರೆ ನದಿಯಲ್ಲಿ ಮತ್ತೆ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.
ಜುಲೈ ತಿಂಗಳಲ್ಲಿ ನಗರದ ಗಂಗಾನಗರದ ಮನೆಗಳು ಜಲಾವೃತವಾಗಿದ್ದವು. ಚಿಕ್ಕಬಿದರಿ ಸಾರಥಿ ಮತ್ತು ಉಕ್ಕಡಗಾತ್ರಿ ಯಿಂದ ನಂದಿಗುಡಿ ನಡುವಿನ ಸೇತುವೆ ಮುಳುಗಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಮತ್ತೆ ಅದೇ ದುಃಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಪ್ರವಾಹಕ್ಕೀಡಾದ ಪ್ರದೇಶಗಳ ಜನರು ಆತಂಕದಲ್ಲಿದೆ.
ಹರಿಹರದಲ್ಲಿ ಶುಕ್ರವಾರ 10.2 ಮಿ.ಮೀ., ಮಲೇಬೆನ್ನೂರು 14 ಮಿ.ಮೀ., ಕೊಂಡಜ್ಜಿ 9.2 ಮಿ.ಮೀ., ಹೊಳೆಸಿರಿಗೆರೆಯಲ್ಲಿ 10.4 ಮಿ.ಮೀ., ಒಟ್ಟು 43.6, ಸರಾಸರಿ 10.90 ಮಿ.ಮೀ. ಮಳೆ ದಾಖಲಾಗಿದೆ.