Tuesday, February 17, 2026
Tuesday, February 17, 2026
Home Blog Page 1719

ಐಆರ್ ಸಿಟಿಸಿ ವತಿಯಿಂದ ಈಶಾನ್ಯ ರಾಜ್ಯ ಪ್ರವಾಸಕ್ಕೆ ವ್ಯವಸ್ಥೆ

0

ಐಆರ್ ಸಿಟಿಸಿ ವತಿಯಿಂದ ಈಶಾನ್ಯ ರಾಜ್ಯಗಳಿಗೆ ಬೆಂಗಳೂರಿನಿಂದ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಸ್ಸಾಂ ಮತ್ತು ಮೇಘಾಲಯದ ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳಿಗೆ ಪ್ರವಾಸವನ್ನು ಆಯೋಜಿಸಲಾಗಿದೆ.

ವಂಡರ್ಸ್ ಆಫ್ ಅಸ್ಸಾಂ ಅಂಡ್ ಮೇಘಾಲಯ ಎನ್ನುವುದು ಪ್ಯಾಕೇಜ್ ಪ್ರವಾಸದ ಹೆಸರಾಗಿದೆ. ಬೆಂಗಳೂರಿನಿಂದ ಗುವಾಹಟಿ ಗೆ ಮಾರ್ಚ್ 18ರಿಂದ ವಿಮಾನ ಪ್ರಯಾಣ ಆರಂಭಿಸಿ, ಮಾರ್ಚ್ 23ಕ್ಕೆ ಗುವಾಹಟಿಯಿಂದ ಬೆಂಗಳೂರಿಗೆ ವಾಪಸಾಗುವುದು. 5 ರಾತ್ರಿ ಮತ್ತು 6 ಹಗಲುಗಳ ಪ್ರವಾಸ ಇದಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 8595931291.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚುನಾವಣೆಗೆ ಪಕ್ಷಬಲ ನೀಡಲು ಕನ್ನಡ ಮೈತ್ರಿಕೂಟ-ಎಚ್ ಡಿಕೆ

0

ಮುಂದಿನ ವಿಧಾನಸಭೆ ಚುನಾವಣೆ ಸಮಯಕ್ಕೆ ಕನ್ನಡ ಸಂಘಟನೆಗಳು, ರೈತ ಮುಖಂಡರು, ನೀರಾವರಿ ಹೋರಾಟಗಾರರು, ದಲಿತ ನಾಯಕರು ಒಳಗೊಂಡ ಕನ್ನಡಿಗರ ಮಹಾ ಮೈತ್ರಿಕೂಟ ರಚನೆ ಮಾಡುವ ಸುಳಿವನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಚುನಾವಣೆಗಾಗಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದೇನೆ. ಈಗಾಗಲೇ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಮಾಡಿದ್ದೇನೆ. ಅದೇ ರೀತಿ ರೈತರು ದಲಿತ ಮುಖಂಡರು, ನೀರಾವರಿ ನಡೆಸಿದ್ದೇನೆ. ಹೋರಾಟಗಾರರನ್ನು ಕೂಡ ಸದ್ಯದಲ್ಲೇ ಭೇಟಿ ಮಾಡಲಿದ್ದೇನೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಸರ್ಕಾರ ತರಬೇಕು. ಕನ್ನಡಿಗರದ್ದೇ ಸರ್ಕಾರ ತರಲು ಕನ್ನಡಿಗರ ಮಹಾ ಮೈತ್ರಿಕೂಟವನ್ನು ಚುನಾವಣೆಗೆ ಮುನ್ನವೇ ರಚನೆ ಮಾಡಲು ಸಿದ್ಧತೆ ನಡೆಸಿದ್ದೇನೆ. ಇನ್ನೆರಡು ತಿಂಗಳುಗಳಲ್ಲಿ ಅದರ ರೂಪುರೇಷೆಯ ಜನತೆಗೆ ತಿಳಿಯಲಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ರಾಷ್ಟ್ರವನ್ನು, ರಾಷ್ಟ್ರೀಯ ಪಕ್ಷಗಳು ಹಾಳು ಮಾಡಿದ್ದು ಸಾಕು. ಕನ್ನಡಿಗರ ಹಿತಾಸಕ್ತಿಗಳನ್ನು ಅವರು ಕಡೆಗಣಿಸಿ ರಾಜ್ಯವನ್ನು ದುಸ್ಥಿತಿಗೆ ದುಡಿದ್ದೂ ಸಾಕು. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮರಳಿ ತಾಯ್ನಾಡಿಗೆ ರಾಜ್ಯಪಾಲರ ಭಾಷಣದ ವಿಶೇಷ

0

ಐಟಿ, ಬಿಟಿ ಮತ್ತಿತರ ಉನ್ನತ ಶಿಕ್ಷಣ ಪಡೆದು ವಿದೇಶಕ್ಕೆ ಹೋದವರನ್ನು ವಾಪಸ್ ಕರೆದುತಂದು ಅಂಥವರ ಕೌಶಲ ಬಳಸಿಕೊಳ್ಳುವ ಸಂಬಂಧ ಮರಳಿ ತಾಯ್ನಾಡಿಗೆ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯಪಾಲರ ಭಾಷಣದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ವಿದೇಶದಲ್ಲಿ ಇರುವ ಭಾರತೀಯ ಸಂಜಾತ ಯುವಕರನ್ನು ಇಲ್ಲಿಗೆ ಕರೆಸಿ ಅವರ ಜ್ಞಾನದ ಪ್ರಯೋಜನ ಪಡೆದುಕೊಳ್ಳುವುದೇ ಯೋಚನೆ ಉದ್ದೇಶ ಎಂದು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದ್ದಾರೆ.

ಸಂಪ್ರದಾಯದಂತೆ ರಾಜ್ಯಪಾಲ ಗೆಹ್ಲೋಟ್ ಅವರು ವರ್ಷದ ಮೊದಲ ಅಧಿವೇಶನದ ಪ್ರಾರಂಭದ ದಿನವಾದ ಸೋಮವಾರದಂದು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಲಿಖಿತ ಭಾಷಣ ವಾಚಿಸಿದರು. ಕನ್ನಡದಲ್ಲೇ ಮಾತು ಆರಂಭಿಸಿ ಎಲ್ಲರಿಗೂ ನಮಸ್ಕಾರ ಎಂದು ಹೇಳಿದ ಅವರು, ನಂತರ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು.

ಸಾಮಾನ್ಯವಾಗಿ ಸರ್ಕಾರ ತನ್ನ ಸಾಧನೆಯನ್ನು ರಾಜ್ಯಪಾಲರ ಭಾಷಣದ ಮೂಲಕ ಬಿಂಬಿಸುವುದು ರೂಡಿ. ಈ ಸಂದರ್ಭದಲ್ಲಿ ಹೊಸ ಯೋಜನೆಗಳ ಬಗ್ಗೆ ಪ್ರಸ್ತಾಪಿಸುವುದು ವಿರಳ. ಆದರೆ ಮರಳಿ ತಾಯ್ನಾಡಿಗೆ ಎಂಬ ಹೊಸ ಯೋಜನೆ ಬಗ್ಗೆ ಪ್ರಕಟಿಸಿರುವುದು ಅಪರೂಪದ ನಿದರ್ಶನವಾಗಿದೆ. ಪ್ರತಿಭಾ ಪಲಾಯನ ತಡೆಯಲು ಈ ಕಾರ್ಯಕ್ರಮ ಸಹಕಾರಿಯಾಗುವ ನಿರೀಕ್ಷೆ ಇದೆ.

ವಿದೇಶದಲ್ಲಿರುವ ಭಾರತೀಯರ ಜ್ಞಾನವನ್ನು ಬಳಕೆ ಮಾಡಿಕೊಳ್ಳುವ ಯೋಜನೆ ಇದಾಗಿದೆ. ಇದಕ್ಕೆ ಸೂಕ್ತ ನೀತಿ ರೂಪಿಸಿ ಅನುದಾನ ಒದಗಿಸಲಾಗುವುದು, ಎಂದು ರಾಜ್ಯಪಾಲರಾದ ನಂತರ ರಾಜ್ಯ ವಿಧಾನಮಂಡಲದಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬಂಜಾರ ಸಮುದಾಯದ ಏಳಿಗೆಗಾಗಿ ದುಡಿದ ಸಂತ ಶ್ರೀ ಸೇವಾಲಾಲ್: ಬಿ.ವೈ.ರಾಘವೇಂದ್ರ

0

ಶೋಷಿತ ಸಮಾಜವಾದ ಬಂಜಾರ ಸಮುದಾಯದ ಏಳಿಗೆಗಾಗಿ ದುಡಿದ ಮಹಾನ್ ವ್ಯಕ್ತಿಸಂತ ಶ್ರೀ ಸೇವಾಲಾಲ್ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸಂತ ಶ್ರೀ ಸೇವಾಲಾಲ್ ರವರ 283 ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು.

ಸಮಸ್ಯೆಗಳ ಸುಳಿಯಲ್ಲಿದ್ದ ಮತ್ತು ಮಾರ್ಗದರ್ಶಕರ ಕೊರತೆಯಿಂದ ನರಳುತ್ತಿದ್ದ ಬಂಜಾರ ಸಮುದಾಯದ ಏಳಿಗೆಗಾಗಿ ತಮ್ಮ ಬಾಲ್ಯದಿಂದಲೇ ಶ್ರಮಿಸುವುದರ ಜೊತೆಗೆ ಸ್ವಾಭಿಮಾನದ ಬದುಕನ್ನು ಕಟ್ಟುವ ಬಗ್ಗೆ ಬೋಧಿಸಿದ್ದರು. ಬಂಜಾರ ಸಮುದಾಯ ಮಾತ್ರವಲ್ಲದೆ ಎಲ್ಲ ಶೋಷಿತ ಸಮಾಜಗಳ ಅಂಕು-ಡೊಂಕುಗಳನ್ನ ತಿದ್ದಲು ತಪಸ್ಸು ಮಾಡಿದವರು ಸಂತ ಶ್ರೀ ಸೇವಾಲಾಲ್ ಎಂದರು.

ಕಾರ್ಯಕ್ರಮದಲ್ಲಿ ಸೈನಾ ಮಹಾರಾಜ್, ಸಮಾಜದ ಮುಖಂಡರಾದ ಆಯನೂರು ಶಿವನಾಯ್ಕ್ , ಕುಮಾರ ನಾಯ್ಕ್, ಭೊಜನಾಯ್ಕ್, ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಪಾಲಿಕೆ ಸದಸ್ಯ ಆರ್.ಸಿ. ನಾಯ್ಕ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮತ್ತಿತರರು ಭಾಗಿಯಾಗಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯೋಜನೆಗಳ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಬೇಕು : ಎಂ.ಎಲ್.ವೈಶಾಲಿ

0

ಬಿಪಿಎಲ್ ಕುಟುಂಬದವರು ಸ್ವಂತ ಉದ್ಯೋಗ, ಇತರೆ ಆರ್ಥಿಕ ಚಟುವಟಿಕೆ ಕೈಗೊಂಡು ಸ್ವಾವಲಂಬಿಯಾಗಿ ಬದುಕಲು ಅವಕಾಶ ಒದಗಿಸುವ ಎನ್‍ಆರ್‍ಎಲ್‍ಎಂ/ಎನ್‍ಯುಎಲ್‍ಎಂ ನಂತಹ ಯೋಜನೆಗಳಿಗೆ ಬ್ಯಾಂಕುಗಳು ಮೊದಲನೇ ಆದ್ಯತೆ ನೀಡಿ ಸಾಲ-ಸಹಾಯಧನ ಮಂಜೂರು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಹೇಳಿದರು.

ಜಿಲ್ಲಾಡಳಿತ, ಕೌಶಲ್ಯ ಅಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಆಯ್ದ ಬ್ಯಾಂಕ್‍ಗಳ ಪ್ರತಿನಿಧಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಗುಣಮಟ್ಟದ ಜೀವನ ನಡೆಸಬೇಕೆಂಬ ಉದ್ದೇಶದಿಂದ ಸರ್ಕಾರ ಗ್ರಾಮೀಣಾಭಿವೃದ್ದಿ, ಕೌಶಲ್ಯಾಭಿವೃದ್ದಿ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮೀಣ ಭಾಗದಲ್ಲಿ ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್ ಮತ್ತು ನಗರ ಭಾಗದಲ್ಲಿ ನ್ಯಾಷನಲ್ ಅರ್ಬನ್ ಲೈವ್ಲಿಹುಡ್ ಮಿಷನ್ ಯೋಜನೆಯಡಿ ಸ್ವ ಸಹಾಯ ಗುಂಪು ಚಟುವಟಿಕೆ, ವೈಯಕ್ತಿಕ ಚಟುವಟಿಕೆ ನಡೆಸಲು ಸಾಲ, ಸಹಾಯಧನ, ತರಬೇತಿಗಳನ್ನು ನೀಡಲಾಗುತ್ತಿದೆ.

ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು ಇಡೀ ಕುಟುಂಬದ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ. ರೂ.1.15 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯುವ ಈ ಯೋಜನೆಯ ಮಹತ್ವವನ್ನು ಫಲಾನುಭವಿಗಳು ಅರಿತು ಉಪಯೋಗ ಪಡೆಯಬೇಕು. ಈ ಯೋಜನೆಯಡಿ ವೈಯಕ್ತಿಕ, ಗುಂಪು ಚಟುವಟಿಕೆಗಳು, ತರಬೇತಿ, ನೇರ ಸಾಲ, ಸಹಾಯಧನ ಹೀಗೆ ಹಲವಾರು ಉಪಯೋಗಗಳಿವೆ. ಹಾಗೆಯೇ ಬ್ಯಾಂಕ್‍ನವರು ಕೂಡ ಈ ಯೋಜನೆಗೆ ಮೊದಲ ಆದ್ಯತೆ ನೀಡಿ ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಸಹಕರಿಸಬೇಕು. ಆಗ ಅದು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿ ಯೋಜನೆ ಸಾಕಾರಗೊಳ್ಳುವುದು. ಇಷ್ಟೆಲ್ಲಾ ಸೌಲಭ್ಯ ನೀಡುವುದರ ಹಿಂದೆ ಸರ್ಕಾರದ ಒಂದು ಒಳ್ಳೆಯ ಕಾಳಜಿ ಇದ್ದು ಬ್ಯಾಂಕ್‍ನವರು ಕೂಡ ಇದನ್ನು ಬೆಂಬಲಿಸಬೇಕು. ಇಂತಹ ಯೋಜನೆಗಳಿಂದ ಬಡ ಕುಟುಂಬಗಳ ಸುಸ್ಥಿರ ಆದಾಯ ಉತ್ಪನ್ನಕ್ಕೆ ಸಹಕಾರಿಯಾಗಲಿದೆ ಎಂದರು.

ಕೆನರಾ ಬ್ಯಾಂಕ್‍ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಸಂದೀಪ್ ಕುಮಾರ್ ಮಾತನಾಡಿ, ಬ್ಯಾಂಕ್‍ಗಳು ಮತ್ತು ಅರ್ಜಿದಾರರ ನಡುವಿನ ಸಮನ್ವಯದ ಕೊರತೆಯೇ ಹಲವು ಯೋಜನೆಗಳ ಹಿನ್ನಡೆಗೆ ಕಾರಣವಾಗಿದ್ದು, ಸಮನ್ವಯತೆ ಸಾಧಿಸುವ ಕೆಲಸ ಆಗಬೇಕು. ಯಾವುದೇ ಯೋಜನೆ ಅಥವಾ ವ್ಯಕ್ತಿಗತವಾಗಿ ಆರ್ಥಿಕ ಶಿಸ್ತು ಬಹು ಮುಖ್ಯ. ಬೀದಿಬದಿ ವ್ಯಾಪಾರಸ್ಥರಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ನೀಡುವ ವೇಳೆ ಬ್ಯಾಂಕ್‍ನವರು ಅವರಿಗೆ ಒಂದು ಕ್ಯೂಆರ್ ಕೋಡ್ ಕೂಡ ನೀಡಬೇಕು. ಅದರಿಂದ ಅವರಿಗೆ ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಬ್ಯಾಂಕುಗಳ ಸಹಕಾರ ಅತಿ ಮುಖ್ಯವಾಗಿದ್ದು, ಶೀಘ್ರವಾಗಿ ಅರ್ಜಿ ವಿಲೇ ಮಾಡುವ ಮೂಲಕ ಸಹಕರಿಸಬೇಕೆಂದು ವಿನಂತಿಸಿದರು.

ಇದೇ ವೇಳೆ ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಸೇವೆ ನೀಡಿದ ಐದು ಬ್ಯಾಂಕುಗಳ ಅಧಿಕಾರಿಗಳಿಗೆ ಗೌರವಿಸಲಾಯಿತು.

ಕಾರ್ಯಾಗಾರದಲ್ಲಿ ನಬಾರ್ಡ್ ಬ್ಯಾಂಕ್ ಅಧಿಕಾರಿ ರವಿ, ನಂದಿನಿ ವಿವಿಧ ಬ್ಯಾಂಕುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕೌಶಲ್ಯಾಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ್ ಸ್ವಾಗತಿಸಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಮ್ಯಾನೇಜರ್ ಯತೀಶ್ ವಂದಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಿನಿ ಪ್ರೇಕ್ಷಕರಿಗೆ ಕಿಕ್ ಏರಿಸಲಿರುವ ಓಲ್ಡ್ ಮಾಂಕ್

0

ಕನ್ನಡದ ‘ಓಲ್ಡ್ ಮಾಂಕ್’ ಚಲನಚಿತ್ರವು ಫೆಬ್ರವರಿ 25 ರಂದು ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಪ್ರಯುಕ್ತ ಚಿತ್ರತಂಡವು ನಗರದ ಭಾರತ್ ಸಿನೆಮಾಸ್ ನಲ್ಲಿ ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು.

‘ಓಲ್ಡ್ ಮಾಂಕ್’ ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ಶ್ರೀನಿ(ಶ್ರೀನಿವಾಸ್) ಅವರು ಮಾತನಾಡಿ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ ಆಗಿ ನಟಿಸಿದ್ದಾರೆ. ಪ್ರಮುಖ ತಾರಾಗಣದಲ್ಲಿ ಸಿಹಿಕಹಿ ಚಂದ್ರು, ಎಸ್.ನಾರಾಯಣ್ ನಟಿಸಿದ್ದಾರೆ.

ಚಿತ್ರೀಕರಣದ ಸಂದರ್ಭದಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಸೇರಿದಂತೆ ರಾಜ್ಯದ ಐದು ಕಡೆಗಳಲ್ಲಿ ಆಡಿಷನ್ ನಡೆಸಲಾಗಿತ್ತು. ಆಡಿಷನ್ ವೇಳೆ ಶಿವಮೊಗ್ಗದ ವಿಜಯಲಕ್ಷ್ಮಿ, ಜಯತಮ್ಮ, ಬಾಲ ನಟ ಸಾತ್ವಿಕ್ ಸೇರಿದಂತೆ ಏಳು ಜನ ಕಲಾವಿದರು ಆಯ್ಕೆಯಾಗಿದ್ದರು. ಆಯ್ಕೆ ಆದವರು ಉತ್ತಮವಾಗಿ ನಟಿಸಿದ್ದಾರೆ ಎಂದು ನಾಯಕ ನಟ ಹಾಗೂ ನಿರ್ದೇಶಕ ಶ್ರೀನಿ ಅವರು ಹೇಳಿದರು.

ಚಿತ್ರದ ಬಗ್ಗೆ ಮಾತನಾಡಿದ ಇವರು ಹೆಸರಿನ ಬಗ್ಗೆ ಸಾಕಷ್ಟು ಜನ ಪ್ರಶ್ನಿಸಿದ್ದಾರೆ. ‘ಓಲ್ಡ್ ಮಾಂಕ್’ ನ ಕನ್ನಡ ಅರ್ಥ ಹಳೆ ಸನ್ಯಾಸಿ ಎಂದಾಗುತ್ತದೆ. ಖಂಡಿತಾ ಈ ಚಿತ್ರ ಪ್ರೇಕ್ಷಕರಿಗೆ ಓಲ್ಡ್ ಮಾಂಕ್ ಚಿತ್ರ ಕಿಕ್ ನೀಡಲಿದೆ. ಶಿವಮೊಗ್ಗದ ಯಾವ ಚಿತ್ರಮಂದಿರದಲ್ಲಿ ‘ಓಲ್ಡ್ ಮಾಂಕ್’ ತೆರೆಕಾಣಲಿದೆ ಎಂದು ನಿರ್ಧರಿಸಿಲ್ಲ. ಆದಷ್ಟು ಬೇಗ ಈ ಬಗ್ಗೆ ತಿಳಿಸಲಾಗುವುದು ಎಂದು ಶ್ರೀನಿ ಹೇಳಿದರು.

ಈ ಚಿತ್ರದ ಕಥೆಯು ದೇವಲೋಕದಲ್ಲಿ ಪ್ರಾರಂಭವಾಗುತ್ತದೆ. ಇದೊಂದು ನಾರದನ ಕಥೆಯಾಗಿರುವುದರಿಂದ ‘ಓಲ್ಡ್ ಮಾಂಕ್’ ಎಂದು ಹೆಸರಿಡಲಾಗಿದೆ. ಭೂಲೋಕದಲ್ಲಿ ನಾರದ ಪ್ರೀತಿಗೆ ಸಿಲುಕುವ ಪರಿಯನ್ನು ವಿಭಿನ್ನವಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಶ್ರೀನಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಾಲನಟ ಸಾತ್ವಿಕ್, ವಿಜಯಲಕ್ಷ್ಮಿ, ಕೃಷ್ಣಾನಂದ ಪ್ರಭು, ಗೌರಿ ಚಂದ್ರಚಕೋರಿ ಅವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಶ್ಲೀಲ ಹೇಳಿಕೆಯಿಂದ ಜೈನ ಸಮಾಜಕ್ಕೆ ನೋವುಂಟಾಗಿದೆ

0

ಶಿವಮೊಗ್ಗದ ಜೈನಸಮಾಜ ಸಂಸ್ಥೆ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಜೈನರ ಆರಾಧ್ಯ ದೇವರಾದ ಭಗವಾನ್ ಬಾಹುಬಲಿಯ (ಗೊಮ್ಮಟೇಶ್ವರ) ಬಗ್ಗೆ ಹಾಗೂ ಜೈನ ಧರ್ಮದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಕಾಮೆಂಟ್ ಹಾಕಿರುವ ಬಗ್ಗೆ ಹಾಗೂ ಸುದ್ದಿ ಮಾಧ್ಯಮದಲ್ಲಿ ದೇವರನ್ನು ಅವಮಾನ ಮಾಡಿರುವ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.

ಮೈಸೂರಿನ ನ್ಯೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಆಯೂಬ್ ಖಾನ್ ಎಂಬ ವ್ಯಕ್ತಿ ಟಿವಿ ಮಾಧ್ಯಮದಲ್ಲಿ ಮಾತನಾಡುತ್ತಾ ನಮ್ಮ ಆರಾದ್ಯ ದೇವರಾದ ಭಗವಾನ್ ಶ್ರೀ ಗೊಮ್ಮಟೇಶ್ವರ ಬಗ್ಗೆ ಅಶ್ಲೀಲವಾಗಿ ಮಾತನಾಡಿರುತ್ತಾರೆ.
ಆಯೂಬ್ ಖಾನ್ ಮತ್ತು ಮಂಜು ಬಾದರ ದಿನ್ನಿ ಪುಟ್ಟರಾಜು ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಚಿಮ್ಮಲಗಿ ಹಾಗೂ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಯುವಕರ ಸಂಘ ಚಿಮ್ಮಲಗಿ ಇವರುಗಳು ಜೈನ ಸಮಾಜದ ಆಚರಣೆಯ ಬಗ್ಗೆ ಮತ್ತು ಜೈನ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಫೇಸ್ ಬುಕ್ ನಲ್ಲಿ ಅತಿ ಕೆಟ್ಟದಾಗಿ ಕಾಮೆಂಟ್ ಹಾಕಿದ್ದರಿಂದ ಅವರ ಹೇಳಿಕೆಗಳಿಂದ ಸಂಪೂರ್ಣ ಜೈನ ಸಮಾಜಕ್ಕೆ ಅತ್ಯಂತ ನೋವು ಉಂಟಾಗಿರುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಪಾಯಿಂಟ್ ಪಟ್ಟಿಯಲ್ಲಿ ಪೈರೆಟ್ಸ್ ಅಗ್ರಸ್ಥಾನ

0

ರೇಡರ್ ಸಚಿನ್ (14 ಅಂಕ) ಅವರ ಅಬ್ಬರದ ಆಟದ ನೆರವಿನಿಂದ ಪಟ್ನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ ನ ಎಂಟನೇ ಆವೃತ್ತಿಯ 116ನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಪೈರೇಟ್ಸ್ ಬಳಗ ಈಗಾಗಲೇ ಪ್ಲೇಆಫ್ ಗೆ ಅರ್ಹತೆ ಗಿಟ್ಟಿಸಿದ್ದರೆ, ಟೈಟನ್ಸ್ ತಂಡ ಪ್ಲೇಆಫ್ ಸ್ಪರ್ಧೆಯಿಂದ ಹೊರ ಬಿದ್ದಿದೆ.

ವೈಟ್ ಫೀಲ್ಡ್ ನ ಶರ್ಟನ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಪೈರೇಟ್ಸ್ ತಂಡ 38-30 ಅಂಕಗಳಿಂದ ಯು.ಪಿ.ಯೋಧಾ 44-28 ಅಂಕಗಳಿಂದ ದಬಾಂಗ್ ದಿಲ್ಲಿ ತಂಡವನ್ನು ಮಣಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೂರು ಉಪಗ್ರಹಗಳ ಯಶಸ್ವಿ ಉಡಾವಣೆ

0

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ 2022ರ ಮೊದಲ ಉಡಾವಣೆ ಯಶಸ್ವಿಯಾಗಿದೆ. ಭೂ ಸರ್ವೇಕ್ಷಣಾ ಉಪಗ್ರಹ ಇಒಎಸ್ -04 ಸೇರಿದಂತೆ ಮೂರು ಉಪಗ್ರಹಗಳು ನಿಗದಿತ ಕಕ್ಷೆ ಸೇರಿವೆ.

ಸುಮಾರು 25 ಗಂಟೆ 30 ನಿಮಿಷಗಳ ಅಗತ್ಯ ಪೂರ್ವಸಿದ್ಧತೆ ಬಳಿಕ ಮೂರು ಉಪಗ್ರಹಗಳನ್ನು ಹೊತ್ತ ಉಡಾವಣಾ ವಾಹನ ಪಿಎಸ್ಎಲ್ ವಿ -ಸಿ52 ಸೋಮವಾರ ನಸುಕಿನ 5.59ಕ್ಕೆ ನಭಕ್ಕೆ ನೆಗೆಯಿತು.

ಉಡಾವಣೆಗೊಂಡ 17 ನಿಮಿಷ 34 ಸೆಕೆಂಡಿಗೆ ಸರಿಯಾಗಿ ಮೂರೂ ಉಪಗ್ರಹಗಳು ಉಡಾವಣಾ ವಾಹನದಿಂದ ಬೇರ್ಪಟ್ಟು ನಿಗದಿತ ಕಕ್ಷೆ ಸೇರಿದವು. ಇಬ್ಬನಿ ಹಾಗೂ ಚಳಿಯಿಂದ ಕೂಡಿದ ವಾತಾವರಣದಲ್ಲಿಯೂ ಸತೀಶ್ ಧವನ್ ಉಡಾವಣಾ ಕೇಂದ್ರ ಹಾಗೂ ಉಪಗ್ರಹಗಳನ್ನು ನಿಯಂತ್ರಿಸುತ್ತಿರುವ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಆಂಡ್ ಕಮಾಂಡ್ ನೆಟ್ ವರ್ಕ್ ಕೇಂದ್ರದಲ್ಲಿ ಸಂತೋಷದ ಕಟ್ಟೆ ಒಡೆಯಿತು.

ಇಒಎಸ್-04 ಹಾಗೂ ಇತರ ಎರಡು ಉಪಗ್ರಹಗಳು ನಿಗದಿತ ಕಕ್ಷೆ ಸೇರಿದೆ. ಈ ಯಶಸ್ಸು ಹಲವು ರೀತಿಯಲ್ಲಿ ದೇಶಕ್ಕೆ ಗಣನೀಯ ಕೊಡುಗೆ ನೀಡಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು ತಿಳಿಸಿದ್ದಾರೆ.
ಎಸ್. ಸೋಮನಾಥ ಅವರು ಇಸ್ರೋ ಅಧ್ಯಕ್ಷರಾಗಿ ನೇಮಕವಾದ ಬಳಿಕ ಮೊದಲ ಉಡಾವಣೆ ಇದಾಗಿದೆ.

ರೇಡಾರ್ ಇಮೇಜಿಂಗ್ ಉಪಗ್ರಹವಾದ ಇಒಎಸ್-04 ಸಣ್ಣ ಉಪಗ್ರಹಗಳಾದ ಇನ್ ಸ್ಪಾಯರ್ ಸ್ಯಾಟ್-1 ಮತ್ತು ಐಎನ್ ಎಸ್ ಟಿ-2ಟಿಡಿ ಉಪಗ್ರಹಗಳು ತಮ್ಮ ಕಕ್ಷೆಗೆ ಸೇರ್ಪಡೆಯಾಗಿದೆ.
ಇಒಎಸ್- 04 ಹತ್ತು ವರ್ಷದ ಕಾರ್ಯಾವಧಿ ಹೊಂದಿದ್ದು, ಎಲ್ಲಾ ಋತುಗಳಲ್ಲಿಯೂ ಕೃಷಿ, ಬಿತ್ತನೆ, ಅರಣ್ಯೀಕರಣ ಚಟುವಟಿಕೆಗೆ ಸಂಬಂಧಿಸಿದಂತೆ ಹವಾಮಾನ ಪರಿಸ್ಥಿತಿ ಕುರಿತು ಸ್ಪಷ್ಟ ಚಿತ್ರಗಳನ್ನು ಸೆರೆ ಹಿಡಿಯಲಿದೆ. ಜೊತೆಗೆ ನದಿಗಳ ನೀರಿನ ಮಟ್ಟ, ಪ್ರವಾಹದ ಸಂಭವನೀಯತೆಯನ್ನೂ ಅರಿಯಲು ಈ ಉಪಗ್ರಹ ನೆರವಾಗುತ್ತದೆ ಎಂದು ಇಸ್ರೋ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ.ಬಂಗಾಳ ನಾಲ್ಕೂ ನಗರಪಾಲಿಕೆ ಟಿಎಂಸಿ ತೆಕ್ಕೆಗೆ

0

ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯು ಪ್ರಾಬಲ್ಯ ಮುಂದುವರಿಸಿದೆ.

ಚುನಾವಣೆ ನಡೆದ ನಾಲ್ಕೂ ನಗರಪಾಲಿಕೆಗಳಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಚಂದೆರ್ನಗೋಲ್ , ಅಸಾನೊಲ್, ಬಿಧಾನ್ ನಗರ, ತನಿಖೆಗಳಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಟಿಎಂಸಿ ಯಶಸ್ವಿಯಾಗಿದೆ.
ಸಿಪಿಐ ಹಿಡಿತದಲ್ಲಿದ್ದ ಸಿಲಿಗುರಿ ಪಾಲಿಕೆಯನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಪರಾಭವ ಅನುಭವಿಸಿದರೂ,ಅಸಾನೊಲ್ ಹಾಗೂ ಸಿಲಿಗುರಿಯಲ್ಲಿ ಮಾತ್ರ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಪಕ್ಷದ ಗೆಲುವಿನ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿಯವರು, ಇದು ಜನರ ಗೆಲುವು ಎಂದಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಫೆ.12ರಂದು ಮತದಾನ ನಡೆದಿತ್ತು.