Tuesday, February 17, 2026
Tuesday, February 17, 2026
Home Blog Page 1718

ಕನ್ನಡದ ಕೆನೆ ಕವಿ ಕಣವಿ ಕಣ್ಮರೆ

0

ಚೆನ್ನವೀರ ಕಣವಿ ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದೇ ಪ್ರಸಿದ್ದ. ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಇವರು ಒಬ್ಬರಾಗಿದ್ದಾರೆ.

ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೇ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.
ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು.
1956ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.

ಇವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕಾವ್ಯಾಕ್ಷಿ, ಭಾವಜೀವಿ,ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದಾರಿ ದೀಪ, ನೆಲ ಮುಗಿಲು,ಎರಡು ದಡ,ನಗರದಲ್ಲಿ ನೆರಳು, ಜೀವ ಧ್ವನಿ, ಕಾರ್ತಿಕದ ಮೋಡ, ಜಿನಿಯಾ, ಹೊಂಬೆಳಕು ಇವು ಚೆನ್ನವೀರ ಕಣವಿಯವರ ಪ್ರಮುಖ ಕವನ ಸಂಕಲನಗಳಾಗಿವೆ.
ಕವಿತೆ ಜನತೆಗೆ ತಲುಪುವುದು ಅದಕ್ಕೆ ಎಂದು ಬಯಸುತ್ತಾ ಬಂದ ಕವಿಗಳಲ್ಲಿ ಕಣವಿ ಅವರು ಕೂಡ ಒಬ್ಬರಾಗಿದ್ದಾರೆ. ಕಣವಿಯವರ ಗೀತೆಗಳಲ್ಲಿ ಸಹಜ ಕವಿಯೊಬ್ಬ ಬರೆದಾಗ ಮಾತ್ರ ಕಾಣಿಸಿಕೊಳ್ಳಬಲ್ಲ ಅನೇಕ ಕಾವ್ಯಾತ್ಮಕ ಹೊಳಪುಗಳು ವಿಶೇಷವಾಗಿ ಕಂಡುಬರುತ್ತವೆ. ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದಲ್ಲಿ ಹಸಿರು ಹುಲ್ಲು ಮಕಮಲ್ಲಿನಲಿ, ಹೂವು ಹೊರಳುವುವು ಸೂರ್ಯನ ಕಡೆಗೆ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ನೀವು ಜನ ಮನೆತನ ಹಾಸುಹೊಕ್ಕಾಗಿರುವ ಕಣವಿ ಅವರ ಪ್ರಮುಖ ಕೃತಿಗಳಾಗಿವೆ.

ಇವರ “ಜೀವಧ್ವನಿ” ಎಂಬ ಕೃತಿಗೆ 1981ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
1996ರಲ್ಲಿ ಹಾಸನದಲ್ಲಿ ನಡೆದ ಅರವತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು.
ಆಳ್ವಾಸ್ -ನುಡಿಸಿರಿ 2008 “ರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ,ಪಂಪ ಪ್ರಶಸ್ತಿ,
ಬಸವ ಗುರು ಕಾರುಣ್ಯ ಪ್ರಶಸ್ತಿ,
ನಾಡೋಜ ಪ್ರಶಸ್ತಿ,
ಕರ್ನಾಟಕ ಕವಿರತ್ನ ಪ್ರಶಸ್ತಿ,

ಅನಕೃ ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳಾಗಿವೆ.
ಇವರಿಗೆ ‘ನಾಡೋಜ ಮತ್ತು ಪಂಪ ಪ್ರಶಸ್ತಿ ಕೂಡ ಸಂದಿವೆ.
2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.

ಚೆನ್ನವೀರ ಕಣವಿಯವರು ಫೆಬ್ರುವರಿ 16 2022 ರಂದು ಇಹಲೋಕ ತ್ಯಜಿಸಿದ್ದಾರೆ.

ನಾಡು ಕಂಡಂತಹ ಅತ್ಯಂತ ಸೃಜನಶೀಲ ಸಾಹಿತ್ಯ ರಚನೆಕಾರರು, ಚಂಬೆಳಕಿನ ಕವಿ, ನಾಡೋಜ ಶ್ರೀ ಚೆನ್ನವೀರ ಕಣವಿಯವರು ನಿಧನರಾದ ವಿಷಯ ತಿಳಿದು ತುಂಬಾ ದುಃಖಿ ತನಾಗಿದ್ದೇನೆ.
ಸಾಹಿತ್ಯದ ಮುಖಾಂತರ ಅವರು ತಮ್ಮ ಕಲ್ಪನೆ ಹಾಗೂ ವಾಸ್ತವಾಂಶವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ ಕವಿಯಾಗಿದ್ದರು. ಪ್ರಶಸ್ತಿಗಳಿಗೆ ಗೌರವ ಬರುವ ವ್ಯಕ್ತಿತ್ವ ಅವರದಾಗಿತ್ತು.

ಅವರ ನಿಧನದಿಂದ ಕನ್ನಡ ಸಾರಸತ್ವ ಲೋಕಕ್ಕೆ ಬಹುದೊಡ್ಡ ಹಾನಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.

ಖ್ಯಾತ ಕವಿ ಶ್ರೀ ಚನ್ನವೀರ ಕಣವಿರವರು ದಾವಣಗೆರೆಗೆ ಬಂದಾಗ ಅವರ ‘ಕ್ಯಾರಿಕೇಚರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವ್ಯಂಗ್ಯಚಿತ್ರಕಾರ ಎಚ್.ಬಿ.ಮಂಜುನಾಥ ರವರು ರಚಿಸಿದಾಗ ನೋಡಿ ಮೆಚ್ಚಿದ ಕಣವಿರವರು ಅದಕ್ಕೆ ತಮ್ಮ ಹಸ್ತಾಕ್ಷರ ನೀಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

Shimoga News – Tuesday, 15 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

Shivamogga Market News For 16/02/2022

0
CommodityVarietyGradeArrivalsUnitsMin (Rs.)Max (Rs.)Modal (Rs.)
ArecanutBetteAverage304Quintal460585120050200
ArecanutGorabaluAverage1098Quintal170003424933400
ArecanutRashiAverage2577Quintal430964609945500
ArecanutSarakuAverage157Quintal510097457067100
BeansBeans (Whole)Average18Quintal160020001800
BeetrootBeetrootAverage5Quintal180020001900
Bengal GramdalBengal Gram DalAverage76Quintal650070006750
BengalgramJawari/LocalAverage29Quintal600062006100
Black GramdalBlack Gram DalAverage98Quintal90001150010250
BrinjalBrinjalAverage8Quintal140016001500
CabbageCabbageAverage20Quintal140016001500
CarrotCarrotAverage2Quintal480050004900
CauliflowerCauliflowerAverage3Quintal180020001900
Chilly RedOtherAverage65Quintal19892309913231
Coriander SeedCoriander SeedAverage5Quintal800095008750
CottonNH-44 COTTONAverage42Quintal2190143719812
Green ChillyGreen ChillyAverage2Quintal500060005500
Green GingerGreen GingerAverage1Quintal140016001500
Green GramdalGreen Gram DalAverage21Quintal850090008750
GreengramGreen Gram (Whole)Average21Quintal700085007750
JaggeryUndeAverage80Quintal360038003700
JowarJowar ( White)Average3004Quintal250035003000
OnionOnionAverage37Quintal280038003300
PotatoLocalAverage28Quintal180020001900
RaddishRaddishAverage14Quintal8001000900
RagiRedAverage61Quintal250032002850
RiceCoarseAverage133Quintal190027002250
RiceFineAverage397Quintal350068005250
RiceMediumAverage264Quintal280048003300
RidgeguardRidgeguardAverage11Quintal180020001900
Tamarind FruitTamarind FruitAverage51Quintal1499148898610
TomatoTomatoAverage225Quintal400600500
Tur DalTur DalAverage72Quintal900095009250
WheatMediumAverage335Quintal260028002700

*Content by Department of Agricultural Marketing, Govt. of Karnataka. 

Arecanut prices in Shivamogga

0

Arecanut Daily Market SHIVAMOGGA Report For 15/02/2022

CommodityVarietyGradeArrivalsUnitsMin (Rs.)Max (Rs.)Modal (Rs.)
ArecanutBetteAverage85Quintal460105136950600
ArecanutGorabaluAverage256Quintal170053439933700
ArecanutRashiAverage1173Quintal421094582245559
ArecanutSarakuAverage127Quintal528697569667000

*Content by Department of Agricultural Marketing, Govt. of Karnataka. 

ನಯನ ಮನೋಹರ ಕಾಪು ಬೀಚ್

0

ಬೀಚ್ ಎಂದಾಕ್ಷಣ, ನಮಗೆ ತಕ್ಷಣ ನೆನಪಾಗುವುದು ಗೋವಾ ಬೀಚ್. ಆದ್ರೆ ನಮ್ಮ ರಾಜ್ಯದಲ್ಲಿ ಅನೇಕ ಸುಂದರವಾದ ಬೀಚ್ ಗಳಿವೆ ಕಂಡ್ರೀ… ಅವುಗಳ ಪೈಕಿ ಯಲ್ಲಿ ಕಾಪು ಬೀಚ್ ಕೂಡ ಒಂದಾಗಿದೆ. ಎಲ್ಲಿದೆ ಕಾಪು ಬೀಚ್? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಬೀಚ್ ಉಡುಪಿ ಜಿಲ್ಲೆಯಲ್ಲಿನ ಅನೇಕ ಬೀಚ್ ಗಳಲ್ಲಿ ಈ ಬೀಚ್ ಕೂಡ ಪ್ರಸಿದ್ಧಿಯಾಗಿದೆ. ಮಂಗಳೂರಿನಿಂದ ಸುಮಾರು 45 ಕಿ.ಮೀ. ಮತ್ತು ಉಡುಪಿಯಿಂದ ಸುಮಾರು 15 ಕಿ. ಮೀ. ದೂರದಲ್ಲಿದೆ.

ಮಂಗಳೂರು- ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ 17ರಲ್ಲಿದೆ ಕಾಪು. ಕಾಪು ಪೇಟೆಯಲ್ಲಿ ಇಳಿದು, ಪಶ್ಚಿಮಕ್ಕೆ ನಡೆದು ಬಂದ್ರೆ, ಕಾಣಸಿಗುವುದೇ ನೀರಿನ ವಿಶಾಲವಾದ ಸಮುದ್ರ. ಅದೇ ನೀವು ನೋಡದಿರುವ ಕಾಪು ಬೀಚ್ ಕಂಡ್ರೀ…

ಅರಬ್ಬಿ ಸಮುದ್ರದ ಭಾಗವಾಗಿರುವ ಈ ಬೀಚ್ ಪ್ರಕೃತಿದತ್ತವಾಗಿ ರೂಪುಗೊಂಡಿದೆ. ಅಬ್ಬಬ್ಬಾ…! ಎಲ್ಲಿ ನೋಡಿದ್ರು ನೀಲಿಬಣ್ಣದ ವಿಶಾಲವಾದ ನೀರು.ಅಲ್ಲಲ್ಲಿ ಬಂಡೆಗಳು. ಕ್ಷಣಕ್ಕೊಮ್ಮೆ ಬರುವಂತಹ ಅಲೆಗಳು. ಆಹಾ! ಆ ಸೌಂದರ್ಯವನ್ನು ನೋಡೋಕೆ ಎರಡು ಕಣ್ಣುಗಳು ಸಾಲದು.

ಈ ಬೀಚ್ ಸೌಂದರ್ಯವನ್ನು ವೀಕ್ಷಿಸೋಕೆ ನಮ್ಮ ರಾಜ್ಯಗಳಿಂದ ಅಲ್ಲದೇ, ಬೇರೆ ರಾಜ್ಯಗಳಿಂದಲೂ ಸಹ ಪ್ರವಾಸಿಗರು ಬರುತ್ತಾರೆ. ಸಮುದ್ರಗಳ ಅಲೆಗಳೊಂದಿಗೆ ಆಟ ಆಡೋಕೆ ಒಂದುಸಲ ಸಮುದ್ರಕ್ಕೆ ಇಳಿದರೆ, ಸಮುದ್ರದಿಂದ ಆಚೆ ಬರೋಕೆ ಮನಸ್ಸೇ ಆಗಲ್ಲ ಕಣ್ರೀ…

ಮುಸ್ಸಂಜೆ ವೇಳೆಯಂತೂ ವಾ! ಹೇಳಲು ಅಸಾಧ್ಯ… ಯಾಕಂದ್ರೆ, ಈ ವೇಳೆಯಲ್ಲಿ ಅರಬ್ಬಿ ಸಮುದ್ರ ವೀಕ್ಷಿಸಿದರೆ, ಆ ತುದಿಯಲ್ಲಿ ಸಮುದ್ರದ ಒಳಗೆ ಸೂರ್ಯ ಅವಿತು ಕುಳಿತಂತೆ ಭಾಸವಾಗುತ್ತೇ.

ನಿಜಕ್ಕೂ ಇಂತಹ ರಮಣೀಯ ನೋಟವನ್ನು ವೀಕ್ಷಿಸುವುದಾದರೆ ಇಂತಹ ಬೀಚ್ ಗಳ ತೀರಕ್ಕೆ ಬರಬೇಕು. ಈ ಸ್ಥಳ ತೆಂಗಿನ ಮರಗಳು ಹಸಿರಿನಿಂದ ಕಂಗೊಳಿಸುವಂತಹ ಸುಂದರ ತಾಣ ಇದಾಗಿದೆ. ಈ ಸಮುದ್ರತೀರದ ಸಮೀಪದಲ್ಲಿ ಜೈನ ಬಸದಿಗಳ ಅವಶೇಷಗಳು ಕೂಡ ಇದೆ. ಮತ್ತೊಂದು ವಿಶೇಷ ಅಂದ್ರೆ ಈ ಬೀಚ್ ಕಾಪು ದೀಪಸ್ತಂಬವನ್ನು ಒಳಗೊಂಡಿದೆ. ಕಾಪು ದೀಪಸ್ತಂಬವನ್ನು 1901 ರಲ್ಲಿ ನಿರ್ಮಿಸಲಾಗಿದೆ. ಈ ದೀಪಸ್ತಂಬವು ಸುಮಾರು 27 ಮೀಟರ್ ಎತ್ತರವಿದೆ. ಈ ದೀಪಸ್ತಂಭವನ್ನು ಬಂಡೆಯ ಮೇಲೆ ನಿರ್ಮಿಸಲಾಗಿದೆ. ಮತ್ತು ಶತಮಾನಗಳು ಕಳೆದರೂ ಸಹ, ಸುಭದ್ರವಾಗಿ ನಿಂತಿದೆ. ಹಿಂದಿನ ಕಾಲದಲ್ಲಿ ಉಪಗ್ರಹಗಳ ಆಧಾರಿತ ತಂತ್ರಜ್ಞಾನ ಮತ್ತು ಮಾರ್ಗದರ್ಶಕ ಇರಲಿಲ್ಲ. ಆದ್ದರಿಂದ ಕಡಲ ತೀರದಲ್ಲಿರುವ ದೀಪಸ್ತಂಭಗಳು ಹಡಗಿನ ನಾವಿಕರಿಗೆ ದಾರಿದೀಪ ಗಳಾಗಿದ್ದವು.

ಕಾಪು ದೀಪಸ್ತಂಭವು ಪ್ರತಿದಿನ ಸಂಜೆ 4ರಿಂದ 6ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ. ಇಲ್ಲಿ ಪ್ರವಾಸಿಗರು ಮೆಟ್ಟಿಲುಗಳನ್ನು ಹತ್ತಿ ಹೋಗಿ ಸಮುದ್ರವನ್ನು ವೀಕ್ಷಿಸಬಹುದು.

ಕೆಲವು ವರ್ಷಗಳ ಹಿಂದೆ ಕಾಪು ಸಮುದ್ರ ಅವ್ಯವಸ್ಥೆ ಗೊಂಡಿತ್ತು. ಆದರೆ ಈಗ ಅಭಿವೃದ್ಧಿಯನ್ನು ಕಂಡಿದೆ. ನಾವು ಎಷ್ಟೋ ಬೀಚ್ ಗಳನ್ನು ನೋಡಿರುತ್ತೇವೆ. ಅಲ್ಲಲ್ಲಿ ಕಸದ ರಾಶಿ, ಪ್ಲಾಸ್ಟಿಕ್, ಇತ್ಯಾದಿ ತ್ಯಾಜ್ಯ ವಸ್ತುಗಳು ಅಲ್ಲಲ್ಲಿ ಬಿದ್ದಿರುತ್ತವೆ. ಆದ್ರೆ ಇಲ್ಲಿನ ಸಮುದ್ರದ ತೀರದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್, ತ್ಯಾಜ್ಯವಸ್ತುಗಳು ಕಾಣಸಿಗುವುದಿಲ್ಲ. ಸಮುದ್ರತೀರ ಸ್ವಚ್ಛಂದವಾಗಿ ಕಂಗೊಳಿಸುತ್ತಿದೆ. ಇಲ್ಲಿನ ಪ್ರತಿಯೊಂದು ವ್ಯವಸ್ಥೆ ಕೂಡ ಚೆನ್ನಾಗಿದೆ. ಈ ವ್ಯವಸ್ಥೆ ರೂಪುಗೊಳ್ಳಲು ಕಾರಣಕರ್ತರಾದ ಅಲ್ಲಿನ ಸಿಬ್ಬಂದಿ ವರ್ಗ ಮತ್ತು ಅಲ್ಲಿನ ವ್ಯವಸ್ಥಾಪಕರ ಕಾರ್ಯ ಪ್ರಶಂಸನೀಯ.

ಪ್ರವಾಸಿಗರಿಗೆ ಮನಸ್ಸಿಗೆ ಮುದ ನೀಡುವಂತಹ ಒಂದೊಳ್ಳೆ ತಾಣ ಕಾಪುಬೀಚ್ ಆಗಿದೆ. ನೀವು ಬೀಚಿನ ಸೌಂದರ್ಯವನ್ನು ಅನುಭವಿಸಬೇಕಾದರೇ, ಒಂದೊಮ್ಮೆ ನಿಮ್ಮ ಕುಟುಂಬದವರೊಂದಿಗೆ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ

0

ಜಗತ್ತು ಬದಲಾಗುತ್ತಿದೆ. ಎಲ್ಲರಿಗೂ ಎಲ್ಲಾ ಸೌಕರ್ಯಗಳು, ಸ್ನೇಹ ಸಂಬಂಧಗಳು, ಎಲ್ಲೂ ಜೊತೆಗಿದ್ದರೂ, ಮತ್ತೊಬ್ಬರ ಹತ್ತಿರ ಇರುವ ವಸ್ತುಗಳ ಮೇಲೆ ಆಸೆ ಜಾಸ್ತಿ. ತಮ್ಮ ಹತ್ತಿರ ಇರುವ ಅದೆಷ್ಟೋ ಸಂಬಂಧಗಳನ್ನು ನಿರ್ಲಕ್ಷಿಸುತ್ತಾರೆ.

ಸದಾ ಒಂದಿಲ್ಲೊಂದು ವಿಷಯಕ್ಕೆ ಚಿಂತಿಸುತ್ತಾ ಜೀವನವನ್ನು ಸಾಗಿಸುತ್ತಾರೆ.
ಹಾಗಾಗಿಯೇ ಇರುವ ಭಾಗ್ಯವ ನೆನೆದು ಬಾರೆನೆಂಬೂದನ್ನು ಬಿಡು ಹರುಷಕ್ಕಿದೆ ದಾರಿ ಎಂದು ಡಿವಿಜಿಯವರು ಹೇಳುತ್ತಾರೆ. ಆ ಮಾತು ಅಕ್ಷರಶಃ ಸತ್ಯವಾಗಿದೆ.
ಲೋಕದಲ್ಲಿ ಜನರನ್ನು ಮೆಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಸ್ವತಃ ಆ ಭಗವಂತನನಿಂದಲೂ ಸಾಧ್ಯವಿಲ್ಲವೆಂದರೆ ನಿಮಗೆ ಆಶ್ಚರ್ಯವೆನಿಸಬಹುದು.
ಇದು ಏನಿದ್ದರೂ, ಇಲ್ಲದಿದ್ದರೂ ಪ್ರಪಂಚದ ಲೋಪದೋಷಗಳನ್ನು ಹುಡುಕಿ ಟೀಕೆ ಮಾಡುವ ಕಾಲ.

ಚಳಿಗಾಲ ಬಂದಾಗ ಎಷ್ಟು ಚಳಿ? ಎಂದರು. ಬಂತಲ್ಲ ಬೇಸಿಗೆ ಕೆಟ್ಟು ಬಿಸಿಲು ಎಂದರು. ಮಳೆ ಬಿತ್ತು ಬಿಡದಲ್ಲ ಶನಿ! ಎಂಬ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!.. ಇದು ಲೋಕದ ಲೋಪದೋಷಗಳನ್ನು ಹುಡುಕುತ್ತಾ ಜನರ ಚಳಿಯ ಬಗೆಗಿನ ಕವಿತೆಯ ಮೊದಲ ಸಾಲು.
ಕವಿತೆಯನ್ನು ಬರೆದವರು ಮೈಸೂರು ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿ.
ಚಳಿಗಾಲದಲ್ಲಿ ಚಳಿಯ ಸುಖವನ್ನು ಅನುಭವಿಸುವುದರ ಬದಲು ಎಷ್ಟು ಚಳಿ ಎಂದು ಜನ ಟೀಕೆ ಮಾಡುತ್ತಾರೆ. ಬೇಸಿಗೆ ಕಾಲವನ್ನು ಸ್ವಾಗತಿಸುತ್ತಾರೆ ಎಂದುಕೊಂಡರೆ, ಆಗ ಕೆಟ್ಟ ಬಿಸಿಲು ಎನ್ನುತ್ತಾರೆ. ಚಳಿಗಾಲ ಮತ್ತು ಬೇಸಿಗೆ ಇವೆರಡೂ ಹಿಡಿಸದಿರಬಹುದು. ಬಹುಶಃ ಮಳೆಗಾಲ ಇಷ್ಟವಾಗಬಹುದು ಎಂದುಕೊಂಡರೆ, ಸುರಿಯುವ ಮಳೆಯನ್ನು ಕಂಡು ಬಿಡದಲ್ಲ ಶನಿ ಎಂದು ಟೀಕೆ ಮಾಡುತ್ತಾರೆ.
ಇಂತಹ ಜನರನ್ನು ಎಚ್ಚರಿಸುವುದುಕ್ಕಾಗಿ ಕೆ ಎಸ್ ನರಸಿಂಹಸ್ವಾಮಿಯವರು ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ ಎಂಬ ಕವಿತೆಯನ್ನು ರಚಿಸಿದ್ದಾರೆನೋ ಅನಿಸುತ್ತದೆ.

ಇಂತಹವರಿಗೆ ಸಂಬಂಧಪಟ್ಟ ಪುಟ್ಟ ಕತೆಯೊಂದು ಇಲ್ಲಿದೆ.
ಒಬ್ಬ ಜಮೀನುದಾರನಿದ್ದನಂತೆ. ಆತನ ಹತ್ತಿರ ಸಾಕಷ್ಟು ಜಮೀನಿತ್ತು. ಬೆಳೆಯು ಚೆನ್ನಾಗಿಯೇ ಆಗುತ್ತಿತ್ತು. ಆದರೆ ಮಳೆ ಬೆಳೆ ಬಗ್ಗೆ ಅವನು ದೂರು ಎಂದೂ ಮುಗಿಯುತ್ತಿರಲಿಲ್ಲ. ಅವನ ಗುರುಗಳು ಸಿಕ್ಕಾಗೆಲ್ಲ ಅವರದ್ದು ಒಂದೇ ದೂರು. ಪ್ರತಿ ವರ್ಷವೂ ಹೀಗೇ ಆಗುತ್ತದೆ. ಮಳೆ ಬೆಳೆ ಚೆನ್ನಾಗಿ ಬರುವುದಿಲ್ಲ ಎನ್ನುತ್ತಿದ್ದರು. ಗುರುಗಳು ಕಳೆದ ವರ್ಷ ಮಳೆ ಚೆನ್ನಾಗಿ ಆಗಿದೆಯಲ್ಲ ಏಕೆ ಕೊರಗುತ್ತಿದ್ದೀರಿ? ಎಂದು ಕೇಳಿದಾಗ, ಜಮೀನುದಾರರು , ಕಳೆದ ವರ್ಷ ಮಳೆ ಜಾಸ್ತಿ ಆಯ್ತು. ಗೆಣಸು ಬೆಳೆಯಲ್ಲವೂ ಕೊಳೆತು ಹೋಯಿತು. ಕೊಳೆತ ಗೆಣಸನ್ನು ಯಾರು ಕೊಂಡುಕೊಳ್ಳುತ್ತಾರೆ? ಬಹಳ ನಷ್ಟವಾಯಿತು ಎಂದು ಗೋಳಾಡಿದರು.

ಗುರುಗಳು, ಈ ವರ್ಷ ಎಷ್ಟು ಬೇಕೋ ಅಷ್ಟು ಮಳೆಯಾಗಬಹುದು. ಒಳ್ಳೆಯ ಬೆಳೆಯುವ ಆಗಬಹುದು ನಾವೆಲ್ಲಾ ದೇವರನ್ನು ಪ್ರಾರ್ಥಿಸೋಣ ಎಂದು ಹೇಳಿ ಹೊರಟುಹೋದರು.
ದಿನಗಳು ಉರುಳಿದವು.
ಆಶ್ಚರ್ಯವೆಂದರೆ ಆ ವರ್ಷ ಗುರುಗಳು ಹೇಳಿದಂತೆ ಆಯಿತು. ಹೆಚ್ಚು ಮಳೆಯು ಇರಲಿಲ್ಲ. ಒಳ್ಳೆಯ ಬೆಳೆ ಬಂದಿತ್ತು. ಒಳ್ಳೆ ಗಾತ್ರದ ಗೆಣಸುಗಳು ಬಂದಿದ್ದವು. ಹಟ್ಟಿ ತುಂಬಾ ಗೆಣಸುಗಳ ರಾಶಿ! ಗುರುಗಳು ಬಂದರು. ಗೆಣಸುಗಳ ರಾಶಿಯನ್ನು ಕಂಡು ಸಂತೋಷಪಟ್ಟರು.

ಜಮೀನುದಾರರಿಗೆ, ಈ ವರ್ಷ ಒಳ್ಳೆಯ ಬೆಳೆ ಬಂದಿರುವಂತೆ ಕಾಣುತ್ತಿದೆ. ಈಗ ಗೆಣಸಿಗೆ ಒಳ್ಳೆಯ ಬೆಲೆಯೂ ಇದೆಯಂತೆ. ನಿಮಗೆ ಸಂತೋಷವಾಗಿರಬಹುದು ಎಂದು ಕೇಳಿದರು. ಅದಕ್ಕೆ ಜಮೀನುದಾರರು, ಅಯ್ಯೋ ಏನು ಸಂತೋಷವೋ ಬಿಡಿ, ನಾನು ಕಳೆದ ವರ್ಷ ಕೊಳೆತ ಗೆಣಸುಗಳನ್ನು ನಮ್ಮ ನಾಯಿಗಳಿಗೆ ಹಾಕುತ್ತಿದ್ದೆ. ಆ ನಾಯಿಗಳು ಕೊಳೆತ ಗೆಣಸುಗಳನ್ನು ಸಂತೋಷದಿಂದ ತಿನ್ನುತ್ತಿದ್ದವು. ಈ ವರ್ಷ ನಾಯಿಗಳು ಸಂಖ್ಯೆ ಹೆಚ್ಚಾಗಿದೆ. ಆದರೆ ನಾಯಿಗಳಿಗೆ ಹಾಕಲು ಕೊಳೆತ ಗೆಣಸುಗಳೇ ಇಲ್ಲ. ಈಗ ನಾಯಿಗಳನ್ನು ಉಪವಾಸ ಇರಬೇಕಾಗುತ್ತದೆ. ಏನು ಮಾಡುವುದು? ನಮ್ಮ ಕಷ್ಟ ಎಂದಿಗೂ ಮುಗಿಯುವುದೇ ಇಲ್ಲ ಎಂದರು.
ಇದನ್ನೆಲ್ಲಾ ಆಲಿಸಿದ ಗುರುಗಳು, ಕಷ್ಟ-ಸುಖಗಳು ಬರುತ್ತವೆ ಹೋಗುತ್ತವೆ. ಆದರೆ ನಿಮ್ಮ ಗೊಣಗಾಟ ಮಾತ್ರ ಯಾವಾಗಲೂ ಮುಗಿಯುವುದೇ ಇಲ್ಲ. ದೇವರೂ ನಿಮ್ಮನ್ನು ಮೆಚ್ಚಲಾರ. ಏಕೆಂದರೆ ನೀವು ಮೆಚ್ಚುವ ವಸ್ತು ಇಲ್ಲಿ ಇಲ್ಲವೇ ಇಲ್ಲ ಎಂದು ಹೇಳಿ ಹೊರಟರಂತೆ.
ಹಾಗಾಗಿ ಜೀವನದಲ್ಲಿ ಬಂದಿದ್ದನ್ನು ಸ್ವೀಕರಿಸುತ್ತಾ, ಇದರಲ್ಲಿ ಸಂತೋಷಪಡುತ್ತಾ ಬದುಕನ್ನು ಸಾಗಿಸಬೇಕು. ನಾವು ಬದುಕುವ ಬದುಕು ಎಷ್ಟೋ ಜನರ ಕನಸಾಗಿರುತ್ತದೆ.

ಸಾಧ್ಯವಾದರೆ, ಕೆಎಸ್ ನರಸಿಂಹಸ್ವಾಮಿಯವರ ಈ ಕವನವನ್ನು ಪೂರ್ಣವಾಗಿ ಓದಿ. ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ ಎನ್ನುವ ಗುಂಪಿನಲ್ಲಿ ನಾವು ಇದ್ದರೆ ಆ ಗುಂಪಿನಿಂದ ಹೊರಬರಲು ಪ್ರಯತ್ನಿಸೋಣ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪೋಲಿಸರಿಂದ ಚಿನ್ನದ ಕಳ್ಳಸಾಗಣೆಯ ಜಾಲ ಪತ್ತೆ

0

ದೇಶದ ವಿವಿಧ ಬಂದರುಗಳ ಮೂಲಕ ಹಿತ್ತಾಳೆಯ ಸ್ಕ್ರ್ಯಾಪ್ ನೆಪದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದ ಅಂತಾರಾಜ್ಯ ಚಿನ್ನ ಕಳ್ಳಸಾಗಣೆ ದಂಧೆಗೆ ನೆರವು ನೀಡಿದ ಆರೋಪದ ಮೇಲೆ ಬೆಂಗಳೂರು ನಿವಾಸಿಯೊಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ.
43 ವರ್ಷದ ಬೆಂಗಳೂರು ನಿವಾಸಿ, ರಯೀಸ್ ಅಹ್ಮದ್ ಇಕ್ಕೇರಿ, ಫೆಬ್ರವರಿ 5 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಹೇಳಿಕೆ ನೀಡಲಾಗಿದೆ.
2019 ರಲ್ಲಿ ಚಿನ್ನದ ಕಳ್ಳಸಾಗಣೆ ಸಿಂಡಿಕೇಟ್‌ನಲ್ಲಿ ರಯೀಸ್ ಅಹ್ಮದ್ ಹೆಸರು ಕೇಳಿಬಂದಿತ್ತು.
ಡಿಆರ್‌ಐ ಮುಂಬೈ 2019 ರ ಚಿನ್ನದ ಕಳ್ಳಸಾಗಣೆ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಈ ವೇಳೆ ಭಾರಿ ಪ್ರಮಾಣದ ಚಿನ್ನವನ್ನು ಕಳ್ಳಸಾಗಣೆ ಮಾಡಿದ ನಿಸಾರ್ ಅಲಿಯಾರ್ ಎಂದು ಗುರುತಿಸಲಾಗಿದೆ.
ನಿಸಾರ್ ಅಲಿಯಾರ್ ಯುಎಇಯಿಂದ ಮುಂದ್ರಾ ಬಂದರಿನ ಮೂಲಕ ಭಾರತಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ. ವೃತ್ತಾಕಾರದ ತಟ್ಟೆಗಳು ಅಥವಾ ರಾಡ್‌ಗಳ ಆಕಾರದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಮತ್ತು ಹಿತ್ತಾಳೆಯ ಸ್ಕ್ರ್ಯಾಪ್‌ನೊಂದಿಗೆ ಮರೆಮಾಚಲು ಕಪ್ಪು ಬಣ್ಣವನ್ನು ಮುಚ್ಚಿಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಯ ಸಂದರ್ಭದಲ್ಲಿ ಒಂದು ಗುಂಪು ಚಿನ್ನದ ಕಳ್ಳಸಾಗಣೆಯಲ್ಲಿ 2017 ರಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂಬುದು ತಿಳಿದುಬಂದಿದೆ.
4,522 ಕೆಜಿ, 1,473 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಇದೇ ವಿಧಾನದೊಂದಿಗೆ ಕಳ್ಳಸಾಗಣೆ ಮಾಡಿದೆ ಎಂದು ತಿಳಿದುಬಂದಿದೆ. ರಯೀಸ್ ಅಹ್ಮದ್ ಅವರು ವಾಟ್ಸಾಪ್‌ನಲ್ಲಿ ದುಬೈ ಮೂಲದ ಮೊಬೈಲ್ ಸಂಖ್ಯೆಯ ಮೂಲಕ ಜೈನ್ ಎಂಬುವವರೊಂದಿಗೆ ಸಂವಹನ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಗುಂಪು ಪ್ರತಿದಿನ ಚಿನ್ನದ ದರವನ್ನು ಪರಿಶೀಲಿಸುತ್ತಾ ಅದರ ಬಗ್ಗೆ ಜರೋದರ್‌ವಾಲಾ ಎಂಬುವವರಿಗೆ ತಿಳಿಸುತ್ತಿದ್ದರೆಂದು ತಿಳಿದುಬಂದಿದೆ.

ಯುಎಇಗೆ ಪಲಾಯನಗೊಂಡ ಬೆಂಗಳೂರಿನ ನಿವಾಸಿ ರಯೀಸ್ ಅಹ್ಮದ್‌ಗಾಗಿ ಹುಡುಕಾಟ ನಡೆಸಲಾಯಿತು ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಯೀಸ್ ಅಹಮದ್ ಬೆಂಗಳೂರಿಗೆ ಬಂದಿಳಿದಾಗ ಆತನನ್ನು ಬಂಧಿಸಲಾಯಿತು. ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷಾ ವರದಿ ನೀಡಲು ಸೂಚನೆ

0

ಶಿವಮೊಗ್ಗ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಕೈಗೊಳ್ಳಲಾಗಿರುವ ಮ್ಯಾನುಯಲ್ ಸ್ಕಾವೆಂಜರ್ಸ್ ಗಳ ಸಮೀಕ್ಷಾ ವರದಿಯನ್ನು ಫೆಬ್ರವರಿ 28 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ಸೂಚನೆ ನೀಡಿದ್ದಾರೆ.

ಶಿವಮೊಗ್ಗ ನಗರದ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಗಳ ಸಮೀಕ್ಷಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಮೀಕ್ಷಾ ಕಾರ್ಯದ ಮೇಲ್ವಿಚಾರಣೆ ಮತ್ತು ಗಣತಿಗಾಗಿ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಉದ್ದೇಶಿತ ಸಮೀಕ್ಷಾ ಕಾರ್ಯ ನಿಗದಿಪಡಿಸಿದ ಕಾಲಮಿತಿಯೊಳಗೆ ಪೂರ್ಣಗೊಳಿಸಲಿದೆ ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದಾರೆ.

ಈ ಹಿಂದೆ ಮ್ಯಾನುಯಲ್ ಸ್ಕಾವೆಂಜರ್ಸ್ ಗಳಾಗಿ ಕಾರ್ಯನಿರ್ವಹಿಸಿದ ವ್ಯಕ್ತಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅರ್ಜಿಗಳನ್ನು ಕೂಲಂಕಶವಾಗಿ ಪರಿಶೀಲಿಸಲಾಗುವುದು. ಅಲ್ಲದೆ, ಮಾಹಿತಿಯ ಕೊರತೆಯಿಂದ ಇದುವರೆಗೆ ಅರ್ಜಿ ಸಲ್ಲಿಸಿರುವುದರಿಂದ ಅರ್ಜಿಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಪಡೆದು, ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಿದರು.

ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಗಳಿಗೆ ವಿವಿಧ ಇಲಾಖೆಯಿಂದ ನೀಡಲಾಗುವ ಸರ್ಕಾರದ ಹಲವು ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನ್ಯಾಯೋಚಿತವಾಗಿ ದೊರೆಯುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸುವಂತೆ ತಾಕೀತು ಮಾಡಿದರು.

ಸ್ಕಾವೆಂಜರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸುರಕ್ಷತಾ ಪರಿಕರಗಳನ್ನು ಸ್ಥಳೀಯ ಸಂಸ್ಥೆಗಳು ವಿತರಿಸುತ್ತಿರುವ ಬಗ್ಗೆ ಗಮನಿಸಬೇಕು. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸ್ಕಾವೆಂಜರ್ಸ್ ಅಥವಾ ಅವರು ಕುಟುಂಬದ ಅವಲಂಬಿತರಿಗೆ ಪ್ರತಿತಿಂಗಳು ಗೌರವಧನ, ಇಎಸ್ಐ ಮತ್ತು ಪಿಎಫ್ ಸೌಲಭ್ಯಗಳು ದೊರೆಯುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಜಿ.ಪಂ. ಕಾರ್ಯದರ್ಶಿ ಕೆ. ಜಯಲಕ್ಷ್ಮಮ್ಮ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ಜಿಲ್ಲಾಮಟ್ಟದ ಮ್ಯಾನ್ಯುಯಲ್
ಸ್ಕಾವೆಂಜರ್ಸ್ ಗಳ ವೃತ್ತಿ ನಿಷೇಧ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ಶಾಂತಾಕುಮಾರಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚೀನಾ ಮೂಲದ 54 ಆ್ಯಪ್ ಗಳನ್ನ ಸರ್ಕಾರ ನಿಷೇಧಸಿದೆ

0

ಸರ್ಕಾರ ಚೀನಾ ಮೂಲದ 54 ಮೊಬೈಲ್ ಆಪ್ ಗಳನ್ನು ನಿಷೇಧಿಸಿದೆ. ಈ ಆಪ್ ಗಳು ರಾಷ್ಟ್ರೀಯ ಭದ್ರತೆಗೆ ಅಪಾಯವಾಗುವ ಸಾಧ್ಯತೆ ಇರುವುದರಿಂದ ನಿಷೇಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಬ್ಯೂಟಿ ಕ್ಯಾಮೆರಾ ಸ್ವೀಟ್ ಸೆಲ್ಫಿ ಎಚ್ ಡಿ, ಬ್ಯೂಟಿ ಕ್ಯಾಮೆರಾ ಸೆಲ್ಫಿ ಕ್ಯಾಮೆರಾ, ಈ ಕ್ವ ಲೈಸರ್ ಅಂಡ್ ಬೇಸ್ ಬೂಸ್ಟರ್, ಕ್ಯಾಮ್ ಕಾರ್ಡ್ ಫಾರ್ ಸೇಲ್ ಫೋರ್ಸ್ ಇಎನ್ ಟಿ, ಐಸೊಲ್ಯಾಂಡ್ 2, ಆಶಸ್ ಆಫ್ ಟೈಮ್ ಲೈಟ್, ವಿವೊ ವಿಡಿಯೋ ಎಡಿಟರ್, ಆನ್ ಮೈ ಜಿ ಚೆಸ್, ಆನ್ ಮೈ ಜಿ ಅರೆನಾ, ಆಪ್ ಲಾಕ್ ಇನ್ನಿತರ ಆಪ್ ಗಳನ್ನು ನಿಷೇಧಿಸಲಾಗಿದೆ.

ಗಲ್ವನ್ ಕಣಿವೆಯಲ್ಲಿ ಸಂಘರ್ಷದ ಬಳಿಕ ಕಳೆದ ವರ್ಷ ಜೂನ್ ನಲ್ಲಿ ಸರ್ಕಾರ 59 ಚೈನೀಸ್ ಮೊಬೈಲ್ ಆಪ್ ಗಳನ್ನು ನಿಷೇಧಿಸಿತ್ತು. ಇದರಲ್ಲಿ ಟಿಕ್ ಟ್ಯಾಕ್, ವಿ ಚಾಟ್ ಇತ್ಯಾದಿಗಳಿತ್ತು. ನಂತರ ಸೆಪ್ಟೆಂಬರ್ನಲ್ಲಿ 118 ಆಪ್ ಗಳನ್ನು ನಿಷೇಧಿಸಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಟಾಟಾ ಗ್ರೂಪ್ ಏರ್ ಇಂಡಿಯ ಸಿಇಓ ಆಗಿ ಇಲ್ಕರ್

0

ಟಾಟಾ ಗ್ರೂಪ್, ಟರ್ಕಿಷ್ ಏರ್ ಲೈನ್ಸ್ ನ ಅಧ್ಯಕ್ಷ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಹೊಸ ಸಿಇಒ ಮತ್ತು ಎಂಡಿ ಆಗಿ ನೇಮಿಸಿದೆ.

2022 ಏಪ್ರಿಲ್ 1ಕ್ಕೂ ಮುನ್ನ ಏರ್ ಇಂಡಿಯಾ ದ ಜವಾಬ್ದಾರಿ ವಹಿಸಲಿದ್ದಾರೆ. ಹೊಸ ನೇಮಕಾತಿಯನ್ನು ಪ್ರಕಟಿಸಿರುವ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ಇಲ್ಕರ್ ಅವರು ವಾಯುಯಾನ ಉದ್ಯಮದ ನುರಿತ ನಾಯಕರಾಗಿದ್ದಾರೆ. ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಟರ್ಕಿಶ್ ಏರ್ಲೈನ್ಸ್ ಅನ್ನು ಈಗಿನ ಯಶಸ್ವಿಗೆ ಬೆಳೆಸಿದ್ದಾರೆ. ಇಲ್ಕರ್ ಅವರು ಏರ್ ಇಂಡಿಯಾವನ್ನು ಹೊಸಯುಗಕ್ಕೆ ಕರೆದೊಯ್ಯಲಿದ್ದಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಐಕಾನಿಕ್ ಏರ್ಲೈನ್ಸ್ ಅನ್ನು ಮುನ್ನಡೆಸುವುದು ಮತ್ತು ಟಾಟಾ ಗ್ರೂಪ್ ಗೆ ಸೇರುವುದು ಗೌರವದ ವಿಷಯವಾಗಿದೆ. ಏರ್ ಇಂಡಿಯಾದಲ್ಲಿನ ನನ್ನ ಸಹೋದ್ಯೋಗಿಗಳು ಮತ್ತು ಟಾಟಾ ಗ್ರೂಪ್ ನ ನಾಯಕತ್ವದೊಂದಿಗೆ ಕೆಲಸ ಮಾಡುವ ಮೂಲಕ ನಾವು ಇಂಡಿಯಾದ ಪರಂಪರೆಯನ್ನು ಬಳಸಿಕೊಂಡು, ವಿಶಿಷ್ಟವಾದ ಉತ್ಕೃಷ್ಟ ಹಾರಾಟದ ಅನುಭವದ ಜೊತೆಗೆ, ಅತ್ಯುತ್ತಮ ವಿಮಾನಯಾನ ಸಂಸ್ಥೆ ಗಳಲ್ಲಿ ಒಂದನ್ನಾಗಿ ಮಾಡುತ್ತೇವೆ ಇಲ್ಕರ್ ಐಸಿ ಅವರು ಹೇಳಿದ್ದಾರೆ.
2015ರಿಂದ ಇತ್ತೀಚಿನವರೆಗೂ ಟರ್ಕಿಶ್ ಏರ್ ಲೈನ್ಸ್ ನ ಸಿಇಒ ಆಗಿದ್ದರು.