Wednesday, February 18, 2026
Wednesday, February 18, 2026
Home Blog Page 1717

ಸದಸ್ಯತ್ವ ರದ್ದು ಮಾಡಲ್ಲ ಕನ್ನಡ ಕಲಿಸುತ್ತೇವೆ- ಮಹೇಶ್ ಜೋಷಿ

0

ಓದಲು ಬರೆಯಲು ಬಾರದ ಕಸಾಪ ಸದಸ್ಯರ ಸದಸ್ಯತ್ವವನ್ನು ಯಾವುದೇ ಕಾರಣಕ್ಕೂ ರದ್ದುಪಡಿಸುವುದಿಲ್ಲ. ಬದಲಿಗೆ ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಕಸಾಪ ಸದಸ್ಯತ್ವ ಪಡೆಯಲು 400 ರೂ. ಶುಲ್ಕ ನಿಗದಿಪಡಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿಯವರು ತಿಳಿಸಿದ್ದಾರೆ.

ಪರಿಷತ್ ಸದಸ್ಯರ ಪೈಕಿ ಶೇಕಡ ಎಂಟರಿಂದ 10 ರಷ್ಟು ಮಂದಿ ಸಹಿ ಮಾಡಲೂ ಬಾರದಂತಹ ಅನಕ್ಷರಸ್ಥರಾಗಿದ್ದಾರೆ. ಹೀಗಾಗಿ ಇವರಿಗೆ ಪರಿಷತ್ತಿನ ಮೂಲಕ ಕನ್ನಡ ಕಲಿಸಲಾಗುವುದು. ಹೊಸದಾಗಿ ಸದಸ್ಯತ್ವ ಪಡೆಯುವವರು ಏಳನೇ ತರಗತಿ ಪಾಸಾದ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ ಅಂತವರಿಗೆ ಸರಳವಾದ ಪರೀಕ್ಷೆಯನ್ನು ನಡೆಸಲಾಗುವುದು. ತೇರ್ಗಡೆ ಹೊಂದಿದವರಿಗೆ ಸದಸ್ಯತ್ವ ನೀಡಲಾಗುವುದು. ಜೊತೆಗೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಇರುವ ತರಬೇತಿ ಘಟಕಗಳ ಜೊತೆಗೆ ಹೋಬಳಿ ಮಟ್ಟದಲ್ಲಿ ತರಬೇತಿ ಕೇಂದ್ರ ತೆರೆಯಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಸಾಪ ಗೆ 1915ರ ನಂತರ ಬೈಲಾ ತಿದ್ದುಪಡಿಯಾಗಿಲ್ಲ. ಕೆಲವು ಓಬಿರಾಯನ ಕಾಲದ ನಿಯಮಗಳಿದ್ದರೆ, ಇನ್ನು ಕೆಲವು ಪರಿಷತ್ ಗೆ ತುಂಬಾ ಹೊರೆಯಾಗುವಂತಹ ಅಂಶಗಳಿವೆ. ಹೀಗಾಗಿ ನನ್ನ 5 ವರ್ಷಗಳ ಅಧಿಕಾರಾವಧಿಯಲ್ಲಿ ಪರಿಷತ್ತಿನಲ್ಲಿ ಹಲವು ಬದಲಾವಣೆಗಳನ್ನು ತರುವ ಮೂಲಕ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನಾಗಿಸುವುದು ನನ್ನ ಉದ್ದೇಶ. ನಾನು ಚುನಾವಣಾ ಪ್ರಣಾಳಿಕೆಯಲ್ಲೂ ಇದನ್ನೇ ತಿಳಿಸಿದ್ದೇನೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಎಪಿಎಂಸಿ ತಿದ್ದುಪಡಿ ಕಾಯಿದೆ ಹಿಂಪಡೆಯುವುದಿಲ್ಲ

0

ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಪರಿಷತ್ತಿಗೆ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ಕೆ. ಹರೀಶ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿ, ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಉದ್ದೇಶದ ಕಾಯ್ದೆ ರೈತರಿಗೆ ಅನುಕೂಲವಾಗುತ್ತದೆ ಎಂದು ಸಹಕಾರ ಸಚಿವರು ಸ್ಪಷ್ಟಪಡಿಸಿದ್ದಾರೆ.

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುನ್ನ ಸೆಸ್ ನಲ್ಲಿ ಶೇ. 0.60ಗೆ ಇಳಿಸಿರುವುದರಿಂದ 135 ರಿಂದ 170 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ. ಆದರೂ, ಎಪಿಎಂಸಿ ಗಳು ನಷ್ಟದಲ್ಲಿಲ್ಲ. ಒಂದು ವೇಳೆ ಯಾವುದಾದರೂ ಎಪಿಎಂಸಿ ಗಳು ಸಂಕಷ್ಟಕ್ಕೆ ಸಿಲುಕಿದರೆ ನೌಕರರ ಸಂಬಳ ಮತ್ತಿತರ ವೆಚ್ಚಗಳನ್ನು ಸರ್ಕಾರವೇ ಭರಿಸಲು ಕ್ರಮ ಕೈಗೊಳ್ಳಲಿದೆ ಎಂದು ಎಸ್. ಟಿ. ಸೋಮಶೇಖರ್ ಅವರು ಭರವಸೆ ನೀಡಿದ್ದಾರೆ.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ-1966ರ ಕಲಂ 144 ರಲ್ಲಿ ಯಾವುದೇ ಮಾರುಕಟ್ಟೆ ಪ್ರದೇಶದಲ್ಲಿ ಯಾವುದೇ ಕೃಷಿ ಉತ್ಪನ್ನದ ಮಾರುಕಟ್ಟೆ ವ್ಯವಹಾರವನ್ನು ದಕ್ಷ ರೀತಿಯಲ್ಲಿ ನಿಯಂತ್ರಿಸುವುದಕ್ಕಾಗಿ ಎರಡು ಅಥವಾ ಹೆಚ್ಚು ಮಾರುಕಟ್ಟೆ ಸಮಿತಿಗಳು ವಿಲೀನಗೊಳ್ಳುವುದು ಅವಶ್ಯ ವೆಂಬುದು ಸರ್ಕಾರಕ್ಕೆ ಮನದಟ್ಟಾದರೆ ಮಾರುಕಟ್ಟೆ ಸಮಿತಿಗಳೊಡನೆ ಸಮಾಲೋಚಿಸಿ ವಿಲೀನಗೊಳಿಸಲು ಅಧಿಕಾರ ಹೊಂದಿದೆ. ಆದರೆ, ರಾಜ್ಯದಲ್ಲಿನ ಎರಡೆರಡು ಎಪಿಎಂಸಿ ಗಳನ್ನು ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರು ಸ್ಪಷ್ಟಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗಣಿ ಬಾಧಿತ ಪ್ರದೇಶಗಳ ಸುರಕ್ಷತೆಗೆ ಹಣ ಕ್ರೋಢೀಕರಿಸಲಾಗಿದೆ

0

ಕರ್ನಾಟಕದಲ್ಲಿ ಗಣಿಬಾಧಿತ ಪ್ರದೇಶಗಳ ಪರಿಸರ ಸಮತೋಲನಕ್ಕೆ ಇದುವರೆಗೆ 19, 443 ಕೋಟಿ ರೂಪಾಯಿ ಕ್ರೋಢೀಕರಿಸಲಾಗಿದೆ. ಇದನ್ನು ಬಳಸಿಕೊಂಡು ಗಣಿಗಾರಿಕೆ ಪ್ರದೇಶದಲ್ಲಿರುವ ಪಟ್ಟಣಗಳು ಮತ್ತು ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಗಣಿ ಸಚಿವ ಆಚಾರ್ ಹಾಲಪ್ಪ ಬಸಪ್ಪ ಅವರು ಪರಿಷತ್ತಿಗೆ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ನ ಮೇಲ್ವಿಚಾರಣೆಯಡಿಯಲ್ಲಿ 19 ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡಲಾಗಿದೆ. ಅದನ್ನು ಬಳಕೆ ಮಾಡಿಕೊಳ್ಳಬೇಕಾದರೂ ಸುಪ್ರೀಂಕೋರ್ಟ್ನ ಅನುಮತಿ ಅಗತ್ಯ ಎಂದು ಗಣಿ ಸಚಿವರು ಹೇಳಿದ್ದಾರೆ.

ಜೆಡಿಎಸ್ ನ ಕೆ. ಎ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಹಲವು ಬಾರಿ ಮನವಿ ಸಲ್ಲಿಸಿದೆ. ರಾಜ್ಯದಲ್ಲಿ ಸಂಗ್ರಹವಾಗಿರುವ ಹಣವನ್ನು ಬಳಸಲು ಅನುಮತಿ ಕೋರಿದರು. ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಲ್ಲಿ ಗಣಿಬಾಧಿತ ಪ್ರದೇಶಗಳ ಮತ್ತು ಜನ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಲಾಗುತ್ತದೆ ಎಂದು ಗಣಿ ಸಚಿವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ತ್ವರಿತ ವಿಚಾರಣೆ ಕೋರ್ಟ್ ಗಳಲ್ಲೂ ಪ್ರಕರಣಗಳು ಬಾಕಿ ಇವೆ

0

ದೇಶದಲ್ಲಿ ತ್ವರಿತ ಗತಿಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ತ್ವರಿತ ವಿಚಾರಣಾ ನ್ಯಾಯಾಲಯಗಳಲ್ಲಿಯೇ 10 ಲಕ್ಷ ಪ್ರಕರಣಗಳು ಬಾಕಿ ಉಳಿದಿರುವುದು ಬೆಳಕಿಗೆ ಬಂದಿದೆ.
ಹಾಗಾಗಿ ಯಾವ ಕಾರಣದಿಂದಾಗಿ ತ್ವರಿತ ಗತಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿತ್ತೋ, ಅದರ ಉದ್ದೇಶವೇ ಈಡೇರದಂತಾಗಿದೆ. ಹಿರಿಯರು, ಮಹಿಳೆಯರು, ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ಕ್ಷಿಪ್ರವಾಗಿ ವಿಚಾರಣೆ ಮಾಡಲು ತ್ವರಿತ ವಿಚಾರಣಾ ನ್ಯಾಯಾಲಯ ಸ್ಥಾಪಿಸಲಾಗಿದ್ದರೂ, ಡಿಸೆಂಬರ್ ಅಂತ್ಯದ ವೇಳೆಗೆ ಇನ್ನೂ 10 ಲಕ್ಷ ಪ್ರಕರಣಗಳ ವಿಚಾರಣೆ ಬಾಕಿ ಇವೆ.

ಇನ್ನೂ ದೇಶದ ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ 4.1 ಕೋಟಿ ಪ್ರಕರಣಗಳ ವಿಲೇವಾರಿ ಬಾಕಿ ಇವೆ ಎಂದು ತಿಳಿದುಬಂದಿದೆ.

ಇಂತಹ ಸುದೀರ್ಘಾವಧಿ ಇಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಸಹ ವಿಚಾರಣೆ ನಡೆಸಲು ತ್ವರಿತ ವಿಚಾರಣೆ ನ್ಯಾಯಾಲಯಗಳನ್ನು ಪ್ರಾರಂಭಿಸಲಾಗಿದೆ. ಹೀಗಿದ್ದರೂ ವಿಲೇವಾರಿಯು ವಿಳಂಬವಾಗುತ್ತಿರುವುದು ಕಂಡುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಜ್ಞಾನ ಒಗಟು ಬಿಡಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ

0

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ(ಕೆಎಸ್‍ಸಿಎಸ್‍ಟಿ) ಬೆಂಗಳೂರು ಇವರು ರಾಷ್ಟ್ರೀಯ ವಿಜ್ಞಾನ ದಿನ 2022 ರ ಪ್ರಯುಕ್ತ 8-10 ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಕ್ಕಳಿಗಾಗಿ ವಿಜ್ಞಾನ ಕಾರ್ಯಕ್ರಮದ ‘ವಿಜ್ಞಾನ ಒಗಟು ಬಿಡಿಸುವ ಸ್ಪರ್ಧೆ’ಯಲ್ಲಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ವಿವಿಧ ಶಾಲೆಗಳ 190 ಮಕ್ಕಳು ನೋಂದಣಿ ಮಾಡಿಕೊಂಡಿದ್ದರು. ಜಿಲ್ಲಾ ಮಟ್ಟದಲ್ಲಿ ಫೆ.09 ರಂದು ನಡೆದ ಆನ್‍ಲೈನ್ ಸ್ಪರ್ಧೆಯಲ್ಲಿ 100 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಮೊದಲ ಹಂತದಲ್ಲಿ ಉತ್ತಮವಾಗಿ ಉತ್ತರಿಸಿದ ವಿದ್ಯಾರ್ಥಿಗಳಾದ ಸವಿನಯ್ ಹೆಚ್.ಎಸ್, ಜ್ಞಾನದೀಪ ಶಾಲೆ, ಜಾವಳ್ಳಿ. ಸಿದ್ದಾರ್ಥ ಗೋಡೋಲ್ಕರ್, ಜ್ಞಾನದೀಪ ಶಾಲೆ, ಜಾವಳ್ಳಿ. ಸಿಂಚನ.ಡಿ, ಪೋದಾರ್ ಇಂಟರ್‍ನ್ಯಾಷನಲ್ ಶಾಲೆ, ಶಿವಮೊಗ್ಗ ಹಾಗೂ ಖಜೀ ಮೊಹಮದ್ ಜೌಹಾರ್, ಜ್ಞಾನದೀಪ ಶಾಲೆ ಜಾವಳ್ಳಿ ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ ಇವರನ್ನು ಅಭಿನಂದಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ನಿಂದ ರಷ್ಯಾ ಸೈನ್ಯ ವಾಪಸ್

0

ಕಳೆದ ವಾರದಿಂದ ರಷ್ಯಾ ಮತ್ತು ಉಕ್ರೇನ್ ಗಡಿಯಲ್ಲಿ ಕವಿದಿದ್ದ ಯುದ್ಧ ಕಾರ್ಮೋಡಗಳು ಕರಗುವ ಸೂಚನೆ ಸಿಕ್ಕಿದೆ . ಸಮರ ಭೀತಿ ಸೃಷ್ಟಿಸಿದ್ದ ರಷ್ಯಾ ಸರ್ಕಾರವೇ ತನ್ನ ಸೇನಾಪಡೆಯ ಕೆಲವು ತುಕಡಿಗಳನ್ನು ಸೂಕ್ತ ಕಾರಣ ನೀಡದೆ ವಾಪಸ್ ಕರೆಸಿಕೊಂಡಿದೆ.
ಅಮೆರಿಕದ ಮಿತ್ರ ರಾಷ್ಟ್ರ ಉಕ್ರೇನ್ ವಿರುದ್ಧ ಸಮರದ ಹುರುಪಿನಿಂದ ಮುನ್ನುಗ್ಗುತ್ತಿರುವ ರಷ್ಯಾ, ಗಡಿಯಲ್ಲಿ 1 ಲಕ್ಷ ಕ್ಕೂ ಹೆಚ್ಚು ಯೋಧರನ್ನು ಜಮಾವಣೆ ಮಾಡಿದೆ ಎಂದು ತಿಳಿದುಬಂದಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಗೂಬೆ ಕೂರಿಸುವ ಸಲುವಾಗಿ ಯುದ್ಧದ ಭೀತಿಯನ್ನು ಅನಗತ್ಯವಾಗಿ ಸೃಷ್ಟಿಸಿದ್ದವು. ಫೆ.15 ಅನ್ನು ಇತಿಹಾಸದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಹುಸಿ ಭೀತಿ ಬಯಲಾದ ದಿನ ಎಂದು ಕರೆಯಲಾಗುವುದು. ಒಂದೇ ಒಂದು ಗುಂಡೂ ಕೂಡ ಗಡಿಯಲ್ಲಿ ಹಾರಿಲ್ಲ. ಕೇವಲ ಸಮರ ಪಡೆಗಳ ತಾಲೀಮು ಮಾತ್ರ ನಡೆದಿದೆ. ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳು ಸುಖಾಸುಮ್ಮನೆ ಊಹಾಪೋಹದ ಭಯ ಹುಟ್ಟಿಸುತ್ತಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ವಕ್ತಾರೆ ಮರಿಯಾ ಝಕಾರೊವಾ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಪಾಂಡೆಮಿಕ್ ಈಗ ಎಂಡೆಮಿಕ್ ಆಗುತ್ತಿದೆಯೆ?

0

ಭಾರತದಲ್ಲಿ ಸತತ ನಾಲ್ಕು ವಾರಗಳವರೆಗೆ ಕೊರೊನಾ ನಿಕ್ಕಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಕನಿಷ್ಠ ಪ್ರಕರಣಗಳು ದಾಖಲಾದರೆ ಮಾತ್ರ ಸೋಂಕು ಪ್ರಾದೇಶಿಕ ಹರಡುವಿಕೆ ಹಂತ ತಲುಪಿದೆ ಎಂದು ಹೇಳಬಹುದು ಎಂದು
ಖ್ಯಾತ ವೈರಾಣು ತಜ್ಞ ಡಾ.ಟಿ.ಜಾಕೋಬ್ ಜಾನ್ ಅವರು ತಿಳಿಸಿದ್ದಾರೆ.

ದೇಶದಲ್ಲಿ ಜನವರಿ 21ರಿಂದಲೂ ನಿತ್ಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಸೋಂಕು ಹರಡುವಿಕೆ ಎಂಡೆಮಿಕ್ ಹಂತ ತಲುಪಿದೆ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಜಾಕೋಬ್ ಅವರು ಈ ಕುರಿತು ಮಾತನಾಡಿದ್ದು,
ನಾಲ್ಕು ವಾರಗಳವರೆಗೆ ಸೋಂಕಿತರ ಸಂಖ್ಯೆ ಸತತವಾಗಿ ಇಳಿಕೆಯಾದರೆ ಮಾತ್ರ ಎಂಡೆಮಿಕ್ ಹಂತ ಎಂದು ಹೇಳಲು ಸಾಧ್ಯ. ಅಲ್ಲದೆ, ಇದಕ್ಕಾಗಿ ಸೋಂಕಿನ ಲಕ್ಷಣಗಳು ಸೌಮ್ಯ ವಾಗಿರಬೇಕು. ಸಾವಿನ ಪ್ರಮಾಣವು ಸ್ಥಿರವಾಗಿರಬೇಕು ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಕೇಂದ್ರದ ಅನುಮತಿ

0

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 60,000 ಮನೆಗಳನ್ನು ನಿರ್ಮಿಸುವ ಮಹತ್ವಕಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಮೊದಲ ಹಂತದಲ್ಲಿ ಕರ್ನಾಟಕ, ಆಂದ್ರಪ್ರದೇಶ, ಛತ್ತಿಸ್ ಗಢ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಮನೆಗಳು ನಿರ್ಮಾಣಗೊಳ್ಳಲಿವೆ.

ಒಟ್ಟು 80 ಲಕ್ಷ ಮನೆಗಳನ್ನು ನಿರ್ಮಿಸಲು 48,000 ಕೋಟಿ ರೂ. ಬಜೆಟ್ ಅನುದಾನ ಕಾಯ್ದಿರಿಸಿದೆ. 2024ರ ವೇಳೆಗೆ ದೇಶದ ಎಲ್ಲಾ ಕಡುಬಡವರಿಗೆ ಸೂರು ಕಲ್ಪಿಸಿ ಕೊಡುವುದಾಗಿ ಕೇಂದ್ರ ಭರವಸೆ ನೀಡಿತ್ತು.

ಇದೇ ಭರವಸೆ ಭಾಗವಾಗಿ
ಈಗ ಅನುಮೋದನೆ ನೀಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರೈಲ್ವೆ ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ-ಬಿ.ವೈ.ರಾಘವೇಂದ್ರ

0

ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ಹೊಸ ರೈಲ್ವೇ ಮಾರ್ಗ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ಅನುಮೋದನೆ ನೀಡಿದ್ದು, ಭೂಸ್ವಾದೀನ ಪ್ರಕ್ರಿಯೆಯನ್ನು ಫೆ.28ರೊಳಗಾಗಿ ಪೂರ್ಣಗೊಳಿಸಿ, ರೈಲ್ವೇ ಮಾರ್ಗದ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಹೊಸ ರೈಲ್ವೇ ಮಾರ್ಗದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸಿ ಮಾತನಾಡುತ್ತಿದ್ದರು. ಹೊಸ ರೈಲು ಮಾರ್ಗದ ನಿರ್ಮಾಣಕ್ಕೆ ಅನುಮೋದನೆ ದೊರೆತು ವರ್ಷಗಳೇ ಸಂದಿದ್ದರೂ ಯೋಜನೆಯ ಅನುಷ್ಠಾನ ಕಾರ್ಯ ಮಂದಗತಿಯಲ್ಲಿ ಸಾಗಿರುವುದು ಬೇಸರದ ಸಂಗತಿ. ಅನವಶ್ಯಕವಾಗಿ ಕಾಲಹರಣ ಮಾಡದೆ, ಸಂಬಂಧಿಸಿದ ಮಾರ್ಗದಲ್ಲಿ ಜಮೀನು ನೀಡುತ್ತಿರುವ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರಧನ ಒದಗಿಸಿ, ಭೂಸ್ವಾದೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂಬಂಧ ಸಂಬಂಧಿಸಿದ ಗ್ರಾಮಗಳ ಜಮೀನುಗಳ ಮಾಲೀಕರೊಂದಿಗೆ ಮುಕ್ತ ಸಮಾಲೋಚನೆ ನಡೆಸಿ, ಸಹಕಾರ ನೀಡುವಂತೆ ಹಾಗೂ ತ್ವರಿತವಾಗಿ ಪರಿಹಾರ ಧನ ನೀಡುವ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೇ ನ್ಯಾಯಾಲಯಗಳಲ್ಲಿ ದಾವೆ ಹೂಡುವುದರಿಂದ ರೈತರಿಗೆ ಆಗಬಹುದಾದ ನಷ್ಟಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡುವಂತೆ ಸೂಚಿಸಿದರು.

ಭೂಸ್ವಾದೀನಪಡಿಸಿಕೊಳ್ಳುವ ರೈತರ ಜಮೀನಿಗೆ ಭೂ ದರ ಸಲಹಾ ಸಮಿತಿಯು ನಿಗಧಿಪಡಿಸಿದಂತೆ ಪರಿಹಾರಧನ ನಿಗಧಿಪಡಿಸಲಾಗಿದೆ. ಅದರಂತೆ ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸದರಿ ಪ್ರದೇಶದಲ್ಲಿನ ರೈತರ ಅಹವಾಲುಗಳನ್ನು ಅಧಿಕಾರಿಗಳು ಖುದ್ದಾಗಿ ಆಲಿಸಿ, ಪರಿಹಾರವನ್ನು ಕಂಡುಕೊಳ್ಳಬೇಕು. ಹಾಗೂ ಅಲ್ಲಿನ ಆಸ್ತಿಪಾಸ್ತಿಗಳ ಮೌಲ್ಯವನ್ನು ಸರಿಯಾದ ಪ್ರಮಾಣದಲ್ಲಿ ದಾಖಲಿಸುವಂತೆ ಅವರು ಸಲಹೆ ನೀಡಿದರು.

ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಬಳಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆಗಾಗಿ ರಸ್ತೆಯ ಇಕ್ಕೆಲಗಳ ವಸತಿ ಮತ್ತು ವಾಣಿಜ್ಯ ಪ್ರದೇಶಗಳ ಮಾಲೀಕರಲ್ಲಿ ಬಹುತೇಕರಿಗೆ ಈಗಾಗಲೆ ಪರಿಹಾರಧನವನ್ನು ವಿತರಿಸಲಾಗಿದೆ ಎಂದ ಅವರು ಈ ಪ್ರದೇಶದಲ್ಲಿ ಪಾದಚಾರಿಗಳು ಸುಗಮವಾಗಿ ಸಂಚರಿಸುವಂತೆ, ಅಲ್ಲಿನ ವಸತಿಗರಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಅಡಚಣೆಯಾಗದಂತೆ ಗಮನಹರಿಸಬೇಕು. ಇಲ್ಲಿ ನಿರ್ಮಾಣವಾಗುವ ಕೇಳಸೇತುವೆಯಲ್ಲಿ ಮಳೆಗಾಲದಲ್ಲಿ ಮಳೆ ನೀರು ಸಂಗ್ರಹಗೊಂಡು ಅವ್ಯವಸ್ಥೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಅಲ್ಲದೆ ನಗರದಲ್ಲಿನ ಹಸಿರು ಪರಿಸರ ಹಾಗೂ ನಗರ ಸೌಂದರ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಅನುಷ್ಠಾನಗೊಳಿಸಲು ಹೇಳಿದರು.

ಭದ್ರಾವತಿಯ ಕಡದಕಟ್ಟೆ ಸೇರಿದಂತೆ 4ಕಡೆಗಳಲ್ಲಿ ಕೈಗೊಂಡಿರುವ ಮೇಲ್ಸೇತುವೆ ಕಾಮಗಾರಿಗಳನ್ನು ಗುತ್ತಿಗೆದಾರರು ಹಗಲಿರುಳು ಕಾರ್ಯನಿರ್ವಹಿಸಿ, ಜನರಿಗೆ ಯಾವುದೇ ಅಡಚಣೆಯಾಗದಂತೆ ಹಾಗೂ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಗುರುತಿಸಿ ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ರೈಲ್ವೇ ಮಾರ್ಗಕ್ಕಾಗಿ ಜಮೀನು ಒದಗಿಸಿರುವ ರೈತರಲ್ಲಿರಬಹುದಾದ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ದೊರೆಕಿಸಿಕೊಡಲಾಗುವುದು. ಅದಕ್ಕೂ ಮುನ್ನ ಧರೆಕುಸಿತದ ಹಾಗೂ ಆಕಾರಬಂದ್ ಮಾಡುವ ಪ್ರದೇಶಗಳನ್ನು ಖುದ್ದು ಪರಿಶೀಲಿಸಿ ಕ್ರಮವಹಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|| ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಕಾಂತ್, ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ, ರೈಲ್ವೇ ಅಧಿಕಾರಿ ಶ್ರೀಧರಮೂರ್ತಿ, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ದತ್ತಾತ್ರಿ, ಚನ್ನಬಸಪ್ಪ, ಮೇಘರಾಜ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪವಿಭಾಗಾಧಿಕಾರಿ ಟಿ.ಬಿ.ಪ್ರಕಾಶ್, ಪೀರ್‍ಪಾಷಾ, ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ತೆಗೆಯಲು ನಿರಾಕರಿಸಿ ವಾಪಸ್ ಆದ ವಿದ್ಯಾರ್ಥಿನಿಯರು

0

ಶಿವಮೊಗ್ಗ ನಗರದಲ್ಲಿ ವಾರದ ಬಳಿಕ ಇಂದಿನಿಂದ ಕಾಲೇಜು ತರಗತಿಗಳು ಆರಂಭವಾಗಿದೆ. ಇಂದು ನಗರದ ಡಿವಿಎಸ್ ಕಾಲೇಜಿನಲ್ಲಿ ಹಿಜಾಬ್ ಹಾಗೂ ಬುರ್ಖಾ ಧರಿಸಿ ಬಂದಂತಹ ವಿದ್ಯಾರ್ಥಿನಿಯರಿಗೆ ಕಾಲೇಜು ಆಡಳಿತ ಮಂಡಳಿಯು ಕಾಲೇಜು ಒಳಗೆ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ಆದ್ದರಿಂದ 25 ಮುಸ್ಲಿಮ್ಸ್ ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿ ತಮ್ಮ ಪೋಷಕರೊಂದಿಗೆ ಮನೆಗೆ ತೆರಳಿದರು.

ಈ ಕಾರಣದಿಂದ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೋಷಕರು ಕಾಲೇಜು ಆಡಳಿತ ಮಂಡಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ “ಹಿಜಾಬ್ ಒಂದು ಶಿಸ್ತಿನ ಸಂಕೇತ, ಇಡೀ ಪ್ರಪಂಚವೇ ಅದಕ್ಕೆ ಗೌರವ ನೀಡುತ್ತದೆ. ಈ ರೀತಿ ಹಿಜಾಬ್ ನಿರಾಕರಿಸುವುದು ಖಂಡನೀಯ. ಆಡಳಿತ ಮಂಡಳಿಯು ಕಾಲೇಜಿನಲ್ಲಿ ಪ್ರವೇಶಕ್ಕೆ ಲಕ್ಷಾಂತರ ರೂಪಾಯಿ ಕೇಳುತ್ತದೆ. ಆದ್ರೆ ಈಗ ಯಾಕೆ ನಮ್ಮ ವಿರುದ್ಧ ನಿಮ್ಮ ನಡವಳಿಕೆ” ಎಂದು ಮಾಧ್ಯಮದ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯೋರ್ವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ”ನಾವೇನು ಕೊಲೆಮಾಡಲು ಹೋಗುತ್ತಿದ್ದೇವಾ? ನಾವು ಓದಲು ಹೋಗುತ್ತಿರುವುದು. ಎಂತಾ ನ್ಯಾಯ ಇದು? ಒಬ್ಬ ಮುಸಲ್ಮಾನ್ ಹುಡುಗಿ ಓದಲು ಬಂದ್ರೆ ನೀವು ಗೌರವ ಕೊಡಬೇಕು. ಕಾಲೇಜು ಆಡಳಿತ ಮಂಡಳಿಯು ಬುರ್ಖಾ ಹಾಗೂ ಹಿಜಾಬ್ ತೆಗೆದು ಒಳಗೆ ಬರುವಂತೆ ಸೂಚಿಸುತ್ತಿದೆ. ಹಿಜಾಬ್ ಧರಿಸುವುದು ನಮ್ಮ ಹಕ್ಕು. ಸತ್ತುಹೋಗುತ್ತವೆ ಹೊರತು ನಾವು ಹಿಜಾಬ್ ತೆಗೆಯುವುದಿಲ್ಲ” ಎಂದು ವಿದ್ಯಾರ್ಥಿನಿ ಆಕ್ರೋಶವನ್ನು ವ್ಯಕ್ತಪಡಿಸಿದರು.

“ಕೋರ್ಟ್ ಎಂದು ಹೇಳುತ್ತಿದ್ದೀರಿ. ಇದರಿಂದಾಗಿ ನಮಗೆ ಕಾಲೇಜಿನಲ್ಲಿ ಪ್ರವೇಶ ನೀಡುತ್ತಿಲ್ಲ. ಇನ್ನು ಏನ್ ಮಾಡಬೇಕು ಅಂತ ಇದ್ದೀರಾ? ಇಂದು ಹಿಜಾಬ್ ತೆಗಿರಿ ಅಂತಿದ್ದೀರಾ ನಾಳೆ ಮುಸ್ಲಿಮರ ಬರಬೇಡಿ ಅಂತೀರಾ. ನಮಗೆಲ್ಲಾ ಗೊತ್ತಿದೆ ನೀವು ಮಾಡುತ್ತಿರುವುದು. ಇನ್ನೂ ಎಷ್ಟು ಸಹಿಸಿಕೊಳ್ಳಬೇಕು ನಾವು” ಎಂದು ವಿದ್ಯಾರ್ಥಿನಿ ಹೇಳಿದರು.

ಆಡಳಿತ ಮಂಡಳಿಯ ಅಧಿಕಾರಿ ಅವರು ಮಾತನಾಡಿ ನ್ಯಾಯಾಲಯದ ಆದೇಶದಂತೆ ನಾವು ನಿಯಮವನ್ನು ಪಾಲಿಸುತ್ತಿದ್ದೇವೆ. ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ಧರಿಸಿ ಬಂದಿದ್ದರು. ಅವರಿಗೆ ಹಿಜಾಬ್ ಮತ್ತು ಬುರ್ಖಾವನ್ನು ತೆಗೆದಿಟ್ಟು ಕಾಲೇಜು ಪ್ರವೇಶಿಸುವಂತೆ ತಿಳಿಸಿದವು. ಅದಕ್ಕೆ ವಿದ್ಯಾರ್ಥಿನಿಯರು ನಿರಾಕರಿಸಿದ ಕಾರಣ ನಾವು ಶಾಲೆಯ ಒಳಗೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಒಟ್ಟಾರೆ ನಗರದ ಡಿವಿಎಸ್ ಕಾಲೇಜ್ ಮುಂಭಾಗ ಕೆಲಕಾಲ ಗೊಂದಲದ ವಾತಾವರಣ ಕಂಡುಬಂದಿತ್ತು. ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.