Tuesday, April 29, 2025
Tuesday, April 29, 2025

ದಿ ಫ್ಯಾಟ್ ಮ್ಯಾನ್ ದುರಂತ ನಾಗಸಾಕಿ ದಿನ ಸ್ಮರಣೆ

Date:

1945ರ ವಿಶ್ವ ಸಮರ II ರ ಸಮಯದಲ್ಲಿ ಜಪಾನ್‌ನ ಹಿರೋಷಿಮಾ ಮತ್ತು ನಾಗಸಕಿ ಮೇಲೆ ಪರಮಾಣು ದಾಳಿಗೆ ಸಾಕ್ಷಿಯಾದವು. ಈ ಎರಡು ದಿನ ಜಪಾನಿಯರ ಪಾಲಿನ ಕಪ್ಪು ದಿನವಾಗಿದೆ. ಬಾಂಬ್ ದಾಳಿಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಾಗಸಾಕಿ ದಿನವನ್ನು ಪ್ರತಿ ವರ್ಷ ಆಗಸ್ಟ್ 9 ರಂದು ಆಚರಿಸಲಾಗುತ್ತದೆ.

ಜಪಾನ್‌ನಲ್ಲಿ ಪ್ರತಿ ವರ್ಷ ಆಗಸ್ಟ್ 9 ಅನ್ನು ಕಪ್ಪು ದಿನವಾಗಿ ಆಚರಿಸಲಾಗುತ್ತದೆ. ಹಿರೋಷಿಮಾ ಮತ್ತು ನಾಗಸಕಿಯಲ್ಲಿ ನಡೆದ ಪರಮಾಣು ಬಾಂಬ್ ದಾಳಿಯು ವ್ಯಾಪಕ ವಿನಾಶಕ್ಕೆ ಕಾರಣವಾದವು. ದಾಳಿಯನ್ನು ಧೈರ್ಯದಿಂದ ಎದುರಿಸಿದವರಿಗೆ ಮತ್ತು ಪರಮಾಣು ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಸಹಾನುಭೂತಿ ಮತ್ತು ಜಾಗೃತಿ ಮೂಡಿಸಲು ನಾಗಸಕಿ ದಿನವನ್ನು ಆಚರಿಸಲಾಗುತ್ತದೆ .

ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಪಾನ್ ಯುಎಸ್ ಮತ್ತು ಮಿತ್ರರಾಷ್ಟ್ರಗಳ ವಿರುದ್ಧ ಹೋರಾಡಿತು. 1945ರ ಮೇ 8 ರಂದು ಜರ್ಮನಿಯ ಶರಣಾಗತಿಯೊಂದಿಗೆ ಯುರೋಪ್​ನಲ್ಲಿ ಯುದ್ಧವು ಕೊನೆಗೊಂಡಿತು. ಆದರೆ ಪೆಸಿಫಿಕ್​ನಲ್ಲಿನ ಯುದ್ಧವು ಮಿತ್ರರಾಷ್ಟ್ರಗಳು ಮತ್ತು ಜಪಾನ್ ನಡುವೆ ಮುಂದುವರೆಯಿತು. ಜುಲೈ 1945 ರಲ್ಲಿ ಪಾಟ್ಸ್‌ಡ್ಯಾಮ್ ಘೋಷಣೆಯಲ್ಲಿ ಮಿತ್ರರಾಷ್ಟ್ರಗಳು ಜಪಾನ್‌ಗೆ ಬೇಷರತ್ತಾದ ಶರಣಾಗತಿಯನ್ನು ಕೇಳಿದರು. ಆದಾಗ್ಯೂ ಇದನ್ನು ಜಪಾನ್ ನಿರ್ಲಕ್ಷಿಸಿ ಯುದ್ಧವನ್ನು ಮುಂದುವರೆಸಿತು. ಇದರಿಂದಾಗಿ ಜಪಾನ್ ಮತ್ತು ಯುಎಸ್ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಡಲು ಕಾರಣವಾಯಿತು.
ಜಪಾನಿನ ಪಡೆಗಳು ಈಸ್ಟ್ ಇಂಡೀಸ್ನ ತೈಲ-ಸಮೃದ್ಧ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಇಂಡೋಚೈನಾದಲ್ಲಿ ಗುರಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದವು. ಹೀಗಾಗಿ ಯುಎಸ್ ಅಧ್ಯಕ್ಷ ಹ್ಯಾರಿ ಟ್ರೂಮನ್ ಎರಡನೇ ಮಹಾಯುದ್ಧದಲ್ಲಿ ಸಮಯದಲ್ಲಿ ಜಪಾನ್ ಶರಣಾಗುವಂತೆ ಮಾಡಲು ಪರಮಾಣು ಬಾಂಬ್‌ಗಳ ಬಳಕೆಯನ್ನು ಅಧಿಕೃತಗೊಳಿಸಿದರು. ಇದರ ಪರಿಣಾಮವಾಗಿ 1940 ರ ದಶಕದಲ್ಲಿ ಮ್ಯಾನ್ಹ್ಯಾಟನ್ ಯೋಜನೆಯ ಪರಿಣಾಮವಾಗಿ ಅಭಿವೃದ್ಧಿಪಡಿಸಲಾದ ಎರಡು ರೀತಿಯ ಪರಮಾಣು ಬಾಂಬ್ಗಳನ್ನು ಬಳಸಲಾಯಿತು.

ಲಿಟಲ್ ಬಾಯ್ ಯುರೇನಿಯಂ ಬಾಂಬ್ ಅನ್ನು ಹಿರೋಷಿಮಾ ನಗರದಲ್ಲಿ 6 ಆಗಸ್ಟ್ 1945 ರಂದು ಮತ್ತು ‘ದಿ ಫ್ಯಾಟ್ ಮ್ಯಾನ್’, ಪ್ಲುಟೋನಿಯಂ ಬಾಂಬ್ ಅನ್ನು ನಾಗಸಾಕಿ ನಗರದಲ್ಲಿ ಅದೇ ವರ್ಷದ ಆಗಸ್ಟ್ 9 ರಂದು ಹಾಕಲಾಯಿತು.

ಹಿರೋಷಿಮಾದ ಮೇಲೆ ಹಾಕಲಾದ ಲಿಟಲ್ ಬಾಯ್ ಅಣುಬಾಂಬ್ 2.5 ಕಿಮೀ ವ್ಯಾಪ್ತಿಯಲ್ಲಿರುವ ಕಟ್ಟಡಗಳನ್ನು ನಾಶಪಡಿಸಿತು. 28,000 ಕ್ಕೂ ಹೆಚ್ಚು ಜನರು ಘಟನೆಯಲ್ಲಿ ಸಾವನ್ನಪ್ಪಿದರು. ನಾಗಸಾಕಿಯ ಮೇಲೆ ಬಿದ್ದ ಪ್ಲುಟೋನಿಯಂ ಬಾಂಬ್ 75000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು. ಘಟನೆಯ ವರ್ಷಗಳ ನಂತರವೂ ನಗರದಲ್ಲಿ ಬದುಕುಳಿದವರು ಇನ್ನೂ ಹೆಚ್ಚಿನ ಆವರ್ತನದಲ್ಲಿ ಲ್ಯುಕೇಮಿಯಾ, ಥೈರಾಯ್ಡ್, ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗಳಂತಹ ಕಾಯಿಲೆಗಳನ್ನು ಅನುಭವಿಸುತ್ತಾರೆ.

ಇತರೆ ರಾಷ್ಟ್ರಗಳಿಗೆ ಶಾಂತಿಯುತ ಸಹಬಾಳ್ವೆಯ ಸಂದೇಶವನ್ನು ಕಳುಹಿಸುವುದು ಈ ದಿನದ ಇನ್ನೊಂದು ಗುರಿಯಾಗಿದೆ. ಪರಮಾಣು ಯುದ್ಧ ಮತ್ತು ಪ್ರಸರಣದ ನೆರಳಿನಲ್ಲಿ ಬದುಕುತ್ತಿರುವ ಜಪಾನ್‌ನ ನಾಗರಿಕರು ದಿನದ ಅಂಗವಾಗಿ ಅನೇಕ ಶಾಂತಿ ಅಭಿಯಾನಗಳನ್ನು ಆಯೋಜಿಸುವ ಮೂಲಕ ಜಗತ್ತಿನಲ್ಲಿ ಶಾಂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಹರಡಿದರು. ಸಭೆಗಳು, ಸಮ್ಮೇಳನಗಳು, ವಿಮರ್ಶೆಗಳು ಮತ್ತು ಪ್ರಸ್ತಾಪಗಳನ್ನು ಉನ್ನತ ಮಟ್ಟದಲ್ಲಿ ಚರ್ಚಿಸಲಾಗುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...