ಗೋ ಹತ್ಯೆ ತಡೆಯುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರಸಭೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಇದೀಗ ನಗರದಲ್ಲಿ ಉತ್ತರ ಪ್ರದೇಶದ ಯೋಗಿ ಮಾದರಿ ಅಳವಡಿಸಿಕೊಂಡು ಗೋ ಹತ್ಯೆ ತಡೆಯುವ ಪ್ರಯತ್ನ ಮಾಡುತ್ತಿದೆ.
ಚಿಕ್ಕಮಗಳೂರು ನಗರಸಭೆಯಿಂದ ನಿರಂತರವಾಗಿ ಗೋಮಾಂಸ ಅಡ್ಡೆಗಳ ಮೇಲೆ ದಾಳಿಯಾಗುತ್ತಿದ್ದು, ಹಲವೆಡೆ ಗೋಮಾಂಸ ವಶಕ್ಕೆ ಪಡೆದಿದ್ದರು. ಇದೀಗ ಅವರ ಮನೆಯ ದಾಖಲೆಗಳನ್ನು ರದ್ದು ಮಾಡಿ, ನಗರಸಭೆ ಆಸ್ತಿ ಎಂದು ಪರಿವರ್ತನೆ ಮಾಡಲು ಸಿದ್ದತೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಗೋ ಹತ್ಯೆ, ಗೋ ಮಾಂಸ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ಮಾಡಿದ್ದು, ಅವರ ಮನೆಯ ವಿದ್ಯುತ್, ನೀರಿನ ಸಂಪರ್ಕ ಬಂದ್ ಮಾಡಿದ್ದಾರೆ.