Tuesday, February 17, 2026
Tuesday, February 17, 2026
Home Blog Page 1721

ಪ್ರೊ ಕಬಡ್ಡಿ ಲೀಗ್ ಬುಲ್ಸ್ ಜಯದ ಕೇಕೆ

0

ವೈಟ್ ಫೀಲ್ಡ್ ನ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪ್ರೊ ಕಬ್ಬಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ತಂಡವು ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಚೇತೋಹಾರಿ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿತ್ತು.

114ನೇ ಪಂದ್ಯದಲ್ಲಿ ಬೆಂಗಳೂರು ತಂಡ 45-37 ಅಂಕಗಳ ಅಂತರದಿಂದ ಜೈಪುರ ತಂಡದ ವಿರುದ್ಧ ಗೆಲುವು ಸಾಧಿಸಿದೆ. 22-19 ಅಂಕಗಳಿಂದ ಅಂತರ ಕಾಯ್ದುಕೊಂಡ ಬೆಂಗಳೂರು ಬುಲ್ಸ್, ದ್ವಿತೀಯಾರ್ಧದಲ್ಲಿ ಅದೇ ಲಯ ಮುಂದುವರಿಸಿ 23-18ರಲ್ಲಿ ಮೇಲುಗೈ ಸಾಧಿಸಿತು.

8 ಅಂಕಗಳ ಅಂತರದಿಂದ ಬೆಂಗಳೂರು ಬುಲ್ಸ್ ತಂಡವು ಜಯಭೇರಿ ಬಾರಿಸಿದೆ. ಬೆಂಗಳೂರು ಬುಲ್ಸ್ ತಂಡದ ಪರ ರೇಡರ್ ಭರತ್ 15 ಅಂಕ ಕಲೆ ಹಾಕಿದರು. ನಾಯಕ ಪವನ್ ತಂಡಕ್ಕೆ 10 ಅಂಕಗಳನ್ನು ತಂದುಕೊಟ್ಟರು.

ಪ್ರಬಲ ಪೈಪೋಟಿ ನೀಡಿದಂತಹ ಜೈಪುರ ತಂಡದ ಪರ ರೇಡರ್ ಅರ್ಜುನ್ ದೇಶ್ವಾಲ್ 16 ಅಂಕಗಳ ಕೊಡುಗೆ ನೀಡಿ ಗಮನಸೆಳೆದರು.

19 ಪಂದ್ಯಗಳನ್ನಾಡಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ಸದ್ಯ 52 ಅಂಕ ಹೊಂದಿದೆ. 60 ಅಂಕ ಕಲೆಹಾಕಿ ಬೆಂಗಳೂರು ಬುಲ್ಸ್ ತಂಡ ಫ್ಲೇ ಆಫ್ ನತ್ತ ಮಹತ್ವದ ಹೆಜ್ಜೆಯಿರಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಕ್ಷವು ನಮಗೆ ಕೆಲಸ ಮಾಡುವುದನ್ನ ಕಲಿಸಿದೆ-ಸಂಸದ ಬಿವೈಆರ್

0

ರೇಲ್ವೆ ಯೋಜನೆ ದಾರಿ ತಪ್ಪದಂತೆ ಎಚ್ಚರಿಕೆ ವಹಿಸಿ ಪೂರ್ಣಗೊಳಿಸಲಾಗುವುದು ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಶಿಕಾರಿಪುರದ ಕಲ್ಮನೆ ಗ್ರಾಮದಲ್ಲಿ ಭಾಗ್ಯೋದಯ ಮಹಿಳಾ ಸಹಕಾರ ಸಂಘದ ಸಮುದಾಯ ಭವನ ಉದ್ಘಾಟನೆ ನೆರವೇರಿಸಿ ಬಿ.ವೈ. ರಾಘವೇಂದ್ರ ಅವರು ಮಾತನಾಡುತ್ತಿದ್ದರು. ತಾಲೂಕಿನ ಅಭಿವೃದ್ಧಿಗೆ ಕಲ್ಲು ಹಾಕುವ ಕೆಲಸಕ್ಕೆ ಮುಂದಾಗುವ ಕಿಡಿಗೇಡಿಗಳಿಗೆ ಜನತೆ ಮಾನ್ಯತೆ ನೀಡಬಾರದು. ರೈಲ್ವೆ ಯೋಜನೆ ದಾರಿತಪ್ಪಿಸಲು ಹೊರಟಿದ್ದವರು ಹೊರಟಿರುವವರು ಅಂಜನಾಪುರ ಜಲಾಶಯದಿಂದ ತಾಲೂಕಿನ ಎಲ್ಲಾ ಕೆರೆ ತುಂಬಿಸುವ ಮಾತನಾಡಿದರೂ ಅದು ಅಸಾಧ್ಯ. ಆದರೂ ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಯಿತು. ಇದೀಗ ತುಂಗಭದ್ರಾ ನದಿಯಿಂದ ನೀರನ್ನು ತಂದು ಕೆರೆ ತುಂಬಿಸುವ ಕೆಲಸ ಆಗಿದೆ. ಕೇವಲ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ರಾಜ್ಯದಲ್ಲೆ ವೇಗದ ಕಾಮಗಾರಿಗೆ ಇದೊಂದು ದಾಖಲೆಯಾಗಿದೆ. ನಮ್ಮ ಪಕ್ಷ ನಮಗೆ ಕೆಲಸ ಮಾಡಿ ತೋರಿಸುವುದನ್ನು ಕಲ್ಪಿಸಿದೆ ಎಂದರು. ತಾಲೂಕಿನ ಜನತೆ, ರೈತರ ಅನುಕೂಲಕ್ಕೆ ತಾಲೂಕಿನ ಕೆರೆ ತುಂಬಿಸುವ ಕೆಲಸ ಪೂರ್ಣಗೊಳಿಸಲಾಗಿದೆ. ತಾಲೂಕಿನ ಯಾವುದೇ ಬಗರ್ ಹುಕುಂ ರೈತರ ಒಕ್ಕಲೆಬ್ಬಿಸುವು ದಕ್ಕೆ ಬಿಟ್ಟಿಲ್ಲ ,ಬಿಡುವುದೂ ಇಲ್ಲ ಎಂದರು.

ಈ ಸಂದರ್ಭದಲ್ಲಿ ಎಂ ಎಡಿಬಿ ಅಧ್ಯಕ್ಷ ಕೆ. ಎಸ್. ಗುರು ಮೂರ್ತಿ, ಜಿ.ಪಂ. ಸದಸ್ಯ ಅರುಂಧತಿ ರಾಜೇಶ್, ಮಹಿಳಾ ಸಮಾಜದ ಅಧ್ಯಕ್ಷೆ ಶಾಂತಮ್ಮ, ಗ್ರಾ. ಪಂ. ಅಧ್ಯಕ್ಷೆ ಗೀತಾ ಮಲ್ಲೇಶ್ ಇನ್ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹೈಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಿ- ಸಿಎಂ ಬೊಮ್ಮಾಯಿ

0

ರಾಜ್ಯದಾದ್ಯಂತ 9 ಹಾಗೂ 10ನೇ ತರಗತಿ ಗಳು ಇಂದಿನಿಂದ ಆರಂಭಗೊಂಡಿದೆ. ಆದರೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಮಂಗಳವಾರದವರೆಗೆ ರಜೆ ವಿಸ್ತರಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಹಿಜಬ್, ಕೇಸರಿ ಶಾಲು ವಿವಾದ ಭುಗಿಲೆದ್ದ ಕಾರಣ ರಜೆ ಘೋಷಿಸಲಾಗಿತ್ತು.

ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸಮನ್ವಯದಿಂದ, ಸೌಹಾರ್ದದ ವಾತಾವರಣ ಮೂಡಿಸಲು ಶಾಲೆಗಳಿಗೆ ಭೇಟಿ ನೀಡಬೇಕು. ಶಾಂತಿ ಸಭೆಗಳನ್ನು ನಡೆಸಬೇಕು ಎಂದು ಸರ್ಕಾರ ಸೂಚಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ದಾಖಲಾಗಿರುವ ರಿಟ್ ಅರ್ಜಿಗಳ ವಿಚಾರಣೆ ಇತ್ಯರ್ಥ ಆಗುವತನಕ ವಿದ್ಯಾರ್ಥಿಗಳು ಕೇಸರಿ, ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವಂತಿಲ್ಲ. ಧಾರ್ಮಿಕ ಸಂಕೇತದ ಬಾವುಟಗಳನ್ನು ಪ್ರದರ್ಶನ ಮಾಡುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧಿಸಿದ ವಿಚಾರಣೆ ಫೆಬ್ರವರಿ 14ರಂದು ಮುಂದುವರೆಯಲಿದೆ.

ಸರ್ಕಾರದ ಸೂಚನೆಯ ಅನ್ವಯ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿನೆ ನೀಡಿದ್ದಾರೆ. ಇಲಾಖೆ ಸಹಕಾರದಲ್ಲಿ ತರಗತಿಗಳನ್ನು ಆರಂಭಿಸಬೇಕು. ಶಾಲೆಗಳಲ್ಲಿ ಶಾಂತಿ ಕಾಪಾಡಲು ಪೋಷಕರ ಮತ್ತು ಶಾಲಾ ಮೇಲುಸ್ತುವಾರಿ ಅಭಿವೃದ್ಧಿ ಸಮಿತಿಯ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಿಜವಾದ ಹಿಂದೆ ಇರುವ ಸಂಸ್ಥೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಪೊಲೀಸ್ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಕಾಲೇಜುಗಳನ್ನು ಮೊದಲಿದ್ದ ಸ್ಥಿತಿಗೆ ತರಬೇಕು. ಸೌಹಾರ್ದಯುತ ವಾತಾವರಣ ನಿರ್ಮಿಸಿ, ವಿದ್ಯಾರ್ಜನೆಗೆ ಮಹತ್ವ ನೀಡಬೇಕಿರುವುದು ಸದ್ಯದ ಆದ್ಯತೆ ಎಂದರು.

ಕೆಲವೇ ದಿನಗಳಲ್ಲಿ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದೆ. ವಾರ್ಷಿಕ ಪರೀಕ್ಷೆಗೆ ಆದ್ಯತೆ ನೀಡಲಾಗುವುದು. ವಿಭಾಗದಲ್ಲಿ ಯಾವ ಸಂಘಟನೆಗಳು ತೊಡಗಿಸಿಕೊಂಡಿವೆ, ಮತ್ತು ಯಾರ ಕೈವಾಡ ಇದೆ ಎನ್ನುವುದನ್ನು ತನಿಖಾ ಸಂಸ್ಥೆಗಳು ನೋಡಿಕೊಳ್ಳಲಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ದೇಶದಲ್ಲಿ ಕೋವಿಡ್ ಸೋಂಕು ಗಣನೀಯ ಇಳಿಕೆ

0

ದೇಶದಲ್ಲಿ ಕೋವಿಡ್ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆಯು ಕಡಿಮೆಯಾಗಿಲ್ಲ ಇದಕ್ಕೆ ಸೋಂಕಿತರಲ್ಲಿ ವಿಟಮಿನ್ ಡಿ ಕೊರತೆ ಕಾರಣ ಎಂದು ತಿಳಿದುಬಂದಿದೆ.

ದೇಶಾದ್ಯಂತ ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಯಾದ 24 ಗಂಟೆಯ ಅವಧಿಯಲ್ಲಿ 44,877 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 684 ಸೋಂಕಿತರ ಸಾವಿನ ಸಂಖ್ಯೆಯು ವರದಿಯಾಗಿದೆ.

ಸುಮಾರು 40 ದಿನಗಳ ಬಳಿಕ ಇದೇ ಮೊದಲ ಬಾರಿ ದೈನಂದಿನ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದೆ. ಆದರೆ ಹೊಸ ಪ್ರಕರಣಗಳ ಸಂಖ್ಯೆ ಯಾವ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆಯೋ, ಈ ಪ್ರಮಾಣದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದು ಕೇಂದ್ರ ಸರ್ಕಾರ ಮಾತ್ರವಲ್ಲದೇ, ತಜ್ಞರನ್ನು ಚಿಂತೆಗೀಡುಮಾಡಿದೆ.

ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಅಗತ್ಯವಿದೆ. ವಿಟಮಿನ್-ಡಿ ಕೊರತೆಯು ಕೋವಿಡ್ ನಿರೋಧಕ ಲಸಿಕೆಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ಧರಿಸಿ ಸಿದ್ಧತಾ ಪರೀಕ್ಷೆ ಬಹಿಷ್ಕರಿಸಿದ ಪ್ರಸಂಗ

0

ಶಿವಮೊಗ್ಗ ನಗರದಲ್ಲಿ ಇಂದಿನಿಂದ ಪ್ರೌಢಶಾಲೆಗಳು ಆರಂಭವಾಗಿದೆ. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ.

13 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡದ ಕಾರಣ ಪರೀಕ್ಷೆಯನ್ನು ಬಹಿಷ್ಕರಿಸಿ ಹೊರನಡೆದ ಪ್ರಸಂಗ ವರದಿಯಾಗಿದೆ.

ಕೆಲಕಾಲ ಶಾಲೆಯಲ್ಲಿ ಗೊಂದಲ ಮೂಡಿತ್ತು. ಬಳಿಕ ಪೋಷಕರು ಆಗಮಿಸಿ ವಿದ್ಯಾರ್ಥಿನಿಯರನ್ನು ಮನೆಗೆ ಕರೆದುಕೊಂಡು ತೆರಳಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಯುರ್ವೇದ ಚಿಕಿತ್ಸೆಯಿಂದ ದೃಷ್ಟಿ ಪಡೆದ ಕೀನ್ಯಾದ ಮಹಿಳೆ

0

ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಪುತ್ರಿಗೆ ಆಯುರ್ವೇದ ಚಿಕಿತ್ಸೆಯಿಂದ ದೃಷ್ಟಿ ಮರಳಿ ಬಂದಿರುವುದಾಗಿ ತಿಳಿಸಿದ್ದಾರೆ. ರೈಲಾ ಒಡಿಂಗಾ ಅವರು ಆಯುರ್ವೇದ ಚಿಕಿತ್ಸೆ ವ್ಯವಸ್ಥೆಯನ್ನ ಕಲ್ಪಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈಲಾ ಒಡಿಂಗಾ ಅವರು “ಆಯುರ್ವೇದ ಚಿಕಿತ್ಸೆ ಇಂದಾಗಿ ನನ್ನ ಮಗಳ ದೃಷ್ಟಿ ಮರಳಿದೆ ಮತ್ತು ಅವಳ ಆತ್ಮವಿಶ್ವಾಸ ಸಹ ವೃದ್ಧಿಸಿದೆ. ಈ ಚಿಕಿತ್ಸಾ ವಿಧಾನವನ್ನು ಆಫ್ರಿಕಾದಲ್ಲಿಯೂ ಪರಿಚಯಿಸುವಂತೆ ಮನವಿ ಮಾಡುತ್ತೇನೆ. ಇದರಿಂದ ಆಫ್ರಿಕಾ ಜನರಿಗೆ ಬಹಳ ಅನುಕೂಲವಾಗಲಿದೆ. ಈ ಸಂಬಂಧ ಶೀಘ್ರವೇ ಅವರೊಂದಿಗೆ ಮಾತನಾಡುತ್ತೇನೆ” ಎಂಬುದು ವರದಿಯಾಗಿದೆ.

ರೈಲಾ ಒಡಿಂಗಾ ಅವರ ಪುತ್ರಿ ರೋಸ್ ಮೇರಿ ಅವರು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದರು. 2017ರಲ್ಲಿ ನೈರೋಬಿಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ರೋಸ್ ಮೇರಿ ಅವರು ದೃಷ್ಟಿ ಕಳೆದುಕೊಂಡಿದ್ದರು. 2019 ರಲ್ಲಿ ಕೇರಳದ ಕೂಥಟ್ಟುಕುಲಂನ ಆಯುರ್ವೇದ ಕಣ್ಣಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಯುರ್ವೇದ ಚಿಕಿತ್ಸೆ ಇಂದಾಗಿ ರೋಸ್ ಮೇರಿ ಅವರಿಗೆ ದೃಷ್ಟಿ ಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿರಿಯ ನಾಗರೀಕರಿಗೆ ಸಹಾಯವಾಣಿ

0

ವಿಕಲಚೇತನ ಹಾಗೂ ಹಿರಿಯ ನಾಗರೀಕರ ಇಲಾಖೆ ಅಡಿಯಲ್ಲಿ ಲಲಿತಾ ಅಕಾಡೆಮಿ ಸಂಸ್ಥೆಯು ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರವನ್ನು ಸಾಗರ ರಸ್ತೆಯ ಡಿವೈಎಸ್‍ಪಿ ಕಚೇರಿಯಲ್ಲಿ ನಡೆಸುತ್ತಿದೆ.

ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರದ ಸಂಖ್ಯೆ : 1090 ಹಾಗೂ ಕಚೇರಿ ಸಂಖ್ಯೆ 08182-221188, 260424 ಆಗಿರುತ್ತದೆ. ತೊಂದರೆಯಲ್ಲಿರುವ ಹಿರಿಯರಿಗೆ ಸಾಧ್ಯವಾಗುವ ಸಕಾಲ ಬೆಂಬಲ, ಹಿರಿಯರಿಗೆ ಅಗತ್ಯವಿದ್ದಲ್ಲಿ ಉಚಿತ ಕಾನೂನಿನ ನೆರವು, ಕೌಟುಂಬಿಕ ವಿಷಯಗಳಲ್ಲಿ ರಾಜಿ ಮಾಡಿಸುವುದು, ವಿವಾದಗಳನ್ನು ಬಗೆಹರಿಸಲು ಬೇರೆ ಮಾರ್ಗೋಪಾಯಗಳನ್ನು ಸೂಚುಸುತ್ತದೆ.

ತೀರ ಅಗತ್ಯವಿದ್ದಲ್ಲಿ ಪೊಲೀಸರ ನೆರವಿನಿಂದ ಸಮಸ್ಯೆ ಪರಿಹರಿಸು ಸೂಕ್ತ ಮಾರ್ಗದರ್ಶನ/ಸಲಹೆ ಕೊಡುವುದು, ಮಾನಸಿಕ ಧೈರ್ಯ ತುಂಬುವುದು, ವೃದ್ದಾಶ್ರಮದಲ್ಲಿ ಪುನರ್ವಸತಿ ಒದಗಿಸುವುದು ಮತ್ತು ಅದರಲ್ಲಿ ದೊರೆಯುವಂತಹ ಸೌಲಭ್ಯಗಳು, ವೈದ್ಯಕೀಯ ಸಲಹೆಯಂತೆ ಸೇವೆಯನ್ನು ಒದಗಿಸಲಾಗುವುದು ಎಂದು ಹಿರಿಯ ನಾಗರೀಕರ ಸಹಾಯವಾಣಿ ಯೋಜನಾ ಸಂಯೋಜಕರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಿಲ್ಲೆಗೊಂದು ಸೈಬರ್ ಸೆಲ್ ಸಂಸದೀಯ ಸಮಿತಿ ಪ್ರಸ್ತಾವನೆ

0

ಸಂಸದೀಯ ಸ್ಥಾಯಿ ಸಮಿತಿಯು ದೇಶಾದ್ಯಂತ ಸೈಬರ್ ಅಪರಾಧಗಳನ್ನು ತಡೆಯಲು ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಸೆಲ್ ಗಳ ಸ್ಥಾಪನೆಗೆ ಶಿಫಾರಸ್ಸು ಮಾಡಿದೆ.

ಕೇಂದ್ರ ಗೃಹ ಇಲಾಖೆಯು ಈ ಸಂಬಂಧ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ನೇತೃತ್ವದ ಗೃಹ ಇಲಾಖೆಗೆ ಸಂಬಂಧಿಸಿದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಸೈಬರ್ ಅಪರಾಧಗಳನ್ನು ಎಸಗಲು ಡಾರ್ಕ್ ವೆಬ್ ಮತ್ತು ವಿಓಐಪಿ(ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟಾಕಾಲ್) ತಂತ್ರಜ್ಞಾನ ಬಳಸುತ್ತಿದ್ದಾರೆ. ಈ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಎದರಿಸುವ ಕಾರ್ಯತಂತ್ರವನ್ನು ಇಲಾಖೆಯು ಅಳವಡಿಸಿಕೊಳ್ಳಬೇಕಿದೆ.

ಪ್ರಸ್ತುತ ಸವಾಲುಗಳನ್ನು ಎದುರಿಸಲು ಯಾವುದೇ ಪೊಲೀಸ್ ಪಡೆ ಇನ್ನೂ ಸಜ್ಜಾಗಿಲ್ಲ. ಪೊಲೀಸ್ ಇಲಾಖೆಯನ್ನು ಮೇಲ್ದರ್ಜೆಗೆ ಏರಿಸುವುದು, ಅತ್ಯಾಧುನಿಕ ಕೌಶಲ್ಯಗಳ ಅಳವಡಿಕೆ, ಸಂಪನ್ಮೂಲ ಒದಗಿಸುವಿಕೆ ಬಗ್ಗೆ ತಿಳಿಸಿದೆ.

ಕರ್ನಾಟಕದಲ್ಲಿ ಸೈಬರ್ ಸೆಲ್ ಗಳ ಸಂಖ್ಯೆ ಸೀಮಿತವಾಗಿದೆ. ಉತ್ತರಪ್ರದೇಶ ದೇಶದಲ್ಲಿ ಅತಿ ದೊಡ್ಡ ರಾಜ್ಯವಾಗಿದ್ದರೂ ಕೇವಲ ಎರಡು ಸೈಬರ್ ಸೆಲ್ ಗಳಿವೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗೋವಾ, ಮಿಜೋರಾಂ, ಲಡಾಕ್, ಲಕ್ಷದ್ವೀಪಗಳಲ್ಲಿ ಒಂದು ಸೈಬರ್ ಸೆಲ್ ಇಲ್ಲ ಎಂದು ಸಮಿತಿ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ಸಮಸ್ಯೆ ಅಮೆರಿಕ- ರಷ್ಯಾ ಶೀತಲ ಸಮರ

0

ಉಕ್ರೇನ್ ನೊಂದಿಗಿನ ಸಂಘರ್ಷವನ್ನು ರಾಜತಾಂತ್ರಿಕ ಮಾರ್ಗದ ಮುಖಾಂತರ ಬಗೆಹರಿಸಿಕೊಳ್ಳಲು ಈಗಲೂ ಅವಕಾಶ ಇದೆ. ಈ ಬಗ್ಗೆ ರಷ್ಯ ಯೋಚಿಸಬೇಕು ಎಂದು ಅಮೆರಿಕ ಉತ್ತರ ನೀಡಿದೆ.

ಉಕ್ರೇನ್ ಮೇಲೆ ರಷ್ಯಾ ನಡೆಸುವ ದಾಳಿ ವ್ಯಾಪಕ ಹಿಂಸೆ ತೊಂದರೆಗಳಿಗೆ ಕಾರಣವಾಗುತ್ತದೆ. ಜಾಗತಿಕವಾಗಿ ನೀವು ಪ್ರತ್ಯೇಕತೆ ಎದುರಿಸಬೇಕಾಗುತ್ತದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಹೇಳಿದ್ದಾರೆ.

ಉಭಯ ದೇಶಗಳ ನಡುವಿನ ಸಂಘರ್ಷ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ, ನಮ್ಮ ರಾಯಭಾರ ಕಚೇರಿ ಸಿಬ್ಬಂದಿಯನ್ನು ಕೀವ್ ನಿಂದ ವಾಪಸು ಕರೆಸಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

ಅಮೆರಿಕದ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪುಟಿನ್, ಇಂಥ ಹೇಳಿಕೆಗಳು ಮಾನಸಿಕ ಸಮತೋಲನವನ್ನು ತೋರಿಸುತ್ತವೆ ಎಂದು ತಿಳಿಸಿದ್ದಾರೆ.

ಉಕ್ರೇನ್ ಮೇಲೆ ದಾಳಿ ನಡೆಸುವ ಯೋಜನೆ ಇಲ್ಲ ಎಂದು ರಷ್ಯಾ ಪದೇಪದೇ ಹೇಳುತ್ತಿದೆ. ತನ್ನದೇನಿದ್ದರೂ, ನ್ಯಾಟೊ ಮಿತ್ರ ರಾಷ್ಟ್ರಗಳ ಆಕ್ರಮಣ ಶೀಲತೆಗೆ ಪ್ರತಿಕ್ರಿಯೆ ಅಷ್ಟೇ ಎಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಈಶಾನ್ಯ ರಾಜ್ಯಗಳಲ್ಲಿ ಪೋಲಿಸ್ ಪಡೆ ಆಧುನೀಕರಣ

0

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ, ಈಶಾನ್ಯ ರಾಜ್ಯಗಳಲ್ಲಿ ಪೊಲೀಸ್ ಪಡೆಗಳ ಆಧುನಿಕರಣ, ಹೊಸ ಪಡೆಗಳ ರಚನೆ, ಅವುಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು, ಅತ್ಯಾಧುನಿಕ ಮರಣೋತ್ತರ ಪರೀಕ್ಷೆ ಪ್ರಯೋಗಾಲಯಗಳ ನಿರ್ಮಾಣ, ತನಿಖಾ ಸಾಧನಗಳ ಉನ್ನತಿಕರಣ ಸೇರಿದಂತೆ ಪೊಲೀಸ್ ಪಡೆಗಳ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದಾರೆ.

ಈ ಕುರಿತಂತೆ ಗೃಹಸಚಿವಾಲಯವು ಮಾಡರ್ನೈಸೇಶನ್ ಆಫ್ ಪೊಲೀಸ್ ಫೋರ್ಸ್ ಯೋಜನೆಯನ್ನು ಮುಂದುವರಿಸಿದೆ. ಐದು ವರ್ಷಗಳಲ್ಲಿ 26,275 ಕೋಟಿ ರೂ. ವೆಚ್ಚ ಮಾಡಲು ಗೃಹ ಸಚಿವಾಲಯಕ್ಕೆ ಅಗತ್ಯ ಅನುಮೋದನೆಯನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ. 2021-22 ನೇ ಸಾಲಿನಲ್ಲಿ ನೀಡಲಾಗಿದ್ದ ಅನುಮೋದನೆಯನ್ನು ಒಂದೇ ಬಾರಿಗೆ ಮುಂದಿನ ನಾಲ್ಕು ವರ್ಷಗಳಿಗೆ ವಿಸ್ತರಿಸಿದಂತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಭದ್ರತೆಗೆ ಸಂಬಂಧಿಸಿದ ವೆಚ್ಚವೇ 18,839 ಕೋಟಿ ರೂ. ಆಗಿದೆ. ಈಶಾನ್ಯ ರಾಜ್ಯಗಳು ಹಾಗೂ ಛತ್ತೀಸ್ ಗಢದಲ್ಲಿ ಮಾವೋವಾದಿಗಳ ಉಪಟಳಕ್ಕೆ ಅಂಕುಶ ಹಾಕಲು ಪೊಲೀಸ್ ಪಡೆಗಳು ಬಳಸುವ ತಂತ್ರಜ್ಞಾನ ವ್ಯವಸ್ಥೆಯ ಡಿಜಿಟಲೀಕರಣಕ್ಕೆ 4,846 ಕೋಟಿ ರೂ. ವೆಚ್ಚ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

350 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ಮೀಸಲು ಬೆಟಾಲಿಯನ್ ಭಾರತೀಯ ಮೀಸಲು ಪಡೆ ರಚನೆ ಮಾಡಲಾಗುವುದು. ಇದಕ್ಕೆ ಅಗತ್ಯ ಅನುದಾನವನ್ನು ಪೂರ್ಣರೂಪದಲ್ಲಿ ಕೇಂದ್ರ ಸರ್ಕಾರವೇ ನೀಡಲಿದೆ.

ಮಾದಕವಸ್ತು ನಿಯಂತ್ರಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡುವ ಯೋಜನೆ ಅಡಿಯಲ್ಲಿ 50 ಕೋಟಿ ರೂ. ಮಾಡಲಾಗುವುದು ಎಂದು ತೀರ್ಮಾನಿಸಲಾಗಿದೆ.