Tuesday, February 17, 2026
Tuesday, February 17, 2026
Home Blog Page 1722

ಈಗ ಕ್ಯೂ ಆರ್ ಕೋಡ್ ಮೂಲಕ ರೈಲ್ವೆ ಟಿಕೆಟ್ ಲಭ್ಯ

0

ರಾಯಚೂರು ನಗರದ ರೈಲು ನಿಲ್ದಾಣದಲ್ಲಿ ಸ್ವಯಂ ಚಾಲಿತ ಟಿಕೆಟ್ ಪಡೆಯುವ ಯಂತ್ರದಲ್ಲಿ ಕ್ಯೂ ಆರ್ ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ನೆರವಾಗಲಿದೆ.

ರೈಲ್ವೆ ಇಲಾಖೆಯು, ಸೇವೆ ಮತ್ತು ಸೌಲಭ್ಯಗಳನ್ನು ಸರಳವಾಗಿ ತಲುಪಿಸುವ ನಿಟ್ಟಿನಲ್ಲಿ ಇದೀಗ ಎಟಿಎಂ ಮಾದರಿಯ ಯಂತ್ರಗಳಲ್ಲಿ ಡಿಜಿಟಲ್ ವ್ಯವಸ್ಥೆ ಮೂಲಕ ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.

ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಕೌಂಟರ್ ಗಳ ಬಳಿ ಸರತಿ ಸಾಲಿನಲ್ಲಿ ನಿಂತು ಸಾಮಾನ್ಯ ದರ್ಜೆಯ ಟಿಕೆಟ್ ಪಡೆಯುವುದನ್ನು ತಪ್ಪಿಸಲು ಸ್ವಯಂ ಚಾಲಿತ ಟಿಕೆಟ್ ನೀಡುವ ಯಂತ್ರಗಳನ್ನು ಸ್ಥಾಪಿಸಲಾಗಿದೆ.
ಯಂತ್ರಗಳನ್ನು ಬಳಸಿ ಪ್ರಯಾಣಿಕರು ಸಾಮಾನ್ಯ ದರ್ಜೆಯ ಬೋಗಿಗಳಲ್ಲಿ ಪ್ರಯಾಣಿಸಲು ನಿರ್ದಿಷ್ಟ ಹಣ ಪಾವತಿಸಿ, ಟಿಕೆಟ್ ಪಡೆಯುವ ವ್ಯವಸ್ಥೆ ಇದುವರೆಗೆ ಜಾರಿಯಲ್ಲಿತ್ತು.

ಟಿಕೆಟ್ ವಿತರಿಸುವ ಯಂತ್ರ ಅಳವಡಿಕೆಯಿಂದ ರೈಲುಗಳ ಆಗಮನದ ವೇಳೆ ಎಲ್ಲರೂ ಕೌಂಟರ್ ಗಳಿಗೆ ಮುಗಿಬಿದ್ದು ಟಿಕೆಟ್ ಖರೀದಿಸುವುದಕ್ಕೆ ಕಡಿವಾಣ ಬಿದ್ದಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿರಿಸಿರುವ ರೈಲ್ವೆ ಇಲಾಖೆಯು ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡಿದೆ.
ಟಿಕೆಟ್ ವಿತರಿಸುವ ಯಂತ್ರಗಳಲ್ಲಿ ಕ್ಯೂ ಆರ್ ಕೋಡ್ ಬಳಕೆ ಸೌಲಭ್ಯ ಅಳವಡಿಸುವ ಮೂಲಕ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಿದೆ. ಈ ಯಂತ್ರದ ಕುರಿತು ರೈಲ್ವೆ ಸಿಬ್ಬಂದಿ ಪ್ರಯಾಣಿಕರಿಗೆ ಮಾಹಿತಿ ಒದಗಿಸಲಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪುಲ್ವಾಮ ದುರಂತ ಕಂಬನಿ ಮಿಡಿತ

0

ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಯೋಧರು ಹುತಾತ್ಮರಾದರು. ಈ ದಾಳಿಗೆ ದೇಶದೆಲ್ಲೆಡೆ ಅತೀವ ಆಕ್ರೋಶ ವ್ಯಕ್ತವಾಗಿತ್ತು.

ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಜೈಷ್ ಎ- ಮೊಹಮ್ಮದ್ ಉಗ್ರಗಾಮಿ ಸಂಘಟನೆ ಈ ದಾಳಿಯಲ್ಲಿ ಭಾಗಿಯಾಗಿತ್ತು.

ಇದು 1989 ರ ಬಳಿಕ ರಾಜ್ಯ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಭೀಕರ ಮಾರಣಾಂತಿಕ ಭಯೋತ್ಪಾದಕ ದಾಳಿಯಾಗಿತ್ತು.
18 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕದ ಮಂಡ್ಯದ ಗುಡಿಗೆರೆಯ ಯೋಧ ಹೆಚ್ ಗುರು ಈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದರು.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಸ್ಮರಣಾರ್ಥ ಲಾತ್‌ಪೋರ ಸೇನಾ ಶಿಬಿರದಲ್ಲಿ ನಿರ್ಮಿಸಿರುವ ಸ್ಮಾರಕವೊಂದನ್ನು ಕಟ್ಟಲಾಗಿದೆ. ಈ ಸ್ಮಾರಕಕ್ಕಾಗಿ ಹುತಾತ್ಮರಾದ ಯೋಧರ ಮನೆಯಿಂದ ಮಣ್ಣನ್ನು ಸಂಗ್ರಹಿಸಿ ಅದರಿಂದ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ದಾಳಿಯಲ್ಲಿ ಹುತಾತ್ಮರಾದ ಎಲ್ಲಾ 40 ಮಂದಿ ಯೋಧರ ಹೆಸರು ಮತ್ತು ಅವರ ಭಾವಚಿತ್ರವನ್ನು ಸ್ಮಾರಕ ಒಳಗೊಂಡಿದೆ. ಸ್ಮಾರಕದಲ್ಲಿ ಸಿಆರ್‌ಪಿಎಫ್‌ನ ಧ್ಯೇಯ ವಾಕ್ಯ-‘ಸೇವೆ ಮತ್ತು ನಿಷ್ಠೆ’ಯನ್ನು ಸ್ಮಾರಕದಲ್ಲಿ ಬರೆಯಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗದಲ್ಲಿ ಶಾಲೆ ಎಂದಿನಂತೆ ಆರಂಭ

0

ಜಿಲ್ಲೆಯಲ್ಲಿ ಇಂದಿನಿಂದ 9 ಮತ್ತು 10ನೇ ತರಗತಿಗಳು ಪುನರಾರಂಭವಾಗಿದೆ. ಕಳೆದವಾರ ನಡೆದಿದ್ದ ಹಿಜಾಬ್ ಮತ್ತು ಕೇಸರಿ ಶಾಲು ಪ್ರತಿಭಟನೆ ಹಾಗೂ ಕಲ್ಲು ತೂರಾಟದಿಂದ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು.

ಈ ಗಲಭೆಯಿಂದ ನಗರದಲ್ಲಿ 144 ಸೆಕ್ಷನ್ ಜಾರಿಯಾಗಿತ್ತು. ಅಲ್ಲದೇ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ಬರುವ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

ರಾಜ್ಯ ಸರ್ಕಾರ ಇಂದಿನಿಂದ 9 ಮತ್ತು 10ನೇ ತರಗತಿಗಳ ಪ್ರಾರಂಭಕ್ಕೆ ಅನುಮತಿ ನೀಡಿದೆ. ಪರಿಸ್ಥಿತಿ ಅವಲೋಕಿಸಲು ನಗರದ ದುರ್ಗಿಗುಡಿ ಪ್ರೌಢಶಾಲೆ ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗೆ ಕೆ ಲೈವ್ ತಂಡ ಭೇಟಿ ನೀಡಿತ್ತು. ಶಾಲೆಗೆ ಮುಸ್ಲಿಮ್ಸ್ ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ಧರಿಸಿ ಬಂದಿದ್ದರು. ಆದರೆ ತರಗತಿ ಒಳಗೆ ಪ್ರವೇಶಿಸುವ ಮುನ್ನ ಬುರ್ಕಾ ಮತ್ತು ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಿರುವುದು ಪ್ರತ್ಯಕ್ಷ ಕಂಡುಬಂದಿತ್ತು.

ಇನ್ನು ಶಾಲಾ ಆವರಣದಲ್ಲಿ ಯಾವುದೇ ರೀತಿಯ ಕೇಸರಿ ಶಾಲುಗಳನ್ನು ವಿದ್ಯಾರ್ಥಿಗಳು ಧರಿಸಿರುವುದು ಕಂಡುಬರಲಿಲ್ಲ.

ಜಿಲ್ಲಾಡಳಿತ ನಗರದ ಎಲ್ಲಾ ಪ್ರೌಢ ಶಾಲೆಗಳ ಮುಂದೆ ನಿಷೇದಾಜ್ಞೆ ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಕಂಡುಬಂದಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭದ್ರಾವತಿ ರೇಡಿಯೋ ಆತ್ಮಕಥೆಯ ಒಂದು ಪುಟ

0

ನನ್ನ ಜೀವನ್ಮಿತ್ರ ನನಗೆ ಹೇಳಿದ ಕಥೆ..
ಹೀಗಿದೆ…..ಓದಿ..

ನಮಸ್ಕಾರ..ಬಂಧುಗಳೇ…ಅರ್ಥಾತ್ ಕೇಳುಗ ದೇವರುಗಳೆ!
ವಿಶ್ವ ರೇಡಿಯೊ ದಿನದ ಶುಭಾಶಯಗಳು!.

ನಾನು..ಆಕಾಶವಾಣಿ ಭದ್ರಾವತಿ…ನಿಮ್ಮ ಕಿವಿಗೆ ನನ್ನ ವಾಣಿ ತಲುಪಿದ ಮೊದಲ ದಿನಾಂಕ 7-2-1965.

ಬೆಂಗಳೂರು ಬಾನುಲಿ ನನ್ನ ದೊಡ್ಡಣ್ಣ. ಅವನ ನುಡಿತರಂಗಗಳು ಭದ್ರಾವತಿ ಸುತ್ತಲ ನಿಮಗೆಲ್ಲ ಆಗ ಕೇಳಲು ಕ್ಷೀಣವಾಗಿತ್ತು. ಆದ್ದರಿಂದ ದೊಡ್ಡಣ್ಣನ ನುಡಿಗಳನ್ನ ನಾನು ನನ್ನೊಳಗೆ ಸ್ವೀಕರಿಸಿ ನಿಮಗೆ ಮತ್ತೆ ಜೋರಾಗಿ ಕೇಳುವಂತೆ ಮಾಡುವುದು ನನ್ನ ಮೊದಲ ಕಾಯಕವಾಗಿತ್ತು. ಆಗಂತೂ ಮನರಂಜನೆ,ಮಾಹಿತಿಗಳಿಗೆ ನಮ್ಮ ಸಮುದಾಯ ಬಾಂಧವರು ಹಾತೊರೆಯುವ ಸನ್ನಿವೇಶವಿತ್ತು.

ಏಕೆಂದರೆ ದೇಶೀಯ ಆಗುಹೋಗುಗಳು, ವರ್ತಮಾನದ ವಿಶೇಷ ಬೆಳವಣಿಗೆಗಳನ್ನ ಕುರಿತ ಸಮಾಚಾರಗಳು ಸಮಾಜದ ಪ್ರತಿಯೊಬ್ಬರನ್ನೂ ಅವಶ್ಯ ತಲುಪಬೇಕಿತ್ತು. ಆ ಮೂಲಕ ಹೊರಪ್ರಪಂಚಕ್ಕೆ ಪ್ರತಿಯೊಬ್ಬ ಸಮಾಜಜೀವಿಯು ನೋಡಲು,ಕೇಳಲು ಕಾತುರನಾಗಿದ್ದ. ಅಂತಹ ಸಂಕ್ರಮಣ ಸ್ಥಿತಿಯಲ್ಲಿ ನಾನೂ ದೊಡ್ಡಣ್ಣನ ತಮ್ಮನಾಗಿ ಜನ್ಮತಳೆದೆ.

ಜಗತ್ತು ಬದಲಾವಣೆ ಬಯಸುತ್ತಿತ್ತು. ಆ ವರ್ತಮಾನದ ವಿದ್ಯಮಾನಗಳನ್ನ ನಮ್ಮ ಬೆನ್ನಲ್ಲಿ ಹೊತ್ತು ನಿಮ್ಮ ಕಿವಿಗೆ ಮುಟ್ಟಿಸುವ ಕೆಲಸ ನಮ್ಮದಾಗಿತ್ತು. ನಾನು ಜನ್ಮತಳೆಯುವ ಮುನ್ನ ಅಂದರೆ ಮೈಸೂರು ಕೇಂದ್ರ 1944 ರಲ್ಲಿ ಜನಿಸಿದರೂ ತೊಟ್ಟಿಲು ಶಾಸ್ತ್ರ ಆಗಿರಲಿಲ್ಲ. ( ಮತ್ತೆ ಪುನರಾರಂಭಕ್ಕೆ ಕಾಯುತ್ತಿತ್ತು) ನಾಮಕರಣ ಆಗಿದ್ದುದು 14-11-1974ರಲ್ಲಿ. ತಾ.8-1-1950ರಲ್ಲಿ ಧಾರವಾಡ28-8-1992 ಕೇಂದ್ರ, 2-11-1955 ರಲ್ಲಿ ಬೆಂಗಳೂರು ಕೇಂದ್ರಗಳು ಜನ್ಮತಳೆದು ನಮಗೆ ಮೇಲ್ಪಂಕ್ತಿಯಾಗಿದ್ದವು. ಹೀಗಾಗಿ ಈ ಮೂವರು ನನಗೆ ಹಿರಿಯಣ್ಣಂದಿರು‌.
ನಂತರ ಕಲಬುರಗಿ ಕೇಂದ್ರ ತಾ 1-11-1966, ಮಂಗಳೂರು ಕೇಂದ್ರ ತಾ 11-12-1976, ನಮ್ಮ ವಂಶದ ಅನುಜರ ಜನ್ಮ ದಿನಾಂಕದ ಪಟ್ಟಿ ನೀಡುವೆ.
ಚಿತ್ರದುರ್ಗ ..3-5-1991, ಹಾಸನ …4-5-1991, ಹೊಸಪೇಟೆ..1-5-1992, ಮಡಿಕೇರಿ….28-8-1992, ರಾಯಚೂರು..28-8-1992, ಕಾರವಾರ..13-2-1994.
ಸಾಮಾಜಿಕ ಪ್ರಗತಿಯೊಟ್ಟಿಗೆ ಸಮುದಾಯದ ಮನೋಸ್ಥಿತಿಯ ಔನತ್ಯಸಾಧಿಸುವುದು , ಮಾಹಿತಿ,ಮನರಂಜನೆಗಳ ಮೂಲಕ ವರ್ತಮಾನದ ಬದುಕನ್ನ ಹಸನುಗೊಳಿಸುವಲ್ಲಿ ಕಿಂಚಿತ್ ಪ್ರಯತ್ನ ನಮ್ಮದು. “ಬಹುಜನ ಹಿತಾಯ..ಬಹು ಜನ ಸುಖಾಯ…” ಇದು ನಮ್ಮ ಜೀವಿತಧ್ಯೇಯ.
ದೇಶಪ್ರೇಮ, ಸಾಮಾಜಿಕ ಪ್ರೀತಿ, ಸೌಹಾರ್ದಗಳನ್ನ ಬೆಸೆಯುವಲ್ಲಿ ಪ್ರತಿಭೆಗಳ ಅನ್ವೇಷಣೆ. , ಪರಸ್ಪರ ಕ್ಷೇಮಸಂಗತಿಗಳನ್ನ, ನಿಯಮಿತ ಕಟ್ಟುಪಾಡುಗಳಿಂದ ಬಂಧಿತರಾಗಿದ್ದರೂ ಆ ಮಿತಿಯಲ್ಲೇ ನಾವೆಲ್ಲ ಹೇಗೆ ಶಾಂತಿಯುತ ಬಾಳುವೆ ನಡೆಸಬಹುದು? ದೇಶಾಭಿವೃದ್ಧಿಗೆ ಯಾವರೀತಿ ತುಂಬು ಮನಸ್ಸಿನಿಂದ ಕೊಡುಗೆ ನೀಡಿ ಸಹಕರಿಸಬಹುದು ಎಂಬ ತಳಹದಿಯನ್ನ ಹಿರಿಯರು ಹಾಕಿಕೊಟ್ಟರು.
ಈಗ ಅದೆ ಹಾದಿ..ಅದೇ ಗುರಿ..!

ಬಾನುಲಿಪಯಣ… ಆರಂಭ ಅಷ್ಟಿಷ್ಟು ಅಸ್ಪಷ್ಟವಾದರೂ ಗುರುತಿಸುವ ಪ್ರಯತ್ನ ಆಗಿದೆ. ..ಅಂತ್ಯವಂತೂ ಇಲ್ಲ!.ಏಕೆಂದರೆ ಆಯಾಕಾಲಕ್ಕನುಗುಣವಾಗಿ ಈ ಮಾಧ್ಯಮ ರೂಪುಗೊಳ್ಳುತ್ತಾ ಸಾಗುವುದು .ಇದೊಂದು ಸಾಮಾಜಿಕ ಪ್ರಕ್ರಿಯೆ. ಮಾಧ್ಯಮ ಧರ್ಮ!.
ನನ್ನ ಸ್ಥಳೀಯ ಪ್ರಸಾರ ವ್ಯಾಪ್ತಿ ಮೊದಲಿಗೆ ಇದ್ದದ್ದು,ಶಿವಮೊಗ್ಗ, ಚಿಕ್ಕಮಗಳೂರು , ಚಿತ್ರದುರ್ಗ ಜಿಲ್ಲೆಗಳು.ಹಾಸನ ಜಿಲ್ಲೆಯ ಅರಸೀಕೆರೆ ತನಕ. ನಂತರ ಎಫ್ ಎಂ ಕೇಂದ್ರಗಳ ಸ್ಥಾಪನೆಯಾದಂತೆ ಪ್ರಸಾರ ವ್ಯಾಪ್ತಿ ಕಿರಿದಾಯಿತು.
ದೂರದರ್ಶನ ಜಾಲ ವಿಸ್ತಾರವಾಗುವವರೆಗೆ ಈ ಪ್ರದೇಶಗಳಲ್ಲಿ ನಾನು (ಅಂದರೆ ಭದ್ರಾವತಿ ಬಾನುಲಿ),ಏಕಮೇವಾದ್ವಿತೀಯವೆನಿಸಿದ್ದೆ. ಭದ್ರಾವತಿ ಉದ್ಘೋಷಕರು, ಕಾರ್ಯಕ್ರಮ ಪ್ರಸ್ತುತಿಕಾರರು, ನಿರ್ವಾಹಕರು, ನಿರ್ದೇಶಕರು ಅಷ್ಟೇಕೆ ನಿಲಯದ ಇಡೀ ಸಿಬ್ಬಂದಿ ಕೇಳುಗರ ಮನದಲ್ಲಿ ಮಾಧ್ಯಮ ತಾರೆಗಳಂತೆ ಹೊಳೆಯುತ್ತಿದ್ದರು. ಅಷ್ಟು ಕೇಳುಗರ ಅಭಿಮಾನ ತುಂಬಿತುಳುಕುತ್ತಿತ್ತು.
ಕಾರ್ಯಕ್ರಮಗಳಂತೂ ಮೊದಲಿಗೆ ಸ್ವಂತವಾಗಿ ಆರಂಭಗೊಂಡಿದ್ದು ಇಲ್ಲಿಗೆ ಸಾಹಿತ್ಯಪ್ರೀತಿಯ ಬರಹಗಾರರಾದ ಶ್ರೀನಾಗಭೂಷಣ , ಶ್ರೀ ಎಮ್ ಎಸ್. ಕೆ ಪ್ರಭು ಅವರುಗಳು ಸೇವೆಗೆ ಬಂದ ನಂತರವೆ. ಆಮೇಲೆ ಪರಿಣಿತ ಹಾಗೂ ಸಾಂಸ್ಕೃತಿಕ ಮನಸ್ಸುಗಳು ಸೇವೆಗೆ ಬಂದವು. ಅವರೆಲ್ಲರ ಸೃಜನಶೀಲತೆಯಿಂದ ಕೇಳುಗರೆದೆಯಲ್ಲಿ ನಾನು ಆರಾಧ್ಯಸ್ಥಾನ ಪಡೆದೆ. ಡಾ ವಸಂತಕವಲಿ ಅವರು ನಿರ್ದೇಶಕರಾಗಿ ಬಂದರು. ಸಂಗೀತ ಸಾಹಿತ್ಯ ಕಾರ್ಯಕ್ರಮಗಳು ಮತ್ತಷ್ಟು ಮೆರುಗು ಪಡೆದವು. ಅವರ ಹನ್ನೊಂದು ತಿಂಗಳ ಅವಧಿಯಲ್ಲಿ ಒಂಭತ್ತು ಆಮಂತ್ರಿತ ಶ್ರೋತೃಗಳ ಸಮ್ಮುಖ ವಿವಿಧ ಕಾರ್ಯಕ್ರಮಗಳ ಸುಗ್ಗಿಯೇ ಆಯಿತು.ನಾನೊಂದು ಮಲೆನಾಡಿನ ಸಂಸ್ಕೃತಿಯ ಸಂಪತ್ತಾದೆ. ನಂತರ ಶ್ರೀ ಆಲದಕಟ್ಟಿಯವರು ನಿರ್ದೇಶಕರಾಗಿ ಬಂದಮೇಲೆ ರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಅರಸಿ ಬಂದವು.

ಮೊದಲಿಗೆ ಡಾ .ಎನ್ ಸುಧೀಂದ್ರ ಅವರ ನಿರ್ವಾಹಕತ್ವದಲ್ಲಿ ಯುವವಾಣಿ ವಿಭಾಗದಲ್ಲಿ ” ಮಾನಸ ಲೋಕ ” ತೀರ್ಪಗಾರರ ಮೆಚ್ಚುಗೆ ಪಡೆಯಿತು. ಮರುವರ್ಷವೇ ಪ್ರೀತಿಗೆಷ್ಟು ಮುಖಗಳು ರೂಪಕ ರಾಷ್ಟ್ರೀ ಯ ಯುವವಾಣಿ ವಿಭಾಗದ ಪುರಸ್ಕಾರ ಗಿಟ್ಟಿಸಿತು. ಅಷ್ಟೇ ಅಲ್ಲ ಮುಂದೆ ಪ್ರತೀವರ್ಷ ವಿಶೇಷವಾಗಿ ನೀಡುವ ಪ್ರತಿಷ್ಠಿತ ” ಲಾಸಾ ಕೌಲ್ ಅವಾರ್ಡ್” ದೊರೆಯಿತು. ಡಾ‌.ಎನ್ .ಸುಧೀಂದ್ರ ಅವರು ನಿರ್ಮಿಸಿದ
ಕೋಮುಸೌಹಾರ್ದ ಕುರಿತ ರೂಪಕ ಸ್ನೇಹ ಸೌಹಾರ್ದ ಕಂಪನಿ Unlimited* ರೂಪಕ ಈ ರಾಷ್ಟ್ರೀಯ ಗೌರವಕ್ಕೆ ಪಾತ್ರವಾಯಿತು.
ರಾಜ್ಯಮಟ್ಟದ ಆಕಾಶವಾಣಿ ಪುರಸ್ಕಾರಗಳಿಗೇನೂ ಕಡಿಮೆಯಿಲ್ಲ.
ಶ್ರೀಮತಿ ಉಷಾಲತಾ ಅವರು ನಿರ್ಮಿಸಿದ ಹಕ್ಕಿಹಾಡು(ವೈದೇಹಿ ಅವರ ಕಥೆ ಆಧರಿತ )ನಾಟಕವು ಪ್ರಥಮ ಸ್ಥಾನಪಡೆಯಿತು. ಅದರೊಟ್ಟಿಗೇ ಡಾ.ಎನ್ ಸುಧೀಂದ್ರ ಅವರು ನಿರ್ಮಿಸಿದ ಫೋನ್ ಇನ್ ನಾಟಕ ತೀರ್ಪುಗಾರರ ಮೆಚ್ಚುಗೆ ಪಡೆಯಿತು. ಮತ್ತೆ ಇತ್ತೀಚೆಗೆ
ಎಚ್ ಎನ್ ಸುಬ್ರಹ್ಮಣ್ಯ ಅವರು ನಿರ್ಮಿಸಿದ ಸಾವಿತ್ರಮ್ಮನ ಶಾವಿಗೆ ಪಯಣ* ದ್ಬಿತೀಯ ಸ್ಥಾನ ಗಿಟ್ಟಿಸಿದೆ. …ಹೀಗೇ ಸಾಗಿದೆ.

ಮತ್ತೊಂದು ಮೈಲುಗಲ್ಲೆಂದರೆ ನನ್ನಲ್ಲಿ ಕಾರ್ಯಕ್ರಮ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಮೂವರು ಸಂಶೋಧನಾ ಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದಾರೆ.
೧.ಡಾ.ಮಹಾಬಲೇಶ್ವರ ರಾವ್…ಶಾಲಾ ಶೈಕ್ಷಣಿಕ ಪ್ರಸಾರ
೨.ಡಾ.ಎನ್.ಸುಧೀಂದ್ರ..ಕನ್ನಡ ರೇಡಿಯೊ ನಾಟಕಗಳು..
ಮಾರ್ಗದರ್ಶಕರು : ಪ್ರೊ.ಕೆ.ಶ್ರೀಕಂಠ ಕೂಡಿಗೆ.
೩.ಡಾ‌ಎ.ಎಸ್.ಶಂಕರನಾರಾಯಣ…ಕನ್ನಡ ಬಾನುಲಿ ಭಾಷಣಗಳು.
ಮಾರ್ಗದರ್ಶಕರು : ಪ್ರೊ ಕೆ .ಕೇಶವ ಶರ್ಮ.
ನನ್ನಲ್ಲಿ ಅನೇಕ ಪ್ರತಿಭಾವಂತರು ತಮ್ಮ ಸಂಗೀತ ,ಸಾಹಿತ್ಯ ಸುಧೆಯನ್ನ ಕೇಳುಗ ದೇವರುಗಳಿಗೆ ಉಣಬಡಿಸಿದ್ದಾರೆ.ಇವತ್ತು ಅನೇಕರು ಗಾಯನ ಪ್ರಪಂಚದಲ್ಲಿ ತಾರೆಗಳಾಗಿದ್ದಾರೆ.ಕವಿ,ಸಾಹಿತಿಗಳು ಕನ್ನಡ ಸಾಹಿತ್ಯ ಪರಂಪರೆಯ ಸಂಕೇತಗಳಾಗಿದ್ದಾರೆ.ಅಷ್ಟೇಕೆ ಜನಪದ ಸಿರಿವಂತಿಕೆಯುಳ್ಳ ಮಲೆನಾಡಿನ ಪ್ರದೇಶದಲ್ಲಿ ಅಸಂಖ್ಯ ಕಲಾವಿದರೂ ಭದ್ರಾವತಿ ಬಾನುಲಿಯಲ್ಲಿ ತಮ್ಮ ಪ್ರತಿಭಾಲಾಸ್ಯಗೈದಿದ್ದಾರೆ.

ಹಲವಾರು ಸಂಸ್ಕೃತಿವಂತರು,ಸಾಹಿತ್ಯಾಸಕ್ತರು ನನ್ನಲ್ಲಿ ನಿರ್ದೇಶಕರಾಗಿ , ಕಾರ್ಯಕ್ರಮ/ಪ್ರಸಾರ ನಿರ್ವಾಹಕರಾಗಿ, ಉದ್ಘೋಷಕರಾಗಿ , ತಮ್ಮ ಸೃಜನಶೀಲತೆಯಿಂದ ಇಲ್ಲಿ ಸೇವೆಗೈದಿದ್ದಾರೆ. ಸರ್ವಶ್ರೀ ಎಸ್ ಎಸ್ ಹಿರೇಮಠ್,ಎಂ ಎಸ್ ಶ್ರೀಹರಿ,ಎಂ ಎ ಸುಬ್ಬುರತ್ನ,ಜಯರಾಮನ್, ಚೇತನ್ ನಾಯಕ್,ಸಿ ಎನ್ ರಾಮಚಂದ್ರ, ಹೂಗೊಪ್ಪಲು ಕೃಷ್ಣಮೂರ್ತಿ,ಕೆ.ಗುಣಶೇಖರ್,ಪ್ರಸಾದ್,ಎನ್ ವಿ ರಮೇಶ್, ಬಳ್ಳಾರಿ ಎಂ.ರಾಘವೇಂದ್ರ, ಅಶ್ವಿನ್ ಕುಮಾರ್, ಡಾ.ಆನಂದ ಪಾಟೀಲ,,ಎಂ.ಎ ಸುದರ್ಶನ, ಎಮ್.ಎಸ್ ನಾಗೇಂದ್ರ , ಬನಜ್ಜ, ಮುಳ್ಳೂರ್, ಡಾ‌.ಸದಾನಂದ ಹೊಳ್ಳ, ಡಾ.ಎಂ.ಜಿ.ವೇದಮೂರ್ತಿ ಶ್ರೀಮತಿಯರಾದ ವಿಜಯಾಹರನ್, ರಾಜಲಕ್ಷ್ಮೀ ಶ್ರೀಧರ್. ಗೀತಾ ರಮಾನಂದ್ ಮುಂತಾದವರು ಇಲ್ಲಿ ಸೇವೆಗೈದಿದ್ದಾರೆ.ಇನ್ನೂ ಹಲವಾರು ಮಂದಿ ಇದ್ದಾರೆ ನೆನಪಿನ ಭರದಲ್ಲಿ ಮರೆಯುವುದು ಸಹಜ.

ಹ್ಞಾಂ..!..ಬಂಧುಗಳೆ..ನೆನಪು ಓಡುತ್ತದೆ… ಹೇಳಲು ಬಹಳಷ್ಟಿದೆ..ನೋಡೋಣ…ಪ್ರಯತ್ನಮಾಡ್ತೀನಿ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

Shimoga News – Monday, 14 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

ಐಪಿಎಲ್ ನಲ್ಲಿ ಹರಾಜಿಗೆ ಸಿಕ್ಕ ಕ್ರಿಕೆಟ್ ಕಲಿಗಳು

0

ಐಪಿಎಲ್ 2022ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಪ್ರತಿಭಾವಂತ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 15.25 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಮೂಲಕ ಮೊದಲ ದಿನದ ಗರಿಷ್ಠ ಇವರದ್ದಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 14 ಕೋಟಿ ರೂಪಾಯಿಗಳಿಗೆ ಭಾರತದ ಆಲ್-ರೌಂಡರ್ ದೀಪಕ್ ಚಾಹರ್ ಅವರನ್ನು ಖರೀದಿಸಿದೆ.

12.5 ಕೋಟಿಗೆ ಶ್ರೇಯಸ್ ಅಯ್ಯರ್ ಅವರನ್ನು ಕಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿದೆ. ಮೂಲಕ ಶ್ರೇಯಸ್ ಅಯ್ಯರ್ ಮೂರನೇ ಗರಿಷ್ಠ ಗಳಿಕೆದಾರರಾದರು.

ಹರಾಜು ಪ್ರಕ್ರಿಯೆಯ ಪ್ರಾರಂಭದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆಟಗಾರರಿಗೆ ಬಿಡ್ ನಡೆಯಿತು. ಆ ಪಟ್ಟಿಯಲ್ಲಿ ಶಿಖರ್ ಧವನ್ ಮೊದಲಿಗರಾದರು. ನೂತನ ಫ್ರಾಂಚೈಸಿಗಳ ಆದ ಲಖನೌ‌ ಜಯಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಸೇರಿದಂತೆ 10 ಫ್ರಾಂಚೈಸಿಗಳು ಧವನ್ ಅವರ ಖರೀದಿಗೆ ಪೈಪೋಟಿ ನಡೆಸಿದವು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಟಿ-ಟ್ವೆಂಟಿ ವಿಶ್ವಕಪ್ ಗರಿಷ್ಠ ವಿಕೆಟ್ ಗಳಿಕೆದಾರರ ಶ್ರೀಲಂಕದ ವಾನಿಂದು ಹಸರಂಗ ಹಾಗೂ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್ ಅವರನ್ನು ತಲಾ 10.75 ಕೋಟಿ ರೂಪಾಯಿಗಳಿಗೆ ಬಿಡ್ ಮಾಡುವ ಮೂಲಕ ತನ್ನದಾಗಿಸಿಕೊಂಡಿತು.

ಶಾರ್ದುಲ್ ಠಾಕೂರ್ ಅವರನ್ನು ತಲಾ 10.75 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ನಿಕೋಲಸ್ ಪೂರನ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡವು ಖರೀದಿಸಿದೆ. ಆವೇಶ್ ಖಾನ್ ಅವರನ್ನು ಲಖನೌ ಸೂಪರ್ ಜಯಂಟ್ಸ್ ತಂಡ 10 ಕೋಟಿ ರೂಪಾಯಿಗೆ ಖರೀದಿಸಿದೆ.

ಕರ್ನಾಟಕದ ಆಟಗಾರರ ಪ್ರಸಿದ್ಧ್ ಕೃಷ್ಣ ಅವರನ್ನು ರಾಜಸ್ಥಾನ್ ರಾಯಲ್ಸ್ 10 ಕೋಟಿ ರೂಪಾಯಿಗೆ ಖರೀದಿಸಿತು.

ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅವರನ್ನು ಏಳು ಕೋಟಿ ರೂಪಾಯಿ ಹಾಗೂ ಭಾರತದ ಹಿರಿಯ ಕ್ರಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ಆರ್ ಸಿ ಬಿ 5.5 ಕೋಟಿ ರೂಪಾಯಿಗೆ ಖರೀದಿಸಿತು. ಅದೇ ರೀತಿ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ ವುಡ್ ಅವರಿಗೆ 7.75 ಕೋಟಿ ರೂಪಾಯಿ ನೀಡಿತು.

ಶಹಬಾಜ್ ಆಹ್ಮದ್ 2.4 ಕೋಟಿ ರೂಪಾಯಿ, ಅನುಜ್ ರಾವತ್ 3.4 ಕೋಟಿ ರೂಪಾಯಿ ,ಆಕಾಶ್ ದೀಪ್ 20 ಲಕ್ಷ ರೂಪಾಯಿಗಳಿಂದ ಆರ್ ಸಿ ಬಿ ತಂಡ ಖರೀದಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜನಪ್ರಿಯ ಸ್ಕೂಟರ್ ಬಜಾಜ್ ಖ್ಯಾತಿಯ ರಾಹುಲ್ ಬಜಾಜ್ ಇನ್ನಿಲ್ಲ

0

1968 ರಲ್ಲಿ ಬಜಾಜ್ ಆಟೋ ಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇರಿದ ರಾಹುಲ್ ಬಜಾಜ್ ಅವರು ಭಾರತದ ವಾಹನ ಉದ್ಯಮದಲ್ಲಿ ತಮ್ಮದೇ ಆದಂತಹ ಖ್ಯಾತಿಯನ್ನು ಗಳಿಸಿದ್ದಾರೆ. ಹಮಾರಾ ಬಜಾಜ್ ಎನ್ನುತ್ತಲೇ ದೇಶದ ಮನೆಮನೆಗೆ ‘ಬಜಾಜ್ ಚೇತಕ್’ ದ್ವಿಚಕ್ರವಾಹನವನ್ನು ಪರಿಚಯಿಸಿದ ಹೆಗ್ಗಳಿಕೆ ರಾಹುಲ್ ಬಜಾಜ್ ಅವರಿಗೆ ಸಲ್ಲುತ್ತದೆ.

ಭಾರತೀಯ ಕಾರ್ಪೋರೇಟ್ ಜಾಹೀರಾತು ಉದ್ಯಮದಲ್ಲಿ ಅತ್ಯಂತ ಪ್ರಸಿದ್ಧ ಟ್ಯಾಗ್ಲೈನ್ ಎಂದೇ ಹೆಸರಾದ “ಯೂ ಜಸ್ಟ್ ಕಾಂಟ್ ಎ ಬೀಟ್ ಬಜಾಜ್ ” ಎನ್ನುತ್ತಾ ತಮ್ಮ ಅಜ್ಜ ಜಮ್ನಾಲಾಲ್ ಬಜಾಜ್ ಕಟ್ಟಿದ್ದ ಬಜಾಜ್ ಸಂಸ್ಥೆಯನ್ನು ವಿಶ್ವದೆಲ್ಲೆಡೆ ಹರಡುವಂತೆ ಮಾಡಿದವರು ರಾಹುಲ್ ಬಜಾಜ್.

ಭಾರತದಲ್ಲಿನ ಆಟೋಮೊಬೈಲ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ 2001ರಲ್ಲಿ ಕೇಂದ್ರ ಸರ್ಕಾರ ‘ಪದ್ಮಭೂಷಣ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ರಾಹುಲ್ ಬಜಾಜ್ ಅವರನ್ನು ಹೃದಯ ಮತ್ತು ಶ್ವಾಸಕೋಶ ಸಮಸ್ಯೆಯಿಂದ ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು . ರಾಹುಲ್ ಬಜಾಜ್ ಅವರಿಗೆ 83 ವರ್ಷ ವಯಸ್ಸಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಾಹುಲ್ ಬಜಾಜ್ ಅವರ ನಿಧನಕ್ಕೆ ಮಾನ್ಯ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು “ರಾಹುಲ್ ಬಜಾಜ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಭಾರತೀಯ ಉದ್ಯಮದ ನಾಯಕ, ಅವರು ಉದ್ಯಮದ ಆದ್ಯತೆಗಳ ಬಗ್ಗೆ ಭಾವೋದ್ರಿಕ್ತರಾಗಿದ್ದರು. ಅವರ ವೃತ್ತಿ ಜೀವನವು ರಾಷ್ಟ್ರದ ಕಾರ್ಪೊರೇಟ್ ವಲಯದ ಏರಿಕೆ ಮತ್ತು ಸಹಜ ಶಕ್ತಿಯನ್ನ ಪ್ರತಿಬಿಂಬಿಸುತ್ತದೆ. ಅವರ ಅಗಲಿಕೆಯಿಂದ ಉದ್ಯಮ ಜಗತ್ತಿನಲ್ಲಿ ಖಾಲಿತನ ಉಂಟಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಟ್ವಿಟ್ಟರ್ ಮೂಲಕ ಟ್ವೀಟ್ ಮಾಡಿದ್ದಾರೆ.

ಉದ್ಯಮಿ ರಾಹುಲ್ ಬಜಾಜ್ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಹುಲ್ ಬಜಾಜ್ ಅವರ ಅಂತ್ಯಕ್ರಿಯೆ ಪುಣೆಯಲ್ಲಿ ನಡೆಯಲಿದೆ. ರಾಹುಲ್ ಅವರು ಪುತ್ರರಾದ ರಾಜು ಬಜಾಜ್ ಮತ್ತು ಸಂಜೀವ್ ಬಜಾಜ್, ಪುತ್ರಿ ಸುನಯನಾ ಕೇಜ್ರಿವಾಲ್ ಅವರನ್ನು ಅಗಲಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ ಸಂಸದೀಯ ಮಂಡಳಿ ಶಿಫಾರಸು

0

ಸಂಸದೀಯ ಸ್ಥಾಯಿ ಸಮಿತಿಯು ಪ್ರತಿ ಜಿಲ್ಲೆಯಲ್ಲೂ ಒಂದಾದರೂ ಸಂಪೂರ್ಣ ಮಹಿಳಾ ಪೊಲೀಸರೇ ಇರುವ ಮಹಿಳಾ ಠಾಣೆಗಳನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ದೇಶದ ಪೊಲೀಸ್ ಪಡೆಯಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಅತಿ ಕಡಿಮೆ ಇದೆ. ದೇಶದ ಒಟ್ಟು ಪೊಲೀಸ್ ಬಲದ ಶೇ.10.30 ರಷ್ಟು ಮಾತ್ರ ಮಹಿಳಾ ಪೊಲೀಸರಿದ್ದಾರೆ ಎಂದು ಸ್ಥಾಯಿ ಸಮಿತಿ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತ- ಚೀನಾ ಗಡಿ ವಿವಾದ ಚೀನಾ ಬಗ್ಗೆ ಅಮೇರಿಕ ಅಸಮಾಧಾನ

0

ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಪ್ರಸಕ್ತ ಮುಂದುವರೆದಿರುವ ಗಡಿ ಬಿಕ್ಕಟ್ಟು ಸಮಸ್ಯೆಗೆ ಚೀನಾ ಸೇನೆಯ ಶಾಂತಿ ಒಪ್ಪಂದದ ಉಲ್ಲಂಘನೆ ಕಾರಣ ಎಂದು ಆಸ್ಟ್ರೇಲಿಯಾದ ಕ್ವಾಡ್ ಒಕ್ಕೂಟದ ಸಭೆಯಲ್ಲಿ ತಿಳಿಸಿದ್ದಾರೆ.

2020ರಲ್ಲಿ ಲಿಖಿತ ಒಪ್ಪಂದಕ್ಕೆ ಚೀನಾ ಸೇನೆ ತೋರುತ್ತಿರುವ ಅಗೌರವದಿಂದ ಗಡಿಯಲ್ಲಿ ಉದ್ವಿಗ್ನತೆ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.

“ಒಂದು ದೊಡ್ಡ ರಾಷ್ಟ್ರದ ಸೇನೆ ಮತ್ತು ಸರ್ಕಾರವು ಲಿಖಿತ ಒಪ್ಪಂದಕ್ಕೆ ಕಿಮ್ಮತ್ತು ಕೊಡದೆ ತನ್ನಷ್ಟಕ್ಕೆ ತಾನು ಏಕಪಕ್ಷೀಯ ಕ್ರಮಗಳನ್ನು ಮುಂದುವರಿಸಿದರೆ ಎಲ್ಎಸಿ ಯಲ್ಲಿ ಪ್ರಸ್ತುತ ಇರುವಂತೆ ಬಿಕ್ಕಟ್ಟು ಮುಂದುವರೆಯುತ್ತಲೆ ಇರಲಿದೆ. ಚೀನಾದ ಈ ನಡೆ ಆಕ್ಷೇಪಾರ್ಹ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕೂಡ ಚೀನಾದ ಈ ತಂತ್ರವು ಆತಂಕಕಾರಿ” ಎಂದು ಸಚಿವ ಎಸ್.ಜೈಶಂಕರ್ ಅಸಮಧಾನ ವ್ಯಕ್ತಪಡಿಸಿದರು.

ಎಲ್ಎಸಿ ಯಲ್ಲಿ ಚೀನಾದ ಅತಿಕ್ರಮಣ ನೀತಿ ಹಾಗೂ ಸಂಧಾನ ಒಪ್ಪಂದಗಳ ಉಲ್ಲಂಘನೆ ವಿರುದ್ಧ ಅಮೆರಿಕ ಕೂಡ ಕಿಡಿಕಾರಿದೆ. ಅಮೇರಿಕಾದ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ವರದಿಯನ್ನು ಶ್ವೇತಭವನದ ಬಿಡುಗಡೆ ಮಾಡಿದ್ದು, ಭಾರತಕ್ಕೆ ಗಡಿಯಲ್ಲಿ ಎದುರಾಗಿರುವ ಪ್ರಮುಖ ಸವಾಲುಗಳಿಗೆ ಚೀನಾವೇ ಕಾರಣ ಎಂದು ಆರೋಪಿಸಿದೆ.

ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯ ಅಮೆರಿಕ ಸರ್ಕಾರ ಬಯಸುತ್ತದೆ. ಭಾರತವೂ ಕೂಡ ಸಮಾನಮನಸ್ಕ ಮಿತ್ರ ರಾಷ್ಟ್ರವಾಗಿದೆ. ಕ್ವಾಡ್ ನ ಚಾಲನಾಶಕ್ತಿ ಕೂಡ ಹೌದು. ಆರೋಗ್ಯ, ಬಾಹ್ಯಾಕಾಶ, ಸೈಬರ್ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಜತೆಯಾಗಿ ಕೆಲಸ ಮಾಡಲು ಅಮೆರಿಕ ಮುಂದಾಗಿದೆ. ನಮ್ಮದೇ ರೀತಿಯಲ್ಲಿ ಪ್ರಜಾಪ್ರಭುತ್ವದ ಆಡಳಿತ ಹೊಂದಿರುವ ಭಾರತಕ್ಕೆ ನೆರೆಯ ಚೀನಾದಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆಡಳಿತದ ವಿರುದ್ಧ ಅಮೆರಿಕ ಅಸಮಾಧಾನ ಹೊರಹಾಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮುಸ್ಲಿಂ ಯುವತಿ ಸಂಸ್ಕೃತ ಅಧ್ಯಯನದಲ್ಲಿ ಐದು ಚಿನ್ನದ ಪದಕ ವಿಜೇತೆ

0

ಉತ್ತರಪ್ರದೇಶದ ಮುಸ್ಲಿಂ ಯುವತಿಯೊಬ್ಬರು ಸಂಸ್ಕೃತದ ಅಧ್ಯಯನಕ್ಕಾಗಿ ಐದು ಚಿನ್ನದ ಪದಕ ಪಡೆಯುವ ಮೂಲಕ ರಾಜ್ಯದ ಹಿಜಾಬ್ ವಿಚಾರದಲ್ಲಿ ತರಗತಿಯನ್ನು ಲೆಕ್ಕಿಸದೆ ಪ್ರತಿಭಟಿಸುತ್ತಿರುವ ವಿದ್ಯಾರ್ಥಿನಿಯರಿಗೆ ಮಾದರಿಯಾಗಿದ್ದಾರೆ.

ಲಕ್ನೋ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಅತ್ಯಧಿಕ ಅಂಕಗಳಿಂದ ಮುಗಿಸಿದ ಗಜಾಲಾ ಅವರು 5 ಚಿನ್ನದ ಪದಕವನ್ನು ಪಡೆದಿದ್ದಾರೆ.

ಗಜಾಲಾ ಅವರು ‘ಚಿನ್ನದ ಪದಕ ಪಡೆದಿರುವುದು ಖುಷಿ ತಂದಿದೆ. ಆದರೆ ಇದು ಕೇವಲ ನನ್ನೊಬ್ಬಳ ಪರಿಶ್ರಮದ ಫಲವಲ್ಲ. ನನ್ನನ್ನು ಓದಿಸಲು ನನ್ನ ಇಬ್ಬರು ಸಹೋದರರು ದುಡಿದಿದ್ದಾರೆ. ಅವರಿಗೂ ಪದಕಗಳ ಶ್ರೇಯಸ್ಸು ಸಲ್ಲಬೇಕು’ ಎಂದು ಹೇಳಿದ್ದಾರೆ.