Tuesday, May 12, 2026
Tuesday, May 12, 2026

ರಾಜ್ಯದಲ್ಲಿ ಸ್ನಾತಕ ಪದವಿಕೋರ್ಸ್ ಗಳ ಅವಧಿ ಬದಲಿಲ್ಲ

Date:

ರಾಜ್ಯಾದ್ಯಂತ ಸ್ನಾತಕ ಪದವಿ ಕೋರ್ಸ್ ಗಳು ಹಿಂದಿನಂತೆ ಈಗಲೂ ಕೂಡ ಮೂರು ವರ್ಷಗಳ ಅವಧಿಯಾದಾಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗಬಾರದಾಗಿ ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಸ್ಪಷ್ಟಪಡಿಸಿದ್ದಾರೆ.

ಹೊಸ ಶಿಕ್ಷಣ ನೀತಿ (ಎನ್ಇಪಿ) ಜಾರಿಗೊಂಡ ಬಳಿಕ ಬಿ.ಎ, ಬಿ.ಕಾಂ, ಬಿಎಸ್ಸಿ ಮತ್ತಿತರ ಸ್ನಾತಕ‌ ಪದವಿ ಕೋರ್ಸ್ ಗಳ ಅವಧಿ ನಾಲ್ಕು ವರ್ಷಗಳಿಗೆ ಹೆಚ್ಚಳವಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿದೆ‌. ಆದರೆ, ಇದು ತಪ್ಪು ತಿಳುವಳಿಕೆಯಾಗಿದ್ದು, ಸ್ನಾತಕ ಪದವಿಗಳ ಅವಧಿ ಹಿಂದಿನಂತೆ ಈಗಲೂ ಕೂಡ ಮೂರು ವರ್ಷಗಳ ಅವಧಿಯಾಗಿರುತ್ತದೆ. ಪ್ರವೇಶಾತಿಯನ್ನು ದಂಡ ಶುಲ್ಕದೊಂದಿಗೆ ಆಗಸ್ಟ್ 20ರ ವರೆಗೆ ವಿಸ್ತರಿಸಲಾಗಿದ್ದು, ಯಾವುದೇ ಗೊಂದಲಕ್ಕೆ ಒಳಗಾಗದೆ ಪ್ರವೇಶ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಶಿವಮೊಗ್ಗ, ಚಿಕ್ಕಮಗಳೂರಿನ ಕಾಲೇಜುಗಳ ಪ್ರಾಂಶುಪಾಲರು ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ಪ್ರಾರಂಭಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ನಿರಾತಂಕವಾಗಿ ಪ್ರವೇಶ ಪಡೆದುಕೊಳ್ಳಬಹುದು. ಯಾವುದೇ ಗೊಂದಲವಿದ್ದಲ್ಲಿ‌ ಹೆಲ್ಪ್ ಡೆಸ್ಕ್ ಬಳಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಹೊಸ ಶಿಕ್ಷಣ ನೀತಿ ಅನ್ವಯ ಪಿಯುಸಿ ನಂತರ ಸ್ನಾತಕ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ಮೊದಲ ವರ್ಷದ ಬಳಿಕ ಕಾಲೇಜು ತೊರೆದರೆ ಅಂತಹಾ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಾಗುವುದು. ಇನ್ನು ಎರಡು ವರ್ಷ ಪೂರೈಸಿ ಶಿಕ್ಷಣ ಮೊಟಕುಗೊಳಿಸಿದರೆ, ಯುಜಿ ಡಿಪ್ಲೊಮಾ ಸರ್ಟಿಫಿಕೇಟ್ ನೀಡಲಾಗುವುದು. ಮೂರನೆಯ ವರ್ಷ ಪೂರೈಸುವ ವಿದ್ಯಾರ್ಥಿಗಳು ಹಿಂದಿನಂತೆಯೇ ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. ನಾಲ್ಕನೇ ವರ್ಷ ಹಾನರ್ಸ್ ಕೋರ್ಸ್ ಆಗಿದ್ದು, ಇದು ಕಡ್ಡಾಯವಾಗಿರುವುದಿಲ್ಲ. ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿರುತ್ತದೆ.

ನಾಲ್ಕು ವರ್ಷ ಪೂರೈಸಿ ಹಾನರ್ಸ್ ಪದವಿ ಪಡೆಯುವ ವಿದ್ಯಾರ್ಥಿಗಳು ಒಂದು ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಪ್ರವೇಶ ಪಡೆದುಕೊಳ್ಳಬಹುದು ಅಥವಾ ನೇರವಾಗಿ ಪಿಎಚ್ ಡಿಗೆ ಅರ್ಜಿ ಸಲ್ಲಿಸಬಹುದು. ಮೂರು ವರ್ಷಗಳ ಪದವಿ ಪಡೆಯುವ ವಿದ್ಯಾರ್ಥಿಗಳು ಹಿಂದಿನಂತೆಯೇ ಎರಡು ವರ್ಷಗಳ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದು ಅಥವಾ ಪದವಿ ಆಧಾರಿತ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರಥಮ, ದ್ವಿತೀಯ ವರ್ಷ ಪೂರೈಸಿ ಕಾಲೇಜು ಬಿಟ್ಟ ವಿದ್ಯಾರ್ಥಿಗಳು ಮುಂದೆ ತಮ್ಮ ಅನುಕೂಲದ ಅವಧಿಯಲ್ಲಿ‌ ಯಾವುದಾದರೂ ಕಾಲೆಜಿನಲ್ಲಿ ಮತ್ತೆ ಪ್ರವೇಶ ಪಡೆದು ಪದವಿ ಪೂರೈಸಲು ಅವಕಾಶವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 𝗠𝗲𝘁𝗿𝗼 𝗖𝗼𝗮𝗰𝗵 ಗಳ ಖರೀದಿಗೆ 𝗜𝗖𝗙 ಜೊತೆ ಒಪ್ಪಂದ, ₹𝟭,𝟱𝟭𝟯.𝟳𝟱 ಕೋಟಿ ಮೊತ್ತದ ಕಾರ್ಯಾದೇಶ

ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಬಹುನಿರೀಕ್ಷಿತ ಬೆಂಗಳೂರು ಉಪನಗರ...

Chamber of Commerce Shivamogga ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದಲ್ಲಿ ಸ್ಥಾಪಿಸಲಿ :ಬಿ.ಗೋಪಿನಾಥ್

Chamber of Commerce Shivamogga ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದಲ್ಲಿ ಸ್ಥಾಪನೆಯಾಗಬೇಕು...