Tuesday, March 17, 2026
Tuesday, March 17, 2026
Home Blog Page 1510

ಶ್ರದ್ಧಾಭಕ್ತಿಯ ಸಮ್ಮಿಲನದ ಆಚರಣೆಬಕ್ರೀದ್

0

ಬಕ್ರೀದ್‌ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ತಿಂಗಳ ಕೊನೆಯಲ್ಲಿ ಬರುವ ಈದ್-ಉಲ್-ಫಿತರ್ ನಂತರ ಸುಮಾರು ಎರಡು ತಿಂಗಳು ಕಳೆದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ವಿಶ್ವದಾದ್ಯಂತ ಇರುವ ಮುಸ್ಲಿಂ ಧರ್ಮೀಯರು ಈ ಹಬ್ಬವನ್ನು ಶ್ರದ್ಧೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆ ತೊಟ್ಟು, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಮನೆ ಮಂದಿಯೆಲ್ಲಾ ಹಬ್ಬದೂಟ ಸವಿದು ಈ ಹಬ್ಬವನ್ನು ಆಚರಿಸಲಾಗುತ್ತದೆ.

ಸೌದಿ ಅರೇಬಿಯಾದಲ್ಲಿರುವ ಪವಿತ್ರ ಮೆಕ್ಕಾಗೆ ತೆರಳುವ ಹಜ್‌ ಯಾತ್ರೆಯ ಕೊನೆಯಲ್ಲಿ ಬಕ್ರೀದನ್ನು ಆಚರಿಸಲಾಗುತ್ತದೆ.
ಇದು ಅಲ್ಲಾಹುನ ಮಾರ್ಗದಲ್ಲಿ ನೀಡಲಾಗುವ ತ್ಯಾಗದ ಹಬ್ಬ ಎಂದು ಕೂಡ ಕರೆಯಲಾಗುತ್ತದೆ. ಅದಾ ಎಂಬುದು ಅರೇಬಿಕ್ ಪದವಾಗಿದ್ದು, ಇದರರ್ಥ ತ್ಯಾಗ, ಬಲಿದಾನ ಮತ್ತು ಈದ್ ಎಂದರೆ ಹಬ್ಬ.
ಬಕ್ರೀದ್ ಅನ್ನು ಈದ್-ಅಲ್-ಅದಾ ಎಂದೂ ಕರೆಯುತ್ತಾರೆ. ಇದರರ್ಥವೇನೆ೦ದರೆ, ಬಲಿದಾನ.
ಈ ಶುಭದಿನದಂದು ಕುರಿಯೊಂದನ್ನು ಬಲಿ ನೀಡಲಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದೆ ಒಂದು ಬಹು ಸ್ವಾರಸ್ಯಕರವಾದ ಕಥೆಯಿದೆ. ಅದು ಬಲಿದಾನದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ.

ಮುಸ್ಲಿಂ ಧರ್ಮದ ನಂಬಿಕೆಯ ಪ್ರಕಾರ, ಹಜರತ್ ಇಬ್ರಾಹಿಂ ದೇವರ ಸೇವಕರಾಗಿದ್ದರು. ಅವರು ದೇವರಲ್ಲಿ ಅಪಾರ ನಂಬಿಕೆ ಇಟ್ಟಿದ್ದರು. ಒಮ್ಮೆ ಅಲ್ಲಾಹನು ಹಜರತ್ ಇಬ್ರಾಹಿಂ ಅವರು ಕನಸಲ್ಲಿ ಬಂದು ನಿನಗೆ ಅತ್ಯಂತ ಪ್ರಿಯವಾದದ್ದನ್ನು ಅರ್ಪಿಸುವಂತೆ ಕೇಳಿದ್ದರಂತೆ. ಅದರಂತೆ ಇಬ್ರಾಹಿಂ ತನ್ನ ಪ್ರಾಣಕ್ಕಿಂತ ಪ್ರೀತಿಯ ಒಬ್ಬನೇ ಮಗನನ್ನು ತ್ಯಾಗ ಮಾಡಲು ಮುಂದಾದನು.
ಹಜರತ್ ಇಬ್ರಾಹಿಂ ಈ ಕನಸನ್ನು ದೇವರ ಸಂದೇಶವೆಂದು ಪರಿಗಣಿಸಿ, ಈ ಕನಸನ್ನು ಅಲ್ಲಾಹನ ಇಚ್ಛೆಯಂತೆ ಸ್ವೀಕರಿಸಿ, ದೇವರ ಮಾರ್ಗದಲ್ಲಿ ತನ್ನ 10 ವರ್ಷದ ಮಗನನ್ನು ಬಲಿಕೊಡಲು ನಿರ್ಧರಿಸಿದನು.

ಈ ಸಂದರ್ಭದಲ್ಲಿ ದುಷ್ಟಶಕ್ತಿಗಳು ಅಲ್ಲಾಹ್‌ನ ಆಜ್ಞೆಯನ್ನು ಪಾಲಿಸದಂತೆ ಇಬ್ರಾಹಿಂ ಅವರಿಗೆ ಪ್ರಚೋದಿಸುತ್ತವೆ. ಆದರೆ, ದೇವರ ಮೇಲಿನ ತನ್ನ ಅನನ್ಯ ಭಕ್ತಿಯಿಂದ ಇಬ್ರಾಹಿಂ ದುಷ್ಟಶಕ್ತಿಗಳ ಮಾತು ಕೇಳದೆ ತನ್ನ ಪುತ್ರನನ್ನೇ ಬಲಿ ಕೊಡಲು ಸಿದ್ಧರಾಗುತ್ತಾರೆ. ಈ ವೇಳೆ, ಇವರ ಭಕ್ತಿಗೆ ಮೆಚ್ಚುವ ದೇವರಿಂದ ಮಗನ ಬದಲಿಗೆ ಕುರಿಯನ್ನು ಬಲಿ ಕೊಡುವಂತೆ ಆಜ್ಞೆಯಾಗುತ್ತದೆ. ಹೀಗೆ ದೇವರ ಮೇಲಿನ ಭಕ್ತಿಯ ಕಾರಣಕ್ಕೆ ತನ್ನ ಪುತ್ರನನ್ನೇ ಬಲಿಕೊಡಲು ಸಜ್ಜಾಗಿದ್ದ ಇಬ್ರಾಹಿಂ ಅವರ ತ್ಯಾಗ ಪ್ರತೀಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಅಂದಿನಿಂದ, ಈದ್-ಉಲ್-ಅಝಾ ಅಥವಾ ಬಕ್ರೀದ್ ದಿನದಂದು ಮೇಕೆಯನ್ನು ಬಲಿಕೊಡುವ ಸಂಪ್ರದಾಯ ಪ್ರಾರಂಭವಾಯಿತು.

ಈ ಹಬ್ಬದಂದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಮೇಕೆ, ಕುರಿ, ಬಲಿ ಕೊಡುತ್ತಾರೆ. ಬಕ್ರೀದ್ ಹಬ್ಬವನ್ನು ಬಕ್ರಿ ಈದ್, ಈದ್ ಕುರ್ಬಾನ್, ಈದ್ ಅಲ್-ಅಧಾ ಅಥವಾ ಕುರ್ಬಾನ್ ಬಯಾರಾಮಿ ಎಂದೂ ಕರೆಯಲಾಗುತ್ತದೆ.

ಈ ಹಬ್ಬದ ದಿನ ರಂಜಾನ್ ಹಬ್ಬದ ಹಾಗೆಯೇ ಈದ್‌ಗಾಹ್ ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ನಮಾಜ್ ನಂತರ ಒಬ್ಬರನೊಬ್ಬರು ಆಲಿಂಗನ ಮಾಡಿಕೊಳ್ಳುವುದು, ಕೈ ಕುಲುಕುವುದು, ಈದ್ ಮುಬಾರಕ್ ಅಂದರೆ ಈ ಹಬ್ಬ ನಿಮಗೆ ಶುಭವನ್ನುಂಟು ಮಾಡಲಿ ಎನ್ನುವುದು ವಿಶೇಷ.

ರಾಜ್ಯ ಹೆಚ್ಎಎಲ್ ಘಟಕ ನಿರ್ಮಿತ : ಹೆಮ್ಮೆಯ ಹೆಲಿಕಾಪ್ಟರ್ ಪ್ರಾಯೋಗಿಕ ಹಾರಾಟ

0

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬಿದರೆಹಳ್ಳಕಾವಲ್‌ನಲ್ಲಿ ಡಿಫೆನ್ಸ್ ಪಿಎಸ್‌ಯು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಹೊಸ ಹೆಲಿಕಾಪ್ಟರ್ ಮೊದಲ ಹಂತದ ಕಾರ್ಯಾಚರಣೆ ಪ್ರಾರಂಭಿಸಲು ಸಿದ್ಧವಾಗಿದೆ.

HAL ಕಾರ್ಖಾನೆ ತುಮಕೂರಿನಲ್ಲಿ 615 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಉತ್ಪಾದನೆ, ರಚನಾತ್ಮಕ ಜೋಡಣೆ, ಅಂತಿಮ ಅಸೆಂಬ್ಲಿ ಲೈನ್ ಸೌಲಭ್ಯಗಳು, ಹೆಲಿಪ್ಯಾಡ್, ಫ್ಲೈಟ್ ಹ್ಯಾಂಗರ್, ಎಟಿಸಿ, ಸಜ್ಜುಗೊಳಿಸಲಾಗಿದೆ.

ಹ್ಯಾಂಗರ್, ನಿರ್ವಾಹಕ ಕಟ್ಟಡ ಮತ್ತು ಇತರ ಸೌಲಭ್ಯಗಳು ಪೂರ್ಣಗೊಂಡಿವೆ.

ಎಚ್‌ಎಲ್‌ ಪ್ರಕಾರ, ಕಾರ್ಖಾನೆಯು ಉದ್ಯಮದ 4.0 ಮಾನದಂಡಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಐಟಿ ಸೇವೆಗಳು, ಇಂಟಿಗ್ರೇಟೆಡ್ ಬಿಲ್ಡಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ ಎಲ್ಲಾ ಸೇವೆಗಳ ಸಂಪೂರ್ಣ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಹೊಂದಿರುವ ಸಂಪೂರ್ಣ ಕ್ಯಾಂಪಸ್‌ನ ಕಾರ್ಯಾಚರಣೆಯನ್ನು ಕೇಂದ್ರವು ಹೊಂದಿದೆ.

ಸೌಲಭ್ಯದ ಮೊದಲ ಹೆಲಿಕಾಪ್ಟರ್, ಲಘು ಉಪಯುಕ್ತತೆ ಒಂದು ಹೆಲಿಕಾಪ್ಟರ್ , ಈಗಾಗಲೇ ತಯಾರಿಸಲ್ಪಟ್ಟಿದೆ ಹಾಗೂ ಉದ್ಘಾಟನೆಯ ಸಮಯದಲ್ಲಿ ಅದನ್ನು ಹೊರತರಲಾಗುವುದು. ಉದ್ಘಾಟನೆಗೆ ಪ್ರಧಾನ ಮಂತ್ರಿ ಮೋದಿ ಭಾಗವಹಿಸುವ ನಿರೀಕ್ಷೆಯಿದೆ. ಮುಂಬರುವ ವಾರಗಳಲ್ಲಿ ಇದನ್ನು ಮಾಡುವ ಭರವಸೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಕಾರ್ಖಾನೆ ಜನವರಿ 2016ರಲ್ಲಿ ಪ್ರಧಾನ ಮಂತ್ರಿ ಅಡಿಪಾಯ ಹಾಕಿದ್ದರು. ಲಘು ಉಪಯುಕ್ತತೆಯ ಹೆಲಿಕಾಪ್ಟರ್‌ಗಳನ್ನು ಹಾಗೂ ಅಂತಿಮವಾಗಿ ರಷ್ಯಾದ ಕಮೊವ್‌ 226 ಹೆಲಿಕಾಪ್ಟರ್‌ಗಳನ್ನು ತಯಾರಿಸುತ್ತದೆ. ಹಂತ 1ರ ಕಾರ್ಯಾಚರಣೆಗಳ ಭಾಗವಾಗಿ ವರ್ಷಕ್ಕೆ 30 ಲಘು ಉಪಯುಕ್ತತೆಯ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ರಚಿಸಲಾಗಿದೆ. ಇದನ್ನು ವರ್ಷಕ್ಕೆ 60 ಚಾಪರ್‌ಗಳಿಗೆ ಅಪ್‌ಗ್ರೇಡ್ ಮಾಡಬಹುದು. ಕಮೊವ್‌ 226 ಹೋದಂತೆ ನಾವು ರಕ್ಷಣಾ ಸಚಿವಾಲಯದಿಂದ ಅನುಮತಿಗಾಗಿ ಕಾಯುತ್ತಿದ್ದೇವೆ. ತುಮಕೂರು ಸ್ಥಾವರದಲ್ಲಿ ಇದಕ್ಕಾಗಿ ಭೂಮಿಯನ್ನು ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸರ್ಕಾರಿ ಶಾಲೆಗಳಿಗೆ ಪ್ರವೇಶ ದಾಖಲಾತಿ ಏರಿಕೆ

0

ಸರ್ಕಾರಿ ಶಾಲೆಗಳಲ್ಲಿ ಕೊರೋನಾ ವೇಳೆಯಲ್ಲಿ ದಾಖಲಾತಿ ಏರಿಕೆ ಕಂಡಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆಯ ಮುಖಾಂತರ ತಿಳಿದು ಬಂದಿದೆ.

2020-21ನೇ ಸಾಲಿನಲ್ಲಿ ಕೊರೋನಾ ಸೋಂಕು ಏರಿಕೆಯಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ ಎಂದು ಯು-ಡೈಸ್ ಮೂಲಕ ತಿಳಿದು ಬಂದಿದೆ.

ಯುನಿಫ್ರೈಡ್ ಡಿಸ್ಟ್ರಿಕ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ ಎಜುಕೇಷನ್ ಪ್ಲಸ್ ನಲ್ಲಿ ದೇಶದ ಶಾಲೆಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗತ್ತದೆ.

ಕರ್ನಾಟಕದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಮಕ್ಕಳ ದಾಖಲಾತಿ, ಶಾಲೆಯ ಸ್ಥಿತಿಗತಿ, ಸೌಲಭ್ಯಗಳ ಮಾಹಿತಿಯನ್ನು ಸಹ ಕಲೆ ಹಾಕಿದೆ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಗಣನೀಯವಾಗಿ ದಾಖಲೆ ಏರಿಕೆಯಾಗಿದ್ದರೆ, ಅನುದಾನಿತ ಶಾಲೆ ಶಾಲೆಗಳಲ್ಲಿ ಅಲ್ಪ ಪ್ರಮಾಣದ ದಾಖಲೆ ಕುಸಿತವಾಗಿದೆ. ಅನುದಾನ ರಹಿತ ಶಾಲೆಗಳಲ್ಲಿ ಹೆಚ್ಚು ಮಕ್ಕಳ ದಾಖಲೆ ಕುಸಿತವಾಗಿರುವುದು ಕಂಡು ಬಂದಿದೆ. ಕೊರೋನಾ ಸಮಯದಲ್ಲಿ ಮಕ್ಕಳು ಖಾಸಗಿ ಶಾಲೆಗಳಲ್ಲಿ ಫೀಸ್ ಕಟ್ಟಲಾಗದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಹೆಚ್ಚು ಹೆಚ್ಚು ದಾಖಲೆಯನ್ನು ಮಾಡಿರುವುದು ಯು-ಡೈಸ್ ಪ್ಲಸ್ ಮುಖಾಂತರವಾಗಿ ತಿಳಿದುಬಂದಿದೆ.

ಶೈಕ್ಷಣಿಕ ವರ್ಷ 2020-21ನೇ ಸಾಲಿನಲ್ಲಿ ಕರ್ನಾಟಕದಲ್ಲಿರುವ 72,000ಕ್ಕೂ ಅಧಿಕ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಮಾಹಿತಿಯಂತೆ 2019-20ನೇ ಸಾಲಿಗೆ ಹೋಲಿಕೆಯನ್ನು ಮಾಡಿದರೇ ಮಕ್ಕಳ ದಾಖಲಾತಿ ಪ್ರಮಾಣ ಶೇ 2.32ರಷ್ಠು ಕಡಿಮೆಯಾಗಿದೆ. ಆದರೆ ಸರ್ಕಾರಿ ಶಾಲೆಯ ದಾಖಲಾತಿಯಲ್ಲಿ ಶೇ1.25ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಒಂದರಿಂದ ಹನ್ನೆರಡನೇ ತರಗತಿಯವರೆಗೂ 1,18,56,736 ದಾಖಲಾತಿಯನ್ನು ಪಡೆದಿದ್ದಾರೆ. ಆದರೆ ಹಿಂದಿನ ಶೈಕ್ಷಣಿಕ ಸಾಲಿಗೆ ಹೋಲಿಕೆಯನ್ನು ಮಾಡಿದರೆ 2.82ಲಕ್ಷ ವಿದ್ಯಾರ್ಥಿಘಳು ಕಡಿಮೆ ದಾಖಲಾಗಿದ್ದಾರೆ. ಇದಕ್ಕೆ ಕೊರೋನಾ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರಿ ಶಾಲೆ 2019-20ಯಲ್ಲಿ 49,06,231 ಮಕ್ಕಳು ದಾಖಲಾಗಿದ್ದರು 2020-21ನೇ ಸಾಲಿನಲ್ಲಿ 50,30,606 ಮಕ್ಕಳು ದಾಖಲಾಗಿದ್ದರು ಇವರು ಶೇಕಡವಾರು ಹೋಲಿಕೆಯನ್ನು ಗಮನಿಸಿದರೇ 1.25% ಮಕ್ಕಳು ಹೆಚ್ಚು ದಾಖಲಾಗಿದ್ದಾರೆ. ಅನುದಾನಿತ ಶಾಲೆ 2019-20ಯಲ್ಲಿ 15,46,326 ಮಕ್ಕಳು ದಾಖಲಾಗಿದ್ದರು 2020-21ನೇ ಸಾಲಿನಲ್ಲಿ 15,06,780 ಮಕ್ಕಳು ದಾಖಲಾಗಿದ್ದರು ಇವರು ಶೇಖಡವಾರು ಹೋಲಿಕೆಯನ್ನು ಗಮನಿಸಿದರೇ 2.05% ಕಡಿಮೆ ಮಕ್ಕಳು ದಾಖಲಾಗಿದ್ದಾರೆ.

ಅನುದಾನಿತ ಶಾಲೆ 2019-20ಯಲ್ಲಿ 56,85,879 ಮಕ್ಕಳು ದಾಖಲಾಗಿದ್ದರು 2020-21ನೇ ಸಾಲಿನಲ್ಲಿ 53,17,640 ಮಕ್ಕಳು ದಾಖಲಾಗಿದ್ದರು. ಇವರು ಶೇಕಡವಾರುು ಹೋಲಿಕೆಯನ್ನು ಗಮನಿಸಿದರೇ 6.47% ಕಡಿಮೆ ಮಕ್ಕಳು ದಾಖಲಾಗಿದ್ದಾರೆ. ಒಟ್ಟಾರೆ ಕೊರೋನಾ ಸಮಯದಲ್ಲಿ ಮಕ್ಕಳ ದಾಖಲಾತಿ ಇಳಿ ಮುಖವಾಗಿದೆ. 2.32% ಮಕ್ಕಳು ಕಡಿಮೆ ದಾಖಲಾಗಿದ್ದಾರೆ.

ಪ್ರಾಕೃತಿಕ ವಿಕೋಪ: ಮನೆ ಹಾನಿಗೆ ₹5 ಲಕ್ಷದ ವರೆಗೆ ಪರಿಹಾರ-ಅಶೋಕ್

0

ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಮನೆ ಹಾನಿಯಾದಲ್ಲಿ ಈ ಹಿಂದೆ 95 ಸಾವಿರ ರೂ. ನೀಡಲಾಗುತ್ತಿತ್ತು. ಈಗ 5 ಲಕ್ಷ ರೂ.ವರೆಗೆ, ಹಾಗೆಯೇ ಭಾಗಶಃ ಮನೆ ಹಾನಿಯಾದಲ್ಲಿ 5 ಸಾವಿರ ರೂ. ದಿಂದ 50 ಸಾವಿರ ರೂ.ಗೆ ಹೆಚ್ಚಿಸಲಾಗುವುದು.
ಈ ಸಂಬಂಧ ಕೂಡಲೇ ಸರ್ಕಾರದ ಆದೇಶ ಹೊರಬೀಳಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜ್ಯದ 13 ಜಲಾಶಯಗಳಲ್ಲಿ 800 ಟಿಎಂಸಿ ನೀರು ಇದ್ದು, ಜಲಾಶಯದಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಸದೆ ನದಿಗೆ ನೀರು ಬಿಡುವಂತಾಗಲು ಕ್ರಮವಹಿಸಲಾಗಿದೆ. ಹಾಗೆಯೇ ಹೆಚ್ಚಿನ ಮಳೆಯಾಗುತ್ತಿರುವ ಏಳು ಜಿಲ್ಲೆಗಳಲ್ಲಿ ಜಿಲ್ಲಾಡಳಿತ ನಿರಂತರ ಸಂಪರ್ಕ ಸಾಧಿಸಿ ಯಾವುದೇ ರೀತಿಯ ಸಮಸ್ಯೆ ಉದ್ಭವವಾಗದಂತೆ ಗಮನಹರಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದು, 18 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. ಉಳಿದಂತೆ ಇಲ್ಲಿಯ ವರೆಗೆ ಮೂರು ಜಿಲ್ಲೆಗಳಲ್ಲಿ (ಕೊಡಗು, ಹಾವೇರಿ, ಶಿವಮೊಗ್ಗ) ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.

ಸದ್ಯ ಇನ್ನೂ ಮೂರು ದಿನಗಳ ಕಾಲ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಮನೆ ಹಾನಿಯಾದಲ್ಲಿ ಈ ಹಿಂದೆ 95 ಸಾವಿರ ರೂ. ನೀಡಲಾಗುತ್ತಿತ್ತು. ಈಗ 5 ಲಕ್ಷ ರೂ.ವರೆಗೆ, ಹಾಗೆಯೇ ಭಾಗಶಃ ಮನೆ ಹಾನಿಯಾದಲ್ಲಿ 5 ಸಾವಿರ ರೂ. ದಿಂದ 50 ಸಾವಿರ ರೂ.ಗೆ ಹೆಚ್ಚಿಸಲಾಗುವುದು. ಈ ಸಂಬಂಧ ಕೂಡಲೇ ಸರ್ಕಾರದ ಆದೇಶ ಹೊರಬೀಳಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದ ಯಾವ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ, ಜಾನುವಾರು ಹಾನಿಯಾಗಿದ್ದಲ್ಲಿ ತಕ್ಷಣವೇ ಪರಿಹಾರ ನೀಡಲಾಗುವುದು. ಇದರಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

ರಾಷ್ಟ್ರಪತಿ ಹುದ್ದೆ ಅಭ್ಯರ್ಥಿ ದ್ರೌಪದಿ ಮುರ್ಮು ರಾಜ್ಯಕ್ಕೆ ಭೇಟಿ

0

ಬಿಜೆಪಿ ಬೆಂಬಲಿತ ಎನ್‍ಡಿಎ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆ ಕಣಕ್ಕಿಳಿದಿರುವ ದ್ರೌಪದಿ ಮುರ್ಮು ಅವರು ಮತ ಯಾಚನೆಗಾಗಿ ನಾಳೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಬೆಂಗಳೂರಿನ ಶಾಂಘ್ರಿಲಾ ಹೋಟೆಲ್‍ನಲ್ಲಿ ಸಭೆ ನಡೆಯಲಿದ್ದು, ರಾಷ್ಟ್ರಪತಿ ಚುನಾವಣಾ ಸಂದರ್ಭದಲ್ಲಿ ತಮಗೆ ಮತ ಹಾಕಬೇಕೆಂದು ದ್ರೌಪದಿ ಮುರ್ಮು ಅವರು ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿಗೆ ಮೊದಲ ಬಾರಿಗೆ ರಾಷ್ಟ್ರಪತಿ ಅಭ್ಯರ್ಥಿ ಮುರ್ಮು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಅವರನ್ನು ವಿಶಿಷ್ಟವಾಗಿ ಬರಮಾಡಿಕೊಳ್ಳಲು ತೀರ್ಮಾನಿಸಿದೆ.

ಈಗಾಗಲೇ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿದ್ದು, ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಅವರನ್ನು ಸಿಎಂ ಹಾಗೂ ಕೆಲವು ಪ್ರಮುಖ ನಾಯಕರು ಬರಮಾಡಿಕೊಳ್ಳಲಿದ್ದಾರೆ. ನಂತರ 20 ಮಂದಿ ಆದಿವಾಸಿ ಹಾಗೂ ಕಲಾ ತಂಡಗಳು ಅವರನ್ನು ಆದಿವಾಸಿ ಸಂಪ್ರದಾಯದಂತೆ ಸ್ವಾಗತ ಕೋರಲಿದ್ದಾರೆ. ಬಳಿಕ ಶಾಂಘ್ರಿಲಾ ಹೋಟೆಲ್‍ನ ಹೊರಭಾಗದಲ್ಲಿ ಸುಮಾರು 2500 ಮಹಿಳೆಯರು, ಮಹಿಳಾ ಮೋರ್ಚಾ ಬಿಜೆಪಿ ಎಸ್ಸಿ ಘಟಕ, ಹಿಂದುಳಿದ ವರ್ಗಗಳ ಘಟಕ ಸೇರಿದಂತೆ ಮತ್ತಿತರರು ವಿಶಿಷ್ಟವಾಗಿ ಬರಮಾಡಿಕೊಳ್ಳಲಿದ್ದಾರೆ.

ಪ್ರಮುಖರ ಜೊತೆ ನಡೆಯುವ ಸಭೆಯಲ್ಲಿ ದ್ರೌಪದಿ ಮುರ್ಮು ಅವರು ಮತಯಾಚನೆ ಮಾಡಲಿದ್ದು, ತಮಗೆ ಮತ ಹಾಕಬೇಕೆಂದು ಪಕ್ಷದ ಎಲ್ಲ ಮುಖಂಡರಿಗೂ ಮನವಿ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಭಗವಂತ ಕೂಬ, ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಸಚಿವರು, ಸಂಸದರು, ಶಾಸಕರು, ಪದಾಧಿಕಾರಿಗಳು ಹಾಜರಿರಲಿದ್ದಾರೆ.

ದೀನ್ ದಯಾಳ್ ಸ್ಪರ್ಶ್ ಯೋಜನೆ ವಿದ್ಯಾರ್ಥಿವೇತನ

0

ಅಂಚೆ ಇಲಾಖೆಯು ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣೆಯನ್ನು ಉತ್ತೇಜಿಸಲು ‘ದೀನ್ ದಯಾಳ್ ಸ್ಪರ್ಶ್ ಯೋಜನೆ’ ಅಡಿಯಲ್ಲಿ, ಸ್ಕಾಲರ್ ಶಿಪ್ ಪ್ರಶಸ್ತಿಗಾಗಿ 6ನೇ ತರಗತಿಯಿಂದ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿಯಲ್ಲಿ 2021-22 ಶೈಕ್ಷಣಿಕ ವರ್ಷದಲ್ಲಿ, ಶೇ.60 ಅಂಕಗಳನ್ನು ಹೊಂದಿರುವ ಮತ್ತು ಅಂಚೆ ಚೀಟಿಗಳ ಸಂಗ್ರಹಣೆಯ ಖಾತೆಯನ್ನು ಹೊಂದಿರುವ ಹಾಗೂ ಫಿಲಾಟೆಲಿಕ್ ಕ್ಲಬ್‍ ಸದಸ್ಯರನ್ನು ಹೊಂದಿರುವ ಮತ್ತು ಅಂಚೆಚೀಟಿ ಸಂಗ್ರಹಣೆಯನ್ನು ಹವ್ಯಾಸವಾಗಿ ಮುಂದುವರಿಸುವ 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.6 ಸಾವಿರ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಶೈಕ್ಷಣಿಕ ಪಠ್ಯಕ್ರಮವನ್ನು, ಬಲಪಡಿಸಲು ಮತ್ತು ಪೂರಕವಾಗಿ ಸಮರ್ಥನೀಯ ರೀತಿಯಲ್ಲಿ ಚಿಕ್ಕ ವಯಸ್ಸಿನಲ್ಲಿ, ಮಕ್ಕಳಲ್ಲಿ ಅಂಚೆಚೀಟಿಗಳ ಸಂಗ್ರಹವನ್ನು ಉತ್ತೇಜಿಸುವುದು ವಿದ್ಯಾರ್ಥಿವೇತನದ ಉದ್ದೇಶವಾಗಿದೆ.

ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಲೆವೆಲ್-1 ಅಂಚೆಚೀಟಿಗಳ ರಸಪ್ರಶ್ನೆ(ಲಿಖಿತ)ನಲ್ಲಿ ಭಾಗವಹಿಸಲು ಅರ್ಜಿಯನ್ನು ಸಲ್ಲಿಸಲು ಮಾಡಲು ಕೊನೆಯ ದಿನಾಂಕ ಸೆ. 7 ಆಗಿರುತ್ತದೆ. ಕರ್ನಾಟಕದ ಎಲ್ಲಾ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಸ್ಕಾಲರ್‍ಶಿಪ್ ಯೋಜನೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರವರ ಕಚೇರಿಯ ಅಂಚೆ ಅಧೀಕ್ಷಕರು ಕೋರಿದ್ದಾರೆ.

ಅಂಚೆಚೀಟಿಗಳ ಸಂಗ್ರಹದ ರಸಪ್ರಶ್ನೆ(ಲಿಖಿತ) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂಚೆಚೀಟಿಗಳ ಸಂಗ್ರಹಣೆ ರಸಪ್ರಶ್ನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಚೆ ಇಲಾಖೆಯು ನೀಡುವ ಅಂಚೆಚೀಟಿಗಳ ಸಂಗ್ರಹ ಯೋಜನೆಯಲ್ಲಿ ಯಶಸ್ವಿಯಾಗಿ ಸರ್ಧಿಸಬೇಕಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ www.indiapost.gov.in ಮತ್ತು www.karnatakapost.gov.in ಗೆ ಭೇಟಿ ನೀಡಬಹುದು.

ಮಂಕಿಪಾಕ್ಸ್ ಲಕ್ಷಣಗಳಿರುವ ವ್ಯಕ್ತಿ ಕೋಲ್ಕತಾದಲ್ಲಿ ಪತ್ತೆ

0

ಕೊರೋನಾ ಸೋಂಕು ತ್ವರಿತವಾಗಿ ಹರಡುತ್ತಿರುವ ಮಧ್ಯೆ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ವೇಗವಾಗಿ ಹರಡುತ್ತಿದೆ. ಸಾವಿನ ಪ್ರಮಾಣವು ಸಿಡುಬಿಗಿಂತ ತುಂಬಾ ಕಡಿಮೆಯಾದರೂ, ಇದು ಅಪಾಯಕಾರಿ ಯೆಂದು ಪರಿಗಣಿಸಲಾಗಿದೆ.

ಹೀಗಾಗಿ ಮಂಕಿಪಾಕ್ಸ್‌ನ್ನು ವರ್ಲ್ಡ್‌ ಹೆಲ್ತ್ ನೆಟ್‌ವರ್ಕ್‌ ಸಾಂಕ್ರಾಮಿಕ ರೋಗವೆಂದು ಈಗಾಗಲೇ ಘೋಷಿಸಿದೆ. ಈ ಮಧ್ಯೆ ಕೋಲ್ಕತ್ತಾದ ಆಸ್ಪತ್ರೆಗೆ ಮಂಕಿಪಾಕ್ಸ್ ರೋಗಲಕ್ಷಣಗಳೊಂದಿಗೆ ಯುವಕನೊಬ್ಬ ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಮಂಕಿಪಾಕ್ಸ್ ವೈರಸ್ ಪ್ರಪಂಚದ 40ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ. ಅದರಲ್ಲೂ ಯುರೋಪಿನಲ್ಲಿ ಹೆಚ್ಚಿನ ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಕಳೆದ ತಿಂಗಳವರೆಗೆ, ಮಂಕಿಪಾಕ್ಸ್ ಆಫ್ರಿಕಾದಿಂದ ಹೊರಗೆ ಹೆಚ್ಚು ಪ್ರಕರಣಗಳು ಕಂಡು ಬರಲ್ಲಿಲ್ಲ.
ಹೀಗಾಗಿ ಜನರು ಸ್ಪಲ್ಪಮಟ್ಟಿಗೆ ನಿರಾಳವಾಗಿದ್ದರು. ಆದರೆ ಕಳೆದ ತಿಂಗಳು ಕಳೆದ ತಿಂಗಳು ಯುರೋಪಿನಲ್ಲಿ ಪ್ರಕರಣಗಳ ಉಲ್ಬಣವು ಸ್ಪೇನ್ ಮತ್ತು ಬೆಲ್ಜಿಯಂನಲ್ಲಿ ಹೆಚ್ಚಾದ ಪ್ರಕರಣವು ಆತಂಕಕ್ಕೆ ಕಾರಣವಾಗಿದೆ.

58 ದೇಶಗಳಲ್ಲಿ 3,417ಕ್ಕೂ ಹೆಚ್ಚು ಮಂಕಿಪಾಕ್ಸ್​ ಪ್ರಕರಣಗಳು ವರದಿಯಾಗಿದೆ.

ಒಂದಕ್ಕಿಂತ ಹೆಚ್ಚು ವಾಹನವಿದ್ದರೆ ವಿಮೆ ಪ್ರೀಮಿಯಂ ಉಳಿತಾಯ?

0

ಭಾರತೀಯ ವಿಮಾನ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಾಹನ ವಿಮೆ ಮತ್ತು ಚಾಲನೆಗೆ ಸಂಬಂಧಪಟ್ಟ ಯೋಜನೆಗಳನ್ನು ರೂಪಿಸಲು ಮುಂದಾಗಿದೆ.ಅಪರೂಪಕ್ಕೆ ವಾಹನ ಬಳಸಿದರೆ ಕಡಿಮೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಪೇ ಆಸ್ ಯೂ ಡ್ರೈವ್ ಆಯ್ಕೆ ಬಳಸಿಕೊಂಡಲ್ಲಿ ವಿಮೆ ಹೊಂದಿರುವ ವಾಹನಗಳ ಮಾಲೀಕರು ತಮ್ಮ ವಾಹನವನ್ನು ಎಷ್ಟು ಬಳಸುತ್ತಾರೆ ಎನ್ನುವ ವಿವರ ಕೊಡಬೇಕು. ಇದರ ಆಧಾರದಲ್ಲಿ ವಿಮೆ ಕಂತು ಪಾವತಿಸಲು ಅವಕಾಶ ಸಿಗಲಿದೆ.

ನಿಧಾನವಾಗಿ ವಾಹನ ಚಾಲನೆ ಮಾಡಲು ಸಾಧನವನ್ನು ವಾಹನದಲ್ಲಿ ಅಳವಡಿಸಬೇಕಿದೆ.
ಪ್ಲೋಟರ್ ವಿಮೆ ಎನ್ನುವ ಪರಿಕಲ್ಪನೆ ಪರಿಚಯಿಸಲಾಗಿದ್ದು, ಒಂದಕ್ಕಿಂತ ಹೆಚ್ಚು ದ್ವಿಚಕ್ರ ವಾಹನ, ಕಾರುಗಳನ್ನು ಹೊಂದಿದವರು ಏಕರೂಪದ ಪ್ರೀಮಿಯಂ ಪಾವತಿಸುವ ಪದ್ಧತಿ ಇದಾಗಿದೆ. ಒಬ್ಬ ವ್ಯಕ್ತಿ ಒಂದು ಬೈಕ್, ಕಾರ್ ಹೊಂದಿದ್ದರೆ ಎರಡೂ ವಾಹನಗಳಿಗೆ ಒಂದೇ ವಿಮೆ ಮಾಡಿಸಲು ಸಾಧ್ಯವಾಗತ್ತದೆ. ಇದರಿಂದ ಹಣವೂ ಉಳಿತಾಯವಾಗುತ್ತದೆ.

ವಾರ್ಷಿಕ ತಾವು ಎಷ್ಟು ಕಿಲೋಮೀಟರ್ ಡ್ರೈವ್ ಮಾಡುತ್ತೀರಿ ಎಂಬುದನ್ನು ಅಂದಾಜು ಮಾಡಿ ಅದರ ಅನ್ವಯ ವಿಮೆ ಪಾವತಿಸಬಹುದು. ಕ್ಲೈಮ್ ಮಾಡುವಾಗ ನಮೂದಿಸಿದಷ್ಟೇ ಕಿಲೋಮೀಟರ್ ವಾಹನ ಓಡಿರಬೇಕು.
ವಾಹನದ ವೇಗಕ್ಕೆ ತಕ್ಕಂತೆ ಪ್ರೀಮಿಯಂ ಪಾವತಿಸಬೇಕು. ವೇಗವಾಗಿ ವಾಹನ ಚಲಾಯಿಸಿದರೆ ಹೆಚ್ಚಿನ ಪ್ರೀಮಿಯಂ ಕಟ್ಟಬೇಕಿದೆ. ನಿಯಮಿತ ವೇಗದಲ್ಲಿ ವಾಹನ ಚಾಲನೆ ಮಾಡುವವರಿಗೆ ಇದು ಅನುಕೂಲಕರವಾಗಲಿದೆ.

ಸರ್ಕಾರಿ ನೌಕರರ ವಯೋಮಿತಿ ಏರಿಕೆ ಪರಿಶೀಲಿಸಲು ಸಲಹೆ

0

ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಲಿದೆ. ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯು ಸಲಹೆಯನ್ನ ನೀಡಿದ್ದು, ದೇಶದಲ್ಲಿ ಕೆಲಸ ಮಾಡುವವರಿಗೆ ವಯಸ್ಸಿನ ಮಿತಿಯನ್ನ ಹೆಚ್ಚಿಸಬೇಕು ಎಂದಿದೆ. ಇದರೊಂದಿಗೆ ದೇಶದಲ್ಲಿ ನಿವೃತ್ತಿ ವಯಸ್ಸನ್ನ ಹೆಚ್ಚಿಸುವುದರ ಜೊತೆಗೆ ಸಾರ್ವತ್ರಿಕ ಪಿಂಚಣಿ ವ್ಯವಸ್ಥೆಯನ್ನೂ ಆರಂಭಿಸಬೇಕು ಎಂದು ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿ ಹೇಳಿದೆ.

ವರದಿಯ ಪ್ರಕಾರ, ಈ ಸಲಹೆಯ ಅಡಿಯಲ್ಲಿ ಪ್ರತಿ ತಿಂಗಳು ನೌಕರರಿಗೆ ಕನಿಷ್ಠ 2,000 ರೂ.ಗಳ ಪಿಂಚಣಿ ನೀಡಬೇಕು. ಇನ್ನು ಆರ್ಥಿಕ ಸಲಹಾ ಸಮಿತಿಯು ದೇಶದ ಹಿರಿಯ ನಾಗರಿಕರ ಸುರಕ್ಷತೆಗಾಗಿ ಉತ್ತಮ ವ್ಯವಸ್ಥೆಗಳನ್ನ ಶಿಫಾರಸು ಮಾಡಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂತಹ ನೀತಿಗಳನ್ನು ರೂಪಿಸಿ ಕೌಶಲ್ಯಾಭಿವೃದ್ಧಿ ಮಾಡುವಂತೆ ವರದಿಯಲ್ಲಿ ತಿಳಿಸಲಾಗಿದೆ. ಈ ಪ್ರಯತ್ನವು ಅಸಂಘಟಿತ ವಲಯದಲ್ಲಿ ವಾಸಿಸುವ, ದೂರದ ಪ್ರದೇಶಗಳಲ್ಲಿ, ನಿರಾಶ್ರಿತರು, ತರಬೇತಿ ಪಡೆಯಲು ದಾರಿಯಿಲ್ಲದ ವಲಸಿಗರನ್ನು ಒಳಗೊಂಡಿರಬೇಕು, ಆದರೆ ಅವರಿಗೆ ತರಬೇತಿ ನೀಡಬೇಕು ಎಂದಿದೆ.

ಗಡಿ ಬಿಕ್ಕಟ್ಟು ಪರಿಹಾರಕ್ಕೆ ಚೀನಾ ನಿಯಮಬದ್ಧವಾಗಬೇಕು- ಜೈಶಂಕರ್

0

ಪೂರ್ವ ಲಡಾಖ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ಮುಕ್ತಾಯಕ್ಕೆ ಚೀನಾ ನಿಯಮ ಪಾಲಿಸಬೇಕು. ಎರಡೂ ರಾಷ್ಟ್ರಗಳ ನಡುವೆ ಸುಗಮ ಬಾಂಧವ್ಯ ಮುಂದುವರಿಯಬೇಕಾದರೆ ಇಂಥ ನಿರ್ಣಯ ಅನಿವಾರ್ಯ
ಎಂದು ಚೀನಾ ವಿದೇಶಾಂಗ ಸಚಿವರಿಗೆ ಕೇಂದ್ರ ವಿದೇಶಾಂಗ ಸಚಿವ ಎಸ್‌.
ಜೈಶಂಕರ್‌ ಅವರು ಎಚ್ಚರಿಸಿದರುಪೂರ್ವ ಲಡಾಖ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ಮುಕ್ತಾಯಕ್ಕೆ ಚೀನಾ ನಿಯಮ ಪಾಲಿಸಬೇಕು. ಎರಡೂ ರಾಷ್ಟ್ರಗಳ ನಡುವೆ ಸುಗಮ ಬಾಂಧವ್ಯ ಮುಂದುವರಿಯಬೇಕಾದರೆ ಇಂಥ ನಿರ್ಣಯ ಅನಿವಾರ್ಯ
ಎಂದು ಚೀನಾ ವಿದೇಶಾಂಗ ಸಚಿವರಿಗೆ ಕೇಂದ್ರ ವಿದೇಶಾಂಗ ಸಚಿವ ಎಸ್‌.
ಜೈಶಂಕರ್‌ ಅವರು ಎಚ್ಚರಿಸಿದರು.

ಪೂರ್ವ ಲಡಾಖ್‌ನ ಕೆಲವು ಪ್ರದೇಶಗಳಿಂದ ಎರಡೂ ದೇಶಗಳ ಸೇನೆ ವಾಪಸಾಗಿದೆ. ಇನ್ನುಳಿದ ಪ್ರದೇಶ ಗಳಿಂದ ಆ ಪ್ರಕ್ರಿಯೆ ಬಾಕಿ ಉಳಿದಿದೆ. ಎರಡೂ ದೇಶಗಳ ನಡುವೆ ಐತಿಹಾಸಿಕವಾಗಿ ಇರುವ ಬಾಂಧವ್ಯ ಸುಗಮ ವಾಗಿ ಮುಂದುವರಿಯುವ ನಿಟ್ಟಿನಲ್ಲಿ ಚೀನ ದ್ವಿಪಕ್ಷೀಯ ಬಾಂಧವ್ಯಗಳನ್ನು ಗೌರವಿಸಿ, ಗಡಿ ಬಿಕ್ಕಟ್ಟು ಕೊನೆ ಗೊಳಿಸಬೇಕು ಎಂದು ಜೈಶಂಕರ್‌ ಹೇಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇಂಡೋನೇಷ್ಯಾ ರಾಜಧಾನಿ ಬಾಲಿಯಲ್ಲಿ ಜಿ-20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನದ ನಡುವೆಯೇ ಎರಡೂ ರಾಷ್ಟ್ರಗಳ ಸಚಿವರ ನಡುವೆ ನಡೆದ ಒಂದು ಗಂಟೆ ಅವಧಿಯ ಮಾತುಕತೆಯಲ್ಲಿ ಗಡಿ ತಂಟೆ ಅಂಶದ ಬಗ್ಗೆ ಪ್ರಧಾನವಾಗಿ ಚರ್ಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಶೀಘ್ರವೇ ಭಾರತ ಮತ್ತು ಚೀನ ಮಿಲಿ ಟರಿ ಅಧಿಕಾರಿಗಳ ನಡುವೆ ಮತ್ತೂಮ್ಮೆ ಮಾತುಕತೆ ನಡೆಸಲಾಗುತ್ತದೆ. ಇದರ ಜತೆಗೆ ಚೀನಕ್ಕೆ ಭಾರತೀಯ ವಿದ್ಯಾರ್ಥಿ ಗಳು ತೆರಳಿ ಅಲ್ಲಿ ಶಿಕ್ಷಣ ಮುಂದುವರಿಸುವ ಬಗ್ಗೆಯೂ ಜೈಶಂಕರ್‌, ವಾಂಗ್‌ ಜತೆಗೆ ಚರ್ಚಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.