ಭಾರತೀಯ ವಿಮಾನ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಾಹನ ವಿಮೆ ಮತ್ತು ಚಾಲನೆಗೆ ಸಂಬಂಧಪಟ್ಟ ಯೋಜನೆಗಳನ್ನು ರೂಪಿಸಲು ಮುಂದಾಗಿದೆ.ಅಪರೂಪಕ್ಕೆ ವಾಹನ ಬಳಸಿದರೆ ಕಡಿಮೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಪೇ ಆಸ್ ಯೂ ಡ್ರೈವ್ ಆಯ್ಕೆ ಬಳಸಿಕೊಂಡಲ್ಲಿ ವಿಮೆ ಹೊಂದಿರುವ ವಾಹನಗಳ ಮಾಲೀಕರು ತಮ್ಮ ವಾಹನವನ್ನು ಎಷ್ಟು ಬಳಸುತ್ತಾರೆ ಎನ್ನುವ ವಿವರ ಕೊಡಬೇಕು. ಇದರ ಆಧಾರದಲ್ಲಿ ವಿಮೆ ಕಂತು ಪಾವತಿಸಲು ಅವಕಾಶ ಸಿಗಲಿದೆ.
ನಿಧಾನವಾಗಿ ವಾಹನ ಚಾಲನೆ ಮಾಡಲು ಸಾಧನವನ್ನು ವಾಹನದಲ್ಲಿ ಅಳವಡಿಸಬೇಕಿದೆ.
ಪ್ಲೋಟರ್ ವಿಮೆ ಎನ್ನುವ ಪರಿಕಲ್ಪನೆ ಪರಿಚಯಿಸಲಾಗಿದ್ದು, ಒಂದಕ್ಕಿಂತ ಹೆಚ್ಚು ದ್ವಿಚಕ್ರ ವಾಹನ, ಕಾರುಗಳನ್ನು ಹೊಂದಿದವರು ಏಕರೂಪದ ಪ್ರೀಮಿಯಂ ಪಾವತಿಸುವ ಪದ್ಧತಿ ಇದಾಗಿದೆ. ಒಬ್ಬ ವ್ಯಕ್ತಿ ಒಂದು ಬೈಕ್, ಕಾರ್ ಹೊಂದಿದ್ದರೆ ಎರಡೂ ವಾಹನಗಳಿಗೆ ಒಂದೇ ವಿಮೆ ಮಾಡಿಸಲು ಸಾಧ್ಯವಾಗತ್ತದೆ. ಇದರಿಂದ ಹಣವೂ ಉಳಿತಾಯವಾಗುತ್ತದೆ.
ವಾರ್ಷಿಕ ತಾವು ಎಷ್ಟು ಕಿಲೋಮೀಟರ್ ಡ್ರೈವ್ ಮಾಡುತ್ತೀರಿ ಎಂಬುದನ್ನು ಅಂದಾಜು ಮಾಡಿ ಅದರ ಅನ್ವಯ ವಿಮೆ ಪಾವತಿಸಬಹುದು. ಕ್ಲೈಮ್ ಮಾಡುವಾಗ ನಮೂದಿಸಿದಷ್ಟೇ ಕಿಲೋಮೀಟರ್ ವಾಹನ ಓಡಿರಬೇಕು.
ವಾಹನದ ವೇಗಕ್ಕೆ ತಕ್ಕಂತೆ ಪ್ರೀಮಿಯಂ ಪಾವತಿಸಬೇಕು. ವೇಗವಾಗಿ ವಾಹನ ಚಲಾಯಿಸಿದರೆ ಹೆಚ್ಚಿನ ಪ್ರೀಮಿಯಂ ಕಟ್ಟಬೇಕಿದೆ. ನಿಯಮಿತ ವೇಗದಲ್ಲಿ ವಾಹನ ಚಾಲನೆ ಮಾಡುವವರಿಗೆ ಇದು ಅನುಕೂಲಕರವಾಗಲಿದೆ.