ಕೊರೋನಾ ಸೋಂಕು ತ್ವರಿತವಾಗಿ ಹರಡುತ್ತಿರುವ ಮಧ್ಯೆ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ವೇಗವಾಗಿ ಹರಡುತ್ತಿದೆ. ಸಾವಿನ ಪ್ರಮಾಣವು ಸಿಡುಬಿಗಿಂತ ತುಂಬಾ ಕಡಿಮೆಯಾದರೂ, ಇದು ಅಪಾಯಕಾರಿ ಯೆಂದು ಪರಿಗಣಿಸಲಾಗಿದೆ.
ಹೀಗಾಗಿ ಮಂಕಿಪಾಕ್ಸ್‌ನ್ನು ವರ್ಲ್ಡ್ ಹೆಲ್ತ್ ನೆಟ್‌ವರ್ಕ್ ಸಾಂಕ್ರಾಮಿಕ ರೋಗವೆಂದು ಈಗಾಗಲೇ ಘೋಷಿಸಿದೆ. ಈ ಮಧ್ಯೆ ಕೋಲ್ಕತ್ತಾದ ಆಸ್ಪತ್ರೆಗೆ ಮಂಕಿಪಾಕ್ಸ್ ರೋಗಲಕ್ಷಣಗಳೊಂದಿಗೆ ಯುವಕನೊಬ್ಬ ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಮಂಕಿಪಾಕ್ಸ್ ವೈರಸ್ ಪ್ರಪಂಚದ 40ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ. ಅದರಲ್ಲೂ ಯುರೋಪಿನಲ್ಲಿ ಹೆಚ್ಚಿನ ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಕಳೆದ ತಿಂಗಳವರೆಗೆ, ಮಂಕಿಪಾಕ್ಸ್ ಆಫ್ರಿಕಾದಿಂದ ಹೊರಗೆ ಹೆಚ್ಚು ಪ್ರಕರಣಗಳು ಕಂಡು ಬರಲ್ಲಿಲ್ಲ.
ಹೀಗಾಗಿ ಜನರು ಸ್ಪಲ್ಪಮಟ್ಟಿಗೆ ನಿರಾಳವಾಗಿದ್ದರು. ಆದರೆ ಕಳೆದ ತಿಂಗಳು ಕಳೆದ ತಿಂಗಳು ಯುರೋಪಿನಲ್ಲಿ ಪ್ರಕರಣಗಳ ಉಲ್ಬಣವು ಸ್ಪೇನ್ ಮತ್ತು ಬೆಲ್ಜಿಯಂನಲ್ಲಿ ಹೆಚ್ಚಾದ ಪ್ರಕರಣವು ಆತಂಕಕ್ಕೆ ಕಾರಣವಾಗಿದೆ.
58 ದೇಶಗಳಲ್ಲಿ 3,417ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದೆ.