Sunday, August 2, 2026
Sunday, August 2, 2026

Klive Special Article ಯುಗಾದಿ…ಒಂದಿಷ್ಟು ಮಾಹಿತಿ- ಡಾ.ಹೆಚ್.ಪದ್ಮನಾಭ ಅಡಿಗ. ಶಿವಮೊಗ್ಗ

Date:

Klive Special Article ಬ್ರಹ್ಮನ ಸೃಷ್ಟಿಯ ಪ್ರಾರಂಭದದಿನ, ಬ್ರಹ್ಮನ ಪೂಜೆಯೇ ವಿಶೇಷ.ಈ ದಿನ ಯುಗಗಳ ಪ್ರಾರಂಭದ ದಿನವಾಗಿ ಯುಗಾದಿ. ಭಾರತದ ದಕ್ಷಿಣ ರಾಜ್ಯಗಳಲ್ಲಿ ಹೊಸ ಸಂವತ್ಸರ ಪರಾಭವದ ಪ್ರಥಮ ದಿನ. ಶಾಲಿವಾಹನ ಶಕದಂತೆ 1949 ನೇ ವರ್ಷದ ಪ್ರಾರಂಭದ ದಿನ. ಏಳನೇ ವೈವಸ್ವತ ಮನ್ವಂತರದಲ್ಲಿ 28 ನೇ ಚತುರ್ ಯುಗದಲ್ಲಿ ಕೃತ ತ್ರೇತಾ ದ್ವಾಪರ ಕಳೆದು ಕಲಿಯುಗದಲ್ಲಿ 5127 ವರ್ಷಗಳು ಕಳೆದಿವೆ.
ಹೊಸವರ್ಷಕ್ಕೆ ಗುರುವೇ ರಾಜ, ಕುಜನೇ ಮಂತ್ರಿ. ಪರಾಭವಾಬ್ದೇ ರಾಜ್ಞ: ಸ್ಯಾತ್ ಸಮರಮ್ ಸಹಶತ್ರುಭಿ:. ರಾಜರು ರಾಜರೊಳಗೆ ನಿತ್ಯ ಯುದ್ಧ. ಅದರಲ್ಲಿ ಪರಾಭವ ಎಲ್ಲರಿಗೂ.
ಕಾಲವನ್ನು ಅಳೆಯಲು ವಿಶ್ವದಲ್ಲಿ ಅನೇಕ ರೀತಿಯ ಪದ್ಧತಿಗಳನ್ನು ಮಾಡಿಕೊಂಡಿದ್ದಾರೆ. ಭಾರತದಲ್ಲಿ ವರ್ಷ ಅಯನ, ಋತು , ಮಾಸ, ಪಕ್ಷ, ದಿನ ಎಂದು ಆರು ವಿಧವಾಗಿ ವಿಂಗಡಿಸಿದ್ದಾರೆ. ಭಾರತೀಯರಿಗೆ ಆಕಾಶವೇ ಪಂಚಾಂಗ. ಪ್ರಾಚೀನಕಾಲದಲ್ಲಿ ಅನೇಕ ರೀತಿಯ ವರ್ಷಾಚರಣೆಯಿತ್ತು . ಸಾವನವರ್ಷ, ಸೌರವರ್ಷ, ಚಾಂದ್ರ ವರ್ಷ, ನಾಕ್ಷತ್ರ ವರ್ಷ ಮತ್ತು ಬಾರ್ಹಸ್ಪತ್ಯ ವರ್ಷ ಎಂದು ಐದು ಪ್ರಕಾರದ ವರ್ಷಾಚರಣೆಗಳು ಬಳಕೆಯಲ್ಲಿದ್ದವು. ಇವುಗಳಲ್ಲಿ ಸೌರವರ್ಷವು ಮೇಷ ಮಾಸ, ವೃಷಭ ಮಾಸ ಇತ್ಯಾದಿಯಾಗಿ ಸಂಕ್ರಾಂತಿಗೆ ಅನುಗುಣವಾಗಿ ಎಣಿಸಲಾಗುತ್ತದೆ. ಇದು ಸೌರಯುಗಾದಿಯಿಂದ ಅಂದರೆ ಮುಂದಿನ ಏಪ್ರೀಲ್ 14 ನೇ ದಿನಾಂಕದಿಂದ ಹೊಸವರ್ಷ ಆರಂಭವಾಗುತ್ತದೆ.
ಚಾಂದ್ರವರ್ಷವನ್ನು ಪ್ರಭವ ವಿಭವ ಮೊದಲಾದ 60 ಸಂವತ್ಸರದ ಕ್ರಮದಲ್ಲಿ ಹೇಳುತ್ತಾರೆ. ಈ ಹೊಸವರ್ಷ ಪರಾಭವ ಎಂಬ ಹೆಸರಿನ ವರ್ಷವಾಗಿದೆ. ಎರಡು ಮಾಸಗಳಿಗೆ ಒಂದು ಸೌರ ಋತು, ಮೂರು ಸೌರ ಋತುಗಳಿಗೆ ಒಂದು ಅಯನ. ಇವು ಉತ್ತರ ಅಯನ ಮತ್ತು ದಕ್ಷಿಣ ಅಯನ ಎಂದು ಎರಡು ಇವೆ. ಕರ್ಕ ಸಂಕ್ರಾಂತಿಯಿಂದ ದಕ್ಷಿಣಾಯನ, ಮಕರ ಸಂಕ್ರಾಂತಿಯಿಂದ ಉತ್ತರಾಯಣ ಪ್ರಾರಂಭವಾಗುತ್ತವೆ. ದಕ್ಷಿಣಾಯನ,ಮಳೆಗಾಲವಾಗಿ ಕೃಷಿ ಮೊದಲಾದ ಕಾರ್ಯಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ಗೃಹಪ್ರವೇಶ, ದೇವಾಲಯ ನಿರ್ಮಾಣ ವಿವಾಹ ಮೊದಲಾದವುಗಳಿಗೆ ಉತ್ತರಾಯಣವೇ ಶ್ರೇಷ್ಠ ಎಂದು ಪರಿಗಣಿಸಿದ್ದಾರೆ. ಚಾಂದ್ರ ಮಾಸಗಳನ್ನು ಹುಣ್ಣಿಮೆಯಂದು ಇರುವ ನಕ್ಷತ್ರದ ಹೆಸರಿನಲ್ಲಿ ಹೇಳುತ್ತಾರೆ. ಹುಣ್ಣಿಮೆಯು ಕೃತಿಕಾ ನಕ್ಷತ್ರದಲ್ಲಿ ಬಂದರೆ ಆ ಮಾಸ ಕಾರ್ತಿಕ, ಚಿತ್ರಾ ನಕ್ಷತ್ರದಲ್ಲಿ ಬಂದರೆ ಚೈತ್ರ, ವಿಶಾಖಾ ನಕ್ಷತ್ರದ ದಿನ ಹುಣ್ಣಿಮೆಯಾದರೆ ಆ ಮಾಶಸ ವೈಶಾಖ ಹೀಗೆ ಚಾಂದ್ರಮಾನದ ಮಾಸಗಳು ಚಂದ್ರನ ಗತಿಯನ್ನು ಅವಲಂಬಿಸಿವೆ.
Klive Special Article ಯುಗಾದಿಯಂದು ತೈಲಾಭ್ಯಂಜನ ಹೊಸಬಟ್ಟೆ ಧರಿಸುವುದು ,ಜೋಕಾಲಿ ,ದೇವೀ ಆರಾಧನೆ ,ಪಂಚಾಂಗಶ್ರವಣ , ಮುಂತಾದ ಆಚರಣೆಗಳು ರೂಢಿಯಲ್ಲಿದೆ. ಹೊಸವರ್ಷದ ಮೊದಲ ದಿನವೇ ಊರವರೆಲ್ಲ ಸೇರಿ, ಹೊಸ ಸಂವತ್ಸರದಲ್ಲಿ ವಾರ್ಷಿಕ ಕಾರ್ಯಕ್ರಮಗಳ ಆದ್ಯತೆಗಳ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ . ಮಳೆ ಎಷ್ಟು ಪ್ರಮಾಣದಲ್ಲಿ ಆಗಬಹುದು,ರೋಗರುಜಿನಗಳ ಬಾಧೆ ಬರಬಹುದೇ, ಯಾವ ಯಾವ ವಸ್ತುಗಳು, ಆಹಾರಪದಾರ್ಥಗಳು ತುಟ್ಟಿಯಾಗುತ್ತವೆ ಅಥವಾ ಅಗ್ಗವಾಗುತ್ತವೆ, ಯಾವುದನ್ನು ಬೆಳೆಯುವುದು ಉತ್ತಮ ಇತ್ಯಾದಿಯಾಗಿ ಇಡೀ ವರ್ಷದ ಉತ್ಪನ್ನಗಳ ಬಗ್ಗೆ ಚರ್ಚಿಸುತ್ತಾರೆ. ಹೊಸ ಹುಮ್ಮಸ್ಸಿನೊಂದಿಗೆ, ಹೊಸ ಸಂಕಲ್ಪ ದಿಂದ, ಮುಂದಿನ ದಿನಗಳಲ್ಲಿ ಮಾಡಬೇಕಾದ ಕಾರ್ಯಗಳ ರೂಪುರೇಖೆಗಳನ್ನು ನಿರ್ಧರಿಸುತ್ತಾರೆ.
ಈ ಪರಾಭವ ಸಂವತ್ಸರವು ನಮ್ಮ ನಮ್ಮ ಋಣಾತ್ಮಕ ವಿಚಾರಗಳಿಗೆ ಪರಾಭವವೂ ಧನಾತ್ಮಕ ವಿಚಾರಗಳಿಗೆ ವಿಜಯವೂ ಆಗಲೆಂದು ಪ್ರಾರ್ಥಿಸೋಣ.

ಡಾ. ಪದ್ಮನಾಭ ಅಡಿಗ. ಹೆಚ್.
ನಿವೃತ ಉಪನ್ಯಾಸಕರು,
94819 88755

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...