Monday, November 9, 2026
Monday, November 9, 2026
Home Blog Page 1938

ಬಣ್ಣದ ಟೇಪ್ ಧರಿಸಿ ಗೌಪ್ಯವಾಗಿ ರಷ್ಯಕ್ಕೇ ತಿರುಮಂತ್ರಹಾಕಿದ ಉಕ್ರೇನ್

0

ಉಕ್ರೇನ್ ಸೈನಿಕರಂತೆ ಹಾಗೂ ಉಕ್ರೇನ್ ಪ್ರಜೆಗಳಂತೆ ಒಳ ನುಸುಳುವ ರಷ್ಯಾದ ಯೋಧರು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇಂಥದ್ದಕ್ಕೆಲ್ಲ ಕಡಿವಾಣ ಹಾಕವುದಕ್ಕಾಗಿ ಉಕ್ರೇನ್ ಪರವಾಗಿ ಗನ್ ಹಿಡಿದು ನಿಂತು ಪ್ರಜೆಗಳ ರಕ್ಷಣೆಗಾಗಿ ಉಕ್ರೇನ್ ತನ್ನ ಗುರುತನ್ನೇ ಬದಲಾಯಿಸಿಕೊಂಡಿದೆ.

ದೇಶದ ದ್ವಿವರ್ಣ ಧ್ವಜದಲ್ಲಿರುವ ನೀಲಿ ಬಣ್ಣಕ್ಕೆ ಬದಲಾಯಿಸಿಕೊಳ್ಳಲಾಗಿದೆ. ಬಾವುಟದಲ್ಲಿರುವ ನೀಲಿ ಬಣ್ಣವನ್ನು ವಿಶೇಷ ಗುರುತಾಗಿ ಬಳಸಿಕೊಳ್ಳಲಾಗುತ್ತಿದ್ದು, ಕಾರುಗಳು ಮತ್ತು ಸೇನಾ ವಾಹನಗಳ ಮೇಲೆ ನೀಲಿ ಟೇಪ್ ಅನ್ನು ಹಚ್ಚಲಾಗುತ್ತಿದೆ. ಇದಕ್ಕೂ ಮೊದಲು ಎರಡು ಬಣ್ಣಗಳ ಮಗ್ಗಲನ್ನು ಎಡದಿಂದ ಬಲಕ್ಕೆ ಬದಲಾಯಿಸಿಕೊಳ್ಳಲಾಗಿತ್ತು.
ಉಕ್ರೇನ್ ನೆಲದಲ್ಲಿ ನಮ್ಮವರಂತೆ ನುಸುಳಿಕೊಂಡು ಕೆಲವರು ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಅಂಥ ವಿಧ್ವಂಸಕರನ್ನು ಗುರುತಿಸಲು ಮತ್ತು ವೈರಿಗಳ ಬಗ್ಗೆ ಸ್ನೇಹಿತರಿಗೆ ತಿಳಿಸುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕಳೆದ ಕೆಲವು ವಾರಗಳಲ್ಲಿ ಇದು ಹಲವಾರು ಬಾರಿ ಬದಲಾಗಿದೆ ಎಂದು ನಾಗರಿಕ ಸ್ವಯಂಸೇವಕ ಫಿಲಿಪ್ ಅವರು ತಿಳಿಸಿದ್ದಾರೆ.

ಉಕ್ರೇನ್ ಯೋಧರ ತೋಳಿಗೆ ನೀಲಿ ಟೇಪ್ ಕಟ್ಟಲಾಗಿದೆ.
ರಷ್ಯಾ ನಿರಂತರ ದಾಳಿಯ ನಡುವೆ ಇಂಥ ಬದಲಾವಣೆಗಳು ಕೆಲವು ಗೊಂದಲಗಳನ್ನು ಉಂಟು ಮಾಡುತ್ತದೆ. ಆದರೆ ಯುದ್ಧದಲ್ಲಿ ಉಕ್ರೇನ್‌ ಪ್ರಯತ್ನವನ್ನು ಬೆಂಬಲಿಸುವ ಶಕ್ತಿಗಳಿವೆ. ರಸ್ತೆಗಳಲ್ಲಿ ವಿಶೇಷ ಚಿಕಿತ್ಸೆ ನೀಡುವ ಸ್ವಯಂಸೇವಕರು ಇದ್ದಾರೆ. ಆದ್ದರಿಂದ ಅವರಿಗೆ ತೋಳು ಪಟ್ಟಿಗಳನ್ನು ನೀಡಲಾಗಿದೆ. ನಿನ್ನೆಯಷ್ಟೇ ನೀಲಿ ಬ್ಯಾಂಡ್ ಅನ್ನು ಪರಿಚಯಿಸಲಾಯಿತು. ಆದರೆ ಈಗ ಪ್ರತಿಯೊಬ್ಬರೂ ತಮ್ಮ ಬಲಭಾಗದಲ್ಲಿ ನೀಲಿ ಟೇಪ್ ಅನ್ನು ಧರಿಸುತ್ತಾರೆ. ಇದು ಕೆಲವು ಗೊಂದಲಗಳನ್ನು ಸೃಷ್ಟಿಸಬಹುದು, ಆದರೆ ಇದು ವಿಧ್ವಂಸಕರು ಒಳನುಸುಳದಂತೆ ಎಚ್ಚರಿಕೆ ವಹಿಸಲು ಹಾಗೂ ಶತ್ರುಗಳ ಬಗ್ಗೆ ಸ್ನೇಹಿತರಿಗೆ ತಿಳಿಸಲು ಸಹಕಾರಿ ಆಗಿರುತ್ತದೆ. ಇದು ಉಕ್ರೇನ್‌ಗೆ ಸಣ್ಣ ಪ್ರಮಾಣದಲ್ಲಾದರೂ ಉಪಯೋಗಕ್ಕೆ ಬರಲಿದೆ. ಈ ತಂತ್ರ ಫಲಕಾರಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಫಿಲಿಪ್ ತಿಳಿಸಿದ್ದಾರೆ.

ರಷ್ಯಾ ನಡೆಸಿದ 17ನೇ ದಿನದ ಆಕ್ರಮಣದಲ್ಲಿ ಶನಿವಾರ ಮಾರಿಯುಪೋಲ್‌ನ ಪೂರ್ವ ಹೊರವಲಯದಲ್ಲಿರುವ ಪ್ರದೇಶಗಳನ್ನು ವಶಪಡಿಸಿಕೊಂಡಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾದ ಪಾಲಿಗೆ 4,30,000 ಜನರಿಗೆ ನೆಲೆಯಾಗಿರುವ ಆಯಕಟ್ಟಿನ ಬಂದರು ನಗರವಾದ ಮರಿಯೋಪೋಲ್‌ನ ಮೇಲೆ ನಿಯಂತ್ರಣ ಸಾಧಿಸುವುದು ಫೆಬ್ರವರಿ 24ರಂದು ನಡೆಸಿದ ಆಕ್ರಮಣದ ಆರಂಭದ ಆದ್ಯತೆ ಆಗಿತ್ತು. ಮರಿಯೋಪೋಲ್‌ನ ಮುತ್ತಿಗೆಯಿಂದ ಈಗಾಗಲೇ 1,582 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಮಾರಿಯೋಪೋಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಈಗ ಆನ್ ಲೈನ್ ಮೂಲಕ ಜನಗಣತಿಗೆ ಸಾರ್ವಜನಿಕರು ಸಹಕರಿಸಬಹುದು

0

ಹತ್ತು ವರ್ಷಕ್ಕೊಮ್ಮೆ ನಡೆಯುವ ರಾಷ್ಟ್ರೀಯ ಜನಗಣತಿಯ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಇನ್ನು ಮುಂದೆ ನಡೆಯುವ ಜನಗಣತಿಯಲ್ಲಿ ದೇಶದ ಜನರು ತಮ್ಮ ಮಾಹಿತಿಯನ್ನು ತಾವೇ ಆನ್‌ಲೈನ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಈ ಹಿಂದಿನಂತೆ ಗಣತಿದಾರರು ಜನರ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯವೂ ನಡೆಯಲಿದೆ.

ಜನಗಣತಿ (ತಿದ್ದುಪಡಿ) ನಿಯಮಗಳು-2022’ಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ‘ಎಲೆಕ್ಟ್ರಾನಿಕ್‌ ಅರ್ಜಿ’ಗೂ ಭೌತಿಕ ಅರ್ಜಿಗೆ ಸಮಾನವಾದ ಮಾನ್ಯತೆ ನೀಡಲಾಗಿದೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಾನುಸಾರ ಎಲೆಕ್ಟ್ರಾನಿಕ್‌ ರೂಪದಲ್ಲಿ ಸರ್ಕಾರ ಸ್ವೀಕರಿಸುವ ಜನಗಣತಿಯ ಮಾಹಿತಿಯು ಜನಗಣತಿದಾರರು ಭೌತಿಕವಾಗಿ ಸಂಗ್ರಹಿಸುವ ಮಾಹಿತಿಯಷ್ಟೇ ಅಧಿಕೃತವಾಗಿರುತ್ತದೆ. ಅದರಂತೆ ಜನರು ತಮ್ಮ ಮಾಹಿತಿಯನ್ನು ಗಣತಿಯ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಕೆ ಮಾಡಬಹುದಾಗಿದೆ ಎಂದು ತಿಳಿದುಬಂದಿದೆ.

ದೇಶದಲ್ಲಿ 2021ರ ಜನಗಣತಿಯು 2020ರ ಏ.1ರಿಂದ ನಡೆಯಬೇಕಿತ್ತು. ಆದರೆ, ಕೊರೋನಾ ಕಾರಣದಿಂದ ನಡೆದಿಲ್ಲ. ಮುಂದೆ ಯಾವಾಗ ನಡೆಯುತ್ತದೆ ಎಂಬುದನ್ನು ಸರ್ಕಾರ ತಿಳಿಸಿಲ್ಲ. ಇನ್ನು, ಜನರು ಎಲೆಕ್ಟ್ರಾನಿಕ್‌ ರೂಪದಲ್ಲಿ ತಾವೇ ಗಣತಿಯ ಅರ್ಜಿ ಭರ್ತಿ ಮಾಡಿ ಸಲ್ಲಿಸಿದ ಮೇಲೆ ಗಣತಿದಾರರು ಅವರ ಮನೆಗೆ ಭೇಟಿ ನೀಡಿ ಭೌತಿಕವಾಗಿ ಮಾಹಿತಿ ಪಡೆಯುತ್ತಾರೋ ಅಥವಾ ಜನರು ಸಲ್ಲಿಸಿದ ಎಲೆಕ್ಟ್ರಾನಿಕ್‌ ಅರ್ಜಿಯಲ್ಲಿರುವ ಮಾಹಿತಿಯೇ ಅಂತಿಮವೋ ಎಂಬುದನ್ನು ಸರ್ಕಾರ ತಿಳಿಸಿಲ್ಲ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ಪಡೆ ಪ್ರತಿರೋಧ ನಡುವೆ ತೀವ್ರಗೊಳ್ಳುತ್ತಿರುವ ರಷ್ಯದ ದಾಳಿ

0

ಯುದ್ಧದ 16ನೇ ದಿನವಾದ ಶನಿವಾರ ಉಕ್ರೇನ್‌ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಮೂಲಕ ರಷ್ಯಾ ಸೇನೆ ಭಾರಿ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿದೆ ಎನ್ನಲಾಗಿದೆ.

ಇದರೊಂದಿಗೆ ರಾಜಧಾನಿ ಕೀವ್‌ ನಗರದಲ್ಲಿ ರಷ್ಯಾ ಹಾಗೂ ಉಕ್ರೇನಿ ಪಡೆಗಳ ನಡುವೆ ಸಂಘರ್ಷ ಮುಂದುವರಿದಿದೆ.ರಷ್ಯಾ ದಾಳಿ ಕೀವ್ ನಗರದವರೆಗೂ ಸಮೀಪಿಸಿದೆ ಎಂದು ತಿಳಿದುಬಂದಿದೆ.

ಈ ನಡುವೆ, ದಾಳಿಯಿಂದ ಭಾರೀ ಪ್ರಮಾಣದಲ್ಲಿ ತತ್ತರಿಸಿರುವ ಬಂದರು ನಗರಿ ಮರಿಯುಪೋಲ್‌ ಮೇಲೆ ಶವಸಂಸ್ಕಾರಕ್ಕೆ ಕೂಡ ಅವಕಾಶ ಮಾಡಿಕೊಡದೆ ರಷ್ಯಾ ವಾಯುದಾಳಿ ಕೈಗೊಂಡಿದೆ.

ಇನ್ನೊಂದೆಡೆ ಇದೇ ಮೊದಲ ಬಾರಿಗೆ ಎಂಬಂತೆ ಮಸೀದಿಯೊಂದರ ಮೇಲೆ ರಷ್ಯಾ ದಾಳಿ ನಡೆಸಿದೆ. ಮರಿಯುಪೋಲ್‌ ನಗರದ ಮಸೀದಿ ಮೇಲೆ ರಷ್ಯಾ ಬಾಂಬ್‌ ಹಾಕಿದ್ದು, ಅದರಲ್ಲಿ ರಕ್ಷಣೆ ಪಡೆದಿದ್ದ 86 ಟರ್ಕಿ ನಾಗರಿಕರು ಗಾಯಗೊಂಡಿದ್ದಾರೆ.

ಮೆಲಿಟುಪೋಲ್‌ ನಗರದ ಮೇಯರ್‌ ಅವರನ್ನು ರಷ್ಯಾ ಅಪಹರಿಸಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಆರೋಪಿಸಿದ್ದು, ಇದು ಭಯೋತ್ಪಾದನೆ ಹಾಗೂ ಯುದ್ಧಾಪರಾಧಕ್ಕೆ ಸಮ ಎಂದು ದೂರಿದ್ದಾರೆ.

ಯುದ್ಧಕ್ಕೆ ಸಂಬಂಧಿಸಿದಂತೆ 16ನೇ ದಿನ ಕೆಲವು ಧನಾತ್ಮಕ ಬೆಳವಣಿಗೆಯಾಗಿವೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹೇಳಿದ್ದು, ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಇದಕ್ಕೆ ತಿರುಗೇಟು ನೀಡಿರುವ ಉಕ್ರೇನಿ ಅಧ್ಯಕ್ಷ ಜೆಲೆನ್‌ಸ್ಕಿ ‘ನಮ್ಮ ಭೂಮಿ ಮರುವಶ ಮಾಡಿಕೊಳ್ಳಲು ಎಷ್ಟುದಿನ ಬೇಕೋ ಗೊತ್ತಿಲ್ಲ. ಆದರೆ ಮರುವಶ ಮಾಡಿಕೊಂಡೇ ತೀರುತ್ತೇವೆ’ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಏಷ್ಯನ್ ಯೂತ್ ಜ್ಯೂ.ಬಾಕ್ಸಿಂಗ್ ಚಾಂಪಿಯನ್ ಶಿಪ್ ಭಾರತ ಫೈನಲ್ ಗೆ ಪ್ರವೇಶ

0

ಭಾರತದ ಯುವ ಬಾಕ್ಸರ್ ಗಳಾದ ವಿಶ್ವನಾಥ್ ಸುರೇಶ್ ಮತ್ತು ಆನಂದ ಯಾದವ್ ಪ್ರಸ್ತುತ ಸಾಲಿನ ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ನಿನ್ನೆ ಜೋರ್ಡಾನ್ ನ ಅಮ್ಮಾನ್ ನಲ್ಲಿ ನಡೆದ ಸೆಮಿಫೈನಲ್ ಸ್ಪರ್ಧೆಗಳಲ್ಲಿ ವಿಶ್ವನಾಥ್ ಉಜ್ಬೇಕಿಸ್ತಾನದ ಮಿರಾಲಿಜನ್ ಮಾವೋನೋವ್ ವಿರುದ್ಧ 4-1 ಅಂಕಗಳಿಂದ ಸೋಲಿಸಿ ಪ್ರತಿಷ್ಠಿತ ಚಾಂಪಿಯನ್ಶಿಪ್ನಲ್ಲಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಅವರು ಅಂತಿಮವಾಗಿ ಬೆಳ್ಳಿ ಗೆದ್ದುಕೊಂಡಿದ್ದಾರೆ.

ಆನಂದ್ ಯಾದವ್ ಉಜ್ಬೇಕಿಸ್ತಾನದವರೇ ಆದ ಅಬ್ದು ವಾಲಿ ಬುರಿಬೋವ್ ವಿರುದ್ಧ 3-2 ರ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಮತ್ತೊಂದು ಸೆಮಿಫೈನಲ್ನಲ್ಲಿ ರಾಮನ್ 0-5 ರ ಅಂತರದಿಂದ ಉಜ್ಬೆಕಿಸ್ತಾನ ಬಾಕ್ಸರ್ ಎದುರು ಸೋತು ಕಂಚಿಗೆ‌ ಕೊರಳೊಡ್ಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಾ 19 ರಿಂದ ಅಖಿಲ ಭಾರತ ಓಪನ್ ಚೆಸ್ ಟೂರ್ನಿ

0

ಅಖಿಲ ಭಾರತ ಓಪನ್ ಫಿಡೆ ರೇಟೆಡ್ ಚೆಸ್ ಓಪನ್ ಟೂರ್ನಿಯು ಬೆಂಗಳೂರು ಗ್ರಾಮೀಣ ಜಿಲ್ಲಾ ಚೆಸ್ ಸಂಸ್ಥೆಯ ಆಶ್ರಯದಲ್ಲಿ ಇದೇ 19ರಿಂದ 25ರವರೆಗೆ ಇಲ್ಲಿ ನಡೆಯಲಿದೆ.

ಆರ್. ಹನುಮಂತ ಅವರ ಸ್ಮರಣಾರ್ಥ, ಅಖಿಲ ಭಾರತ ಚೆಸ್ ಫೆಡರೇಷನ್, ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಗಳ ಸಹಯೋಗದಲ್ಲಿ ಹೊಸಕೋಟೆಯ ಸಾಯಿ ಪ್ಯಾಲೇಸ್ ಹಾಲ್ ನಲ್ಲಿ ನಡೆಯಲಿದೆ.

ಒಟ್ಟು ಎರಡು ಲಕ್ಷ ಬಹುಮಾನ ಮೊತ್ತದ ಟೂರ್ನಿಯಲ್ಲಿ ಕರ್ನಾಟಕದ ಮೊದಲ ಗ್ರಾಂಡ್ ಮಾಸ್ಟರ್ ತೇಜ್ ಕುಮಾರ್ ಎಂ.ಎಸ್, ಅಂತರಾಷ್ಟ್ರೀಯ ಮಾಸ್ಟರ್, ಉತ್ತರಾಖಂಡದ ಅಗ್ರ್ಯದೀಪ್ ದಾಸ್, ಇಂಡಿಯನ್ ಮಾಸ್ಟರ್ ರಾಮನಾಥನ್ ಬಾಲಸುಬ್ರಮಣಿಯನ್ ಮತ್ತು ಮಹಿಳಾ ಮಾಸ್ಟರ್, ತಮಿಳುನಾಡಿನ ಸಾವಿತ್ರಿ ಶ್ರೀ ಭಾಗವಹಿಸಲಿದ್ದಾರೆ. 400ಕ್ಕಿಂತ ಅಧಿಕ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಬಿ ಆರ್ ಡಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಸರು ನೋಂದಾಯಿಸಲು ಮಾರ್ಚ್ 16 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ www.karnatakachess.com. ಅಥವಾ ಬಿ ಆರ್ ಡಿಸಿಎ ಕಾರ್ಯದರ್ಶಿ ಚಿದಾನಂದ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ಸಂಖ್ಯೆ. 9663405589.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹೊಸ ಸಂಶೋಧನೆ ಮತ್ತು ಬೆಳವಣಿಗೆ ಅರಿವುಂಟು ಮಾಡಲು ಕಾರ್ಯಾಗಾರಗಳು ಮುಖ್ಯ

0

ಎಲ್ಲ ಕ್ಷೇತ್ರಗಳಲ್ಲಿ ನಿರಂತರವಾಗಿ ಹೊಸ ಸಂಶೋಧನೆಗಳು ಮತ್ತು ಬೆಳವಣಿಗೆಗಳು ಆಗುತ್ತಿದ್ದು ಇಂತಹ ತಾಂತ್ರಿಕ ಕಾರ್ಯಾಗಾರದ ಮೂಲಕ ಅವುಗಳ ಬಗ್ಗೆ ತಿಳಿದು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರ, ನವುಲೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇವರ ಸಹಯೋಗದಲ್ಲಿ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಪಶುಪಾಲನಾ ಇಲಾಖೆಯ ಪಶುವೈದ್ಯಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ‘ಜಾನುವಾರುಗಳಲ್ಲಿನ ಪ್ರಚಲಿತ ಸಮಸ್ಯೆಗಳು’ ಕುರಿತಾದ ಒಂದು ದಿನದ ತಾಂತ್ರಿಕ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವರ್ಷಕ್ಕೊಮ್ಮೆ ಈ ರೀತಿಯ ತಾಂತ್ರಿಕ ಕಾರ್ಯಾಗಾರ ಹಮ್ಮಿಕೊಂಡು ಬರುತ್ತಿರುವುದು ಒಳ್ಳೆಯ ವಿಚಾರ. ಆದರೆ ಇತ್ತೀಚೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಕ್ಷೇತ್ರದಲ್ಲಿ ಸಹ ಹೊಸ ಸಂಶೋಧನೆಗಳು ಹೆಚ್ಚಾಗಿವೆ. ಹಾಗೂ ಪಶು ವೈದ್ಯರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಹೊಸ ಬಗೆಯ ಸಮಸ್ಯೆಗಳು, ಸವಾಲುಗಳು ಎದುರಾಗುತ್ತಿರುತ್ತವೆ. ಇಂತಹ ಸಮಸ್ಯೆಗಳ ಕುರಿತು ವಿಶ್ವವಿದ್ಯಾಲಯ ಅಥವಾ ಸರ್ಕಾರಕ್ಕೆ ತಿಳಿಸಲು ಕಾರ್ಯಾಗಾರಗಳು ಉತ್ತಮ ವೇದಿಕೆಯಾಗಿದೆ. ಹಾಗೂ ಕಾರ್ಯಾಗಾರದಲ್ಲಿ ವಿವಿಧ ವಿಷಯ, ಚರ್ಚೆ, ವಿನಿಮಯ ಮಾಡಿಕೊಂಡು, ಅಪ್‍ಡೇಟ್ ಆಗಬಹುದು. ಆದ್ದರಿಂದ ಪ್ರತಿ ತಿಂಗಳಿಗೆ ಒಂದು ಸೆಮಿನಾರ್ ಏರ್ಪಡಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ವೈದ್ಯರು ಸೇರಿದಂತೆ ಸಿಬ್ಬಂದಿಗಳಿಗೆ ಕೌಶಲ್ಯ ತರಬೇತಿಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳ ಬಗ್ಗೆ ಅವರಿಗೆ ತಿಳಿಸಬಹುದು. ಹಾಗೂ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರಿಂದ ವೈದ್ಯರು ತಾವು ಅಪ್‍ಡೇಟ್ ಆಗಿ ರೈತರನ್ನು ಪರಿಣಾಮಕಾರಿಯಾಗಿ ತಲುಪಬಹುದು ಎಂದ ಅವರು ಇಂದಿನ ಕಾರ್ಯಾಗಾರ ಯಶಸ್ವಿಯಾಗಲಿ ಹಾಗೂ ಪ್ರತಿ ತಿಂಗಳು ಇಂತಹ ಸೆಮಿನಾರ್ ನಡೆಯಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಡಾ.ಎಂ.ಕೆ.ನಾಯಕ್ ಮಾತನಾಡಿ, ಇಡೀ ವಿಶ್ವದಲ್ಲಿ ಆಹಾರ ಭದ್ರತೆ ಖಾತ್ರಿಪಡಿಸಿರುವ ಏಕೈಕ ರಾಷ್ಟ್ರ ನಮ್ಮದು. ಡಾ.ವರ್ಗೀಸ್ ಕುರಿಯನ್‍ರವರ ಬಿಳಿ ಕ್ರಾಂತಿಯ ಪರಿಣಾಮವಾಗಿ ಇಡೀ ವಿಶ್ವದ ಹಾಲಿನ ಪ್ರಮಾಣದಲ್ಲಿ ಶೇ.22 ಕೊಡುಗೆ ನಮ್ಮ ದೇಶದ್ದಾಗಿದೆ. ಪ್ರತಿ ದಿನ 200 ಮಿಲಿಯನ್ ಲೀಟರ್ ಹಾಲಿನ ಉತ್ಪನ್ನವಿದೆ. ನಮ್ಮ ದೇಶದಲ್ಲಿ ಪ್ರತಿ ಒಬ್ಬರಿಗೆ 280 ಗ್ರಾಂ ಹಾಲಿನ ಅವಶ್ಯಕತೆ ಇದೆ. ಆದರೆ ನಮ್ಮ ಉತ್ಪನ್ನದ ಪ್ರಕಾರ ತಲಾ 480 ಗ್ರಾಂ ಲಭ್ಯವಿದೆ. (ಜಾಗತಿಕವಾಗಿ) ತತ್ತಿ ಶೇ.7.2 ಮತ್ತು ಮಾಂಸ ಶೇ. 2.5 ಉತ್ಪಾದನೆ ಇದ್ದು ಲೈವ್‍ಸ್ಟಾಕ್(ಜಾನುವಾರು)ನಲ್ಲಿ ದೇಶ ಮೊದಲನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾಲು, ಮಾಂಸದಲ್ಲಿ ಶೇ. 5 ಮತ್ತು ಮೊಟ್ಟೆ ಉತ್ಪನ್ನದಲ್ಲಿ ಶೇ.10.19 ರಷ್ಟು ಹೆಚ್ಚಳವಾಗಿದೆ.

ಆದರೆ ನಮ್ಮ ಪಶು-ಪ್ರಾಣಿಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವಾರು ಸಮಸ್ಯೆಗಳಿವೆ. ನಮ್ಮ ಜಾನುವಾರುಗಳಿಗೆ ಸರಿಯಾದ ಸೂರಿಲ್ಲ. ಬಿಡಾಡಿಯಾಗಿ ತಿರುಗುವುದು ಸಾಮಾನ್ಯವಾಗಿದೆ. ಹಾಗೂ ಹಾಲು ಕೊಡದ, ಲಾಭವಿಲ್ಲದ ಪ್ರಾಣಿಗಳನ್ನು ಕಸಾಯಿಖಾನೆಗೆ ಕಳುಹಿಸುವುದನ್ನು ಕೂಡ ಕಾಣುತ್ತಿದ್ದೇವೆ.
ನಮ್ಮ ಜಾನುವಾರುಗಳು ರೋಗಮುಕ್ತವಾಗಿ ಆರೋಗ್ಯವಾಗಿರಬೇಕಾದರೆ ಅವುಗಳಿಗೆ ಉತ್ತಮ ಪೌಷ್ಟಿಕ ಆಹಾರ, ಹಸಿರು ಮೇವು, ಆಶ್ರಯ ಬೇಕಿದೆ. ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಅನೇಕ ವೈರಾಣುಗಳ ಸೋಂಕು ಹರಡುವುದನ್ನು ನಾವು ಕಾಣುತ್ತಿದ್ದೇವೆ. ಜಾನುವಾರುಗಳ, ಪಕ್ಷಿಗಳ ರೋಗಗಳು, ವೈರಾಣುಗಳ ಸೋಂಕು, ಸರಪಳಿ ಕುರಿತು ಸರ್ವೇಕ್ಷಣೆ, ವಿಚಕ್ಷಣೆ, ರೋಗಪತ್ತೆ ಆಗಬೇಕು. ಜೈವಿಕ ಭದ್ರತೆ ಕಾಯ್ದೆ ಮೂಲಕ ಇದು ಸಾಧ್ಯವಾಗುತ್ತದೆ. ನಮ್ಮ ದೇಶ ಆಹಾರ ಭದ್ರತೆ ಕಾಯ್ದೆ ಜಾರಿಗೊಳಿಸುವ ಮೂಲಕ ಆಹಾರ ಭದ್ರತೆ ನೀಡಿದೆ. ಜೊತೆಗೆ ಜೈವಿಕ ಭದ್ರತೆಯನ್ನು ಸಹ ನೀಡಬೇಕು. ಜೈವಿಕ ಭದ್ರತೆ ಇಲ್ಲದೆ ಆಹಾರ ಭದ್ರತೆ ಪರಿಪೂರ್ಣವಾಗುವುದಿಲ್ಲವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ.ಸಿ.ಆರ್.ಜಗದೀಶ್, ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳಾದ ಡಾ.ಬಿ.ಸಿ.ಹನುಮಂತಸ್ವಾಮಿ ಪಾಲ್ಗೊಂಡಿದ್ದರು.

ವಿಜ್ಞಾನಿ(ಪಶು ವಿಜ್ಞಾನ) ಡಾ.ಅಶೋಕ್.ಎಂ, ಪಶು ವೈದ್ಯಾಧಿಕಾರಿ ಡಾ.ನಿಖಿತ್ ಎಂ.ಎಸ್, ಹಿರಿಯ ಪಶು ವೈದ್ಯಾಧಿಕಾರಿ ಡಾ.ಮಂಜುನಾಥ.ಎಸ್.ಪಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಹೆಚ್.ವಿ.ದಯಾನಂದ ಇವರು ಜಾನುವಾರುಗಳಲ್ಲಿ ಕಂಡು ಬರುವ ವಿವಿಧ ರೋಗಗಳ ಕುರಿತು ಮಾತನಾಡಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಬಿ.ಯಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಗರವಳ್ಳಿಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮುರಳೀಧರ್.ಕೆ.ನಿರೂಪಿಸಿದರು. ಕೆವಿಕೆ ವಿಜ್ಞಾನಿ ಹಾಗೂ ತರಬೇತಿ ಸಂಘಟಕ ಡಾ.ಅಶೋಕ್.ಎಂ ವಂದಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಎಸ್. ಎಸ್. ಎಲ್.ಸಿ. ವಿದ್ಯಾರ್ಥಿಗಳಿಗೆ ರೇಡಿಯೊ ಪಾಠ

0

ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಇಲಾಖೆ (ಡಯಟ್)ನ ವತಿಯಿಂದ ರೇಡಿಯೋ ಪಾಠಗಳು ನಡೆಯುತ್ತಿದೆ. ಇದು ರೇಡಿಯೋ ಶಿವಮೊಗ್ಗ 90.8 ಎಫ್.ಎಂ. ನಲ್ಲಿ ಮಾರ್ಚ್ 14ರಿಂದ 20ರವರೆಗೆ ಪ್ರತಿದಿನ ಸಂಜೆ 7-8 ಗಂಟೆಯವರೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದ ಸದುಪಯೋಗವನ್ನು ಎಸ್.ಎಸ್. ಎಲ್. ಸಿ. ವ್ಯಾಸಂಗ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳೂ ಪಡೆಯಬಹುದಾಗಿದೆ.ಪ್ರಸಾರ ವೇಳಾಪಟ್ಟಿ ಹೀಗಿದೆ.

ಮಾರ್ಚ್ 14ರಂದು ಡಾ. ಶಂಕರ್ ಒತ್ತಡ ನಿರ್ವಹಣೆ ಅಥವಾ ಪರೀಕ್ಷಾ ಭಯ ನಿವಾರಣೆ ಬಗ್ಗೆ.

ಮಾರ್ಚ್ 15ರಂದು ಅಣ್ಣಪ್ಪ, ಮಹೇಶ್ ಆಲೂರು ಕನ್ನಡ.

ಮಾರ್ಚ್16ರಂದು ಆಸೀಮುಲ್ಲಾ ಷರೀಫ್, ಹಾಗೂ ಇಮ್ರಾನ್ ಆಂಗ್ಲ ಭಾಷೆ ಬಗ್ಗೆ.ಮಾರ್ಚ್16ರಂದು ಆಸೀಮುಲ್ಲಾ ಷರೀಫ್, ಹಾಗೂ ಇಮ್ರಾನ್ ಆಂಗ್ಲ ಭಾಷೆ ಬಗ್ಗೆ.

ಮಾರ್ಚ್ 17ರಂದು ಶಿವಶಂಕರ್ ಹಾಗೂ ವಾಣಿ ಹಿಂದಿ ಬಗ್ಗೆ, 18ರಂದು ರಘು ಗಣಿತದ ಬಗ್ಗೆ

ಮಾರ್ಚ್ 19ರಂದು ವಿಜಯಕುಮಾರ್ ಹಾಗೂ ವಿಜಯಾನಂದರಾವ್ ವಿಜ್ಞಾನದ ಬಗ್ಗೆ

ಮಾರ್ಚ್20ರಂದು ಸಮಾಜ ವಿಜ್ಞಾನದ ಬಗ್ಗೆ ಡಾ. ಶಂಕರ್ ನಡೆಸಿದ ಪಾಠಗಳು ಪ್ರಸಾರವಾಗಲಿದೆ.ರೇಡಿಯೋ ಶಿವಮೊಗ್ಗವು ಸಾಮಾನ್ಯ ರೇಡಿಯೋಗಳ ಜೊತೆಗೆ, ಮೊಬೈಲ್ ನಲ್ಲಿರುವ ಇನ್ ಬಿಲ್ಟ್ ಎಫ್ ಎಂ ಗಳಲ್ಲಿ ಪ್ರಸಾರವಾಗಲಿದೆ. ಹೆಚ್ಚಿನ ಮಾಹಿತಿಗೆ ( ಮೊ: 72591 76279) ಸಂಪರ್ಕಿಸಬಹುದು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯ ತಾಯಂದಿರೆ ನಿಮ್ಮ ಮಕ್ಕಳನ್ನ ಯುದ್ಧಕ್ಕೆ ಕಳಿಸಬೇಡಿ

0

ಉಕ್ರೇನ್​ನ ರಾಜಧಾನಿ ಕೀವ್​ನ ಮೇಲೆ ಮತ್ತೊಮ್ಮೆ ದಾಳಿಯನ್ನು ನಡೆಸಲು ರಷ್ಯಾದ ಪಡೆಗಳು ಮರುಸಂಘಟನೆಯಾಗುತ್ತಿರುವುದನ್ನು ಗಮನಿಸಿದ ಉಕ್ರೇನ್​​ನ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಉಕ್ರೇನ್​ ಇದೀಗ ಟರ್ನಿಂಗ್​ ಪಾಯಿಂಟ್​ನಲ್ಲಿದೆ ಎಂದು ತಿಳಿಸಿದ್ದಾರೆ.

ನಿನ್ನೆ ವಿಚಾರವಾಗಿ ಮಾತನಾಡಿರುವ ಝೆಲೆನ್ಸ್ಕಿ, ನಿಮ್ಮ ಮಕ್ಕಳನ್ನು ಯುದ್ಧಕ್ಕೆ ಕಳುಹಿಸದಂತೆ ರಷ್ಯಾದ ತಾಯಂದಿರಲ್ಲಿ ಮನವಿ ಮಾಡಿದ್ದಾರೆ.

ಫೆಬ್ರವರಿ 24ರಂದು ರಷ್ಯಾವು ಉಕ್ರೇನ್​ನ ಮೇಲೆ ಆಕ್ರಮಣ ನಡೆಸಿದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾಷಣಗಳನ್ನು ಹರಿಬಿಡುವ ಮೂಲಕ ತಮ್ಮ ಜನರನ್ನು ಒಟ್ಟುಗೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಉಕ್ರೇನ್ ಈಗಾಗಲೇ ಕಾರ್ಯತಂತ್ರದ ತಿರುವು ತಲುಪಿದೆ. ಉಕ್ರೇನಿಯನ್ ಭೂಮಿಯನ್ನು ಮುಕ್ತಗೊಳಿಸಲು ನಮಗೆ ಇನ್ನೂ ಎಷ್ಟು ದಿನಗಳಿವೆ ಎಂದು ಹೇಳುವುದು ಅಸಾಧ್ಯ. ಆದರೆ ನಾವು ಅದನ್ನು ಮಾಡುತ್ತೇವೆ ಎಂದು ಹೇಳಬಹುದು. ನಾವು ಈಗಾಗಲೇ ನಮ್ಮ ಗುರಿ, ನಮ್ಮ ಗೆಲುವಿನತ್ತ ಸಾಗುತ್ತಿದ್ದೇವೆ ಎಂದು ವೊಲೊಡಿಮಿರ್​ ಝೆಲೆನ್ಸ್ಕಿಅವರು ಭಾವೋದ್ವೇಗ ದಿಂದ ಮಾತನಾಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗ್ರಾಮ ಒನ್ ಯೋಜನೆ ರಾಜ್ಯದಾದ್ಯಂತ ವಿಸ್ತರಣೆ

0

ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಗ್ರಾಮ ಒನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಧಾರ್ ಸಂಖ್ಯೆ ಅಥವಾ ನೋಂದಣಿ ಐಡಿ ಇಲ್ಲದೆ ಕಳೆದುಹೋದ ಆಧಾರ್ ಕಾರ್ಡನ್ನು ಡೌನ್‌ಲೋಡ್ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ಗ್ರಾಮ ಒನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಕುರಿತು ಚರ್ಚೆ ನಡೆದಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಅನುಷ್ಠಾನವಾಗುತ್ತಿರುವ ಯೋಜನೆಯನ್ನು ಎಲ್ಲ ಗ್ರಾಮಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮ್ಮ ಬಜೆಟ್ ಭಾಷಣದಲ್ಲಿ, ರಾಜ್ಯ ಸರ್ಕಾರವು ಗ್ರಾಮೀಣ ಜನರಿಗೆ ಪಂಚಾಯಿತಿ ಹಂತದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಯೋಜನೆಯನ್ನು ಜಾರಿಗೊಳಿಸಿದೆ.ಇದರಿಂದ ಜನರ ಅಲೆದಾಟ ತಪ್ಪಲಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯ ದಾಳಿ ನಿಂತಿಲ್ಲ ಉಕ್ರೇನ್ ನಾಶ ತಪ್ಪಿಲ್ಲ!

0

ಉಕ್ರೇನ್ ನಲ್ಲಿ ರಷ್ಯಾ ಸೇನೆ ಮಾರಣ ಹೋಮ ಮುಂದುವರೆಸಿದೆ. ಆಸ್ಪತ್ರೆ, ಜನವಸತಿ ಪ್ರದೇಶಗಳ ಮೇಲೆ ಭೀಕರ ಶೆಲ್ ದಾಳಿ ನಡೆಸಿದೆ. ಈ ನಡುವೆ ಮರಿಯಪೋಲ್ ನಲ್ಲಿ ರಷ್ಯಾ ನಡೆಸಿದ ದಾಳಿಗೆ 1500 ಜನರು ಮೃತಪಟ್ಟಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

ಮರಿಯಪೋಲ್ ನಲ್ಲಿ ಕಳೆದ 12 ದಿನಗಳ ರಷ್ಯಾ ದಾಳಿಯಲ್ಲಿ 1500 ಜನರು ಸಾವನ್ನಪ್ಪಿದ್ದಾರೆ. ನಿರಾಶ್ರಿತರಾಗಿರುವ ಜನರಿಗೆ ಆಹಾರ, ನೀರು ಒದಗಿಸುವುದು ಕಷ್ಟಕರವಾಗಿದೆ ಎಂದು ಮರಿಯಪೋಲ್ ಮೇಯರ್ ಕಚೇರಿ ತಿಳಿಸಿದೆ.

ಇನ್ನೊಂದು ಕಡೆ, ರಷ್ಯಾ ಸೇನೆ ಉಕ್ರೇನ್ ನ ಮೈಕೋಲೈವ್ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿದೆ. ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ. ಉಕ್ರೇನ್ ನ ಲುಟ್ಸ್ಕ್, ಇವಾನೊ-ಫ್ರಾಂಕಿವ್ಸ್ ನಗರಳ ಮೇಲೆ ವಾಯು ದಾಳಿ ನಡೆಸಿದೆ. ರಾಜಧಾನಿ ಕೀವ್ ನಗರವನ್ನು ರಷ್ಯಾ ಸೇನೆ ಸುತ್ತುವರೆದಿದೆ.

ಉಕ್ರೇನ್ ನಿಂದ ನಿನ್ನೆ ಒಂದೇ ದಿನದಲ್ಲಿ 7,144 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಇಡೀ ಉಕ್ರೇನ್ ಈಗ ಸ್ಮಶಾನವಾಗಿದೆ.ಎಲ್ಲೆಲ್ಲೂ ಹೆಣಗಳ ರಾಶಿ, ಜನರ ಆಕ್ರಂದನ, ಬಾಂಬ್ ದಾಳಿ, ಆಹಾರ, ನೀರಿಗಾಗಿ ಪರದಾಟ ರಣಭೀಕರತೆಯ ದೃಶ್ಯಗಳು ಕಂಡುಬರುತ್ತಿವೆ.