Monday, March 30, 2026
Monday, March 30, 2026
Home Blog Page 575

Teacher’s Day ಶಿಕ್ಷಕರ ವೇತನ ಐಎಎಸ್ ಅಧಿಕಾರಿಗಿಂತ ಹೆಚ್ಚಿನದ್ದಾಗಿರಬೇಕು- ಸಿಸೋಡಿಯ

0

Teacher’s Day 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಬೇಕಾದರೆ ಶಿಕ್ಷಕರ ವೇತನವು ಐಎಎಸ್ ಅಧಿಕಾರಿಗಿಂತ ಹೆಚ್ಚಾಗಬೇಕು ಎಂದು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಗುರುವಾರ ಹೇಳಿದ್ದಾರೆ.

ಶಿಕ್ಷಕರ ದಿನಾಚರಣೆಯ ಅಂಗವಾಗಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಆಯೋಜಿಸಿದ್ದ ‘ಶಿಕ್ಷಕ ಸಮ್ಮಾನ್ ಸಮಾರೋಹ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಿಕ್ಷಣ ಸಚಿವ, “ಇಂದು, 2047 ರ ಭಾರತದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಲ್ಲಿ ಕುಳಿತಿರುವ ಶಿಕ್ಷಕರು, ನಿಮ್ಮೊಂದಿಗೆ ಇರುವ ಮಕ್ಕಳು 2047ಕ್ಕೆ ಬಹಳ ಮುಖ್ಯ. 2047ರ ಅಭಿವೃದ್ಧಿ ಹೊಂದಿದ ಭಾರತ ಈ ಮಕ್ಕಳ ಮೇಲೆ ಅವಲಂಬಿತವಾಗಿದೆ ಎಂದರು.
“ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಶಿಕ್ಷಕರ ಸಂಬಳವು ಅಲ್ಲಿನ ಅಧಿಕಾರಶಾಹಿಗಳಿಗಿಂತ ಹೆಚ್ಚಾಗಿದೆ. ಐದು ವರ್ಷಗಳ ಅನುಭವ ಹೊಂದಿರುವ ಶಿಕ್ಷಕರು ಒಬ್ಬ ಐಎಎಸ್ ಅಧಿಕಾರಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಾರೆ” ಎಂದು ಸಿಸೋಡಿಯಾ ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಇತರ ಕೆಲವು ದೇಶಗಳ ಉದಾಹರಣೆ ನೀಡಿದರು.
Teacher’s Day ಸರ್ವಾಧಿಕಾರದ ವಿರುದ್ಧ ಜನರು ಹೋರಾಡಬೇಕು: ಮನೀಶ್ ಸಿಸೋಡಿಯಾ
ಇದೇ ವೇಳೆ ತಾವು ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಬಗ್ಗೆ ಮಾತನಾಡಿದ ಸಿಸೋಡಿಯಾ, ಪ್ರತಿದಿನ 8-10 ಗಂಟೆಗಳ ಕಾಲ ಪುಸ್ತಕಗಳನ್ನು ಓದುತ್ತಿದ್ದೆ ಮತ್ತು ವಿವಿಧ ದೇಶಗಳ ಶಿಕ್ಷಣ ವ್ಯವಸ್ಥೆಯನ್ನು ತಿಳಿದುಕೊಂಡೆ. “ಕಳೆದ ಒಂದೂವರೆ ವರ್ಷ ನಾನು ನನ್ನ ಜೀವನದ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೇನೆ ಎಂದರು.
ನಾವು ಕಷ್ಟಕರ ಸಂದರ್ಭಗಳಲ್ಲಿದ್ದಾಗ ನಮಗೆ ಶಿಕ್ಷಕರು ಕಲಿಸಿದ ಪಾಠಗಳು ಹೆಚ್ಚು ಉಪಯುಕ್ತವಾಗುತ್ತವೆ. ನಾನು ಜೈಲಿನಲ್ಲಿದ್ದಾಗ ಸಾಕಷ್ಟು ಅಧ್ಯಯನ ಮಾಡಿದ್ದೇನೆ. 8-10 ಗಂಟೆಗಳ ಕಾಲ ಪುಸ್ತಕಗಳನ್ನು ಓದುತ್ತಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣ, ಭಾರತದ ಶಿಕ್ಷಣ ವ್ಯವಸಬಗ್ಗೆ, ವಿಶ್ವದ ಶಿಕ್ಷಣ ವ್ಯವಸ್ಥೆ ಬಗ್ಗೆ ಓದಿದ್ದೇನೆ ಎಂದರು.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಸೋಡಿಯಾ 17 ತಿಂಗಳ ಕಾಲ ತಿಹಾರ್ ಜೈಲಿನಲ್ಲಿದ್ದರು. ಕಳೆದ ತಿಂಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

College of Veterinary Medicine ಬರಹಗಾರ ಪಶುತಜ್ಞ ಡಾ.ಎನ್.ಬಿ.ಶ್ರೀಧರ ಅವರಿಗೆ “ಶ್ರೇಷ್ಠ ಸಂಶೋಧಕ” ಪ್ರಶಸ್ತಿ

0

College of Veterinary Medicine ಶಿವಮೊಗ್ಗ ನಗರದ ಪಶುವೈದ್ಯ ಮಹಾವಿದ್ಯಾಲಯ ಪಶುವೈದ್ಯ ವಿಜ್ಞಾನಿ ಡಾ|| ಎನ್.ಬಿ.ಶ್ರೀಧರ ಅವರಿಗೆ 2024 ನೇ ಸಾಲಿನ ” “ಶ್ರೇಷ್ಟ ಸಂಶೋಧಕ” ಪ್ರಶಸ್ತಿ ನೀಡಿ ಶಿವಮೊಗ್ಗದ ಪಶುವೈದ್ಯ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಇವರು ಪಶುವೈದ್ಯ ರಂಗದಲ್ಲಿ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಷಯವನ್ನು ಬೋಧನೆ ಮಾಡುತ್ತಿದ್ದಾರೆ.200 ಕ್ಕೂ ಹೆಚ್ಚಿನ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಜಾನುವಾರುಗಳಲ್ಲಿ ಬರುವ ಅನೇಕ ರೀತಿಯ ಸಸ್ಯಜನ್ಯ ಶಿಲೀಂದ ವಿಷಜನ್ಯ ಮತ್ತಿತರ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಿ ಅವುಗಳಿಗೆ ಕಾರಣ ಮತ್ತು ಚಿಕಿತ್ಸೆಯನ್ನು ಪತ್ತೆ ಮಾಡಿ ಜಾನುವಾರುಗಳ ಉಳಿವಿಗೆ ಕಾರಣರಾಗಿದ್ದಾರೆ.

College of Veterinary Medicine ಇಂತಹ ಸಂಶೋಧನಾ ಚಟುವಟಿಕೆಗಳನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇತ್ತೀಗಷ್ಟೆ ಇವರಿಗೆ ಭಾರತೀಯ ಪಶುವೈದ್ಯಕೀಯ ಔಷಧಶಾಸ್ತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು”ರಾಷ್ಟ್ರೀಯ ಫೆಲೊ” ಪ್ರಶಸ್ತಿ ನೀಡಿರುವುದನ್ನು,ಕರ್ನಾಟಕರಾಜ್ಯ ಪಶುವೈದ್ಯ ಸಂಘವು”ಜೀವ ಮಾನದ ಶ್ರೇಷ್ಟ ಪಶುವೈದ್ಯ” ಪ್ರಶಸ್ತಿ ನೀಡಿರುವುದನ್ನು ಮತ್ತುಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯವು”ಶ್ರೇಷ್ಟಶಿಕ್ಷಕ” ಪ್ರಶಸ್ತಿಯನ್ನು ನೀಡಿರುವುದನ್ನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ.

Canara Bank Rural Self Employment Training Institute ಹೊಳಲೂರಿನಲ್ಲಿ ಸೆಲ್ ಫೋನ್ ರಿಪೈರ್ ತರಬೇತಿ ಉದ್ಘಾಟನೆ

0

Canara Bank Rural Self Employment Training Institute ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹೊಳಲೂರು ಇಲ್ಲಿ ಸೇಲ್ ಫೋನ್ ರೀಪೈರ್ ಮತ್ತು ಸರ್ವೀಸಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟನ ಸಮಾರಂಭವನ್ನು ಹಮ್ಮಿಕೊಂಡಿದ್ದ ಈ ಒಂದು ಕಾರ್ಯಕ್ರಮದಲ್ಲಿ ಶಿವಮೊಗ್ಗ ಮತ್ತು ಬೇರೆ ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನ ಶಿಬಿರರ್ಥಿಗಳು ಭಾಗವಹಿಸಿದ್ದರು .

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಕೃಷ್ಣಪೇಟೆ ಡೋಮೈನ್ ಸ್ಕೀಲ್ ಟ್ರೆöÊನರ್ ಇವರು ಕಾರ್ಯಕ್ರಮದಲ್ಲಿ ಉದ್ಯೋಗದ ಆಯ್ಕೆ, ಅದನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು ಮತ್ತು ಅದನ್ನು ಅಭಿವೃದ್ಧಿಯನ್ನು ಹೇಗೆ ಮಾಡಬೇಕೆಂದು ಕೆಲವು ಉದಾಹರಣೆಗಳ ಮೂಲಕ ತಿಳಿಸಿದರು.

Canara Bank Rural Self Employment Training Institute ನಾಗರಾಜ, ಸುಮನ್, ಹಾಜರಿದರು, ಮತ್ತು ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಕಾಂತೇಶ ಅಂಬಿಗಾರ್ ಇವರು ಮಾತನಾಡಿ ಸಂಸ್ಥೆಯ ಕೀರು ಪರಿಚಯವನ್ನು ಮಾಡಿಕೊಟ್ಟರು‌‌.

ಉಪನ್ಯಾಸಕರಾದ ಸುರೇಶ್ ವೈ ಹಳ್ಳಿರವರು ಮತ್ತು ದೀಪಾರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Shivamogga Dasara Utsava ಯಾವ ಕಾರಣಕ್ಕೂ ಯುವುದೇ ಕೊರತೆಯಾಗದಂತೆ ಎಲ್ಲರೂ ಸೇರಿ ದಸರಾ ಯಶಸ್ವಿಗೊಳಿಸೋಣ- ಶಾಸಕ ಚೆನ್ನಿ

0

Shivamogga Dasara Utsava ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗುತ್ತಿರುವ ಶಿವಮೊಗ್ಗ ದಸರಾ ಉತ್ಸವವನ್ನು ಅದ್ದೂರಿಯ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಎಸ್.ಎನ್. ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆಯ ಸಭಾಂಗಣದಲ್ಲಿ ನಡೆದ ವಿವಿಧ ಸಮಿತಿಗಳ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಹೊರತು ಪಡಿಸಿದರೆ, ಶಿವಮೊಗ್ಗೆಯಲ್ಲಿ ವೈವಿಧ್ಯಮಯ ದಸರಾ ಸಂಘಟಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಹದಿನಾಲ್ಕು ಉತ್ಸವಗಳ ಜೊತೆಗೆ ಸಮಾಜಮುಖಿಯಾದ ಇನ್ನೂ ಮೂರು ಉತ್ಸವಗಳನ್ನು ನಡೆಸಲು ಚಿಂತನೆ ನಡೆದಿದೆ ಎಂದರು.

ಶಿವಮೊಗ್ಗ ನಗರದ ಸ್ವಚ್ಚತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಒಳಗೊಂಡ ಪೌರ ಕಾರ್ಮಿರ ದಸರಾ ನಡೆಸಲು ಯೋಜಿಸಲಾಗಿದೆ. ಹಾಗೆಯೇ ಸದಾ ಸುದ್ದಿಯ ಹಿಂದೆ ಬಿದ್ದು, ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಒಳಗೊಂಡ ಪತ್ರಕರ್ತರ ದಸರಾ ಹಾಗೂ ನಮ್ಮ ಶ್ರೇಷ್ಟ ಪರಂಪರೆಯ ಗಮಕ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಗಮಕ ದಸರಾ ಆಚರಿಸಲು ಚಿಂತನೆ ನಡೆದಿದೆ ಎಂದ ಅವರು, ಈ ಮೂರೂ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಅಂತಿಮ ರೂಪ ನೀಡಲು ಯೋಜಿಸಲಾಗಿದೆ ಎಂದರು.

ಈ ಬಾರಿ ಚುನಾಯಿತ ಪಾಲಿಕೆಯಲ್ಲಿ ಪ್ರತಿನಿಽಗಳಿಲ್ಲ. ಆದರೆ, ಈ ಹಿಂದಿನ ಪಾಲಿಕೆ ಸದಸ್ಯರು ಮೇಯರ್, ಉಪ ಮೇಯರ್ ಸೇರಿದಂತೆ ಎಲ್ಲರನ್ನೂ ಒಳಗೊಂಡು, ಅವರ ಸಲಹೆ ಸೂಚನೆ ಮೇರೆಗೆ ಕಾರ್ಯಪ್ರವೃತ್ತರಾಗಬೇಕಿದೆ ಎಂದ ಅವರು, ಇದು ಯಾರಿಗೋ ಒಬ್ಬರಿಗೆ ಜವಾಬ್ದಾರಿ ಕೊಟ್ಟು, ಈವೆಂಟ್ ಮ್ಯಾನೇಜ್‌ಮೆಂಟ್ ಮಾಡುವ ಕೆಲಸ ಅಲ್ಲ. ಅದು ನಾಡ ಹಬ್ಬ. ಜನರ ಹಬ್ಬ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲರನ್ನೂ ಒಳಗೊಂಡು ಕಾರ್ಯನಿರ್ವಹಿಸಿ. ಇದಕ್ಕಾಗಿ ಪ್ರತ್ಯೇಕ ಸಲಹಾ ಸಮಿತಿಯನ್ನು ರಚಿಸಿ ಎಂದು ಸಲಹೆ ನೀಡಿದರು.

Shivamogga Dasara Utsava ವಿಶೇಷವಾಗಿ ಅಲಂಕಾರ ಸಮಿತಿ, ಸ್ವಾಗತ ಸಮಿತಿಯ ಜವಾಬ್ದಾರಿ ಹೆಚ್ಚಿದೆ. ಯಾವುದೇ ಕಾರಣಕ್ಕೂ ಎಲ್ಲಿಯೂ ಕೊರತೆಯಾಗದಂತೆ ಎಚ್ಚರಿಕೆಯಿಂದ ಗಮನಿಸಿ, ಸಮಷ್ಟಿ ಪ್ರಯತ್ನದಿಂದ ದಸರಾವನ್ನು ಯಶಸ್ವಿಗೊಳಿಸೋಣ ಎಂದು ಆಶಿಸಿದ ಅವರು, ಪ್ರಸ್ತುತ ರಾಜ್ಯ ಸರ್ಕಾರದಿಂದ 1.50 ಕೋಟಿ ಹಣ ನಿಗಧಿಯಾಗಿದೆ. ಇದನ್ನು ಹೆಚ್ಚಿಸಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ ಪ್ರಯತ್ನ ಮಾಡಲಾಗುವುದು. ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗವುದು ಎಂದು ಭರವಸೆ ನೀಡಿದರು.

ಅಲಂಕಾರ ದಸರಾ, ಕಲಾ ದಸರಾ, ಚಲನಚಿತ್ರ ದಸರಾ, ರಂಗ ದಸರಾ, ಸಾಂಸ್ಕೃತಿಕ ದಸರಾ, ಮಹಿಳಾ ದಸರಾ, ಯೋಗ ದಸರಾ, ರೈತ ದಸರಾ ಸೇರಿದಂತೆ ವಿವಿಧ ಹದಿನಾಲ್ಕು ವಿಭಾಗಗಳಲ್ಲಿ ನಡೆಯುವ ದಸರಾವನ್ನು ಎಲ್ಲರೂ ಸೇರಿ ಅಚ್ಚುಕಟ್ಟಾಗಿ ನಿರ್ವಹಿಸೋಣ ಎಂದ ಅವರು, ಈ ಬಾರಿಯೂ ಸಹ ಅಂಬಾರಿ ಉತ್ಸವ ನಡೆಯಲಿದೆ. ಇದಕ್ಕಾಗಿ ಪ್ರಯತ್ನ ನಡೆದಿದೆ ಎಂದರು.

ಈ ಎಲ್ಲಾ ಸಮಿತಿಗಳ ಸಭೆಗಳು ಈಗಾಗಲೇ ಮೊದಲ ಹಂತದಲ್ಲಿ ನಡೆದಿದ್ದು, ಗಣಪತಿ ಹಬ್ಬ ಕಳೆದ ನಂತರ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದ ಅವರು, ಪ್ರಸ್ತುತ ಅಧಿಕಾರಿಗಳು ನಿರಂತರ ಸಭೆ ನಡೆಸಿ, ಸಕಾಲದಲ್ಲಿ ಆಹ್ವಾನ ಪತ್ರಿಕೆ ಕೈಗೆ ಸಿಗುವಂತೆ ಮಾಡಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್, ಬಲ್ಕಿಶ್, ಸರ್ಜಿ, ಆಯುಕ್ತ ಡಾ. ಕವಿತಾ ಹಾಗೂ ವಿವಿಧ ಸಮಿತಿಗಳ ಕಾರ್ಯದರ್ಶಿಗಳು, ಸದಸ್ಯರು ಉಪಸ್ಥಿತರಿದ್ದರು.

Gurupur BGS School ಶಿಕ್ಷಕರು ಕೇವಲ ಪಾಠಪ್ರವಚನಕ್ಕೆ ಸೀಮಿತವಾಗದೇ ಮಕ್ಕಳ ಪ್ರತಿಭೆಯನ್ನೂ ಹೊರಗೆಳೆಯಬೇಕು- ಶ್ರೀಸಾಯಿನಾಥಶ್ರೀ

0

Gurupur BGS School College ಸಂಸ್ಕೃತಿ ಹಾಗೂ ಸಂಸ್ಕಾರವಿಲ್ಲದ ಬದುಕು ಅರ್ಥವಿಲ್ಲದ್ದು, ಮಕ್ಕಳಲ್ಲಿ ನಾವು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಹುಟ್ಟು ಹಾಕಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ನಿತ್ಯ ಶ್ರಮ ವಹಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಶಾಖಾಮಠದ ಪೂಜ್ಯ ಶ್ರೀ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಶಿವಮೊಗ್ಗದ ಗುರುಪುರ ಬಿಜಿಎಸ್ ಶಾಲಾ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ , ಸಂಸ್ಕೃತಿ, ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ , ಶಿಕ್ಷಕರು ಕೇವಲ ಪಾಠ ಪ್ರವಚನಕ್ಕೆ ಮಾತ್ರ ಸೀಮಿತವಾಗದೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಗೆಳೆಯಬೇಕು. ಅದರ ಜೊತೆಗೆ ಪಾಲಕರು ಹಾಗೂ ಶಿಕ್ಷಕರು, ಮಕ್ಕಳು ಅನಗತ್ಯವಾಗಿ ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಮಕ್ಕಳು ಕಲಿಕೆಯ ಜೊತೆ ಸಂಸ್ಕಾರ ಮತ್ತು ತಮ್ಮ ಮುಂದಿನ ಗುರಿಗಳ ಬಗ್ಗೆ ನಿಖರವಾದ ಉದ್ದೇಶಗಳನ್ನು ಹೊಂದುವ ಅಗತ್ಯವಿದೆ. ನಾಳಿನ ಸುಂದರ ಬದುಕನ್ನು ರೂಪಿಸಿಕೊಳ್ಳಲು ದೇಶದ ಪ್ರಜ್ಞಾವಂತ ನಾಗರೀಕನಾಗಲು ಚಿಂತನೆ ನಡೆಸಬೇಕಿದೆ. ದೇಶಕ್ಕೆ, ನನ್ನ ಊರಿಗೆ, ನನ್ನ ಜಿಲ್ಲೆಗೆ ಏನಾದರೂ ಕೊಡುಗೆ ನೀಡುವಂತಹ ಸಮಾಜಮುಖಿ ಮನಸ್ಸು ಬೆಳೆಸಿಕೊಳ್ಳಬೇಕಿದೆ ಎಂದರು.

Gurupur BGS School College ಕಾರ್ಯಕ್ರಮ ದಲ್ಲಿ ಸಂಸ್ಥೆಯ ನಿರ್ದೇಶಕರಾದ ಹಿರಿಯಣ್ಣ ಹೆಗಡೆ,ಬಿಜಿಎಸ್ ಗುರುಕುಲ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಶಿಕ್ಷಕರು, ಉಪನ್ಯಾಸಕರು,ಸಿಬ್ಬಂದಿ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗೆ ಕ್ರೀಡೆಯನ್ನು ಏರ್ಪಡಿಸಿದ್ದು ಕ್ರೀಡೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.

Karnataka State Press Distributors Union Shivamogga ಭದ್ರಾವತಿಯಲ್ಲಿ ವಿಶ್ವ ಪತ್ರಿಕಾ ದಿನಾಚರಣೆ

0

Karnataka State Press Distributors Union Shivamogga ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಭದ್ರಾವತಿ ತಾಲೂಕು ಪತ್ರಿಕಾ ವಿತರಕರ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ನಾಲ್ಕನೇ ರಾಜ್ಯ ಸಮ್ಮೇಳನದ ಪತ್ರಿಕೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ನಂತರ ಭದ್ರಾವತಿ ನಗರಸಭೆ ಆಯುಕ್ತರದ ಪ್ರಕಾಶ್ ಎಂ ಚೆನ್ನಣ್ಣನವರ್ ಹಾಗೂ ನಗರಸಭಾ, ಉಪಾಧ್ಯಕ್ಷರದ ಮಣಿ , ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ನಗರಸಭಾ ಸಿಇಒ ಸುಹಾಸಿನಿ ಮೇಡಂ ಇವರುಗಳನ್ನು ರಾಜ್ಯ ಸಮ್ಮೇಳನಕ್ಕೆ ಪತ್ರಿಕೆ ನೀಡಲಾಯಿತು.

ನಂತರ ಸಭೆ ಸೇರಿ ಹೊಸದಾಗಿ ಭದ್ರಾವತಿ ತಾಲೂಕ್ ಘಟಕವನ್ನು ಜಿಲ್ಲಾಧ್ಯಕ್ಷರಾದ ಎನ್ ಮಾಲತೇಶ್ ಪ್ರಧಾನ ಕಾರ್ಯದರ್ಶಿಯಾದ ಮುಕ್ತಾರ್ ಅಹಮದ್ ( ನಜೀರ್ ) ಇವರ ಸಮ್ಮುಖದಲ್ಲಿ ನಿರ್ದೇಶಕರ ಮಂಡಳಿ ರಚನೆ ಮಾಡಲಾಯಿತು.

Karnataka State Press Distributors Union Shivamogga ಹೊಸ ಕಾರ್ಯಕಾರಿ ಮಂಡಳಿಯಲ್ಲಿ ಅಧ್ಯಕ್ಷರಾಗಿ ಜಿ ಐ ಮಲ್ಲಿಕಾರ್ಜುನ್ , ಉಪಾಧ್ಯಕ್ಷರಾಗಿ ಸೋಮಶೇಖರ್ ,
ಕಾರ್ಯದರ್ಶಿಯಾಗಿ ಪರಶುರಾಮ್ ರಾವ್ , ಸಹ ಕಾರ್ಯದರ್ಶಿಯಾಗಿ ಶಿವ ಮೂರ್ತಿ, ಈ ಖಜಾಂಚಿಯಾಗಿ ಮಧು ಟಿ, ನಿರ್ದೇಶಕರುಗಳಾಗಿ ಕೆಂಪೇಗೌಡ ಲೋಕೇಶ್ ಕೆ, ದೇವೇಂದ್ರಪ್ಪ , ಕೃಷ್ಣಮೂರ್ತಿ ಇವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಭದ್ರಾವತಿ ವಿತರಕರಾದ ಜಗದೀಶ, ಶಬ್ಬೀರ್ ಇವರುಗಳು ಪಾಲ್ಗೊಂಡಿದ್ದರು. ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಹೊಸದಾಗಿ ರಚನೆಯಾಗಿರುವ ಕಾರ್ಯಕ್ರಮ ಮಂಡಳಿಗೆ ಅಭಿನಂದನೆಗೆ ಸಲ್ಲಿಸಿದ್ದಾರೆ.

S N. Channabasappa ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣಕ್ಕೆ ಶಕ್ತಿ ಕೊಡಬೇಕು- ಶಾಸಕ ಚನ್ನಬಸಪ್ಪ

0

S N. Channabasappa ಶಿಕ್ಷಣ ಅತ್ಯಂತ ಮಹತ್ವವಾದ ಕ್ಷೇತ್ರ. ಶಿಕ್ಷಣದ ಮೌಲ್ಯದಿಂದಲೇ ಸಮಾಜದ ಉದ್ದಾರ ಸಾಧ್ಯವಾಗಿದ್ದು ಮೌಲ್ಯಾಧಾರಿತ ಶಿಕ್ಷಣಕ್ಕೆ ಇನ್ನಷ್ಟು ಶಕ್ತಿ ತುಂಬಬೇಕೆಂದು ಶಾಸಕರಾದ ಎಸ್ ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಉಪ ನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದ ಮಹಾನ್ ವ್ಯಕ್ತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಅವರು ಬ್ರಿಟಿಷರು ಸೇರಿದಂತೆ ಯಾರೇ ಆಗಲಿ ಭಾರತೀಯ ಪರಂಪರೆಯನ್ನು ಅಧ್ಯಯನ ಮಾಡದೇ ನಮ್ಮ ದೇಶವನ್ನು ಟೀಕಿಸಬೇಡಿ ಎಂದು ಉತ್ತರ ನೀಡಿದವರು.
ಪ್ರಸ್ತುತ ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣಕ್ಕೆ ಇನ್ನಷ್ಟು ಶಕ್ತಿ ನೀಡಬೇಕು. ಶಿಕ್ಷಕರ ಉತ್ತಮ ಸಾಧನೆಗಾಗಿ ಇಂದು ಪ್ರಶಸ್ತಿ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಲಾಗಿದೆ. ಎಲ್ಲ ಶಿಕ್ಷಕರು ಅತ್ಯುತ್ತಮ ಕೆಲಸ ಮಾಡಿದ್ದು ಪ್ರಶಸ್ತಿ ಪ್ರದಾನ ಒಂದು ಸಾಂಕೇತಿಕ ಮಾತ್ರ ಎಂದರು.

S N. Channabasappa ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಇಂದು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವ ದಿನ. ಮಹಾನ್ ವ್ಯಕ್ತಿಗಳನ್ನು ರೂಪಿಸುವ ಅವಕಾಶ ಶಿಕ್ಷಕರಿಗೆ ಇದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ನಮ್ಮ ವೃತ್ತಿಯನ್ನು ನಾವು ಪ್ರೀತಿಸಬೇಕು. ಇಡೀ ದೇಶವನ್ನು ಸಂರಕ್ಷಿಸುವ, ಸಭ್ಯ ಸಮಾಜ ನಿರ್ಮಿಸುವಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಶಕ್ತಿ ಶಿಕ್ಷಕರಲ್ಲಿ ಇದೆ. ನಮ್ಮ ಸಂಸ್ಕೃತಿಯನ್ನು, ಸಂಸ್ಕಾರವನ್ನು ಹಾಗೂ ಮಕ್ಕಳು ಏನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಶಿಕ್ಷಕರು ಮನವರಿಕೆ ಮಾಡಿಕೊಡಬೇಕು. ಮಕ್ಕಳು ಶಿಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಅದಕ್ಕಾಗಿ ಬಳಸುವ ಪದಗಳ ಬಗ್ಗೆ, ನಡೆ, ನುಡಿ ಬಗ್ಗೆ ಶಿಕ್ಷಕರು ಎಚ್ಚರಿಕೆಯಿಂದ ಇರಬೇಕು. ನಾನು ಸಭ್ಯ ಆಗಿದ್ದಾಗ ಮಾತ್ರ ಸಭ್ಯರನ್ನು ರೂಪುಗೊಳ್ಳಿಸಬಹುದು. ಶಿಕ್ಷಕರು ಆದರ್ಶ ವ್ಯಕ್ತಿಯಾಗಿರಬೇಕು. ಬದುಕು ಮತ್ತು ಬೋಧನೆ ಒಂದಾದಾಗ ಉತ್ತಮ ವಿದ್ಯಾರ್ಥಿಗಳನ್ನು ತಯಾರಿ ಮಾಡಬಹುದು. ಕಲಿಸುವುದು ಒಂದು ಕಲೆ. ಮಕ್ಕಳನ್ನು ಸ್ಫೂರ್ತಿಗೊಳಿಸಿ, ಆಸಕ್ತಿ ಮೂಡಿಸಿ ಪಾಠ ಮಾಡಬೇಕು ಎಂದರು. ಬದುಕು ಕಟ್ಟಿಕೊಡುವ ಶಕ್ತಿ ಗುರುಗಳಿಗೆ ಇರುತ್ತದೆ. ಶಿಕ್ಷಕರು ಕರ್ತವ್ಯ ಕೇವಲ ಶಾಲೆಯಲ್ಲಿ ಮಾತ್ರ ಇರುವುದಿಲ್ಲ. ಪೂರ್ವತಯಾರಿ ಮಾಡಿಕೊಂಡೇ ತರಗತಿಗೆ ಹೋಗಬೇಕೆಂದು ಕಿವಿಮಾತು ಹೇಳಿದ ಅವರು ಕೇವಲ ಅಕ್ಷರ ಕಲಿಸಿದರೆ ಸಾಲದು ವಿನಯ, ವಿದ್ಯೆ, ದಯೆ, ಸಭ್ಯತೆ, ಸಜ್ಜನಿಕೆ, ಪ್ರಾಮಾಣಿಕತೆ, ತ್ಯಾಗದಂತಹ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳಲ್ಲಿ ವಿವೇಕ ಬಿತ್ತಬೇಕು ಎಂದು ಹೇಳಿದರು..

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಮಾತನಾಡಿ, ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವುದು ಹೆಮ್ಮೆ ಎನಿಸುತ್ತಿದೆ. ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿರಬೇಕು. ಶಿಕ್ಷಕ ವೃತ್ತಿ ಎಲ್ಲರ ಜೀವನ ಬೆಳೆಸುವ ಶ್ರೇಷ್ಠ ವೃತ್ತಿ. ನಮ್ಮ ವೃತ್ತಿಯನ್ನು ನಾವು ಪ್ರೀತಿಸಬೇಕು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರನ್ನು ನಾವು ಸ್ಮರಿಸಲೇ ಬೇಕು. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದರು.
ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ನಾವುಗಳು ಸದನದಲ್ಲಿ ಶಿಕ್ಷಣ ವ್ಯವಸ್ಥೆ, ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ. ನಮ್ಮ ಆಡಳಿತ ಸಾಮಾನ್ಯ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ನೀಡಿದಲ್ಲಿ ಭವಿಷ್ಯ ಉತ್ತಮವಾಗಿರುತ್ತದೆ. ಪ್ರಸ್ತುತ ಶಿಕ್ಷಕರು ವಿದ್ಯಾರ್ಥಿಗಳಸನ್ನು ಭಾವನಾತ್ಮಕವಾಗಿ ಜೋಡಿಸುವ ಕೆಲಸ ಮಾಡಬೇಕು. ಹಾಗೂ ನೀತಿಪಾಠಗಳು ಆಗಬೇಕೆಂದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಸತ್ಯದೆಡೆ, ಬೆಳಕಿನೆಡೆ, ಅಮರತ್ವದ ಕಡೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿ ಗುರುಗಳಿಗಿದೆ. ಪಾಠ ಮಾಡುವ ಶಿಕ್ಷಕರು ತಮ್ಮ ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಕುರಿತು ಸಲಹೆಗಳನ್ನು ನೀಡಿದರು.
ವಿಧಾನ ಪರಿಷತ್ ಶಾಸಕರಾದ ಎಸ್.ಎಲ್ ಭೋಜೇಗೌಡ ಮಾತನಾಡಿ, ಪ್ರಶಸ್ತಿಗಳ ಗುಣಮಟ್ಟ ಕಾಪಾಡಬೇಕು. ಪ್ರಶಸ್ತಿ ಆಯ್ಕೆ ಮಾನದಂಡಗಳನ್ನು ಅನುಸರಿಸಿ ಪ್ರಶಸ್ತಿಗಳನ್ನು ನೀಡಬೇಕು. ಹಾಗೂ ಪ್ರಶಸ್ತಿಯ ಮೌಲ್ಯ ಉಳಿಸುವ ಕೆಲಸ ಮಾಡಬೇಕು. ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದುತ್ತಿದ್ದು ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಸಬೇಕಿದೆ. ಶಿಕ್ಷಕರ ಜೊತೆ ನಾವಿದ್ದೇವೆ. ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಉತ್ತಮ ಶಿಕ್ಷಕ ಪ್ರಶಸ್ತಿ ಮಾನದಂಡಗಳಲ್ಲಿ ಕೆಲವು ಬದಲಾವಣೆ ಆಗಬೇಕು. ಶಿಕ್ಷಕರ ಸಾಧನೆಯ ಡಾಂಕ್ಯುಮೆAಟರಿ ಮಾಡಿ ತೋರಿಸಿದಲ್ಲಿ ಅದು ಇತರರಿಗೆ ಮಾದರಿ ಆಗುತ್ತದೆ ಎಂದು ಹೇಳಿದರು.
ಇದೇ ವೇಳೆ 2024-25 ನೇ ಸಾಲಿನಲ್ಲಿ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ 21 ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಹೆಚ್. ಎಸ್.ಸುಂದರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಡಿಡಿಪಿಐ ಮಂಜುನಾಥ್, ಬಿಇಓ ರಮೇಶ್, ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

Kannada Film Industry ಕನ್ನಡ ಸಿನಿಮಾರಂಗದ ಬಗ್ಗೆಯೂ ಮೀಟೂ ವಿರುದ್ಧ ಸಮಿತಿ ರಚನೆಗೆ ನಟನಟಿಯರ ಆಗ್ರಹ

0

Kannada Film Industry ಮಲಯಾಳಂ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯ ಕುರಿತು ರಚಿಸಲಾಗಿದ್ದ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಕೇರಳದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ ನೀಡಿ ನಂತರ ಅಮ್ಮನ ಕಾರ್ಯಕಾರಿ ಸಮಿತಿಯನ್ನೇ ವಿಸರ್ಜಿಸಿದ್ದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೆ ಇದೀಗ ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಈ ಕುರಿತಂತೆ ಸಮಿತಿ ರಚಿಸುವಂತೆ ನಟ ಸುದೀಪ್, ರಮ್ಯಾ ಸೇರಿದಂತೆ 153 ಮಂದಿ ಸಹಿ ಪತ್ರದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸ್ಯಾಂಡಲ್ವುಡ್ ನಲ್ಲೂ ಹಲವು ನಟಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿದ್ದು ಇಲ್ಲೂ ಸಮಿತಿಯೊಂದನ್ನು ರಚಿಸುವಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ 153 ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದು ಸಿಎಂ ಸಿದ್ದರಾಮಯ್ಯಗೆ ಸತಿಮಿ ರಚಿಸುವಂತೆ ಮನವಿ ಮಾಡಿದ್ದಾರೆ.
Kannada Film Industry ಸ್ಯಾಂಡಲ್ವುಡ್ ನಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳ ಕುರಿತಂತೆ ಹೋರಾಡಲು ಈ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚಿಸಲಾಗಿತ್ತು. 2017ರಲ್ಲಿ ರಚಿಸಲಾಗಿದ್ದ ಈ ಸಂಸ್ಥೆಯಲ್ಲಿ ಚೇತನ್ ಅಹಿಂಸಾ, ನಿರ್ದೇಶಕಿ ಕವಿತಾ ಲಂಕೇಶ್ ಸೇರಿದ್ದರು. ಈ ಸಂಸ್ಥೆ ಇದೀಗ ಮತ್ತೆ ಈ ಕಮಿಟಿ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟಕ್ಕೆ ನಿಂತಿದೆ
ಮನವಿ ಪತ್ರಕ್ಕೆ FIRE ಅಧ್ಯಕ್ಷೆ ನಿರ್ದೇಶಕಿ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾ, ನಟ ಸುದೀಪ್, ಕಿಶೋರ್, ವಿನಯ್ ರಾಜ್‌ಕುಮಾರ್, ನಿರ್ದೇಶಕ ಪವನ್ ಒಡೆಯರ್‌, ನಟಿಯರಾದ ರಮ್ಯಾ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಚೈತ್ರಾ ಜೆ ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧಾ ಶ್ರೀನಾಥ್, ನಿಶ್ವಿಕಾ ನಾಯ್ಡು, ಸಂಗೀತಾ ಭಟ್ , ನೀತು ಶೆಟ್ಟಿ ಸೇರಿದಂತೆ ಕಿರುತೆರೆ ನಟ ನಟಿಯರು ಸೇರಿ ಒಟ್ಟು 153 ಮಂದಿ ಸಹಿ ಹಾಕಿದ್ದಾರೆ.

B.Y.Raghavendra ಭ್ರಷ್ಠಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಮಾತಾಡಲಿ ಆಯನೂರುಗೆ ಸಂಸದ ರಾಘವೇಂದ್ರ ಸವಾಲ್

0

B.Y. Raghavendra ಮಾಜಿ ಶಾಸಕ ಆಯನೂರು ಮಂಜುನಾಥ್ ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ನಾನು ಯಾವುದೇ ದೇವರ ಸಮ್ಮುಖಕ್ಕೆ ಬಂದು ಯಾವ ಭ್ರಷ್ಠಾಚಾರ ನಡೆಸಿಲ್ಲ ಎಂದು ಹೇಳಲು ಸಿದ್ಧ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹರಕೆರೆ ಆಸ್ಪತ್ರೆಯ ಜಾಗದ ಬಗ್ಗೆ ಆರೋಪ ಮಾಡಿದ್ದಾರೆ. ಇಲ್ಲಿರುವುದು ರೈತನಿಗೂ ಕೆಐಡಿಬಿಗೂ ಸಂಪರ್ಕ ಮಾತ್ರ. ನನ್ನ ವ್ಯವಹಾರವಿಲ್ಲ. ಅವರು ಹೇಳಿದಂತೆ ಅದು ಕೆಐಎಡಿಬಿ ಲ್ಯಾಂಡ್ ಅಲ್ಲ ಅದು. ಕನ್ಸಲ್ಟ್ ಅವಾರ್ಡ್ ಆಗಿ ಸಿಂಗಲ್ ವಿಂಡೋದಲ್ಲಿ ದೊರೆತಿದೆ. ಆದರೆ ಮಿನಿ ಅದನ್ನು ಮೂಡಾ ಹಗರಣ ಎಂದು ಅವರು ಹೇಳಿದ್ದಾರೆ ಎಂದರು.
ಟೋಲ್ ಗೇಟ್ ಬಗ್ಗೆ ಹಿಂದಿನ ಸರಕಾರ ಆದೇಶ ಮಾಡಿದ್ದು ನಿಜ. ಆದರೆ ಸ್ಥಾಪನೆ ಆಗಿರಲಿಲ್ಲ. ನಾವೇ ಟೋಲ್ ಬೇಡ ಎಂದಿದ್ದೆವು. ಸರ್ಕಾರ ಬದಲಾದಂತೆ ಟೋಲ್ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಆದರೆ ಟೋಲ್ ಸ್ಥಾಪನೆಯಲ್ಲಿ ನಮ್ಮ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದೆ. ಇದು ಸರಿಯಲ್ಲ ಎಂದರು.
ಸಿಡ್ಬಿ ಶಾಖೆ ಶೀಘ್ರದಲ್ಲಿ :
B.Y. Raghavendra ನಗರದಲ್ಲಿ ಭಾರತೀಯ ಸಣ್ಣ ಕೈಗಾರಿಕಾ ಬ್ಯಾಂಕ್ (ಎಸ್‌ಐಡಿಬಿಐ- ಸಿಡ್ಬಿ) ಶಾಖೆ ಆರಂಭವಾಗುವ ಲಕ್ಷಣವಿದೆ. ಶಿವಮೊಗ್ಗಕ್ಕೆ ಸಿಡ್ಬಿ ಬ್ಯಾಂಕ್ ಆರಂಭವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಸಂಸತ್ ಅಧಿವೇಶನದ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾಗಿದ್ದೆ. ಶಿವಮೊಗ್ಗಕ್ಕೆ ಸಣ್ಣ ಕೈಗಾರಿಕೆಗೆ ಅನುಕೂಲವಾಗುವ ಬ್ಯಾಂಕ್ ಶಾಖೆ ನೀಡುವಂತೆ ಕೋರಿದ್ದೆ. ಇದರ ಫಲವಾಗಿ ನಾಳೆ ಸೆಡ್ಬಿ ಬ್ಯಾಂಕ್ ಡಿಜಿಎಂ, ರೀಜಿನಲ್ ಆಫೀಸರ್ ಭೇಟಿ ನೀಡಲಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು

Signature Media House ಮುಡಬ ಮೂಳೆ ಪಂಡಿತರಿಗೆ ವೈದ್ಯರತ್ನ ಪ್ರಶಸ್ತಿ

0

Signature Media House ಇತ್ತೀಚೆಗೆ ನಡೆದ ಬೆಂಗಳೂರುನಲ್ಲಿ ಸಿಗ್ನೇಚರ್ ಮೀಡಿಯಾ ಹೌಸ್ ವತಿಯಿಂದ ಶಿವಮೊಗ್ಗ ನಗರದ ಎಚ್.ಎಸ್. ರಾಮಕೃಷ್ಣ ಮುಡಬ ಅವರಿಗೆ ವೈದ್ಯ ರತ್ನ ಎಂಬ ಬಿರುದು ಪ್ರಶಸ್ತಿಯನ್ನು ನೀಡಲಾಯಿತು ತಂದೆ ಸುಬ್ಬ ನಾಯಕ್(ಮುಡಬ 4 ತಲೆ ಮಾರುಗಳಿಂದ ಮಾಡಿರುವಂತ ವೈದ್ಯರು (ortho) ಮೂಳೆ ಪಂಡಿತರು ನಮ್ಮ ಹೆಮ್ಮೆಯ , ಜನ ಪರಿಚಿತ ವ್ಯಕ್ತಿಯಾಗಿದ್ದಾರೆ